ಪಲ್ಲವಿ : ವಿಶ್ವರೂಪ ಧರಿಸಿದ ಕೃಷ್ಣಾ ಕೃಷ್ಣಾ
ಸಚ್ಚಿದಾನಂದನೇ ಕೃಷ್ಣಾ ಕೃಷ್ಣಾ
ಚರಣ : ಮತ್ಸ್ಯಾವತಾರದಲ್ಲಿ ಕೃಷ್ಣಾ ಕೃಷ್ಣಾ
ವೇದಗಳ ತಂದೆಯಂತೆ ಕೃಷ್ಣಾ ಕೃಷ್ಣಾ
ಕೂರ್ಮಾವತಾರದಲ್ಲಿ ಕೃಷ್ಣಾ ಕೃಷ್ಣಾ
ಪರ್ವತವ ಹೊತ್ತೆಯಂತೆ ಕೃಷ್ಣಾ ಕೃಷ್ಣಾ
ವರಾಹಾವತಾರದಲ್ಲಿ ಕೃಷ್ಣಾ ಕೃಷ್ಣಾ
ಭೂಮಿಯನ್ನು ತಂದೆಯಂತೆ ಕೃಷ್ಣಾ ಕೃಷ್ಣಾ
ನಾರಸಿಂಹಾವತಾರದಲ್ಲಿ ಕೃಷ್ಣಾ ಕೃಷ್ಣಾ
ಉದ್ಧರಿಸಿದೆ ಪ್ರಹ್ಲಾದನ ಕೃಷ್ಣಾ ಕೃಷ್ಣಾ
ವಾಮನಾವತಾರದಲ್ಲಿ ಕೃಷ್ಣಾ ಕೃಷ್ಣಾ
ಬಲಿಯ ಮೆಟ್ಟಿ ನಿಂತೆಯಂತೆ ಕೃಷ್ಣಾ ಕೃಷ್ಣಾ
ಪರಶುರಾಮ ಅವತಾರದಲ್ಲಿ ಕೃಷ್ಣಾ ಕೃಷ್ಣಾ
ನಿಲ್ಲಿಸಿದೆ ಧರ್ಮವನು ಕೃಷ್ಣಾ ಕೃಷ್ಣಾ
ರಾಮಾವತಾರದಲ್ಲಿ ಕೃಷ್ಣಾ ಕೃಷ್ಣಾ
ಸತ್ಯಧರ್ಮ ಸಾರಿದೆ ಕೃಷ್ಣಾ ಕೃಷ್ಣಾ
ಕೃಷ್ಣಾವತಾರದಲ್ಲಿ ಕೃಷ್ಣಾ ಕೃಷ್ಣಾ
ವಿಶ್ವರೂಪ ತೋರಿದೆ ಕೃಷ್ಣಾ ಕೃಷ್ಣಾ
ಕಲಿಯುಗದಲ್ಲಿ ಕೃಷ್ಣಾ ಕೃಷ್ಣಾ
ನಾದಕೆ ಒಲಿಯುವೆ ಕೃಷ್ಣಾ ಕೃಷ್ಣಾ
Leave A Comment