ಪಲ್ಲವಿ : ವಿನಾಶದೆಡೆಗೆ ಪಯಣ ಬೇಡ ಮಾನವ !
ಶಾಂತಿಯತ್ತ ನಡೆಯಬೇಕು ಮಿತ್ರನೇ
ಚರಣ : ನಾಶಪಡಿಸಿಬೇಡ ಸೃಷ್ಟಿ ಅಂದವಾ
ಸಹಜಸೃಷ್ಟಿ ಸೌಂದರ್ಯವ ಗೌರವಿಸು
ಕೆಡವದಿರು ಹಿರಿಯರ ಭಾವನೆಗಳ
ಬೆಳೆಸು ಕಿರಿಯ ಭಾವನೆಗಳ ಉತ್ತಮಗತಿಗೆ
ಉಳಿಸು ದೇಶ ನಿಯಮಗಳ ಸಂಪದವ
ಅಳಿಸುವ ಅನ್ಯ ಭಾವನೆಗಳ ಗೊಡವೆಗಳ
ನರನರದಲಿ ದೇಶಭಕ್ತಿ ಹರಿಯಲಿ
ಸಚ್ಚಿದಾನಂದ ನಂದವ ಸವಿಯಿರಿ
Leave A Comment