ನವಕಾಶ್ಮೀರಪರಾಗರಾಗರುಚಿರಂ ವಿಧ್ವಸ್ತ ನೀರೇಜಷಂ
ಡವಿಳಾಸಂ ಶಿಶಿರಾಂಬು ಶೀಕರ ತೃಣಶ್ರೀಭಾಸುರಂ ಚಾರು ಕೈ
ರವಹಾರಂ ವರಸಿಂಧುವಾರಮಬಲಾಪೀನಸ್ತನಕ್ಷುಣ್ಣ ಸಾ
ರ ವಿಟೌಘಂ ಗುರುಶೀತಕಾಲವೆಸೆದತ್ತೆತ್ತಂ ಮಹೀಭಾಗದೊಳ್ ೩೩೬

ಅಂತೆಸೆವ ಶಿಶಿರಸಮಯದೊಳ್ ಆತ್ಮಹಿತೋಪದೇಶಾಗ್ರಹವಿಕಳಮಪ್ಪುದೊಂದು ಗೋಲಾಂಗೂಲಂ ಶೀತಕ್ಕಳ್ಳಿ ಸಿಡಿಮಿಡಿಗೊಳುತ್ತಿರ್ದು ಮಿಂಚುಬುೞುವಂ ಕಂಡುಮಿದು ಕೆಂಡುಮೆಂದು ಬUದದಱ ಮೇಲೆ ಪುಲ್ಲಂ ಪುಳ್ಳಿಯುಮನಿಕ್ಕಿ ಮೊಕ್ಕಳಮೂದುವುದುಂ ಸೂಚೀಮುಖನೆಂಬ ಪಕ್ಕಿ ಕಂಡು ಸಮೀಪಕ್ಕೆ ಬಂದೆಲೆ ಬಲೀಮುಖಾ! ನಿನ್ನ ಮೊಗಮುಂ ತಲೆಯುಂ ಬಾತುಪೋದಪುದು ಕಿಚ್ಚಲ್ಲ ಮಿಂಚುಂಬುೞು ನೀನಿದನೂದಿ ದೆಸೆಗೆಡಬೇಡೆಂದು ಪಿರಿದುಂ ಪೊೞ್ತು ಬಾರಿಸುತಿರ್ಪುದುಮದಱ ಪೆಂಡತಿಯೆಂದಳೆಲೆ ಮರುಳೆ ! ನೀನೀ ಮರ್ಕಟಂಗೆ ಬುದ್ಧಿಯಂ ಪೇೞ*ಲ್ವೇಡೇಕೆಂದೊಡೆನ್ನ ಕೆಳೆಯಪ್ಪ ಸೂಚೀಮುಖಿಯುಮೊಂದು ಮರ್ಕಟಂ ಮೞಗಳ್ಕಿ ಕಳವಳಿಸುತ್ತಿರೆ ಕರುಣಿಸಿಯೆಂತೆಂದಳ್:

ಶ್ಲೋ|| ದ್ವಿಹಸ್ತೋ*ಸ್ತಿ ದ್ವಿಪಾದೋ*ಸ್ತಿ ದೃಶ್ಯತೇ ಪುರುಷಾಕೃತಿಃ
ಶೀತವಾತಪರಿಭ್ರಷ್ಟೋ ನಿಲಯಂ ನ ಕರೋತಿ ಕಿಂ  ||೧೬೬||

ಸಂದೇಹವಿಲ್ಲ. ಅಲ್ಲದೆ ವಾ|| ಶ್ರೇಯಸ್ಸನ್ನು ಮೂರ್ಖನಿಗೆ ಹೇಳಬಾರದು ಎಂಬ ಕಥೆಗೆ ನಾನು ಉದಾಹರಣೆಯಾದೆನು ಎನ್ನಲು ಅರಿಮರ್ದನನು ಅದೇನು ಎಂದು ವಿಚಾರಿಸಲು ಚಿರಂಜೀವಿ ಹೀಗೆಂದನು : ೩೩೬. ಕೇಸರಿಯ ಪರಾಗದ ಬಣ್ಣದಿಂದ ಮನೋಹರವಾಗಿಯೂ ಕಮಲಸಮೂಹದ ವೈಭವವನ್ನು ಹೋಗಲಾಡಿಸಿಯೂ ಇಬ್ಬನಿಗಳಿಂದ ಕೂಡಿದ ಹುಲ್ಲಿನ ಕಾಂತಿಯಿಂದಲೂ ಸುಂದರವಾದ ನೈದಿಲೆಗಳ ಹಾರದಿಂದಲೂ ಶ್ರೇಷ್ಠವಾದ ಚಿಕ್ಕ ಮರಗಳಿಂದಲೂ ಅಬಲೆಯರ ಪೀನಸ್ತನಗಳನ್ನು ಒತ್ತಿ ಆಲಂಗಿಸಿ ಸುಖಿಸುವ ವಿಟಸಮೂಹದಿಂದಲೂ ಎಲ್ಲೆಲ್ಲೂ ಚಳಿಗಾಲವು ಸೊಗಯಿಸಿತು. ವ|| ಆ ಶಿಶಿರಸಮಯದಲ್ಲಿ ಆತ್ಮ ಹಿತೋಪದೇಶಾಗ್ರಹ ವಿಕಳವಾದ ಒಂದು ಗೋಲಾಂಗೂಲವು ಶೀತಕ್ಕೆ ಅಂಜಿ ಸಿಡಿಮಿಡಿಗೊಳ್ಳುತ್ತಿದ್ದು ಮಿಂಚುಹುಳವನ್ನು ಕಂಡು ಇದು ಕೆಂಡವೆಂದು ಬಗೆದು ಅದರ ಮೇಲೆ ಹುಲ್ಲನ್ನೂ ಕಟ್ಟಿಗೆಗಳನ್ನೂ ಹಾಕಿ ಒಂದೇ ಸಮನೆ ಉರುಹಲು ಸೂಚೀಮುಖನೆಂಬ ಹಕ್ಕಿ ಕಂಡು ಸಮೀಪಕ್ಕೇ ಬಂದು ಎಲೈ ಬಲೀಮುಖ! ನಿನ್ನ ತಲೆಯೂ ಮುಖವೂ ಬಾತುಹೋಗುವುವು; ಅದು ಕಿಚ್ಚಲ್ಲ; ಮಿಂಚುಹುಳು. ನೀನು ಇದನ್ನು ಉರುಹಿದೆಸೆಗೆಡಬೇಡ ಎಂದು ತುಂಬ ಹೊತ್ತಿನಿಂದ ನಿವಾರಿಸಲು ಪ್ರಯತ್ನಿಸುತ್ತಿರುವುದನ್ನು ಕಂಡು ಅದರ ಹೆಂಡತಿ ಹೀಗೆಂದಳು : ಎಲೈ ಮರುಳೇ! ನೀನು ಈ ಮರ್ಕಟನಿಗೆ ಬುದ್ಧಿಯನ್ನು ಹೇಳಬೇಡ; ನನ್ನ ಗೆಳತಿಯಾದ ಸೂಚೀಮುಖಿಯೂ ಒಂದು ಮರ್ಕಟವು ಮಳೆಗೆ ಅಂಜಿ

ಟೀ|| ಎರಡು ಕೈಯೆರಡು ಕಾಲ್ಗಳುಂಟು. ಪುರುಷಾಕಾರಂ ಕಾಣಬರುತ್ತಿದೆ. ಚಳಿಗಾಳಿಯಿಂ ಸಿಡಿಮಿಡಿಗೊಳುತಿರ್ದು ಮನೆಯನೇಕೆ ಮಾಡದು? ಎಚಿದು ಪಲವುಂ ಸೂಳ್  ಬುದ್ದಿಯಂ ಪೇೞುತಿರ್ಪುದುಮಾ ಕಪಿ ಕುಪಿತನಾಗಿ,

ಶ್ಲೋ|| ಸೂಚೀಮುಖೀ ದುರಾಚಾರೇ ಮೂರ್ಖೇ ಪಂಡಿತಮಾನಿನೀ
ಅಸಮರ್ಥೋ ಗೃಹಾರಂಭೇ ಸಮರ್ಥೋ ಗೃಹಭಂಜನೇ ||೧೬೭||

ಟೀ|| ಎಲೆ ದುರಾಚಾರೆಯಹ ಮೂರ್ಖೆಯಹ ಪಂಡಿತಸ್ತ್ರೀಯಹ ಸೂಚೀಮುಖಿ ಸಮರ್ಥನಲ್ಲದೆಯಿರ್ದಾತಂ ಮನೆಯ ಮಾಡುವನು; ಸಮರ್ಥನಾಗಿರ್ದಾತಂ ಮುಱ*ದು ಬಿಸುಡುವನು. ಎಂದಾ ಪಕ್ಕಿಯ ಗೂಡಂ ಕೋಡಂ ಮುಱ*ದೀಡಾಡಿತ್ತು. ಅದಱ*ಂ ನಿನಗಿದಱ ತೋಟಿ ಬೇಡ ಎಂತುಂ, ವಾಕ್ಯಂ || ಅವಿನೀತ ನರಾಣಾಂ ಹಿತವಾಕ್ಯಂ ನ ಭಾಷಯೇತ್ ||ಟೀ|| ಅವಿನೀತರಾದ ಮನುಷ್ಯರ್ಗೆ ಹಿತವಂ ಪೇೞಲಾಗದು ಎಂಬುದು ನೀತಿಯುಂಟೆಂದಾ ಪಕ್ಕಿಯ ಪೆಂಡತಿ ನಾಡೆಯುಂ ಪೇೞ* ಮಾಣದೆ ಸೂಚೀಮುಖಂ ಶಾಖಾಚರನನತ್ಯಾಗ್ರಹದಿಂ ಬಾರಿಸೆ ಕೋಪಗ್ರಸ್ತನಾಗಿ ಕಲೂಷ ಕಂಪಿತಕಟಂ ಮರ್ಕಟನಾ ಪಕ್ಕಿಯಂ ಪಿಡಿದು ಕೊಂದಿಕ್ಕಿತ್ತು. ಅದಱ*ಂ,

ಶ್ಲೋ|| ಶ್ರೇಯೋ ಮೂರ್ಖನ್ಯ ನ ಬ್ರೂಯಾತ್ ಸಹವಾಸಂ ಚ ವರ್ಜಯೇತ್
ಪಶ್ಯ ವಾನರಮೂರ್ಖೇನ ವನೇ ಸೂಚೀಮುಖೋ ಹತಃ  ||೧೬೮||

ಟೀ|| ಮೂರ್ಖಂಗೆ ಹಿತವಂ ನುಡಿಯಲಾಗದು; ಆತನ ಕೂಡೆಯುಮಿರಲಾಗದು. ಅದೆಂತನೆ: ವಾನರ ಮೂರ್ಖಂಗೆಬುದ್ಧಿಯಂ ಪೇೞದ ಸೂಚೀಮುಖಂ ವನದಲ್ಲಿ ಕೊಲಲ್ಪಟ್ಟಿತು. ಅಂತುಮಲ್ಲದೆಯುಂ,

ಶ್ಲೋ|| ಶಕ್ಯೋ ವಾರಯಿತುಂ ಜಲೇನ ದಹನಚತ್ರೇಣ ಸೂರ‍್ಯಪ್ರಭಾ ವ್ಯಾರ್ವೈದ್ಯಕೃತೌಷಧೇನ ವಿವಿಧೈರ್ಮಂತ್ರಪ್ರಯೋಗೈರ್ವಿಷಂ  ||

ನಾಗೇಂದ್ರೋ ನಿಶಿತಾಂಕುಶೇನ ಸಮದೋ ದಂಡೇನ ಗೋಗರ್ದಭೋ
ಸರ‍್ವಸ್ಯೌಷಧಮಸ್ತಿ ಶಾಸ್ತ್ರವಿಹಿತಂ ಮೂರ್ಖಸ್ಯ ನಾಸ್ತೌಷಧಂ ||೧೬೯||

ಕಳವಳಿಸುತ್ತಿರಲು ಕರುಣಿಸಿ ಹೀಗೆಂದಳು : ಶ್ಲೋ|| ಎರಡು ಕೈ ಎರಡು ಕಾಲಗಳುಂಟು; ಪುರುಷಾಕಾರ ಕಾಣಬರುತ್ತಿದೆ ; ಚಳಿಗಾಳಿಯಿಂದ ಸಿಡಿಮಿಡಿಗೊಂಡರೂ ಮನೆಯನ್ನೇಕೆ ಮಾಡುವುದಿಲ್ಲ ಎಂದು ಹಲವು ಬಾರಿ ಬುದ್ದಿ ಹೇಳುತ್ತಿರಲು ಆ ಕಪಿ ಕುಪಿತನಾಗಿ ಶ್ಲೋ|| ಎಲೈ, ದುರಾಚಾರೆಯೂ ಮೂರ್ಖೆಯೂ ಪ೦ಡಿತೆಯೂ ಆದ ಸೂಚೀಮುಖೀ! ಸಮರ್ಥನಲ್ಲದವನು ಮನೆಯನ್ನು ಮಾಡುವನು; ಸಮರ್ಥನಾದವನು ಮುರಿದು ಬಿಸಾಡುವನು ಎಂದು ಆ ಹಕ್ಕಿಯ ಗೂಡನ್ನೂ ಕೊಂಬೆಯನ್ನೂ ಮುರಿದು ಬಿಸಾಡಿತು. ಅದರಿಂದ ನಿನಗೆ ಇದರ ಚಿಂತೆ ಬೇಕಾಗಿಲ್ಲ. ಹೇಗೂ ವಾ|| ಅವಿನೀತರಾದ ಮನುಷ್ಯರಿಗೆ ಹಿತವನ್ನು ಹೇಳಬಾರದು ಎಂಬ ನೀತಿಯುಂಟು. ಹೀಗೆ ಆ ಹಕ್ಕಿಯ ಹೆಂಡತಿ ಚೆನ್ನಾಗಿ ಹೇಳಲು ಸೂಚೀಮುಖ ಅದನ್ನು ಕೇಳದೆ ಶಾಖಾಚರನನ್ನು ಅತ್ಯಾಗ್ರಹದಿಂದ ಆಕ್ಷೇಪಿಸಲು ಕೋಪಗ್ರಹಗ್ರಸ್ತನಾಗಿ ಕಲುಷಕಂಪಿತಕಟನಾದ ಮರ್ಕಟನು ಆ ಹಕ್ಕಿಯನ್ನು ಹಿಡಿದು ಕೊಂದುಹಾಕಿತು. ಅದರಿಂದ, ಶ್ಲೋ|| ಮೂರ್ಖನಿಗೆ ಹಿತವನ್ನು ನುಡಿಯಬಾರದು. ಆತನ ಸಂಗದಲ್ಲಿಯೂ ಇರಬಾರದು; ವಾನರ ಮೂರ್ಖನಿಗೆ ಬುದ್ಧಿಯನ್ನು ಹೇಳಿದ ಸೂಚೀಮುಖನು ವನದಲ್ಲಿ ಸತ್ತುಹೋಯಿತು. ಅಲ್ಲದೆ, ಉದಕದಿಂದ ಶ್ಲೋ|| ಅಗ್ನಿಯನ್ನೂ ಕೊಡೆಯಿಂದ ಬಿಸಿಲನ್ನೂ ಔಷಧದಿಂದ ವ್ಯಾಯನ್ನೂ ಮಂತ್ರಪ್ರಯೋಗದಿಂದ ವಿಷವನ್ನೂ

ಟೀ|| ಉದಕದಿಂದಗ್ನಿಯಂ ಸತ್ತಿಗೆಯಿಂ ಬಿಸಿಲಂ ಔಷಧದಿಂ ವ್ಯಾಯಂ ಮಂತ್ರಪ್ರಯೋಗದಿಂ ವಿಷಮಂ ಅಂಕುಸದಿಂದಾನೆಯಂ ದಡಿಯಿಚಿದೆೞ್ತು ಕೞ*ಗಳಂ ನಿಲಿಸಲ್‌ಬಹುದು. ಮತ್ತೆ ಎಲ್ಲವಕ್ಕಂ ಶಾಸ್ತ್ರವಿಹಿತಮಪ್ಪೌಷಧಮುಂಟು. ಮೂರ್ಖಂಗೌಷಧಮಿಲ್ಲ ಎಂಬುದುಂ ಅದೆಲ್ಲಮಂ ಕೇಳ್ದರಿಮರ್ದನಂ ತನ್ನನ್ವಯಾಗತ ಮಂತ್ರಿಗಳಪ್ಪ ರಕ್ತಾಕ್ಷ, ಕ್ರೂರಾಕ್ಷ, ಜಿಂಹಾಕ್ಷ, ದೃಪದಾಕ್ಷರೆಂಬ ನಾಲ್ವರ್ಮುಖ್ಯಮಂತ್ರಿಗಳಂ ಸಮೀಪಕ್ಕೆ ಕರೆದು ಪೇೞ*ಮೀ ಚಿರಂಜೀವಿಗೇಗೆಯಲ್ತಕ್ಕುದೆನೆ ನಯಾಗಮದಕ್ಷಂ ರಕ್ತಾಕ್ಷನಿಂತೆಂದಂ;

ಒಡವೆಯನಿತ್ತುಂ ಸಂತತ
ಮೊಡನುಂಡುಂ ಕೂಸುಗೊಟ್ಟುಮೆಂದುದನೆಂದುಂ
ಕಡುಗೂರ್ತುಮಹಿತಬಲಮಂ
ಕಿಡಿಸುವುದುಚಿತಂ ನೃಪಂಗೆ ಮನುಮುನಿಮತದಿಂ  ೩೩೭

ಅದಲ್ಲದೆಯುಂ ಪೂರ್ವೋಕ್ತಮಿಂತೆಂಬುದಲ್ತೆ :

ಶ್ಲೋ|| ಹೀನಶ್ಶ್‌ತ್ರುರ್ನಿಹಂತವ್ಯೋ ಯಾವನ್ನಬಲವಾನ್ ಭವೇತ್
ಸಂಜಾತಬಲ ಪೌಷ್ಕಲ್ಯಃ ಪಶ್ಚಾದ್ಭವತಿ ದುರ್ಜಯಃ  ||೧೭೦||

ಟೀ|| ಶತ್ರು ದುರ್ಬಲನಾಗಿರ್ದಲ್ಲಿಯೇ ಕಿಡಿಸಲ್ವೇೞ್ಕುಂ ಬಲಾಕನಾದ ಬೞ*ಕ ಕಿಡಿಸಲ್ಬಾರದು. ಅದಱ*ನೀತನಂ ಯಮನಿಕೇತನಕ್ಕಟ್ಟುವುದೇ ನಯಮೆನೆ ಕ್ರೂರಾಕ್ಷನಂ ಕರೆದು ನಿನ್ನಭಿಪ್ರಾಯಮಾವುದು ಪೇೞ*ನೆ ಅವನೀತನಂ ಕೊಲ್ವುದೆ ನೀತಿಯೆನೆ ಜಿಂಹಾಕ್ಷನಂ ಬೆಸಗೊಳಲಾತನಿಂತೆಂದನೀ ಮಂತ್ರಿಗಳ್ ಪೇೞ್ದಂತೆ ಕದನದೊಳಿದಿರ್ಚಿದರಂ ಕೊಂದೊಡೊಂದುಂ ದೋಷಮಿಲ್ಲ, ಅದಲ್ಲದೆಯುಂ,

ಪುತ್ತೇಱ*ದನಂ ಕೈದುವ
ನಿತ್ತನನೇರ್ಪೆತ್ತನಂ ರಣಾಂಗಣದೊಳ್ ಬೆ
ನ್ನಿತ್ತನನಿಱ*ಯರಮೋಘಂ
ಮತ್ತೆನಿಸದೆ ತುೞ*ಲಸಂದ ಜನಮಂ ಜಗದೊಳ್  ೩೩೮

ಆಂಕುಶದಿಂದ ಆನೆಯನ್ನೂ ದೊಣ್ಣೆಯಿಂದ  ಎತ್ತುಕತ್ತುಗಳನ್ನೂ ನಿಲ್ಲಿಸಬಹುದು. ಎಲ್ಲದಕ್ಕೂ ಶಾಸ್ತ್ರಸಮೇತವಾದ ಔಷಧಗಳಿವೆ; ಮೂರ್ಖನಿಗೆ ಔಷಧವೇ ಇಲ್ಲ ಎನ್ನಲು ಅದೆಲ್ಲವನ್ನೂ ಕೇಳಿದ ಅರಿಮರ್ದನನು ತನ್ನ ವಂಶಾನುಗತರಾದಾ ಮಂತ್ರಿಗಳಾದ ರಕ್ಷಾಕ್ಷ, ಕ್ರೂರಾಕ್ಷ, ಜಿಂಹಾಕ್ಷ, ದೃಪದಾಕ್ಷರೆಂಬ ನಾಲ್ವರು ಮುಖ್ಯಮಂತ್ರಿಗಳನ್ನು ಸಮೀಪಕ್ಕೆ ಕರೆದು ಹೇಳಿ ಈ ಚಿರಂಜೀವಿಗೆ ಏನು ಮಾಡತಕ್ಕದು ಎನ್ನಲು  ನೀತಿಶಾಸ್ತ್ರದಕ್ಷನಾದ ರಕ್ಷಾಕ್ಷನು ಹೀಗೆಂದನು: ೩೩೭. ಒಡವೆಗಳನ್ನೂ ಕೊಟ್ಟೂ ಸದಾ ಜತೆಯಲ್ಲಿ ಊಟ ಮಾಡಿಯೂ ಮಗಳನ್ನು ಕೊಟ್ಟೂ ಎಂದುದನ್ನು ಎಂದೂ ಅತ್ಯಂತ ಪ್ರೀತಿಸಿಯೂ ನೃಪನಾದವನು ಅಹಿತಬಲವನ್ನು ಮನುಮುನಿ ಮತಾನುಸಾರವಾಗಿ ನಾಶ ಮಾಡುವುದು ಉಚಿತವಾಗಿದೆ. ವ|| ಅಲ್ಲದೆ ಪೂರ್ವೋಕ್ತ ಹೀಗೆ ಹೇಳುವುದಲ್ಲವೇ: ಶ್ಲೋ|| ಶತ್ರು ದುರ್ಬಲನಾಗಿದ್ದಾಗಲೇ ನಾಶ ಮಾಡಬೇಕು; ಬಲಾಕನಾದ ಬಳಿಕ ನಾಶ ಮಾಡುವುದು ಸಾಧ್ಯವಾಗದು. ಅದರಿಂದ ಈತನನ್ನು ಯಮನಿಕೇತನಕ್ಕೆ ಅಟ್ಟುವುದೇ ನೀತಿ ಎನ್ನಲು ಕ್ರೂರಾಕ್ಷನನ್ನು ಕರೆದು ನಿನ್ನ ಅಭಿಪ್ರಾಯವೇನು ಎಂದು ಹೇಳು ಎನ್ನಲು ಅವನು ಈತನನ್ನು ಕೊಲ್ಲುವುದೇ ನೀತಿ ಎಂದು ಹೇಳಲು ಜಿಂಹಾಕ್ಷನನ್ನು ವಿಚಾರಿಸಲು ಆತನು ಹೀಗೆಂದನು : ಈ ಮಂತ್ರಿಗಳು ಹೇಳಿದಂತೆ ಕದನದಲ್ಲಿ ಎದುರಿಸಿದವರನ್ನು ಕೊಂದರೆ ಸ್ವಲ್ಪವೂ ದೋಷವಿಲ್ಲ. ೩೩೮. ಆದರೆ ಹುತ್ತವನ್ನು ಏರಿದವನನ್ನೂ ನಿರಾಯುಧನಾದವನನ್ನೂ

ಪುಲ್ಲಂ ಕರ್ಚಿದನಂ ತ
ಳ್ವಿಲ್ಲದೆ ಮಱ*ವೊಕ್ಕನಂ ಮಹಾಬ್ರಾಹ್ಮಣನಂ
ಕೊಲ್ಲರ್ ಪಾಪಕ್ಕಂಜುವ
ರೆಲ್ಲಂ ಸ್ತ್ರೀಬಾಲವೃದ್ಧಜನಮಂ ಜಗದೊಳ್  ೩೩೯

ಅದಲ್ಲದೆಯುಂ, ಶ್ರೀರಾಮನಂ ಗುಣಂಗೊಂಡನೆಂಬಿನಿತಱೊಳೆ ರಾವಣಂ ವಿಭೀಷಣನನೆಂತು ಪರಿಹರಿಸಿದನಂತೆ ನಿಮ್ಮಡಿಯ ಗುಣ ಪ್ರಶಂಸೆಗೆಯ್ದನಿತಱೊಳೆ ವಾಯಸಂಗಳಿದರ್ಕಿನಿತ ವಸ್ಥೆಯನೆಯ್ದಿಸಿದುವದಱ*ಂದಿದು ನಮ್ಮ ಕಯ್ಯೊಳ್ ವಧಪ್ರಾಪ್ತನಲ್ಲಮಲ್ಲದೆಯುಂ ಪೂರ್ವೋಕ್ತಮಿಂತೆಂಬುದಲ್ತೆ :

ಶ್ಲೋ|| ಶ್ರೂಯತೇ ಹಿ ಕಪೋತೇನ ಶತ್ರುಶ್ಶರಣಾಗತಃ  ||೧೭೧||

ಎಂಬ ಕಥೆಯಂ ಕೇಳ್ದಱ*ಯಿರೆಂದೊಡರಿಮರ್ದನನದೆಂತೆನೆ ನಯಶಾಸ್ತ್ರದಕ್ಷಂ ಜಿಂಹಾಕ್ಷಂ ಪೇೞ್ಗುಂ :