ಭಾಸ್ವತ್ತೇಜಂ ಯಮ ನಿಯ-
ಮ ಸ್ವಾಧ್ಯಾಯಾದಿ ಕರ್ಮನಿಯತವ್ರತಸ-
ರ್ವಸ್ವನತಿಪ್ರಖ್ಯಾತ ತ-
ಪಸ್ವಿ ಯಶಶ್ಯಾಲಿಯಜ್ಞನೆಂಬಂ ಪೆಸರಿಂ  ೩೫೨

ಮದನಾರಾತಿ ಶಿರಶ್ಶಿಖಾಮಣಿಯನಂಭೋಸನಾಕೃಷ್ಟ  ಸಂ-

ಪದೆಯಂ ಶ್ರೀಸಗರಾನ್ವಯೋದ್ಧರಣ ಕಾರ‍್ಯಾಚಾರ‍್ಯೆಯಂ ಗೋತ್ರಭಿ-ನ್ಮದಮಾತಂಗ ಮದಾಂಬು ಸಂಗಮ ಕಷಾಯೀಭೂತೆಯಂ ಯಜ್ಞನೆ-ಯ್ದಿದನುತ್ತುಂಗತರಂಗೆಯಂ ಶಫರಲೋಲಾಪಾಂಗೆಯಂ ಗಂಗೆಯಂ ೩೫೩

ಪವಮಾನಪ್ರಿಯನಂದನನ್ನು ಫಣಿಪತಾಕಾನೀಕವನ್ನೂ ಚಕ್ರಿಯು ದಾನವರನ್ನೂ ಸಂಗರದಲ್ಲಿ ಕೊಂದ ರೀತಿಯಲ್ಲಿ ಆಭೀಳ ಕಾಕಾಳಿಯನ್ನು ಚೆನ್ನಾಗಿ ಕೊಂದು ಈ ಧರೆ ಮೆಚ್ಚುವಂತೆ ಅವರ ಉಗ್ರಕೋಪಾಟೋಪವನ್ನು ಕುಗ್ಗಿಸುವೆನು; ಮೇಘವರ್ಣ ವಧೂಲೋಚನ ವಾರಿಧಾರೆಯಿಂದ ನನ್ನ ಕೋಪದಾವಾಗ್ನಿಯನ್ನು ನಂದಿಸುವೆನು. ಚಿರಂಜೀವಿಯ ಈ ಮಾತುಗಳನ್ನು ರಕ್ತಾಕ್ಷಕನು ಕೇಳಿ ಮುಕ್ತೋಷ್ಠನಾಗಿ ಹೀಗೆಂದನು : ಎಲೆ ವಾಯಸ! ನಿನ್ನ ಮಾಯಾಪಾಶದಲ್ಲಿ ಅರಿಮರ್ದನನು ಸಿಕ್ಕಿಕೊಂಡನು ; ಅಷ್ಟೇ ಸಾಕು. ಆಗಮಾನುಗತವಲ್ಲದುದನ್ನು ನೀನು ನುಡಿಯುತ್ತಿರುವೆ. ಹೇಗೆಂದರೆ, ವಾ|| ಸ್ವಯೋನಿಂಮೂಷಿಕಾ ಪ್ರಾಪ್ತಾ…. ಎಂಬ ಕಥೆಯನ್ನು ನೀನು  ತಿಳಿದಿರಲಿಕ್ಕಿಲ್ಲ ಎಂದು ಆ ರಕ್ತಾಕ್ಷನು ಹೀಗೆಂದನು: ೩೫೨. ತೇಜಶ್ಶಾಲಿಯೂ ಯಮನಿಯಮ ಸ್ವಾಧ್ಯಾಯಾದಿ ಕರ್ಮನಿಯತ ವ್ರತಸರ್ವಸ್ವನೂ ಅತಿ ಪ್ರಖ್ಯಾತ ತಪಸ್ವಿಯೂ ಯಶಶ್ಶಾಲಿಯೂ ಆದ ಯಜ್ಞನೆಂಬ ಹೆಸರಿನ ಋಷಿ ಇದ್ದನು. ಆ ತಪೋಧನನು ಒಂದು ದಿನ ಮಂದಾಕಿನಿಯನ್ನು ಮೀಯಲೆಂದು ಹೊರಹೊರಟು ಗಂಗಾನದಿಗೆ ಬಂದನು. ೩೫೩. ಶಿವನಶಿರಸ್ಸಿನ ಚೂಡಾ ಮಣಿಯೂ ವಿಷ್ಣುವಿನಿಂದ ಆಕರ್ಷಿತಳಾದ ಸಂಪತ್ತುಳ್ಳವಳೂ, ಶ್ರೀ ಸಗರಚಕ್ರವರ್ತಿಯ ವಂಶೋದ್ಧಾರ ಕಾರ್ಯದ ಆಚಾರ್ಯೆಯೂ, ಐರಾವತದ ಮದಜಲದಿಂದ ಕೂಡಿ ಕಷಾಯೀಭೂತೆಯೂ ಉತ್ತುಂಗತರಂಗೆಯೂ ಮೀನುಗಳು ಆಡುವ ಕಡೆಗಣ್ಣುಳ್ಳವಳೂ ಆದ ಗಂಗೆಯನ್ನು ಯಜ್ಞನು.

ಅಂತೆಯ್ದಿವಂದಮರಾಪಗೆಯಂ ಮಿಂದು ಸುರಾಸುರ ಚೂಡಾ ಮಣಿ ಮರೀಚಿಮಾಲಾಲಂಕೃತ ಚಾರುಚರಣಾರವಿಂದನು ಮುದಯಾಚಲ ಚಕ್ರವಾಳ ಚಕ್ರವರ್ತಿ ಚೂಡಾಮಣಿಯುಂ ತಮಃಪಟಲಪಾಟಲಾರಿಷ್ಟನುಂ ಬಿಸಜನಿತಂಬಿನೀ ಮನೋನಯಾನಾನಂದನನುಂ

ಸಕಲ ಜಗದಟನ ಮಹಾಸೂತ್ರಧಾರನುಂ ತ್ರೈಲೋಕ್ಯದೀಪಕನುಂ ಪ್ರಿಯವಿಯೋಗವಿಧುರಚಕ್ರವಾಕ ಚಕ್ರಮನಃಪೀಡಾವಿಘಟನ ಚತುರನುಂ ಸೀರಪಾಣಿಪರಿಧಾನ ಶ್ಯಾಮಾಯಮಾನಶಿಶಿರ ಶೀಕರ ಮಹಾನೀಲಮಣಿಹಾರ ಯಮುನಾ ವಿಲಾಸಿನೀಜನಕನುಂ ನಿಜರಥತುರಗನಿಕರ ಖರಖೂರಪುಟಹತ ವಿಭಿನ್ನಚಾಮೀಕರ ಮಹೀಧರಾಗ್ರಗ್ರಾವರಜಃ ಪಟಲಾಚ್ಪದಿತದಿಙ್ಮಂಡಲನುಂ ಆಖಂಡಲದಿಗಂಗನಾಮಣಿ ಕುಂಡಲನುಂ ಶತಮುಖಪಂಚಮುಖಾಷ್ಟಾಪದ ದಶರಥತನೂಭವಕುಳಾಗ್ರೇಸರನುಂ ತ್ರಯೀಮಯನುಂ ನಿತ್ಯೋದಯನುಮಪ್ಪ ಗಭಸ್ತಿಮಾಲಿಗರ್ಘ್ಯಮ ನೆತ್ತಿದ ಹಸ್ತಕಮಲದೊಳಂಬರದೊಳಾಡುವ ಪರ್ದಿನ ಬಾಯಿಂದಂ ಬಿರ್ದು ಬರ್ದುಂಕಿದೊಂದು ಪೆಣ್ಣಿಲಿಯಂ ಕಂಡದನಾದರಿಸಿ ನೋಯಲೀಯದೆ ಗುಂಡಿಗೆಯೊಳಿಕ್ಕಿ ಬೞ*ಕ್ಕೆ,

ಸ್ನಾನಜಪಹೋಮ ನಿಯಮ
ಧ್ಯಾನಾದಿಕ್ರಿಯೆಗಳೆಲ್ಲಮಂ ತೀರ್ಚಿ ನಿಜ-
ಸ್ಥಾನಕ್ಕುಯ್ದುಂ ಯೋಗ ನಿ-
ಧಾನಂ ಪಿರಿದುಂ ಪ್ರಯತ್ನದಿಂ ಮೂಷಿಕೆಯಂ  ೩೫೪

ಅಂತುಯ್ದು ಮುನೀಶ್ವರನದರ್ಕೆ ಪಿರಿದುಂ ಕರುಣಿಸಿ ಕೊರ್ಮೆ ಕೈಗಣ್ಮೆ ಮಾಣದೆ

(ಉಜ್ವಲವೃತ್ತಂ)

ಮುನ್ಯಶ್ವರನೀಶ್ವರಕಲ್ಪಂ ಸತ್ಯವಚೋನಿಳಯಂ ಜಗ-
ನ್ಮಾನ್ಯನಾಗಳೆ ಮೂಷಿಕೆಯಂ ನೀ೦ ಕನ್ಯಕೆಯಾಗೆನೆ ವಿಸ್ಪುರ-
ತ್ಕನ್ಯಕಾಕೃತಿಯಂ ತಳೆದಿರ್ದಳ್ ತಾಂ ತ್ರಿದಿವಾಂಗನೆವೊಲವಳ್
ನಾನ್ಯಥಾಮುನಿಭಾಷಿತಮೆಂಬೀ ವಾಕ್ಯಮದೇಂ ಪುಸಿಯಕ್ಕುಮೇ ೩೫೫

ಅಂತು ದಿವ್ಯಕನ್ಯಕಾಕಾರಮಂ ತಾಳ್ದಿರ್ದ ಕನ್ಯಕೆಯಾದಿಲಿಯಂ ಕಂಡು ಪಿರಿದುಂ ಮೋಹದಿಂ ರಷಿಸುತ್ತುಮಿರೆ ಕೆಲವಾನುಂ ದಿವಸಕ್ಕಾಕೆ ವಿವಾಹಯೋಗ್ಯೆಯಾಗಿರ್ದುದಂ ಯೋಗೀಂದ್ರಂ ಕಂಡಿನ್ನೇಗೆಯ್ವೆನೆಂದು ಚಿಂತಿಸಿ,

ಸೇರಿದನು. ವ*||*ಆ ಅಮರಾಪಗೆಯನ್ನು ಮಿಂದು ಸೂರ್ಯನಿಗೆ ಅರ್ಘ್ಯವನ್ನು ಕೊಡಲು ಎತ್ತಿದ ಕರಕಮಲದಲ್ಲಿ ಆಕಾಶದಲ್ಲಿ ಹಾರಾಡುವ ಹದ್ದಿನ ಬಾಯಿಯಿಂದ ಬಿದ್ದು ಬದುಕಿದ ಒಂದು ಹೆಣ್ಣಿಲಿಯನ್ನು ಕಂಡು ಆದರಿಸಿ ನೋವಾಗದಂತೆ ತನ್ನ ಕಲಶಕ್ಕೆ ಹಾಕಿಕೊಂಡನು. ಬಳಿಕ ೩೫೪. ಸ್ನಾನ ಜಪ ಹೋಮ ನಿಯಮ ಧ್ಯಾನಾಕ್ರಿಯೆಗಳೆನ್ನೆಲ್ಲ ತೀರಿಸಿ ಆ ಮೂಷಿಕೆಯನ್ನು ಹಿರಿಯ ಪ್ರಯತ್ನದಿಂದ ತನ್ನಸ್ಥಾನಕ್ಕೆ ತೆಗೆದುಕೊಂಡು ಹೋದನು.  ವ|| ಮುನೀಶ್ವರನು ಅದರ ಬಗೆಗೆ ಅತಿಶಯವಾಗಿ ಕರುಣಿಸಿ ಪ್ರೀತಿಯುಂಟಾಗಲು ೩೫೫. ಮುನ್ಯಶ್ವರನೂ ಈಶ್ವರಕಲ್ಪನೂ ಸತ್ಯವಚೋನಿಳಯನೂ ಜಗನ್ಮಾನ್ಯನೂ ಆದ ಋಷಿಯು ಮೂಷಿಕೆಯನ್ನು ನೀನು ಕನ್ಯಕೆಯಾಗು ಎನ್ನಲು ತ್ರಿದಿವಾಂಗನೆಯಂತೆ ವಿಸುರತ್ಕನ್ಯಕಾಕೃತಿಯನ್ನು ತಳೆದಳು. ‘ನಾನ್ಯಥಾ ಮುನಿಭಾಷಿತಂ‘ ಎಂಬ ಮಾತು ಹುಸಿಯಾಗುವುದೇ ! ವ|| ಹಾಗೆ ದಿವ್ಯಕನ್ಯಕಾಕಾರವನ್ನು ತಾಳಿದ ಕನ್ಯಕೆಯಾದ ಇಲಿಯನ್ನು ಕಂಡು ಅತಿಮೋಹದಿಂದ ರಕ್ಷಿಸುತ್ತಿರಲು ಕೆಲವು ಕಾಲದಲ್ಲಿ ಅವಳು

ಶ್ಲೋ|| ಪಿತೃಗೇಹೇ ತು ಯಾ ಕನ್ಯಾತಜಃ ಪಶ್ಯತ್ಯಸಂಸ್ಕೃತಾ
ಅಪರಸ್ಯತು ಸಾ ವೇಶ್ಯಾ ಜಘನ್ಯಾ ವೃಷಲೀ ಮತಾ ||೧೭೭||

ಟೀ|| ತಂದೆಯ ಮನೆಯೊಳಿರ್ದ ಕನ್ಯಕೆ ಮದುವೆಯಾಗದೆ ಮುನ್ನವೆ ಮೆಯ್ನೆಱ*ದೊಡಾಕೆ ಸೂಳೆಯೋಪಾದಿಯಲ್ಲಿ ಒಕ್ಕಲಗಿತ್ತಿಯಿಂದಂ ಕಷ್ಟೆ. ಅದು ಕಾರಣದಿಂ ಕನ್ಯಕೆ ಪುಷ್ಪವತಿಯಾಗದನ್ನೆಗಂ ಕುಡಲ್ವೇೞ್ಪುದೆಂದು.

ಅನುರೂಪಂಗೆ ಕುಲೀನಂ-
ಗೆ ನಿಖಿಲದ್ಯಾವಿದಂಗೆ ತೇಜೋನಿಳಯಂ-
ಗನವದ್ಯಾಚಾರಂಗೀ-
ವನಜಾಕ್ಷಿಯನೀವೆನೆಂದು ದಿವ್ಯಮುನೀಂದ್ರಂ  ೩೫೬

ಅಂತಾಕೆಯ ಮದುವೆಯಂ ಮಾೞ* ಕಜ್ಜಕುಜ್ಜುಗಮನೆತ್ತಿಕೊಂಡುಮೀಕೆಗೆ ವರನಪ್ಪೊಡೆ ಲೋಕೈಕನೇತ್ರನುಂ ಸಕಲಜಗತ್ಪವಿತ್ರನುಂ ಶತಪತ್ರಮಿತ್ರನುಮಕಪ್ರತಾಪನುಮಪ್ಪಾದಿತ್ಯ ನಾಗಲ್ವೇೞ್ಕುಮೆಂದು ನಿಶ್ಚಯಂಗೆಯ್ದು ಶುಭದಿನ ಶುಭಮುಹೂರ್ತಮಂ ಸಾಸಿಕೊಂಡು,

ಪರಿಣಯನಾರ್ಥಂ ಭಾಸುರ-
ಸುರಮಕುಟನಿಘೃಷ್ಟಚರಣಕಮಲನನುದ್ಯ-
ದ್ಜರದನನಾದಿತ್ಯನನಾ-
ದರದಿಂದಂ ನೆನೆದು ಬರಿಸಿದಂ ಮುನಿಮುಖ್ಯಂ                  ೩೫೭

ಅಂತು ಬರಿಸೆ ಬಂದು,
(ಪೃಥ್ವೀವೃತ್ತಂ)

ಕನತ್ಕನಕರಂಜಿತಂ ನಿಜಕರಂ ಜಗನ್ಮಂಡನಂ
ವನೇಜಸಖನೇಕಚಕ್ರ ರಥನಸ್ತದೋಷೋದಯಂ
ಮನೋಹರತರಪ್ರಭಂ ಸುರವರಂ ತ್ರಿಲೋಕಸ್ತುತಂ
ಮುನೀಶ್ವರನ ಮುಂದೆ ನಿಂದನನಘಂ ದಿನಾಶ್ವರಂ ೩೫೮

ವಿವಾಹಯೋಗ್ಯಯಾದುದನನ್ನು ಯೋಗೀಂದ್ರನು ತಿಳಿದು ಇನ್ನೇನು ಮಾಡಲಿ ಎಂದು ಚಿಂತಿಸಿದನು. ತಂದೆಯ ಮನೆಯಲ್ಲಿದ್ದ ಕನ್ಯಕೆ ಮದುವೆಯಾಗುವ ಮೊದಲೇ ಮೆಯ್ನೆರೆದರೆ ಆಕೆ ಸೂಳೆಯಂತೆ, ಒಕ್ಕಲಗಿತ್ತಿಗಿಂತಲೂ ಕಷ್ಟೆಯಾಗಿರುವಳು. ಅದರಿಂದ ಕನ್ಯಕೆಯು ಪುಷ್ಪವತಿಯಾಗುವಷ್ಟರಲ್ಲಿ ಮದುವೆಮಾಡಿಕೊಡಬೇಕು ಎಂದು ೩೫೬. ಆ ದಿವ್ಯ ಮುನೀಂದ್ರನು ಅನುರೂಪನೂ ಕುಲೀನನೂ ನಿಖಿಲ ವಿದ್ಯಾವಿದನೂ ತೇಜೋನಿಳಯನೂ ಅನವದ್ಯಾಚಾರನೂ ಆದ ವರನಿಗೆ ಈ ವನಜಾಕ್ಷಿಯನ್ನು ಕೊಡುವೆನೆಂದು ನಿರ್ಧರಿಸಿದನು. ವ|| ಹಾಗೆ ಆಕೆಯ ಮದುವೆಯನ್ನು ಮಾಡುವ ಕಾರ್ಯೋದ್ಯುಕ್ತನಾಗಿ ಈಕೆಗೆ ವರನಾಗುವುದಾದರೆ ಲೋಕೈಕನೇತ್ರನೂ ಸಕಲ ಜಗತ್ಪವಿತ್ರನೂ ಶತಪತ್ರಮಿತ್ರನೂ ಅಕಪ್ರತಾಪನೂ ಆದ ಆದಿತ್ಯನಾಬೇಕೆಂದು ನಿಶ್ಚಯಮಾಡಿ ಶುಭದಿನ ಶುಭಮುಹೂರ್ತವನ್ನು ಸಾಸಿದನು. ೩೫೭. ಪರಿಣಯಕ್ಕಾಗಿ ಆದಿತ್ಯನನ್ನು ನೆನೆದು ಅವನು ಬರುವಂತೆ ಮಾಡಿದನು. ೩೫೮. ಹೊಳೆಯುವ ಹೊಂಬಣ್ಣದ ಕಿರಣಗಳಿಂದ ಜಗತ್ತಿಗೆ ಅಲಂಕಾರಪ್ರಾಯನೂ ತಾವರೆಗಳ ಮಿತ್ರನೂ ಒಂದೇ ಚಕ್ರದ ರಥವುಳ್ಳವನೂ

ಅಂತು ತನ್ನ ಮುಂದೆ ಸನ್ನಿಹಿತನಾಗಿ ನಿಂದರವಿಂದಬಾಂಧವನ ಚರಣಸರಸೀರುಹಂಗಳಂ ಪರಮಭಕ್ತಿಯಿಂದರ್ಚಿಸಿ ವಿನಯವಿನಮಿತೋತ್ತಮಾಂಗನಾಗಿ ಮುನಿಪುಂಗವನಿಂತೆಂದಂ.

ವಿರಹಾಕ್ರಾಂತರಥಾಂಗಸಂಕುಲಮನಸ್ಸಂತಾಪವಿಚೀದ ಭಾ
ಸುರ ತೇಜೋಕ ದೇವರಾಜ ವಿನತಶ್ರೀಪಾದಪಂಕೇಜ ಪಂ
ಕರುಹಶ್ರೀರಮಣೀಮನೋರಮಣ ಮಾದ್ಯದ್ಧ್ವಾಂತಮಾತಂಗ ಕೇ
ಸರಿ ಮಾರ್ತಂಡನೆ ನೀಂ ಪರಿಗ್ರಹಿಪುದೆನ್ನೀ ಕನ್ನೆಯಂ ಚಿನ್ನೆಯಂ  ೩೫೯

ಎಂದು ಮುನಿನಾಥಂ ಬಿನ್ನಪಂಗೆಯ್ವುದುಂ ದಿನನಾಥನದು ಮೂಷಿಕೆಯಪ್ಪುದನಱ*ದು ಕೇವಳಮೊಲ್ಲೆನೆಂದೊಡೆ ಮುನಿ ಮನಃಕ್ಷತಂಬಡುಗುಮೆಂದಿಂತೆಂದಂ : ಆಂ ಪ್ರತಾಪವಂತನೆಂದೆನ್ನಂ ಕರೆದು ನೀವೀ ಕನ್ನೆಯಂ ಕುಡಲ್ ಬಗೆದಿರ್. ಎನ್ನ ರಶ್ಮಿಯ ಪ್ರತಾಪಮಂ ಜೀಮೂತಂಗಳ್ ಮುಸುಕಲೀಯದೆ ಮುಸುಱ*ಕೊಂಡೆನಗಮಕಂಗಳಾಗಿರ್ಕುಮದಱ*ಂದವರ್ಕೆ ಕುಡುವುದೆಂದು ಪೇೞ್ದು ಪೋಪುದುಂ ಮುನಿರಾಜಂ ಮೇಘರಾಜನಂ ಬರಿಸಿ ನೀವಪ್ಪೊಡೆ ಮಹಾಪ್ರತಾಪಿಗಳದಱ*ಂ ನಿಮ್ಮೊಳೊರ್ವರೀ ಕನ್ನೆಯಂ ಪರಿಗ್ರಹಿಸಿಮೆಂಬುದುಂ ಅಂಬುದಂಗಳ್ ನಿಮ್ಮಡಿ, ನೀವೆಮ್ಮಂ ಪ್ರತಾಪವಂತರೆಂದೆ ಬಗೆದಿರೆಮ್ಮನೊಂದು ಮುಹೂರ್ತಮಾತ್ರದಿಂ ಪವನಂ ಪ್ರಳಯಕ್ಕೆ ಪಾಱೆ ಬೀಸುವನದಱ*ಂ ನಿಮ್ಮ ಸುತೆಗೆ ಮರುತನೆ ವರನಕ್ಕುಮಾತನಂ ಬರಿಸಿಮೆನಲೊಡನಾ ದಿವ್ಯಮುನಿ ದೋಷಗಳಿಲ್ಲದವನೂ ಮನೋಹರವಾದ ಕಾಂತಿಯಿಂದ ಕೂಡಿದವನೂ ಸುರಶ್ರೇಷ್ಠನೂ ಮೂರುಲೋಕಗಳಿಂದ ಸ್ತುತನಾದವನೂ ಆದ ಪುಣ್ಯರೂಪಿ ದಿನಕರನು ಆ ಮುನೀಶ್ವರನ ಮುಂದೆ ಬಂದು ನಿಂತನು. ವ|| ಹಾಗೆ ತನ್ನ ಮುಂದೆ ಸನ್ನಿಹಿತನಾಗಿ ನಿಂತ ಅರವಿಂದಬಾಂಧವನ ಚರಣ ಸರಸೀರುಹಗಳನ್ನು ಪರಮ ಭಕ್ತಿಯಿಂದ ಅರ್ಚಿಸಿ ವಿನಯದಿಂದ ತಲೆಯನ್ನು ಬಾಗಿಸಿ ಮುನಿಶ್ರೇಷ್ಠನು ಹೀಗೆಂದನು: ೩೫೯. ವಿರಹದಿಂದ ಬೆಂದ ಚಕ್ರವಾಕಸಂಕುಲದ ಮನಸ್ಸಿನ ಬೇಗೆಯನ್ನು ನೀಗಿದವನೂ, ಹೊಳೆಯುವ ತೇಜಶ್ಶಾಲಿಯೂ, ದೇವೇಂದ್ರನು ನಮಸ್ಕರಿಸಿದ ಶ್ರೀಪಾದಕಮಲದ ಸೌಂದರ್ಯಕ್ಕೆ ಪತಿಯೂ ಕಗ್ಗತ್ತಲೆಯೆಂಬ ಮದ್ದಾನೆಗೆ ಸಿಂಹವೂ ಆಗಿರುವ ಮಾರ್ತಂಡನೇ! ನೀನು ನನ್ನ ಈ ಚೆನ್ನೆಯಾದ ಕನ್ಯೆಯನ್ನು ಪರಿಗ್ರಹಿಸಬೇಕು. ವ|| ಆಗ ದಿನನಾಥನು ಅದು ಮೂಷಿಕೆಯಾಗಿರುವುದನ್ನು ತಿಳಿದು ಒಲ್ಲೆನೆಂದರೆ ಮುನಿಯ ಮನಸ್ಸಿಗೆ ನೋವಾಗುವುದೆಂದು ಹೀಗೆಂದನು : ನಾನು ಪ್ರತಾಪಶಾಲಿಯೆಂದು ನನ್ನನ್ನು ಕರೆದು ನೀವು ಈ ಕನ್ಯೆಯನ್ನು ಕೊಡಲು ಇಷ್ಟಪಟ್ಟಿರಿ. ನನ್ನ ಕಿರಣಗಳನ್ನು ಮೋಡಗಳು ಮುತ್ತಿಕೊಂಡು ನನ್ನನ್ನೂ ಮೀರಿಸಿದ ಪ್ರತಾಪಶಾಲಿಗಳಾಗಿರುವುವು ; ಅವುಗಳಿಗೆ ನಿಮ್ಮ ಮಗಳನ್ನು ಕೊಡಬೇಕು ಎಂದು ಹೇಳಿ ಹೋದನು. ಮುನಿರಾಜನು ಮೆಘರಾಜನನ್ನು ಕರೆಯಿಸಿ ನೀವಾದರೋ ಮಹಾಪ್ರತಾಪಿಗಳು ಅದರಿಂದ ನಿಮ್ಮಲ್ಲಿ ಒಬ್ಬರು ಈ ಕನ್ಯೆಯನ್ನು ಪರಿಗ್ರಹಿಸಿರಿ ಎನ್ನಲು ಅಂಬುದಗಳು ಪೂಜ್ಯರೇ, ನೀವು ನಮ್ಮನ್ನು ಪ್ರತಾಪವಂತರೆಂದು ತಿಳಿದಿರಿ. ನಮ್ಮನ್ನು ಒಂದು ಕ್ಷಣಮಾತ್ರದಲ್ಲಿ ಪವನನು ಪ್ರಳಯಕ್ಕೆ ಹಾರಿಸಿಬಿಡುವನು. ಅದರಿಂದ ನಿಮ್ಮ ಸುತೆಗೆ ಮರುತನೇ ತಕ್ಕ ವರ ; ಆತನನ್ನು ಕರೆಯಿಸಿ ಎನ್ನಲು ಆ ದಿವ್ಯ ಮುನಿ ಹುತಹಸಖನನ್ನು ಕರೆಸಿ ನೀನು ಹುತವಹಸಖನಂ ಬರಿಸಿ ನೀನೀ ಕನ್ನೆಯಂ ವಿವಾಹಮಾಗಲ್ವೇೞ್ಕುಮೆನೆ ವಾಯುದೇವನೀ ತಪೋಧನನಪ್ಪೊಡೆ ಮಹಾನೈಷ್ಠಕಂ, ಮತ್ತಮೀತಂಗೀ ಕನ್ನೆಯೆಂತುಂ ಮಗಳಾಗಳೆಂದು ದಿವ್ಯಜ್ಞಾನದಿಂದಾಕೆ ಮೂಷಿಕೆಯಪ್ಪುದನಱ*ದಿಂತೆಂದಂ : ನೀವೆನ್ನಂ ಪ್ರತಾಪಸಂಪನ್ನನೆಂದು ಬಗೆದಿರಾನುಂ ಕುಲಗಿರಿಗಳನಪ್ಪೊಡೆಂತುಂ ತೆರಳ್ಚಲಾಱೆನದಱ*ಂದೆನಗಂ ನಗಂಗಳ್ ಪಿರಿಯವೆನೆ ಪರಮಯೋಗೀಂದ್ರನತಿ ಸಂತೋಷಂಗೆಯ್ದು,

ಬರವೇೞ*ಟ್ಟಿದನಿಂದ್ರಕೀಲ ಹಿಮವತ್ಕುತ್ಕೀಲ ವಿಂಧ್ಯಾವನೀ
ಧರ ಕೈಲಾಸಕುಭೃತ್ತ್ರಿಕೂಟಕುಧರ ಶ್ರೀಶೈಲ ಪೂರ್ವಾಪರಾ
ವರ ಭೂಭೃನ್ಮಲಯಾದ್ರಿ ಕ್ರೌಂಚಶಿಖರಿ ಶ್ರೀಮನ್ಮಹಾಮೇರು ಮಂ
ದರ ಮೈನಾಕ ಮಹೀಧ್ರ ನೀಲ ನಿಷಧ ಕ್ಷೋಣೀಧ್ರಸಂದೋಹಮಂ  ೩೬೦

ಅಂತು ಬೞ*ಯಟ್ಟಲೊಡಂ ಗಿರಿರಾಜರ್ ನೆರೆದು ಬಂದು ನಿಮ್ಮಡಿ, ಬೆಸನಾವುದೆಂದು ಮುಂದೆ ನಿಲಲೊಡಂ ನೋಡಿ ನೀವಪ್ಪೊಡೆ ಪೆಂಪಿನೊಳಂ ಬಿಣ್ಪಿನೊಳಂ ಸಾಹಸದೊಳಂ ಮರುತಂಗೆ ಪಿರಿಯರದು ಕಾರಣದಿಂ ನಿಮ್ಮೊಳಗೊರ್ವರೀ ಕುಮಾರಿಗೆ ಸೌಂದರ‍್ಯರೂಪಧಾರಿಗೆ ವರರಾಗಿಮೆಂಬುದುಂ ನೀವೆಂದಂತೆ ಪವನನಿಂದಾವೆ ಬಲ್ಲಿದರಪ್ಪೆವಾದೊಡಮೆಮಗಂ ಉಂದುರಂಗಳ್ ಬಲ್ಲಿದುವೆಂದೊಡವರಂ ವಿಸರ್ಜಿಸಿ ಮುನಿಮುಖ್ಯಂ ಮೂಷಿಕಮುಖ್ಯನಂ ಬರಿಸಿ ನೀನೀ ಕನ್ಯೆಯಂ ಪರಿಗ್ರಹಿಸೆಂಬುದುಂ ಮೂಷಿಕನಿಂತೆಂದಂ; ನಿಮ್ಮಡಿ, ಬೆಸಸಿದೊಡೆಮ್ಮಿರ್ಪೆಡೆ ಬಿಲಂ ನಿಮ್ಮ ಕೂಸನೆಂತುಯ್ದಿರುಸುವೆನದಱ*ಂ ನಿಶ್ಚಯಂ ನೀವೆನಗೆ ಕುಡುವ ಬಗೆಯುಳ್ಳೊಡೆಮ್ಮ ಜಾತಿ ಮಾಡಿ ಕುಡಿಮೆನೆ ಮುನಿ ಮುನಿಸಂ ಈ ಕನ್ಯಯನ್ನು ವಿವಾಹವಾಗಬೇಕು ಎಂದನು. ಅದಕ್ಕೆ ವಾಯುದೇವನು ಈ ತಪೋಧನನಾದರೋ ಮಹಾನೈಷ್ಟಿಕನು ; ಈತನಿಗೆ ಈ ಕನ್ಯೆಯು ಹೇಗೆ ಮಗಳಾದಳು ಎಂದು ದಿವ್ಯಜ್ಞಾನದಿಂದ ಆಕೆ ಮೂಷಿಕೆಯಾಗಿದ್ದುದನ್ನು ತಿಳಿದು ಹೀಗೆಂದನು ; ನೀವು ನನ್ನನ್ನು ಪ್ರತಾಪಸಂಪನ್ನನ್ನೆಂದು ಬಗೆದಿರಿ ; ನಾನು ಕುಲಗಿರಿಗಳನ್ನು ಏನು ಮಾಡಿದರೂ ಸೋಲಿಸಲಾರೆ ಅದರಿಂದ ನನಗಿಂತಲೂ ಪರ್ವತಗಳು ಹಿರಿಯವು ಎಂದನು. ಪರಮಯೋಗೀಂದ್ರನು ಅತಿ ಸಂತೋಷವನ್ನು ತಾಳಿ ೩೬೦. ಇಂದ್ರ ಕೀಲ, ಹಿಮವಂತ, ವಿಂಧ್ಯ, ಕೈಲಾಸ, ಶ್ರಿಶ್ಯೆಲ, ಮಲಯಾದ್ರಿ, ಕ್ರೌಂಚಶಿಖರಿ, ಮಹಾಮೇರು, ಮಂದರ, ಮೈನಾಕ, ನೀಲಪರ್ವತ ಮೊದಲಾದ ಪರ್ವತಗಳನ್ನು ಬರಹೇಳಿ ಕರೆಕಳುಹಿಸಿದನು. ವ|| ಹಾಗೆ ಕರೆಕಳುಹಿಸಲು ಗಿರಿರಾಜರು ಬಂದು ಪೂಜ್ಯರೇ ಏನಪ್ಪಣೆ ಎಂದು ಮುಂದೆ ನಿಲ್ಲಲು ನೋಡಿ ನೀವಾದರೋ ಹಿರಿಮೆಯಲ್ಲೂ ಗಾಂಭೀರ್ಯದಲ್ಲೂ ಸಾಹಸದಲ್ಲೂ ಮರುತನಿಗಿಂತಲೂ ಹಿರಿಯರಾದುದರಿಂದ ನಿಮ್ಮಲ್ಲಿ ಒಬ್ಬರು ಈ ಕುಮಾರಿಗೆ ವರರಾಗಿರಿ ಎಂದನು. ಅದಕ್ಕೆ ಅವರು ನೀವು ಹೇಳಿದ ಹಾಗೆ ಪವನನಿಗಿಂತಲೂ ನಾವೇ ಬಲ್ಲಿದರಾದರೆ ನಮಗಿಂತಲೂ ಹೆಗ್ಗಣಗಳು ಬಲಶಾಲಿಗಳಾಗಿವೆ ಎಚಿದರು. ಆಗ ಅವರನ್ನು ಬಿಟ್ಟು ಮುನಿಮುಖ್ಯನು ಮೂಷಿಕಮುಖ್ಯನನ್ನು ಕರೆಯಿಸಿ ನೀನು ಈ ಕನ್ಯೆಯನ್ನು ಪರಿಗ್ರಹಿಸು ಎಂದನು. ಅದಕ್ಕೆ ಮೂಷಿಕನು ಹೀಗೆಂದನು : ಪೂಜ್ಯರೇ, ನಾವಿರುವ ಎಡೆ ಬಿಲವಾಗಿದೆ. ನಿಮ್ಮ ಮಗಳನ್ನು ನಾನು ಅಲ್ಲಿ ಹೇಗೆ ಇಟ್ಟುಕೊಳ್ಳಲಿ. ಅದರಿಂದ ನಿಜವಾಗಿಯೂ ನಿಮ್ಮ ಮಗಳನ್ನು ನನಗೇ ಕೊಡಬೇಕೆಂಬ ಇಷ್ಟ ನಿಮಗಿದ್ದರೆ ನಮ್ಮ ಜಾತಿಯನ್ನಾಗಿ ಮಾಡಿಕೊಡಿರಿ ಮೊಗಕ್ಕೆ ತಂದು ನಿಮಗೆ ಕೂಸಂ ಕುಡುವೆನೆಂಬುದಿದೆನ್ನ ದೋಷಮಲ್ಲದೆ ನಿನ್ನ ದೋಷಮಲ್ಲೆನೆ ಮೂಷಿಕಾಶಂ ರೋಷಾವೇಶದಿಂದಿಂತೆಂದಂ :

ಕೂಸಂ ಕೊಟ್ಟಪೆನೆಂಬೀ
ದೂಸಱೆ ನೀವಿಂತವಜ್ಞೆಗೆಯ್ಯುತ್ತೆನ್ನಂ
ಬೀಸರಮನೆ ನುಡಿದಪಿರೀ
ದೋಸಮೆ ನೀಮಱ*ದುಮಱ*ಯಿರೆನ್ನುನ್ನತಿಯಂ  ೩೬೧

ಅದೆಂತೆಂದೊಡೆ ಪಾಲ್ಗಡಲಂ ಸುರಾಸುರಸಮಿತಿ ಕಡೆವಂದಾಂ ಪುಟ್ಟಿದೆಂ. ಮೃಡನ ತನೂಜನಪ್ಪ ವಿಘ್ನೇಶ್ವರಂಗೆ ವಾಹನಮಂ ಮಾಡಿ ಕುಡೆ ಮಹಾಮಹಿಮೆಯಿಂದಹಿಭೂಷಣಂಗಗ್ರಗಣ್ಯನಾಗಿರ್ಪೆನಂತೆ ಪ್ಪೆನ್ನುತ್ಪತ್ತಿಸ್ಥಿತಿಯಂ ನಿಮ್ಮಡಿ ನೀವಱ*ದುಮಱ*ಯದಂತೆ ನಿರಾಕರಿಸುವುದುಚಿತಮಲ್ಲೆಂಬುದುಂ ಯಜ್ಞನೀ ಮೂಷಿಕಂ ಸಾಮಾನ್ಯನಲ್ಲ ಮಾದೊಡಮಿಕನ್ಯೆಯನೆಂತು ಮೂಷಿಕೆಯಂ ಮೞ್ಪೆನೆಂಬುದುಮ ಮುನೀಶ್ವರನ ಶಿಷ್ಯಂ ನಿಮ್ಮಡಿ ನೀವಿಂತೇಕೆ ಬೆಸಸಿದಿರಿದರ್ಕೊಂದು ಕಥೆಯುಂಟು ಕೇಳಿಮೆಂದಿಂತೆಂದಂ: