ರಿಪುವಂ ಗೆಲ್ವುದುಪಾಯಪೂರ್ವ ನಯದಿಂ ವಿಶ್ವಾಸದಿಂ ಸತ್ಸುಹೃ-
ದ್ಯುಪಚಾಪಕ್ರಿಯೆಯಿಂ ರಹಸ್ಯವಿಷಶಸ್ತ್ರಾಗ್ನಿಪ್ರಯೋಗಂಗಳಿಂ
ಕಪಟೋದ್ಯೋಗದಿನಾವಗಂ ಬಹುಮಹಾದೋಷಾವಹಂ ತಂತ್ರಬಂ-
ಧುಪರಿಧ್ವಂಸನಮಂತುಮಲ್ಲಿ ವಿಜಯಂ ಸಂದೇಹಮಿಂದ್ರಾದಿಗಂ ೩೬೯

ಅದು ಕಾರಣದಿಂ ತಾಂ ಕಾ-
ದದೆ ರಿಪುವಂ ಗೆಲ್ವುದಖಿಳನಯಕೋವಿದನ-
ಭ್ಯುದಯಾರ್ಥಿಯಪ್ಪ ಪಾರ್ಥಿವ-
ನುದಗ್ರಬಲನಿಕರಪೂರ್ಣನಾದೊಡಮೆಂದುಂ  ೩೭೦

ಅದೆಂತೆನೆ : ಬಲಿಯಂ ವಾಮನನಿಂದ್ರಂ
ಬಲನಂ ಚಾಣಕ್ಯನಕನಂದನಮಹೀಭೃ-
ತ್ಕುಲಮಂ ಗೆಲ್ದಂತರಿನೃಪ-
ಬಲಮನುಪಾಯದೊಳೆ ಗೆಲ್ವುದುತ್ತಮಪಕ್ಷಂ  ೩೭೧

ಅದಱ*ಂ ರಿಪುಗಪಾಯಮಂ ಮಾಡುವುಪಾಯಮೆನಿತುಮೊಳವವಂತಿರ್ಕೆ ನಮಗರಿಯಾಗಿರ್ದರಿಮರ್ದನನಂ ತತ್ಪರಿವಾರಮನೊಂದೆ ಕೊಳ್ಳಿಯೊಳಿಂದೆ ಸುಟ್ಟಪೆಂ ಸುಮ್ಮನಿರದಲ್ಲಿಗೆ ತಕ್ಕ ಸಾಧನೋಪಾಯಂಗಳಂ ಬೇಗಂ ತರಿಸಿಮೆನೆ ಮೇಘವರ್ಣನಂತೆಗೆಯ್ವೆನೆಂದು ಪಡೆವಳರಂ ಕರೆದು ಪೇಱ*ಲೊಡಮವಂದಿರ್ ಪೂಗಿ ಕೌಶಿಕಾಶ್ವರನ ಪುರಮನುರಿಪಲ್ ತಕ್ಕುವೆಲ್ಲಮಂ ಕೊಂಡು ತಡೆಯದಂಜನಗಿರಿಗೆ ನಡೆಯಿಮೆಂದು ಕಾಕನಿಕರಕ್ಕೆಲ್ಲಂ ಸಾಱುವುದುಂ,

ಆಪ್ತೋತ್ತಮನಾದ ನೀನು ಹೇಳು ಎನ್ನಲು ಸಚಿವನು ಹೀಗೆಂದನು : ೩೬೯. ವ್ಶೆರಿಯನ್ನು ಉಪಾಯಪೂರ್ವಕವಾಗಿಯೂ ನೀತಿಯಿಂದಲೂ ವಿಶ್ವಾಸದಿಂದಲೂ ಸ್ನೇಹಿತನಾಗಿಯೂ ರಹಸ್ಯ ವಿಷಶಸ್ತ್ರಾಗ್ನಿ ಪ್ರಯೋಗಗಳಿಂದಲೂ ಕಪಟೋದ್ಯೋಗದಿಂದಲೂ ಗೆಲ್ಲಬೇಕು. ಅದರಿಂದ ಅಖಿಲನೀತಿಜ್ಞನಾದ ೩೭೦. ಅಭ್ಯುದಯಾರ್ಥಿಯಾದ ಕ್ಷತ್ರಿಯನು ಉದಗ್ರಬಲ ಪೂರ್ಣನಾಗಿದ್ದರೂ ಕಾದಾಡುವ ರಿಪುವನ್ನು ಗೆಲ್ಲಬೇಕು. ೩೭೧. ಬಲಿಚಕ್ರವರ್ತಿಯನ್ನು ವಾಮನನೂ ಇಂದ್ರನು ಬಲನನ್ನೂ ಚಾಣಕ್ಯನು ನವನಂದರನ್ನೂ ಗೆದ್ದಂತೆ ಅರಿನೃಪ ಬಲವನ್ನು ಉಪಾಯದಿಂದ ಗೆಲ್ಲುವುದು ಯಾವಾಗಲೂ ಉತ್ತಮವಾದುದು. ವ|| ಅದರಿಂದ ರಿಪುವಿಗೆ ಅಪಾಯವನ್ನು ಮಾಡುವ ಉಪಾಯಗಳು ಎಷ್ಟೋ ಇವೆ. ಅವು ಹಾಗಿರಲಿ. ನಮ್ಮ ವ್ಶೆರಿಯಾಗಿರುವ ಅರಿಮರ್ದನನನ್ನೂ ಅವನ ಪರಿವಾರವನ್ನೂ ಒಂದೇ ಕೊಳ್ಳಿಯಿಂದ ಇಂದೇ ಸುಟ್ಟು ಹಾಕುವೆನು. ಸುಮ್ಮನೆ ಕುಳಿತುಕೊಳ್ಳದೆ ತಕ್ಕ ಸಾಧನೋಪಾಯಗಳನ್ನು ಬೇಗನೆ ತರಿಸಿರಿ, ಮೇಘವರ್ಣನು ಹಾಗೆಯೇ ಮಾಡುವೆನೆಂದು ಸೈನಿಕರನ್ನು ಕರೆಯಿಸಿ ಹೇಳಲು ಅವರು ಹೋಗಿ ಕೌಶಿಕಾಶ್ವರನ ಪುರವನ್ನು ಉರಿಸಲು ತಕ್ಕುದಾದ ಎಲ್ಲವನ್ನೂ ಕೊಂಡು ತಡಮಾಡದೆ ಅಂಜನಗಿರಿಗೆ ನಡೆಯಿರಿ ಎಂದು

ಸಕಳಾಶಾಮುಖಚಕ್ರಮಂ ಮುಸುಕಿ ಚೇತೋವೇಗದಿಂ ರೌದ್ರ ಕೌ-
ಶಿಕ ಸೇನಾಜಯಕಾಂಕ್ಷೆಯಿಂ ರುಚಿರ ಚಂಚೂಪಾತ್ತ ಚಂಚತ್ಕಳಿಂ-
ಚಕರಾಳೋನ್ಮುಖ ಶುಷ್ಕ ಪತ್ರಪಟವೀರುದಾಸ ಕಾರ್ಪಾಸ ತಂ
ತ್ರಕಜಾಲಂ ಬಲಿಭುಗ್ಬಲಂ ನಡೆದುದಂಭೋದಾಧ್ವದೊಳ್ ರಾಗದಿಂ  ೩೭೨

ಅಂತು ವಾಯಸಬಲಂ ಮಾಮಸಕಂ ಮಸಗಿ ಬಂದು ಕಾಳನೀಳಜಲಧರಂಗಳ್ ಕುಳಗಿರಿಯಂ ಮುತ್ತುವಂತರಿಮರ್ದನನ ಪುರವಾಗಿರ್ದಂಜನಗಿರಿಯಂ ಸುತ್ತಿಮುತ್ತಿ ತಂತಮ್ಮ ತಂದ ಪುಲ್ಲಂ ಪುಳ್ಳಿಯುಂ ಮೋದಲಾದ ಕಸಂಗಳೆಲ್ಲಮಂ ಚಿರಂಜೀವಿ ತೋಱ*ದ ಗಿರಿಗುಹಾದ್ವಾರಂಗಳೊಳಂ ತರುಕೋಟರಕುಟೀರಂಗಳೊಳಮಿಡಿದಿಡಿದು ತೀವಿ ಬೞ*ಕ್ಕೆ ಕೊಳ್ಳಿಗಳನಲ್ಲಿಗಲ್ಲಿಗೆ ತಗುಳ್ಚುವುದುಂ ಶತಪತ್ರಮಿತ್ರಪುತ್ರಪತತ್ರಿಗೋತ್ರಪ್ರಧಾನಂಗೆ ಹುತವಹಸಖಂ ಸಹಾಯಮಾಗಿ ಸುೞ*ಸುೞ*ದು ತಗುಳೆ ಬೀಸಲೊಡಂ,

ಸಂದ ಪುರತ್ರಯಂ ವಿಷಮಲೋಚಲೋಚನವಹ್ನಿಯಿಂ ಮರು-
ನ್ನಂದನನಿಂ ದಶಾಸ್ಯನಗರಂ ಕಪಿಕೇತನನಿಂದೆ ಸಂದ ಸಂ-
ಕ್ರಂದನನಂದನಂ ನಿಮಿಷಮಾತ್ರದಿನೊರ್ಮೆಯೆ ಬೆಂದಮಾಱ್ಕೆಯಿಂ
ಬೆಂದುದುಳೂಕರಾಜನಿಳಯಂ ಬಲಿಭುಕ್ಷತಿ ಮೇಘವರ್ಣನಿಂ  ೩೭೩

ಅಂತು ಬೇವುದುಮುಳೂಕಬಲಂಬೆರಸು ಅರಿಮರ್ದನಂ ಮೊದಲಾಗಿ ಪೇೞ* ಪೆಸರಿಲ್ಲದಂತಾಗಿ ಪೋಗೆ ವಾಯಸಂಗಳತಿರಾಗದಿಂ ಭೋರೆಂದಾರುತ್ತುಂ ಬರೆ,

ಕಾಕನಿಕರಕ್ಕೆಲ್ಲ ಸಾರಿದನು. ೩೭೨. ಸರ್ವ ದಿಗಂತಗಳನ್ನೂ ಮುಸುಕಿ ಮನೋವೇಗದಿಂದ ಭಯಂಕರವಾದ ಗೂಬೆಗಳ ಸೈನ್ಯವನ್ನು ಜಯಿಸುವ ಬಯಕೆಯಿಂದ ಹೊಳೆಯುವ ಭಯಂಕರವಾಗಿ ಮೇಲಕ್ಕೆದ್ದಿರುವ ತರಗೆಲೆ ಬಟ್ಟೆ ಪೊದರು ಹುಲ್ಲು ಹತ್ತಿಗಳಿಂದ ಕೂಡಿದ ತಂತ್ರಜಾಲವಾದ ಬಲಿಭುಗ್ಬಲವು ಆಕಾಶಮಾರ್ಗದಲ್ಲಿ ಉತ್ಸಾಹದಿಂದ ಸಾಗಿತು. ವ|| ಹಾಗೆ ಆ ವಾಯಸಬಲವು ಮಹಾಸಾಮರ್ಥ್ಯದಿಂದ ಬಂದು ಕಾಳನೀಳ ಜಲಧರಗಳು ಕುಲಗಿರಿಯನ್ನು ಮುತ್ತುವಂತೆ ಅರಿಮರ್ದನನ ಪುರವಾಗಿದ್ದ ಅಂಜನಗಿರಿಯನ್ನು ಸುತ್ತಿಮುತ್ತಿ ತಾವೆಲ್ಲ ತಂದಿದ್ದ ಹುಲ್ಲನ್ನು ಸೌದೆಯನ್ನೂ ಕಸಗಳನ್ನೂ ಚಿರಂಜೀವಿ ತೋರಿಸಿದ ಗಿರಿ ಗುಹಾದ್ವಾರಗಳಲ್ಲಿಯೂ ತರುಕೋಟರ ಕುಟೀರಗಳಲ್ಲಿಯೂ ಇಡಿದಿಡಿದು ತುಂಬಿ ಬಳಿಕ ಕೊಳ್ಳಿಗಳನ್ನು ಅಲ್ಲಲ್ಲಿಗೆ ತಗುಲಿಸಲು ಶತಪುತ್ರಮಿತ್ರಪುತ್ರಪತತ್ರಿಗೋತ್ರಪ್ರಧಾನನಿಗೆ ಹುತವಹಸಖನೂ ಸಹಾಯನಾಗಿ ಸುಳಿಸುಳಿದು ಬೀಸತೋಡಗಿದನು. ೩೭೩. ತ್ರಿಪುರಗಳು ವಿಷಮಲೋಚನನ ಲೋಚನವಹ್ನಿಯಿಂದಲೂ, ವಾಯುಪುತ್ರನಿಂದ ದಶಾಸ್ಯನಗರವೂ ಕಪಿಕೇತನನಿಂದ ಸಂಕ್ರಂದನನಂದನವೂ ನಿಮಿಷ ಮಾತ್ರದಲ್ಲಿ ಸುಟ್ಟುಹೋದ ರೀತಿಯಲ್ಲಿ ಬಲಿ ಭುಕ್ಷತಿ ಮೇಘವರ್ಣನಿಂದ ಉಳೂಕರಾಜನಿಲಯವು ಬೆಂದು ಹೋಯಿತು. ವ|| ಹಾಗೆ ಉಳೂಕಬಲಸಹಿತ ಅರಿಮರ್ದನ ಮೊದಲಾದ ಎಲ್ಲ ಗೂಬೆಗಳೂ ಹೇಳ ಹೆಸರಿಲ್ಲದಂತಾಗಲು ವಾಯಸಗಳು ಅತ್ಯಂತ ಸಂತೋಷದಿಂದ ವಿಜೃಂಭಿಸಿ ಕೇಕೆಹಾಕುತ್ತ

ಬಳವದ್ವೈರಿ ಕ್ಷಮಾಪಾಲರನಕ ಭುಜಾಗರ್ವದಿಂ ಗೆಲ್ದ ಲಕ್ಷ್ಮೀ
ನಿಳಯಂ ಗಂಗಾತರಂಗೋಪಮ ಚಮರರುಹಶ್ರೇಣಿಯುಂ ಬೀಸೆ ಚಿತ್ರೋ-
ಜ್ವ್ವಳಕೇತುವ್ರಾತಮುಂ ದುಂದುಭಿರವಬರೀಭೂತದಿಙ್ಮಂಡಲಂ ಮಂ-
ಗಳಗೀತಂ ಪೊಣ್ಮೆ ಪೊಕ್ಕಂ ನಿಜಶಿಬಿರಮನುತ್ಸಾಹದಿಂ ಮೇಘವರ್ಣಂ  ೩೭೪

ಅಂತು ಪೊಕ್ಕೊಡ್ಡೋಲಗಂಗೊಟ್ಟು ಕುಳ್ಳಿರ್ದು ಚಿರಂಜೀವಿಯ ಮೊಗಮನಾದರದಿಂ ನೋಡಿ

ಹಿತನೀತಂ ಮತಿವಂತನೀತನಕಂ ಕೂರ್ಪಳ್ಳನೀತಂ ಗುಣಾ-
ನ್ವಿತನಿಂತೀತನೆನಿಪ್ಪನಂ ಪೊರೆವುದುರ್ವೀಪಾಲಕಂ ಕೂರ್ಮೆಯಿಂ
ಹಿತನಲ್ಲಂ ಮತಿವಂತನಲ್ಲಮಕಂ ಕೂರ್ಪುಳ್ಳನಲ್ಲಂ ಗುಣಾ-
ನ್ವಿತನಂತಲ್ಲನೆನಿಪನಂ  ಪ್ರೆರೆಯವೇಡೇನಾದೋದಂ ಭೂಭುಜಂ

ಎಂದುಂ ಮಾಣದೆ ಚಿರಂಜೀವಿಯನರ್ಧಾಸನದೊಳ್ ಕುಳ್ಳಿರಿಸಿ ಬೞ*ಕ್ಕಿಂತೆಂದಂ :

ಭವದೀಯೋತ್ತಮ ಮಂತ್ರದಿಂದುರುತರಾಸ್ಮತ್ಪ್ರಾಜ್ಯ ರಾಜ್ಯಾಸ್ಪದಂ
ಧ್ರುವಮಾಯ್ತುದ್ಧತ ವೈರಿರಾಜನಿಚಯಂ ನಿರ್ಮೂಲಮಾಯ್ತೆಂದು ಕಾ-
ಕ ವಿಹಂಗಾಪನಿತ್ತನಾಪ್ತಸಚಿವಂಗಾನಂದದಿಂದರ್ಧರಾ-
ಜ್ಯುವನೊಲ್ದೀಯದರಾರೋ ಭೂಭುವನದೊಳ್ ಸ್ವಾರ್ಥಕ್ಕೆ ಸರ್ವಸ್ವಮಂ  ೩೭೬

ಅಂತು ಸಂತಸಂಬಡಿಸಿ ಚಿರಂಜೀವಿಗಿಂತೆಂದಂ :

ಶ್ಲೋ||  ವರಮಗ್ನೌ ಪ್ರದೀಪ್ತೇ ತು ಪ್ರಾಣಾನಾಂ ಪರಿವರ್ಜನಂ
ನ ಚಾರಿ ಜನಸಂಸರ್ಗೇ ಮುಹೂರ್ತಮಪಿ ಸೇವನಂ  ||೧೮೧||

ಟೀ|| ಉರಿವ ಕಿರ್ಚಿನೊಳಗೆ ಬಿರ್ದು ಸಾವುದೆ ಲೇಸು, ಹಗೆಗಳನೊಂದು ಮಹೂರ್ತ ಮೋಲಗಿಸಲಾಗದು.

ಬಂದುವು. ೩೭೪. ಬಲವದ್ವೈರಿಭೂಪಾಲರನ್ನು ಅಕ ಭುಜಾಗರ್ವದಿಂದ ಗೆದ್ದ ಲಕ್ಷ್ಮೀ ನಿಲಯನಾದ ಮೇಘವರ್ಣನು ಗಂಗಾತರಂಗೋಪಮ ಚಾಮರಶ್ರೇಣಿಯೂ ಚಿತ್ರೋಜ್ಜ್ವಲ ಪತಾಕಾಪಂಕ್ತಿಯೂ ಬೀಸುತ್ತಿರಲು ದುಂದುಭಿರವದಿಂದ ಕಿವುಡಾದ ದಿಙ್ಮಂಡಲವು ಮಂಗಳ ಗೀತವನ್ನು ಹೊಮ್ಮಿಸಲು ಉತ್ಸಾಹದಿಂದ ತನ್ನ ಶಿಬಿರವನ್ನು ಪ್ರವೇಶಿಸಿದನು. ವ|| ಹಾಗೆ ಹೊಕ್ಕು ಒಡ್ಡೋಲಗಗೊಟ್ಟು ಕುಳ್ಳಿರಲು ಚಿರಂಜೀವಿಯ ಮುಖವನ್ನು ಆದರದಿಂದ ನೋಡಿದನು. ೩೭೫. ಈತನು ಹಿತನು ಮತಿವಂತನು ಅಕ ಪ್ರೀತಿಯುಳ್ಳವನು ಗುಣಾನ್ವಿತನು ಇಂಥವನನ್ನು ಉರ್ವೀಪಾಲಕನು ಪ್ರಿತಿಯಿಂದ ಕಾಪಾಡಬೇಕು ಹಿತನಲ್ಲದವನನ್ನೂ ಮತಿವಂತನಲ್ಲದವನನ್ನೂ ಭೂಪಾಲನು ಏನಾದರೂ ಕಾಪಾಡಬಾರದು ಎಂದು ಯೋಚಿಸಿ ಚಿರಂಜೀವಿಯನ್ನು ಅರ್ಧಾಸನದಲ್ಲಿ ಕುಳ್ಳಿರಿಸಿ ಹೀಗೆಂದನು : ೩೭೬. ನಿನ್ನೊಂದು ಉತ್ತಮ ಮಂತ್ರೋಪಾಯದಿಂದ ನಮ್ಮೊಂದು ರಾಜ್ಯ ಶಾಶ್ವತವಾಯಿತು: ಉದ್ಧತವೈರಿರಾಜಸಮೂಹ ನಿರ್ಮೂಲವಾಯಿತು ಎಂದು ಕಾಕವಿಹಂಗಾಪನು ಆಪ್ತಸಚಿವನಿಗೆ ಆನಂದದಿಂದ ಅರ್ಧ ರಾಜ್ಯವನ್ನು ಇತ್ತನು. ಸ್ವಾರ್ಥಕ್ಕಾಗಿ ಭೂಭುವನದಲ್ಲಿ ತಮ್ಮ ಸರ್ವಸ್ವವನ್ನಾದರೂ ಕೊಡದವರು ಯಾರು ಇರುವರು ? ವ|| ಹೀಗೆ ಸಂತೋಷಪಡಿಸಿ ಚಿರಂಜೀವಿಗೆ ಹೀಗೆ ಹೇಳಿದನು : ಶ್ಲೋ|| ಹಗೆಗಳೊಡನೆ ಮುಹೂರ್ತ ಕಾಲ ಓಲಗಿಸಿ ಬಾಳುವುದಕ್ಕಿಂತ ಉರಿಯುವ ಕಿಚ್ಚಿನಲ್ಲಿ ಬಿದ್ದು ಸಾಯುವುದೇ ಲೇಸು ಎಂಬುದು ನಿಂತಿಯುಂಟು. ನೀವಿನಿತು ದಿವಸಂ ಶತ್ರುಸಂಸರ್ಗದಿನಾದುಪಸರ್ಗಮನೆಂತು ಸೈರಿಸಿದಿರ್, ಪೇೞ*ಮೆನೆ ಚಿರಂಜೀವಿಯಿಂತೆಂದಂ : ದೇವಾ ! ನೀವೀಗಳ್ ಬೆಸಸಿದ ಸುಭಾಷಿತದರ್ಥಂ ತಪ್ಪದಾದೊಡಂ,

ಶ್ಲೋ||  ಯದಪಸರತಿ ಮೇಷಃ ಕಾರಣಂ ತತ್ಪ್ರಹರ್ತುಂ
ಮೃಗಪತಿರಪಿ ಕೋಪಾತ್ ಸಂಕುಚತ್ಯುತ್ಪತಿಷ್ಣುಃ
ಹೃದಯನಿಹಿತವೈರಾ ಗೂಢಮಂತ್ರಪ್ರಚಾರಾಃ
ಕಿಮಪಿ ವಿಗಣಯಂತೋ ನೀತಿಮಂತಸ್ಸಹಂತೇ  ||೧೮೨||

ಟೀ|| ಗೂಢಮಂತ್ರವನುಳ್ಳ ಬುದ್ಧಿವಂತರುಗಳು ಕಾರ‍್ಯವಹನ್ನಬರ ಸೈರಿಸಿಕೊಂಡಿಹುದು. ಎಹಗೆಂದೊಡೆ ಮೇಷವು ಇಱೆಯಲೋಸುಕರ ಹಿಂದಣ್ಗೆ ಹೋಹ ಹಾಂಗೆಯೂ ಮತ್ತೆ ಸಿಂಹವು ಆನೆಯ ಕುಂಭಸ್ಥಲಮಂ ವಿದಾರಿಸಲೋಸುಕರ ಸಂಕುಚಿತಶರೀರನಾಗುವ ಹಾಂಗೆಯೂ ಅದಲ್ಲದೆಯುಂ

ಶ್ಲೋ|| ಮಹೇದಮಿತ್ರಂ ಸ್ಕಂಧೇನ ಯಾವತ್ಕಾರ‍್ಯ ವಿನಿಶ್ಚುಯಃ
ತತಃ ಪ್ರತ್ಯಾಗತೇ ಕಾಲೇ ಭಿಂದ್ಯಾದ್ಭಟಮಿವಾಂಭಸಃ ||೧೮೩||

ಟೀ|| ತನ್ನ ಕಾರ‍್ಯವಹನ್ನಬರ ಹಗೆಯನು ಹೆಗಲಲಾದರೂ ಹೊತ್ತುಕೊಂಡಿಹುದು. ಕಾರ‍್ಯ ಬರಲೊಡನೆ ಒಡೆದ ಕೊಡನ ಬಿಸುಡುವಹಗೆ ಬಿಟ್ಟು ಕಳೆವುದು. ಎಂಬ ನೀತಿಗಳೊಳವು.

ಅದಲ್ಲದೆಯುಂ,

ಸಿಂಗದ ಮುಱ*ವುಂ ಮೇಷದ
ಪಿಂಗುಂ ನಯವಿದರ ವಿನಯಮಿಂತಿವು ಮೂಱುಂ
ಭಂಗಮೆನಿಸಲ್ಕೆ ಪಡೆಯವು
ಕಂಗೆಡಿಕುಂ ಭರದಿನಹಿತರಧಟಂ ಧುರದೊಳ್  ೩೭೭

ಅದಲ್ಲದೆಯುಂ, ಶ್ಲೋ|| ವಹತಾ ಕೃಷ್ಣಸರ್ಪೇಣ ಮಂಡೂಕೋ ವಿನಿಪಾತಿತಃ ಎಂಬ ಕಥೆಯುಂಟೆನೆ ಮೇಘವರ್ಣನದೆಂತೆನೆ ಚಿರಂಜೀವಿ ಪೇೞ್ಗುಂ :

ಎಂಬ ನೀತಿಯುಂಟು. ನೀವು ಇಷ್ಟು ದಿನಗಳವರೆಗೆ ಶತ್ರುಸಂಸರ್ಗದಿಂದ ಆದ ಉಪಸರ್ಗಗಳನ್ನೂ ಹೇಗೆ ಸೈರಿಸಿದಿರಿ ಹೇಳಿ ಎನ್ನಲು ಚಿರಂಜೀವಿ ಹೀಗೆಂದನು : ದೇವಾ! ನೀವು ಈಗ ಹೇಳಿದ ಸುಭಾಷಿತದ ಅರ್ಥ ತಪ್ಪಲ್ಲ. ಆದರೂ ಶ್ಲೋ || ಟಗರು ಇರಿಯಲಿಕ್ಕಾಗಿ ಹಿಂದಕ್ಕೆ ಸರಿಯುವ ಹಾಗೆಯೂ ಸಿಂಹವು ಆನೆಯ ಕುಂಭಸ್ಥಲವನ್ನು ವಿದಾರಿಸಲಿಕ್ಕಾಗಿ ಸಂಕುಚಿತಶರೀರನಾಗುವ ಹಾಗೆಯೂ ಗೂಢಮಂತ್ರವನ್ನುಳ್ಳ ಬುದ್ಧಿವಂತರು ಕಾರ್ಯವಾಗುವವರೆಗೆ ಸಹಿಸಿಕೊಂಡಿರಬೇಕು. ಅಲ್ಲದೆ, ಶ್ಲೋ|| ತನ್ನ ಕಾರ್ಯವಾಗುವವರೆಗೆ ಹಗೆಯನ್ನು ಹೆಗಲಲ್ಲಾದರೂ ಹೊತ್ತುಕೊಂಡು ಇರಬೇಕು : ಕಾರ್ಯವಾದ ಮೇಲೆ ಒಡೆದ ಕೊಡವನ್ನು ಬಿಸುಡುವಂತೆ ಬಿಟ್ಟುಬಿಡುಬೇಕು ಎಂಬ ನೀತಿಗಳುಂಟು. ಅಲ್ಲದೆ, ೩೭೭. ಸಿಂಹದ ಸಂಕೋಚವೂ ಕುರಿಯ ಹಿಂಜರಿತವೂ ನೀತಿಜ್ಞರ ವಿನಯವೂ ಎಂದೂ ಭಂಗವಾಗುದಿಲ್ಲ. ಇವು ಯುದ್ಧದಲ್ಲಿ ವೈರಿಗಳ ಪರಾಕ್ರಮವನ್ನೇ ಕಂಗೆಡಿಸುವುವು. ಅಲ್ಲದೆ, ಶ್ಲೋ|| ವಹತಾ ಕೃಷ್ಣಸರ್ಪೆಣ ಮಂಡೂಕೋ ವಿನಿಪಾತಿತಃ ಎಂಬ ಕಥೆಯುಂಟು ಎನ್ನಲು ಕಪ್ಪೆಗಳಂ ಬೆನ್ನನೇಱ*ಸಿಕೊಂಡ ಸರ್ಪನ ಕಥೆ

ದರ್ಪರಹಿತಂ ಜನಾಕ
ಕಾರ್ಪಣ್ಯಸಮೇತನೊಂದು ಗಹನಾಂತರದೊಳ್
ಸರ್ಪಂ ನಿಜಾಂಗನಾಯುತ
ನಿರ್ಪುದು ಕಪಟಪ್ರಪಂಚಪರಿಣತಚಿತ್ತಂ  ೩೭೮

ಆ ವೃದ್ಧೋರಗಂ ಸ್ವಾಹಾರಮನೆಲ್ಲಿಯುಂ ಪಡೆಯಲಾಱದೆ ಚಿಂತಿಸುತಿರ್ದು
(ಹರಿಣೀವೃತ್ತಂ)

ಶ್ಲೋ|| ಅಭಿಮತ ಮಹಾಗ್ರಂಥಿ ಪ್ರಭೇದಪಟೀಯಸಿ
ಗುರುತರಗುಣಗ್ರಾಮಾಂಭೋಜ ಸುಟೋಜ್ಜ್ವಲಾ
ವಿಪುಲವಿಲಸಲ್ಲಜ್ಜಾವಲ್ಲೀ ವಿದಾರ ಕುಠಾರಿಕಾ
ಜಠರಪಿಠರೀ ದುಷ್ಟೂರೇಯಂ ಕರೋತಿ ವಿಡಂಬನಾಂ  ||೧೮೪||

ಟೀ|| ಉದರಮೆಂಬ ಭಾಂಡವು ಅಭಿಮಾನಮೆಂಬ ಗಂಟನೊಡೆವುದರ್ಕೆ ಪಟುವಂತಹುದು. ಗುರುತ್ವವಹ ಗುಣಸಮೂಹಮೆಂಬ ಕಮಳವಂ ಕಿಡಿಸುವುದರ್ಕೆ ಬೆಳದಿಂಗಳೆನಿಸಿದಂತಹುದು. ಏನ ತುಂಬಿದೊಡಂ ತೃಪ್ತಿಯನೆಯ್ದದಾಗಿ ವಿಡಂಬನವ ಮಾಡುತ್ತಿಹುದು.

ಎಂಬುದದಱ*ನಾಂ ದುರಭಿಮಾನಮಂ ಕೈಕೊಂಡಿರಲ್ ಪಸಿದು ಸಾವಾದಪುದು. ಆವುಪಾಯದೊಳಮಾಹಾರಮಂ ಪಡೆವೆನೆಂದೆಂದೊಡನೊಂದುಪಾಯಮಂ ಚಿಂತಿಸಿ

ಮಂಡೂಕ ಬಹಳಮಂ ಕರ
ದಂಡೋತ್ಪಲಕುಮುದರಾಜಿರಂಜಿತಮಂ ಕಾ-
ರಂಡಕಳಹಂಸ ಷಟ್ಟದ
ಮಂಡಿತಮಂ ಕಂಡುದೊಂದು ಕೊಳನಂ ಸರ್ಪಂ  ೩೭೯

ಮೇಘವರ್ಣನು ಅದೇನು ಎನ್ನಲು ಚಿರಂಜೀವಿ ಹೇಳುವನು: ೩೭೮. ಒಂದು ಕಾಡಿನಲ್ಲಿ ಕಪಟಪ್ರಪಂಚಪರಿಣತಚಿತ್ತನಾದ ಒಂದು ಸರ್ಪನು ಹೆಂಡತಿಯೊಡನೆ ವಾಸಿಸುತ್ತಿತ್ತು. ವ|| ಅ ವೃದ್ಧೋರಗವು ಸ್ವಾಹಾರವನ್ನು ಎಲ್ಲಿಯೂ ಪಡೆಯದೆ ಚಿಂತಿಸುತ್ತಿತ್ತು. ಶ್ಲೋ|| ಉದರವೆಂಬ ಭಾಂಡವು ಅಭಿಮಾನವೆಂಬ ಗಂಟನ್ನೂಡೆಯುವುದಕ್ಕೆ ಸಮರ್ಥ ವಾಗಿರುವುದು. ಗುರುತರವಾದ ಗುಣಸಮೂಹವೆಂಬ ಕಮಲವನ್ನು ಕೆಡಿಸುವುದಕ್ಕೆ ಬೆಳದಿಂಗಳಿನಂತೆ ಇರುವುದು. ಏನನ್ನು ತುಂಬಿದರೂ ತೃಪ್ತಿಯನ್ನು ಪಡೆಯದೆ ವಿಡಂಬನಮಾಡುತ್ತಿರುವುದು. ವ|| ಅದರಿಂದ ನಾನು ದುರಭಿಮಾನವನ್ನು ಕೈಕೊಂಡಿದ್ದರೆ ಹಸಿದು ಸಾಯಬೇಕಾಗುವುದು ; ಯಾವುದಾದರೂ ಉಪಾಯದಿಂದ ಆಹಾರವನ್ನು ಪಡೆಯುವೆನೆಂದು ಒಂದು ಉಪಾಯವನ್ನು ಚಿಂತಿಸಿತು. ಹೀಗೆ ಸರ್ಪವು ೩೭೯. ಬಹಳ ಕಪ್ಪೆಗಳಿಂದಲೂ ಕಮಲ ನೈದಿಲೆಗಳಿಂದಲೂ ಬಾತು ಹಂಸಗಳು ತುಂಬಿದ ಒಂದು ಅಚಿತದಱ ಮೊದಲೊಳ್ ಕೆಲವು ದಿವಸಂ ತಲೆಯಿಕ್ಕಿ ಪಟ್ಟಿರ್ದುದನೊಂದು ದರ್ದುರಂ ಕಂಡು ನೀರೊಳಿರ್ದದೇಂ ಭಾವಾ! ನೀನೀಗಳ್ ಹಲವು ದಿವಸಮಾಹಾರವಿರಹಿತನುಂ ನಿಜಪ್ರಭಾವ ಸಂಭಾವನಾಹೀನನುಮಾಗಿರ್ಪೆ ಇದೇಂ ಕಾರಣಮೆನೆ ಪನ್ನಗನೆನ್ನ ಮನೋರಥಾವಾಪ್ತಿಯಾಗಲ್ ಬಗೆದುದೆಂದು ಸಂತೋಷಂಬಟ್ಟಿಂತೆಂದುದು :

ಈ ರುಸಿವಳ್ಳಿಯೊಳಾನವಿ-
ಚಾರದೆ ಋಷಿಸುತನನೊರ್ವನಂ ಕೊಂದೊಡವಂ
ಕ್ರೂರತರ ವಿಷವಿಭೇದ್ಯಂ
ಧಾರಿಣಿಯೊಳ್ ಬಿರ್ದು ವಿಗತಜೀವಿತನಾದಂ  ೩೮೦

ಅಂತು ಮರಣಪ್ರಾಪ್ತನಾದ ಕುಮಾರನಂ ಸನ್ನಿಧಾನಸ್ಥಿತನಾಗಿರ್ದೆನ್ನುಮನಾತನ ತಂದೆ ಕಂಡು

ಅನಿಶಂ ಬೇಕಾಳಿಗೆ ವಾ-
ಹನಮಾಗೆಂದೆನಗೆ ರೌದ್ರಶಾಪಮನಿತ್ತಂ
ಮುನಿಸಿಂ ತದ್ವಿಪ್ರಂ ನಂ-
ದನಮರಣಪ್ರಭವಶೋಕಪಾವಕತಪ್ತಂ  ೩೮೧

ಅದು ಕಾರಣಂ ನಾಂ ನಿಮಗೆ ವಾಹನವಾಗಲ್ ಬಂದೆನೆಂದೊಡಾ ಕಪ್ಪೆ ಪರಿದು ತಮ್ಮ ರಸನಪ್ಪ ಜಲಪಾಲಂಗಱ*ಪಿದೊಡಾತನೀ ಕೌತುಕವಂ ನೋೞ್ಪಂ ಬನ್ನಿಮೆಂದು ತನ್ನ ಸಮಸ್ತ ಪರಿವಾರಂ ಬೆರಸು ಬಂದಾ ಪನ್ನಗನಂ ಕಂಡು ತದ್ವೃತ್ತಾಂತಮಂ ಬೆಸಗೊಂಡೊಡಾತಂಗೆ ಸವಿಸ್ತರಂ ಪೇೞ* ಕೇಳ್ದೊಡಂಬಟ್ಟುರಗಾರಿಯಂ ಹರಿಯೇಱುವಂತೆ ಸಮಸ್ತ ಹರಿನಿಕರಮೆನ್ನ ಬೆನ್ನನ್ನೇಱ*ಕೊಂಡಾಡುತ್ತಿರಿಮೆನೆ ಜಲಪಾಲಂಗೆ ಪ್ರಮೋದಮಾಗೆ ರಾಗಿಸಿ ಪಲಕಾಲಕ್ಕೆನ್ನ ಪಗೆಯೊಳಗಾದಂ ಬನ್ನಿಮೆಂಬುದುಂ  ಕೊಳವನ್ನು ಕಂಡಿತು. ವ|| ಅಲ್ಲಿಗೆ ಹೋಗಿ ಅದರ ಬುಡದಲ್ಲಿ ಕೆಲವು ದಿವಸ ತಲೆಹಾಕಿ ಮಲಗಿರುವುದನ್ನು ಕಂಡು ಒಂದು ಕಪ್ಪೆಯು ಭಾವಾ ! ಯಾಕೆ ನೀನು ನೀರಲ್ಲಿದ್ದು ಹಲವು ದಿವಸಗಳಿಂದ ಆಹಾರವಿರಹಿತನೂ ನಿಜಪ್ರಭಾವಸಂಭಾವನಾಹೀನನೂ ಆಗಿರುವೆ, ಇದಕ್ಕೆ ಕಾರಣವೇನು ಎನ್ನಲು ಪನ್ನಗವು ತನ್ನ ಮನೋರಥಾವಾಪ್ತಿಯಾಗತೊಡಗಿತು ಎಂದು ಬಗೆದು ಸಂತೋಷಪಟ್ಟು ಹೀಗೆಂದಿತು: ೩೮೦. ಈ ರುಸಿವಳ್ಳಿಯಲ್ಲಿ ಅವಿಚಾರದಿಂದ ಋಷಿಸುತನೊಬ್ಬನನ್ನು ಕಚ್ಚಲು ಅವನು ಕ್ರೂರತರವಿಷವಿಭೇದ್ಯನಾಗಿ ಧಾರಿಣಿಯಲ್ಲಿ ಬಿದ್ದು ಸತ್ತನು. ವ|| ಹಾಗೆ ಮರಣಪ್ರಾಪ್ತನಾದ ಕುಮಾರನನ್ನೂ ಸನ್ನಿಧಾನಸ್ಥಿತನಾಗಿದ್ದ ನನ್ನನ್ನೂ ಆತನ ತಂದೆ ಕಂಡು ೩೮೧. ಕೋಪದಿಂದ ಭೇಕಗಳಿಗೆ ಯಾವಾಗಲೂ ವಾಹನವಾಗಿರು ಎಂದು ನನಗೆ ರೌದ್ರ ಶಾಪವನ್ನು ಕೊಟ್ಟನು. ಅದರಿಂದ ನಾನು ನಿಮಗೆ ವಾಹನನಾಗಲು ಬಂದೆ ಎಂದಿತು. ಆಗ ಆ ಕಪ್ಪೆಯು ಹೋಗಿ ತನ್ನ ಅರಸನಾದ ಜಲಪಾಲನಿಗೆ ತಿಳಿಸಲು ಆತನು ಈ ಕೌತುಕವನ್ನು ನೋಡೋಣ ಬನ್ನಿ ಎಂದು ತನ್ನ ಸಮಸ್ತ ಪರಿವಾರದೊಡನೆ ಬಂದು ಆ ಪನ್ನಗನನ್ನು ಕಂಡು ತದ್ವ್ರತ್ತಾಂತವನ್ನು ವಿಚಾರಿಸಲು ಅವನಿಗೆ ವಿವರವಾಗಿ ಹಳಲು ಕೇಳಿ ಗರುಡನನ್ನು ಶ್ರೀಹರಿಯೇರುವಂತೆ ಸಮಸ್ತ ಹರಿನಿಕರವೂ ನನ್ನ ಬೆನ್ನಮೇಲೆ ಏರಿಕೊಂಡು ಆಡುತ್ತಿರಿ ಎಂದಿತು. ಅದನ್ನು ಕೇಳಿ ಜಲಪಾಲನಿಗೆ ಪ್ರಮೋದವಾಗಲು ಸಂತೋಷದಿಂದ ಹಲವು ಕಾಲದ ಮೇಲೆ ನನ್ನ ಹಗೆ ಒಳಗಾದನು ಬನ್ನಿ ಎನ್ನಲು  ಪಸಾಯತರ್ವೆರಸು ಪರಿತಂದು ಮೃತ್ಯುವ ಬೆನ್ನನೇಱುವಂತಾ ಪನ್ನಗನ ಬೆನ್ನನೇಱುವುದುಮಾ ಅಹಿ ಮಂಡೂಕಂಗಳೆಲ್ಲಮುಮಂ ಪೊತ್ತು ಮಾಱುವ ಬಗೆಯಂ ಬಗೆದು,

ಒಂದೆಡೆಯೊಳ್ ಬೇಗಂ ಪರಿ-
ದೊಂದೆಡೆಯೊಳ್ ಮಂದಗಮನದಿಂ ಪೋಗಿ ಮನಂ-
ಬಂದಂದದಿನಾ ದರ್ದುರ-
ನೆಂದಂದದಿನೆಂದುದಂದು ಸೂಕಳಸರ್ಪಂ ೩೮೨

ಪಗೆಯನುಪಾಯದಿ ತೀರ್ಚುವ
ಬಗೆಯಿಂದಾ ದರ್ದುರವ್ರಜಂಗಳನುಗ್ರೋ-
ರಗನೆಯ್ದೆ ಪೊತ್ತು ತೊೞಲ್ದುದು
ಜಗದೊಳ್ ನಿಜಕಾರ‍್ಯವಂತರೇನಂ ಮಾಡರ್  ೩೮೩

ಅಂತನೇಕ ಕಾಲಂ ವೃದ್ಧೋರಗನಾ ದರ್ದುರಂಗಳಂ ಪೊತ್ತು ತಿರುಗಿ ಬೇವಸಂಗೊಂಡೊಂದು ದಿವಸಂ ತನ್ನಿರ್ದ ಪುತ್ತಿಂಗೆವರ್ಪುದುಮದಱ ಪೆಂಡತಿ ಕಂಡೆಲೆ ವಲ್ಲಭ! ನೀವೀನಿಕೃಷ್ಟಮಪ್ಪ ಕಪ್ಪೆಗಳಂ ಪೊತ್ತು ಕಷ್ಟಂಬಟ್ಟು ಬೞ*ಕ್ಕೆ ನಿಮ್ಮ ಸಾಸುವುದೇನೆಂಬುದುಮಾ ಪನ್ನಗನಿಂತೆಂದಂ :

ಶ್ಲೋ||  ಕಿಂ ನ ಜಾನಾಮ್ಯಹಂ ಭದ್ರೇ ಯದಾ ಬಧ್ನಾಮಿ ದರ್ದುರಂ
ಕಿಂಚಿತ್ಕಾಲ ಮಪೇಕ್ಷೇಹಂ ವ್ರತಾನ್ನಂ ಬ್ರಾಹ್ಮಣೋ ಯಥಾ ||೧೮೫||

ಟೀ|| ಎಲೆ ಸುಮುಖಿ ! ಕಪ್ಪೆಯಂ ಪಿಡಿವ ಕಾಲವಂ ನಾನಱ*ಯೆನೆ ? ವ್ರತಾನ್ನಮಂ ಬಯಸಿ ವಿಪ್ರಂ ಕೆಲಕಾಲಮಿರ್ದಂತೆ ಕಾಲವನಪೇಕ್ಷಿಸಿಹೆನು. ಎಂಬುದುಮದೆಂತೆಂದುರಗಿ ಕೇಳ್ವುದುಮುರಗನಿಂತೆಂದಂ :

ಪರಿಜನರೊಂದಿಗೆ ಬಂದು ಮೃತ್ಯುವಿನ ಬೆನ್ನನ್ನೇರುವಂತೆ ಆ ಪನ್ನಗನ ಬೆನ್ನನ್ನೇರಲು ಆ ಅಹಿ ಮಂಡೂಕಗಳೆಲ್ಲವನ್ನೂ ಹೊತ್ತು ವಂಚಿಸುವ ಯೋಚನೆಯನ್ನು ಮಾಡಿ ೩೮೨. ಒಂದು ಕಡೆಗೆ ಬೇಗನೆ ಸರಿದು, ಇನ್ನೊಂದು ಕಡೆಗೆ ಮಂದಗಮನದಿಂದ ಹೋಗಿ ಮನಸ್ಸು ಬಂದಂತೆ ಆ ಕಪ್ಪೆ ಹೇಳಿದಂತೆ ಆ ಸರ್ಪವು ಕೇಳಿತು. ೩೮೩. ಹಗೆಯನ್ನು ಉಪಾಯದಿಂದ ತೀರಿಸುವ ಯೋಚನೆಯಿಂದ ಆ ಕಪ್ಪೆಗಳ ಹಿಂಡನ್ನು ಆ ಉಗ್ರೋರಗವು ಹೊತ್ತುಕೊಂಡು ತಿರುಗಿತು. ಜಗತ್ತಿನಲ್ಲಿ ನಿಜಕಾರ್ಯವಂತರು ಏನನ್ನು ತಾನೇ ಮಾಡಲಿಕ್ಕಿಲ್ಲ ! ವ|| ಹಾಗೆ ಬಹುಕಾಲ ವೃದ್ಧೋರಗವು ಆ ದರ್ದುರಗಳನ್ನು ಹೊತ್ತು ತಿರುಗಿ ಬೇಸರಗೊಂಡು ಒಂದು ದಿನ ತಾನಿದ್ದ ಹುತ್ತಕ್ಕೆ ಬರಲು ಅದರ ಹೆಂಡತಿ ಕಂಡು, ಎಲೈ ವಲ್ಲಭ ! ನೀವು  ಈ ನಿಕೃಷ್ಟವಾದ ಕಪ್ಪೆಗಳನ್ನು ಹೊತ್ತು ಕಷ್ಟಪಟ್ಟು ಸಾಸುವುದೇನೆಂದು ಕೇಳಲು ಆ ಪನ್ನಗನು ಹೀಗೆಂದನು : ಶ್ಲೋ|| ಎಲೈ ಸುಮುಖಿ ! ಕಪ್ಪೆಯನ್ನು ಹಿಡಿಯುವ ಕಾಲವನ್ನು ನಾನರಿಯೆನೆ ? ವ್ರತಾನ್ನವನ್ನು ಬಯಸಿ ವಿಪ್ರನು ಕೆಲವು ಕಾಲದವರೆಗೆ ಕಾಯುವಂತೆ ನಾನು ಕಾಲಾಪೇಕ್ಷಿಯಾಗಿರುವೆನು ಎಂದು ಹೇಳಿದನು. ಆಗ ಅದೇನೆಂದು ಉರಗಿಯು