ಶ್ರೀಸುದತಿಗಮಖಿಳಧರಾ
ಶ್ರೀಸುದತಿಗಮಪನಪ್ಪ ಬಗೆಯುಳ್ಳೊಡೆ ವಿ
ಶ್ವಾಸಮೆನೆ ಮಾಡಿ ವಸುಧಾ
ಶಂ ಗೆಲ್ಗಹಿತಜನಮನನುನಯದಿಂದಂ  ೨೬೯

ಅದರಂ ವಾಕ್ರೀಲೀಲಾ
ಸದನಂ ವಿಶ್ವಾಸಮೆಂಬ ತಂತ್ರಮನಸುಹೃ-
ನ್ಮದಹರಮಂ ಪೇಳ್ಗುಂ ಸುಕ
ವಿ ದುರ್ಗಸಿಂಹನು ನಯಾಗಮಜ್ಞರ ಮತದಿಂ  ೨೭೦

ಶ್ಲೋ|| ನ ವಿಶ್ವಸೇತ್ ಪೂರ‍್ವ ವಿರೋತಸ್ಯ ಶತ್ರೋರ್ಹಿ ಮಿತ್ರತ್ವಮುಪಾಗತಸ್ಯ
ದಗ್ಧಾಂ ಗುಹಾಂ ಉಲೂಕ ಪೂರ್ಣಾಂ ಕಾಕಪ್ರಣೀತೇನಹುತಾಶನೇನ   ||೧೪೧||

ಟೀ|| ಪೂರ್ವದಲ್ಲಿ ವಿರೋಧವಂ ಮಾಡಿದಂತಪ್ಪ ಶತ್ರುವನು ವಿಶ್ವಸಿಸಲಾಗದು. ಅದು ಹೇಗೆಂದೊಡೆ ಗೂಗೆಗಳ್ ತುಂಬಿರ್ದ ಗುಹೆಯನು ಕಾಗೆಗಳ್ ಸುಟ್ಟವಪ್ಪುದೆ ಕಾರಣಮಾಗಿ ಈ ಕಥಾಪ್ರಪಂಚಮೆಂತೆಂದೊಡೆ:

೨೬೯: ಐಶ್ವರ್ಯಕ್ಕೂ ರಾಜ್ಯಕ್ಕೂ ಅಪತಿಯಾಗಬೇಕೆಂಬ ಅಪೇಕ್ಷೆಯಿದ್ದಲ್ಲಿ ವ್ಶೆರಿಗಳನ್ನು ವಿಶ್ವಾಸದಿಮದ ನೋಡಿ ಗೆಲ್ಲತಕ್ಕದು. ೨೭೦. ಅದರಿಂದ ದುರ್ಗಸಿಂಹನೆಂಬ ಕವಿ ವೈರಿಗಳ ಸೊಕ್ಕನ್ನು ಮುರಿಯುವ ವಿಶ್ವಸವೆಂಬ ತಂತ್ರವನ್ನು ನೀತಿಶಾಸ್ತ್ರವಿದರ ಅಭಿಮತದಿಂದ ಹೇಲುವನು: ಶ್ಲೋ || ಪೂವದಲ್ಲಿ ವಿರೋಧವನ್ನು ಮಾಡಿದಂಥ ಶತ್ರವನ್ನು ವಿಶ್ವಾಸಿಸಬಾರದು.  ಗೂಗೆಗಳು ತುಂಬಿದ್ದ ಗುಹೆಯನ್ನು ಕಾಗೆಗಳು ಸುಟ್ಟು ಬಿಡಲಿಲ್ಲವೆ?