(ಕ್ರಿ.ಶ. ೧೮೨೪-೧೯೦೭)
(ಥೆರ್ಮೊಡೈನಾಮಿಕ್ಸ್)

ಸರ‍್ ವಿಲಿಯಂ ಥಾಮ್ಸನ್ ೧೮೨೪ರಲ್ಲಿ ಜನಿಸಿದರು. ಗ್ಲಾಸ್ಗೋದಲ್ಲಿ ಎಂಜಿನೀಯರ‍್ ಆಗಿ ಕಾರ್ಯ ಮಾಡುತ್ತಿದ್ದ ಇವರು ತಾಪ, ಒತ್ತಡ ಮತ್ತು ದ್ರವ್ಯರಾಶಿಗಳ ಪರಾಮಿತಿಗಳಲ್ಲಿ ಆಗುವ ಶಕ್ತಿ ವಿನಿಮಯವನ್ನು ಕುರಿತು ವಿಶೇಷ ಅಧ್ಯಯನ ಮಾಡಿದರು. ಫ್ರೆಂಚ್ ವಿಜ್ಞಾನಿ ಕಾರ್ನಾಟ್ ನ ತತ್ವದ ಆಧಾರದ ಮೇಲೆ ಇವರು ಥರ್ಮೊಡೈನಾಮಿಕ್ಸ್ ಸೂತ್ರವೊಂದನ್ನು ಕಂಡು ಹಿಡಿದರು. ಈ ಸೂತ್ರವು ತಾಪ ಮತ್ತು ಯಂತ್ರ ಶಕ್ತಿಗಳ ನಡುವಣ ಸಂಬಂಧಗಳನ್ನು ಕುರಿತು ವಿವರಿಸುತ್ತದೆ. ಇದು ಗಣಿತ ಶಾಸ್ತ್ರೀಯವಾಗಿ ರಚಿಸಲ್ಪಟ್ಟ ಸೂತ್ರ.
ಥಾಮ್ಸನ್ ಗತಿಶೀಲತೆಯ (ಡೈನಾಮಿಕ್ಸ್) ಶೂನ್ಯ ಸೂತ್ರವನ್ನು ನಿರೂಪಿಸಿದರು. ಈ ಸೂತ್ರದ ಆಧಾರದ ಮೇಲೆ ತಾಪಚೋದಕ ಉಷ್ಣಾಂಶವನ್ನು (ಥರ್ಮೊಡೈನಾಮಿಕ್ ಟೆಂಪರೇಚರ್) ವಿವರಿಸಲು ಮತ್ತು ಅದನ್ನು ಅಳೆಯುವ ಒಂದು ವಸ್ತುನಿಷ್ಠ ವಿಧಾನವನ್ನು ಕಂಡು ಹಿಡಿಯಲು ಸಫಲರಾದರು.
ಮುಂದೆ ಇವರು ಲಾರ್ಡ್ ಕೆಲ್ವಿನ್ ಎಂಬ ಹೆಸರಿನಿಂದ ಖ್ಯಾತರಾದರು. ಥರ್ಮೊಡೈನಾಮಿಕ್ಸ್ ಉಷ್ಣಾಂಶವನ್ನು ಅಳೆಯುವಾಗ ಕೆಲ್ವಿನ್ ಹೆಸರಿನ ಮೊದಲನೆಯ ಇಂಗ್ಲಿಷ್ ಅಕ್ಷರ ‘K’ ಅನ್ನು ಬಳಸುವ ಪದ್ಧತಿ ಈಗ ರೂಢಿಯಾಗಿ ಬಂದಿದೆ. ಕೆಲ್ವಿನ್ (K), ಥರ್ಮೊಡೈನಾಮಿಕ್ಸ್ ಉಷ್ಣಾಂಶದ “ಸ್ಟಾಂಡರ್ಡ್ ಯೂನಿಟ್” ಆಗಿದೆ. ಈ ಪದ್ಧತಿಯ ಮಾಪನದ ಪ್ರಕಾರ ವಾತಾವರಣದ ಒತ್ತಡದಲ್ಲಿ ನೀರಿನ ಹೆಪ್ಪುಗಟ್ಟುವ ಅಂಶ ೨೭೩.೧೫ K ಆಗಿದ್ದರೆ ಅದರ ಕುದಿಯುವ ಅಂಶ ೩೭೩.೧೫ K ಇದೆ.
ಸರ್ ವಿಲಿಯಂ ಥಾಮ್ಸನ್ ೧೯೦೭ರಲ್ಲಿ ನಿಧನ ಹೊಂದಿದರು.