ಅಂಗಜಬಾಣಕಲ್ಪಗಣಿಕಾಗಣದಿಂ ವಿಟಕೋಟಿಯಿಂ ನವೋ
ತ್ತುಂಗಶಿವಾಲಯಪ್ರಕರದಿಂ ವರವಾಪಿಗಳಿಂ ಬೃಹತ್ತಟಾ
ಕಂಗಳಿನಿಕ್ಷು ಚೂತವನರಾಜಿಗಳಿಂದೆಸೆದಿರ್ಪ ರಮ್ಯಗೇ
ಹಂಗಳಿನಂಗೆದೇಶದ ಬೆಡಂಗು ಮನಂಗೊಳಿಕುಂ ಜನಂಗಳಂ  ೩೪೪

ಅಂತಪ್ಪಂಗದೇಶದೊಳ್ ತುಂಗಭುಜನೆಂಬರಸನಿರ್ಪಂ. ಆತನಲ್ಲಿಗೆ ಯೋಗಸಿದ್ಧ ತಂತ್ರಸಿದ್ಧ ಮಂತ್ರಸಿದ್ಧರೆಂಬ ಮೂವರ್ ಸಿದ್ಧರ್ ಬಂದು ಚೋದ್ಯಮಪ್ಪ ವಿದ್ಯೆಗಳಂ ಬಲ್ಲೆವೆಂದೊಡರಸಂ ನೀಂ

ಕ್ಷತ್ರಪ್ರತಿಪತ್ತಿಚಿತ್ತವನ್ನು ಒತ್ತರಿಸಲು, ೩೪೩. ಶರಣಾಗತರಕ್ಷಣೆಯೇ ನರಪತಿಗೆ ವಿಶೇಷ ಲಕ್ಷಣ, ಇದು ನಿಶ್ಚಯ ಎಂದು ಅರಿಮರ್ದನನು ಚಿರಂಜೀವಿಯನ್ನು ಎತ್ತಿ ಎಂದು ಕೂಡಲೇ ಆಜ್ಞಾಪಿಸಿದನು. ವ|| ಹಾಗೆ ನುಡಿದ ಆ ಕೌಶಿಕಾಶ್ವರನ ಮಾತನ್ನು ಕೇಳಿ ರಕ್ತಾಕ್ಷನು ಹೀಗೆಂದನು : ದೇವಾ! ನೀವು ಹೀಗೆ ಈ ರಾಜಸವೃತ್ತಿಯಿಂದ ಈ ಚಿರಂಜೀವಿಯನ್ನು ಎತ್ತಿದಿರಾದರೆ, ಶ್ಲೋ|| ಸತ್ತ ಸಿಂಹದ ಅಸ್ಥಿಗಳನ್ನು ಒಂದುಗೂಡಿಸಿ ಆಕಾರವನ್ನು ಕೊಟ್ಟು ಪ್ರಾಣ ತುಂಬಿ ಆ ಸಿಂಹದಿಂದ ತುಂಗಭುಜನೆಂಬ ಅರಸು ಸತ್ತು ಹೋದನು ಎಂಬ ಕಥೆಯಂತಾದೀತು. ಕೌಶಿಕಾಶ್ವರನು ಅದೇನು ಎಂದು ವಿಚಾರಿಸಲು ಮಂತ್ರಿಚೂಡಾಮಣಿ ಯಾದ ರಕ್ತಾಕ್ಷನು ಹೀಗೆಂದನು : ೩೪೪. ಕಾಮನ ಬಾಣಗಳಂತಿರುವ ಗಣಿಕೆಯರಿಂದಲೂ ವಿಟಕೋಟಿಯಿಂದಲೂ ಹೊಸದಾದ ಎತ್ತರವಾದ ಶಿವಾಲಯಗಳಿಂದಲೂ ಶ್ರೇಷ್ಠವಾದ ಬಾವಿಗಳಿಂದಲೂ ದೊಡ್ಡ ಸರೋವರಗಳಿಂದಲೂ ಕಬ್ಬು ಮಾವುಗಳ ತೋಟಗಳಿಂದಲೂ ಸುಂದರವಾದ ಮನೆಗಳಿಂದಲೂ ಅಂಗದೇಶದ ವೈಭವವು ಜನರ ಮನಸ್ಸನ್ನು ಆಕರ್ಷಿಸುತ್ತಿತ್ತು. ವ|| ಹಾಗಿದ್ದ ಅಂಗದೇಶದಲ್ಲಿ ತುಂಗಭುಜನೆಂಬ ಅರಸನಿದ್ದನು. ಅರಸನಲ್ಲಿಗೆ ಯೋಗಸಿದ್ಧ ತಂತ್ರಸಿದ್ಧ ಮಂತ್ರಸಿದ್ಧರೆಂಬ ಮೂವರು ಸಿದ್ಧರು ಬಂದು ಚೋದ್ಯಕರವಾದ ವಿದ್ಯೆಗಳನ್ನು ನಾವು ಬಲ್ಲೆವು ಎನ್ನಲು ಅರಸನು ನೀವು ಬಲ್ಲವಿದ್ಯೆಗಳು ಬಲ್ಲ ವಿದ್ಯೆಗಳಾವುವೆನೆ ಯೋಗಸಿದ್ಧನೆಂದಂ : ಎನಿತು ಕಾಲದಸ್ಥಿಸಮೂಹಂಗಳಿರ್ದೊಡಂ ಇವಿಂತಪ್ಪ ಪ್ರಾಣಿಗಳ ಶಲ್ಯವೆಂದು ಸಹದೇವನಂತೆ ಪೇಳಲ್ಬಲ್ಲೆನೆಂಬುದುಂ ತಂತ್ರಸಿದ್ದನೆಚಿದಂ: ಅನೀತಂ ತೋಱ*ದ  ಸ್ಥಿತಿಗಳನಾ ಪ್ರಾಣಿಯ ಪೊರ‍್ವರೂಪಮಂ ಪೋಲೆ ವಿಶ್ವಕರ್ಮನಂತೆ ನಿರ್ಮಿಸಲ್ ಬಲ್ಲೆನೆಂಬುದಂ ಮಂತ್ರಸಿದ್ದಿಂ ಆನೀ ಸಾಧಕಂ ಸಲಕ್ಷಣಮಾಗಿ ಮಾಡಿದಶಲ್ಯಾವಲಯವಕ್ಕೆ ದೇವನಂತೆ ಜೀವಮಂ ಪಡೆದುಮದರ್ಕೆ ಸತ್ತ್ವಮುಂ ದೃಧತ್ವಮುಮಪ್ಪಂತೆ ಮಾಡಿ ತೋಳಲ್ ಬಲ್ಲೆನೆಂದುಬಿನ್ನಪಂಗೆಯ್ದೊಡರಸನವರಂ ಮನ್ನಿಸಿ ಬೞ*ಕೊರ್ವ ವ್ಯಾಧಾದಿಪನಂ ಬರಿಸಿ ಪಲಕಾಲದಶಲ್ಯಂಗಳನೆಲ್ಲಿಯಾದೊಡಂ ಕೊಂಡು ಬಾ ಪೋಗೆಂದೊಡಾ ಕಿರಾತಕಂ ಪೋಗಿ ತನ್ನ ಪಳ್ಳಿಯ ಸಮೀಪದೊಳ್ ಪುರಾಣಕೂಪದೊಳಿರ್ದಸ್ದಿಯನಾಯ್ದು ತಂದೊಪ್ಪಿಸಲೊಡಮರಸನಾ ಸಿದ್ದಿಂ ಬರಿಸಿ ತೋಳುವುದುಮವರೊಳ್ ಯೋಗಸಿದ್ದನಿದು ಮಹಾಬಲವಂತನಪ್ಪ ಸಿಂಹದಸ್ತಿಗಳೆಂದು ಪೇಳ್ದುವುದುಮರಸಂ ತಂತ್ರಸಿದ್ದನ ಮೊಗಮಂ ನೋಡಿ ನೀನಿದಂ ಸಿಂಹದಾಕೃತಿಯಂ ಮಾಡೆಂಬುದುಮಾತನಂತೆಗೆಯ್ವೆನೆಂದವಂ ಕೊಂಡುಪೋಗಿ ಕಂಡವರ್ ಭಯಂಗೊಂಡೋಡುವಂತೆ ಭಯಂಕರಾಕಾರಮಪ್ಪ ಸಿಂಹಮಂ ಮಾಡಿ ನೋಡಲ್ ಬನ್ನಿಮೆಂದರಸನಂ ಕರೆವುದು ಸಮಸ್ತ ಪರಿವಾರಂಬೆರಸು ಪೋಗಿ ನೀಡುಂ ಭಾವಿಸಿ ನೋಡಿ ಚೋದ್ಯಂಬಟ್ಟು ಬಳಿಕ್ಕೆ ಮಂತ್ರಸಿದ್ಧನಂ ಕರೆದು ನೀನಿದಂ ಸಜೀವಂಗೆಯ್ಯೆಂಬುದುಮಾ ನೃಪನ ಮಂತ್ರಿಗಳೊಳೊರ್ವಂ ಭಿನ್ನಪಮೆಂದಿಂತೆಂದಂ: ದೇವಾ! ನೀವೀ ಸಿದ್ಧರ ವಿದ್ಯೆಯ ಮೈಮೆಯಂ ನೋಡಲಿನಿತಂ ಮಾಡಿದಿರ್. ಇವರಿರರ್ವರ ವಿದ್ಯೆಯೆಂತು ಯಾವುವು ಎನ್ನಲು ಯೋಗಸಿದ್ಧನು ಹೀಗೆಂದನು; ಎಷ್ಟು ಕಾಲದ ಅಸ್ತಿ ಸಮೂಹಗಳಿದ್ದರೊ ಇವು ಇಂತಹ ಪಾಣಿಯ ಮೊಳೆ ಎಂದು ಸಹದೇವನಂತೆ ಹೇಳಲು ಸಮರ್ಥ ಎನ್ನಲು ತಂತ್ರಸಿದ್ದನು ಹೀಗೆಂದನು: ನಾನು, ಈತನು ಹೇಳಿದ ಅಸ್ತಿಗಳಿಂದ ಆ ಪ್ರಾಣಿಯ ಪೊರ್ವರೊಪವನ್ನು ಹೋಲುವಂತೆ ವಿಶ್ವಕರ್ಮನಂತೆ ದೇಹವನ್ನು ನಿರ್ಮಿಸಬಲ್ಲೆ ಎನ್ನಲು ಮಂತ್ರಸಿದ್ಧನು ಹೀಗೆಂದನು: ನಾನು ಈ ಸಾಧಕನು ಸಲಕ್ಷಣವಾಗಿ ಮಾಡಿದ ಅವಯವಕ್ಕೆ ದೇವನಂತೆ ಜೀವವನ್ನು ಕೊಟ್ಟು ಅದಕ್ಕೆ ಸತ್ತ್ವವನ್ನೂ ದೃಡತ್ವವನ್ನೂ ಕೊಟ್ಟು ತೋರಿಸಬಲ್ಲೆ ಎ೦ದು ಬಿನ್ನವಿಸಲು ಅರಸನು ಅವರನ್ನು ಮನ್ನಿಸಿ ಬೇರೂಬ್ಬ ವ್ಯಾಧಾಪನನ್ನು ಕರೆಸಿ ಹಲವು ಕಾಲದ ಹಿಂದಿನ ಮೂಳೆಗಳನ್ನು ಎಲ್ಲಿಂದಾದರೂ ಕೂಂಡು ಬಾ, ಹೋಗು ಎನ್ನಲು ಆ ಕಿರಾತನು ಹೋಗಿ ತನ್ನ ಹಳ್ಳಿಯ ಸಮೀಪದ ಪುರಾಣ ಕೂಪದಲ್ಲಿದ್ದ ಅಸ್ತಿಗಳನ್ನು ಆರಿಸಿ ತಂದೊಪ್ಪಿಸಿದನು.  ಅರಸನು ಆ ಸಿದ್ಧರನ್ನು ಕರೆಸಿ ತೋರಿಸಲು ಅವರಲ್ಲಿ ಯೋಗಸಿದ್ಧನು ಇದು ಮಹಾಬಲಶಾಲಿಯಾದ ಸಿಂಹದ ಅಸ್ತಿಗಳೆಂದು ಹೇಳಲು ಅರಸನು ತಂತ್ರಸಿದ್ಧನ ಮುಖವನ್ನು ನೋಡಿ ನೀನಿದನ್ನು ಸಿಂಹದಾಕೃತಿಯನ್ನಾಗಿ ಮಾಡು ಎನ್ನಲು ಅವನು ಹಾಗೆಯೇ ಆಗಲೆಂದು ಅವುಗಳನ್ನು ಕೊಂಡುಹೋಗಿ ಕಂಡವರು ಭಯಗೊಂಡು ಓಡುವಂತೆ ಭಯಂಕರ ಆಕಾರವಾದ ಸಿಂಹವನ್ನು ಮಾಡಿ ನೋಡಲು ಬನ್ನಿ ಎಂದು ಅರಸನನ್ನು ಕರೆದನು. ಅರಸನು ಸಮಸ್ತಪರಿವಾರ ಸಮೇತನಾಗಿ ಹೋಗಿ ದೀರ್ಘಕಾಲದವರೆಗೆ ನೋಡಿ ಆಶ್ಚರ್ಯಪಟ್ಟು ಬಳಿಕ ಮಂತ್ರಸಿದ್ಧನನ್ನು ಕರೆದು ನೀನು ಇದನ್ನು ಸಜೀವಗೊಳಿಸು ಎನ್ನಲು ಆ ರಾಜನ ಮಂತ್ರಿಗಳಲ್ಲೊಬ್ಬನು ಬಿನ್ನಹ ಮಾಡಿಕೊಂಡನು; ದೇವಾ ! ನೀವು ಈ ಸಿದ್ಧರ ವಿದ್ಯೆಯ ಮಹಿಮೆಯನ್ನು ನೋಡಲು ಸತ್ಯವಾದುದಂತೆ ಮಂತ್ರಸಿದ್ಧನ ವಿದ್ಯ೦ ಸತ್ಯಮಪ್ಪುದರೋಱೊಳ್ ಸಂದೇಯಮಿಲ್ಲದಱೆಂದೀ ಸಿಂಹಮಂ ಪ್ರಾಣಮಂ ಪಡೆಯಿಸಿ ನೋೞ್ಪ ವಿನೋದಮೆಂತು೦ ಬೇಡೆಂಬುದುಮರಸನೀ ಚೋದ್ಯಮಂ ನೋೞ್ಪ ಮುಸಿರದಿರಿಮೆನೆ ಮತ್ತೋರ್ವ ಮ೦ತ್ರಿಯಿಚಿತೆಂದಂ: ದೇವಾ! ನೀವಿಂತು ಅಸದಾಗ್ರಹಿಗಳಾಗಿ ಬೆಸಸಿದಿರ್, ಪಿರಿಯ ಮಂತ್ರಿ ಪೇಳ್ದಂತೆ

ಸಿಂಗಂ ಗಡ ! ಮತ್ತದು ತಂ-
ತ್ರಂಗಳೊಳಂ ದಿವ್ಯಮಪ್ಪ ಮಂತ್ರಂಗಳೊಳಂ
ತಾಂ ಗಡ ! ಸಂಭೂತಂ ಗಡಿ-
ದೇಂ ಗಡ ನಮ್ಮಳವೆ ಬೞ*ಕೆ ನಿಲಲುಂ ಗೆಲಲುಂ ೩೪೫

ಅದಱ*ನೆತ್ತುವುದು ಮಂತ್ರಮಲ್ಲ, ಇ೦ತಪ್ಪೆಡೆಗೊಂದು ಕಥೆಯುಂಟೆನೆ ಅರಸನದೆಂತೆನೆ ಮಂತ್ರಿಪೇೞ*೦: