“ಸೋದರ ಸೊದರಿಯರಿರಾ, ಕಡೆಗೂ ಸುದೀರ್ಘ ರಾತ್ರಿ ಕೊನೆಗಾಣುತ್ತಿದೆ. ಶೋಕ ಸಂಕಟಗಳು ಮಾಯವಾಗುತ್ತಿವೆ. ನಮ್ಮದು ಪುಣ್ಯ ಭೂಮಿ. ಸುತ್ತಲೂ ಬೀಸುತ್ತರುವ ಹೊಸ ಗಾಳಿಯಿಂದಾಗಿ ಅದು ಎಚ್ಚರಗೊಳ್ಳುತ್ತಿದೆ. ಯಾರೂ ಎದುರಿಸಲಾರದ ಶಕ್ತಿ ಅದಕ್ಕಿದೆ”.

“ನಮ್ಮ ತಾಯ್ನಾಡಿಗಾಗಿ ಎಲ್ಲ ತ್ಯಾಗಗಳಿಗೂ ಸಿದ್ಧರಾಗಿರುವಿರಾದರೆ ನಾಡಿನ ಬಡತನವನ್ನು ನೀಗಬಲ್ಲಿರಿ. ಅಜ್ಞಾನವನ್ನು ಹೊಡೆದಟ್ಟಬಲ್ಲಿರಿ. ಕೋಟ್ಯಾಂತರ ಅಣ್ಣ ಅಮ್ಮಂದಿರು, ಅಕ್ಕ ತಂಗಿಯರು ಹೊಟ್ಟೆಗಿಲ್ಲದೆ ನರಳುತ್ತಿದ್ದಾರೆಂಬುವುದು ನಿಮಗೆ ಗೊತ್ತೇ? ಅವರ ಬಗೆಗೆ ನಿಮಗೆ ಕನಿಕರವುಂಟೇ? ಅವರಿಗಾಗಿ ನೀವು ತೊಟ್ಟು  ಕಣ್ಣೀರು ಸುರಿಸುವಿರಾ?”

“ಎಂಥ ತೊಂದರೆಗಳೇ ಬರಲಿ,ಅವನ್ನೆದುರಿಸುವ ನೆಚ್ಚು ಕೆಚ್ಚುಗಳು ನಿಮ್ಮಲ್ಲಿವೆಯೇ? ಬಂಧು ಬಳಗವೇ ವಿರೋಧಿಸಲಿ, ಗುರಿಯನ್ನು ಸಾಧಿಸುವ ಛಲ ನಿಮ್ಮಲ್ಲಿದೆಯೇ? ಆತ್ಮಶುದ್ಧಿಯಿದ್ದರೆ ಮಾತ್ರ ನೀವು ಸ್ವತಂತ್ರರಾಗಿ ಬಾಳಬಹುದು. ನೀವು ಗಟ್ಟಿಮುಟ್ಟಾಗಿ ಬೆಳೆಯಬೇಕು. ಧ್ಯಾನ, ವ್ಯಾಸಂಗ ಕ್ರಿಯೆಗಳ ಮೂಲಕ ಮನಸ್ಸನ್ನು ತಿದ್ದಬೇಕು. ಆಗ ಮಾತ್ರ ನಿಮಗೆ ಜಯ ಲಭಿಸುತ್ತದೆ.

“ನಾನು ಅಮೇರಿಕ ಇಂಗ್ಲೇಂಡುಗಳಿಗೆ ಹೋಗುವ ಮುನ್ನ ತಾಯ್ನಾಡನ್ನು ಪ್ರೀತಿಸುತ್ತಿದ್ದೆ. ಅಲ್ಲಿಂದ ಹಿಂದುರುಗಿದ ನಂತರ ಇಲ್ಲಿಯ ಧೂಳಿನ ಕಣ ಕಣವೂ ಪವಿತ್ರವಾಗಿ ತೋರುತ್ತಿದೆ”.

ತುಂಟ ಧೀರ :

ಅವರಿಗೆ ವಿವೇಕಾನಂದ ಎಂಬ ಹೆಸರು ಬಂದದ್ದು ಸಂನ್ಯಾಸಿಯಾದ ನಂತರ. ಅವರ ತಂದೆ ತಾಯಿಯರು ಇಟ್ಟ ಹೆಸರು ನರೇಂದ್ರ. ಅವನ ತಂದೆ ವಿಶ್ವನಾಥನದತ್ತ, ತಾಯಿ ಭುವನೇಶ್ವರಿ ದೇವಿ.ಅವನು ಹುಟ್ಟಿದ್ದು, ಕಲ್ಕತ್ತೆಯಲ್ಲಿ, ೧೮೬೩ರಲ್ಲಿ ಜನೆವರಿ ೧೨ ರಂದು. ಅವನು ಮಗುವಾಗಿದ್ದಾಗ ತುಂಬ ತುಂಟ.

ಮಗುತನದಿಂದ ಹುಡುಗತನಕ್ಕೆ ಕಾಲಿಟ್ಟಾಗ ಅವನ ಆಟಪಾಠಗಳು ಅತಿಯಾದುವು. ಒರಗೆಯ ಮಕ್ಕಳಿಗೆ ಅವನೇ ನಾಯಕ. ಅವನ ತೀರ್ಮಾನಕ್ಕೆ ಎಲ್ಲರೂ ತಲೆಬಾಗುತ್ತಿದ್ದರು. “ಮರದ ಮೇಲೊಂದು ಬ್ರಹ್ಮರಾಕ್ಷನೆಂಬ ಪಿಶಾಚಿಯಿದೆ. ಅದು ಮಕ್ಕಳನ್ನು ತಿಂದುಬಿಡುತ್ತದೆ” ಎಂದು ಮಾಲೀಕನೊಬ್ಬ ಹುಡುಗರನ್ನು ಹೆದರಿಸಿದ. ಅವನ ಬೆದರಿಕೆಗೆ ನರೇಂದ್ರ ಜಗ್ಗಲಿಲ್ಲ. ಮರದ ಮೇಲೆಯೇ ಬಿಗಿಯಾಗಿ ಕುಳಿತನು.ಉಳಿದ ಹುಡುಗರು ಬಿದ್ದು ಓಡಿಹೋದರು. ಎಷ್ಟು ಹೊತ್ತು ಕುಳಿತರೂ ಬ್ರಹ್ಮರಾಕ್ಷಸ ಕಾಣಿಸಲಿಲ್ಲ. ಹೀಗಾಗಿ ಮಾಲೀಕ ಕಟ್ಟಿದ ಕತೆ ಸುಳ್ಳೆಂದು ಸಾರಿದನು. ಅಕ್ಕಂದಿರಿಗೆ ಕೀಟಲೆ ಕೊಡುವುದೂ ಅವನಿಗೊಂದು ಆಟವಾಗಿತ್ತು.  ಧ್ಯಾನವೂ ಅವನಿಗೆ ಆಟವಾಗಿತ್ತು. ಆ ಆಟದಲ್ಲಿ ಮುಳುಗಿ ಹೊರ ಜಗತ್ತನ್ನು ಮರೆಯುತ್ತಿದ್ದನು.  ಅವನ ಪಕ್ಕದಲ್ಲಿ ಹಾವು ಸುಳಿದರೂ ಅವನಿಗೆ ಎಚ್ಚರವಾಗುತ್ತಿರಲಿಲ್ಲ.

ನರೇಂದ್ರನಿಗೆ ಚಿಕ್ಕಂದಿನಿಂದಲೂ ಸಂನ್ಯಾಸಿಗಳಲ್ಲಿ ಅಪಾರವಾದ ಗೌರವ. ಯಾರು ಏನು  ಕೇಳಿದರೂ ಕೊಟ್ಟುಬಿಡುತ್ತಿದ್ದನು. ಹುಟ್ಟು ಹಬ್ಬದ ದಿನ ಹೊಸ ಬಟ್ಟೆ ತೊಟ್ಟುಕೊಳ್ಳುತ್ತಿದ್ದನ್ನಷ್ಟೆ. ಯಾಚಕ ಬಂದು ಬೇಡಿದಾಗ ಅದನ್ನೆ ಎಸೆದು ಬಿಡುತ್ತಿದ್ದನು. ಅಂದಿನಿಂದ ಬೀದಿಯಲ್ಲಿ ಭಿಕ್ಷಕರು ಕಂಡದ್ದೇ ತಡ, ತಾಯಿ ಮಗುವನ್ನು ಕೋಣಿಗೆ ಕೂಡಿ ಹಾಕಿ, ಬೀಗ ಕೀಲಿಸುತ್ತಿದ್ದಳು.  ಪ್ರತಿಯೊಬ್ಬ ಭಿಕ್ಷುಕನಿಗೂ ನರೇಂದ್ರನ ಗುಣ ಗೊತ್ತಿತ್ತು. ಅವರು ಕಿಟಕಿಯ ಬಳಿ ಹೋಗಿ ನಿಲ್ಲುತ್ತಿದ್ದರು.  ನರೇಂದ್ರ ತನ್ನಲ್ಲಿದ್ದುದನ್ನುಬೀಸಾಡುತ್ತಿದ್ದನು. ತ್ಯಾಗ ವೈರಾಗ್ಯ ಗುಣಗಳು ಆಗಲೇ  ಅವನಲ್ಲಿ ಮೊಳೆಯುತ್ತಿದ್ದವು.

ಬಿಡುವಾದಾಗಲೆಲ್ಲ ತಾಯಿ ಮಗನಿಗೆ ರಾಮಾಯಣದ ಕಥೆಯನ್ನು ವಿವರಿಸುತ್ತಿದ್ದಳು. ಕಥೆ ಹೇಳದೇ ಅವನಿಗೆ ನಿದ್ದೆಯೇ ಹತ್ತುತ್ತಿರಿಲ್ಲ.ಆಗವನು ಮೈಯೆಲ್ಲ ಕಿವಿಯಾಗಿ, ಆಟ ಪಾಟಗಳನ್ನು ಮರೆತು ಕಥೆ ಕೇಳುತ್ತಿದ್ದನು. ಬ್ರಹ್ಮಚಾರಿ ಹನುಮಂತನ ಬಗ್ಗೆ ಅಪಾರವಾದ ಗೌರವ. ಒಂದು ದಿನ ಅವನು ಮೈಗಲ್ಲ ಭೂದಿ ಬಳಿದುಕೊಂಡು , ಶಿವ ವಿಗ್ರಹದ ಮುಂದೆ ಕಣ್ಣು ಮುಚ್ಚಿಕೊಂಡು ಕುಳಿತ್ತಿದ್ದನು. ಮಗನ ವೇಷವನ್ನು ಕಂಡ ತಾಯಿ “ಇದೆಲ್ಲೆ ಏನು ನರೇನ್”? ಎಂದು ಕೇಳಿದಳು. “ನಾನು ಶಿವ,  ಶಿವ ನಾನು” ಎಂದವನು ಮುಗುಳು ನಗೆ ಬೀರಿದನು. ಅಜ್ಜನಂತೆ ಮೊಮ್ಮಗನೂ ಸಂನ್ಯಾಸಿಯಾಗುವೆನೇನೋ ಎಂದು ತಾಯಿ ಬೆದರಿದಳು.

ಬೆಳೆಯ ಸಿರಿ ಮೊಳಕೆಯಲ್ಲಿ :

ನರೇಂದ್ರನ ತಂದೆ ವಕೀಲರು. ಆದ್ದರಿಂದ ಅವರ ಮನೆಗೆ ದಿನಾಲು ಹಲವು ಜಾತಿಯ ಕಕ್ಷಿದಾರರು ಬರುತ್ತಿದ್ದರು. ಆ ಮನೆಯೊಂದು ಛತ್ರವೆಂದೇ ಹೇಳಬೇಕು. ಅವರೆಲ್ಲರಿಗೂ ಅಲ್ಲಿಯೇ ಊಟ ತಿಂಡಿ ಸಹ ನಡೆಯುತ್ತಿದ್ದವು. ಊಟದ ನಂತರ ಹುಕ್ಕವನ್ನೊದಗಿಸುವುದು ಒಂದು ವಾಡಿಕೆಯಾಗಿತ್ತು. ಒಂದೊಂದು ಜಾತಿಯವರಿಗೆ ಒಂದೊಂದು ಹುಕ್ಕ ಮೀಸಲಿಡಬೇಕಾಗಿತ್ತು. ಬೇರೆ ಜಾತಿಯವರ ಹುಕ್ಕದಿಂದ ಹೊಗೆ ಸೇದಿದರೆ ಏನಾಗಬಹುದೆಂದು ತಕಿಋಸಿದ. ಕೊನೆಗೂ ಪ್ರಯೋಗ ನಡೆಸಿದ. ಅದರಿಂದನೂ ಅನಾಹುತವಾಗಲಿಲ್ಲ. ಜಾತಿ ಭೇದ ಅರ್ಥವಿಲ್ಲದ್ದು ಎಂದು ತೀರ್ಮಾನಿಸಿಕೊಂಡ.

ಬೆಲೆಯ ಸಿರಿ ಮೊಳಕೆಯಲ್ಲಿಯೇ ಕಾಣುವಂತೆ ಮುಂದಿನ ವಿವೇಕಾನಂದರ ಕರುಣೆ ಬಾಲ ನರೇಂದ್ರನಲ್ಲಿಯೇ ಕುಡಿಯೊಡೆಯುತ್ತಿತ್ತು. ಒಮ್ಮೆ ಗರಡಿಯಲ್ಲಿ ಕಲಿತ ಕಸರತ್ತುಗಳ ಪ್ರದರ್ಶನ ನಡೆದಿತ್ತು. ಆ ಸಮಯದಲ್ಲಿ ಕಬ್ಬೀನದ ಸರವೊಂದು ಅಕಸ್ಮಾತಾಗಿ ಪ್ರದರ್ಶನ ನೋಡುತ್ತ ನಿಂತಿದ್ದ ನಾವಿಕನ ಮೇಲೆ ಬಿತ್ತು. ಆತ ಮೈಮರೆತ. ಪೋಲಿಸರು ಬಂದು ತಮ್ಮನ್ನು ಹಿಡಿದಾರೆಂಭ ಭಯದಿಂದ ಅಲ್ಲಿದ್ದವರೆಲ್ಲ ಓಟಕಿತ್ತರು. ನರೇಂದ್ರ ಒಬ್ಬಿಬ್ಬರು ಗೆಳೆಯರ ಸಹಾಯದಿಂದ ಪ್ರಥಮ ಚಕಿತ್ಸೆ ಮಾಡಿದನು : ವೈದ್ಯನನ್ನು ಕರೆಸಿ ಚಕತ್ಸೆ ಮಾಡಿಸಿದನು. ಚಂಚಾ ಎತ್ತಿ ಗಾಯಗೊಂಡವನ ಕೈಗೆ ಹಣ ಕೊಟ್ಟು ಕಳಿಸಿದನು. ಮತ್ತೊಂದು ಸಾರಿ ಅವನ ಕುದುರೆ ಗಾಡಿಯ ಅಡಿಯಲ್ಲಿ ಸಿಕ್ಕಕೊಂಡಿದ್ದ ಸಂಗಾತಿಯನ್ನು ಹೊರಗೆಳೆದು ಬದುಕಿಸಿದನು. ಅಂತಯೇ ಇನ್ನೊಂದುಸಾರಿ ಜ್ವರದಿಂದ ನಡುಬೀದಿಯಲ್ಲಿ ನರಳುತ್ತಿದ್ದ ಪರಿಚಯವಿಲ್ಲದ ಬಾಲಕನನ್ನು ಮನೆ ಮುಟ್ಟಿಸಿದನು. ಭಯವೆಂಬುವುದೇ ಅವನಿಗೆ ತಿಳಿದಿರಲಿಲ್ಲ.

ಆಟ ಪಾಠಗಳಲ್ಲಿ ಮಾತ್ರವಲ್ಲ. ಕಲಿಕೆಯಲ್ಲಿಯೂ ಸಹ ಅವನು ಪಾದರಸದಂತಿದ್ದನು. ಒಂದು ಸಾರಿ ಪಾಠ ಓದಿದರೆ ಅಥವಾ ಕೇಳೀದರೆ ಸಾಕು.ಅದು ಸದಾ ನೆನಪಿನಲ್ಲಿ ಉಳಿಯುತ್ತಿತ್ತು. ಅವನ ಗ್ರಹಣ ಶಕ್ತಿ ಅದ್ಭುತವಾದುದು. ಇದಕ್ಕೆಲ್ಲ ಅವನ ಏಕಾಗ್ರತೆಯೇ ಕಾರಣವಾಗಿತ್ತು.

ತಂದೆತಾಯಿ :

ಸಮಯ ಸಿಕ್ಕಾಗಲೆಲ್ಲ ವಿಶ್ವನಾಥದತ್ತ ಮಗನಿಗೆ ಹಿತವಚನಗಳನ್ನು ಹೇಳುತ್ತಿದ್ದರು. “ಸತ್ಯ ಧರ್ಮಗಳನ್ನು ಆಚರಿಸುವ ತನಕ ಯಾರಿಗೂ ಅಂಜಬೇಕಾಗಿಲ್ಲ. ದರ್ಪಕ್ಕೆ ಮಣೀಯಬಾರದು. ಆತ್ಮಗೌರವ ಬಿಡಬಾರದು. ಸ್ವಮತಾಭಿಮಾನ ಅನ್ಯಮತ ದ್ವೇಷವಾಬಾರದು. ಮಾನವನ ಕ್ಷೇಮ ಸಾಧನೆಗೆ ದೇಶಭಕ್ತ ಅತ್ಯಗತ್ಯ. ಪರಕೀಯರು  ದೇಶವನ್ನು ಆಕ್ರಮಿಸಿಕೊಳ್ಳಬಹುದು ; ಆದರೆ ಸತ್ವಪುರ್ನವೂ ಪ್ರಾಚೀನವೂ ಆದ ಸಂಸ್ಕೃತಿಯನ್ನು ಅಪಹರಿಸಿಕೊಳ್ಳಲಾರರು”. ಮಗನ ಕಂಠಮಾಧುರ‍್ಯಕ್ಕೆ ತಂದೆ ಮಾರು ಹೋಗಿದ್ದನು. ಭಕ್ತಿ ಗೀತೆಗಳನ್ನು ಹಾಡುವಾಗ ಅವನ ಮುಖದಲ್ಲಿ ದಿವ್ಯ ತೇಜಸ್ಸು  ಮುಕ್ಕಳಿಸುತ್ತಿತ್ತು.

ತಾಯಿಯೆಂದರೆ ನರೇಂಧ್ರನಿಗೆ ಪಂಚಪ್ರಾಣ. ದೇವತೆಗೆ ಸರಿಸಮಾನ. ಲೋಕದಲ್ಲಿ ಅವರಂಥ ತ್ಯಾಗಿ ಮತ್ತೊಬ್ಬರಿಲ್ಲ. ಮನೆಯಲ್ಲಿ ಮಾತ್ರವಲ್ಲದ, ಸಮಾಜದಲ್ಲಿಯೂ ಅವಳಿಗೆ ಅಗ್ರಸ್ಥಾನವಿರಬೇಕೆಂದು ಅವನು ಸದಾ ಹೇಳೂತ್ತಿದ್ದನು. ತಂದೆಯಲ್ಲಿ ಆತನಿಗೆ ಅಪಾರವಾದ ಗೌರವವಿತ್ತು. ಆ ಗೌರವ ಅವನ ಸ್ವತಂತ್ರವನ್ನಾಗಲೀ ವಿಚಾರ ಶಕ್ತಿಯನ್ನಾಗಲಿ ಮಸುಳಿಸಿರಲಿಲ್ಲ. ತನ್ನ ತಂದೆಯ ಬಗ್ಗೆ ಅನಿಸಿದ್ದನ್ನು ಮುಚ್ಚು ಮರೆಯಿಲ್ದೆ ಹೇಳೀ ಬಿಡುತಿದ್ದನು.  ಅತಿಥಿ ಸತ್ಕಾರ ಶ್ರೇಯಸ್ಕರವಾದುದು. ಆದರೆ ಸೋಮಾರಿಗಳಿಗೆ ಊಟ ಹಾಕುವುದು ಸರಿಯೇ? ಅವರು ಉಂಡು ಹೋಗಲಿ,  ಬೇಡವೆನ್ನುವುದಿಲ್ಲ.ಅವರಿಗೆ ಬೀಡಿ ಸಿಗರೇಟು ಚುಟ್ಟಾಗಳನ್ನು ಕೊಂಡು ಕೊಡುವುದು ಸರಿಯೇ?” ಎಂದು ಮಗ ತಂದೆಯನ್ನು ಪ್ರಶ್ನಸುತ್ತಿದ್ದನು. “ಅವರ ಸಂಕಟ ನಿನಗೆ ಅರ್ಥವಾಗುವುದಿಲ್ಲ, ಮಗು ಅವುಗಳ ಬಳಕೆಯಿಂದ ಅವರು ತಮ್ಮ ಬಾಳಿನ ಕಹಿಯನ್ನು ತುಸುಕಾಲವಾದರೂ ಮರೆಯುತ್ತಾರೆ” ಎಂದು ಉತ್ತರ ನೀಡುತ್ತಿದ್ದರು.

೧೮೮೦ರ ಹೊತ್ತಿಗೆ ನರೇಂದ್ರನಾಥ ಮೆಟ್ರಿಕ್ಯೂಲೇಷನ್ ಮತ್ತು ಪ್ರವೇಶ ಪರೀಕ್ಷೆಗಳಲ್ಲಿ ತೇರ್ಗಡೆ ಹೊಂದಿ,ಕಾಲೇಜು ಸೇರಿದನು. ದಿನೇ ದಿನೇ ಅವನ ಜ್ಞಾನದಾಹ ಹೆಚ್ಚತೊಡಗಿತು. ಗ್ರಂಥಾಲಯದಿಂದ ಅನೇಕ ಪಠ್ಯೇತರ ಗ್ರಂಥಗಳನ್ನು ತಂದು ತನ್ನ ಮನಸ್ಸಿನ ಹಸಿವೆಯನ್ನು ನೀಗಿಸಿಕೊಳ್ಳುತ್ತಿದ್ದನು. ಸೃಷ್ಟಿಯ ರಹಸ್ಯವನ್ನರಿಯುವುದರಲ್ಲಿ ಅವನಿಗೆ ವಿಶೇಷಾಸಕ್ತಿ.  ಚರಿತ್ರೆ ವಿಜ್ಞಾನಗಳ ಜೊತೆಗೆ ಪಾಶ್ಚಾತ್ಯ ತತ್ವ ಶಾಸ್ತ್ರ ಗ್ರಂಥಗಳನ್ನು ಅಧ್ಯಯನ ಮಾಡಿಕೊಂಡಿದ್ದನು. ಅವನ ಅಧ್ಯಯನ ಮುಂದುವರಿದು,ವಿಚಾರ ಶಕ್ತಿ ವೃದ್ಧಿಯಾದಂತೆಲ್ಲ ಅವನ ಸಂಶಯಗಳೂ ಹೆಚ್ಚುತ್ತಿದ್ದವು. ಕುರುಡು ನಂಬಿಕೆಗಳಿಂದ ಪಾರಾದರೂ ಸತ್ಯದರ್ಶನ ಮಾತ್ರ ಲಭಿಸಲಿಲ್ಲ.

ತನ್ನ ಗಮನಕ್ಕೆ ಬಂದಿದ್ದ ದೊಡ್ಡ ದೊಡ್ಡ ಪಂಡಿತರ ಬಳಿ ಹೋಗಿ ತನ್ನ ಸಂದೇಹಗಳನ್ನು ತೋಡಿಕೊಂಡನು. ಅವರೆಲ್ಲರೂ ವಾದದಲ್ಲಿ ಗಟ್ಟಿಗರು. ಅವರ ತರ್ಕದಿಂದ ನರೇಂದ್ರನಿಗೆ ಸಮಾಧಾನವಾಗಲಿಲ್ಲ. ಧರ್ಮಪ್ರಚಾರಕರ ವಿಚಾರ ಸರಣಿಯಂತೂ ಹಳಸಲಾಗಿತ್ತು. ಅದರಲ್ಲಿ ಅವನಿಗೆ ನಂಬುಗೆ ಮೂಡಲಿಲ್ಲ. ದೇವರ ಅಸ್ತಿತ್ವದ ಬಗ್ಗೆ ಯಾರಿಗೂ ಪ್ರತ್ಯೆಕ್ಷಾನುಭವ ಇರಲಿಲ್ಲ.

ಗುರುವಿನೆಡೆಗೆ :

ಶ್ರಿರಾಮಕೃಷ್ಣರು ಕಾಳಿಕಾದೇವಾಲಯದ ಪೂಜಾರಿ. ಅವರು ಪಂಡಿತರಲ್ಲ. ದೊಡ್ಡ ಭಕ್ತರು. ಅವರಿಗೆ ದೇವರು ಒಲಿದಿದ್ದಾನೆಂಬ ವದಂತಿ ಎಲ್ಲೆಡೆಯೂ ಹರಡಿತ್ತು.  ಅವರ ಬಳಿ ಹೋದ ವಿದ್ವಾಂಸರು ಶಿಷ್ಯರಾಗಿ ಹಿಂದಿರುಗುತ್ತಿದ್ದರು.  ಒಂದು ದಿನ ನರೇಂದ್ರ ಅವರನ್ನು ನೋಡುವ ಸಲುವಾಗಿ ಗೆಳೆಯರೊಡನೆ ದಕ್ಷಿಣೇಶ್ವರಕ್ಕೆ ಹೋದನು. ಶಿಷ್ಯರ ನಡುವೆ ಕುಳಿತಿದ್ದ ಶ್ರಿಈರಾಮಕೃಷ್ಣರು ಭಗವತ್ಸಂಬಂಧವಾದ ಚರ್ಚೆಯಲ್ಲಿ ಮುಳೂಗಿದ್ದರು. ನರೇಂದ್ರ ಮಿತ್ರರೊಡನೆ ಕೋಣೆಯ ಒಂದು ಮೂಲೆಯಲ್ಲಿ ಕುಳಿತನು. ಇದ್ದಕಿದ್ದಂತೆಯ ಶ್ರೀರಾಮಕೃಷ್ಣರ ನೋಟ ಅವನ ಕಡೆಗೆ ಹರಿಯಿತು. ಅವರ ಮನಸ್ಸು ಭಾವಗಳ ಸಂತೆಯಾಯಿತು. ಅವರ ಶರೀರದಲ್ಲಿ ವಿದ್ಯುತ್ ಹರಿದಂತಾಯಿತು. ಸ್ಪಷ್ಟವಲ್ಲದ ಚಿಂತೆಗಳು ಅವರ ಬುದ್ಧಿಯನ್ನು ಕದಡಿದವು. ಫೂರ್ವ ಪರಿಚಯದ ನೆನಪು ಮರುಕಳಿಸಿದಂತಾಯಿತು. ತುಸುಕಾಲ ಭಾವವಶರಾಗಿ ಕಲ್ಲಿನಂತೆ ಕುಳೀತುಬಿಟ್ಟರು. ಚೆಲುವು ಮಾಟದ ಅವನ ಮೈಯನ್ನು ಹೊಳೆಯುತ್ತಿದ್ದ. ಅವನ ಕಣ್ಣುಗಳನ್ನು ನೋಡಿ ಬೆರಗಾದರು. “ನಿನಗೆ ಹಾಡು ಬರುತ್ತದೆಯೇ?” ಎಂದು ಅವನನ್ನು ಕೇಳಿದರು.  ನರೇಂದ್ರ ಒಂದೆರಡು ಬಂಗಾಳಿ ಗೀತೆಗಳನ್ನು ಸುಶ್ರಾವ್ಯವಾಗಿ ಹಾಡಿದನು. ಹಾಡು ಕೇಳೂತ್ತ, ಕೇಳೂತ್ತಾ ಭಗವಾನರು ಭಾವಪರವಶರಾದರು. ತುಸು ಹೊತ್ತಿನ ನಂತರ ಅವರು ಅವನ ಬಳಿಗೈದಿ, ಕೈ ಹಿಡಿದು ಮತ್ತೊಂದು ಕೋಣೆಗೆ ಕರೆದೊಯ್ದರು , ಅಲ್ಲಿ ಅವನ ತಲೆಸವರಿ, ಮೈದಡವಿದರು. “ಮಗು ಎಕಿಷ್ಟು ತಡವಾಗಿ ಬಂದೆ? ನಿನಗಾಗಿ ಕಾದು ಕಾದು ಸಾಕಾಯಿತಲ್ಲ. ಸರಿಯಾದವನಿಗೆ ನನ್ನ ಅನುಭವಗಳನ್ನು ತಿಳಿಸಬೇಕೇಂದಿದ್ದೇನೆ. ನೀನು ಸಾಮಾನ್ಯವನಲ್ಲ: ನರರೂಪದ ನಾರಾಯಣ, ನಿನಗಾಗಿ ನಾನೆಷ್ಟು ಕೊರಗಿದ್ದೇನೆ, ಗೊತ್ತೆ? ” ಎಂದವರು ಅಳತೊಡಗಿದರು.

ಮಗು ಏಕಿಷ್ಟು ತಡವಾಗಿ ಬಂದೆ?"

ರಾಮಕೃಷ್ಣರ ನಡತೆಯನ್ನು ನೋಡಿ ನರೇಂದ್ರನಿಗೆ ಅಚ್ಚರಿಯಾಯಿತು. ಅವರು ಹುಚ್ಚರಿರಬೇಕೆಂದು ಎಣಿಸಿದನು. “ನೀನು ಇನ್ನೊಮ್ಮೆ ಬರುವೆಯಾ? ಬರುವುದಾಗಿ ಮಾತು ಕೊಡು” ಎಂದು ಅಂಗಲಾಚಿದರು. ಅವರಿಂದ ಬೇಗ ಪಾರಾಗುವ ತವಕದಿಂದ ನರೇಂದ್ರ “ಆಗಲಿ” ಎಂದನು.

ಭಗವಾನರ ಮಾತು ಮುಗಿದ ತರುವಾಯ “ನೀವು ದೇವರನ್ನು  ನೋಡಿದ್ದಿರಾ”? ಎಂದ ಅವನು ಪ್ರಶಿನಸಿದನು. “ಹೌದು ನೋಡಿದ್ದೇನೆ. ನಿನ್ನನ್ನು ನೋಡುತ್ತಿರುವಂತೆ ಅವನನ್ನೂ ನೊಡಿದ್ದೇನೆ.  ಅವನೊಡನೆ ಮಾತನಾಡಿದ್ದೇನೆ. ನಿನಗೂ ತೋರಿಸಬಲ್ಲೆ. ಆದರೆ ದೇವರನ್ನು ನೋಡುವ ಹಂಬಲ ಯಾರಿಗಿದೆ? ” ಎಂದ ಆವರು ಉತ್ತರಿಸಿದರು.  ಈ ತನಕ ದೇವರನ್ನು ನೊಡಿದ್ದೇನೆನೆನ್ನುವವರು ಸಿಗಲಿಲ್ಲ. ಇವನು ಹುಚ್ಚು ಹಿಡಿದವನಂತೆ ತೋರುತ್ತಿದ್ದಾನೆ. ಹುಚ್ಚನೇ ಇರಬಹುದು. ಏನಾದರು ಆಗಲಿ ಪರಿಕ್ಷಿಸುವ ತನಕ ತೀರ್ಮಾನ ಸರಿಯಲ್ಲ” ಎಂದು ನರೇಂದ್ರ ನಿಶ್ಚಯಿಸಿಕೊಂಡನು.

ಒಂದು ತಿಂಗಳ ನಂತರ ಒಂಟಿಯಾಗಿ ದಕ್ಷಿಣೇಶ್ವರಕ್ಕೆಹೋದನು.ತಮ್ಮ ಕೋಣೆಯ ಸಣ್ಣ ಮಂಚದ ಮೇಲೆ ಶ್ರೀರಾಮಕೃಷ್ಣರು ಒಬ್ಬರೇ ಕುಳಿತ್ತಿದ್ದರು.  ಅವರು ನರೇಂದ್ರನನ್ನು ಕಂಡು ಹರ್ಷಗೊಂಡರು: ಅವನನ್ನು ಪಕ್ಕಕ್ಕೆಳೆದು ಕೂರಿಸಿಕೊಂಡರು.ಭಾವಪರವಶರಾಗಿ ತಮ್ಮ ಬಲಗಾಲನ್ನು ನರೇಂದ್ರನ ತೊಡೆಯ ಮೇಲಿಟ್ಟರು.  ಅವನು ಹೊರಜಗತ್ತನ್ನು ಮರೆತನು. ತಾನು ಇಲ್ಲವಾಗುತ್ತಿರುವಂತೆ ಅವನಿಗನ್ನಿಸಿತು.  “ನೀವು ಮಾಡುತ್ತಿರುವುದೇನೂ, ಸ್ವಾಮಿ” ನನಗೆ ಅಪ್ಪ ಅಮ್ಮ ಇದ್ದಾರೆ. ನಾನವರ ಬಳಿ ಹೋಗಬೇಕು” ಎಂದು ಕಿರುಚಿಕೊಂಡನು. ಶ್ರೀರಾಮಕೃಷ್ನರು ನಗುತ್ತ ” ಈ  ಹೊತ್ತಿಗೆ ಇಷ್ಟೇ ಸಾಕು ” ಎಂದು ಕಾಲನ್ನೆಳೆದುಕೊಂಡರು.ಅವನು ಮತ್ತೇ ಹಿಂದಿನಂತಾದನು.

ಆಕರ್ಷಣೆ -ಪರೀಕ್ಷೆ :

ದಿನ ಕಳೆದಂತೆ ಅವರಿಬ್ಬರು ಪರಸ್ಪರ ಆಕರ್ಷಣೆಗೊಳಗಾದರು. ಒಬ್ಬರನೊಬ್ಬರು ಬಹುಕಾಲ ಬಿಟ್ಟಿರಲು ಸಾಧ್ಯವಾಗುತ್ತಿರಲಿಲ್ಲ. ನರೇಂದ್ರನ ಮಹಿಮೆಯನ್ನು ಕಂಡುಕೊಳ್ಳಲು ಶ್ರೀರಾಮಕೃಷ್ಣರಿಗೆ ಬಹುಕಾಲ ಹಿಡಿಯಲಿಲ್ಲ. ಅವರು ಮೇಲಾಗಿ ಜಗನ್ಮಾತೆಯ ಪ್ರೇರಣೆಯಂತೆ ನಡೆದುಕೊಳ್ಳುತ್ತಿದ್ದರು.  ಆದರೆ ತರುಣ ನರೇಂದ್ರ ಪರೀಕ್ಷೆ ಅವರಿಗೆ ಕಾಣದಂತೆ ಅವರ ತಲೆದಿಂಬಿನ ಕೆಳಗೆ ಒಂದು ರೂಪಾಯಿ ಇರಿಸಿದ್ದನು. ಶ್ರೀ ರಾಮಕೃಷ್ಣರು ಹೊರಗಿನಿಂದ ಬಂದುಹಾಸಿಗೆಯ ಮೇಲೆ ಹೊರಳಿಕೊಂಡರು. ಒಡನೆಯೇ ಚೇಳು ಕುಟುಕಿಂದಾಗಿ  ದಿಗ್ಗನೆದ್ದರು.  ಹಾಸುಗೆಯನ್ನೊದರಿದಾಗ ರೂಪಾಯಿ ಕೆಳಗೆ ಬಿತ್ತು. ಅದು ನರೇಂದ್ರನ ಕಾರ್ಯವೆಂದು ಅವರಿಗೆ ಅನಂತರ ಅರಿವಾಯಿತು.

ಶ್ರೀರಾಮಕೃಷ್ಣರ ಪ್ರೀತಿಗೆ ಪಾತ್ರರಾದವರಲ್ಲಿ ನರೇಂದ್ರ ಅಗ್ರಗಣ್ಯ. ಆದರ ಅವನು ಹೇಳಿದ್ದೆಲ್ಲ ಸರಿಯೆಂದು  ಅವರು ಒಪ್ಪಿಕೊಳ್ಳುತ್ತಿರಲಿಲ್ಲ. ನರೇಂದ್ರ ಮೂರ್ತಿ ಪೂಜಕರನ್ನು ಟೀಕಿಸುತ್ತಿದ್ದುದುಂಟು,. ಆದ್ವೈತವಾದವನ್ನು ತಿರಸ್ಕರಿಸುತ್ತಿದ್ದುದುಂಟು. ಅತೀಂದ್ರಿಯ ಅನುಭವಗಳ ಬಗೆಗೂ ಸಂಶಯ ವ್ಯಕ್ತಪಡಿಸುತ್ತಿದ್ದದುಂಟು. “ನಾನೇ ಬ್ರಹ್ಮ,, “ನಾನೇ ಶಿವ, ಮೊದಲಾದ ತತ್ವಗಳು ಅವನಿಗೆ ಹಿಡಿಸುತ್ತಿರಲಿಲ್ಲ. “ಒಂದು ಗುರಿ ಮುಟಟಲು ಹಲವಾರು ದಾರಿಗಳಿವೆ. ಮತ್ತೊಬ್ಬರ ದಾರಿ ಸರಿಯಲ್ಲವೆಂದು ಹೇಳೂವ ಹಕ್ಕು ಯಾರಿಗೆ ಇಲ್ಲ.ತನ್ನ ಶಕ್ತಿಗೆ ನಿಲುಕದ ಸಂಗತಿ ಸುಳ್ಳೆಂದು ತೀರ್ಪಿಯುವುದು ತಪ್ಪು:” ಎಂದು ಹೇಳಿ ಅವರು ಅವನನ್ನು ಸರಿಯಾದ ದಾರಿಗೆ ಕರೆದೊಯ್ಯುತ್ತಿದ್ದರು.

ಒಂದು ದಿನ ಶ್ರೀರಾಮಕೃಷ್ಣರು ನರೇಂದ್ರನನ್ನು ಯಾರು ಇಲ್ಲದ ಜಾಗಕ್ಕೆ ಕರೆದೊಯ್ದರು. ಬಹುದಿನ ಸಾಧನೆಯಿಂದ ನಾನು ಕೆಲವು ಸಿದ್ಧಿಗಳನ್ನು ಗಳಿಸಿದ್ದೇನೆ. ಅವುಗಳಿಂದ ಬೇಕಾದದ್ದನ್ನು ಪಡೆಯಬಹುದು. ಆಸೆಬಿಟ್ಟ ನನಗೆ ಅವುಗಳಿಂದ ಲವಲೇಶವೂ ಪ್ರಯೋಜನವಿಲ್ಲ. ಅವನ್ನು ನಿನಗೆ ಕೊಡಲೇನು? ಎಂದ ಆವರು ಕೇಳಿದರು.  ಅವುಗಳಿಂದ ಆತ್ಮಸಾಕ್ಷಾತ್ಕಾರವಾಗುವುದೇ?” ಎಂದ ಆವನು ಪ್ರಶ್ನಿಸಿದನು. “ಇಲ್ಲ” ಹಾಗಾದರೆ ಅವು ನನಗೆ ಬೇಡ. ನನಗೆ ಮೊದಲು ಬೇಕಾದದ್ದು, ಭಗವತ್ಸಾತ್ಕಾರ. ಅವನ  ಈ ಉತ್ತರದಿಂದ ಶ್ರೀರಾಮಕೃಷ್ನರಿಗೆ ಮಹಾದಾನಂದವಾಯಿತು. ಅವರ ಪರೀಕ್ಷೆಯಲ್ಲಿ ನರೇಂದ್ರ ತೇರ್ಗಡೆ ಹೊಂದಿದನು: ಶಿಷ್ಯ ಪದವಿಗೆ ಅರ್ಹನಾದನು.

ಬರುಬರುತ್ತ ನರೇಂದ್ರ ವೈರಾಗ್ಯದ ಕಡೆಗೆ ಮುಖವಾಗುತ್ತಿದ್ದನು. ತಂದೆತಾಯಿಯರಿಗದು ತಿಳಿಯಿತು. ಆಗವನು ಬಿ.ಎ. ತರಗತಿಯಲ್ಲಿ ಓದುತ್ತಿದ್ದನು. ಅವನನ್ನು ಮದುವೆಯ  ಮೂಲಕ ಸಂಸಾರದಲ್ಲಿ ಬಂಧಿಸುವುದೆಂದು ಅಲೋಚಿಸಿದರು. ಶ್ರೀರಾಮಕೃಷ್ಣರಿಗೆ ಆ ಸುದ್ಧಿ ತಿಳಿದಗ ಸಂಕಟಗೊಂಡರು. ಸಂಸಾರಕ್ಕೆ ಕಟ್ಟಿಹಾಕಿಕೊಂಡರೆ ಲೋಕಸೇವೆ ಸಾಧ್ಯವಾಗದೆಂದು ಅವನಿಗೆ ಬೊಧಿಸಿದರು. ತಮ್ಮ ಬೊಧನೆಯ ಬಗ್ಗೆ ಅವನಲ್ಲಿ ಸಂಶಯ ಮೂಡಿದಾಗ ಅವನನ್ನು ಮುಟ್ಟುತ್ತಿದ್ದರು.  ಆಗವನು ಹೊರ ಪ್ರಪಂಚವನ್ನು ಮರೆಯುತ್ತಿದ್ದನು, ಎಚ್ಚರವಾದ ನಂತರ ಅವರಿಗೆ ಶರಣಾಗುತ್ತಿದ್ದನು. ಹೀಗೆ ಕ್ರಮ ಕ್ರಮೇಣ ಗುರುಗಳು ಶಿಷ್ಯನಿಗೆ ತಮ್ ಶಕ್ತಿಯನ್ನೆಲ್ಲ ಧಾರೆಯೆರೆದರು.

೧೮೮೪ರಲ್ಲಿ ನರೇಂದ್ರ ಬಿ.ಎ.ಪರೀಕ್ಷೆಯಲ್ಲಿ ತೇರ್ಗಡೆ ಹೊಂದಿದನು. ಅವನ ಗೆಳೆಯನೊಬ್ಬ ಸಂತೋಷ ಕೂಟವನ್ನು ಏರ್ಪಡಿಸಿ, ಆವನನ್ನು ಅವನ ಗಳೆಯರನ್ನು ಅಹ್ವಾನಿಸಿದನು.  ಸಂತೋಷಕೂಟದಲ್ಲಿ ನರೇಂದ್ರ ಹಾಡುತ್ತಿದ್ದಾಗಲೇ ತಂದೆ ಸತ್ತ ಸುದ್ಧಿ ಹಠಾತ್ತಾನೆ ಅಪ್ಪಳಿಸಿತು.

ತಂದೆ ಸತ್ತ ಮಾರನೆಯ ದಿನವೇ ಕುಟುಂಬ ಬಡತನಕ್ಕೀಡಾಯಿತು. ಸಾಲಗಾರರ ಕಿರುಕುಳ ಮಿತಿಮೀರಿತು. ಕೆಲವರು ದಾವ ಹೂಡಿದರು. ನರೇಂದ್ರ ಚಾಕರಿಗಾಗಿ ಬಾಗಿಲನಿಂದ ಬಾಗಿಲಿಗೆ ಅಲೆದಾಡಿದ. ಮೈಮೇಲೆ ಬಟ್ಟೆಯಿಲ್ಲ. ಒಂದು ಹೊತ್ತು ಊಟಕ್ಕೆ ಗತಿಯಿಲ್ಲ. ಇದ್ದದ್ದು ತಾಯಿ ಮತ್ತು ಅಕ್ಕ ತಮ್ಮಂದಿರಿಗಾಗಲೆಂದು ಅವನು ಎಷ್ಟೋ ದಿನ ಉಪವಾಸವಿರುತ್ತಿದ್ದನು. ತನ್ನ ಗೆಳೆಯರು ಊಟಕ್ಕೆ ಕರೆದಿದುದ್ದಾಗಿ ಹೇಳಿಬಿಡುತ್ತಿದ್ದನು. ಎಷ್ಟೋ ಸಾರಿ ಹಸಿವಿನಿಂದ ಸುಸ್ತಗಿ ,ಪ್ರಜ್ಞೆ ತಪ್ಪಿ, ಬೀದಿಯಲ್ಲಿ ಬಿದ್ದು ಬಿಟ್ಟಿದ್ದೂ ಉಂಟು. ಮೇಲಿಂದ ಮೇಲೆ ಕಷ್ಟಗಳು ಬಂದರೂ ಭಗವಂತನಲ್ಲಿದ್ದ ವಿಶ್ವಾಸ ಜಾರಲಿಲ್ಲ. ಶ್ರಿರಾಮಕೃಷ್ಣರು “ನೀನು ಜಗನ್ಮಾತೆಯ ಕೆಲಸಕ್ಕಾಗಿ, ಲೋಕೋದ್ದಾರಕ್ಕಾಗಿ ಬಂದಿರುವೆ. ನೀನೀಗ ಎದೆ ಗಟ್ಟಿ ಮಾಡಿಕೋ” ಎಂದು ಅವನನ್ನು ಸಂತೈಸಿದರು.

ನೀನೇ ತಾಯಿಯನ್ನು ಕೇಳಿಕೋ :

ಒಂದು ದಿನ ಅವನಿಗನ್ನಿಸಿತು: ” ದೇವರು ಗುರುಗಳ ಮಾತು ಕೇಳುತ್ತಾನೆ. ಅವರನ್ನು ಮೋರೆ ಹೋಗುವುದೇ ಮೇಲು” ಎಂದು. ಅವನು ನೇರವಾಗಿ ಶ್ರೀ ರಾಮಕೃಷ್ಣರ ಬಳಿ ಹೋದ. “ಬಡತನ ಹರಿಯುವಂತ ದೇವಿಯ ಮುಂದೆ ನನ್ನ ಪರವಾಗಿ ಪ್ರಾರ್ಥಿಸಿಕೊಳ್ಳಿ. ತಾಯಿ ನಿಮ್ಮ ಮಾತು ಕೇಳೂತ್ತಾಳಲ್ಲವೇ”? ಎಂದು ಬೇಡಿಕೊಂಡನು. “ಮಗು,  ಅವಳಲ್ಲಿ ನಿನಗೆ ನಂಬಿಕೆಯಿಲ್ಲ. ಹೀಗಿರುವಾಗ ಅವಳೇಕೆ ನನ್ನ ಮಾತು ಕೇಳಬೇಕು ?ನೀನೇ ಅವಳನ್ನು ಕೇಳಿಕೋ. ಆ ತಾಯಿ ನಿನ್ನ  ಪ್ರಾರ್ಥನೆ ಪೂರೈಸುತ್ತಾಳೆ ಎಂದು ಅವರು ನುಡಿದರು.

ನಮ್ಮ ತಾಯ್ನಾಡಿಗಾಗಿ ಎಲ್ಲ ತ್ಯಾಗಗಳಿಗೂ ಸಿದ್ಧರಾಗುವಿರಾ? (ವಿವೇಕಾನಂದರು ಬೃಹತ್ಸಭೆಯನ್ನುದ್ದೇಶಿಸಿ ಮಾತನಾಡುತ್ತಿರುವುದು).

ನರೇಂದ್ರ ನಡುರಾತ್ರಿ ದೇವಿಯ ಮುಂದೆ ನಿಂತ ಕೂಡಲೇ ಭಾವಪರವಶನಾದನು. “ತಾಯೇ, ನನಗೆ ವೈರಾಗ್ಯ ದಯಪಾಲಿಸು. ನಿನ್ನ ದರ್ಶನವೊಂದೇ ನನಗೆ ಸಾಕು ” ಎಂದು ಅವನು ಬೇಡಿದನು.  ಅವನು ಹೊರಗೆ ಬಂದ ನಂತರ  “ಅಮ್ಮನಲ್ಲಿ ನಿನ್ನ ಬೇಡಿಕೆ ಸಲ್ಲಿಸಿದೆಯಾ? ಅವಳು ಏನು ಹೇಳಿದಳು?” ಎಂದು ಗುರುಗಳು ಕೇಳಿದರು.  “ಅಯ್ಯೋ ಆ ವಿಷಯ ಮರೆತೇ ಬಿಟ್ಟೆನಲ್ಲ” ಎಂದನು. “ಹಾಗಾದರೆ ಮತ್ತೊಮ್ಮೆ ಹೋಗಿ ಕೇಳಿಕೋ” ಎಂದವನನ್ನು ಗುರುಗಳು ಹಿಂದಕ್ಕಟ್ಟಿದರು. ಆಗಲೂ ಅವನ ಬಿನ್ನಹದಲ್ಲಿ ಬಡತನದ ಮಾತು ಬರಲಿಲ್ಲ. ಗುರು ಮತ್ತೇ ಎಚ್ಚರಿಸಿ ಕಳಿಸಿದರು. ಆಗಲು ಹಿಂದಿನಂತೆಯೇ ಆಯಿತು. “ವತ್ಸ, ಊಟ ಬಟ್ಟೆಗಳಿಗಾಗಿ ತೊಳಲಾಡಬೇಕಾಗಿಲ್ಲ. ಅವೇ ಮಾನವನ ಗುರಿಯಲ್ಲ. ದೇವರಲ್ಲಿ ನಂಬಿಕೆಯಿಡು. ಅವನು ನಿನ್ನ ಮತ್ತು ನಿನ್ನ ಕುಟುಂಬದ ಯೋಗಕ್ಷೇಮ ನೋಡಿಕೊಳ್ಳುತ್ತಾನೆ” ಎಂದು ಅವರು ಅವನಿಗೆ ವಿವೇಕ ಹೇಳಿದರು.

ಅನಂತರ ನರೇಂದ್ರ ವಿದ್ಯಾಸಾಗರ ಶಾಲೆಯಲ್ಲಿ ಕೆಲವು ಕಾಲ ಉಪಧ್ಯಾಯ ವೃತ್ತಿ ಕೈಗೊಂಡನು. ಅದರಿಂದಾಗಿ ಮನೆಯವರಿಗೆ ಒಂದಿಷ್ಟು ಊಟ ಸಿಗುವಂತಾಯಿತು. ಕೆಲಸದ ಜತೆಗೆ ಲಾ ಕಾಲೇಜಿನಲ್ಲಿ ವ್ಯಾಸಂಗವನ್ನು ಮುಂದುವರೆಸಿದನು. ಅಷ್ಟರಲ್ಲಿ ಗುರುಗಳ ಗಂಟಲಲ್ಲಿ ಹುಣ್ಣು ಕಾಣಿಸಿಕೊಂಡಿತು. ನರೇಂದ್ರ ನೌಕರಿಯನ್ನೂ ಓದನ್ನೂ ತ್ಯಜಿಸಿ, ಗುರುಗಳ ಶೂಶ್ರಷೆಗಾಗಿ ನಿಂತನು. ಒಮ್ಮೆ ನರೇಂದ್ರ ಧ್ಯಾನಮಗ್ನಾಗಿದ್ದಾಗ “ನನ್ನ ದೇಹವೆಲ್ಲಿ:?” ಎಂಧು ಕೂಗಿಕೊಂಡರು. ಆಗ ಪಕ್ಕದಲ್ಲಿದ್ದವರು ಬಂದು ಅವನ ದೇಹವನ್ನು ಮುಟ್ಟಿ ತೋರಬೇಕಾಯಿತು. ಆ ಸಂಗತಿ ಕೇಳಿದ ಪರಮಹಂಸರು ತಮ್ಮ ಇಷ್ಟಾರ್ಥ ಫಲಿಸಿತೆಂದು ಹರ್ಷಗೊಂಡರು.

ಗುರು ಕಣ್ಮರೆಯಾದರು:

ಶಿಷ್ಯರು ಶಕ್ತಿ ಮೀರಿ ಗುರುಗಳ ಪರಿಚರ್ಯ ನಡೆಸಿದರು. ಆದರೂ ಅವರ ರೋಗ ಗುಣಮುಖವಾಗಲಾರದೆಂಬ ಚಿಂತೆ ಅವರನ್ನು ದಹಿಸುತ್ತಿತ್ತು. ಕೊನೆಯ ದಿನ ಗುರುಗಳು ನರೇಂದ್ರನನ್ನು ಬಳಿ ಕರೆದು ಮುಟ್ಟಿದರು: ತಮ್ಮ ಅಧ್ಯಾತ್ಮ ಶಕ್ತಿಯನ್ನೆಲ್ಲ ಅವನಿಗೆ ಧಾರೆಯೆರೆದರು. “ನರೇನ್, ನೀನೀಗ ಮಹಾಶಕ್ತಿಶಾಲಿ. ಇವರೆಲ್ಲ ನನ್ನ ಮಕ್ಕಳು. ಇವರ ರಕ್ಷಣೆಯ ಭಾರ ನಿನ್ನದು” ಎಂದು ನುಡಿದರು. ಆ ಮಾತಿನಿಂದ ಅವನ ಹೃದಯ ದುಃಖದ ಮಡುವಾಯಿತು. ಮಗುವಿನಂತೆ ಅಳುತ್ತ ಹೊರಗೆದ್ದು  ಹೋದರು.

ಶ್ರೀರಾಮಕೃಷ್ಣರ ನಿಧನಾನಂತರ ಬಾಲ ಸಂನ್ಯಾಸಿಗಳು ಬಾರಾನಗರದ ಮನೆಯೊಂದನ್ನು ಬಾಡಿಗೆಗೆ ಹಿಡಿದರು. ಅದು ಹಳೆಯ ಮನೆಯಾದರೂ, ನಗರದ ಗಲಿಬಿಲಿಯಿಂದ ದೂರವಾಗಿತ್ತು: ಗಂಗಾನದಿಯ ದಡದ ಮೇಲಿತ್ತು. ಶ್ರೀರಾಮಕೃಷ್ಣರ ಸಮಾಧಿಗೆ ಸನಿಹದಲ್ಲಿತ್ತು. ಅಲ್ಲಿ ಮಠ ಪ್ರಾರಂಭವಾಯಿತು. ಆತ್ಮಮೋಕ್ಷ ಮತ್ತು ಲೋಕಕಲ್ಯಾಣಗಳ ಸಾಧನೆಯೇ ಅದರ ಧ್ಯೇಯವಾಯಿತು. ಕೆಲವು ಯುವಕರು ಮನೆ ತೊರೆದು, ಸಂನ್ಯಾಸಧರ್ಮವನ್ನು ಸ್ವಿಕರಿಸಿ, ಮಠ ಸೇರಿದರು. ನರೇಂದ್ರ ಸಂನ್ಯಾಸಿಯಾಗಿ ಆ ಸಂಘದ ನಾಯಕನಾದನು. ಎಲ್ಲರೂ ಸಾಧನೆ ಭಜನೆಗಳಲ್ಲಿ ನಿರತರಾದರು. ಊಟ ಬಟ್ಟೆಗಳ ಅಭಾವವನ್ನು ಅವರು ಲೆಕ್ಕಿಸಲಿಲ್ಲ. ಊಟವಿಲದಾಗಲೂ ಪಾಠ ಪ್ರವಚನಗಳು ಮಾತ್ರ ಮರೆಯುತ್ತಿರಲಿಲ್ಲ. ನರೇಂದ್ರ ತನ್ನ ಸೋದರರಿಗೆ ಸಂಸ್ಕೃತವನ್ನು ವೇದಾಂತ ತತ್ವಗಳನ್ನೂ ಕಲಿಸುತ್ತಿದ್ದನು,. ಹೊರಗಿನಿಂದ ಬಂದವರಿಗೆ ಗುರುದೇವರ ಸಂದೇಶವನ್ನು ವಿವರಿಸುತ್ತಿದ್ದನು.

ತೀರ್ಥಯಾತ್ರೆ :

ಸಂನ್ಯಾಸಿಯಾದವನು ಒಂದು ಜಾಗಕ್ಕೆ ಕಟ್ಟುಗೊಳ್ಳುವಂತಿರಲಿಲ್ಲ, ಮಠವೂ ಒಂದು ಬಂಧನವೇ, ಸ್ಥಾನಮೋಹವೂ ಕೆಟ್ಟದ್ದೇ. ಸಂನ್ಯಾಸ ಧರ್ಮವನ್ನು ಸ್ವೀಕರಿಸಿ ನರೇಂದ್ರ ವಿವೇಕನಂದರಾದದ್ದು ಭಾರತದ ಪುಣ್ಯ. ಭಾರತವೇ ಅವರಿಗೆ ಮನೆಯಾಯಿತು. ನಾಡವರೆಲ್ಲ ಅವರ ಸೋದರರಾದರು. ಅದೃಷ್ಟ ಹೀನ ಸೋದರರ ಕಣ್ಣೀರನ್ನು ಒರೆಸುವ ಪವಿತ್ರ ರ್ಯ, ಅವರ ಗುರಿಯಾಯಿತು. ಅದಕ್ಕಾಗಿ ದೇಶಾಟನೆ ಅನಿವಾರ್ಯವಾಯಿತು. ಕಾವಿ ದಂಡ ಮಂಡಲುಗಳೇ ಅವರ ಆಸ್ತಿ. ದಾರಿಯಲ್ಲಿ ಸಿಕ್ಕಿದ್ದ ಪವಿತ್ರ ಸ್ಥಳಗಳನ್ನು ನೋಡುತ್ತಿದ್ದರು. ಗುಡಿಸಲು ಛತ್ರಗಳಲ್ಲಿ ನೆಲದ ಮೇಲೆ ಮಲಗುತ್ತಿದ್ದರು. ಭಿಕ್ಷಾನ್ನದಿಂದ ಹೊಟ್ಟೆ ಹೊರೆಯುತ್ತಿದ್ದರು.  ಸಾಧುಗಳ ಸಂಗದಲ್ಲಿರುತ್ತ, ಜಪತಪ ಚರ್ಚೆಗಳಲ್ಲಿ ಕಾಲ ಕಳೆಯುತ್ತಿದ್ದರು. ಕೆಲವು ಕಡೆ ಕಾಲ್ನಡಿಗೆಯಲ್ಲಿ, ಕೆಲವು ಕಡೆ ಸಿಕ್ಕಿದ ವಾಹನಗಳಲ್ಲಿ ಪ್ರವಾಸ ಸಾಗಿಸುತ್ತಿದ್ದರು.

ವಿವೇಕಾನಂದರು ಮೊದಲು ಮುಟ್ಟಿದ ನಗರ ಕಾಶಿ. ಅಲ್ಲಿ ತಂಗಿದ್ದಾಗ ಅವರು ಅನೇಕ ಪಂಡಿತರನ್ನು ಭೇಟಿ ಮಾಡಿ ವಿಚಾರ ವಿನಿಮಯ ಮಾಡಿಕೊಂಡರು: ಅವರೊಡನೆ ನಡೆಸಿದ ವಾದ ವಿವಾದಗಳಲ್ಲಿ ವಿಜಯಿಯಾದರು. ಆಯೋಧ್ಯೆಯಲ್ಲಿ ಸೀತಾರಾಮರನ್ನು ನೆನೆದು ಭಾವಪುಲಕಿತರಾದರು. ಆಗ್ರಾದಲ್ಲಿ ತಾಜಮಹಲನ್ನು ನೋಡಿ ವಿಸ್ಮಯಗೊಂಡರು. ಬೃಂದಾವನಕ್ಕೆ  ಹೋಗುವ ದಾರಿಯಲ್ಲಿ ಜಲಗಾರನೊಬ್ಬನ ಹುಕ್ಕ ತೆಗೆದುಕೊಂಡು ಗುಡಿಗುಡಿ ಸೇದಿದರು; ಪಂಚಮನ ಮನೆಯಲ್ಲಿ  ನೀರು ಕುಡಿದರು.  ಮೋಚಿಯ ಮನೆಯ ತಿರಿಕೂಳನ್ನು ತಿಂದರು. ಬೃಂದಾವನದಲ್ಲಿ ಕಾಲಿಟ್ಟ ಕೂಡಲೇ ಅವರ ಹೃದಯದಲ್ಲಿ ಆನಂದ ತುಳುಕಾಡಿತು. ಆಳ್ವಾರಿನಲ್ಲಿ ಕೆಲವು ಮಹ್ಮದೀಯ ಭಕ್ತರು ದೊರೆತರು. ಅವರ ಮನೆಗಳಲ್ಲಿ ಊಟ ಮಾಡಿಕೊಂಡಿರುವಾಗ ಮಹಾರಾಜ ಮಂಗಳಸಿಂಗರ ಪರಿಚಯವಾಯಿತು. ಮೊದ ಮೊದಲು ಸ್ವಾಮಿಗಳ ಬಗ್ಗೆ ಅವರಿಗೆ ವಿಶ್ವಾಸವಿರಲಿಲ್ಲ. ಅವರಿಬ್ಬರಲ್ಲಿ ವಾದ ವಿವಾದಗಳಾದವದು. “ಸ್ವಾಮೀಜಿ, ನನಗೆ ವಿಗ್ರಹರಾಧನೆಯಲ್ಲಿ ನಂಬಿಕೆಯಿಲ್ಲ” ಎಂದು ರಾಜರು ನುಡಿದರು. “ವಿಗ್ರಹವೊಂದು ಸಂಕೇತ. ಅದು ಭಗವಂತನ ನೆನಪು ತಂದುಕೊಡುತ್ತದೆ. ಅದು ನಿಕೃಷ್ಟವಲ್ಲ, ಒಬ್ಬೊಬ್ಬ ಸಾಧಕನಿಗೂ ಒಂದೊಂದು ದಾರಿಯುಂಟು ಅದು ಆಯಾಯ ವ್ಯಕ್ತಿಯ ಶ್ರದ್ದೇಯನ್ನವಲಂಬಿಸುತ್ತದೆ” ಎಂದು  ಸ್ವಾಮೀಜಿ ವ್ಯಾಖ್ಯಾನ ಮಾಡಿದರು. ರಾಜರಿಗೆ ಸಮಾಧಾನವಾಗಲಿಲ್ಲ. ಎದುರು ಗೋಡೆಯ ಮೇಲೆ ರಾಜರ ಭಾವಚಿತ್ರವಿತ್ತು. ಸ್ವಾಮೀಜಿ ಬಳಿಯಿದ್ದ ದಿವಾನರನ್ನು ಕುರಿತು “ಇದು ಯಾರ ಭಾವಚಿತ್ರ?” ಎಂದು ಕೇಳೀದರು.  “ರಾಜರದು”, ಇದರ ಮೇಲೆ ಉಗುಳಿ.” ದಿವಾನರು ತಳಮಳಗೊಂಡರು. “ನಿಮಗೇಕೆ ತಳಮಳ?” ಸ್ವಾಮೀಜಿ ಹುಚ್ಚರಿರಬೇಕೆಂದು ದಿವಾನರು ಭಾವಿಸಿದರು. “ಈ ಪೋಟೋ ರಾಜರ ನೆರಳು ತಾನೆ ?. ಇದರಲ್ಲಿ ರಕ್ತಮಾಂಸಗಳಿಲ್ಲ”.  ಎಮದು ಸ್ವಾಮೀಜಿ ವಿಶದಪಡಿಸಿದರು. “ಆದು ರಾಜರನ್ನು ನೆನಪಿಗೆ ತಂದುಕೊಡುತ್ತದಲ್ಲವೇ? ” ಎಂದು ದಿವಾನರು ಪ್ರಶ್ನಸಿದರು. ಅಷ್ಟರಲ್ಲಿ ರಾಜರಿಗೆ ವಿವೇಕ ಮೂಡಿತು. ಸ್ವಾಮಿಗಳ ಕ್ಷಮೆ ಯಾಚಿಸಿದರು. ಅನಂತರ ಸ್ವಾಮಿಗಳು ಜಯಪುರ  ಅಜ್ಮೀರಗಳ ಮೂಲಕ ಅಬು ಬೆಟ್ಟಕ್ಕೆ ಹೋಗಿ, ಅಲ್ಲಿಯ ಗುಹೆಯೊಂದರಲ್ಲಿ ಕೆಲವು ಕಾಲ ತಪಸ್ಸು ಮಾಡಿದರು.

ಕೆಲವು ಅನುಭವಗಳು :

ಸ್ವಾಮಿಗಳು ರಾಜಾಸ್ತಾನದೊಳಗೆ ರೈಲಿನಲ್ಲಿ  ಸಂಚರಿಸುತ್ತಿದ್ದಾಗ ನಡೆದ ಘಟನೆಯೊಂದು ಸ್ವಾರಸ್ಯವಾಗಿದೆ.  ಅವರ ಎರಡನೆಯ ತರಗತಿಯ  ಆಸನದಲ್ಲಿ ಮಲಗಿದ್ದರು. ಇಬ್ಬರು ಆಂಗ್ಲರು ಅವರನ್ನು ಹೀನಾಯವಾಗಿ ನಿಂದಿಸುತ್ತಿದ್ದರು. ಸ್ವಾಮೀಜಿಗೆ ಇಂಗ್ಲೀಷ ಬರುವುದಿಲ್ಲವೆಂದು ಅವರು ಭಾವಿಸಿದ್ದರು. ನಿಲ್ದಾಣ ತಲುಪಿದಾಗ ಸ್ವಾಮಿಗಳು ತಮಗೆ ನೀರು ಬೇಕದು ಅಲ್ಲಿದ್ದ ಅಧಿಕಾರಿಯನ್ನು ಇಂಗ್ಲೀಷನಲ್ಲಿ ಕೇಳಿದರು. ಆಂಗ್ಲರಿಗೆ ಅಚ್ಚರಿಯಾಯಿತು. ಆಂಗ್ಲ ಭಾಷೆ ಗೊತ್ತಿದ್ದೂ ಸುಮ್ಮನಿದ್ದುದ್ದೇಕೆಂದು ಸ್ವಾಮಿಜಿಗಳನ್ನು ಕೇಳಿದರು. “ನನಗೆ  ಮೂರ್ಖರ ಸಂಗ ದೊರೆತದ್ದು ಇದೇ ಮೊದಲ ಸಲವಲ್ಲ” ಎಂದು ಸ್ವಾಮೀಜಿ ಉತ್ತರ ಕೊಟ್ಟರು. ಮೈಕಟ್ಟನ್ನು  ನೋಡಿ ತೆಪ್ಪಗಾದರು.

ತೀರ್ಥಯಾತ್ರಾ ಕಾಲದಲ್ಲಿ ಯಾರಾದರೂ ಟಿಕೀಟು ತೆಗೆದುಕೊಟ್ಟಾಗ ಮಾತ್ರ ರೈಲಿನಲ್ಲವರು ಪ್ರಯಾಣ ಮಾಡುತ್ತಿದ್ದರು. ಇಲ್ಲವಾದರೆ ಕಾಲೇ ಗತಿ. ಕೈಯಲ್ಲಿ ರೊಕ್ಕವಿಲದ್ದರಿಂದ ಅವರು ಕೆಲವು ವೇಳೆ ಹಸಿದಿರಬೇಕಾಗುತ್ತಿತ್ತು. ಒಮ್ಮೆ ಎದುರಿಗಿದ್ದ ವರ್ತಕನೊಬ್ಬನು ಬಗೆಬಗೆಯ ತಿಂಡಿಗಳನ್ನು ತಿನ್ನುತ್ತಿದ್ದ. ಸ್ವಾಮೀಜಿ ಹಸಿವಿನಿಂದ ದಣಿದಿದ್ದರು. ಅವರೇನೂ ಅವನಿಂದ ತಿಂಡಿಬೇಡಲಿಲ್ಲ.ಆದರೂ ಅವನು “ನೀನೊಬ್ಬ ಸೋಮಾರಿ. ದುಡಿಯಲಾರದೆ ಕಾವಿ ಧರಿಸಿದ್ದೀಯೆ. ನಿನಗೆ ಯಾರು ಊಟ ಕೊಡುತ್ತಾರೆ ? ಸಾಯಿ ” ಎಂದು ಚುಚ್ಚಿನುಡಿದನು. ಅಷ್ಟರಲ್ಲೊಬ್ಬಮಿಠಾಯಿ ವ್ಯಾಪಾರಿ ಹಲವುಬಗೆಯ ತಿಂಡಿಗಳನ್ನು ಸ್ವಾಮೀಗಳ ಮುಂದಿರಿಸಿದನು. “ಬೆಳಿಗ್ಗೆ ನಾನು ನಿಮ್ಮನ್ನು ಕನಸಿನಲ್ಲಿ ಕಂಡೆ. ಶ್ರಿರಾಮನೇ ನಿಮ್ಮನ್ನು ನನಗೆ ಪರಿಚಯ ಮಾಡಿಕೊಟ್ಟನು ” ಎಂದು ವ್ಯಾಪಾರಿ ವಿವರಿಸಿದನು. ಅದನ್ನೆಲ್ಲ ನೋಡಿ ವರ್ತಕ ನಾಚಿಕೊಂಡನು.

ಅಮೇರಿಕಕ್ಕೆ ಹೋಗುವ ಯೋಜನೆ :

ಮೈಸೂರಿನಲ್ಲಿದ್ದಾಗ ಸ್ವಾಮಿಗಳಿಗೆ ದಿವಾನ ಶೇಷಾದ್ರಿ ಅಯ್ಯರ‍್ ಮತ್ತು ಮಹಾರಾಜರ ಪರಿಚಯವಾಯಿತು. ಪಂಡಿತ ಸಭೆಯಲ್ಲಿ ಸ್ವಾಮೀಜಿ ಸಂಸ್ಕೃತದಲ್ಲಿ ಮಾಡಿದ ಭಾಷಣ ಮಹಾರಾಜರ ಮೆಚ್ಚುಗೆ ಪಡೆಯಿತು. ಒಂದು ದಿನ ಮಹಾರಾಜರು ಸ್ವಾಮಿಗಳ ಮುಂದಿನಗುರಿಯ ಬಗೆಗೆ ವಿಚಾರಿಸಿದರು. ಇಂಡಿಯಾ ದೇಶದಲ್ಲ ತತ್ವ ಮತ್ತು ಧರ್ಮಗಳಿವೆ. ಪಾಶ್ಚಾತ್ಯ ದೇಶಗಳಲ್ಲಿ ವಿಜ್ಞಾನವಿದೆ. ಇವುಗಳ ವಿನಿಮಯದಿಂದ ಮಾತ್ರಲೋಕ ಕಲ್ಯಾಣ ಸಾಧ್ಯ.  ಆದ್ದರಿಂದ ವೇದಾಂತವನ್ನು ಬಿತ್ತರಿಸುವ ಸಲುವಾಗಿ ನಾನು ಅಮೇರಿಕೆಗೆ ಹೋಗಬೇಕೆಂದಿದ್ದೇನೆ”. ಎಂದು ಸ್ವಾಮೀಜಿ ನುಡದರು.  “ಹಾಗಾದರೆ ಪ್ರಯಾಣಕ್ಕೆ ತಗಲುವ ವೆಚ್ಚವನ್ನೆಲ್ಲ ಈಗಲೇ ನಾನು ಕೊಡುತ್ತೇನೆ” ಎಂದು ಮಹಾರಾಜರು ಮುಂದಾದರು. ಅವಶ್ಯಬಿದ್ದಾಗ ತರಿಸಿಕೊಳ್ಳುವುದಾಗಿ ಹೇಳಿ, ವಂದನೆ ಸಲ್ಲಿಸಿ, ಸ್ವಾಮಿಗಳು ಅವರಿಂದ ಬಿಳ್ಕೊಂಡರು.

ಅಲ್ಲಿಂದ ಮುಂದೆ ಸ್ವಾಮೀಜಿ ರಾಮನಾಡಿಗೆ ಹೋದರು. ಅಲ್ಲಿ ದೊರ ಭಾಸ್ಕರ ಸೇತುಪತಿ. ಭರತ ಖಂಡದ ಸಮಸ್ಯೆಗಳನ್ನು ಕುರಿತು ಅವರೊಡನೆ ಚರ್ಚಿಸಿದರು.  ರಾಜರಿಗೆ ಸ್ವಾಮಿಗಳಲ್ಲಿತುಂಬಾ ಗೌರ‍್ವ ಮೂಡಿತ್ತು. ಹಿಂದೂ ಧರ್ಮದ ಪರವಾಗಿ ನ್ಯೂಯಾರ್ಕಿನಲ್ಲಿ ನಡೆಯುವ ವಿಶ್ವಧರ್ಮ ಸಮ್ಮೇಳನಕ್ಕೆ ಹೋಗಬೇಕು .ಪ್ರಯಾಣಕ್ಕೆ ಬೇಕಾದ ಖರ್ಚನ್ನೆಲ್ಲ ನಾನು ವಹಿಸಿಕೊಳ್ಳುತ್ತೇನೆ. ಎಂದು  ಪ್ರಾರ್ಥಿಸಿಕೊಂಡರು. ಆ ಬಗ್ಗೆ ಯೋಚಿಸುವುದಾಗಿ ತಿಳಿಸಿ. ರಾಮೇಶ್ವರದ ಮೂಲಕ ಕನ್ಯಾಕುಮಾರಿ ತಲುಪಿದರು. ಅವರು ಅಲ್ಲಿ ಈಜಿಕೊಂಡು ಕಡಲ ನಡುವಣ ಬಂಡೆಯ ಮೇಲೆ ಕುಳೀತರು.  ಭರತ ಖಂಡದ ಸ್ಥಿತಿಗತಿಗಳನ್ನು ಕುರಿತು ಆಲೋಚಿಸಿದರು. ಸಾಮಾನ್ಯ ಜನರ ಬಡತನವನ್ನು ನೆನೆದು ಸಂಕಟಗೊಂಡರು.ಜಾತಿಯತೆಯನ್ನು ತೊಡೆಯದಿದ್ದರೆ ದೇಶಕಲ್ಯಾಣ ಸಾಧ್ಯವಾಗದೆಂದು ತೀರ್ಮಾನಿಸಿದರು. ಪಾಶ್ಚಾತ್ಯ ದೇಶಗಳಿಗೆ  ಹೋಗಿ ಅಧ್ಯಾತ್ಮ ವಿದ್ಯೆಯನ್ನು ಬೋಧಿಸಬೇಕೆಂದೂ, ಅನಂತರ ಮಲಗಿರುವ ಭರತ ಖಂಡವನ್ನು ಎಚ್ಚರಿಸಬೇಕೆಂದು ನಿಶ್ಚಯಿಸಿಕೊಂಡರು.

ಬಂಗಾಳದಲ್ಲಿ ಮೂಡಿದ ನರೇಂದ್ರನೆಂಬ ಹಣತೆ ಭರತಖಂಡದ ಮಹಾಜ್ಯೋತಿಯಾದದ್ದು, ವಿಶ್ವವಿಖ್ಯಾತ ವಿವೇಕಾನಂದರಾದದ್ದು ಮದರಾಸಿನಲ್ಲಿ. ಅಮೇರಿಕೆಗೆ ಹೋಗಲು ಒತ್ತಾಯ ಬಂದದ್ದು ಅಲ್ಲಿಯೇ. ಮದರಾಸಿನಲ್ಲಿ ಅವರು ಬೀರಿದ ಪ್ರಭಾವ ಹೈದರಾಬಾದನ್ನು ಮುಟ್ಟಿತು. ಅಲ್ಲಿ ನಡೆದ ಬಹಿರಂಗ ಸಭೆಯಲ್ಲಿ ಸಾವಿರಾರು ಜನ ನೆರೆದಿದ್ದರು.  ಸ್ವಾಮಿಗಳು ಭಾರತದಲ್ಲಿ ಮಾಡಿದ ಸಾರ್ವಜನಿಕ ಭಾಷಣಗಳಲ್ಲಿ ಅದೇ ಮೊದಲನೆಯದು.

ಹೈದರಾಬಾದಿನಿಂದ ಮದ್ರಾಸಿಗೆ ಮರಳಿದ ನಂತರ ಅವರು ವಿದೇಶ ಪ್ರಯಾಣಕ್ಕೆ ಏರ್ಪಾಡು ಮಾಡಿಕೊಳ್ಳುತ್ತಿದ್ದರು.  ನಾಡಿನ ನಾನಾ ಭಾಗಗಳಿಂದ ಅವರ ಪ್ರಯಾಣದ ವೆಚ್ಚಕ್ಕೆಂದು ಹಣ ಹರಿದು ಬಂತು. ಆದರೆ ಅದನ್ನು ಅವರು ಮುಟ್ಟಲಿಲ್ಲ. ಪ್ರಯಾಣದ ಖರ್ಚಿಗೆಷ್ಟೂ  ಅಷ್ಟನ್ನೆ ಪಡೆದು, ಉಳಿದುದನ್ನು ಹಿಂದಿರುಗಿಸಿದರು.

೧೮೯೩ನೇಯ ಇಸವಿ ಮೇ ೩೧ನೇ ತಾರೀಖು ಹಡಗು ಮುಂಬೈಯ ರೇವಿನಿಂದ ಹೊರಟಿತು.

ದೂರದ ದೇಶದಲ್ಲಿ :

ಸ್ವಾಮಿಗಳು ದಾರಿಯಲ್ಲಿ ಕೊಲಂಬೋ, ಸಿಂಗಪೂರ, ಹಾಂಗಕಾಂಗ್, ಟೋಕಿಯೋಗಳನ್ನು ನೋಡಿಕೊಂಡು ಜುಲೈ ಮಧ್ಯಭಾಗದಲ್ಲಿ ಷಿಕಾಗೋ ನಗರವನ್ನು ತಲುಪಿದರು. ಉಳಿದುಕೊಳ್ಳಳು ಒಂದು ಹೋಟೆಲು ಗೊತ್ತು ಮಾಡಿಕೊಂಡರು. ಸರ್ವಧರ್ಮ ಸಮ್ಮೇಳನ ಯಾವಾಗ ನಡೆಯುತ್ತದೆಯೆಂದು ವಿಚಾರಿಸಿದರು.  ಅದು ನಡೆಯಲು ಇನ್ನೂ ಮೂರು ತಿಂಗಳ ಅವಧಿಯಿತ್ತು. ಅಲ್ಲಿಯ ತನಕ ಅಪರಿಚಿತ ನಾಡಿನಲ್ಲಿ ಕಾಲ ಕಳೆಯುವುದೆಂತು ? ಕೈಲಿದ್ದ ಹಣ ಬಿರುಬಿರನೆ ಕರಗಿ ಹೋಗುವುದರಲ್ಲಿತ್ತು. ಆ ಸಮಯದಲ್ಲಿ  ಜಾಗತಿಕ ಜಾತ್ರೆ ನಡೆಯುತ್ತಿತ್ತು. ಅದರೊಳಗೆ ಸುತ್ತಾಡುತ್ತಿದ್ದಾಗ ಭಾರತೀಯ ಮಹಾರಾಜನೊಬ್ಬ ಕಣ್ಣೀಗೆ ಬಿದ್ದನು. ಸ್ವಾಮೀಜಿ ಅವನ ಹತ್ತಿರ ಹೋದರು. ರಾಜ ಮುಖ ಮುರಿದುಕೊಂಡು ದೂರ ಸರಿದ. ಅಲ್ಲಿಯ ನಿಗ್ರೋಗಳು ಮುಟ್ಟಬಾರದವರು. ಅವರು ಅನುಭವಿಸುತ್ತಿದ್ದ ಕಿರುಕುಳವನ್ನು ಕಂಡು ಸ್ವಾಮೀಜಿ ಮುರುಗಿದರು.

ಷಿಕಾಗೋ ದೊಡ್ಡ ನಗರವಾದ್ದರಿಂದ ಖರ್ಚು ಜಾಸ್ತಿ. ಆದ್ದರಿಂದ ಅವರು ಹತ್ತಿರದ ಬಾಸ್ಟನ್ ನಗರಕ್ಕೆ ಹೋರಟರು.ದಾರಿಯಲ್ಲಿ ಮಹಿಳೆಯೊಬ್ಬಳ ಪರಚಯವಾಯಿತು.  ಅವಳು ಆ ಊರಿನವಳೆ. ಸ್ವಾಮಿಗಳ ವೇಷ ಭೂಷಣಗಳನ್ನು  ಅವರ ದೇಹದಾರ್ಡ್ಯವನ್ನು  ಅವರ ನೇತ್ರ ಕಾಂತಿಯನ್ನೂ ಕಂಡು ಅವಳಿಗೆ ಆಶ್ಚರ್ಯವಾಯಿತು.  ಅವರು ಸಾಮಾನ್ಯ ವ್ಯಕ್ತಿಯಾಗಿರಲಾರರೆಂದು ಅವಳಿಗನ್ನಿಸಿತ್ತು. ತನ್ನ ಮನೆಯಲ್ಲುಳಿಯುವಂತೆ ಅವಳು ಅವರನ್ನು ಕೇಳೀಕೊಂಡಳು. ಅವರಿಗೆ ಒಪ್ಪಿಗೆಯಾಯಿತು. ಅವರು ಆಗಾಗ್ಗೆ ಸಣ್ಣ ಪುಟ್ಟ ಕ್ಲಬ್ ಗಳಲ್ಲಿ ಮಾತನಾಡುತ್ತಿದ್ದರು.  “ಭಾರತೀಯ ಸಂಸ್ಕೃತಿ ಮತ್ತು ಹಿಂದೂ ಧರ್ಮ ಅವರ ಮಾತಿನ ವಿಷಯವಾಗಿರುತ್ತಿದ್ದುವು. ಕಾಲ ಕ್ರಮೇಣ ಅನೇಕ ವಿದ್ವಾಂಸರು ಅವರ ಗೆಳೆಯರಾದರು. ಅವರಲ್ಲಿ ಜಾನ್ ಹೆನ್ರಿ ರೈಟ್ ಎನ್ನುವವರೊಬ್ಬರು. ಅವರು ಹಾರ‍್ ವರ‍್ಡ ವಿಶ್ವವಿದ್ಯಾನಿಲಯದಲ್ಲಿ ಗ್ರೀಕ್ ಭಾಷೆಯ ಪ್ರಾಧ್ಯಾಪಕರು. ಅವರು ಸ್ವಾಮಿಗಳ ವಿದ್ವತ್ತಿಗೆ ಮಾರು ಹೋಗಿದ್ದರು.   ವಿಶ್ವಧರ್ಮ ಸಮ್ಮೇಳನದಲ್ಲಿ ಭಾಗವಹಿಸುವರು ಅಲ್ಲಿಯೇ ವ್ಯವಸ್ಥಾಪಕರಿಗೆ ಪರಿಚಯ ಪತ್ರ ಸಲ್ಲಿಸಬೇಕಾಗಿತ್ತು. ಸ್ವಾಮೀಜಿಯ ಬಳಿಯಿದ್ದ ಪತ್ರ ಕಳೆದು ಹೋಗಿತ್ತು. “ನಮ್ಮೆಲ್ಲ ಪ್ರಾಧ್ಯಾಪಕ ಸಮೂಹವನ್ನು ಮೀರಿಸಿದ ಘನ ವಿಧ್ವಾಂಸರಿವರು” ಎಂದು ರೈಟ್ ಪರಿಚಯ ಪತ್ರ ಬರೆದುಕೊಟ್ಟರು.

ಸರ್ವ ಧರ್ಮ ಸಮ್ಮೇಳನದಲ್ಲಿ

ಸ್ವಾಮೀಜಿ ಮತ್ತೇ ಷಿಕಾಗೋ ನಗರಕ್ಕೆ ಹೊರಟರು. ನಗರ ತಲುಪಿದಾಅಗ ರಾತ್ರಿ ಜೊತೆಯಲ್ಲಿ ತಾವು ತಂದಿದ್ದ ಕೆಲವು ವ್ಯಕ್ತಿಗಳ ವಿಳಾಸ ಕಳೆದು ಹೋಗಿದ್ದುವು. ಅಲ್ಲಿಯ ಜನ ಜರ‍್ಮನಿಯವರಾದ್ದರಿಂದ ಆಂಗ್ಲ ಭಾಷೆ ಬರುತ್ತಿರಲಿಲ್ಲ. ಆದ್ದರಿಂದ ಅವರು ಹೊರಗೆ ಮಿಸುಗಾಡುವಂತಿರಲಿಲ್ಲ. ಬೇರೆ ಉಪಾಯ ಕಾಣದೇ, ನಿಲ್ದಾಣದಲ್ಲಿ ಬಿದ್ದಿದ್ದ  ಪೆಟ್ಟಿಗೆಯೊಂದರಲ್ಲಿ ನಡುಗುತ್ತ ಬಿದ್ದು ಕೊಂಡರು. ಬೆಳಿಗ್ಗೆ ಎದ್ದು ಬೀದಿ ಬೀದಿಗಳಲ್ಲಿ ಅಲೆದಾಡಿದರು.ಹಸಿವು ತಡೆಯಲಾರದೆ ಕೆಲವು ಮನೆಗಳ ಮುಂದೆ ನಿಂತು ಭಿಕ್ಷೆ ಬೇಡಿದರು. ಅವರಿಗೆ ಅವಮಾನವಾಯಿತೇ ಹೊರತು ಊಟ ಸಿಗಲಿಲ್ಲ. ಮೈದಾನದ ಹಸಲೆಯ ಮೇಲೆ ಕುಳಿತ್ತಿದ್ದಾಗ ಎದುರು ಮನೆಯ ಮಹಿಳೆಯೊಬ್ಬಳ ಕಣ್ಣೀಗೆ ಬಿದ್ದರು. “ನೀವು ವಿಶ್ವಧರ್ಮ ಸಮ್ಮೇಳನಕ್ಕೆ ಬಂದಿರುವಿರಾ?” ಎಂದವಳು ಕೇಳಿದರು. ಸ್ವಾಮೀಜಿ ಹೌದೆಂದರು. “ಹಾಗಾದರೆ ನಮ್ಮ ಮನೆಗೆ ಬನ್ನಿ. ಸ್ನಾನ ಊಟಗಳನ್ನು ಮುಗಿಸಿ. ಸಮ್ಮೇಳನಕ್ಕೆ ಕರೆದುಕೊಂಡು ಹೋಗುತ್ತೇನೆ” ಎಂದವಳು ತಿಳಿಸಿದಳು. ಅವಳ ಹೆಸರು ಶ್ರೀಮತಿ ಜಾರ‍್ಜ್ ಹೇಲ್ಸ್.

ದಿಗ್ವಿಜಯ :

೧೮೯೩ ಸೆಪ್ಟೆಂಬರ‍್  ೧೧ ರಂದು ಸಮ್ಮೇಳನ ಪ್ರಾರಂಭವಾಯಿತು. ಪ್ರಪಂಚದ ನಾನಾರಾಷ್ಟ್ರಗಳಿಂದ ಸಹಸ್ರಾರು ಪ್ರತಿನಿಧಿಗಳು ಬಂದು ನೆರೆದಿದ್ದರು. ಅವರಲ್ಲೆಲ್ಲ ವಿವೇಕಾನಂದರೇ ಚಿಕ್ಕವರು. ಭಾಷಣಕ್ಕಾಗಿ ತಮ್ಮ ಸರದಿ ಬಂದಾಗ ಅವರ  ಎದೆ ಕಂಪಿಸುತ್ತಿತ್ತು. ನಾಲಗೆ ಒಣಗುತ್ತಿತ್ತು. ಜೊತೆಗೆ ಇತರರಂತೆ ತಮ್ಮ ಭಾಷಣವನ್ನು ಸಿದ್ಧಪಡಿಸಿಕೊಂಡಿರಲಿಲ್ಲ.ತಾವು ಕೊನೆಗೆ ಮಾತನಾಡುವುದಾಗಿ ಅಧ್ಯಕ್ಷರನ್ನು ಕೇಳಿಕೊಂಡರು. ಆ ಕೊನೆಯ ಸರದಿಯೂ ಬಂತು. ಶಾರದೆಗೂ, ಶ್ರೀ ರಾಮಕೃಷ್ಣರಿಗೂ ಮನದಲ್ಲಿಯೇ ನಮಿಸಿ ಮೇಲೆದ್ದರು. ಅವರ ಮಧುರಕಂಠದಿಂದ “ಅಮೇರಿಕಾ ದೇಶದ ಸೋದರ ಸೋದರಿಯರೆ ” ಎಂಬ ಮಾತುಗಳು ಹೊರಬಿದ್ದಾಗ ಸಭಿಕರ ಕೈ ಚಪ್ಪಾಳೆ ಕಿವುಡುಗೊಳಿಸಿತು.  ಅಎರು ಎಡೂ ಮೂರು ನಿಮಿಷ ನಿಲ್ಲಲಿಲ್ಲ. ಆ ತನಕ ಯಾರೂ ಅಷ್ಟೂ ಆತ್ಮೀಯತೆಯಿಂದ ಮಾತನಾಡಿರಲಿಲ್ಲ. ಸದ್ದು ನಿಂತ ಕೂಡಲೇ ಅವರು ತಮ್ಮ ಪುಟ್ಟ ಭಾಷಣವನ್ನು ಮುಂದುವರೆಸಿದರು. ಆನೇಕ ಕಡೆ ಹುಟ್ಟಿದನದಿಗಳು ಸಮುದ್ರವನ್ನು ಸೇರುವಂತೆ, ಬೇರೆ ಬೇರೆ ಧರ್ಮಗಳಲ್ಲಿ ಹುಟ್ಟಿದ ಜೀವರು ಕೊನೆಗೆ ಪರಮಾತ್ಮನನ್ನು ಸೇರುತ್ತಾರೆಂದು ಅವರು ನುಡಿದರು. ಯಾವ ಮತವೂ ಕೀಳಲ್ಲ, ಯಾವುದು ಮೇಲಲ್ಲವೆಂಬುವುದನ್ನ ಆವರು ಸ್ಪಷ್ಟಪಡಿಸಿದರು.  ಪ್ರತಿನಿಧಿಗಳು ಏಕ ಕಂಠದಿಂದ ಅವರ ಭಾಷಣವನ್ನು ಹೊಗಳಿದರು. ಪತ್ರಿಕೆಗಳು ಭಾವಚಿತ್ರದೊಡನೆ ಅವರ ಭಾಷಣವನ್ನು ಅಚ್ಚು ಹಾಕಿದವು. ಮುಂದಿನ ದಿನಗಳಲ್ಲಿ ಅವರ ಭಾಷಣ ಕೇಳಲೆಂದೇ ಜನ ನೆರೆಯುತ್ತಿದ್ದರು. ಅವರು ಸಕಲ ಸಭಿಕರಕಣ್ಮಣಿಯಾಗಿದ್ದರು. ಅವರು ಮೇಲೆದ್ದರೆಂದರೆ ಕರತಾಡನ ಮಾರ‍್ದನಿಕೊಡುತ್ತಿತ್ತು.

ಸಮ್ಮೇಳನ ನಡೆಯುತ್ತಿರುವಾಗಲೇ ಅನೇಕ ಸಂಘ ಸಂಸ್ಥೆಗಳು ಅವರಿಗೆ ಅಹ್ವಾನ ನೀಡಿದುವು. ತಮ್ಮ ಮನೆಗೆ ಬಂದು ಅತಿಥ್ಯವನ್ನು ಸ್ವೀಕರಿಸಬೇಕೆಂದು ಶ್ರೀಮಂತರು ಭಿನ್ನಹ ಮಾಡಿಕೊಂಡರು. ಅವರು ಇದ್ದಕ್ಕಿದ್ದಮತೆಯೇ ಜಗದ್ವಿಖ್ಯಾತರಾದರು. ಅವರು ಹೋದೆಡೆಯಲ್ಲೆಲ್ಲ ಭಾರತೀಯ ಸಂಸ್ಕೃತಿಯ ಹಿರಿಯಮೆಯನ್ನು ವಿವರಿಸುತ್ತಿದ್ದರು. ಚರಿತ್ರೆಯ ಸಮಾಜ ವಿಜ್ಞಾನವೆ, ತತ್ವ ಶಾಸ್ತ್ರವೇ, ಸಾಹಿತ್ಯವೆ, ಯಾವ ವಿಷಯವಾದರೂ ಅವರು ಆಕರ್ಷಕವಾಗಿ ಹಾಗೂ ಅಧಿಕಾರಯುತವಾಗಿ ಮಾತನಾಡುತ್ತಿದ್ದರು. ಭಾರತೀಯರ ಬಗ್ಗೆ ಕ್ರೈಸ್ತ ಪಾದ್ರಿಗಳು ನಡೆಸುತ್ತಿದ್ದ ಅಪ ಪ್ರಚಾರವನ್ನು ಖಂಡಿಸುತ್ತಿದ್ದರು. “ಅವರು ಯಾವ ಟಿಪ್ಪಣಿಯೂ ಇಲ್ಲದೆ ಮಾತನಾಡುತ್ತಾರೆ. ಅವರ  ವ್ಯಕ್ತಿತ್ವದಲ್ಲಿ ಯೇಸುವಿನ ಕೆಲವು ಗುಣಗಳನ್ನು ಕಾಣುತ್ತೇವೆ. ವಿಚಿತರವಾದ ಪೋಷಾಕು, ತೇಜಸ್ಸಿನಿಂದ ಕೂಡಿದ ವ್ಯಕ್ತಿತ್ವ, ಅಪೂರ್ವವಾದ ವಾಚಾಳೀತನ, ಹಿಂದೂ ಧರ್ಮದ ಸಾರಸಂಗ್ರಹ ಕೌಶಲ- ಇವುಗಳಿಂದ ಅವರು ಅಪೂರ್ವ ಮೋಹಕ ವ್ಯಕ್ತಿ. ಸಂಭಾಷಣೆಯಲ್ಲಂತೂ ಅಅವರನ್ನು ಮೀರಿಸುವಂಥ ವ್ಯಕ್ತಿ ಬೇರೊಬ್ಬರಿಲ್ಲ. ಅವರ ಆಂಗ್ಲಭಾಷೆಯ ಪ್ರಭುತ್ವ ಅಸಾಧಾರಣವಾದುದು. ಇಂಥ ವ್ಯಕ್ತಿ ಯುಗಕ್ಕೊಬ್ಬರು. ಅವರನ್ನು ನೋಡುವ, ಅವರ ಭಾಷಣವನ್ನು ಕೇಳುವ ಭಾಗ್ಯ ನಮ್ಮದು”- ಹೀಗೆ ಅಲ್ಲಿಯ ವೃತ್ತಪತ್ರಿಕೆಗಳು ಅವರನ್ನು ಕೊಂಡಾಡುತ್ತಿದ್ದುವು. ಭಾರತೀಯರು ಪಶುಸಮಾನರೆಂದೂ, ಮೌಢ್ಯಾರಾಧಕರೆಂದು  ಆ ತನಕ ಆ ಜನ ನಂಬಿಕೊಂಡಿದ್ದರು. ಸ್ವಾಮೀಜಿಯವರ ಸತತ ಪ್ರಯತ್ನದಿಂದಾಗಿ ಭಾರತ ಅಮೇರಿಕೆಯಲ್ಲಿ ಮಾತರವಲ್ಲ, ಮುಂದುವರೆದ ರಾಷ್ಟ್ರಗಳಲ್ಲೆಲ್ಲ ಗೌರವಸ್ಥಾನ ಪಡೆಯುವಂತಾಯಿತು.

ಸ್ವಾಮಿಗಳೂ ಎಲ್ಲಿಯೂ ಹೋದರೂ ಜನ ತಂಡೋಪತಂಡವಾಗಿ ಕಾದಿರುತ್ತಿದ್ದರು. ಭಾಷಣವಾದ ನಂತರ ಅವರು ಸ್ವಾಮೀಗೆ ತಮ್ಮ ಮನೆಗಳಿಗೆ ಕರೆದೊಯ್ದು ಸತ್ಕರಿಸುತ್ತಿದ್ದರು. ಆ ಸತ್ಕಾರ ವೈಭವ ಪೂರ್ಣವಾಗಿರುತ್ತಿತ್ತು. ಆಗ ಭಾರತದ ಬಡತನ ಅವರ ಕಣ್ಣಿಗೆ ಕ್ಟಿದಂತಿರುತ್ತಿತ್ತು. ಅವರು ಅನುಭವಿಸುತ್ತಿದ್ದ ಸುಖ ಅಸಹನೀಯವಾಗಿ ತೋರುತ್ತಿತ್ತು. ಮಲಗುತ್ತಿದ್ದ ಸುಪತ್ತಿಗೆಯಲ್ಲಿ ಚೇಳುಗಳು ಹೊಕ್ಕಂತೆ ಭಾಸವಾಗುತ್ತಿತ್ತು. ಅನೇಕ ರಾತ್ರಿಗಳು ನಿದ್ದೆ ಹತ್ತುತ್ತಿರಲಿಲ್ಲ. ತಲೆದಿಂಬು ಕಣ್ಣೀರಿನಿಂದ ತೊಯ್ದು ಹೋಗುತ್ತಿತ್ತು.

ಈ ನಡುವೆ ಇಂಗ್ಲೇಂಡಿನಿಂದ ಒತ್ತಾಯದ ಕರೆಗಳು ಮೇಲಿಂದ ಮೇಲೆ ಬರುತ್ತಿದ್ದವು. ಅವರು ಲಂಡನ್ ತಲುಪಿದಾಗ ಅವರಿಗಾಗಿ ಅಪೂರ್ವ ಸ್ವಾಗತ ಕಾದಿತ್ತು. ಪತ್ರಿಕೆಗಳು ಹಿಂದೂ ಯೋಗಿಯ ವಾಗ್ಮೀಯತೆಯನ್ನೂ ವಿಚಾರ ಲಹರಿಯನ್ನೂ ಮುಕ್ತಕಂಠದಿಂದ ಹೊಗಳಿದವು. ಕೆಲವರು ಅವರ ಶಿಷ್ಯರಾದರು. ಮುಂದೆ ಸೋದರಿ ನಿವೇದಿತಾ ಎಂದು ಹೆಸರಾದ ಮಾರ್ಗರೇಟ್ ನೋಬಲ್ ಎಂಬುವವರು ಅವರೊಡನೆ ಭಾರತಕ್ಕೆ ಬಂದು ನೆಲೆಸಿದರು.ನಾಲ್ಕು ವರ್ಷಗಳ ವಿದೇಶೀ ಪ್ರವಾಸದ ನಂತರ ವಿವೇಕಾನಂದರು ತಾಯ್ನಾಡಿಗೆ ಮರಳಿದರು.

ಸಿದ್ಧಿ :

ಭಾರತವನ್ನು ಮುಟ್ಟುವ ಹೊತ್ತಿಗೆ ಅವರ ಕೀರ್ತಿ ನಾಡಿನ ಮೂಲೆ ಮೂಲೆಗಳಲ್ಲಿ ಹರಡಿತ್ತು. ೧೮೯೭ನೆ ಜನೆವರಿ ೧೫ನೆಯ ತಾರೀಖು ಕೊಲಂಬೋ ನಗರದಲ್ಲಿ ಇಳಿದಾಗ ಅವರಿಗೆ  ಚಕ್ರವರ್ತಿ ಯೋಗ್ಯವಾದ ಸ್ವಾಗತ ದೊರೆಯಿತು. ರಾಮನಾಡು, ಮಧುರೆ, ಕುಂಭಕೋಣಂ ಮೊದಲಾದ ಊರುಗಳ ಮೂಲಕ ಮದರಾಸಿಗೆ ಬಂದರು. ನಿಲ್ದಾಣದಲ್ಲಿ ಜನರು ನೂಕು ನುಗ್ಗಲು ಅಸದಳವಾಗಿತ್ತು. ಮೆರವಣಿಗೆಯಲ್ಲಿದ್ದ ಜನ ಕುದುರೆ ಬಿಚ್ಚಿ ತಾವೇ ಗಾಡಿ ಎಳೆದರು.ಬಿನ್ನವತ್ತಳೆ, ಹೂಹಾರ, ಅರತಿಗಳಂತೂ ಲೆಕ್ಕಕ್ಕೆ ಸಿಗಲಿಲ್ಲ.

ಮುಂದೆ ಸ್ವಾಮಿಗಳು ತಾವು ಹೋದೆಡೆಯಲ್ಲೆಲ್ಲ ಅಸಂಖ್ಯಾತ ಜನರಿಗೆ ಶ್ರೀರಾಮಕೃಷ್ಣರ ಸಂದೇಶದ ತಿರುಳನ್ನು ಬೋಧಿಸುತ್ತಿದ್ದರು. ಹತ್ತಿರ ಬಂದವರಿಗೆ ಅಧ್ಯಾತ್ಮಿಕ ಸಾಧನೆಯ ಅವಶ್ಯಕತೆಯನ್ನು ಉಪದೇಶಿಸುತ್ತಿದ್ದರು. ಸೋದರ ಸಂನ್ಯಾಸಿಗಳಿಗೆ ಸೇವಾ ಕಾರ್ಯದ ಮಹತ್ವವನ್ನು ವಿವರಿಸುತ್ತಿದ್ದರು.  ತನಗೆ ಮೋಕ್ಷ ಬೇಕು ಎಂದಷ್ಟೆ ಬಯಸುವುದರಲ್ಲಿಯೂ ಸ್ವಾರ್ಥವಿದೆ ಎಂದು ಅವರು ಮತ್ತೆ ಮತ್ತೆ ಒತ್ತಿ ಹೇಳುತ್ತಿದ್ದರು.  “ಭಾರತದಲ್ಲಿ ಒಬ್ಬನೇ ಒಬ್ಬನು ದುಃಖದಲ್ಲಿದ್ದರೂ ನನಗ ಮೋಕ್ಷ ಬೇಡ ಎಂದು ಸಾರುತ್ತಿದ್ದರು. ಸೇವಾ ಕಾರ್ಯವು ಸಂಘದ ಮೂಲಕ ಮಾತ್ರ ಸಾಧ್ಯವೆಂದು ಅವರು ಅರಿತ್ತಿದ್ದರು. ಆದ್ದರಿಂದ ೧೮೯೭ರಲ್ಲಿ ಶ್ರೀರಾಮಕೃಷ್ಣ ಮಿಷರ್ನ ಪ್ರಾರಂಭಿಸಿ, ಅದರ ಧ್ಯೇಯತತ್ವಗಳನ್ನು ರೂಪಿಸಿದರು. ಮುಂದಿನ ಎರಡು ವರ್ಷಗಳಲ್ಲಿ ಗಂಗಾ ತೀರದ ಬೇಲೂರಿನಲ್ಲೊಂದು ನಿವೇಶನವನ್ನು ಕೊಂಡು, ಕಟ್ಟಡಗಳನ್ನು ಪೂರೈಸಿ ಮಠವನ್ನಲ್ಲಿಗೆ ಸ್ಥಳಾಂತರಿಸಿದರು.

ದೇಹ ಮರೆಯಾಯಿತು , ವವಾಣಿ ಅಮರವಾಗಿದೆ.

ಕೆಲಸದ ಭಾರದಿಂದಾಗಿ ಸ್ವಾಮಿಗಳ ಆರೋಗ್ಯ ದಿ ಕಳೆದಂತೆಲ್ಲ ಕುಂದುತ್ತಿತ್ತು. ವಿಶ್ರಾಂತಿಗೆಂದು ಹಿಮಾಲಯ ಪರ್ವತದ ಊರುಗಳಿಗೆ ಹೋದರು. ಅಲ್ಲಿಯೂ ಬಿಡುವು ಸಿಗುತ್ತಿರಲಿಲ್ಲ. ಪಾಠ ಪ್ರವಚನ ಸಂಭಾಷಣೆಗಳು ನಿರಂತರವಾಗಿ ನಡೆಯುತ್ತಿದ್ದವು. ಜನರ ಅಪೇಕ್ಷೆಯಂತೆ  ಉತ್ತರ ಭಾರತದ ಕೆಲವು ನಗರಗಳಿಗೆ ಭೇಟಿ ಕೊಟ್ಟರು. ಶಿಷ್ಯರ ಕರೆಯನ್ನು ಮನ್ನಿಸಿ ಅಮೇರಿಕೆಗೆ ಹೋದರು.  ಪ್ಯಾರಿಸಿಲ್ಲಿ ನಡೆದ ಧರ್ಮಸ್ಥಳದಲ್ಲಿನ ಭಾಗವಹಿಸಿದರು. ಬೇಲೂರಿಗೆ ಹಿಂದುರುಗಿದರು.

ಶಿಷ್ಯರು ಆಗ್ರಹಗೊಂಡರು. ಅವರು ವಿರಾಮಸುಖವನ್ನು ಅನುಭವಿಸುತ್ತಿರಲಿಲ್ಲ. ಬರುಬರುತ್ತ ಅಂತರ್ಮುಖಿಯಾದದ್ದು ನಿಜ. ಬಾಹ್ಯಕ್ರಿಯೆಗಳು ನಿಂತರೂ ಅಂತರಂಗದ ಕ್ರಿಯೆಗಳಿಗೆ ವಿರಾಮವಿರಲಿಲ್ಲ. ೧೯೦೨ನೇಯ ಜುಲೈ ೪ನೆಯ ದಿನಾಂಕ, ಸ್ವಾಮಿಗಳು ಮಾಮೂಲಿನಂತೆ ನಿತ್ಯ ಕರ್ಮಗಳನ್ನು ಮುಗಿಸಿದರು. ಶಿಷ್ಯರಿಗೆ ಪಾಠ ಹೇಳೀದರು; ಊಟ ಮಾಡಿದರು: ವಿಶ್ರಾಂತಿ ತೆಗೆದುಕೊಂಡರು” ಅಡ್ಡಾಡಿ ಬಂದರು, ಎಲ್ಲರೊಡನೆ ಮಾತನಾಡಿದರು, ಹಾಸ್ಯ ಚಟಾಕಿ ಹಾರಿಸಿದರು.  ರಾತ್ರಿ ಒಂಬತ್ತು ಗಂಟೆಗೆ ಅವರಿಗೆ  ಆಯಾಸ ತೋರಿತು. ಕೈಗಳು ನಡುಗಿದವು, ಅತ್ತರು, ಎದ್ದು ಕುಳಿತರು, ನಿಟ್ಟಿಸಿರು ಬಿಟ್ಟರು. ನಿದ್ದೆ ಹೋದರು, ಅವರ ಆತ್ಮ ಅನಂತದಲ್ಲಿ ಕರಗಿ ಹೋಯಿತು. ಶಿಷ್ಯರು ಮತ್ತು ಗುರುಭಾಯಿಗಳು ತಬ್ಬಲಿಗಳಂತೆ ಗೋಳಾಡಿದರು.

ಸ್ವಾಮಿಗಳ ದೇಹ ಮರೆಯಾದರೂ ಅವರ ವಾಣಿ ಅಮರವಾಗಿದೆ. ಭಾರತಿಯರನ್ನು ಸದಾ ಹರಸುತ್ತಿದೆ.  ಅದನ್ನು ಅಲಿಸಿದವರ ದುಃಖ ನಾಶವಾಗುತ್ತದೆ. ಬಾಳು ಬಂಗಾರವಾಗುತ್ತದೆ. ಮತ್ತೊಮ್ಮೆ ಕೇಳಿ : “ಪುರಾತನ ಆರ್ಯ ಮಹರ್ಷಿ ಕುಲದವರೆಂದು ನೀವು ಹಿಗ್ಗುತ್ತಿದ್ದೀರಿ., ಉತ್ತಮ ವರ್ಗದವರು ಕನಿಷ್ಟರನ್ನು ಮೇಲೆತ್ತುವ ತನಕ ಶೋಷಣೆ ನಿಲ್ಲುವ ತನಕ ಭಾರತ ಮಸಣವಾಗುಳಿಯುತ್ತದೆ. ಕೃಷಿಕನ ದರಿದ್ರ ನಿವಾಸದಿಂದ ನವೀನ ಭಾರತಾಂಬೆ ಮೈರೋರಲಿ, ಬೇಸ್ತನ ಜೋಪಡಿಯಿಂದಾಕೆ ಮೂಡಲಿ, ಚಮ್ಮಾರ ಜಾಡಮಾಲಿಗಳ ಗುಡಿಸಲಿನಿಂದಾಕೆ ಹೊರಹೊಮ್ಮಲಿ. ಮಳಿಗೆಯಿಂದ , ಕಾರ್ಖಾನೆಯಿಂದ ಸಂತೆಯಿಂದ, ಆಕೆ ಪ್ರತ್ಯೇಕ್ಷವಾಗಲಿ. ನವಭಾರತದ ಮಹಾಗಾನ ಗಿರಿಕಾನನ ಕಂದರಗಳಲ್ಲಿ ಅನುರಣಿಸಲಿ !”