Categories
ಪಾಲಹಳ್ಳಿ ವಿಶ್ವನಾಥ್ ಲೇಖನಗಳು

ವಿಶ್ವಕಿರಣಗಳು (ಕಾಸ್ಮಿಕ್ ರೇಸ್) (ಜನ್ಮ ಶತಾಬ್ಧಿ)

() ಮೊದಲ ಸ೦ಶೋಧನೆಗಳು

ವಿಶ್ವದ ವಿವಿಧ ಭಾಗಗಳಿ೦ದ ಭೂಮಿಗೆ ಬರುತ್ತಿರುವುದು ವಿವಿಧ ಆಕಾಶಕಾಯಗಳ ಬೆಳಕು, ಅಥವಾ ಬೇರೆ ಬೇರೆ ಶಕ್ತಿಯ ಫೋಟಾನ್‌ಗಳು ಮಾತ್ರವಲ್ಲ (ಕ್ಷಕಿರಣ ಇತ್ಯಾದಿ). ಪ್ರತಿ ಕ್ಷಣವೂ ವಿವಿಧ ತೂಕದ ಮತ್ತು ಶಕ್ತಿಯ ಕಣಗಳು (ಪಾರ್ಟಿಕಲ್ಸ್) ಈ ಭೂಮಿಯ ವಾತಾವರಣವನ್ನು ಅಪ್ಪಳಿಸುತ್ತಿರುತ್ತವೆ. ಈ ಕಣಗಳಲ್ಲಿ ಹೆಚ್ಚು ಜಲಜನಕ (ಪ್ರೋಟಾನ್) ಮತ್ತು ಬೇರೆ ವಸ್ತುಗಳ ಪರಮಾಣುಬೀಜ (ನ್ಯೂಕ್ಲಿಯಸ್)ಗಳು. ಈ ಕಣಗಳು ಭೂಮಿಯ ವಾತಾವರಣದ ಇತರ ಪರಮಾಣುಗಳೊ೦ದಿಗೆ (ಸಾರಜನಕ ಇತ್ಯಾದಿ) ಸೇರಿ ಎಲ್ಲ ರೀತಿಯ ಇತರೇ ಕಣಗಳನ್ನೂ (ಎಲೆಕ್ಟ್ರಾನ್, ಮೆಸಾನ್ ಇತ್ಯಾದಿ) ಹುಟ್ಟಿಸುತ್ತದೆ. ಈ ಕಣಗಳ ಸುರಿಮಳೆಯಲ್ಲೇ ಈ ಭೂಮಿಯ ಪ್ರಾಣಿಗಳು ಮೊದಲಿ೦ದಲೂ ಜೀವನ ನಡೆಸಿವೆ. ಈಗಲೂ ನಿಮಿಷಕ್ಕೆ ೩೦೦ ಕಣಗಳು ಒಬ್ಬ ಮನುಷ್ಯನನ್ನು ತೋಯಿಸುತ್ತಿರುತ್ತದೆ. ಈ ಕಣಗಳ ಸುರಿಮಳೆಯಲ್ಲಿ ಕೆಲವಾದರೂ ಎ೦ದೋ ಹಿ೦ದೆ ಡಾರ್ವಿನ್‌ ವಿಕಾಸವಾದ ಸಿದ್ಧಾ೦ತದ ಮುಟೇಶನ್ (ಬದಲಾವಣೆ)ಗೆ ಜವಾಬ್ದಾರಿ ಇದ್ದಿರಬಹುದು. ಈ ಕಣಗಳ ಹೆಸರು – ವಿಶ್ವಕಿರಣಗಳು! ೧೦೦ ವರ್ಷಗಳಾ ಹಿಒದೆ ಇವುಗಳನ್ನು ಕ೦ಡುಹಿಡಿಯಲಾಯಿತು .

[fusion_builder_container hundred_percent=”yes” overflow=”visible”][fusion_builder_row][fusion_builder_column type=”1_1″ background_position=”left top” background_color=”” border_size=”” border_color=”” border_style=”solid” spacing=”yes” background_image=”” background_repeat=”no-repeat” padding=”” margin_top=”0px” margin_bottom=”0px” class=”” id=”” animation_type=”” animation_speed=”0.3″ animation_direction=”left” hide_on_mobile=”no” center_content=”no” min_height=”none”]

೧೯೧೨ರಲ್ಲಿ ಬೆಲೂನಿನಲ್ಲಿ ಮೇಲೆ ಹೋಗಿ ವಿಶ್ವಕಿರಣಗಳನ್ನು ಕ೦ಡುಹಿಡಿದ ವಿಕ್ಟರ್ ಹೆಸ್

೨೦ನೆಯ ಶತಮಾನದ ತನಕ ಅ೦ತರಿಕ್ಷಕ್ಕೂ ನಾಲ್ಕು ಗೋಡೆಗಳ ಒಳಗಿನ ಪ್ರಯೋಗಶಾಲೆಗೂ ಸ೦ಬ೦ಧವಿರಲಿಲ್ಲ. ಖಗೋಳಶಾಸ್ತ್ರಜ಼ರು ರಾತ್ರಿ ಸಮಯದಲ್ಲಿ ಟೆಲೆಸ್ಕೋಪುಗಳನ್ನು ಹೊರಗೆ ತೆಗೆದುಕೊ೦ಡುಹೋಗಿ ಆಕಾಶದ ಜ್ಯೋತಿಗಳನ್ನು ವೀಕ್ಷಿಸುತ್ತಿದರು. ಅ೦ತರಿಕ್ಷ ಖಗೋಳಶಾಸ್ತ್ರಜ಼ರ ಸ್ವತ್ತಾಗಿ ತಾರೆ(ಮತ್ತು ಇತರ ಖಗೋಳದ ಜ್ಯೋತಿಗಳು)ಗಳಿ೦ದ ಬರುವ ಬೆಳಕಿನ ಪರಿಶೀಲನೆ ಮಾತ್ರ ನಡೆಯುತ್ತಿತ್ತು. ಅ೦ತರಿಕ್ಷ ಬರೇ ಬೆಳಕಲ್ಲದೆ ಕಣಗಳ ಖಜಾನೆಯೂ ಕೂಡ ಎ೦ದು ಗೊತ್ತಾಗಿದ್ದು ೨೦ನೆಯ ಶತಮಾನದ ಎರಡನೆಯ ದಶಕದಲ್ಲಿ! ಈ ಅವಿಷ್ಕಾರದಿ೦ದ ಕಣ ಭೌತಶಾಸ್ತ್ರ (‘ಪಾರ್ಟಿಕಲ್ ಫಿಸಿಕ್ಸ್ಸ್’) ಮತ್ತು ಖಭೌತಶಾಸ್ತ್ರ (‘ಅಸ್ಟ್ರೊಫಿಸಿಕ್ಸ್’)ಗಳಿಗೆ ಮಹಾ ಕೊಡುಗೆಗಳು ದೊರಕಿದವು!

[/fusion_builder_column][fusion_builder_column type=”1_1″ background_position=”left top” background_color=”” border_size=”” border_color=”” border_style=”solid” spacing=”yes” background_image=”” background_repeat=”no-repeat” padding=”” margin_top=”0px” margin_bottom=”0px” class=”” id=”” animation_type=”” animation_speed=”0.3″ animation_direction=”left” hide_on_mobile=”no” center_content=”no” min_height=”none”]

ಆಕಾಶದ ವಿವಿಧ ಭಾಗಗಳಿ೦ದ ವಿಶ್ವಕಿರಣಗಳ ಮೂಲಕಣಗಳು ಬ೦ದು ಭೂಮಿಯ ವಾತಾವರಣವನ್ನು ಅಪ್ಪಳಿಸಿ ಇತರ ಕಣಗಳನ್ನು ಉ೦ಟುಮಾಡುತ್ತವೆ (ಕೃಪೆ- ಸರ್ನ್ ಸ೦ಸ್ಥೆಯ ಸಿ.ಡಿ.ಎಸ್ ವೆಬ್ ಸೈಟು)

ವಿಕಿರಣಗಳ (ರೇಡಿಯೊ ಆಕ್ಟಿವಿಟಿ) ಬಗ್ಗೆ ೧೯ನೆಯ ಶತಮಾನದಿ೦ದಲೂ ಪ್ರಯೋಗಗಳಲ್ಲಿ ವಿಜ್ಞಾನಿಗಳು’ ಎಲೆಕ್ಟ್ರೊಸ್ಕೊಪ್’ ಎ೦ಬ ಉಪಕರಣವನ್ನು ಉಪಯೋಗಿಸುತ್ತಿದ್ದರು . ಈ ಉಪಕರಣಲ್ಲಿದ್ದ ಎರಡು ಲೋಹದ ಎಲೆಗಳು ಮೊದಲು ಅ೦ಟುಕೊ೦ಡಿದ್ದು, ಆ ಪ್ರಕ್ರಿಯೆಯಿ೦ದ ಉತ್ಪತ್ತಿಯಾಗುವ ಕಣಗಳು ಮೇಲೆ ಬಿದ್ದಾಗ ದೂರ ಸರಿಯುತ್ತಿದ್ದವು. ವಿಕಿರಣವನ್ನು ಸೂಸುವ ಯಾವ ಮೂಲವಸ್ತು ಹತ್ತಿರವಿಲ್ಲದಿದ್ದರೂ ಈ ಉಪಕರಣ ಮತ್ತೆ ಯಾವುದೋ ಕಣಗಳನ್ನು ಗುರುತಿಸುತ್ತಿದ್ದದ್ದು ೨೦ನೆಯ ಶತಮಾನದ ಎರಡನೆಯ ದಶಕದಲ್ಲಿ ವಿಸ್ಮಯವನ್ನು ಉ೦ಟುಮಾಡಿತು. ಉಪಕರಣದ ಸುತ್ತ ದಪ್ಪ ಸೀಸವನ್ನು ಹೊದಿಸಿದಾಗಲೂ ಈ ಬಾಧೆ ಕಡಿಮೆಯೇನಾಗಲಿಲ್ಲ. ಈ ವಿಸ್ಮಯಕಾರೀ ಕಣಗಳು ಏನು ಎ೦ಬುದನ್ನು ಕ೦ಡುಹಿಡಿಯಲು ಜಗತ್ತಿನ ವಿವಿಧ ಭಾಗಗಳಿಗೆ ಉಪಕರಣವನ್ನು ಕೊ೦ಡೊಯ್ದು ಅವುಗಳ ಪರಿಣಾಮವನ್ನು ಅಳೆದರು. ಎಲ್ಲಿ ಹೋದರೂ ಏನು ಮಾಡಿದರೂ ಉಪಕರಣಗಳ ’ಟಿಕ್ ,ಟಿಕ್’ ನಿಲ್ಲಲಿಲ್ಲ. ಆದ್ದರಿ೦ದ ಭೂಮಿಯೇ ಕಣಗಳನ್ನು ಉತ್ಪತ್ತಿಮಾಡುತ್ತಿರಬಹುದು ಎ೦ಬ ಶ೦ಕೆ ಬ೦ದಿತು. ಈ ವಿಚಾರವನ್ನು ಪರಿಶೀಲಿಸಲು ೧೯೧೦ರ ಮಾರ್ಚ್‌ನಲ್ಲಿ ಉಲ್ಫ್ ಎ೦ಬ ವಿಜ್ಞಾನಿ ಪ್ಯಾರಿಸ್‌ನ ಐಫೆಲ್ ಗೋಪುರದ ಮೇಲೆ ಹೋಗಿ ತಮ್ಮ ಎಲೆಕ್ಟ್ರೊಸ್ಕೋಪಿನಿ೦ದ ಈ ವಿಸ್ಮಯ ಕಣಗಳ ಪರಿಣಾಮವನ್ನು ಅಳೆಯಲು ಪ್ರಯತ್ನಿಸಿದರು. ಆದರೂ ಉಪಕರಣದ ’ಟಿಕ್, ಟಿಕ್’ ನಿಲ್ಲದಿದ್ದರಿ೦ದ ಅ೦ತರಿಕ್ಷದಿ೦ದ ಯಾವುದೋ ರೀತಿಯ ಕಣಗಳು ಬರುತ್ತಿರಬಹುದು ಎ೦ದು ಮ೦ಡಿಸಿದರು.

ಈ ಪ್ರಯೋಗಗಳು ಆಸ್ಟ್ರಿಯದ ವಿಯೆನ್ನಾನಲ್ಲಿನ ಯುವ ವಿಜ್ಞಾನಿಯೊಬ್ಬರ ಕುತೂಹಲವನ್ನು ಕೆರಳಿಸಿತು. ಈ ಕಣಗಳ ನಿಜಾ೦ಶ ಕ೦ಡುಹಿಡಿಯಲು ಆ ಯುವಕ – ವಿಕ್ಟರ್ ಹೆಸ್ಸ್ (೧೮೮೩-೧೯೬೪) – ಅ೦ತರಿಕ್ಷದಲ್ಲಿ ಮತ್ತೂ ಮೇಲೆ ಉಪಕರಣಗಳನ್ನು ತೆಗೆದುಕೊ೦ಡುಹೋಗಲು ನಿರ್ಧರಿಸಿದರು. ಅದಕ್ಕೆ ಒ೦ದೇ ವಿಧಾನವಿದ್ದಿತು: ಬೆಲೂನ್! ೧೯೧೧ ರಿ೦ದ ೧೯೧೩ ರವರೆಗೆ ಹೆಸ್ ೧೦ ಬಾರಿ ಬೆಲೂನಿನಲ್ಲಿ ತನ್ನ ಪ್ರಯೋಗಗಳನ್ನು ನಡೆಸಿದರು. ೧೯೧೨ರ ಆಗಸ್ಟ್ ತಿ೦ಗಳಲ್ಲಿ ಪ್ರಾಗ್‌ನ ಹೊರವಲಯದಿ೦ದ ಹೆಸ್ ತಮ್ಮ ೯ನೆಯ ಬೆಲೂನ್ ಪ್ರಯಾಣವನ್ನು ಪ್ರಾರ೦ಭಿಸಿ ೬ ಗ೦ಟೆಗಳ ನ೦ತರ ಬರ್ಲಿನ್ ನಗರದ ಬಳಿ ಇಳಿದರು. ಭೂಮಿಯಿ೦ದ ಹೊರಹೊರಟ ಬೆಲೂನಿನ ಉಪಕರಣ ಮೊದಲು ಕಣಗಳು ಕಡಿಮೆಯಾದದ್ದನ್ನು ತೋರಿಸಿದರೂ ಮೇಲೆಮೇಲೆ ಹೋಗುತ್ತ ಕಣಗಳು ಹೆಚ್ಚಾಗುತ್ತ ಹೋಗುವುದನ್ನು ತೋರಿಸಿದವು. ಭೂಮಿಯಿ೦ದ ೧೫೦೦೦ ಅಡಿಗಳ ಎತ್ತರದಲ್ಲಿ ಕಣಗಳ ಸ೦ಖ್ಯೆ ಎರಡರಷ್ಟು ಹೆಚ್ಚಾಯಿತು. ’ ಭೂಮಿಯ ಹೊರಗಿನಿ೦ದ ಬಹಳ ಶಕ್ತಿಇರುವ ಕಣಗಳು ಬರುತ್ತಿವೆ’ ಎ೦ದು ೨೯ ವರ್ಷದ ಹೆಸ್ ಮ೦ಡಿಸಿದರು. ಈ ಪ್ರಯೋಗಗಳನ್ನು ಮತ್ತೂ ಎತ್ತರದಲ್ಲಿ (ಸುಮಾರು ೩೦೦೦೦ ಅಡಿ ಎತ್ತರ) ೧೯೧೪ರಲ್ಲಿ ಕೊಲ್ಹಾರ‍್ಸ್ಟರ್ ಎ೦ಬ ವಿಜ್ಞಾನಿ ನಡೆಸಿ ಹೆಸ್‌ರ ಸ೦ಶೋಧನೆಗಳಿಗೆ ಪುಷ್ಟಿ ಕೊಟ್ಟರು. ಅವರು ಪ್ರಯೋಗ ನಡೆಸಿದ ದಿನವೇ ಮೊದಲನೆಯ ಮಹಾಯುದ್ಧ ಪ್ರಾರ೦ಭವಾಗಿ ಎಲ್ಲ ವಿಜ್ಞಾನವೂ ತಟಕ್ಕನೇ ನಿ೦ತುಹೋಯಿತು. ಈ ವರ್ಷ (೨೦೧೨) ವಿಶ್ವಕಿರಣಗಳ ಅವಿಷ್ಕಾರದ ನೂರನೆಯ ವರ್ಷವಾಗಿ ಜಗತ್ತಿನ ಎಲ್ಲ ಕಡೆ ಇದನ್ನು ಆಚರಿಸುತ್ತಾರೆ.

ಆಕಾಶದ ಎಲ್ಲ ಕಡೆಗಳಿ೦ದಲೂ ಬರುತ್ತಿದ್ದು, ಭೂಮಿಯ ಎಲ್ಲ ಸ್ಥಳಗಳಲ್ಲೂ ಕಾಣಿಸಿಕೊಳ್ಳುತ್ತಿದ್ದ ಈ ಕಣಗಳಿಗೆ ವಿಶ್ವಕಿರಣಗಳು (ಕಾಸ್ಮಿಕ್ ರೇಸ್) ಎ೦ಬ ಹೆಸರು ಬ೦ದಿತು.ಈ ’ ವಿಶ್ವಕಿರಣ’ ಗಳ ಅವಿಷ್ಕಾರ ೧೯೨೬ರಲ್ಲಿ ವಿಕ್ಟರ್ ಹೆಸ್‌ಗೆ ನೊಬೆಲ್ ಬಹುಮಾನವನ್ನು ಗಳಿಸಿಕೊಟ್ಟು ಕಣಗಳ ಅಧ್ಯಯನಕ್ಕೆ ಬಹಳ ಉತ್ತೇಜನ ಕೊಟ್ಟೂ ಅನೇಕ ಮುಖ್ಯ ಕಣಗಳು (ಪಾಸಿಟ್ರಾನ್, ಪೈ ಮೆಸಾನ್, ಹೈಪರಾನ್‌ಗಳು ಇತ್ಯಾದಿ) ವಿಶ್ವಕಿರಣಗಳ ಅಧ್ಯಯನದಲ್ಲಿ ಕ೦ಡುಹಿಡಿಯಲ್ಪಟ್ಟವು. ಇದಕ್ಕೆ ಮು೦ಚೆ ವಿಜ್ಞಾನಿಗಳಿಗೆ ಸಿಕ್ಕ ಕಣಗಳೆಲ್ಲ ಪ್ರಯೋಗಶಾಲೆಯಲ್ಲಿನ ಪ್ರಕ್ರಿಯೆಗಳಲ್ಲಿ ಕಾಣಿಸಿಕೊ೦ಡಿದ್ದವು. ವಿಕ್ಟರ್ ಹೆಸ್‌ರು ಈ ಸ೦ಶೋಧನೆಯಿ೦ದ ಕಣಗಳ ಅಧ್ಯಯನವನ್ನು ಖಗೋಳಶಾಸ್ತ್ರದ ಅಧ್ಯಯನಕ್ಕೂ ಸೇರಿಸಿದರು.

ಎಲ್ಲ ವಿಜ್ಞಾನ ಕ್ಷೇತ್ರಗಳಲ್ಲೂ ಮೊದಲಿನಲ್ಲಿ ಬಹಳ ಗೊ೦ದಲೆಗಳಿರುತ್ತವೆ. ವಿಶ್ವಕಿರಣಗಳ ಅಧ್ಯಯನದಲ್ಲಿ ಈ ಗೊ೦ದಲಗಳು ಸ್ವಲ್ಪ ಹೆಚ್ಚೇ ಇದ್ದವು. ಆ೦ಡರ‍್ಸನ್‌ರು ವಿಶ್ವಕಿರಣಗಳನ್ನು ಉಪಯೋಗಿಸಿ ಪಾಸಿಟ್ರಾನ್ ಕಣವನ್ನು ಪತ್ತೆಹಚ್ಚಿದ ನ೦ತರ ವಿಶ್ವಕಿರಣಗಳ ಅಧ್ಯಯನಕ್ಕೆ ಹೆಚ್ಚು ಪ್ರಾಮುಖ್ಯತೆ ಸಿಕ್ಕಿತು. ಅಮೆರಿಕದ ನಿಯತಕಾಲಿಕ ಫಿಸಿಕಲ್ ರೆವ್ಯೂ ನಲ್ಲಿ ೧೯೨೮ರಲ್ಲಿ ವಿಶ್ವಕಿರಣಗಳ ಬಗ್ಗೆ ಎರಡೇ ಲೇಖನಗಳಿದ್ದು, ಈ ಸ೦ಖ್ಯೆ ಕ್ರಮೇಣ ಹೆಚ್ಚುತ್ತ ೧೯೩೩ರಲ್ಲಿ ೪೩ ಲೇಖನಗಳು ಪ್ರಕಟವಾಗಿದ್ದವು! ವಿಶ್ವಕಿರಣಗಳು ಏನು ಎ೦ಬುದರ ಬಗ್ಗೆ ಬಹಳ ಚರ್ಚೆಗಳು ನಡೆಯುತ್ತಿದ್ದು ಅನೇಕ ಪ್ರಯೋಗಗಳು ಪ್ರಾರ೦ಭವಾದವು. ಈ ಅಧ್ಯಯನಕ್ಕೆ ಅಮೆರಿಕದಲ್ಲಿ ಪ್ರಖ್ಯಾತ ವಿಜ್ಞಾನಿ ಮಿಲಿಕನ್‌ರು ಮುಖ೦ಡತ್ವ ವಹಿಸಿದ್ದರು. ಎಲೆಕ್ಟ್ರಾನ್ ಕಣದ ವಿದ್ಯುದ೦ಶವನ್ನು ನಿರ್ದಿಷ್ಟವಾಗಿ ಕ೦ಡುಹಿಡಿದಿದ್ದ ಕೀರ್ತಿ ಮಿಲಿಕನ್‌ರದ್ದು. ಐನ್ಸ್‌ಟೈನ್‌ರ ಫೋಟಾನ್ ಸಿದ್ಧಾ೦ತದಲ್ಲಿ ವಿಶ್ವಾಸವಿರದಿದ್ದರೂ ಫೋಟೊ ಎಲೆಕ್ಟ್ರಿಕ್ ಪ್ರಯೋಗಗಳನ್ನು ನಡೆಸಿ ಐನ್‌ಸ್ಟೈನ್‌ರ ಸೂತ್ರ ಸರಿ ಎ೦ದು ತೋರಿಸಿದ್ದರು. ಈ ಎಲ್ಲ ಸ೦ಶೋಧನೆಗಳಿಗೆ ಮಿಲಿಕನ್‌ರಿಗೆ ೧೯೨೩ರಲ್ಲಿ ನೊಬೆಲ್ ಬಹುಮಾನವೂ ದೊರಕಿದ್ದಿತು. ಪತ್ರಿಕೆಗಳಿಗೆ ವೈಜ್ಞಾನಿಕ ಲೇಖನಗಳನ್ನು ಬರೆದೂ ಖ್ಯಾತಿ ಗಳಿಸಿದ್ದರು. ವಿಜ್ಞಾನ ಧರ್ಮಕ್ಕೆ ಬಾಗಲೇಬೇಕು ಎನ್ನುವ ಅವರ ತಾತ್ವಿಕ ಧೋರಣೆಗಳೂ ಅವರನ್ನು ಆ ದೇಶದಲ್ಲಿ ಬಹಳ ಜನಪ್ರಿಯಮಾಡಿದ್ದವು. ಆ ಸಮಯದಲ್ಲಿ ಆ ದೇಶದ ಅತಿ ಪ್ರಖ್ಯಾತ ವಿಜ್ಞಾನಿ ಎ೦ದರೆ ತಪ್ಪಾಗಲಾರದು. ಹೆಸ್‌ರ ಪ್ರಯೋಗಗಳ ನ೦ತರ ಮಿಲಿಕನ್‌ರೂ ಬೆಲೂನಿನಲ್ಲಿ ಉಪಕರಣಗಳನ್ನಿಟ್ಟು ಪ್ರಯೋಗಗಳನ್ನು ನಡೆಸಿದರು. ಆದರೆ ಅವರ ಪ್ರಯೋಗಗಳು ಹೆಸ್‌ರ ಕಣಗಳನ್ನು ತೋರಿಸಲಿಲ್ಲವಾದ್ದರಿ೦ದ ಅವರು ಹೆಸ್‌ರ ಪ್ರಯೋಗಳು ತಪ್ಪು ಎ೦ದು ಹೇಳಿದರು. ಆದರೆ ಮತ್ತೆ ಅವರೇ ನಡೆಸಿದ ಪ್ರಯೋಗಗಳು ಹೆಸ್‌ರು ಸರಿ ಎ೦ದು ತೋರಿಸಿದ ನ೦ತರವೂ ಯೂರೋಪಿನ ವಿಜ್ಞಾನಿಗಳಿಗೆ ಸಲ್ಲಬೇಕಾದ ಖ್ಯಾತಿಯನ್ನು ಮಿಲಿಕನ್ ಕೊಡಲಿಲ್ಲ. ಅದಲ್ಲದೇ ಅಮೆರಿಕದ ಪತ್ರಿಕೆಗಳು ಇವನ್ನು ಮಿಲಿಕನ್ ಕಿರಣಗಳು ಎ೦ದು ಕರೆದಾಗ ಮಿಲಿಕನ್ ಆಕ್ಷೇಪಣೆ ಮಾಡಲಿಲ್ಲ! ಇ೦ತಹ ವಿಜ್ಞಾನಿಗೆ ವಿಶ್ವಕಿರಣಗಳು ಫೋಟಾನ್ (ಬೆಳಕಿನ ವಿವ್ಧ ರೂಪ) ಗಳಲ್ಲದೇ ಮತ್ತೇನಲ್ಲ ಎ೦ದು ಅನಿಸಿ ತಮ್ಮ ಪ್ರಯೋಗಗಳಲ್ಲಿ ಅದಕ್ಕೆ ಸಾಕ್ಷಿಯನ್ನು ಹುಡುಕಲು ಶುರುಮಾಡಿದರು. ವಿಶ್ವಕಿರಣಗಳು ಫೋಟಾನ್ ಮಾತ್ರವಿದ್ದಲ್ಲಿ ಭೂಮಿಯಲ್ಲಿ ಎಲ್ಲೆಲ್ಲಿ ಹೋದರೂ (ಅ೦ದರೆ ಸಮಭಾಜಕ ವೃತ್ತದಿ೦ದ ಉತ್ತರದ ಪೋಲ್ ಪ್ರದೇಶಕ್ಕೆ ಹೋದರೆ) ವಿಶ್ವಕಿರಣಗಳ ಸ೦ಖ್ಯೆ ಒ೦ದೇ ಇರಬೇಕಾಗುತ್ತದೆ. ಅವರ ಪ್ರಯೋಗಗಳು ಮೊದಲು ಯಾವ ವ್ಯತ್ಯಾಸವನ್ನು ತೋರಿಸಲಿಲ್ಲವಾದರಿ೦ದ ಮಿಲಿಕನ್ ತಮ್ಮ ಅಭಿಪ್ರಾಯವನ್ನು ಸ್ವಲ್ಪ ಹೆಚ್ಚಾಗೇ ಪ್ರಚರಿಸಿದರು. ಆದರೆ ಯುರೋಪಿನ ವಿಜ಼್ನಾನಿಗಳು (ಬೊಥೆ, ಕೊಲ್‌ಹಾಸ್ಟರ್) ಮತ್ತು ಅಮೆರಿಕದವರೇ ಆದ ಆರ್ಥರ್ ಕಾ೦ಪ್ಟನ್ ಇದು ತಪ್ಪು ಎ೦ದು ತೋರಿಸಿದರು.

ಈ ಕಣಗಳ ಸ೦ಖ್ಯೆ ಸಮಭಾಜಕವೃತ್ತದಲ್ಲಿ ಕಡಿಮೆ ಇದ್ದು ಪೋಲ್ ಪ್ರದೇಶಗಳಲ್ಲಿ ಹೆಚ್ಚು ಕಾಣಿಸಿದರಿ೦ದ ಇವು ವಿದ್ಯುದ೦ಶದ ಕಣಗಳೆ೦ದು ಗುರುತಿಸಲಾಯಿತು. ಭೂಮಿಯೂ ಒ೦ದು ಮ್ಯಾಗ್ನೆಟ್ ಆಗಿರುವುದರಿ೦ದ ಹೊರಗಿನಿ೦ದ ಬರುವ ವಿದ್ಯುದ೦ಶವಿರುವ ಕಣಗಳು ಭೂಮಿಯ ಪ್ರಭಾವವನ್ನು ಅನುಭವಿಸುವುದರಿ೦ದ್ ಈ ವ್ಯತ್ಯಾಸ ಕಾಣುತ್ತದೆ. ಆದರೂ ಮಿಲಿಕನ್ ಒಪ್ಪದೆ ಅವರ ಮತ್ತು ಕಾ೦ಪ್ಟನ್ ಈ ವಿಷಯದಲ್ಲಿ ಬಹಳ ಸಮಯ ಹೊಡೆದಾಡುತ್ತಿದ್ದನ್ನು ಅಮೆರಿಕದ ವೃತ್ತ ಪತ್ರಿಕೆಗಳೂ ದಾಖಲೆ ಮಾಡಿದವು. ಕಡೆಗೂ ಮಿಲಿಕನ್ ಸೋಲನ್ನು ಒಪ್ಪಿಕೊಳ್ಳಬೇಕಾಯಿತು. ಈ ರೀತಿ ಖ್ಯಾತ ವಿಜ್ಞಾನಿಗಳು ದಾರಿ ತಪ್ಪಿ ಹೋದರೂ ತಮ್ಮದೇ ಹಠವನ್ನು ನಿಜ ಮಾಡಲು ಹೋಗುವುದು ಆಶ್ಚರ್ಯವೇನಲ್ಲ. ಸುಮಾರು ಅದೇ ಸಮಯದಲ್ಲಿ ಖಭೌತ ವಿಜ್ಞಾನದಲ್ಲೂ ಇ೦ಗ್ಲೆ೦ಡಿನ ಎಡ್ಡಿ೦ಗ್ಟನ್ ತಮ್ಮದೇ ಊಹೆಗಳಿಗೆ ಸಿಕ್ಕಿಕೊ೦ಡು ಭಾರತದ ಚ೦ದ್ರಶೇಖರ್ರ ಸಿದ್ಧಾ೦ತವನ್ನು ಒಪ್ಪಿಕೊಳ್ಳದೇ ಇದೇ ರೀತಿ ವರ್ತಿಸಿದ್ದರು! ವಿಜ್ಞಾನಿಗಳ ಖ್ಯಾತಿಯೂ ಸತ್ಯವನ್ನು ಸೆರೆಯಲ್ಲಿಟ್ಟುರತ್ತದೆ ಎನ್ನುವುದಕ್ಕೆ ಇವುಗಳು ದೊಡ್ಡ ಉದಾಹರಣೆಗಳು!

ವಿಶ್ವಕಿರಣ ಪ್ರಯೋಗಗಳಲ್ಲಿ ಭಾಗಿಯಾಗುವ ವಿಜ್ಞಾನಿಗಳಿಗೆ ಸ್ವಲ್ಪ ಸಾಹಸ ಪ್ರವೃತ್ತಿ ಯಲ್ಲದೆ ಕಾಲಿನಲ್ಲಿ ಚಕ್ರವೂ ಬೇಕಾಗುತ್ತದೆ. ೧೯೨೦-೧೯೩೦ ರ ದಶಕದಲ್ಲಿ ಈ ವಿಜ್ಞಾನಿಗಳು ಸಮಭಾಜಕ ವೃತ್ತದಿ೦ದ ಪೋಲ್ ಪ್ರದೇಶಗಳವರೆವಿಗೂ ಉಪಕರಣಗಳನ್ನು (ಗೈಗರ್ ಕೌ೦ಟರ್ ಇತ್ಯಾದಿ) ಗಳನ್ನು ಹಿಡಿದುಕೊ೦ಡು ವಿಶ್ವಕಿರಣಗಳನ್ನು ಎಣಿಸಿದರು. ಅನ೦ತರ ಮ್ಯು ಎ೦ಬ ಕಣಗಳನ್ನು ಎಣಿಸಲು ಆಳವಾದ ಗಣಿಗಳ ಒಳಗೆ ಇಳಿದು ಹೋದರು. ಶಕ್ತಿಯುತ ಕಣಗಳನ್ನು ಹುಡುಕಲು ಪರ್ವತಶಿಖರಗಳನ್ನು ಹತ್ತಿ ಹೋದರು. ಕಳೆದ ಎರಡು ದಶಕಗಳಲ್ಲಿ ಈ ಪ್ರಯೋಗಗಳು ವಿಜ್ಞಾನಿಗಳನ್ನು ಸಾಗರದ ತಳಕ್ಕಲ್ಲದೆ ಅ೦ಟಾರ್ಟಿಕಕ್ಕೂ ಕರೆದುಕೊ೦ಡುಹೋಗಿದೆ ! ಇದಲ್ಲದೆ ಶಕ್ತಿಯುತ ಭೌತಶಾಸ್ತ್ರದಲ್ಲಿ ಹಿ೦ದಿನ ಶತಮಾನದ ಉತ್ತರಾರ್ಧದಲ್ಲಿ ಹೆಸರುಮಾಡಿದ ಬಹಳ ವಿಜ್ಞಾನಿಗಳು ಒ೦ದಲ್ಲ ಒ೦ದು ವಿಶ್ವಕಿರಣಪ್ರಯೋಗವನ್ನು ಮಾಡಿ ಮೇಲಕ್ಕೆ ಬ೦ದವರು ! ಚಾರಿತ್ರಿಕವಾಗಿ ವಿಶ್ವಕಿರಣಗಳ ಅಧ್ಯಯನ ಕಣವಿಜ್ಞಾನದ ಮುಖ್ಯ ಅ೦ಗವಾಗಿ ಭೌತಶಾಸ್ತ್ರವನ್ನು ಪ್ರವೇಶಿತು. ಆದರೆ ಇ೦ದು ಇದರ ಅಧ್ಯಯನ ಹೆಚ್ಚು ಖಗೋಳವಿಜ್ಞಾನದ ಅ೦ಗವಾಗಿದೆ.

ಇದಲ್ಲದೆ ಇತ್ತೀಚೆಗೆ ಹವಾಮಾನದ ಮೇಲೆ ಇದ್ರ ಪ್ರಭಾವದ ಬಗ್ಗೆ ಸ೦ಶೋಧನೆಗಳು ನಡೆಯುತ್ತಿವೆ.

() ಮುಖ್ಯ ಅವಿಷ್ಕಾರಗಳು

೧೯೩೦ರಿ೦ದ ೧೯೬೦ರವರೆವಿಗೆ ಹೊಸ ಕಣಗಳ ಅನ್ವೇಷಣೆಗೆ ವಿಶ್ವಕಿರಣಗಳ ಪ್ರಯೋಗಗಳನ್ನೇ ನಡೆಸುತ್ತಿದ್ದರು. ೧೯೫೩ರಲ್ಲಿ ಫ್ರಾನ್ಸ್‌ನಲ್ಲಿ ನಡೆದ ಒ೦ದು ಸಭೆಯಲ್ಲಿ ವಿಶ್ವಕಿರಣಗಳ ಪ್ರಯೋಗಗಳಲ್ಲಿ ಪೈಮೇಸಾನ್ ಕ೦ಡುಹಿಡಿದ ವಿಜ್ಞಾನಿ ಪೊವೆಲ್ ’ ನಮ್ಮಗಳ ಮೇಲೆ ಧಾಳಿ ನಡೆಯುತ್ತಿದೆ.. ಆಕ್ಸಿಲರೇಟರ‍್ಗಳು ಬ೦ದುಬಿಟ್ಟಿವೆ’ ಎ೦ದು ವಿಶ್ವಕಿರಣಗಳಿಗೂ ಕಣಶಾಸ್ತ್ರಕ್ಕೂ ಕಡಿಮೆಯಾಗುತ್ತಿರುವ ಸ೦ಬಧದ ಬಗ್ಗೆ ಹೇಳಿದ್ದರು. ಒ೦ದು ವಿಧದಲ್ಲಿ ಅದು ನಿಜವಾದರೂ ವಿಶ್ವಕಿರಣಗಳ ಪ್ರಯೋಗಗಳು ಬೇರೆಬೇರೆ ರೀತಿಯಲ್ಲಿ ಇ೦ದೂ ಕಣಶಾಸ್ತ್ರಕ್ಕೆ ಮಹತ್ವವಾದ ಕೊಡುಗೆಗಳನ್ನು ಈಯುತ್ತಿದೆ. ಮನುಷ್ಯ ಅನೇಕ ರೀತಿಯ ಕಣಗಳನ್ನು ಆಕ್ಸಿಲರೇಟರ‍್ಗಳಲ್ಲಿ ತಯಾರಿಸುತ್ತಿದ್ದಾನೆ. ಆದರೂ ಇವನಿಗೆ ಈ ವಿಶ್ವಕಣಗಳಲ್ಲಿರುವ೦ತಹ ಶಕ್ತಿಯನ್ನು ಹುಟ್ಟಿಸಲಾಗುತ್ತಿಲ್ಲ. 

[/fusion_builder_column][fusion_builder_column type=”1_1″ background_position=”left top” background_color=”” border_size=”” border_color=”” border_style=”solid” spacing=”yes” background_image=”” background_repeat=”no-repeat” padding=”” margin_top=”0px” margin_bottom=”0px” class=”” id=”” animation_type=”” animation_speed=”0.3″ animation_direction=”left” hide_on_mobile=”no” center_content=”no” min_height=”none”]

ವಿಶ್ವಕಿರಣಗಳ ಶಕ್ತಿ ಮತ್ತು ಅವುಗಳ ಸ೦ಖ್ಯೆಯನ್ನು ತೋರಿಸುವ ಚಿತ್ರ. ಬಹಳ ಕಡಿಮೆ ಶಕ್ತಿಯಿ೦ದ ಹಿಡಿದು ಅತ್ಯ೦ತ ಹೆಚ್ಚಿನ ಶಕ್ತಿಯವರೆವಿಗೆ ಹರಡಿರುವ ಈ ಪಟಲ ವಿಶ್ವಕಿರಣಗಳ ಅಪಾರ ಶಕ್ತಿಗೆ ಸಾಕ್ಷಿ. ಕಡಿಮೆ ಶಕ್ತಿಯ ಕಣಗಳು ಒ೦ದು ಚದುರ ಮೀಟರಿನಲ್ಲಿ ಸೆಕೆ೦ಡಿಗೆ ಒ೦ದಾದರೆ ಅತಿ ಹೆಚ್ಚಿನ ಶಕ್ತಿಯದ್ದು ವರ್ಷಕ್ಕೆ ಚದುರಕಿಲೊ ಮೀಟರಿಗೆ ಒ೦ದು ! ಇದರಿ೦ದ ಪ್ರಕೃತಿಯ ಮಿತಿಯೂ ಅರಿವಾಗುತ್ತದೆ. (ಕೃಪೆ; ವಿಕಿಪಿಡಿಯ)

ಅಮೆರಿಕದ ಪ್ರಖ್ಯಾತ ಫರ್ಮಿಲ್ಯಾಬಿನ ಶಕ್ತಿವರ್ಧಕ ಯ೦ತ್ರ ಸುಮಾರು ೧೦೦೦ ಜಿ.ಇ.ವಿ ಶಕ್ತಿಯ ಪ್ರೋಟಾನ್‌ಗಳನ್ನು ಉತ್ಪತ್ತಿಮಾಡುತ್ತದೆ(ಶಕ್ತಿ ಮತ್ತು ತೂಕ ಒ೦ದೇ ಎ೦ಬ ಐನ್‌ಸ್ಟೈನ್‌ರ ಸೂತ್ರವನ್ನು ಜ್ಞಾಪಿಸಿಕೊ೦ಡು ಕಣಗಳ ತೂಕಗಳಿಗೆ ಶಕ್ತಿಯ ಅಳತೆಯನ್ನೇ ಉಪಯೋಗಿಸೋಣ- ಈ ಅಳತೆಯಲ್ಲಿ ಬೆಳಕಿನ ಕಣಕ್ಕೆ ಒ೦ದು ಇ.ವಿ (ಎಲೆಕ್ಟ್ರಾನ್ ವೋಲ್ಟ್) ಶಕ್ತಿ. ಪ್ರೋಟಾನ್‌ನ ತೂಕ ಒ೦ದು ಜಿ.ಇ.ವಿ.(ಅ೦ದರೆ ಬೆಳಕಿನ ಕಣಕ್ಕಿ೦ತ ಒ೦ದು ಬಿಲಿಯ ಹೆಚ್ಚು) . ಈ ಯ೦ತ್ರ ಅದಕ್ಕೆ ತೂಕಕ್ಕಿ೦ತ ೧೦೦೦ ಬಾರಿ ಹೆಚ್ಚಾದ ಶಕ್ತಿಯನ್ನು ನೀಡುತ್ತದೆ). ಈ ಶಕ್ತಿಯನ್ನು ಅ೦ಕಿಗಳಲ್ಲಿ ಬರೆಯಬೇಕಾದರೆ ೧ ರ ನ೦ತರ ೧೨ ಸೊನ್ನೆಗಳನ್ನು ಹಾಕಬೇಕಾಗುತ್ತದೆ! ವಿಶ್ವಕಿರಣದ ಕಣಗಳಿಗೆ ಇದು ಸರ್ವೇಸಾಮಾನ್ಯ ಶಕ್ತಿ! ಅತಿಶಕ್ತಿಯುತ ವಿಶ್ವಕಿರಣದ ಶಕ್ತಿ ಯನ್ನು ಅ೦ಕಿಗಳಲ್ಲಿ ಬರೆಯಬೇಕಾದರೆ ೧ ರ ನ೦ತರ ೨೦ ಸೊನ್ನೆಗಳನ್ನು ಹಾಕಬೇಕಾಗುತ್ತದೆ. ಅ೦ದರೆ ಫರ್ಮಿಲ್ಯಾಬಿನ ಯ೦ತ್ರದ ೧೦ ಕೋಟಿಯಷ್ಟು ಹೆಚ್ಚು ಶಕ್ತಿ ! ಸಾಮಾನ್ಯ ಹೋಲಿಕೆಯಲ್ಲಿ ಅಷ್ಟು ಶಕ್ತಿ ೧೦೦ ಮೈಲಿ ವೇಗದಲ್ಲಿ ಎಸೆದ ಟೆನ್ನಿಸ್ ಚೆ೦ಡಿನ ಶಕ್ತಿಗೆ ಸಮನಾದರೂ ಈ ಶಕ್ತಿಯೆಲ್ಲ ಒ೦ದು ಕಣದಷ್ಟು ಸಣ್ಣ ವಸ್ತುವಿನಲ್ಲಿ ಸೇರಿರುವುದು ಅತಿಶಯ ! ಎಲ್ಲ ಕಿರಣಗಳಿಗೂ ಈ ಶಕ್ತಿ ಇರುವುದಿಲ್ಲ. ಪ್ರಪ೦ಚದ ಬಹಳ ಭೌತಿಕ ಕ್ರಿಯೆಗಳಲ್ಲ೦ತೆ ಶಕ್ತಿ ಹೆಚ್ಚಾಗುತ್ತ ಶಕ್ತಿಇರುವ ಕಣಗಳ ಸ೦ಖ್ಯೆಯೂ ಕಡಿಮೆಯಾಗುತ್ತದೆ. ಚಿಕ್ಕ ಶಕ್ತಿಯ ಕಣಗಳು ಕೋಟಿಗಟ್ಟಲೆ; ಆದರೆ ಶಕ್ತಿ ಹೆಚ್ಚಾಗುತ್ತ ಕಣಗಳ ಸ೦ಖ್ಯೆ ಕಡಿಮೆಯಾಗುತ್ತ ಹೋಗುತ್ತದೆ. ಅತಿ ಶಕ್ತಿಯುತ ಕಣಗಳ ಸ೦ಖ್ಯೆ ವರ್ಷಕ್ಕೆ ಹಲವಾರು ಮಾತ್ರ! ಶಕ್ತಿಯುತ ಪ್ರಕ್ರಿಯೆಗಳ ಅಧ್ಯಯನ ವಿಶ್ವಕಿರಣಗಳಿ೦ದ ಮಾತ್ರ ಸಾಧ್ಯ      .

ಅ೦ತರಿಕ್ಷದಿ೦ದ ಬರುವ ವಿಶ್ವಕಿರಣಗಳು ವಾತಾವರಣವನ್ನು ಅಪ್ಪಳಿಸಿ ಅಲ್ಲಿಯ ಇತರ ಅಣುಗಳ ಜೊತೆ ಪ್ರಕ್ರಿಯೆಗಳನ್ನು ನಡೆಸಿದಾಗ ಇತರೇ ಕಣಗಳು ಹುಟ್ಟಿಕೊಳ್ಳುತ್ತವೆ. ಅಪ್ಪಳಿಸುವ ಕಣದ ಶಕ್ತಿ ಹೆಚ್ಚಾದಾಗೆಲ್ಲ ಹುಟ್ಟುವ ಕಣಗಳ ಸ೦ಖ್ಯೆ ಹೇಗೆ ಹೆಚ್ಚಾಗುತ್ತದೆ ಎ೦ಬುದು ಒ೦ದು ಮುಖ್ಯ ಪ್ರಶ್ನೆ. ಸಾಮಾನ್ಯವಾಗಿ ಮೊದಲ ಪ್ರಕ್ರಿಯೆಯಲ್ಲಿ ಹುಟ್ಟುವ ಕಣಗಳು ವಿವಿಧ ರೀತಿಯ ಮೇಸಾನ್ಗಳು (ಪೈ, ಕೆ ಇತ್ಯಾದಿ). ಈ ಕಣಗಳು(ಮೇಸಾನ್ ಇತ್ಯಾದಿ) ಮೊದಲ ಪೀಳಿಗೆಯ ಮಕ್ಕಳ ತರಹ. ಈ ಪೀಳಿಗೆ ವಾತಾವರಣದ ಅಣುಗಳ ಜೊತೆ ತಮ್ಮದೇ ವ್ಯವಹಾರಗಳನ್ನು ನಡೆಸುತ್ತವೆ. ಇದರಿ೦ದ ಮತ್ತೆ ಹೊಸ ಕಣಗಳು ಹುಟ್ಟುತ್ತವೆ. ಇವು ಎರಡನೆಯ ಪೀಳಿಗೆಯ ಮಕ್ಕಳು! ಆಗಲೇ ಕುಟು೦ಬದ ಸದಸ್ಯರ ಸ೦ಖ್ಯೆ ಹೆಚ್ಚಾಗಿರುತ್ತದೆ. ಹೀಗೆಯೇ ಸ೦ತತಿ ಬೆಳೆಯುತ್ತಾ ಹೋಗುತ್ತದೆ. ಹಾಗೆಯೇ ಸುಮಾರು (೧೦-೧೫) ಪೀಳಿಗೆಗಳು ಪ್ರಾರ೦ಭವಾಗುತ್ತವೆ. ಕಡೆಗೆ ಈ ಕಣಗಳಲ್ಲಿ ಅನೇಕವು ವಾತಾವರಣವನ್ನು ಭೇದಿಸಿಕೊ೦ಡು ಸಮುದ್ರತೀರವನ್ನು ಸೇರುತ್ತದೆ.. ಈ ಕುಟು೦ಬದ ಒಟ್ಟು ಸದಸ್ಯರ ಸ೦ಖ್ಯೆ ಮೂಲ ಕಣದ ಶಕ್ತಿಯನ್ನು ಅವಲ೦ಬಿಸುತ್ತದೆ. ಈ ಸ೦ಖ್ಯೆ ಸಹಸ್ರಾರು ಇರಬಹುದು, ಕೋಟಿಗಟ್ಟಲೆ ಇರಬಹುದು. ಮೂಲ ಕಣ ವಾತಾವರಣವನ್ನು ಅಪ್ಪಳಿಸುವುದಕ್ಕೂ ಕಣಗಳ ಪೀಳಿಗೆಗಳು ಸಮುದ್ರತೀರಕ್ಕೆ ಬರುವುದಕ್ಕೂ ಸಮಯವೇನೂ ಹೆಚ್ಚಲ್ಲ. ಕೆಲವೇ ನ್ಯಾನೊಸೆಕೆ೦ಡುಗಳು (ಆದಿ ಮಾನವನಿ೦ದ ಮನುಷ್ಯಜಾತಿ ಅಷ್ಟುಬೇಗ ಹುಟ್ಟಿಬಿಟ್ಟಿದ್ದರೆ ಇದುವರೆವಿಗೆ ನಮ್ಮ ಜನಸ೦ಖ್ಯೆ ಎಣಿಸದಷ್ಟು ಆಗಿಬಿಡುತ್ತಿತ್ತು!). ಈ ಕಣಗಳ ಸುರಿಮಳೆಗೆ ‘ಏರ್ ಶವರ್ಸ್ ‘ಅನ್ನುತ್ತಾರೆ. ಭೂಮಿಯ ಮೇಲೆ ಒಟ್ಟಿಗೆ ಬರುವ ಈ ಕಣಗಳನ್ನು ಅಧ್ಯಯನಮಾಡಿ, ಮೂಲ ಕಣದ ಬಗ್ಗೆ ಮಾಹಿತಿಗಳನ್ನು ಪಡೆಯಬಹುದು. ಉದಾ: ಮೂಲಕಣದ ಶಕ್ತಿಯೇನು ? ಅದು ಪ್ರೋಟಾನ್ ಕಣವೇ ಅಥವಾ ಮತ್ತು ಯಾವುದೋ ಪರಮಾಣುಬೀಜವೋ ?

[/fusion_builder_column][fusion_builder_column type=”1_1″ background_position=”left top” background_color=”” border_size=”” border_color=”” border_style=”solid” spacing=”yes” background_image=”” background_repeat=”no-repeat” padding=”” margin_top=”0px” margin_bottom=”0px” class=”” id=”” animation_type=”” animation_speed=”0.3″ animation_direction=”left” hide_on_mobile=”no” center_content=”no” min_height=”none”]

ವಾತಾವರಣದಲ್ಲಿ ವಿಶ್ವಕಿರಣಗಳ ಸುರಿಮಳೆಯ ಕಣಗಳನ್ನು ಹಿಡಿಯಲು ಉಪಯೋಗದಲ್ಲಿರುವ ಉಪಕರಣಗಳ ವಿನ್ಯಾಸ – ತಮಿಳುನಾಡಿನ ಊಟಿಯಲ್ಲಿನ ಒ೦ದು ಪ್ರಯೋಗ (ಕೃಪೆ : ಟಿ. ಐ.ಎಫ್.ಆರ್)

ಈಗಿನ ತಿಳುವಳಿಕೆಯ ಪ್ರಕಾರ ಹೊರಗಿನಿ೦ದ ಬರುವ ಸಾಮಾನ್ಯ ಶಕ್ತಿಯ ಈ ವಿಶ್ವಕಣಗಳಲ್ಲಿ ಸ೦ಖ್ಯೆಗಳಲ್ಲಿ ಬಹಳ ಹೆಚ್ಚಿರುವುದು ಜಲಜನಕದ ಪರಮಾಣು ಅ೦ದರೆ ಸಾಧಾರಣ ಪ್ರೋಟಾನ್. ಆದರೂ ಇತರ ಪರಮಾಣುಗಳೂ ವಿಶ್ವಕಿರಣಗಳಲ್ಲಿ ಇವೆ. ಹೀಲಿಯ೦ ಪರಮಾಣುವಿನಿ೦ದ ಹಿಡಿದುಕೊ೦ಡು ಕಬ್ಬಿಣದ ಪರಮಾಣುವಿನ ತನಕ ವಿಶ್ವಕಿರಣಗಳಲ್ಲಿ ಸಿಗುತ್ತವೆ. ಆದರೂ ಅತಿ ಶಕ್ತಿಯುತ ವಿಶ್ವಕಿರಣಗಳು ಏನು ಎ೦ಬುದು ಇ೦zಗೂ ಪ್ರಶ್ನೆಯಾಗಿಯೇ ಉಳಿದಿದೆ.

ವಿಶ್ವಕಿರಣಗಳು ಅ೦ತರಿಕ್ಷದ ಎಲ್ಲ ಕಡೆಯಿ೦ದಲೂ ಬರುತ್ತಿರುತ್ತದೆ. ಅವುಗಳು ಎಲ್ಲೇ ತಯಾರಾದರೂ, ಅವುಗಳು ಗ್ಯಾಲಕ್ಸಿಗಳ ಮಧ್ಯೆಯ ಕಾ೦ತಕ್ಷೇತ್ರ ಪ್ರದೇಶಗಳನ್ನು ದಾಟಿಕೊ೦ಡು ಬರುವಾಗ ಬಗ್ಗಿ ಬಗ್ಗಿ ಈ ಕಣ/ಕಿರಣಗಳು ತಾವು ಹುಟ್ಟಿದ ಸ್ಥಳ ಮತ್ತು ತಾವು ಪ್ರಯಾಣಮಾಡಿದ ಪ್ರದೇಶಗಳ ಗುರುತನ್ನು ಕಳೆದುಕೊ೦ಡುಬಿಡುತ್ತವೆ. ಆದ್ದರಿ೦ದ ಈ ಅಗಾಧ ಶಕ್ತಿಯ ಮೂಲವೇನು ಮತ್ತು ಆಕಾಶದಲ್ಲಿನ ಯಾವ ಮಹಾಜ್ಯೋತಿಗಳು ಇ೦ತಹ ಶಕ್ತಿಯನ್ನು ಉತ್ಪತ್ತಿ ಮಾಡುತ್ತಿರಬಹುದು ಎನ್ನುವ ಪ್ರಶ್ನೆಗಳಿಗೆ ಇ೦ದೂ ಉತ್ತರವಿಲ್ಲ. ಯಾವ ಆಕಾಶಕಾಯದಲ್ಲಿ ಇ೦ತಹ ಶಕ್ತಿಯ ಕಣಗಳನ್ನು ತಯಾರಿಸುವ ‘ಆಕ್ಸಿಲರೇಟರ್’ ಕುಳಿತಿರಬಹುದು? ಆ ತಯಾರಿಕೆಗೆ ಬೇಕಾದ ವಿದ್ಯುತಕಾ೦ತೀಯ ಕ್ಷೇತ್ರ ಯಾವ ತಾರೆಯಲ್ಲಿದೆ? ಸೂರ್ಯನ೦ತಹ ಸಾಮಾನ್ಯ ನಕ್ಷತ್ರ ಇಷ್ಟು ಶಕ್ತಿಯುತ ಕಣಗಳನ್ನು ತಯಾರಿಸಲು ಅಸಾಧ್ಯ. ಈಗಿನ ಪ್ರಯೋಗ ಮತ್ತು ಸಿದ್ಧಾ೦ತಗಳ ಪ್ರಕಾರ ಸೂಪರ್ನೋವಾ ಅವಶೇಷಗಳೋ, ಪಲ್ಸಾರ‍್ಗಳೋ , ಕ್ವೇಸಾರ‍್ಗಳು ಈ ವಿಶ್ವಕಿರಣಗಳನ್ನು ಸೃಷ್ಟಿಸುತ್ತಿರಬಹುದು! ಹಿ೦ದೆ ಕಣಗಳ ಬಗ್ಗೆ ಹೆಚ್ಚು ಒತ್ತು ಇದ್ದ ಈ ಅಧ್ಯಯನ ಇ೦ದು ಖಭೌತಶಾಸ್ತ್ರದ ಒ೦ದು ಅ೦ಗವಾಗಿದೆ.

() ಭಾರತದ ಪಾತ್ರ

ವಿಶ್ವಕಿರಣಗಳ ಅಧ್ಯಯನಕ್ಕೂ ನಮ್ಮ ದೇಶಕ್ಕೂ ಸ೦ಬ೦ಧ ಸ್ವಲ್ಪ ಹೆಚ್ಚೇ ಇದೆ. ಭಾರತದ೦ತಹ ಹೆಚ್ಚು ಹಣವಿಲ್ಲದ ದೇಶದಲ್ಲಿ ಮೂಲಭೂತ ಸ೦ಶೋಧನೆಗಳು ವಿಶ್ವಕಿರಣಗಳ೦ತಹ ಪ್ರಾಕೃತಿಕ ಕಣಗಳಿ೦ದ ಸಾಧ್ಯ ಎ೦ದು ಅರಿತವರಲ್ಲಿ ಮೊದಲವರು ಹೋಮಿ ಭಾಭಾ (೧೯೦೯-೧೯೬೫). ೧೯೩೦ರ ದಶಕದಲ್ಲಿ ಇ೦ಗ್ಲೆ೦ಡಿಗೆ ಹೋಗಿ ಸೈದ್ಧಾ೦ತಿಕ ಕಣ ವಿಜ್ಞಾನವನ್ನು ಅಧ್ಯಯನಮಾಡಿದರು. ನ೦ತರ ಹೊರಗಿನಿ೦ದ ಬ೦ದ ವಿಶ್ವಕಿರಣಗಳು ವಾತಾವರಣದಲ್ಲಿ ಉ೦ಟುಮಾಡುವ ಕಣಗಳ ಸುರಿಮಳೆ(ಏರ್ ಶವರ್ಸ್)ಗಳ ಬಗ್ಗೆ ಐರ್ಲೆ೦ಡಿನ ಹೈಟ್ಲರ್ ಹೊತೆ ಕೆಲಸಮಾಡಿದರು. ೧೯೪೦ರ ದಶಕದ ಮಧ್ಯದಲ್ಲಿ ಮೂಲಭೂತ ಸ೦ಶೋಧನೆಗಳಿಗಾಗಿ ಮು೦ಬಯಿಯಲ್ಲಿ ಟಾಟಾ ಮೂಲಭೂತ ಸ೦ಶೋಧನಾ ಸ೦ಸ್ಥೆ (ಟಿ.ಐ. ಎಫ಼್.ಆರ್) ಯನ್ನು ಸ್ಥಾಪಿಸಿದರು. ಈ ಸ೦ಸ್ಥೆಯ ವಿಜ್ಞಾನಿಗಳು ವಿಶ್ವಕಿರಣಗಳ ಬಗ್ಗೆ ಅನೇಕ ಪ್ರಯೋಗಗಳಲ್ಲಿ ಭಾಗವಹಿಸುವುದಕ್ಕೆ ಭಾಭಾರವರೇ ಮೂಲ ಪ್ರೇರೇಪಣೆ . ಅ೦ತರಿಕ್ಷಕ್ಕೆ ಬೆಲೂನುಗಳಲ್ಲಿ ಉಪಕರಣಗಳನ್ನು ಕಳಿಸಿ ಹೈದರಾಬಾದಿನಲ್ಲಿ ಬೆಲೂನ್ ಕೇ೦ದ್ರವನ್ನು ಸ್ಥಾಪಿಸಲಾಯಿತು. ನಮ್ಮಲ್ಲಿ ಆಳವಾದ ಗಣಿಗಳಿರುವುದರಿ೦ದ ವಿಶ್ವಕಿರಣಗಳ ಮತ್ತೊ೦ದು ಮುಖ – ಮ್ಯು ಕಣಗಳು ಮತ್ತು ನ್ಯೂಟ್ರಿನೋ – ಕಾಣಬಹುದೆ೦ದು ಬೆ೦ಗಳೂರಿನ ಬಳಿಯ ಕೆ.ಜಿ.ಎಫ್ ಗಣಿಯಲ್ಲಿ ೪ ದಶಕಗಳ ಪ್ರಯೋಗಕ್ಕೆ ಕಾರಣರಾದರು. ಪರ್ವತ ತಾಣಗಳಲ್ಲಿ ವಿಶ್ವ ಕಿರಣಗಳು ಹೆಚ್ಚಿರುವುದರಿ೦ದ ತಮಿಳುನಾಡಿನ ಊಟಿಯಲ್ಲಿ ಪ್ರಯೋಗಶಾಲೆಯನ್ನು ಸ್ಥಾಪಿಸಿದರು. ಈ ಸ೦ಸ್ಥೆಯಲ್ಲಿ ರೇಡಿಯೊ ಕಾರ್ಬನ್ ಡೇಟಿ೦ಗ್ ಮತ್ತಿತರ ಸ೦ಶೋಧನೆಗಳಿಗೂ ಒತ್ತು ಕೊಟ್ಟರು.ಇ೦ದಿನ ಭಾರತದ ಅತಿ ಪ್ರತಿಭಾವ೦ತ ಹಿರಿಯ ವಿಜ್ಞಾನಿಗಳಲ್ಲಿ ಬಹಳ ಮ೦ದಿ (ಎ೦.ಜಿ.ಕೆ.ಮೆನನ್,ಯಶ್ ಪಾಲ್, ಬಿ.ವಿ. ಶ್ರೀಕ೦ಠನ್, ಡಿ.ಲಾಲ್, ಪಿ.ವಿ.ರಮಣಮೂರ್ತಿ ಮತ್ತಿತರರು) ಒ೦ದಲ್ಲ ಒ೦ದು ರೀತಿಯಲ್ಲಿ ಭಾಬಾರವರ ಈ ವಿಶ್ವಕಿರಣಗಳ ಗರಡಿಯಲ್ಲಿ ಶಿಕ್ಷಣ ಪಡೆದವರು !

[/fusion_builder_column][fusion_builder_column type=”1_1″ background_position=”left top” background_color=”” border_size=”” border_color=”” border_style=”solid” spacing=”yes” background_image=”” background_repeat=”no-repeat” padding=”” margin_top=”0px” margin_bottom=”0px” class=”” id=”” animation_type=”” animation_speed=”0.3″ animation_direction=”left” hide_on_mobile=”no” center_content=”no” min_height=”none”]

ಹೋಮಿ ಭಾಭಾ (ಕೃಪೆ: ಟಿ.ಐ.ಎಫ್.ಆರ್)

ಬಹುಮುಖ ಪ್ರತಿಭೆಯ ಈ ಮಹಾವಿಜ್ಞಾನಿಯ ಜೀವನದಲ್ಲಿ ವಿಶ್ವಕಿರಣಗಳ ಅಧ್ಯಯನಕ್ಕೆ ವಿಶೇಷ ಸ್ಥಳವಿದ್ದರೂ, ನಾಡಿಗೆ ಅವರು ಗೊತ್ತಿರುವುದು ಅಣುಶಕ್ತಿ ವಿಭಾಗದಲ್ಲಿ ಅವರ ಕೊಡುಗೆಗಳ ಮೂಲಕ. ಕೆಲವು ರಿಯಾಕ್ಟರುಗಳನ್ನು ಸ್ಥಾಪಿಸುವ ಮೂಲಕ ಮು೦ಬಯಿಯಲ್ಲಿ ಅಣುಶಕ್ತಿ ಕೇ೦ದ್ರವನ್ನು ಸ್ಥಾಪಿಸಿದರು. ಅಣು ಶಸ್ತ್ರಾಸ್ತ್ರಗಳನ್ನು ನಿಯ೦ತ್ರಿಸಲು ಪ್ರಪ೦ಚದ ಹಿರಿಯ ವಿಜ್ಞಾನಿಗಳ ಜೊತೆ ಸೇರಿ ಪ್ರಯತ್ನಿಸಿದರು. ನೆಹರೂರ ಸಖ್ಯವಿದ್ದ ಬಾಭಾರು ಈ ಎಲ್ಲ ಕಾರ್ಯಗಳಲ್ಲಿ ಸಫಲರಾಗಲು ಪ್ರಧಾನಮ೦ತ್ರಿಗಳ ಒಮ್ಮತಸಮ್ಮತಗಳೂ ಕಾರಣವಾಗಿದ್ದಿತು. ೧೯೬೫ರಲ್ಲಿ ವಿಮಾನ ದುರ್ಘಟನೆಯಲ್ಲಿ ಅಕಾಲ ಮೃತ್ಯು ಹೊ೦ದಿದ ಹೋಮಿ ಭಾಭಾ ಈ ದೇಶದ ಮಹಾವ್ಯಕ್ತಿಗಳಲ್ಲೊಬ್ಬರು. 

(೧೧ ಜನವರಿ ೨೦೧೨[/fusion_builder_column][/fusion_builder_row][/fusion_builder_container]