ಗ್ರಾಮ, ನಗರ, ಖೇಡ …. ಇತ್ಯಾದಿ
ಗ್ರಾಮ – ನೂರಕ್ಕೆ ಕಡಿಮೆಯಾಗದೆ ಐನೂರಕ್ಕೆ ಹೆಚ್ಚಾಗದ ಕೃಷಿಕ ಕುರುಂಬಗಳು ವಾಸಮಾಡುವ ಹಳ್ಳಿ.
ನಗರ – ರಾಜಧಾನಿ (ರಾಜನು ವಾಸಮಾಡುವ ದೊಟ್ಟ ಪಟ್ಟಣ)
ಖೇಡ – ಎತ್ತರವಾದ ಕೋಟೆಯುಳ್ಳ ಊರು.
ಖರ್ವಡ – ಚಿಕ್ಕಪ್ರಾಕಾರವಿರುವ ಊರು.
ಮಡಂಬ – ದೂರಸ್ಥಳ, ಸೀಮೆಯ ಕೊನೆಯಲ್ಲಿರುವ ಪುರ.
ಪತ್ತನ (ಪಟ್ಟಣ) – ಬಂಡಿಗಳಲ್ಲಾಗಲಿ, ನಾವೆಗಳಲ್ಲಾಗಲಿ, ಪ್ರಯಾಣ ಮಾಡಿ ಸೇರಬಹುದಾದ ಪುರ.
ದ್ರೋಣಾಮುಖ – ಜಲಮಾರ್ಗ, ಸ್ಥಳಮಾರ್ಗ ಎರಡೂ ಉಳ್ಳ ಪುರ .
(ಇದರ ವಿವರ ಪಂಪನ ಆದಿಪುರಾಣ ಆ. ೮ – ೬೩ ವಚನದಲ್ಲಿ ಬರುತ್ತದೆ)
ಪಾಳಿಧ್ವಜ – ಒಂದು ಬಗೆಯ ಧ್ವಜ ವ್ಯೂಹ, ಹಾರ, ವಸ್ತ್ರ, ನವಿಲು, ಕಮಲ, ಹಂಸ, ಮೀನು, ಸಿಂಹ, ಆನೆ, ಚಕ್ರ – ಈ ಲಾಂಛನಗಳುಳ್ಳ ಬಾವುಟಗಳು.
ಲೋಹಾಸನ – ಒಂದು ಬಗೆಯ ಪೀಠ. ಅದರ ಲಕ್ಷಣವನ್ನು ಹೀಗೆ ಹೇಳಿದೆ.
ಪಂಚಭಿಃ ಸಪ್ತಭಿರ್ವಾಪಿ ನವಭಿಲ್ರೋಹಜೈಃ ಪದೈಃ
ಲೋಹಪಟ್ಟ ಕೃತಾಧಾರೈಲೋಹ ಜಾಲಕ ಮೂರ್ಧನಿ ||
ಛದಿಕಾ ಒಟ್ಟ ಗರ್ಭಸ್ಥಂ ಕಾರ್ಪಾಸೇನ ವಿವಿಶ್ರಿತಂ
ಲೋಹಾಸನಮಿದಂ ಪ್ರೋಕ್ತಮುಪರಿಷ್ಟಾತ್ಸು ಕೀಲಿತಂ ||
Leave A Comment