ಅನೇಕಾಕಾರಮಹಾಮಹೀರುಹಷಂಡಮಂಡಿತಮಪ್ಪ
ಕಾಂತಾರಾಂತರಾಳದೊಳನೂನವಿಶಾಲ ಪತ್ರಚ್ಛತ್ರನಿರಾಕೃತದಿವಸಕರಪ್ರಕಾಶಮುಮಮೃತಕಿರಣಬಿಂಬಾಯಮಾನಶೀತಳಚ್ಛಾಯಾಪರಿಪೀತ ಪಥಿಕಜನಶ್ರಮಜನಿತ ಸ್ವೇದಬಿಂದುಸಂದೋಹಮುಮಪ್ಪ ವಟವಿಟಪಿಯೆ ತನಗೆ ರಾಜಧಾನಿಯಾಗೆ,

ಶಮಿತಾರಾತಿಪ್ರಭಾವಂ ಪರಿಜನಸಹಿತಂ ರಾಗದಿಂದಿರ್ಪನತ್ಯು-
ತ್ತಮ ಶುದ್ದಾಮಾತ್ಯವರ್ಗಂ ವರಚರನಿಚಯಂ ಗುಪ್ತಮಂತ್ರಂ ಸುಮಿತ್ರೋ-
ದ್ಯಮನುದ್ಯುತ್ಕಾರವೃಂದಾರಕಪತಿ ಪೆಸರಿಂ ಮೇಘವರ್ಣಂ ಪಯೋದಾ-
ಗಮ ಶುಂಭನ್ಮೇಘವರ್ಣಂ ಖಗಗಣಗಣಿಕಾವ್ರಾತಸಂಗೀತವರ್ಣಂ  ೨೭೧

ಮತ್ತಮಾ ಬನದುತ್ತರದಿಗ್ಭಾಗದೊಳೊಂದು ಯೋಜನ ಪ್ರಮಾಣಾಂತರದೊಳಂಜನಗಿರಿಯೆಂಬ ಪರ್ವತಮುಂಟು, ಅದರ ನಿತಂಬಪ್ರದೇಶದೊಳ್ ಪಲವುಂ ಗಹ್ವರಂಗಳೊಳವು. ಅಲ್ಲಿ

ಅರಿಮರ್ದನನೆಂಬನುಳೂ
ಕರಾಜನಿರ್ಪಂ ಸಮಸ್ತ ಪರಿವಾರಜನಂ-
ಬೆರಸನುಪಮಪ್ರತಾಪಂ
ಗುರುತರಸತ್ತ್ವಂ ಮಹಾಗುಹಾಭ್ಯಂತರದೊಳ್  ೨೭೨

ಅಂತಾನೊಂದು  ದಿವಸಂ ಪಲವುಂ ಕಾಗೆಗಳ್ ನೆರೆದು ಕರೆವ ಸರಮನಾಲಿಸಿ ಕೇಳ್ದಾ ಪೂರ್ವವೈರಮಂ ನೆನೆದೀ ಕಾಕಬಲಂಗಳನಿಂದು ಕೊಂದಲ್ಲದೆ ಮಾಣೆನೆಂದು ನಿಜಪ್ರಧಾನಸೇನಾಪರಪ್ಪ ಕೌಶಿಕಬಲಂಗಳ ನೊಂದು ಮಾಡಿಕೊಂಡು ನಡುವಿರುಳ್ ಪೊಱಮಟ್ಟು ಸಕಲಕಾಕಾಶ್ವರನಪ್ಪ ಮೇಘವರ್ಣನಿರ್ದ ಮಹಾವಟವಿಟಪಿಯಂ ಸುತ್ತಿಮುತ್ತಿ ಮಱೆದೊಱಗಿರ್ದು ಕಾಕಬಲಮೆಲ್ಲಮಂ ಬೞ*ಕೆಯ್ದು ಪೇೞೆ ಹೆಸರಿಲ್ಲದೆ ಕೊಂದಾಕ್ಷಣದೊಳೆ ನಿಜನಿವಾಸಕ್ಕೆ ಮಗುೞ್ದಂ. ಅನ್ನೆಗಮೊಂದು ವಾಯಸಂ ನಿಜಸ್ವಾಮಿಯಪ್ಪ ಮೇಘವರ್ಣನಲ್ಲಿಗೆ ಬಂದು

ಬಲಬಲಮನುಱದೆ ಕೌಶಿಕ
ಬಲಮದಿರದಿದಿರ್ಚಿ ಕೊಲ್ವ ತೆಱದಿಂದುದ್ಯ-
ದ್ಬಲಬಲಮನುಱದೆ ಕೌಶಿಕ
ಬಲಮದಿರದಿದಿರ್ಚಿ ಕೊಂದು ಪೋದತ್ತೀಗಳ್  ೨೭೩

ಎಂದು ಬಿನ್ನಪಂಗೆಯ್ವುದುಮಿನಿಸಾನುಂ ಬೇಗದಿಂ,

ವ|| ಅನೇಕ ರೀತಿಯ ಮರಗಳಿಂದಲೂ ಸೂರ‍್ಯನ ಬಿಸಿಲು ಬೀಳದ ಚಂದ್ರನ ಬೆಳಕಿನಂಥ ತಂಪಾದ ನೆರಳುಳ್ಳ ವಟವೃಕ್ಷವೇ ತನ್ನ ರಾಜಧಾನಿಯೆನಿಸಿಕೊಂಡು ೨೭೧. ಕಾಕಾವೃಂದಾರಕಪತಿಯೆನಿಸಿದ ಕಾಗೆಯೊಂದು ವಾಸಮಾಡಿಕೊಂಡಿತ್ತು. ಆ ವನದಲ್ಲಿ ಶತ್ರುಗಳನ್ನು ಅಡಗಿಸಿದ ಕೀರ್ತಿಶಾಲಿಯೂ ಶ್ರೇಷ್ಟರೂ ಶುದ್ದರೂ ಅದ ಮಂತ್ರಿಸಮೂಹದಿಂದ ಕೂಡಿದವನೂ, ಉತ್ತಮ ಗೂಢಚಾರರಿಂದ ಕೂಡಿದವನೂ ಸನ್ಮಿತ್ರರ ಕಾರ‍್ಯಸಹಾಯವುಳ್ಳವನೂ ಶ್ರೇಷ್ಠವಾದ ಕಾಗೆಗಳ ಸಮೂಹಕ್ಕೆ ಒಡೆಯನೂ ಮೇಘವರ್ಣ ಎಂಬ ಹೆಸರಿನವನೂ ಮಳೆಗಾಲದ ಮೋಡದ ಬಣ್ಣದವನೂ ಪಕ್ಷಿಸಮೂಹದ ಗಣಿಕೆಯಿಂದ ಕೂಡಿದವನೂ ಸಂಗೀತಜ್ಞನೂ ಅಗಿ ಇದ್ದನು, ವ|| ಅಲ್ಲದೆ ಅ ವನದ  ಉತ್ತರಭಾಗದಿಂದ ಒಂದು ಯೋಜನದ ದೂರದಲ್ಲಿ ಅಂಜನಗಿರಿ ಎಂಬ ಪರ್ವತವಿತ್ತು. ಅದರ  ತಪ್ಪಲಿನಲ್ಲಿ ಹಲವು ಗುಹೆಗಳಿದ್ದವು. ಅಲ್ಲಿ ೨೭೨. ಅರಿಮರ್ದನನೆಂಬ ಗೂಗೆಗಳ ರಾಜನಿದ್ದನು, ಅವನು ಸಮಸ್ತ ಪರಿವಾರಜನರಿಂದ ಕೂಡಿದವನೂ ಅಸಮಾನ ಪರಾಕ್ರಮಿಯೂ ಮಹಾಬಲಶಾಲಿಯೂ ಅಗಿ ಒಂದು ದೊಡ್ಡಗುಹೆಯೊಳಗೆ ಇದ್ದನು. ವ|| ಹಾಗೆ ಅವನು ಒಂದು ದಿವಸ ಹಲವು ಕಾಗೆಗಳು ಸೇರಿ ಕರೆಯುತ್ತಿದ್ದ ಸ್ವರವನ್ನು ಕೇಳಿ ಪೂರ್ವವೈರವನ್ನು ನೆನೆದು ಈ ಕಾಕಸೈನ್ಯವನ್ನಿಂದು ಕೊಂದಲ್ಲದೆ ಬಿಡೆನು ಎಂದು ತನ್ನ ಪ್ರಧಾನ ಸೇನಾಪತಿಗಳನ್ನು ಒಟ್ಟಿಗೆ ಸೇರಿಸಿಕೊಂಡು ಅರ್ಧರಾತ್ರಿಯಲ್ಲಿ ಹೊರಹೊರಟು ಸಕಲಕಾಕಾಶ್ವರನಾದ ಮೇಘವರ್ಣನಿದ್ದ ಮಹಾವಟವೃಕ್ಷವನ್ನು ಸುತ್ತಿಮುತ್ತಿ ನಿದ್ರಿಸಿದ್ದ ಕಾಗೆ ಬಲವನ್ನೆಲ್ಲವನ್ನೂ ಬರಿದುಗೈದು ಹೇಳಹೇಸರಿಲ್ಲದಂತೆ ಕೊಂದು ಅಕ್ಷಣವೇ ತನ್ನ ಮನೆಗೆ ಮರಳಿದನು. ಅಷ್ಟರಲ್ಲಿ ಒಂದು ಕಾಗೆಯು ತನ್ನ ಒಡೆಯನಾದ ಮೇಘವರ್ಣನ ಬಳಿಗೆ ಬಂದು ೨೭೩; ಗೂಗೆಗಳ ಸೈನ್ಯವು ನಮ್ಮ ಸೈನ್ಯವನ್ನು ಕೊಂದು ಹೋಯಿತು ಎಂದು ತಿಳಿಸಿತು.

ಕುಮುದವನಶ್ರೀಕಾಂತಿಯು
ಮಮೃತಕರದ್ಯುತಿಯುಮುಡುಗಣದ್ಯೋತಿಯುಮ
ಸ್ತಮಿಸೆ ಜಗನ್ನುತದಯಾ-
ದ್ರಿಮಸ್ತಕಸ್ಥಲಮನೇಱ*ದಂ ದಿವಸಕರಂ  ೨೭೪

ಅಂತಾದಿತ್ಯೋದಯಮಾಗಲೊಡಂ ಮೇಘವರ್ಣನೆರ್ದುಕಾಕಬಲರುರುಣೀಭೂತಮಾಗಿರ್ದ

ಸಮರಾಂಗಣಮುಮನುಲೂಕನಿಕರ ಸೂಚೀಮುಖಚಂಚುಚರಣಪಕ್ಷಘಾತಕ್ಕದಿರದಿದಿರಾಂತು ಕಾದಿ ಸತ್ತ ವಾಯುಸವೀರನಿಕಾಯಮುಮನಲ್ಲಿಯೆ ನೊಂದು ಬಸವೞ*ದಿರ್ದ ಬಲಿಭುಗ್ಬಲಪ್ರಧಾನರಂ ಕಂಡು ಬೆರಗಾಗಿರ್ದ ವಾಯಸಾಶ್ವರನಲ್ಲಿಗೆ ಕೆಲವು ವಾಯುಸಂಗಳ್ ಬಿಱ*ತೋಡಿ ಕಾಡೊಳ್ಕೂಡಿರ್ದುವೆಲ್ಲಂ ಬಂದು ದೇವಾ ನಾವಿರುಳಿನ ಕಾಳೆಗಕ್ಕಲ್ಲೆವು;ಅಂತುಮಲ್ಲದೆ ನಮ್ಮ ಬಲಮುಮಂ ಪಗೆವರಬಲಮುಮನಱ*ಯದೆ ಪಱದೆಗೆದಿರ್ದೆವು. ಇನ್ನಾವುದು ಬೆಸನೆಂದು ಬಿನ್ನಪಂಗೆಯ್ಯೆ ಮೇಘವರ್ಣನಿಂತೆಂದಂ : ಇಲ್ಲಿ ನೊಂದವರುಮಂ ಇನ್ನಾವುದು ಬೆಸನೆಂದು  ಬಿನ್ನ್‌ಪಂಗೆಯ್ಯೆ ಮೇಘವರ್ಣನಿಂತೆದಂ ಇಲ್ಲಿ ನೊಂದವರುಮಂ ವೃದ್ದರಮಂ ಸ್ತ್ರೀ ಬಾಲಕರುಮನುಯ್ದೊಂದು ದುರ್ಗಸ್ಥಾನದೊಳಿರಿಸಿ ಬೞ*ಕ್ಕೆ ತಕ್ಕುದಂ ನೆಗೞ್ವಮೆಂದು ತನಗನ್ವಯಾಗತರುಂ ಚತುರಪಧಾವಿಶುದ್ಧರುಂ ನಯಶಾಸ್ತ್ರವಿದರುಮಪ್ಪ ಉದ್ದೀಪಿ, ಅದೀಪಿ, ಸಂದೀಪಿ ಚಿರಂಜೀವಿ ಎಂಬ ಐವರ್ ಮಂತ್ರಿಗಳಂ ಬರಿಸಿ ಮೇಘವರ್ಣಂ ಈ ಪ್ರಘಟ್ಟನಕ್ಕೇಗೆಯ್ವಮೆಂದು ಪೇೞೆ ಮಂತ್ರಿಗಳಿಂತೆಂದರ್

ನಿಮ್ಮಡಿ ನಿಮ್ಮುತ್ಸುಕತೆಯಿ-
ನೆಮ್ಮಂ ಬೆಸಗೊಳ್ವದುಂ ಕರಂ ರಭಸದೆ ನಾ-
ವು ಮುನ್ನಮೆ ಬಿನ್ನವಿಸುವು-
ದುಮ್ಮಾರ್ಗಮಿದಲ್ತು ನಾಡೆ ನೀತಿವಿರುದ್ಧಂ  ೨೭೫

ಅದೆಂತೆನೆ: ವಾಕ್ಯ || ಮಂತ್ರ ನಿಸ್ರಾವಃ ಕಾರ‍್ಯಂ ವಿನಾಶಯತಿ
ಸರ‍್ವದ್ವಾರೇಭ್ಯೋ ಮಂತ್ರೋ ರಕ್ಷಿತವ್ಯಃ  ||೧೪೨||

ಟೀ|| ಮಂತ್ರವು  ಹೊರಪಟ್ಟಲ್ಲಿ ಕಾರ‍್ಯವು ಕಿಡುವುದು; ಅದು ಕಾರಣಮದು ಎಲ್ಲಾಕಡೆಯಿಂದಲೂ ಗೋಪ್ಯವಾಗಿ ರಕ್ಷಿಸಲ್ಪಡತಕ್ಕದು ಎಂಬ ನಯಮಂ ಪಿಡಿದರಸುಗಳಾಳೋಚನಕಾಲದೊಳ್ ನಿಸ್ತಂಭಮುಂ ನಿರ್ಗವಾಕ್ಷಮುಂ ನಿಶ್ಚಿದ್ರಭಿತ್ರಿಯುಂ ನಿರಾಶ್ರಯಮುಂ ಶುಕಶಾರಿಕಾದಿ ಶಕುನಿಕುಳವಿಕಳಮುಮಪ್ಪ ಮಂತ್ರಶಾಲೆಯೊಳ್ ಮಂತ್ರಿಗಳುಂ ತಾನುಂ ನಿಶ್ಚಿಂತಮಿರ್ದಾಳೋಚಿಸುವರದಱ*ಂದಿಂತಪ್ಪವಸರದೊಳ್ ಮಂತಣಮುಚಿತಮಲ್ಲೆಂಬುದುಂ ಮೇಘವರ್ಣಂ ನಿಜಾನುಗತಮಪ್ಪ ವಾಯುಸಸಮುದಾಯಮಂ ಪೋಗಲ್ವೇೞ್ದು ಬಳಿಕ್ಕೆ ಮಂತ್ರಿಮಂಡಲಕ್ಕಿಂತೆಂದಂ:

ಅಗಣಿತಮೆನಿಪ್ಪ ಮಚ್ಛೌ-
ರ‍್ಯಗರ್ವಮಂ ನಿಮ್ಮ ಮಂತ್ರಶಕ್ತಿಯನಿನಿಸಂ
ಬಗೆಯದರಿಮರ್ದನಂ ಕಾ-
ಗೆಗಳಂ ತವೆ ಕೊಂದನಿಲ್ಲಿಗಾವುದು ಕಜ್ಜಂ  ೨೭೬

ಎಂಬುದುಂ ಮಂತ್ರಿಮಂಡಲಮುಖ್ಯನಪ್ಪ ಉದ್ದೀಪಿಯಿಂತೆಂದಂ: ನಿಮ್ಮಡಿ,

ವಾಕ್ಯಂ || ಬಲವತಾವಷ್ಟಬ್ಧಸ್ಯ ವಿದೇಶಗಮನಂ ತದನುಪ್ರವೇಶೋ ವಾ ||೧೪೩||

ಟೀ|| ಬಲಿಷ್ಟನಾದ ಶತ್ರುವಿಂ ಪಿಡಿಯಲ್ಪಟ್ಟವನು ಆ ಶತ್ರವನೊಳಪೊಕ್ಕು ಬಾೞ್ವುದು ಅಲ್ಲದಾಗಳ್ ವಿದೇಶಗಮನಂಗೆಯ್ಯದು ಎಂಬ ನಯಮಂ ಪಿಡಿದು ಕೌಶಿಕಾಶನೊಳ್ ಪೊಕ್ಕು ಬಾೞ್ವುದುಮಲ್ಲದಾಗಳ್ ವಿದೇಶಗಮನಂಗೆಯ್ವದುಮಲ್ಲದೆ ನಾಮೀಯವಸ್ಥೆಯೊಳ್ ಪೆಱತು ಕಜ್ಜಮನಾಳೋಚಿಸಿ ನೆಱೆಯಲುಂ ನಿತ್ತರಿಸಲುಮಱ*ಯವೆಂಬುದುಂ ಕೇಳ್ದು ಪ್ರದೀಪಿಯೆಂಬ ಮಂತ್ರಿಯಿಂತೆಂದಂ; ಈತಂ ಪೇೞ್ದ ತದನುಪ್ರವೇಶಕ್ಕುಂ ವಿದೇಶಗಮನಕ್ಕಂ ದೋಷಮುಂಟದೆಂತೆನೆ: ತದನುಪ್ರವೇಶಂಗೈದೆವಪ್ಪೊಡೆ ಬದ್ಡರೋಷಿಯುಂ ಯುದ್ದಾಭಿಲಾಷಿಯುಮಕಾರಣದ್ವೇಷಿಯುಮಪ್ಪ ಪಗೆವನ ಮನೆಯಂ ಬಗೆಗೆಟ್ಟು ಪೊಕ್ಕಂದು ಸಾವಕ್ಕುಂ ಮೇಣ್ ಸಂಗರಮಕ್ಕುಂ. ವಿದೇಶಗಮನಂಗೆಯ್ದೆವಪ್ಪೊಡೆ ಕೌಶಿಕಂಗಳೆಲ್ಲಿಯುಮೊಳವು. ಅಲ್ಲಿರ್ದುವು ನಮ್ಮ ಬಂದ ಕಾರಣಮಂ ಬೇಗಮಾರೈದು ಪರಿದರಿಮರ್ದನಂಗೆ ಪೇಳ್ದೋಡಾತನೀಯಂದದೊಳಿರುಳ್ ಬಂದು ಮತ್ತದೆ ಮಾಣನದಱ*ಂದಿದು ನಯವಲ್ಲ. ನಮ್ಮ ಬಲದೊಳ್ ಭೀತರಲ್ಲದ ದೂತರನಟ್ಟಿ ಕೌಶಿಕಂಗಳ ಬರವನಱ*ದಾಗಳೆ ಪರೆದುಪೋಪ.  ಅವು ಬಾರದ ಪಕ್ಷಮಿಲ್ಲಿರ್ದು ಸಹಾಯಾದಿ ಸಾಧನೋಪಾಯಂಗಳಂ ಮಾಡುತ್ತಂ ದೇಶಕಾಲಂಗಳಂ ನೋಡುತ್ತಮಿರ್ದು ಬೞ*ಕದರ್ಕೆ ತಕ್ಕುದುಂ ನೆಗೞ್ವಮೆಂಬುದುಂ ಮೇಘವರ್ಣನಾದೀಪಿಯೆಂಬ  ಮಂತ್ರಿಯನಿಂತೆದ ; ಈಯಪಾಯಕ್ಕುಪಾಯಮಾವುದುಮಂ ಕಂಡಿರಪ್ಪೊಡೆ ಪೇೞ*ಮೆಂಬುದುಮಾತನಿಂತೆಂದಂ; ಈ  ಮಂತ್ರಿಗಳ್ ಪೇಳ್ದಂತೆ ಅರಿಮರ್ದನನಿಪ್ಪೊಡಂ ಸಂತಮಿರ್ಪನಪ್ಪೊಡೀ ನಯಮಪ್ಪುದು. ಇರುಳ್ಗಾಳೆಗದೊಳ್ ಕೌಶಿಕಂಗಳೊಂದಪ್ಪೊಡಂ ಸುತ್ತವುಂ ನೊಂದುವುಮಿಲ್ಲಂ ಅರಿಮರ್ದನಂ ನಡುವಿರುಳ್ ಬಾರದೆ ಮಾಣಂ ನಾವಿರುಳ್ ಕಣ್ಗಾಣದ ಕುರುಡರಪ್ಪುದಱ*ಂದುಲೂಕಂಗಳ್ ಚಂಚು ಚರಣಂಗಳ ಪಕ್ಷಂಗಳ ಘಾತದಿಂ ಶತಚೂರ್ಣಮಾಗಿ ಪೊಯ್ಯಲೋಡಿ ಪೋಗುವುದಲ್ಲದೆ ತಾಗಿ ತಳ್ತಿಱ*ಯಲಱ*ಯೆವದು ಕಾರಣದಿ,

ಶ್ಲೋ || ಜಿತೇನ ಲಭ್ಯತೇ ಲಕ್ಷ್ಮೀಃ ಮೃತೇನಾಪಿ ಸುರಾಂಗನಾಃ
ಕ್ಷಣವಿಧ್ವಂಸಿನಿ ಕಾಯೇ ಕಾ ಚಿಂತಾ ಮರಣೇ ರಣೇ  ||೧೪೪||

ಟೀ|| ಕಾಳೆಗದಲ್ಲಿ ಕಾದಿ ಗೆಲೊಡೆ ಹಿರಿದಪ್ಪ ಲಕ್ಷ್ಮಿಯಹುದು ಸತ್ತನಾದರೆ ದೇವಸ್ತ್ರೀಯರು ಕೊಂಡುಪೋಪರು. ಕ್ಷಣಭಂಗರುವಪ್ಪ ಶರೀರಕ್ಕೆ ಕಾಳೆಗವಾಗಲಿ ಮರಣವಾಗಲಿ ಚಿಂತಿಸಲಾಗದು. ಎಂಬೀ ನಯಮಂ ಪಿಡಿದು ಸಮಸ್ತವಾಯುಸನಿಕಾಯಮಂ ನೆರಪಿಕೊಂಡು ದಿವಸಾಂಧನಪ್ಪರಿಮರ್ದನನಂ ನಮ್ಮ ತಂದೆಯಪ್ಪರವಿಂದಮಿತ್ರನ ಬಲದಿಂ ಕಾದಿ ಕೊಂದೆವೆಪ್ಪೊಡೆ ಸುಖದಿಂ ಬಾೞ್ವೆವೆಂದೊಡಾತನ  ಮಾತು ತನ್ನ ಮನಕ್ಕೆ ಬಂದು ಮೇಘವರ್ಣಂ ಸಂದೀಪಿಯೆಂಬ ಮಂತ್ರಿಯಂ ನಿಮ್ಮಭಿಪ್ರಾಯಮಾವುದೆಂದು ಕೇಳ್ವದುಮಾತನಿಂತೆದಂ: ಅದೀಪಿ ಪೇೞ್ದಂತೆ ಕಾದುವುದೆ ಕಜ್ಜಮಪ್ಪೊಡೆ ನಮ್ಮ ಬಲದೊಳ್ ಸೇನಾನಾಯಕಾದಿ ವೀರಾಗ್ರಣಿಗಳೆಲ್ಲಂ ಗೂಗೆಗಳ ಕೈಯೊಳಕಾರಣಂ ಸತ್ತರ್; ಕೆಲರ್ ತುೞ*ಲಸಂದರೞ*ಯೆ ನೊಮದರ್ ಏತಕ್ಕಂ ಕ್ಷಮರಲ್ಲದೆ ನಿಂದರ್ ಇಂತು ನಮ್ಮ ಬಲಂ ಕೀಲ್ಕಳೆದ ಜಂತ್ರದಂತೆ ಕಳಕುಳಮಾಗಿರ್ದಪುದು, ಅಂತುಮಲ್ಲದೆ ಮೌಳಿಭೃತ್ಯಸುಹತ್ಸೇನಾಟವಿಕಬಲಂ ನಮಗಿಲ್ಲ. ಇಂತಪ್ಪ ದುಸ್ತರಾವಸ್ಥೆಯೊಳ್ ಕಾದುವುದು ಅದೆಂತೆನೆ

ಶ್ಲೋ|| ಪುಷ್ಟೈರಪಿ ನ ಯೋದ್ಧವ್ಯಂ ಕಿಂ ಪುನರ್ನಿಶಿತೈಶ್ಯರೈ:
ಯುದ್ದಮಕ್ಷಯದೋಷಾಢ್ಯಂ ಪ್ರಧಾನಪುರುಷಕ್ಷಯಮಂ  ||೧೪೫||

ಓ|| ಪುಷ್ಪಂಗಳಿಂದೊಳಗಾಗಿ ಕಾದಲಾಗದು. ತೀಕ್ಷ್ಣವಹ ಶರಂಗಳಿಂದೆಂತೂ ಕಾದಲಾಗದು ಕಾಳೆಗೆಮೆಂಬುದು ಕಿಡದ ದೋಷಮನುಳ್ಳುದು, ಪ್ರಧಾನಪುರುಷರಂ ಕಿಡಿಸುವುದು ಎಂಬೀ ನೀತಿಯುಂಟು. ಅದಲ್ಲದೆಯುಂ ಪ್ರಯಾಣಶಕುನದೊಳ್ ಉೞ*ಯನೊಂದಂ ಕಂಡಂತೆ ಕಳಿಯೆ ತಡೆಯದೆ ಗರ ಪೊಡೆದಂತೆ ಮೇಲ್ವಾಯ್ದ್ದೆವಪ್ಪೊಡೆ ತಮ್ಮ ಮೇಲೆ ತಾವೆ ಮರಂಗಡಿದರೆಂಬಂತಕ್ಕುಂ. ಎಂತುಂ ಪೂರ್ವೋಕ್ತಮಿಂತೆಂಬುದಲ್ತೆ:

ಶ್ಲೋ|| ಕಿಂ ನ ಹಂತಿ ಸುತಂ ಮಿತ್ರಂ ಬಂಧುಮರ್ಥಶ್ರೀಯಂ ಪತಿಂ
ಸೇವ್ಯಮಾನೋ ಹಿ ದಂಡೇನ ಸಂದಿಗ್ದ ವಿಜಯೋ ಯು ||೧೪೬||

ಟೀ || ಕಾಳೆಗದಲ್ಲಿ ಗೆಲ್ದಹೆನೆಂಬ ಸಂದೆಗಮುಳ್ಳನಂ ತನ್ನ ಪುತ್ರರ್ ಮಿತ್ರರ್ ಬಂದುಗಳ್ ಧನಸಂಪತ್ತುಮ್ರೊಡೆಯನುಮಿಂತಿವರೆಲ್ಲರನು ಕಿಡಿಸುವಂ.

ನಯವಿದನಲ್ಲಂ ಶಕ್ತಿ
ತ್ರಯರಹಿತಂ ವ್ಯಸನಿ ವಿಗ್ರಹಾಸಕ್ತನನಿ-
ಶ್ಚಯಬುದ್ಧಿವಿರಕ್ತಪ್ರಕೃ-
ತಿಯೆನಿಪ್ಪರಿನೃಪನೊಳಿಱ*ಳಿವುದುೞ*ವುದು ನಯಮಂ  ೨೭೭

ಸಮಬಲನೊಳಕಬಲನೊಳ್
ಸಮರಕ್ರೀಡಾಕ್ರಿಯಾಸಮರ್ಥನೊಳಕೋ-
ದ್ಯಮನೊಳ್ ಮಾಳ್ಪುದು ಸಂಯ-
ನಮೋಘಮಾತ್ಮೀಯ ಬುದ್ಧಿಯಂ ಬಗೆವ ನೃಪಂ  ೨೭೮

ಮತ್ತಂ ಎಂತುಂ ಸುಭಾಷಿತಮಿಂತೆಂಬುದಲ್ತೆ:
ಶ್ಲೋ || ಪ್ರವೃದ್ಧಚಕ್ರಿನಾಕ್ರಾಂತೋ ರಾಜ್ಞಾಬಲವತಾ ಬಲಃ
ಸಂಮೇವ ಹಿ ಕುರ್ವೀತ ಕೋಶದಂಡಾತ್ಮಭೂತಯೇ  ||೧೪೭||

ಟೀ || ಹೆಚ್ಚಿದ ರಾಜ್ಯವನುಳ್ಳ ಸಮರ್ಥನಹ ಅರಸಿನೊಡನೆ ಬಲಹೀನಾಗಿರ್ದ ಅರಸು ತನ್ನ ಸೇನೆ ಭಂಡಾರ ಜೀವರಕ್ಷೆಗೋಸುಗ ಸಂಯನೆ ಮಾಡಿಕೊಂಬುದು. ಅದಱ*ಂ ದೇವಾ! ನಾವಾವುದಾನೊಂದುಪಾಯದೊಳರಿಮರ್ದನನೊಳ್ ಸಂಧಾನಮಂ ಮಾಡಿ ನಿಂದು ಕಾಲಮುಮಂ ಕಜ್ಜಮುಮಂ ಬಗೆದು ಬಳಿಕ್ಕುಜ್ಜುಗಂಗೆಯೆಮ್ಮೆನೆ ಮೇಘವರ್ಣಂ ಪ್ರದೀಪಿಯ ಮಾತುಗಳ್ಗೆ ಕೋಪಂ ಪ್ರದೀಪಮಾಗೆ ಮನದೊಳ್ ಮುನಿದು ಎಂತುಂ ನೀನಪ್ಪೊಡೆ ಮಹಾಮಾತ್ಯನಾಗಿರ್ದಜ್ಞನಂತೆ ಕಾದಿದೊಡೆ ಸಾವಾಪ್ಯದೆಂದೆನಗೆ ಭಯಂದೋಱ* ನುಡಿವುದು ನಯಮುಂ ನೀತಿಯುಮಲ್ಲದೆಂತೆನೆ:

ಶ್ಲೋ|| ಧರ್ಮಃ ಪ್ರಾಗೇವ ಚಿಂತ್ಯಸ್ಸಚಿವಮತಿಗತೀ ಭಾವನೀಯೇ ಸ್ವಬುದ್ಧ್ಯಾ
ಜ್ಞೇಯಾ ಲೋಕಸ್ಯ ವೃತ್ತಿರ್ವದಚರನಯನೈರ್ವ್ಮಂಡಲಂ ಪ್ರೇಕ್ಷಣೀಯಂ
ಪ್ರಚ್ಛಾದ್ಯೌರಾಗದೋಷೌ ಮೃದುಪರುಷಗುಣೌ ಕಾಲಯೋಗೆನಯೋಜ್ಯಾ
ವಾತ್ಮಾ ಸಂರಕ್ಷಣೀಯೋ ರಣಶಿರಸಿ ಪುನಸ್ಸೋಪಿ ನಾಪೇಕ್ಷಣೀಯಃ  ||೧೪೮||

ಟೀ|| ಧರ್ಮವು ಮೊದಲಲ್ಲಿ ವಿಚಾರಿಸಲ್ವೇಡಿರ್ದುದು: ತನ್ನ ಬುದ್ಧಿಯಿಂ  ಮಂತ್ರಿಗಳ ಬುದ್ಧಿಯ ಹವಣಱ*ವುದು : ರಾಗದೋಷಂಗಳಂ ಮುಸುಂಕುವುದು: ಮೃದುಕಠಿಣಗುಣಂಗಳಂ ಕಾಲೋಚಿತಮಾಗಿ ನಿಯೋಗಿಸುವುದು: ದೇಶಕಾಲಂಗಳನು ಲೇಸಾಗಿ ಅಱ*ವುದು; ಬುದ್ದಿವಂತರಪ್ಪ ಚಾರರೆಂಬ ಕಣ್ಗಳಿಂ ಪರಮಂಡಲಂ ನೋಡಿಸುವುದು: ಉಳಿದ ಎಲ್ಲಾ ದೆಸೆಗಳಿಂ ತನ್ನಂ ತಾನು ಕಾದುಕೊಂಬುದು ಎಂಬುದು ರಾಜನೀತಿಯುಂಟದಱ*ಂ ಕ್ಷತ್ರಿಯಂ ಕದನಕ್ಕಳ್ಕಲಾಗದು: ಸಮರಾಂಗಣದೊಳಳ್ಕಿದೆವಪ್ಪೊಡೆ,

ಶ್ಲೋ || ಪ್ರಾಣದ್ರವಿಣ ಲೋಭೇನ ಯಃ ಕರೋತಿ ಯಶೋವಧಂ
ಸ ಪಾಪಃ ಕೀಲಕಾರ್ಥೇನ ದಹನ್ನಿವ ಸುರಾಲಯಂ ||೧೪೯||

ಟೀ|| ಅವನೊರ್ವವಂ ಪ್ರಾನವಸ್ತುವೆಂಬಿವಱ ಲೋಭದಿಂ ಕ್ಭಿರ್ತಿಂ ಕಿಡಿಸಿಕೊಂಡಿಹನೋ ಆ  ಪಾಪಿಷ್ಟಂ ಕೀಲಿಂಗೆ ದೇವಾಲಯಮಂ ಸುಡುವನೋಪಾದಿ ಎಂಬೀ ಶ್ಲೋಕಾರ್ಥದಿಂ ರಣಮರಣ ಬೀತಿಯಿಂದಪಖ್ಯಾತಿಯಮೋಘಮಕ್ಕುಮೆಂದಿರ್ದಪುದು. ಅದಲ್ಲದೆಯುಂ ಎನ್ನ ಸಮಸ್ತಬಲಮುಂ ಸತ್ತು ಕೆಟ್ಟುಮಿತಸ್ತತಮಾದ ಕಾರಣದಿಂದೆನಗೆ ತೇಜೋಹಾನಿಯುಂ ಮನೋಗ್ಲಾನಿಯು ಮಾಗಿರ್ಪುದದರಿಂದಾ ಗೂಗೆಗಳನಿಂದೆ ಕೊಂದು ಕಾಗೆಗಳನವಱ ಬಸಿರಂ ತೆಗೆಯದಂದೆನ್ನ ಮನದಳಲುಂ ಪೋಗದೆಂದು ಶೋಕರಸಮುಂ ಕ್ರೋಧರಸಮುವೊಡವಳೆಯೆ ನುಡಿದ ಬಲಿಭುಕ್ಪತಿಯಂ ವಾಯಸಬಲ ಸಂಜೀವಿಯಪ್ಪ ಚಿರಂಜೀವಿ ಮಾರ್ಕೊಂಡು ದೇವಾ ! ನೀವಿಂತತ್ಯಾತುರದಿಂ ಕೋಪಾತುರರುಮಾಗಿ ನುಡಿವುದು ನೀತಿಯಲ್ಲದೆಂತೆನೆ:

ಶ್ಲೋ: ರಾಮಾತ್ಪರಶ್ಯೂರತರೋಸ್ತಿ ಕಶ್ಷಿತ್ ಪರಾಭವಂ ಸ್ತ್ರೀಹರಣಾತ್ತತೋನ್ಯತ್
ತಥಾಪಿ ರಾಮೊ ನ ಶುಶೋಷ ರ್ವಾಂ ಬಬಂಧ ಸೇತುಂ ವಿಜಯೀ
ಸಹಿಷ್ಣುಃ ||೧೫೦||

ಟೀ|| ರಾಮನಿಂ ರರುಮಾರುಮಿಲ್ಲ: ಸ್ತ್ರೀಹರಣದಿಂ ಪರಾಭವಮಾವುದುಮಿಲ್ಲ ಅಹಂಗಾದೊಡಂ   ಶ್ರೀರಾಮಂ ಸಮುದ್ರಮಂ ಶೋಷಿಸಿದನಿಲ್ಲ. ಸೈರಣೆಯಂ ಮಾಡಿ ಸೇತುವಂ ಕಟ್ಟಿ ಲಂಕೆಯಿಂ ಕೊಂಡನಲ್ಲದೆ ತ್ವರಿತವ ಮಾಡಿದುದಿಲ್ಲ ಎಂಬ ನೀತಿವಾಕ್ಯಮುಂಟು ಅದಱ*ಂ ನಿಮ್ಮಡಿ ನೀವು ಸಹಿಷ್ಣುವಾಗಿ ಪಗೆಯಂ ಬಗೆಯೊಳೆ ಕಾದಿ ಕೊಲ್ಪುದೆಂದು ಬಿನ್ನಪಂಗೆಯ್ದುದುಂ ಮೇಘವರ್ಣನಿಂತೆಂದಂ:

ಶ್ಲೋ|| ಅನ್ಯಥಾ ಭೂಷಣಂ ಪುಂಸಾಂ ಕ್ಷಮಾ ಲಜ್ಜೇವ ಯೋಷಿತಾಂ
ಪರಾಕ್ರಮಃಪರಿಭವೇ ವೈಯಾತ್ಯಂ ಸುರತೇಷ್ವಿವ  ||೧೫೧||

ಟೀ || ಪುರುಷರ್ಗೆ ಉೞ*ದ ವೇಳೆಯಲ್ಲಿ ಕ್ಷಮೆಯೇ ಭೂಷಣಂ: ಪರಿಭವವಾದಲ್ಲಿ ಪರಾಕ್ರಮವಿರಬೇಕು. ಸ್ತ್ರೀಯರ್ಗೆ ಉೞ*ದ ವೇಳೆಯಲ್ಲಿ ಲಜ್ಜೆಯೇ ಭೂಷಣಂ ಸುರತದಲ್ಲಿ ದಿಟ್ಟತನವಿರಬೇಕು:

ಶ್ಲೋ || ನಿಂದಂತು ನೀತಿನಿಪ್ಯಣಾ ಯದಿ ವಾ ಸ್ತುವಂತು
ಲಕ್ಷ್ಮೀಸ್ಸಮಾವಿಶತು ಗಚ್ಛತು ವಾ ಯಥೇಷ್ಟಂ
ಅದ್ವೈವ ವಾ ಮರಣಮಸ್ತು ಯುಗಾಂತರೇ ವಾ
ನ್ಯಾಯಾತ್ಪಥಃ ಪ್ರವಿಚಲಂತಿ ಪದಂ ನ ರಾಃ  ||೧೫೨||

ಟೀ|| ನೀತಿಯಂ ಬಲ್ಲವರ್ ತಮ್ಮನಾರಾನುಂ ನಿಂದಿಸಲಿ ಮೇಣ್ ಸ್ತುತಿಸಲಿ ಐಶ್ವರ‍್ಯವುಂಟಾಗಲಿ ಮೇಣ್ ದರಿದ್ರವಾಗಲಿ ಆ ಕ್ಷಣದಲ್ಲಿ ಮರಣವಾಗಲಿ ಯುಗಪರ‍್ಯಂತಂ ಬದುಕಲಿ ವಿಚಕ್ಷಣರ್ ನ್ಯಾಯಮಂ ತಪ್ಪಿ ನಡೆಯರ್ ಎಂಬ ನೀತಿಗಳೊಳವಾದೊಡೇಂ ನೀಮಪ್ಪೊಡೆ ಶುಕ್ರ ಶಕ್ರಗುರು ಪರಾಶರ ಬಾಹುದಂತಿ ನಂದ ಕೌಣಪ ದಂತ ವಿಶಾಳಾಕ್ಷ ಕುಬೇರಾಭೀರ ಚಾಣಕ್ಯಾದಿ ಪುರಾಣಾಚಾರ‍್ಯಕೃತ ಪ್ರಯೋಗಪ್ರವೀಣರುಂ ಅಂತುಮಲ್ಲದೆ ದುಷ್ಟಪರಂಪರೆಯಿನಿಂತಪ್ಪ ವಿಷಮತರಮುಮತಿಸಂಕಟಮುಮಪ್ಪವಸರಕ್ಕೆ ಕರ್ತವ್ಯಮಾವುದೆನೆ  ಮಂತ್ರಿಚೂಡಾಮಣಿ ಚಿರಂಜೀವಿಯಿಂತೆಂದಂ:

೨೭೪ ವ|| ಅಷ್ಟರಲ್ಲಿ ಸೂರ‍್ಯೋದಯವಾಗಲು ಮೇಘವರ್ಣನು ಎದ್ದು ಕಾಗೆಗಳ ಸೈನ್ಯದ ರಕ್ತಪ್ರವಾಹದಿಂದ ಕೆಂಪಾದ ಸಮರಾಂಗಣವನ್ನು ಗೂಗೆಗಳೊಡನೆ ಕಾದಾಡಿ ಮಡಿದ ವಾಯಸವೀರನಿಕಾಯವನ್ನು ಕೊಂದು ಬವಳಿಸಿದ ವಾಯಸ ಪ್ರಧಾನರನ್ನು ಕಂಡು ಬೆರಗಾಗಿದ್ದ ವಾಯಸಾಶ್ವರನಲ್ಲಿಗೆ ಕೆಲವು ವಾಯಸಗಳು ಬಂದು ಬಿನ್ನವಿಸಿಕೊಂಡವು: ದೇವಾ !ನಾವು ರಾತ್ರಿಯ ಯುದ್ದಕ್ಕೆ ಆಸಕ್ತರೂ ಅಲ್ಲದೆ, ನಮ್ಮ ಬಲ ಯಾವುದು ವೈರಿ ಬಲ ಯಾವುದೆಂದು ತಿಳಿಯದೆ ಸೋತೆವು. ಇನ್ನು ಮುಂದೆ ಏನಪ್ಪಣೆ ಅದಕ್ಕೆ ಮೇಘವರ್ಣನು ಹೀಗೆಂದನು; ಇಲ್ಲಿ ನೊಂದವರನ್ನು ವೃದ್ದರನ್ನು ಸ್ತ್ರೀ ಬಾಲಕರನ್ನ್ನು ಒಯ್ದು ಒಂದು ದುರ್ಗದಲ್ಲಿ ಇರಿಸಿ ಬಳಿಕ ತಕ್ಕ ಕಾರ‍್ಯವನ್ನು ಮಾಡೋಣ ಎಂದು ತನಗಿಂತ ಹಿರಿಯರು ಚತುರುಪಧಾವಿಶುದ್ಧರೂ ನೀತಿ ಶಾಸ್ತ್ರವಿದರೂ ಅದ ಉದ್ದೀಪಿ, ಅದೀಪಿ, ಪ್ರದೀಪಿ, ಸಂದೀಪಿ, ಚಿರಂಜೀವಿ ಎಂಬ ಐವರು  ಮಂತ್ರಿಗಳನ್ನು ಬರಿಸಿಕೊಂಡು ಮೇಘವರ್ಣನು ಈ ಯುದ್ದದಲ್ಲಿ  ಎನು ಮಾಡೋಣ ಎಂದು ಕೇಳಲು ಮಂತ್ರಿಗಳು ಹೀಗೆಂದರು;೨೭೫ ದೇವಾ ನೀವು ಉತ್ಸಾಹದಿಂದ ನಮ್ಮನ್ನು ಕೇಳುವುದೂ ನಾವು ನೀವು   ಕೇಳುವುದು ಸರಿಯಾದ ಮಾರ್ಗವಲ್ಲ; ಇದು ನೀತಿ ವಿರುದ್ಧವಾದುದು ವಾ|| ಮಂತ್ರ ಬಹಿರಂಗವಾದಲ್ಲಿ ಕಾರ‍್ಯವು ಬಿಟ್ಟು ಹೊಗುವುದು. ಅದರಿಂದ ಎಲ್ಲಾ ಕಡೆಯಿಂದಲೂ ಅದನ್ನು ಗೋಪ್ಯವಾಗಿ ರಕ್ಷಿಸತಕ್ಕದ್ದು.  ವ|| ಅರಸರು  ಅಲೋಚನಾ ಕಾಲದಲ್ಲಿ ನಿಸ್ತಂಭವು ನಿರ್ಗವಾಕ್ಷವೂ ನಿಶ್ಚಿದ್ರಭಿತ್ತಿಯೂ ನಿರಾಶ್ರದಾಯವೂ ಶುಕಶಾರಿಕಾದಿ ಶಕುನಿಕುಲವಿಕಲವೂ ಆದ ಮಂತ್ರ ಶಾಲೆಯಲ್ಲಿ ಮಂತ್ರಿಗಳು ತಾವೂ ನಿಶ್ಚಿಂತರಾಗಿದ್ದು ಅಲೋಚಿಸುವರು. ಅದರಿಂದ ಇಂಥ ಸಂದರ್ಭದಲ್ಲಿ ಮಂತ್ರಾಲೋಚನೆ ಉಚಿತವಲ್ಲ. ಅದಕ್ಕೆ ಮೇಘವರ್ಣನು ತನ್ನ ಪರಿವಾರದ ವಾಯಸಸಮುದಾಯವನ್ನು ಹೋಗಲು ಹೇಳಿ ಬಳಿಕ ಮಂತ್ರಿಮಂಡಲಕ್ಕೆ ಹೀಗೆಂದನು: ೨೭೬. ಅಗಾಧವಾದ ಶೌರ‍್ಯವನ್ನು ನಿಮ್ಮ  ಮಂತ್ರಶಕ್ತಿಯನ್ನೂ ಬಗೆಯದೆ ನಮ್ಮ ವೈರಿ ಕಾಗೆಗಳನ್ನೂ ಕೊಂದನು.  ಇದಕ್ಕೇನು ಉಪಾಯ? ವ|| ಆಗ ಮಂತ್ರಿ ಮಂಡಲದಲ್ಲಿ ಮುಖ್ಯನಾದ ಉದ್ದೀಪಿಯು ಹೀಗೆಂದನು: ದೇವಾ ! ವ|| ಬಲಿಷ್ಟನಾದ ಶತ್ರುವಿನಿಂದ ಬಂತನಾದವನು  ಆ ಶತ್ರುವಿನ ಒಳಹೊಕ್ಕು ಬಾಳಬೇಕು, ಅಲ್ಲದಿದ್ದಲ್ಲಿ  ವಿದೇಶ ಗಮನ ಮಾಡತಕ್ಕದ್ದು  ವ|| ನಾವು ಈ ಅವಸ್ಥೆಯಲ್ಲಿ ಬೇರೆನನ್ನೂ ಮಾಡಲರಿಯೆವೆವು. ಆಗ ಪ್ರದೀಪಿ ಎಂಬ  ಮಂತ್ರಿ ಹೀಗೆಂದನು ಈತ ಹೇಳಿದ ತದನುಪ್ರದೇಶಕ್ಕೂ ವಿದೇಶಗಮನಕ್ಕೂ ದೋಷವುಂಟು. ತದನುಪ್ರವೇಶಮಾಡಿದೆವಾದರೆ  ಬದ್ಧ ರೋಷಿಯೂ ಯುದ್ಧಾಭಿಲಾಷಿಯೂ ಆಕಾರಣದ್ವೇಷಿಯೂ ಅದ ವ್ಶೆರಿಯ ಮನೆಯನ್ನು ತಿಳಿಯದೆ ಹೊಕ್ಕರೆ ಸಾವು ಸಿದ್ಧ; ಅಥವಾ ಯುದ್ಧವಾಗುವುದು. ವಿದೇಶಗಮನ ಮಾಡಿದರೆ ಈ ಹಾಳು ಗೂಗೆಗಳು ಎಲ್ಲಿ ಹೋದರೂ ಇರುವುವು. ಅಲ್ಲಿರುವ ಗೂಗೆಗಳು ನಾವು ಬಂದ ಕಾರಣವನ್ನು ಬೇಗನೆ ತಿಳಿದು ನಮ್ಮ ವ್ಶೆರಿಗೆ ತಿಳಿಸಿದಲ್ಲಿ ಅತನೂ ಇದೇ ರೀತಿಯಲ್ಲಿ ರಾತ್ರಿ ಬಂದು ಅಕ್ರಮಿಸದೆ ಬಿಡುವುದಿಲ್ಲ ಅದರಿಂದ ಇದು ನೀತಿಯಲ್ಲ. ನಮ್ಮ ಬಲದಲ್ಲಿ ದೈರ್ಯವಂತರಾದ ದೂತರನ್ನು ಅಟ್ಟಿ ಗೂಗೆಗಳ ಬರವನ್ನು ಅರಿತುಕೊಂಡು ಅಗಲೇ ಚದುರಿ ಹೋಗೋಣ ಅವು ಬಾರದ ಪಕ್ಚದಲ್ಲಿ ಇಲ್ಲಿಯೇ ಇದ್ದು ಸಹಾಯಾದಿ ಸಾಧನೋಪಾಯಗಳನ್ನು ಮಾಡಿಕೊಳ್ಳುತ್ತಾ ದೇಶ ಕಾಲಗಳನ್ನು ನೋಡುತ್ತಿದ್ದು  ಬಳಿಕ ಅದಕ್ಕೆ ತಕ್ಕುದ್ದನ್ನು ಮಾಡೋಣ. ಅದಕ್ಕೆ ಮೇಘವರ್ಣನು ಅದೀಪಿ ಎಂಬ ಮಂತ್ರಿಯನ್ನು ಹೀಗೆಂದು ಕೇಳಿದನು. ಈ ಅಪಾಯಕ್ಕೆ ಏನಾದರೂ ಉಪಾಯ ಗೊತ್ತಿದ್ದರೆ ತಿಳಿಸಿರಿ ಎನ್ನಲು ಅವನು ಹೀಗೆಂದನು; ಈ ಮಂತ್ರಿಗಳು ಹೇಳಿದಂತೆ ವೈರಿಯು ಇನ್ನಾದರೂ ಸುಮ್ಮನಿರುವುದಾದರೆ ಈ ಉಪಾಯ ಸರಿ ಹೊಂದುವುದು. ರಾತ್ರಿ ಯುದ್ಧದಲ್ಲಿ ಗೂಗೆಗಳಲ್ಲಿ ಒಂದೂ ಸತ್ತೂ ನೊಂದೂ ಇಲ್ಲ. ಅರಿಮರ್ದನನೂ ಅರ್ಧ ರಾತ್ರಿ ಹೊತ್ತಿಗೆ ಬಾರದೆ ಇರನು. ನಾವೂ ರಾತ್ರಿ ಹೊತ್ತು ಕಣ್ಕಾಣದ ಕುರುಡರಾದುದರಿಂದ ಗೂಗೆಗಳ ಚಂಚು ಚರಣ ಪಕ್ಷಗಳ ಘಾತದಿಂದ ನುಚ್ಚುನುರಿಯಾಗಿ ಹೋಗುವುದಲ್ಲದೆ  ಹೋರಾಡಲಾರೆವು. ಅದರಿಮದ ಶ್ಲೋ|| ಯುದ್ಧದಲ್ಲಿ ಕಾದಾಡಿ ಗೆದ್ದರೆ ಅಕವಾದ ಲಕ್ಷ್ಮಿಗೆ ಆಶ್ರಿತರಾಗುವರು; ಸತ್ತರಾದರೆ ದೇವಶ್ರೀಯರು ಕೊಂಡುಹೋಗುವರು. ಕ್ಷಣ ಭಂಗುರವಾದ ಈ ದೇಹಕ್ಕೆ, ಕಾಳಗವಾಗಲಿ, ಮರಣವಾಗಲಿ, ಅದಕ್ಕಾಗಿ ಚಿಂತಿಸಬಾರದು. ವ|| ಈ ನೀತಿಯನ್ನು ಹಿಡಿದು ಸಮಸ್ತ ವಾಯಸ ನಿಕಾಯವನ್ನು ಸೇರಿಸಿಕೊಂಡು ಹಗಲುಗುರುಡನಾದ ಅರಿಮರ್ದನನ್ನು ನಮ್ಮ ತಂದೆಯ ಸೂರ‍್ಯನ ಬಲದಿಂದ ಕಾದಾಡಿ ಕೊಂದೆವಾದರೆ ಸುಖದಿಂದ ಬಾಳುವೆವು. ಅತನ ಮಾತು ತನ್ನ ಮನಸ್ಸಿಗೆ ಒಪ್ಪಿ ಮೇಘವರ್ಣನು ಸಂದೀಪಿ ಎಂಬ ಮಂತ್ರಿಯನ್ನು ಕುರಿತು ನಿಮ್ಮ  ಅಬಿಪ್ರಾಯವು ಯಾವುದು ಎಂದು  ಕೇಳಲು ಅತನು ಹೀಗೆಂದನು: ಅದೀಪಿ ಹೇಳಿದಂತೆ ಕಾದಾಡುವುದೆ ಕಾರ‍್ಯವಾದರೆ ನಮ್ಮ ಸೈನ್ಯದಲ್ಲಿ ಸೇನಾನಾಯಕಾ ವೀರಾಗ್ರಣಿಗಳೆಲ್ಲರೂ ಗೂಗೆಗಳಿಂದಾಗಿ ಅಕಾರಣವಾಗಿ ಸತ್ತು ಹೋದರು, ಕೆಲವು ಶೂರಭಟ್ಟರು ಅಳಿಯಲು ನೊಂದರು: ಎಲ್ಲವನ್ನೂ ಸಹಿಸಿಕೊಂಡು ನಿಂತರು. ಈ ರೀತಿಯಲ್ಲಿ ನಮ್ಮ ಸೈನ್ಯವು ಕೀಲುಗಳಚಿದ ಯಂತ್ರದಂತೆ ಕಳಕುಳವಾಗಿರುವುದು, ಅಲ್ಲದೆ ಮೌಳಿಭೃತ್ಯಸುಹೃತ್ಸೇನಾಟವಿಕ ಬಲವು ನಮಗಿಲ್ಲ ಇಂತಹ ದುಸ್ತರಾವಸ್ಥೆಯಲ್ಲಿ ಕಾದುವುದು ಕಾರ‍್ಯವಲ್ಲ ಹೇಗೆಂದರೆ ಶ್ಲೋ|| ಪುಷ್ವಗಳಿಂದ ಕಾದಾಡಲಾಗದು ತೀಕ್ಣವಾದ ಶರಗಳಿಂದ ಹೇಗೂ ಕಾದಡಲಾಗದು. ಯುದ್ಧವೆಂಬುದು ನಾಶವಾಗದ ದೋಷಗಳಿಂದ ಕೂಡಿದುದು; ಅದೂ ಪ್ರಧಾನ ಪುರುಷರನ್ನು ಕೆಡಿಸುವುದು ವ|| ಅಲ್ಲದೆ ಪ್ರಯಾಣ ಶಕುನದಲ್ಲಿ ಶಕುನ ಪಕ್ಷಿಯೊಂದನ್ನು ಕಂಡಂತೆ ನಿವಾರಿಸಿ ತಡೆಯದೆ Uರ ಹೊಡೆದಂತೆ ಅಕ್ರಮಣ ಮಾಡಿದೆವಾದರೆ ತಮ್ಮ ಮೇಲೆ ತಾವೇ ಮರ ಕಡಿದುಕೊಂಡರೆಂಬಂತೆ ಆಗುವುದು. ಹೇಗೂ ಪೋರ್ವಕ್ತಿ ಹೀಗೆನ್ನುವದಲ್ಲವೆ?

ಶ್ಲೋ|| ಯುದ್ಧದಲ್ಲಿ ಗೆಲ್ಲುವೆನೆಂಬ ಸಂದೇಹವುಳ್ಳವನು ತನ್ನ ಪುತ್ರ ಮಿತ್ರ ಬಂದು ಧನ ಸಂಪತ್ತು ಒಡೆಯರೆಂಬ ಬೇಧವಿಲ್ಲದೆ ಇವೆರೆಲ್ಲರನ್ನು ನಾಶಪಡಿಸುವೆನು ೨೭೭. ನೀತಿಯನ್ನರಿಯದ ಶಕ್ತಿತ್ರಯರಹಿತವಾದ  ವ್ಯಸನಿಯಾದ  ವಿಗ್ರಹಾಸಕ್ತನಾದ  ಅನಿಶ್ಚಯಬುದ್ಧಿಯ ವಿರಕ್ತ ಪ್ರಕೃತಿ ಎನ್ನಿಸುವ ವೈರಿ ರಾಜರೊಡನೆ ಯುದ್ಧ ಮಾಡಬೇಕು ೨೭೮: ಸಮಬಲನಲ್ಲೂ ಅಕಬಲನಲ್ಲೂ ಸಮರಕ್ರೀಡಾಕ್ರಿಯಾಸಮರ್ಥನಲ್ಲೂ ಅಕೋದ್ಯಮನಲ್ಲೂ ಸಂದಿಯನ್ನು ಮಾಡಿಕೊಳ್ಳಬೇಕು. ಚಕ್ರವರ್ತಿಯಾದ  ಸಮರ್ಥನಾದ ರಾಜನೊಡನೆ ಬಲಹೀನನಾಗಿರುವ ಅರಸು ತನ್ನ ಸೇನೆ ಭಂಡಾರ ಜೀವಿಗಳ ರಕ್ಷಣೆಗಾಗಿ ಸಂಯನ್ನೇ ಮಾಡಿಕೊಳ್ಳತಕ್ಕದ್ದು ವ|| ಅದರಿಂದ ದೇವಾ ! ನಾವು ಯಾವುದಾದರೊಂದು ಉಪಾಯದಿಂದ ಅರಿಮರ್ದನನೊಡನೆ ಸಂ ಮಾಡಿಕೊಂಡು ಕಾಲವನ್ನು ಕಾರ‍್ಯವನ್ನು ಸಾದಿಸಿ ಉದ್ಯೋಗಿಸೋಣ ಎನ್ನಲು ಮೆಘವರ್ಣನು ಪ್ರದೀಪಿಯ ಮಾತುಗಳಿಗೆ ಕೋಪಪ್ರದೀಪವಾಗಲು ಮನಸ್ಸಿನಲ್ಲಿ  ಕನಲಿ ನೀನು ಮಹಾಮಾತ್ಯನಾಗಿದ್ದು ಅಜ್ಞನಂತೆ ಕಾದಾಡಿದರೆ ಸಾವಾಗುವುದು ಎಂದು ನನ್ನಲ್ಲಿ ಭಯ ಹುಟ್ಟಿಸಿ ನುಡಿಯುವುದು ನೀತಿಯಲ್ಲ. ಅದು ಹೇಗೆಂದರೆ ಶ್ಲೋ || ಧರ್ಮವನ್ನು ಮೊತ್ತಮೊದಲು ವಿಚಾರಿಸತಕ್ಕದ್ದು ತನ್ನ ಬುದ್ಧಿಯಿಂದ ಮಂತ್ರಿಗಳ ಬುದ್ಧಿಯ ಪ್ರಮಾಣವನ್ನು ತಿಳಿಯಬೇಕು. ಮುಸುಕಿದ ರಾಗ ದೋಷಗಳನ್ನೂ ಮೃದು ಕಠಿಣ ಗುಣಗಳನ್ನೂ ನಿವಾರಿಸತಕ್ಕದ್ದು. ದೇಶ ಕಾಲಗಳನ್ನು ಚೆನ್ನಾಗಿ ತಿಳಿದು ಬುದ್ದಿವಂತರಾದ ಚಾರರೆಂಬ  ಕಣ್ಣಗಳಿಂದ ಪರಮಂಡಲದ ಮೇಲೆ ಸದಾ ಕಣ್ಣಿಟ್ಟಿರಬೇಕು.  ಉಳಿದ ಇತರ ಕಡೆಗಳಿಂದ ತನ್ನನ್ನೂ ರಕ್ಷಿಸಿಕೊಳ್ಳತಕ್ಕದ್ದು. ಕ್ಷತ್ರಿಯನು ಕದನಕ್ಕೆ ಅಳಕೂಡದು. ಯುದ್ಧರಂಗದಲ್ಲಿ ಹೆದರಿದೆವಾದರೆ ಶ್ಲೋ || ಯಾವನೇ ಆಗಲಿ ಪ್ರಾಣ ಐಶ್ವರ್ಯಗಳ ಲೋಭದಿಂದ ಕೀರ್ತಿಯನ್ನು ಕಡೆಸಿಕೊಂಡಿರುವನೋ ಆ ಪಾಪಿಷ್ಠನು ಕೀಲಿಗಾಗಿ  ದೇವಾಲಯವನ್ನು ಸುಡುವವನಂತೆ ಮೂರ್ಖನೆನಿಸುವನು.  ವ|| ರಣಮರಣಬೀತಿಯಿಂದ ಅಪಖ್ಯಾತಿ  ಬರುವುದು. ಅಲ್ಲದೆ ತನ್ನ ಸಮಸ್ತ ಬಲವೂ ಸತ್ತು, ಕೆಟ್ಟು ಅಸ್ತವ್ಯಸ್ತವಾದ ಕಾರಣದಿಂದ ನನಗೆ ತೇಜೋಹಾನಿಯೂ, ಮನೋಗ್ಲಾನಿಯೂ ಆಗಿರುವುದು. ಅದರಿಂದ ಗೂಗೆಗಳನ್ನು ಇಂದೇ ಕೊಂದು ಕಾಗೆಗಳನ್ನು ಅವುಗಳ ಹೊಟ್ಟೆಯಿಂದ ತೆಗೆಯದಿದ್ದಲ್ಲಿ ನನ್ನ ಮನಸ್ಸಿನ ದುಃಖ ಹೋಗದು ಎಂದು ನುಡಿದ  ಬಲಿಭುಕ್ಷತಿಯನ್ನು ವಾಯಸಬಲ ಸಂಜೀವಿನಿಯಾದ ಚಿರಂಜೀವಿ ತಡೆದು,  ದೇವಾ!ನೀವು ಹೀಗೆ ಅತ್ಯಾತುರರೂ ಕೋಪಾತುರರೂ ಆಗಿ ನುಡಿಯುವುದು  ನೀತಿಯಲ್ಲ. ಶ್ಲೋ|| ರಾಮನಿಗಿಂತ ರರು ಯಾರೂ ಇ. ಸ್ತ್ರೀ ಅಪಹರಣಕ್ಕಿಂತ ಪರಾಭವ ಯಾವುದೂ ಇಲ್ಲ. ಹಾಗಾದರೂ ಶ್ರೀರಾಮ ಸಮುದ್ರವನ್ನು ಶೋಷಿಸಲಿಲ್ಲ: ತಾಳ್ಮೆಯಿಮದ ಸೇತುವನ್ನು ಕಟ್ಟಿ ಲಂಕೆಯನ್ನು ಜಯಿಸಿದನಲ್ಲದೆ ತ್ವರಿತಗೊಳ್ಳಲಿಲ್ಲ ಎಂಬ ನೀತಿ ವಾಕ್ಯವುಂಟು. ಅದರಿಂದ ನೀವು ತಾಳ್ಮೆಯಿಂದ ಹಗೆಯನ್ನು ಮನಸ್ಸನಲ್ಲೆ ಕಾದಾಡಿ ಗೆಲ್ಲತಕ್ಕದ್ದು ಎಂದು ಬಿನ್ನಯಿಸಿದನು. ಅದಕ್ಕೆ ಮೇಘವರ್ಣನು  ಹೀಗೆಂದನು ಶ್ಲೋ|| ಪುರುಷರಿಗೆ ಉಳಿದ ವೇಳೆಯಲ್ಲಿ ಕ್ಷಮೆಯೇ ಭೂಷಣ ; ಪರಿಭವವಾದಲ್ಲಿ ಪರಾಕ್ರಮವೇ ಬೇಕು. ಸ್ತ್ರೀಯರಿಗೆ ಉಳಿದ ವೇಳೆಯಲ್ಲಿ ಲಜ್ಜೆಯೇ ಭೂಷಣ; ಸುರತದಲ್ಲಿ ದಿಟ್ಟತನವಿರಬೇಕು. ನೀತಿಯನ್ನು  ಬಲ್ಲವರು ತಮ್ಮನ್ನು ಯಾರಾದರೂ ನಿಂದಿಸಲಿ ಯಾ ಸ್ತುತಿಸಲಿ ಐಶ್ವರ್ಯ ಉಂಟಾಗಲಿ ಯಾ ದರಿದ್ರನಾಗಲಿ ಆ ಕ್ಷಣದಲ್ಲಿ ಮರಣವಾಗಲಿ  ಯಾ ಯುಗ ಪರ್ಯಂತವಾಗಲಿ ಬದಕಲಿ ರರಾದವರು ನ್ಯಾಯವನ್ನು ತಪ್ಪಿ ನಡೆಯರು. ಈ ಮೊದಲಾದ ನೀತಿಗಳಿರುವವು ಅದರೇನು? ನೀವಾದರೂ ಶುಕ್ರ ಶಕ್ರಗುರು ಪರಾಶರ ಬಾಹುದಂತಿ ನಂದಕೌಣಪ ದಂತ ವಿಶಾಲಾಕ್ಷ ಕುಬೇರ  ಅಭೀ*ರ ಚಾಣಕ್ಯ ಮೊದಲಾದ ಪುರಾಣಾಚಾರ‍್ಯಕೃತ  ನೀತಿ ಶಾಸ್ತ್ರ ಪ್ರಯೋಗ ಪ್ರವೀಣರೂ ಅಲ್ಲದೆ ದುಷ್ಟ ಪರಂಪರೆಯಿಂದ  ಇಂತಹ  ವಿಷಮತರವೂ ಅತಿಸಂಕಟಕರವೂ ಆದ ಸಂದರ್ಭದಲ್ಲಿ ಕರ‍್ತವ್ಯ ಯಾವುದು ಎನ್ನಲು ಮಂತ್ರಿ ಚೂಡಾಮಣಿಯಾದ ಚಿರಂಜೀವಿ ಹೀಗೆಂದನು ;