ಉಜ್ಜಯಿನಿಯೆಂಬ ಪೊೞ*ಲೊಳ್ ಸುಬ್ರಹ್ಮಣ್ಯನೆಂಬ ಬ್ರಾಹ್ಮಣನಿರ್ಪಂ. ಆತಂಗೆರಡಾ ವನಾರುನುಂ ದಾನಂಗೊಟ್ಟೊಡವಂ ಕಳಲೆಂದೊರ್ಬ ಕಳ್ಳಂ ಬರುತ್ತಿರ್ದೆಡೆಯೊಳೊಂದು ನಿಡಿದಪ್ಪ ಜಟಾಯುವಿನಂತೆ ಪ್ರಜ್ವಲಿಸುವ ಆ ಬೇಡನ ಬೆಂಕಿಗೆ ಬಿದ್ದನು. ವ|| ಕಿಚ್ಚಿಗೆ ಬಿದ್ದು ಸತ್ತ ಆ ಕಪೋತನನ್ನು ಕಂಡು ಕಿರಾತನು ತನ್ನ ಉದರದಹನ ತಾಪಶಮನ ಮಾಡಿಕೊಂಡನು. ಅದರಿಂದ, ಶ್ಲೋ|| ಜೀಮೂತವಾಹನನು ಸ್ವಮಾಂಸದಿಂದಲೇ ಗರುಡನನ್ನು ಆರಾಸಿದಂತೆ ಮರೆಹೊಕ್ಕ ಶತ್ರುವನ್ನು ಕಪೋತನು ಸ್ವಶರೀರ ಮಾಂಸದಿಂದಲೇ ಆರಾಸಿತು. ವ|| ಹಾಗೆ ಆ ಕಪೋತವು ಶರಣಾಗತನೆಂಬಷ್ಟರಿಂದಲೇ ಕಿರಾತನಿಗೆ ತನ್ನ ಅಸುವನ್ನು ಅರ್ಪಿಸಿತು. ಈತನೂ ನಿಮ್ಮ ಗುಣಕೀರ್ತನವೇ ಕಾರಣವಾಗಿ ಕಾಗೆಯ ಕೈಯಿಂದ ಪರಾಭವ ಹೊಂದಿದನು. ಅಲ್ಲದೆ, ತನ್ನ ಪ್ರಭುವಿನ ಬಗೆಗೆ ಭೀತನೂ, ಅಪಮಾನಿತನೂ ಆಗಿರುವನು. ಅದರಿಂದ ಈತನನ್ನು ಕಾಪಾಡುವುದು ನೀತಿಯೂ ಧರ್ಮವೂ ಆಗಿರುವುದು ಎಂದನು. ಅದನ್ನು ಕೇಳಿ ಅರಿಮರ್ದನನು ದೃಪದಾಕ್ಷನೆಂಬ ಮಂತ್ರಿಯ ಮುಖವನ್ನು ನೋಡಿ ನೀವು ಕಂಡ ನೀತಿ ಯಾವುದೆಂಬುದನ್ನು ಹೇಳಿರಿ ಎನ್ನಲು ಅವನು ಹೀಗೆಂದನು : ಜಿಂಹಾಕ್ಷನೆಂದಂತೆ ಈ ವಾಯಸನು ವಧಪ್ರಾಪ್ತನಲ್ಲ. ಅಲ್ಲದೆ, ಶ್ಲೋ|| ಶತ್ರೋರಪಿ ಹಿತಂ ಶ್ರೇಯೋ ವಿವದೇತೇ ಪರಸ್ಪರಂ ಎಂಬುದೊಂದು ಕಥೆಯುಂಟು ಎನ್ನಲು ಕೌಶಿಕಾಶ್ವರನು ಅದೇನು ಎನ್ನಲು ದೃಪದಾಕ್ಷನು ಹೇಳಿದನು : ವ|| ಉಜ್ಜಯಿನಿಯೆಂಬ ನಗರದಲ್ಲಿ ಸುಬ್ರಹ್ಮಣ್ಯನೆಂಬ ಬ್ರಾಹ್ಮಣನಿದ್ದನು. ಆತನಿಗೆ ಯಾರೋ ಎರಡು ಗೋವುಗಳನ್ನು ದಾನ ಕೊಟ್ಟಿರಲು ಅವುಗಳನ್ನು ಕಳಬೇಕೆಂದು ಒಬ್ಬ ಕಳ್ಳನು ಬರುತ್ತಿದ್ದನು. ಎಡೆಯಲ್ಲಿ ಒಂದು ಎತ್ತರವಾದ ರೂಪವನ್ನು ಕಂಡು ನೀನು ಯಾರು ಎಂದು ವಿಚಾರಿಸಲು ನಾನು ಬ್ರಹ್ಮರಾಕ್ಷಸ, ನೀನು ರೂಪಮಂ ಕಂಡು ನೀನಾರ್ಗೆಂದು ಬೆಸಗೊಂಡೊಡೆ, ಆಂ ಬ್ರಹ್ಮರಾಕ್ಷಸಂ ನೀನಾರೆಂದು ಕೇಳ್ದೊಡಾಂ ಕಳ್ಳನೆಂದೊಡೆಲ್ಲಿಗೆ ಪೋದಪ್ಪೆಯೆಂದು ಬೆಸಗೊಳ್ವುದುಂ ಸುಬ್ರಮಣ್ಯಭಟ್ಟಂಗೆರಡಾವುಳ್ಳಿನಂ ಕಳಲ್ಪೋದಪ್ಪೆನೆಂಬುದುಂ ನಾನಾ ಬ್ರಾಹ್ಮಣನಂ ಪಿಡಿಯಲೆಂದು ಪೋಗಲಿರ್ದೆನದಱ*ಂದೊಡನೆ ಪೋಪಂ ನಡೆಯೆಂದಿರ್ಬರುಂ ಬ್ರಾಹ್ಮಣನ ಮನೆಯನೆಯ್ದೆವಂದು ಕಳ್ಳನಿಂತೆಂದಂ. ನಾನಾ ಪಶುವನುಯ್ವನ್ನೆವರಂ ನೀನುಸಿರದಿರೆನೆ ರಕ್ಕಸನಿಂತೆಂದಂ : ಪಶುವಂ ಬಿಡುವ ಪೊಡೆವ ಕಳಕಳಮಂ ಕೇಳ್ದು ಪಾರ್ವನೆೞ್ಚತ್ತೊಡೆನ್ನ ಕಾರ‍್ಯಂ ಕಿಡುಗುಂ. ಮುನ್ನಂ ನಾಂ ಪಿಡಿದಪೆಂ ಬೞ*ಕ್ಕ ನೀಂ ಪಶುವಂ ಕೊಂಡುಪೋಗೆಂದೊಡೆ ಕಳ್ಳನೆಚಿದನಚಿತಪ್ಪೊಡೆ ಬ್ರಹ್ಮರಾಕ್ಷಸಂ ಪಿಡಿಯಲ್ ಬಂದಿರ್ದಪಂ ಬೇಗಮೇೞೆಂದು ಪೇೞ*ಪೆಂ ನೋಡೆನೆ ಬ್ರಹ್ಮರಾಕ್ಷಸಂ ನಿನ್ನಿಂದೆ ಮುನ್ನಮೆ ನಾಂ ಪೇೞ್ದಪೆನೆಂದು ಪಾರ್ವನ ಪೞ್ಕೆಯ ಸಮೀಪಕ್ಕೆ ಬಂದೆಲೆ ಬ್ರಾಹ್ಮಣಾ ! ನಿನ್ನ ಪಶುವಂ ಕಳ್ದುಕೊಂಡು ಪೋಗಲೆಂದೊರ್ವ ಕಳ್ಳಂ ಬಂದಿರ್ದಪಂ ಬೇಗಮೇೞೆನಲೊಡಂ ಕಳ್ಳಂ ಎಲೆ ಬ್ರಾಹ್ಮಣಾ! ನಿನ್ನಂ ಬ್ರಹ್ಮರಾಕ್ಷಸಂ ಪಿಡಿಯಲ್‌ಬಂದಿರ್ದಪಂ ಬೇಗಮೇೞ*ಂಬುದುಮದಂ ಕೇಳ್ದು ಬ್ರಾಹ್ಮಣನೆೞ*ತ್ತದಾರೆಲವೋ ಎಂದದ್ದರಿಸಿ ಬರಲೊಡಂ ತಸ್ಕರನುಂ ಬ್ರಹ್ಮರಾಕ್ಷಸನುಮೋಡಿ ಪೋದರ್, ಅದಱ*ಂ,

ಶ್ಲೋ||  ಶತ್ರೋರಪಿ ಹಿತಂಶ್ರೇಯೋ ವಿವದೇತೇ ಪರಸ್ಪರಂ
ಚೋರೇಣ ಜೀವಿತಂ ದತ್ತಂ ರಾಕ್ಷಸೇನ ತು ಗೋಯುಗಂ  ||೧೭೪||

ಯಾರು ಎಂದ ಕೇಳಲು ನಾನು ಕಳ್ಳ ಎಂದು ಹೇಳಲು ಎಲ್ಲಿಗೆ ಹೋಗುವೆ ಎಂದು ವಿಚಾರಿಸಲು ಸುಬ್ರಹ್ಮಣ್ಯ ಭಟ್ಟನ ಬಳಿಯಲ್ಲಿ ಎರಡು ಗೋವುಗಳಿರುವುದರಿಂದ ಅವುಗಳನ್ನು ಕಳುವುದಕ್ಕೆ ಹೋಗುವೆನು ಎಂದನು. ನಾನು ಆ ಬ್ರಾಹ್ಮಣನನ್ನು ಹಿಡಿಯಲೆಂದು ಹೋಗಲಿದ್ದೇನೆ. ಅದರಿಂದ ಜತೆಯಲ್ಲಿಯೇ ಹೋಗೋಣ, ನಡೆ ಎಂದು ಇಬ್ಬರೂ ಬ್ರಾಹ್ಮಣನ ಮನೆಯನ್ನು ತಲುಪಿ ಕಳ್ಳನು ಹೀಗೆಂದನು : ನಾನು ಆ ಪಶುವನ್ನು ತೆಗೆದುಕುಂಡು ಹೋಗುವವರೆಗೆ ನೀನು ಸುಮ್ಮನಿರು ಎನ್ನಲು ರಕ್ಕಸನು ಹೀಗೆಂದನು : ನೀನು ಆ ಪಶುವನ್ನು ಬಿಚ್ಚುವ, ಹೊಡೆಯುವ ಕಳಕಳವನ್ನು ಕೇಳಿ ಆ ಬ್ರಾಹ್ಮಣನೇನಾದರೂ ಎಚ್ಚತ್ತರೆ ನನ್ನ ಕಾರ್ಯವು ಕೆಡುವುದು ; ಮೊದಲು ನಾನು ಹಿಡಿಯುವೆ; ಬಳಿಕ ನೀನು ಹಸುಗಳನ್ನು ಕೊಂಡು ಹೋಗು ಎನ್ನಲು ಕಳ್ಳನು ಹೀಗೆಂದೆನು: ಹಾಗಾದರೆ ಬ್ರಹ್ಮರಾಕ್ಷಸನು ಹಿಡಿಯಲು ಬಂದಿರುವನು, ಬೇಗನೆ ಏಳು ಎಂದು ಹೇಳುವೆನು ನೋಡು ಎನ್ನಲು ಬ್ರಹ್ಮರಾಕ್ಷಸನು ನಿನಗಿಂತ ಮೊದಲು ನಾನು ಹೇಳುವೆನು ಎಂದು ಬ್ರಾಹ್ಮಣನ ಪಕ್ಕಕ್ಕೆ ಬಂದು ಏಲೆ ಬ್ರಾಹ್ಮಣಾ! ನಿನ್ನ ಹಸುವನ್ನು ಕದ್ದುಕೊಂಡು ಹೋಗಬೇಕೆಂದು ಒಬ್ಬ ಕಳ್ಳನು ಬಂದಿರುವನು; ಬೇಗನೇ ಏಳು ಎನ್ನಲು ಕಳ್ಳನು ಏಲೆ ಬ್ರಾಹ್ಮಣಾ! ನಿನ್ನನ್ನು ಬ್ರಹ್ಮರಾಕ್ಷಸನು ಹಿಡಿಯಬೇಕೆಂದು ಬಂದಿರುವನು ಬೇಗನೇ ಏಳು ಎನ್ನಲು ಅದನ್ನ ಕೇಳಿ ಬ್ರಾಹ್ಮಣನು ಎಚ್ಚತ್ತು ಅದಾರು ಎಲವೋ ! ಎಂದು ಗದರಿಸಿ ಬರಲು ತಸ್ಕರನೂ ಬ್ರಹ್ಮರಾಕ್ಷಸನೂ ಓಡಿಹೋದರು. ಅದರಿಂದ, ಶ್ಲೋ|| ಶತ್ರುಗಳಾಗಿದ್ದವರು ತಮ್ಮತಮ್ಮಲ್ಲೇ ಜಗಳ ಮಾಡಿದುದರಿಂದ

ಟೀ|| ಶತ್ರುಗಳಾಗಿರ್ದವರ್ ತಮ್ಮೊಳ್ ವಿವಾದಂ ಮಾಡಿದ ದೆಸೆಯಿಂ ಕಳ್ಳನ ದೆಸೆಯಿಂ ಬ್ರಾಹ್ಮಣನ ಸಾವು ಉೞ*ಯಲ್ಪಟ್ಟಿತು, ರಾಕ್ಷಸನಿಂ ಗೋವುಗಳೆರಡುಮು*ಯಲ್ಪಟ್ಟವು ಅದು ಕಾರಣದಿಂ ವಿರೋವರ್ಗದೊಳೆನ್ನರುಮನಾದೊಡಂ ತನ್ನೊಳಗಿಡುವುದೆ ನಮಗುಱುವ ಕಾರ‍್ಯಂ. ಅಂತುಮಲ್ಲತಂ ಮೇಘವರ್ಣನ ಪ್ರಧಾನನವರಿಂದಪಮಾನಿತನಾಗಿ ಬಂದಾತನಂ ಕೈಕೊಳ್ವುದೆ ನೀತಿಯುಂ ಖ್ಯಾತಿಯು ಮದೆಂತೆನೆ ಕಮಲಾಸನನ ಕಯ್ಯೊಳಮರತ್ವಮಂ ಪಡೆದಮರಸಮಿತಿಯಂ ಕೋಟಲೆಗೊಳಿಪ ಹಿರಣ್ಯಾಕ್ಷನಂ ಪುಂಡರೀಕಾಕ್ಷಂ ಕೊಂದಾತನಗ್ರಸುತನಪ್ಪ ಪ್ರಹ್ಲಾದಂ ತನಗೆ ಭಕ್ತನೆಂಬನಿತಱೊಳೆ ಕಾದು ಆತಂಗೆ ವರದನಾದಂ. ಅದಱ*ಂದೀ ಚಿರಂಜೀವಿಯಂ ಕಾವುದೆ ಧರ್ಮಂ. ಅದಲ್ಲದೆಯುಂ ಮಳಯಕೇತುವೆಂಬ ರಾಜತನೂಜನತಿತೇಜಿಷ್ಠನಾಗಿ ತನ್ನ ಮಂತ್ರಿ ಮುದ್ರಾರಾಕ್ಷಸಂಗೆ ತಥ್ಯಾಭಿಯೋಗಮಾದೊಡಂ ಮಿಥ್ಯಾಭಿಯೋಗಮೆಂದು ನಿಶ್ಚೈಸಿ ನಿರ್ವಿಚಾರದಿಂ ನಿರ್ದಾಟಿಸಿ ಕಳೆದೊಡಾತನಪಮಾನಿತನಾಗಿ ಪೋಗಿ ಚಂದ್ರಗುಪ್ತಂಗಾಪ್ತನಪ್ಪುದುಮಾ ಮಲಯಕೇತು ಮಂತ್ರಿಸಹಿತನಾಗಿ ಶತ್ರುಸಂಗ್ರಹಕ್ಕೆ ಬಂದಂ. ಅದಱ*ಂ ಮೇಘವರ್ಣನುಮಿಂತಪ್ಪ ಮಂತ್ರಿಯನವಜ್ಞೆಗೆಯ್ದುಪೇಕ್ಷೆಯಿಂದಿರೆ ಕೆಟ್ಟಂ. ಅದರ್ಕೊಂದು ಸಂದೆಯಂ ಬೇಡ. ನಾವೀ ವಾಯಸಮಂತ್ರಿಯಂ ಕಾವುದೆ ನಯಂ. ಎಂದನೇಕ ಹೇತು ದೃಷ್ಟಾಂತಂಗಳಂ ತೋಱ* ನುಡಿದ ದೃಪದಾಕ್ಷನಂ ಕಟಾಕ್ಷಿಸಿ ಪತಿಹಿತಶಿಖಾಮಣಿಯಪ್ಪ ರಕ್ತಾಕ್ಷನಿಂತೆಂದಂ :

ಕಳ್ಳನಿಂದಾಗಿ ಬ್ರಾಹ್ಮಣನ ಸಾವು ನಿವಾರಿತವಾಯಿತು ; ರಾಕ್ಷಸನಿಂದಾಗಿ ಗೋವುಗಳೆರಡೂ ಉಳಿದವು. ಅದರಿಂದ ವಿರೋವರ್ಗದಲ್ಲಿ ಎಂಥವರನ್ನಾದರೂ ತನ್ನಲ್ಲಿ ಇಟ್ಟುಕೊಳ್ಳುವುದು ನಮಗೆ ಶ್ರೇಷ್ಠಕಾರ್ಯ. ಅಲ್ಲದೆ ಈತನು ಮೇಘವರ್ಣನ ಪ್ರಧಾನನು. ಅವರಿಂದ ಅಪಮಾನಿತನಾಗಿ ಬಂದ ಆತನನ್ನು ಕೈಕೊಳ್ಳುವುದೇ ನೀತಿಯೂ ಖ್ಯಾತಿಯೂ ಆಗಿದೆ. ಕಮಲಾಸನನ ಕೈಯಿಂದ ಅಮರತ್ವವನ್ನು ಪಡೆದ ಅಮರಸಮಿತಿಯನ್ನು ಕೋಟಲೆಗೊಳಿಸಿದ* ಹಿರಣ್ಯಾಕ್ಷನನ್ನು ಪುಂಡರೀಕಾಕ್ಷನು ಕೊಂದು ಆತನ ಅಗ್ರಸುತನಾದ ಪ್ರಹ್ಲಾದನು ತನ್ನ ಭಕ್ತನೆಂಬುದರಿಂದಾಗಿ ಅವನನ್ನು ಕಾಪಾಡಿ ಆತನಿಗೆ ವರದನಾದನು. ಅದರಿಂದ ಈ ಚಿರಂಜೀವಿಯನ್ನು ಕಾಪಾಡುವುದೇ ಧರ್ಮ. ಅವಲ್ಲದೆ ಮಲಯಕೇತು ಎಂಬ ರಾಜತನೂಜನು ಅತಿತೇಜಿಷ್ಠನಾಗಿ ತನ್ನ ಮಂತ್ರಿ ಮುದ್ರಾರಾಕ್ಷಸನಿಗೆ ತಥ್ಯಾಭಿಯೋಗವಾದರೂ ಮಿಥ್ಯಾಭಿಯೋಗವೆಂದು ನಿಶ್ಚಯಿಸಿ ನಿರ್ವಿಚಾರದಿಂದ ನಿವಾರಿಸಲು ಆತನು ಅಪಮಾನಿತನಾಗಿ ಹೋಗಿ ಚಂದ್ರಗುಪ್ತನಿಗೆ ಆಪ್ತನಾದನು. ಆ ಮಲಯಕೇತು ಮಂತ್ರಿಸಹಿತನಾಗಿ ಶತ್ರು ಸಂಗ್ರಹಕ್ಕೆ ಬಂದನು. ಅದರಿಂದ ಮೇಘವರ್ಣನೂ ಇಂತಹ ಮಂತ್ರಿಯನ್ನು ಅವಜ್ಞೆ ಮಾಡಿ ಉಪೇಕ್ಷೆಯಿಂದ ಇದ್ದರೆ ಕೆಟ್ಟನು. ಅದರಲ್ಲಿ ಒಂದು ಸಂದೇಹ ಬೇಡ. ನಾವು ಈ ವಾಯಸಮಂತ್ರಿಯನ್ನು ಕಾಪಾಡುವುದೇ ನೀತಿ. ಹೀಗೆ ಅನೇಕ ದೃಷ್ಟಾಂತಗಳನ್ನು ತೋರಿಸಿ ಹೇಳಿದ ದೃಪದಾಕ್ಷನನ್ನು ಕಟಾಕ್ಷಿಸಿ

* ಹಿರಣ್ಯಕಶಿಪು ಎಂದಾಗಬೇಕಿತ್ತು. ಹಿರಣ್ಯಾಕ್ಷನನ್ನು ವರಹಾವತಾರಧಾರಿಯಾಗಿ ಕೊಂದನು : ಹಿರಣ್ಯಕಶಿಪುವನ್ನು ನೃಸಿಂಹಾವತಾರದಿಂದ ಸೀಳಿದನು.

ಶ್ಲೋ||  ಉಪಕಾರಾಣಿ ವಾಕ್ಯಾನಿ ಶತ್ರೂಣಾಮುಪಲಕ್ಷಯೇತ್
ವ್ಯಾಧಾ ಮೃಗವಧಂ ಕರ್ತುಂ ಹೃದ್ಯಂ ಗಾಯಂತಿ ಸುಸ್ವರಂ  ||೧೭೫||

ಟೀ|| ಶತ್ರುಗಳ್ಗುಪಕಾರಮಪ್ಪ ವಾಕ್ಯಂಗಳನೆ ತೋಱುವುದು. ವ್ಯಾಧರ್ ಮೃಗವಧೆಯಂ ಮಾಡಲೋಸುಗ ಸುಸ್ವರದಲ್ಲಿ ಹಾಡುವರ್ ಎಂಬ ನೀತಿಯಿಂ ನೀವೆಲ್ಲಂ ಕಪಟನಾಟಕ ಸೂತ್ರಧಾರನುಮಪ್ರಕಾಶ ಹೃದಯನುಂ ಕ್ಷಮಾಧರನುಂ ಅತಿವಿಧಾನನುಂ ಮೇಘವರ್ಣನ ಪ್ರಧಾನನುಮಪ್ಪ ಚಿರಂಜೀವಿಯ ಕಪಟಮನಱ*ಯದೆ ಮೃದುಮಧುರಾಲಾಪಂಗಳಂ ನಂಬಿ ಕೌಶಿಕಶಿಖಾಮಣಿಯ ಪ್ರಾಜ್ಯರಾಜ್ಯ ಮಹಾಮಹೀರುಹಕ್ಕೆ ದಾವಾಗ್ನಿಗಳಾದಿರದೇಕೆಂದೊಡೆ ಚಿರಂಜೀವಿ ಚಿರಂತನನುಂ ಬುದ್ಧಿವಂತನುಂ ಸ್ವಾಮಿಹಿತನುಮಪ್ಪುದಱ*ನೆಂತುಂ ಸ್ವಾಮಿಗೆ ತಪ್ಪಲಱ*ಯಂ. ಮತ್ತಮೀತನಿರ್ದಂದಂ ವತ್ಸರಾಜನೆಂಬ ರಾಜಪುತ್ರಂ ಶತ್ರುಸಂಗ್ರಹಕ್ಕೊಳಗಾದೊಡಾತನ ಮಂತ್ರಿ ಯೌಗಂಧರಾಯಣಂ ಪತಿಹಿತಾರ್ಥಂ ಯೋಗಾಚಾರನಾಗಿರ್ದಂತೆಯುಂ ಬಂಧುಸಂಬಂಧಮಪ್ಪ ಬದ್ಧವೈರಂ ಕಾರಣಮಾಗಿ ದುರ‍್ಯೋಧನನಂ ಸಾಸಲೆಂದಾರಾಸುತ್ತುಂ ಶಕುನಿಯೆಂತಿರ್ದನಂತೆಯುಂ ನಂದಂ ನಿಜನಂದನರಂ ಕೊಂದ ಪಗೆಯಂ ಬಗೆಗೊಳೆ ಸಾಸಲೆಂದು ಸಾಧುವೇಷದಿಂ ಭೇದಸಲಿರ್ದತೆಯುಂ ವಾಯಸಮಂತ್ರಿ ನಮಗಪಾಯಮಂ ಬಗೆದುಪಾಯದಿನಿರ್ದೊಡಿವೆಲ್ಲಂ ಸಹಜಮಲ್ಲ. ನಿಶ್ಚಯಂ ಕಾಗೆಗಳ್ಗೆ ಪಗೆಯಾಗಿರ್ದನೆಂದು ನಂಬಲ್ವೇಡಮೆಂದು ಪ್ರತ್ಯಕ್ಷಾನುಮಾನಂಗಳಿಂ ತತ್ತ್ವವಿದಂ ನುಡಿವಂತೆ ನುಡಿದ ನಿಜಮಹತ್ತರಂಗುತ್ತರಂಗೊಡಲೊಲ್ಲದಿರ್ದರಿಮರ್ದನಂಗೆ ಕ್ಷತ್ರಪ್ರತಿಪತ್ತಿಚಿತ್ತಮನೊತ್ತರಿಸೆ

ಪತಿಹಿತಶಿಖಾಮಣಿಯಾದ ರಕ್ತಾಕ್ಷನು ಹೀಗೆಂದನು : ಶ್ಲೋ|| ಶತ್ರುಗಳಿಗೆ ಉಪಕಾರವಾದ ವಾಕ್ಯಗಳನ್ನೇ ತೋರಬೇಕು. ವ್ಯಾಧರು ಮೃಗವಧೆಯನ್ನು ಮಾಡಲಿಕ್ಕಾಗಿ ಸುಸ್ವರದಲ್ಲಿ ಹಾಡುವರು ಎಂಬ ನೀತಿಯಿದೆ. ನೀವೆಲ್ಲರೂ ಕಪಟನಾಟಕಸೂತ್ರಧಾರನೂ ಅಪ್ರಶಾಂತಹೃದಯನೂ ಕ್ಷಮಾಧಾರನೂ ಅತಿವಿಧಾನನೂ ಮೇಘವರ್ಣನ ಪ್ರಧಾನನೂ ಆದ ಚಿರಂಜೀವಿಯ ಕಪಟವನ್ನು ಅರಿಯದೆ ಮೃದು ಮಧುರಾಲಾಪಗಳನ್ನು ನಂಬಿ ಕೌಶಿಕಶಿಖಾಮಣಿಯ ಪ್ರಾಜ್ಯರಾಜ್ಯಮಹಾ ಮಹೀರುಹಕ್ಕೆ ದಾವಾಗ್ನಿಗಳಾದಿರಿ. ಚಿರಂಜೀವಿಯು ಚಿರಂತನನೂ ಬುದ್ಧಿವಂತನೂ ಸ್ವಾಮಿಹಿತನೂ ಆಗಿರುವುದರಿಂದ ಏನಾದರೂ ಸ್ವಾಮಿಗೆ ತಪ್ಪಲಾರನು. ಈತನಿರುವ ಹಾಗೆ ವತ್ಸರಾಜನೆಂಬ ರಾಜಪುತ್ರನು ಶತ್ರುಸಂಗ್ರಹಕ್ಕೆ ಒಳಗಾದಾಗ ಆತನ ಮಂತ್ರಿ ಯೌಗಂಧರಾಯಣನು ಪತಿಹಿತಕ್ಕಾಗಿ ಯೋಗಾಚಾರನಾಗಿದ್ದಂತೆಯೂ ಬಂಧು ಸಂಬಂಧವಾದ ಬದ್ಧವೈರದ ಕಾರಣದಿಂದ ದುರ್ಯೋಧನನನ್ನು ಸಾಸಬೇಕೆಂದು ಆರಾಸುತ್ತ ಶಕುನಿ ಹೇಗಿದ್ದನೋ ಹಾಗೆಯೂ ನಂದನು ನಿಜನಂದನರನ್ನು ಕೊಂದ ಹಗೆಯನ್ನು ಮನಸ್ಸಿನಲ್ಲೇ ಸಾಸುವೆನು ಎಂದು ಸಾಧುವೇಷದಿಂದ ಭೇದಿಸಲಿದ್ದಂತೆಯೂ ವಾಯಸಮಂತ್ರಿಯೂ ನಮಗೆ ಅಪಾಯಕರನು ಎಂಬುದನ್ನು ತಿಳಿದು ಉಪಾಯದಿಂದಿದ್ದರೆ ಇವೆಲ್ಲ ಸಹಜವಲ್ಲ. ನಿಶ್ಚಯವಾಗಿಯೂ ಕಾಗೆಗಳಿಗೆ ಹಗೆಯಾಗಿದ್ದನೆಂದು ನಂಬಬೇಡ ಎಂದು ಪ್ರತ್ಯಕ್ಷಾನುಮಾನಗಳಿಂದ ತತ್ತ್ವವಿದನು ನುಡಿಯುವಂತೆ ನುಡಿದ ನಿಜಮಹತ್ತರನಿಗೆ ಉತ್ತರಗೊಡದಿದ್ದ ಅರಿಮರ್ದನನಿಗೆ

ಶರಣಾಗತರಕ್ಷಣಮೇ
ನರಪಂಗೆ ವಿಶೇಷಲಕ್ಷಣಂ ನಿಶ್ಚಯಮೆಂ
ದರಿಮರ್ದನನಂತಾಗಳ್
ಚಿರಂಜೀವಿಯನೆತ್ತಿಮೆಂದು ತೊಟ್ಟನೆ ನುಡಿದಂ  ೩೪೩

ಅಂತು ನುಡಿದಾ ಕೌಶಿಕಾಶ್ವರನ ಮಾತಂ ಕೇಳ್ದು ರಕ್ತಾಕ್ಷನಿಂತೆಂದಂ : ದೇವಾ! ನೀವಿಂತೀ ರಾಜಸವೃತ್ತಿಯಿಂದೀ ಚಿರಂಜೀವಿಯನೆತ್ತಿದಿರಪ್ಪೊಡೆ

ಶ್ಲೋ|| ಶ್ರೂಯತೇ ಹಿ ಮೃತಂ ಸಿಂಹಂ ಘಾತಯಿತ್ವಾ ತದಸ್ಥಿಭಿಃ
ಕಾರಯಿತ್ವಾ ಚ ಸಪ್ರಾಣಂ ತೇನ ತುಂಗಭುಜೋ ಹತಃ  ||೧೭೬||

ಟೀ|| ಸತ್ತ ಸಿಂಹದ ಅಸ್ಥಿಗಳೊಂದುಗೂಡಿ ಆಕಾರಮಂ ಮಾಡಿ ಪ್ರಣಮಂ ಬರಿಸಿ ಆ ಸಿಂಹದಿಂ ತುಂಗಭುಜನೆಂಬರಸು ಕೊಲಲ್ಪಟ್ಟಂ ಎಂಬ ಕಥೆಯಂತಕ್ಕುಮೆನೆ ಕೌಶಿಕಾಶ್ವರನದೆಂತೆನೆ ಮಂತ್ರಿಚೂಡಾಮಣಿಯಪ್ಪ ರಕ್ತಾಕ್ಷನಿಂತೆಂದಂ :