ಒರ್ವ ಶಬರ ಶಿಬಿರಾನಾಯಕಂ ಬೇಂಟೆವೋಗಿ ಪಕ್ಕಿಗಳನೆಲ್ಲಿಯುಂ ಪಡೆಯದೆ ಅಡವಿಯೊಳಿರ್ಪನ್ನೆಗಮಕಾಲಜಲಧರನಿರ್ಮುಕ್ತ ಘೋರಾಂಬುಧಾರಾಪಾತದಿಂ ನಾಂದತಿಪ್ರಚಂಡ ಪವನಹತಿಯಿಂದಾಕಂಪಿತಶರೀರನಾಗಿ ಬರುತ್ತುಂ,

ವಿವಿಧ ಪ್ರಕಾಶಾಖಾ
ನಿವಹಮನುದ್ಯದ್ವಿಚಿತ್ರ ಪತ್ರಮನುದ್ದಾ
ಮ ವಟಕ್ಷಮಾಜಮಂ ಶಬ
ರವಲ್ಲಭಂ ಮೆಲ್ಲ ಮೆಲ್ಲನೆಯ್ದಿದನಾಗಳ್  ೩೪೦

ಗಾಯಗೊಂಡವನನ್ನೂ ರಣಾಂಗಣದಲ್ಲಿ ಬೆನ್ನುಗೊಟ್ಟು ಓಡುವವನನ್ನೂ ಭೃತ್ಯವರ್ಗವನ್ನು ಇರಿಯಬಾರದು. ೩೩೯. ಹುಲ್ಲನ್ನು ಕಚ್ಚಿದವನನ್ನೂ ಶರಣಾಗತನಾದವನನ್ನೂ ಮಹಾಬ್ರಾಹ್ಮಣನನ್ನೂ ಸ್ತ್ರೀಬಾಲವೃದ್ಧ ಜನರನ್ನೂ ಲೋಕದಲ್ಲಿ ಪಾಪಕ್ಕಂಜುವರೆಲ್ಲ ಕೊಲ್ಲರು. ವ|| ಅಲ್ಲದೆ ಶ್ರೀರಾಮನನ್ನು ಗುಣಾನ್ವಿತನೆಂದ ಮಾತ್ರಕ್ಕೆ ರಾವಣನು ವಿಭೀಷಣನನ್ನು ಹೇಗೆ ಪರಿಹರಿಸಿದನೋ ಹಾಗೆ ನಿಮ್ಮನ್ನು ಪ್ರಶಂಸಿಸಿದನೆಂದ ಮಾತ್ರಕ್ಕೆ ವಾಯಸಗಳು ಇದಕ್ಕೆ ಈ ಅವಸ್ಥೆಯನ್ನುಂಟುಮಾಡಿದುವು. ಅದರಿಂದ ಇದು ನಮ್ಮ ಕೈಯಿಂದ ವಧಪ್ರಾಪ್ತನಲ್ಲ ; ಅಲ್ಲದೆ ಪೂರ್ವೋಕ್ತ ಹೀಗಿರುವದಲ್ಲವೇ: ಶ್ಲೋ|| ಶ್ರೂಯತೇ ಹಿ ಕಪೋತೇನ ಶತ್ರುಶ್ಶರಣಮಾಗತಃ ಎಂಬ ಕಥೆಯನ್ನು ನೀವು ಕೇಳಿಲ್ಲ ಎನ್ನಲು ಅರಿಮರ್ದನನು ಅದೇನು ಎಂದು ಕೇಳಲು ನೀತಿಶಾಸ್ತ್ರ ದಕ್ಷನಾದ ಜಿಂಹಾಕ್ಷನು ಹೇಳುವನು: ವ|| ಒಬ್ಬ ಶಬರಶಿಬಿರಾನಾಯಕನು ಬೇಟೆಗೆ ಹೋಗಿ ಹಕ್ಕಿಗಳನ್ನು ಎಲ್ಲಿಯೂ ಪಡೆಯಲಾರದೆ ಕಾಡಿನಲ್ಲಿರಲು ಅಷ್ಟರಲ್ಲಿ ಅಕಾಲಜಲಧರನಿರ್ಮುಕ್ತ ಘೋರಾಂಬುಧಾರಾಪಾತದಿಂದ ತೊಯ್ದು ಅತಿಪ್ರಚಂಡಪವನಹತಿಯಿಂದ ಅಕಂಪಿತಶರೀರನಾಗಿ ೩೪೦. ಒಂದು ಆಲದ

ಅಂತೆಯ್ದಿವಂದು ಬೆಱ*ತು ಬಿಬ್ಬೆಱಗಾದ ಕಯ್ಯಂ ಕಾಲುಮನುಡುಗಿ ಕುನುಂಗಿ ಕುಳ್ಳಿರ್ದ ಕಿರಾತನನಾ ಮರದೊಳಿರ್ಪ ಕಪೋತಶಿಖಾಮಣಿ  ಕಂಡು ಕರುಣರಸಾರ್ದಹೃದಯನಾಗಿ ಸಮೀಪದೊಳಿರ್ದ ತಾಪಸಾಶ್ರಮಕ್ಕೆ ಪೋಗಿ ಚಂಚೂಪುಟದಿನೊಂದು ಕೊಳ್ಳಿಯಂ ಕರ್ಚಿ ತಂದು ಪುಳಿಂದನ ಮುಂದಿಟ್ಟು ಪುಲ್ಲಂ ಪುಳ್ಳಿಯುಮಂ ತಂದಿಕ್ಕಿ ಕಿಚ್ಚನುರಿಪೆ ಸರ್ವಾಂಗಮಂ ಕಾಸಿಕೊಂಡು ಸಚೇತನನಾಗಿ ಬಾಹ್ಯಾಂತರಾಗ್ನಿಗಳೊಡಲನೊಡನೊಡನೆ ಸುಡೆ ಸೈರಿಸಲಾಱದಿಂತೆಂದಂ: ಎನಗಿನಿತುಮುಪಚಾರಂಗೆಯ್ದ ದೈವವೇ! ನೀನೆನ್ನ ಕ್ಷುದ್ಭಾಧೆಯಂ ಮಾಣಿಸಿ ಪ್ರಾಣಮಂ ರಕ್ಷಿಸಲ್ವೇೞ್ಕುಮೆನೆ ಕಪೋತಾರಾಜನಿನ್ನೇಗೆಯ್ವೆನೆಂದು,

ಅನಿಮಿತ್ತಂ ಗರುಡಂಗೆ ತನ್ನಸುವನಿತ್ತಂತಾದಿ ಜೀಮೂತವಾ-
ಹನ ವಿದ್ಯಾಧರಚಕ್ರವರ್ತಿತಿಳಕಂ ಶೀಲೀಲನಂ ಶಂಖಚೂ-
ಡನನುತ್ಸಾಹದೆ ಕಾದು ನಾಗನಿವಹಕ್ಕಾನಂದಮಂ ಮಾಡಿ ಜೀ-
ಯೆನೆ ವಾರಾಶಿಪರೀತಧಾತ್ರಿ ತಳೆದಂ ಲೋಕೋತ್ತರಂ ಕೀರ್ತಿಯಂ ೩೪೧

ಅದಱ*ಂದೀ ಶರೀರಂ ಪರೋಪಕಾರಾರ್ಥಮಾಗಲ್ವೇೞ್ಕುಮೀತನುಂ ಪ್ರಾರ್ಥಿಸಿದನೆನಗಂ ಪೆಱತುಪಾಯಮಿಲ್ಲಮೀ ಶಬರಂಗೆನ್ನ ಶರೀರಮನೆ ಕುಡುವೆನೆಂದು ಕಪೋತಕುಲೋತ್ತಮಂ ಪರೋಪಕಾರಾರ್ಥಕ್ಕೆ ಚಿತ್ತಮಂ ಕೈಕೊಂಡು,

ದಶಮುಖನ ರೌದ್ರಕೋಪಾ-
ಗ್ನಿಶಿಖಾಳಿಗಿದಿರ್ಚಿದಾ ಜಟಾಯುವ ತೆಱದಿಂ
ವಿಶದಮತಿ ವಿಸುರದ್ದಹ-
ನಶಿಖಾಳಿಗಿದಿರ್ಚಿದಂ ಕಪೋತಾಶಂ  ೩೪೨

ಮರದ ಸಮೀಪಕ್ಕೆ ಬಂದನು. ವ|| ಹಾಗೆ ಆಯಾಸಗೊಂಡ ಕೈಯನ್ನೂ ಕಾಲನ್ನೂ ಮಡಚಿ ಕುಳಿತುಕೊಂಡ ಕಿರಾತನನ್ನು ಆ ಮರದಲ್ಲಿದ್ದ ಕಪೋತಶಿಖಾಮಣಿ ಕಂಡು ಕರುಣರಸಾರ್ದ್ರಹೃದಯನಾಗಿ ಸಮೀಪದಲ್ಲಿದ್ದ ತಾಪಸಾಶ್ರಮಕ್ಕೆ ಕೂಡಲೇ ಹೋಗಿ ಚಂಚೂಪುಟದಿಂದ ಒಂದು ಕೊಳ್ಳಿಯನ್ನು ಕಚ್ಚಿಕೊಂಡು ಬಂದು ಬೇಡನ ಮುಂದೆ ಇಟ್ಟು ಹುಲ್ಲನ್ನೂ ಕಟ್ಟಿಗೆಯನ್ನು ತಂದು ಹಾಕಿ ಕಿಚ್ಚನ್ನು ಉರುಹಲು ಅವನು ಸರ್ವಾಂಗವನ್ನೂ ಕಾಯಿಸಿಕೊಂಡು ಸಚೇತನನಾಗಿ ಬಾಹ್ಯಾಂತರಾಗ್ನಿಗಳು ಒಡಲನ್ನು ಒಟ್ಟೊಟ್ಟಿಗೆ ಸುಡಲು ಸಹಿಸಲಾರದೆ ಹೀಗೆಂದನು : ನನಗೆ ಇಷ್ಟು ಉಪಕಾರ ಮಾಡಿದ ದೇವರೇ ! ನೀನು ನನ್ನ ಹಸಿವೆಯನ್ನು ನಿವಾರಿಸಿ ಪ್ರಾಣವನ್ನು ರಕ್ಷಿಸಬೇಕು ಎನ್ನಲು ಕಪೋತಾರಾಜನು ಇನ್ನೇನು ಮಾಡಲಿ ಎಂದು ೩೪೧. ಅನಿಮಿತ್ತವಾಗಿ ಗರುಡನಿಗೆ ತನ್ನ ಅಸುವನ್ನು ಇತ್ತು ಆ ಜೀಮೂತವಾಹನ ವಿದ್ಯಾಧರ ಚಕ್ರವರ್ತಿ ತಿಲಕನು ಶಂಖಚೂಡನನ್ನು ಸಂತೋಷದಿಂದ ಕಾಪಾಡಿ ನಾಗಗಳಿಗೆ ಆನಂದವನ್ನು ಮಾಡಿ ವಾರಾಶಿಪರೀತ ಧಾತ್ರಿಯವರೆಗೆ ಕೀರ್ತಿಯನ್ನು ಪಡೆದನು. ವ|| ಅದರಿಂದ ಈ ಶರೀರವಿರುವುದು ಪರೋಪಕಾರಕ್ಕಾಗಿ ; ಈತನು ಪ್ರಾರ್ಥಸಿದನು; ನನಗೂ ಬೇರೆ ಉಪಾಯವಿಲ್ಲ ; ಈ ಶಬರನಿಗೆ ನನ್ನ ಶರೀರವನ್ನೇ ಅರ್ಪಿಸುವೆನು ಎಂದು ಆ ಕಪೋತ ಕುಲೋತ್ತಮನು ಪರೋಪಕಾರವನ್ನು ದೃಢವಾಗಿ ನಿರ್ಧರಿಸಿ ೩೪೨. ದಶಶಿರನ ರೌದ್ರಕೋಪಾಗ್ನಿಶಿಖಾಳಿಯನ್ನು ಎದುರಿಸಿದ ಆ

ಅಂತಾ ಕಿರ್ಚಿನೊಳ್ ಪಾಯ್ದು ಸತ್ತ ಕಪೋತನಂ ಕಂಡು ಕಿರಾತಂ ತನ್ನುದರದಹನ ತಾಪಶಮನಮಂ ಮಾಡಿದಂ, ಅದಱ*ಂ,

ಶ್ಲೋ|| ಶ್ರೂಯತೇ ಹಿ ಕಪೋತೇನ ಶತ್ರುಶ್ಶರಣಮಾಗತಃ
ಜೀಮೂತೇನ ಯಥಾನ್ಯಾಯಂ ಸ್ವಮಾಂಸೈರಪಿ ತರ್ಪಿತಃ||೧೭೨||

ಟೀ|| ಮಱ*ಹೊಕ್ಕ ಶತ್ರುವಂ ಕಪೋತಂ ಸ್ವಶರೀರಮಾಂಸದಿಂದಲೇ ಆರಾಸಿತು. ಅದಹಗೆಂದೊಡೆ ಜೀಮೂತವಾಹನಂ ಸ್ವಮಾಂಸದಿಂ ಗರುಡನನಾರಾಸಿದಹಗೆ.

ಅಂತು ಕಪೋತಂ ಶರಣಾಗತನೆಂಬನಿತಱೊಳೆ ಕಿರಾತಂಗೆ ಮೊದಲಾಗಿ ತನ್ನಸುವನಿತ್ತುದು. ಈತನುಂ ನಿಮ್ಮಡಿಯ ಗುಣಕೀರ್ತನಮೆ ಕಾರಣಮಾಗಿ ಕಾಗೆಯ ಕಯ್ಯೊಳ್ ಪರಾಭವಂಬೆತ್ತ ನಂತುಮಲ್ಲದೆ ತನ್ನಾಳ್ದನ ದೆಸೆಯೊಳ್ ಭೀತನುಮಪಮಾನಿತನುಮಾಗಿರ್ದನದಱ*ಂದೀತನಂ ಕಾವುದೆ ನೀತಿಯುಂ ಧರ್ಮಮುಮೆಂಬುದುಂ ಕೇಳ್ದರಿಮರ್ದನಂ ದೃಪದಾಕ್ಷನೆಂಬ ಮಂತ್ರಿಯ ಮೊಗಮಂ ನೋಡಿ ನಿಮ್ಮ ಕಂಡ ನಯಮಾವುದು ಪೇೞ*ಮೆನಲಾತನಿಂತೆಂದಂ: ಜಿಂಹಾಕ್ಷನೆಂದಂತೀ ವಾಯಸಂ ವಧಪ್ರಾಪ್ತನಲ್ಲನದಲ್ಲದೆಯುಂ,

ಶ್ಲೋ|| ಶತ್ರೋರಪಿ ಹಿತಂ ಶೇಯೋ ವಿವದೇತೇ ಪರಸ್ಪರಂ ||೧೭೩||
ಎಂಬುದೊಂದು ಕಥೆಯುಂಟೆನೆ ಕೌಶಿಕಾಶ್ವರನದೆಂತೆನೆ ದೃಪದಾಕ್ಷಂ ಪೇೞ್ಗುಂ :