ವಾಸವನಿವಾಸದಿಂ ಕೈ
ಲಾಸದಿನತಿ ಸೇವ್ಯಮಪ್ಪ ರುಷ್ಯಾಶ್ರಮದೊಳ್
ಭಾಸುರ ತಪಃಪ್ರಭಾವಿ
ಭಾಸಂ ದುರ್ವಾಸನೆಂಬ ಯತಿವರನಿರ್ಪಂ  ೩೬೨

ಅಂತಾ ಯತಿನಾಯಕನೊಂದು ಸಾರಮೇಯಶಿಶುವಂ ಕಂಡು ಪ್ರೀತಿವಟ್ಟು ನಡಪುತ್ತಿರ್ಪುದುಮದು ತುಡುಗುಣಿಯಾಗಿ ಭಾಂಡಸಂಕರಂಗೆಯ್ಯುತ್ತಿರ್ಪುದುಮಾ ಎನ್ನಲು ಮುನಿಯು ಮುನಿಸಿಕೊಂಡು, ನಿನಗೆ ಮಗಳನ್ನು ಕೊಡುವೆನು ಎಂಬುದು ನನ್ನ ದೋಷವಲ್ಲದೆ ನಿನ್ನ ದೋಷವಲ್ಲ ಎನ್ನಲು ಮೂಷಿಕಾಶನು ರೋಷಾವೇಶದಿಂದ ಹೀಗೆಂದನು: ೩೬೧. ಮಗಳನ್ನು ಕೊಡುತ್ತೇನೆ ಎಂಬ ಕಾರಣದಿಂದಲೇ ನೀವು ನನ್ನನ್ನು ಹೀಗೆ ಅವಜ್ಞೆಯಿಂದ ನೋಡಿ ನುಡಿಯುತ್ತಿರುವಿರಿ. ನೀವು ನನ್ನ ಉನ್ನತಿಯನ್ನು ಅಂತೂ ಅರಿಯಿರಿ. ವ || ಹಾಲುಕಡಲನ್ನು ಸುರಾಸುರರು ಕಡೆಯುವಾಗ ನಾನು ಹುಟ್ಟಿದೆನು. ಮೃಡನ ಮಗನಾದ ವಿಘ್ನೇಶ್ವರನಿಗೆ ವಾಹನವನ್ನು ಮಾಡಿಕೊಡಲು ಮಹಾಮಹಿಮೆಯಿಂದ ಅಹಿಭೂಷಣನಿಗೂ ಅಗ್ರಗಣ್ಯನಾಗಿರುವೆನು. ಅಂತಹನ ಉತ್ಪತ್ತಿ ಸ್ಥಿತಿಯನ್ನು ನೀವು ಅರಿತೂ ಅರಿಯದವರಂತೆ ನಿರಾಕರಿಸುದು ಉಚಿತವಲ್ಲ ಎಂದನು. ಅದಕ್ಕೆ ಯಜ್ಞನು ಈ ಮೂಷಿಕನು ಸಾಮಾನ್ಯನಲ್ಲ; ಆದರೂ ಈ ಕನ್ಯೆಯನ್ನು ಹೇಗೆ ಮೂಷಿಕೆಯನ್ನಾಗಿ ಮಾಡಲಿ ಎನ್ನಲು ಆ ಮುನಿಶ್ವರನ ಶಿಷ್ಯರು ಪೂಜ್ಯರೇ, ನೀವು ಹೀಗೇಕೆ ಕೇಳಿದಿರಿ, ಇದಕ್ಕೊದು ಕಥೆಯುಂಟು ಕೇಳಿರಿ ಎಂದು ಹೀಗೆ ಹೇಳಿದನು: ೩೬೨. ಸ್ವರ್ಗಕ್ಕಿಂತಲೂ ಕೈಲಾಸಕ್ಕಿಂತಲೂ ಅತ್ಯಂತ ಸೇವ್ಯವಾದ ರುಷ್ಯಾಶ್ರಮದಲ್ಲಿ ತೇಜೋವಂತನಾದ ತಪಃಪ್ರಭೆಯಿಂದ ಹೊಳೆಯುವ ದುರ್ವಾಸನೆಂಬ ಯತಿವರನು ಇರುವನು ವ’||’ಅವನು ಒಂದು ನಾಯಿಯ ಮರಿಯನ್ನು ಕಂಡು ಪ್ರೀತಿಪಟ್ಟು ಸಾಕುತ್ತಿದ್ದನು. ಅದು ಗಂಡುನೆರೆದುಕೊಂಡು ತುಡುಗುಣಿಯಾಗಿ ಭಾಂಡಸಂಕರ ಮಾಡುತ್ತಿರಲು ಆ ಋಷಿಸ್ರ್ತೀಯರು ಕೊಗಾಡಲು ಋಷಿಸ್ತ್ರೀಯರ್ ಪುಯ್ಯಲಿಡೆ ದುರ್ವಾಸನಾ ಶ್ವಾನನಂ ಪರಿಹರಿಸಲಾಱದೆ ತರುಚರನಂ ಮಾೞ್ಪುದುಮದು ಮಟ್ಟಮಿರಲಾಱದಾಶ್ರಮಂಗಳನತಿಕ್ರಮಿಸಿ ಪೊಕ್ಕು,

ಸಾರಕಮಂಡಲೋದಕಮನೊಕ್ಕು ಸುರಾರ್ಚನೆಗೆಂದು ತಂದ ಮಂ
ದಾರದ ಪೂಗಳಂ ಕೆದಱ* ಕರ್ಪಟಮಂ ಪಱ*ದಿಕ್ಕಿ ಸೀಱ್ದು ವಿ
ಸ್ತಾರ ಮೃಗಾಜಿನಾಸ್ತರಣಮಂ ಕೊಡೆಯಂ ಮುದಿಕ್ಕಿ ಸೂಸಿ ನೀ
ವಾರದ ರಾಶಿಯಂ ಬಿಡದೆ ಕಾಡಿದುದಾ ಕಪಿ ತಾಪಸರ್ಕಳಂ  ೩೬೩

ಅಂತಾ ಕೋಡಗಂ ಱೂಡಾಡಿ ಕಾಡುತಿರ್ಪುದುಮದಂ ಸಾಧುಮೃಗಮಂ ಮಾಱ್ಪೆನೆ೦ದಾ ತಾಪಸಂ ಹರಿಣನಂ ಮಾಱ್ಪುದುಮದಾಹಾರಾರ್ಥಮಟವಿಗೆ ಪೋಪುದುಂ ಕ್ರೂರಮೃಗಂಗಳದಂ ಕಂಡು ಬೆಂಕೊಂಡೊಡೆ ಭಯಂಗೊಂಡು ಬರ್ಪುದುಂ ದುರ್ವಾಸಂ ದೂರದೊಳ್ ಕಂಡು ಕರುಣರಸಾರ್ದ್ರಹೃದಯನಾಗಿ ಬೇಗಮಿದಿರಂ ಪೋಗಿ ಕೈಕೊಂಡೀ ಪ್ರಾಣಿಗೆಂತು ಬೇಱ* ನಿರ್ವಾಹಕಮೆಂದು ಚಿಂತಿಸಿ ಶ್ವಾಪದಂಗಳೊಳಗೆ ಬಲವಂತನಪ್ಪ ಪುಲಿಯಾಗೆಂಬುದುಮದು ಮಹಾಪ್ರಚಂಡನಪ್ಪ ಪುಂಡರೀಕನಾಗಿ ಕರಿಕಳಭಂಗಳಂ ಪೆಳಱ* ಪಾಯ್ವುದುಂ ತ್ರಿಗಂಡಗಳಿತನಪ್ಪುದೊಂದು ಶುಂಡಾಲ ಯೂಧಾನಾಥಂ ಕಂಡು ಕಡುಮುಳಿದು ತಗುಳ್ವುದುಂ ಭೀತನಾಗಿ ನಿಲ್ಲದೋಡಿ ದ್ವೀಪಿ ತಾಪಸನ ಸಮೀಪಕ್ಕೆ ಪರಿತರ್ಪುದುಮದಱ ಬೆನ್ನಂ ಬಿಡದಡಸುತ್ತುಂ ಬರ್ಪ ವನಗಜಮಂ ಮುನಿನಾಥಂ ಕಂಡು ಕರಿಗಳ್ಗಮರಿದಪ್ಪ ಕೇಸರಿಯಾಗೆನಲೊಡಂ,

ದಾರುಣವಕ್ತ್ರನುಗ್ರನಖರಂ ವಿಕರಾಳಮಹೋಗ್ರದಂಷ್ಟ್ರನಾ
ಪೂರಿತ ಲೋಹಿತ ಪ್ರಕಟಭೀಕರನೇತ್ರನುದಗ್ರಮೂರ್ತಿ ಗಂ
ಭೀರನಿನಾದನುನ್ನಮಿತ ಚಂಚಲವಾಲ ತನ್ನೊಳೊಪ್ಪೆ ಕಂ
ಠೀರವನಾಯ್ತು ತೊಟ್ಟನೆ ಚಮೂರುಚರಂ ಮುನಿಮುಖ್ಯನಾಜ್ಞೆಯಿಂ  ೩೬೪

ದುರ್ವಾಸನು ಆ ಶ್ವಾನವನ್ನು ಪರಿಹರಿಸಲಾಗದೆ ಮಂಗನನ್ನಾಗಿ ಮಾಡಲು ಅದು ಸುಮ್ಮನಿರಲಾರದೆ ಆ ಆಶ್ರಮಗಳನ್ನು ಅತಿಕ್ರಮಿಸಿ ಹೊಕ್ಕು ೩೬೩. ಸಾರಕಮಂಡಲೋದಕವನ್ನು ಚೆಲ್ಲಿ ಸುರಾರ್ಚನೆಗೆಂದು ತಂದ ಮಂದಾರದ ಹೂಗಳನ್ನು ಕೆದರಿ ಬಟ್ಟೆಗಳನ್ನು ಹರಿದು ಹಾಕಿ ಸೀಳಿ ಕೃಷ್ಣಾಜಿನದಿಂದ ಮಾಡಿದ ಕೊಡೆಯನ್ನು ಮುರಿದುಹಾಕಿ ಧಾನ್ಯದ ರಾಶಿಯನ್ನು ಬಿಡದೆ ಚೆಲ್ಲಿ ಆ ಕಪಿಯು ತಾಪಸರನ್ನು ಕಾಡಿತು. ವ|| ಹಾಗೆ ಆ ಕೋಡಗವು ಅನಾದರಮಾಡಿ ಕಾಡುತ್ತಿರಲು ಅದನ್ನು ಸಾಧುಮೃಗವನ್ನಾಗಿ ಮಾಡುವೆನೆಂದು ತಾಪಸನು ಅದನ್ನು ಹರಿಣವನ್ನಾಗಿ ಮಾಡಲು ಅದು ಆಹಾರಾರ್ಥವಾಗಿ ಅಡವಿಗೆ ಹೋಗಲು ಕ್ರೂರಮೃಗಗಳು ಅದನ್ನು ಕಂಡು ಬೆನ್ನಟ್ಟಿ ಬರಲು ಭಯಗೊಂಡು ಹಿಂದಿರುಗಲು ದುರ್ವಾಸನು ದೂರದಿಂದ ಕಂಡು ಕರುಣರಸಾರ್ದ್ರಹೃದಯನಾಗಿ ಬೇಗನೆ ಅದರ ಎದುರಾಗಿ ಈ ಪ್ರಾಣಿಗೆ ಬೇರೆ ದಾರಿ ಏನು ಎಂದು ಯೋಚಿಸಿ ಪ್ರಾಣಿಗಳಲ್ಲಿ ಬಲಶಾಲಿಯಾದ ಹುಲಿಯನ್ನಾಗಿ ಮಾಡಿದನು. ಆಗ ಅದು ಮಹಾಪ್ರಚಂಡನಾದ ಪುಂಡರೀಕನಾಗಿ ಕರಿಕಳಭಗಳನ್ನು ಹೆದರಿಸಿ ಹಾಯಲು ತ್ರಿಗಂಡಗಳಿತನಾದ ಯೂಧಾನಾಥನು ಕಂಡು ಕೋಪಾಕ್ರಾಂತನಾಗಿ ಎದುರಿಸಲು ಭೀತನಾಗಿ ಓಡಿ ತಾಪಸನ ಸಮೀಪಕ್ಕೆ ಬರಲು ಅದನ್ನು ಅಟ್ಟಿಬರುತ್ತಿದ್ದ ವನಗಜವನ್ನು ಮುನಿನಾಥನು ಕಂಡು ಕರಿಗಳಿಗೂ ಅಸಾಧ್ಯನಾದ ಕೇಸರಿಯಾಗು ಎಂದನು. ೩೬೪. ಆಗ ದಾರುಣಮುಖನೂ ಉಗ್ರನಖನೂ ಭಯಂಕರವೂ ಮಹಾಉಗ್ರವೂ ಆದ ಹಲ್ಲುಗಳುಳ್ಳವನೂ ಕೆಂಗಣ್ಣುಗಳಿಂದ ಅಂತಾ ವ್ಯಾಘ್ರಂ ಸಿಂಹಾನಾಗಿ ಗಜವ್ರಜಂ ಮೊದಲಾದ ಮೃಗವ್ರಜಂಗಳೆಲ್ಲಮನಾಟಂದು ಕೊಂದು ಮಾಣದೆ ಪುಷ್ಪಫಲಪತ್ರಶಾಖಾನಿಮಿತ್ತಂ ವನಮಂ ತೊೞಲ್ವ ಮುನಿಕುಮಾರರಂ ಕೊಲ್ವುದುಮದಂ ಕಂಡು ದುರ್ವಾಸಂ ಮುಳಿದು,

ಶ್ಲೋ|| ಶ್ವಾವಾನರೋ ಮೃಗಸ್ಚೈವ ವ್ಯಾಘ್ರ ಸಿಂಹೋ ಮಯಾ ಕೃತಃ
ಕೃತಘ್ನೋ*ಪಿ ದುರಾಚಾರಿ ಪುನಸ್ಚೈ ವ ಭವಿಷ್ಯತಿ     ||೧೭೮||

ಟೀ|| ನಾನೀ ನಾಯಂ ಕಪಿ ಹರಿಣಂ ವ್ಯಾಘ್ರಂ ಸಿಂಹಮಾಗೆ ಮಾಡಿದೆಂ, ಕೃತಘ್ನನುಂ ದುರಾಚಾರಿಯುಮಪ್ಪಿದು ಮರಳಿ ನಾಯೆ ಅಕ್ಕುಂ. ಎಂದಿಂತಾ ತಪಸ್ವಿ ಸಿಂಹಮಂ ಮರಳಿ ಶ್ವಾನನಪ್ಪಂತು ಮಾಡಿದಂ. ನಿಮ್ಮಡಿ ನೀವಿದುಕಾರಣದಿಂ ಮೂಷಿಕೆಯಂ ಕಾರುಣ್ಯದಿಂ ಕನ್ನೆಯಪ್ಪಂತು ಮಾಡಿದಿರಿದಱ ಪೂರ್ವಜನ್ಮಸಂಸ್ಕಾರಮಿನ್ನುಂ ಪಱ*ವಟ್ಟುದಿಲ್ಲದಱ*ಂದೀಕೆಯಂ ಮೂಷಿಕೆಯಂ ಮಾಡಿ ಕುಡಿಮೆನೆ ತಪಸ್ವಿ ತಥಾಸ್ತು ಎಂದು,

ಶ್ಲೋ||  ಸೂರ‍್ಯಂ ಭರ್ತಾರಮುತ್ಸೈಜ್ಯ ಪರ್ಜನ್ಯಂ ಮಾರುತಂ ಗಿರೀನ್ ಸ್ವಯೋನಿಂ ಮೂಷಿಕಾ ಪ್ರಾಪ್ತಾ ಸ್ವಾಂ ಯೋನಿಂ ನ ಪರಿತ್ಯಜೇತ್ ||೧೭೯||

ಟೀ|| ಸೂರ‍್ಯನನ್ನೂ ಮೇಘನನ್ನೂ ಮಾರುತನನ್ನೂ ಗಿರಿಗಳನ್ನೂ ವರಿಸದೆ ಮೂಷಿಕೆಯು ತನ್ನ ಹುಟ್ಟನ್ನೆ ಹೊಂದಿದಳು. ಹುಟ್ಟನ್ನು ಬಿಡಲಾಗದು. ಅಂತಾ ಕನ್ನೆ ಮುನ್ನಿನಂತೆ ಮೂಷಿಕೆಯಾದಳ್. ಅದಱ*ಂ ನಿನ್ನ ಸಿತಗತನದಿಂ ಶತವಾರಂ ಹುತವಹನಂ ಪ್ರವೇಶಂಗೆಯ್ದೊಡಂ ಸಿತಗನೆಯಾಗಿ ಪುಟ್ಟುವೆಯೆನೆ ಆ ಮಾತಿಂಗೆ ಚಿರಂಜೀವಿಯಿಂತೆಂದಂ : ಸಿತಗನುಂ ಮತಿವಿಕಳನುಮಾಗಿ ಸತ್ತೊಡಂತುಟೆಯಕ್ಕುಂ ಸತ್ಯಮುಂ ಬುದ್ಧಿಯುಂ ನಿಶ್ಚಯಾತ್ಮಕನುಮಾಗಿ, ಕೂಡಿದವನೂ ಎತ್ತರವಾದ ಆಕಾರನೂ ಗಂಭೀರ ಧ್ವನಿಯುಳ್ಳವನೂ ಮೇಲಕ್ಕೂ ಕೆಳಕ್ಕೂ ಚಲಿತವಾಗುವ ಬಾಲವುಳ್ಳವನೂ ಆಗಿ ಶೋಭಿಸುವ ಕಂಠೀರವನಾಗಿ ಮುನಿಶ್ರೇಷ್ಠನ ಆಜ್ಞೆಯಿಂದ ಹುಲಿಯಾಗಿದ್ದವನು ಸಿಂಹವಾಗಿ ಪರಿವರ್ತಿತನಾದನು. ವ|| ಹಾಗೆ ಆ ವ್ಯಾಘ್ರನು ಸಿಂಹನಾಗಿ ಗಜವ್ರಜ ಮೊದಲಾದ ಮೃಗವ್ರಜಗಳೆಲ್ಲವನ್ನೂ ಪೀಡಿಸಿ ಕೊಂದು ಪುಷ್ಪಫಲ ಪತ್ರಶಾಖಾನಿಮಿತ್ತವಾಗಿ ವನದಲ್ಲಿ ಸಂಚರಿಸುವ ಮುನಿಕುಮಾರರನ್ನು ಕೊಲ್ಲಲು ಅದನ್ನು ಕಂಡು ದುರ್ವಾಸನು ಕೋಪಿಸಿ, ನಾನು ಈ ನಾಯಿಯನ್ನು ಕಪಿ, ಹರಿಣ, ವ್ಯಾಘ್ರ, ಸಿಂಹಗಳನ್ನಾಗಿ ಮಾಡಿದೆ. ಕೃತಘ್ನನೂ ದುರಾಚಾರಿಯೂ ಆದ ಇದು ಮರಳಿ ನಾಯಿಯೇ ಆಗುವುದು ಎಂದು ಹೀಗೆ ಆ ತಪಸ್ವಿ ಸಿಂಹವನ್ನು ಮರಳಿ ನಾಯಿಯನ್ನಾಗಿ ಮಾಡಿದನು. ಪೂಜ್ಯರೇ, ನೀವು ಈ ಕಾರಣದಿಂದ ಮೂಷಿಕೆಯನ್ನು ಕಾರುಣ್ಯದಿಂದ ಕನ್ಯೆಯನ್ನಾಗಿ ಮಾಡಿದಿರಿ. ಅದರ ಪೂರ್ವಜನ್ಮಸಂಸ್ಕಾರವಿನ್ನೂ ಹೋಗಿಲ್ಲ ಎಂಬುದನ್ನು ತಿಳಿದು ಈಕೆಯನ್ನು ಮೂಷಿಕೆಯನ್ನಾಗಿ ಮಾಡಿಕೊಡಿರಿ ಎನ್ನಲು ತಪಸ್ವಿ ‘ತಥಾಸ್ತು‘ ಎಂದನು. ಶ್ಲೋ|| ಸೂರ್ಯನನ್ನೂ ಮೇಘವನ್ನೂ ಮಾರುತನನ್ನೂ ಗಿರಿಗಳನ್ನೂ ವರಿಸದೆ ಮೂಷಿಕೆಯು ತನ್ನ ಹುಟ್ಟನ್ನೇ ಹೊಂದಿತು. ಹುಟ್ಟುಗುಣವನ್ನು ಎಂದಿಗೂ ಬಿಡುವುದು ಅಸಾಧ್ಯ. ಹಾಗೆ ಆ ಕನ್ಯೆ ಮೊದಲಿನಂತೆ ಮೂಷಿಕೆಯಾದಳು. ಅದರಿಂದ ನಿನ್ನ ನೀಚತನದಿಂದ ನೂರುವಾರ ಕಾಲ ಅಗ್ನಿಪ್ರವೇಶ ಮಾಡಿದರೂ ನೀಚನಾಗಿಯೇ ಹುಟ್ಟುವೆ ಎನ್ನಲು ಆ ಮಾತಿಗೆ ಚಿರಂಜೀವಿ ಹೀಗೆಂದನು : ನೀಚನೂ ಮತಿವಿಕಳನೂ ಆಗಿ ಸತ್ತರೆ ಹಾಗೆಯೇ ಆಗುವುದು.

ಮತಿವಿಕಳತೆಯಿಲ್ಲದೆಯುಂ
ಹುತವಹಯುತಮಾಗೆ ಬಗೆದ ಗತಿಯಂ ಪಡೆಗುಂ
ಸತತಮದು ‘ಯಾ ಮತಿಸ್ಸಾ
ಗತಿ‘ ಎಂಬ ಪುರಾಣವಾಕ್ಯಮೇಂ ತಪ್ಪುಗುಮೇ  ೩೬೫

ಎನೆ ಜಿಂಹಾಕ್ಷನಿಂತೆಂದಂ :

ನಿನಗಿನಿತು ಬದ್ಧವೈರಂ
ಮನದೊಳ್ ಕಾಗೆಗಳ ದೆಸೆಯಿನುಳ್ಳೊಡೆ ಬಲಿಭು
ಗ್ವಿನುತಮತಿ ನೀನುಮಿನ್ನೆ
ಮ್ಮ ನಡುವೆ ಮದ್ಗೋತ್ರಮಾಗಿ ಸುಖಮಿರಲಾಗಾ ೩೬೬

ಎಂಬುದುಂ ಜಿಂಹಾಕ್ಷಂ ಚಿರಂಜೀವಿಯ ಕಾಯಕ್ಕೆ ಜೀವಂಬೊಯ್ದಂತೆಯುಂ ತನ್ನ ಮನಕ್ಕೆ ಬರೆಯುಂ ನುಡಿದುದರ್ಕೆ ಅರಿಮರ್ದನಂ ಸಂತೋಷಂಬಟ್ಟು ಚಿರಂಜೀವಿಯಂ ನೋಯಲೀಯದುಪಾಯದಿಂ ತನ್ನಿಮೆಂದುಳೂಕನಿಕರಕ್ಕೆ ಮಾರಿಯನಾಮಂತ್ರಿಸಿ ಕೊಂಡುಯ್ವಂತೆ ವಾಯಸಮಂತ್ರಿಯಂ ನಿಜನಿವಾಸಕ್ಕೆ ಕೊಂಡೊಯ್ದು ನೀಂ ಮನೋಹರಮಪ್ಪೆಡೆಯೊಳಿಮೆನೆ ಚಿರಂಜೀವಿ ಮಹಾಪ್ರಸಾದಮೆಂದಾತನ ರಾಜಧಾನಿಯಪ್ಪಂಜನಗಿರಿಯ ತೞ್ಪಲ ರಾಜಜಂಬೂವಟಿ ವಿಟಪಿ ಪ್ರದೇಶಂಗಳೊಳ್

ಸಮದಪರಪುಷ್ಟಲೋಚನ
ಸಮಪ್ರಭಾರುಣಿತ ರಾಜಜಂಬೂಫಲಮಂ
ಕ್ರಮದಿಂ ಸೇವಿಸುತುಂ ಕಾ-
ಕಮಂತ್ರಿ ಕೌಶಿಕವಿನಾಶಮಂ ಚಿಂತಿಸುತುಂ  ೩೬೭

೩೬೫. ಸತ್ಯವೂ, ಬುದ್ಧಿಯೂ, ನಿಶ್ಚಯಾತ್ಮಕನೂ ಆಗಿ ಮತಿವಿಕಳತೆ ಇಲ್ಲದೆಯೂ ಅಗ್ನಿಪ್ರವೇಶವನ್ನೂ ಮಾಡಿದರೆ ಅಪೇಕ್ಷಿಸಿದ ಗತಿಯನ್ನು ಪಡೆಯುವುದು. ‘ಯಾ ಮತಿಸ್ಸಾಗತಿ‘ ಎಂಬ ಪುರಾಣವಾಕ್ಯವೇನಾದರೂ ತಪ್ಪುವುದೇ ಎನ್ನಲು ಜಿಂಹಾಕ್ಷನು ಹೀಗೆಂದನು: ೩೯೯. ನಿನಗೆ ಕಾಗೆಗಳೊಡನೆ ಬದ್ಧವೈರವಿರುವುದಾದರೆ, ಬಲಿಭುಗ್ವಿನುತ  ಮತಿ, ನೀನೂ ಇನ್ನು ಮುಂದೆ ನಮ್ಮ ನುಡುವೆ ನಮ್ಮ ಗೋತ್ರದವನಾಗಿ ಸುಖವಾಗಿರುವುದು ಸಾಧ್ಯವಿಲ್ಲವೇ ? ವ|| ಜಿಂಹಾಕ್ಷನು ಬಿದ್ದ ಜೀವಿಯ ಕಾಯಕ್ಕೆ ಜೀವವನ್ನು ಹೊಯ್ದಂತೆಯೂ ತನ್ನ ಮನಸ್ಸಿಗೆ ಬಂದಂತೆಯೂ ನುಡಿದುದಕ್ಕೆ ಅರಿಮರ್ದನನು ಸಂತೋಷಪಟ್ಚು ಚಿರಂಜೀವಿಯನ್ನು ನೋಯಿಸದೆ ಉಪಾಯದಿಂದ ತನ್ನಿರಿ ಎಂದು ಉಳೂಕನಿಕರಕ್ಕೆ ಮಾರಿಯನ್ನು ಆಮಂತ್ರಿಸಿ ಕೊಂಡೊಯ್ಯುವಂತೆ ವಾಯಸಮಂತ್ರಿಯನ್ನು ನಿಜನಿವಾಸಕ್ಕೆ ಕೊಂಡೊಯ್ದು ನೀವು ಮನೋಹರವಾದ ಕಡೆಯಲ್ಲಿ ಇರಿ ಎನ್ನಲು ಚಿರಂಜೀವಿ ಮಹಾಪ್ರಸಾದವೆಂದು ಆತನ ರಾಜಧಾನಿಯಾದ ಅಂಜನಗಿರಿಯ ತಪ್ಪಲಿನ ರಾಜ ಜಂಬೂವಟವೃಕ್ಷ ಪ್ರದೇಶಗಳಲ್ಲಿ ೩೬೭. ಸೊಕ್ಕಿದ ಕೋಗಿಲೆಗಳ ಕಣ್ಣುಗಳಂತೆ ಕೆಂಪಾಗಿದ್ದ ಅರನೇರಿಳೆಯ ಹಣ್ಣುಗಳನ್ನು ಸೇವಿಸುತ್ತ ಕಾಕಮಂತ್ರಿ ಕೌಶಿಕವಿನಾಶವನ್ನು ಚಿಂತಿಸುತ್ತಿದ್ದನು.

ಅಂತು ಸುಖಮಿರ್ದು ಕೆಲವಾನುಂ ದಿವಸದೊಳಾ ಬಲಿಪುಷ್ಟಂ ಸಂಪುಷ್ಟನಾಗಿ ಬೞ*ಕ್ಕೆ ಕೌಶಿಕಾಶ ನಿವಾಸಸ್ಥಾನಮುಮನುಳೂಕನಿಕರಸಂಕೆತಸ್ಥಾನಮುಮನಾರೈದು ತನ್ನೊಳ್ ತಾನೆ ಸಂತೋಷಂಬಟ್ಟಿಂತೆಂದಂ :

ಶ್ಲೋ|| ಆದಾನಸ್ಯ ಪ್ರದಾನಸ್ಯ ಕರ್ತವ್ಯ ಚ ಕರ್ಮಣಃ
ಕ್ಷಿಪ್ರಮಕ್ರಿಯಮಾಣಸ್ಯ ಕಾಲಃ ಪಿಬತಿ ತತಲಂ  ||೧೮೦||

ಟೀ|| ಕೊಂಬ ಕಾರ‍್ಯವನೂ ಕುಡುವ ಕಾರ‍್ಯವನೂ ಮಾಡುವ ಕಾರ‍್ಯವನೂ ಇವೆಲ್ಲವನ್ನೂ ಆ ಹೊತ್ತೇ ಮಡದಿರ್ದೊಡೆ ಕಾಲವಾ ಫಲವಂ ಕಿಡಿಸುವುದು ಎಂಬ ನೀತಿಯುಂಟದಱ*ನೆನಗೆ ಕಾಲವಿಳಂಬನಂಗೆಯ್ವದು ನಯಮಲ್ಲೆಂದಾದಿತ್ಯೋದಯಮೆ ನಿಜಸ್ವಾಮಿಕಾರ‍್ಯೋದಯಮಾಗೆ ಆದಿತ್ಯನಪತ್ಯಯಲ್ಲಿಂ ಪೊಱಮಟ್ಟು ಹಮ್ಮದಂಬೋದವರ ಪ್ರಾಣಂ ಬರ್ಪಂತೆಯುಂ ಆರ್ತಂಗಾಪ್ತಂ ಬರ್ಪತೆಯುಂ ವಾಯುವೇಗದಿಂ ಬರ್ಪ ಚಿರಂಜೀವಿಯ ಬರವಂ ಮೇಘವರ್ಣಂ ಕರ್ಣಪರಂಪರೆಯಿನಱ*ದಿದಿರಂ ಪೋಪುದುಮೆಯ್ದಿವಂದ ಚಿರಂಜೀವಿಯಂ ಪರಮಾನಂದದಿಂ ಗಾಢಾಲಿಂಗನಂಗೆಯ್ವುದುಂ ಮಹಾಪ್ರಸಾದಮೆಂದಾತಂ ಪೂಡೆಮಟ್ಟು ಬೞಕ್ಕಿಂತೆಂದಂ : ದೇವಾ ! ಶತ್ರುವಂ ನಿಶೇಷಂ ಮಾೞ್ಪುಪಾಯಮಂ ಕಲರಮೊಳ್ಳಿತ್ತಾಗಿಯಱ*ದು ಬಂದೆಂ ಪೆಱತಾಳೋಚನಕ್ಕೆಡೆಯಿಲ್ಲ. ತಡೆಯದೀಗಳೆ  ಸಮಸ್ತವಾಯಸನಿಕಾಯಮಂ ಬರಿಸಿಮೆನೆ ಮೇಘವರ್ಣನಿಂತೆಂದಂ :

ಸಪ್ತಾಂಗಸಹಿತನಹಿತಂ
ಗುಪ್ತಚರಂ ಶೂರನವನೊಳಿಱ*ಯದೆ ವಿಜಯ-
ಪ್ರಾಪ್ತಿ ನಮಗಪ್ಪುಪಾಯಮ-
ನಾಪ್ತೋತ್ತಮ ಪೇೞ*ಮೆಂದೊಡೆಂದಂ ಸಚಿವಂ  ೩೬೮

ವ|| ಹಾಗೆ ಸುಖವಾಗಿದ್ದು ಕೆಲವು ದಿನಗಳಲ್ಲಿ ಆ ಬಲಿಪುಷ್ಟನು ಸಂಪುಷ್ಟನಾಗಿ ಬಳಿಕ ಕೌಶಿಕಾ ಶನಿವಾಸಸ್ಥಾನವನ್ನೂ ಉಳೂಕನಿಕರಸಂಕೇತಸ್ಥಾನವನ್ನೂ ವಿಚಾರಿಸಿ ತನ್ನಲ್ಲಿ ತಾನೇ ಸಂತೋಷಪಟ್ಟು ಹೀಗೆಂದುಕೊಂಡನು : ಶ್ಲೋ|| ಕೊಳ್ಳುವ ಕಾರ್ಯವನ್ನೂ ಕೊಡುವ ಕಾರ್ಯವನ್ನೂ ಮಾಡುವ ಕಾರ್ಯವನ್ನೂ ಆ ಹೊತ್ತೇ ಮಾಡದಿದ್ದಲ್ಲಿ ಕಾಲವು ಆ ಫಲವನ್ನು ಕೆಡಿಸುವುದು ಎಂಬ ನೀತಿಯುಂಟು. ಅದರಿಂದ ನಾನು ಕಾಲವಿಳಂಬ ಮಾಡುವುದು ನೀತಿಯಲ್ಲ ಎಂದು ಸೂರ್ಯೋದಯವೇ ತನ್ನ ಸ್ವಾಮಿಕಾರ್ಯೋದಯವೆಂಬಂತಾಗಲು ಆದಿತ್ಯನ ಅಪತ್ಯನು ಅಲ್ಲಿಂದ ಹೊರಟು ಮೂರ್ಚೆ ಹೋದವರ ಪ್ರಾಣ ಬಂದಂತೆಯೂ ಆರ್ತನಿಗೆ ಆಪ್ತ ಬಂದಂತೆಯೂ ವಾಯುವೇಗದಿಂದ ಬರುವ ಚಿರಂಜೀವಿಯ ಆಗಮನವನ್ನು ಮೇಘವರ್ಣನು ಕರ್ಣಪರಂಪರೆಯಿಂದ ತಿಳಿದು ಎದುರುಹೋಗಿ ಸುರಕ್ಷಿತವಾಗಿ ಬಂದ ಚಿರಂಜೀವಿಯನ್ನು ಪರಮಾನಂದದಿಂದ ಗಾಢಾಲಿಂಗನ ಮಾಡಲು ಮಹಾಪ್ರಸಾದವೆಂದು ಆತನು ನಮಸ್ಕರಿಸಿ ಬಳಿಕ ಹೀಗೆಂದನು: ದೇವಾ ! ಶತ್ರುವನ್ನು ನಿಶ್ಶೇಷಮಾಡುವ ಉಪಾಯವನ್ನು ಚೆನ್ನಾಗಿ ತಿಳಿದುಬಂದೆನು ; ಬೇರೆ ಆಲೋಚನೆಗೆ ಎಡೆಯಿಲ್ಲ ; ತಡಮಾಡದೆ ಈಗಲೇ ಸಮಸ್ತವಾಯಸನಿಕಾಯವನ್ನು ಕರೆಯಿಸಿರಿ ಎನ್ನಲು ಮೇಘವರ್ಣನು ಹೀಗೆಂದನು : ೩೬೮. ಸಪ್ತಾಂಗಸಹಿತನೂ ಶೂರನಾದ ಗುಪ್ತಚರನೂ ಆಗಿರುವ ವೈರಿಯನ್ನು ಇರಿಯದೆ ಜಯಿಸುವ ಉಪಾಯವನ್ನು