ನಯವಿದರಪ್ಪೀ ನಾಲ್ವರ
ನಯಮನಯಂ ದೇವ ನಿಮ್ಮ ಪೇೞ್ದುದೆ ಮಂತ್ರಂ
ನಿಯತಂ ತ್ವದೀಯಮಂತ್ರಂ
ನಯನಜ್ಞರನುಮತದಿನದುವೆ ದಲ್ ಪಂಚಾಂಗಂ  ೨೭೯

ಅದೆಂತೆಂದೊಡೆ

ವಾಕ್ಯಂ|| ಸೋಮದೇವ ನೀತಿ-ಕಾರ‍್ಯೋದ್ಯೋಗೋಪಾಯ, ಪುರುಷದ್ರವ್ಯಸಂಪತ್ತಿ, ದೇಶಕಾಲ ಪರಿಜ್ಞಾನ, ವಿಘ್ನಪ್ರತೀಕಾರ, ಕಾರ‍್ಯಸಿದ್ಧಿಯೆಂದಿಂತು ಮಂತ್ರಮೈದುಪ್ರಕಾರಮಾಗಿಹುದು ಎಂಬ ನೀತಿವಾಕ್ಯಮುಂಟಪ್ಪುದಱ*ಂ ರಾಜ್ಯಂಗೆಯ್ವಾತಂಗೆ ಮಂತ್ರಮೆ ಮುಖ್ಯಮದೆಂತೆನೆ:

ಸಮದಾರಿರಾಜ ವಿಜಯೋ
ದ್ಯಮಕ್ಕೆ ಚತುರಂಗಬಲಮದೇವುದೋ ಸನ್ಮಂ
ತ್ರಮೆ ಸಾಲ್ಗುಂ ಪುಸಿಗುಮೆ ದೇ
ವ *ಮಂತ್ರಮೂಲೋ ಹಿ ವಿಜಯ* ಎಂಬೀ ವಾಕ್ಯಂ  ೨೮೦

ಅದಱ*ಂ ಸಮಸ್ತ ವಸುಧಾ
ಸುದತೀಶಂ ಮಂತ್ರಮುಖ್ಯನಾದಂದುದ್ಯ
ನ್ಮದವದರಿರಾಜ ಮಧುಕರ
ಕದಂಬಮಂ ನಿಜಪದಾಂಬುಜಕ್ಕೆರಗಿಸುವಂ  ೨೮೧

ಅಂತುಮಲ್ಲದೆ ಸಮಸ್ತ ವಸುಧಾವಳಯಮೆಲ್ಲಮಂ ಬಾಯ್ಕೇಳಿಸುವ ಬಲ್ಲಾಳ್ತನದೊಳಂ ವಿಜಿಗೀಷುವೃತ್ತಿಯನೆತ್ತಿಕೊಳ್ವೆನೆಂಬರಸಂ ಪ್ರಭುಮಂತ್ರೋತ್ಸಾಹಶಕ್ತಿತ್ರಯಸಂಪನ್ನನಪ್ಪುದದೆಂತೆನೆ:

ಹರಿನೀಲವಜ್ರ ಮೌಕ್ತಿಕ
ಮರಕತ ಮಾಣಿಕ್ಯ ಕಾಂಚನಾಂಚಿತ ವಸ್ತೂ
ತ್ಕರಮುಂ ವರಕರಿಹರಿಭಟ
ಭರಮುಂ ಪ್ರಭುಶಕ್ತಿ ಭೂತಲೇಶಂಗೆಂದುಂ  ೨೮೨

ಹಿತರರ್ಥಶಾಸ್ತ್ರಕುಶಲರ್
ಚತರುಪಧಾಶುದ್ಧರೆನಿಪ ವರಸಚಿವರೊಳ
ನ್ವಿತಮಾಗೆ ಮಾೞ್ಪ ಕಾರ‍್ಯಂ
ಪತಿಗೆಂದುಂ ಮಂತ್ರಶಕ್ತಿ ಮನುಮುನಿಮತದಿಂ  ೨೮೩

ಅಗಣಿತದೋರ್ಬಲದಿಂ ಸಂ
ಯುಗದೊಳ್ ಮಾಱಂತ ವರಿರಾಜನನೇನುಂ
ಬಗೆಯದುಱದಿಱ*ವ ವಿಕ್ರಾಂ
ತಗುಣಮನುತ್ಸಾಹಶಕ್ತಿಯೆಂಬರ್ ವಿಬುಧರ್  ೨೮೪

ಎಸೆವೀ ಶಕ್ತಿತ್ರಯದೊಳ-
ಮಸದೃಶಬಲಮಂತ್ರಶಕ್ತಿ ಮಿಗಿಲೆಂದು ಮಂ
ತ್ರಸಹಾತನಪ್ಪ ಭೂಪತಿ
ಗೆ ಸುಸಾಧ್ಯಂ ಬUದ ಕಾರ‍್ಯಮೆನಿತೊಳವನಿತುಂ  ೨೮೫

ಅದೆಂತೆನೆ: ಅಭಿಭವಿಸಿದನುತ್ಸಾಹ
ಪ್ರಭುಶಕ್ತಿಸಮತನೆನಿಪ ಶಕ್ರನನಮೆರ
ಪ್ರಭುಮಂತ್ರಿ ಮಂತ್ರಶಕ್ತಿ
ಪ್ರಬಾವದಿಂದದಱ*ನಗ್ಗಳಂ ಮಂತ್ರಬಳಂ  ೨೮೬

ನಿಯತಂ ಸಮ್ಯಙ್ಮಂತ್ರ
ಪ್ರಯೋಗಪಟುವೆನಿಪ ಭೂತಳಾಶ್ವರನ
ಪ್ರಿಯರಂ ಮರ್ದಿಸಿ ಧರೆಯಂ
ಜಯಲಕ್ಷ್ಮೀಧಾಮನಾಗಿ ಪರಿರಕ್ಷಿಸುಗುಂ  ೨೮೭

ಅಮರಾಹಿತರಿಂ ದುರ್ಮಂ
ತ್ರಮರಕ್ಷಣಮೆನಿಪಯಜ್ಞಮೞ*ವಂತೞ*ಗುಂ
ಸಮದಾಹಿತರಿಂ ದುರ್ಮಂ
ತ್ರಮರಕ್ಷಣಮೆನಿಪ ನೃಪಬಳಂ ನಿರ್ವ್ಯಾಜಂ  ೨೮೮

ಅದರಿಂದರಸುಗೆಯ್ವಾತಂ ಮಂತ್ರಮಂ ಮಾಲಾಮಂತ್ರಮಾಗದಂತು ನೆಗೞಲೆವೇೞ್ಕುಮದೆಂತೆನೆ: ಮಂತ್ರಿಮಂಡಲದಾಪ್ತವ್ರಜದ ಧೂತವರ್ಗದ ಮದಪ್ರಲಾಪಸುಪ್ತಪ್ರಲಾಪಿ ತಂಗಳಿಂದಂ ಶುಕಶಾರಿಕಾದಿ ತಿರ‍್ಯಗ್ಯೋನಿಗಳಿಂದಂ ಮಂತ್ರ ಭೇದಕ್ಕೆ ಸಲ್ಗುಮಂತಾಗಲೀಯದೆ ಮಂತ್ರಮಂ ರಕ್ಷಿಸಲ್ವೇಳ್ಕುಮದೆಂತೆನೆ:

ವಿಪುಳಾರ್ಥ ಮಂತ್ರಮುಂ ಯಾ
ನಪಾತ್ರಮುಮ ಭಿನ್ನಮಾದೊಡೞ*ವರ್ ವಸುಧಾ
ಪಕರ್ಣಧಾರರಿರ್ವರು
ಮಪರಿಮಿತಾತ್ಮೀಯಬಲಸಮೇತಂ ಕ್ಷಣದಿಂ  ೨೮೯

ಎನೆ ಮೇಘವರ್ಣನಿಂತೆಂದಂ: ಅಂತಪ್ಪೊಡೆ ನೀಂ ಪೇಳ್ದಂದದೊಳರಸಂ ತಾನೆ ಮಂತ್ರಿಯಾಗಿ ಚಿಂತಿಸಿ ಮರುಗಲ್ವೇಡಿತ್ತೆನೆ ಮತ್ತಂ ಚಿರಂಜೀವಿಯಿಂತೆಂದಂ: ನಾಂ ಮಂತ್ರಮನೆ ರಕ್ಷಿಪುದೆಂದೆನಲ್ಲದೆ ಮಂತ್ರಿಗಳಾಗ ವೇೞ್ಕೆಂದೆನಲ್ಲೆಂ. ನಿಮ್ಮಡಿ, ನೀವಿಂತು ವಿಪರೀತಗ್ರಹಣಂಗೆಯ್ದು ಶೂನ್ಯವಾದಿಗಳಾಗಿರ ಲಾರದು. ಅದೊಡಮೇನರಸುಗೆಯ್ವರುಂ ಕಾಮ ಕ್ರೋಧ ಲೋಭ ಮಾನ ಮದ ಹರ್ಷ ಪ್ರಮೋದಾಲಸ್ಯವಶದಿಂದೆಂತಪ್ಪ ಬುದ್ಧಿವಂತರುಂ ತಮ್ಮಂ ತಾವಱ*ಯರ್. ಅದಱ*ಂದೆನಿತು ಸಮರ್ಥನಾದೊಡಂ ಅಪ್ತರಪ್ಪ ಬುದ್ಧಿವಂತರೊಳಂ ಮಂತ್ರಿಗಳೊಳಮಾಲೋಚಿಸಿ ನೆಗಳಲೆವೇೞ್ಕುಮದೆಂತೆನೆ:

ಶ್ಲೋ|| ಅಸಹಾಯಸ್ಸಮರ್ಥೋಪಿ ತೇಜಸ್ವೀ ಕರಿಷ್ಯತಿ
ನಿವಾತ ಪತಿತೋ ವಹ್ನಿಸ್ಸ್ವಯಮೇವ ಪ್ರಶಾಮ್ಯತಿ  ||೧೫೩||

ಟೀ || ತೇಜಸ್ಸುಳ್ಳ ಸಮರ್ಥನಾದೊಡಂ ಸಹಾಯವಿಲ್ಲದವನೇತರ್ಕುಂ  ಪ್ರಯೋಜನಮಿಲ್ಲ. ಅದು ಹೇಗೆಂದೊಡೆ ಗಾಳಿಯಿಲ್ಲದಿಕ್ಕಿದ ಕಿಚ್ಚಿನ ಹಗೆ.

ಅಪಗತಸಹಾಯನೆನಿಸಿದ
ನೃಪನೆನಿತು ಸಮರ್ಥನಾದೊಡಂ ನಿಜತೇಜೋ-
ವಿಪುಳಜ್ವಳನಶಿಖಾವಳಿ-
ಗೆಪಡೆಯಲಾಱಂ ಸುವೃದ್ಧಿಯಂ ಭೂತಳದೊಳ್  ೨೯೦

ಅದರೆಂದರಸುಗೆಯ್ವಾತಂ ಸಹಾಯಸಂಪನ್ನನುಂ ಪ್ರಭುಮಂತ್ರೋತ್ಸಾಹ ಶಕ್ತಿಯುಕ್ತನುಮಾಗಿ ನೆಗಳಲೆವೇೞ್ಕುಂ ಎಂತುಂ ವಿಜಿಗೀಷುವೃತ್ತಿಯನೆತ್ತಿಕೊಂಡು ನೆಗೞ್ವಂದು ಶತ್ರುಗಳ ಸಮಾವಸ್ಥೆ ಯೋಗಕ್ಷೇಮಮುಮಂ ವಿಚಾರಿಸುವುದದೆಂತೆನೆ:

ಉದ್ಯೋಗಹೀನನಾಗಲು-
ಮುದ್ಯನ್ಮಿತ್ರಾತ್ಮದುರ್ಗಬಲರಹಿತನಸ-
ದ್ವಿದ್ಯಾಪ್ರಿಯನೆನಿಪವನು
ದ್ಭೇದ್ಯಂ ಶತ್ರುಗೆ ನಿರಂತರಂ ಭೂತಲದೊಳ್  ೨೯೧

ಅನುಪಮದುರ್ಗಬಲೋಪೇ
ತನಾಗಿಯುಂ ವಿಪುಳಮಂತ್ರವಿಕ್ರಮ ಸಂಯು-
ಕ್ತನುಮಲ್ಲದಿರ್ಪವಂ ಪೀ-
ಡನೀಯನೀಡಿತ ನಯಾಗಮಜ್ಞರ ಮತದಿಂ  ೨೯೨

ದುರ್ಗಗುಣಾನ್ವಿತಮೆನಿಸಿದ
ದುರ್ಗದ ಬಲಳ್ಳೊಡಂ ಬಲೋಪೇತ ಸುಹೃ-
ದ್ವರ್ಗಬಲಾನ್ವಿತನಪನಯ-
ಮಾರ್ಗನೆನಿಪ್ಪವನೆ ಕರ್ಷಣಯನಮೋಘಂ  ೨೯೩

ಇಂತಪ್ಪ ಪಗೆವರಂ ನಿರ್ಮೂಲಿಸುವುದು ಛೇದನಮೆಂಬುದಕ್ಕುಂ; ಹಸ್ತ್ಯಶ್ವರಥಪದಾತಿ ಬಲPಯಮಂ ಮಾೞ್ಪುದು ಪೀಡನಮೆಂಬುದಕ್ಕುಂ ಮತ್ತಮಿವನಱ*ದುಂ ದೇಶಕಾಲಬಲಮನಱ*ದುಂ ಪ್ರಯೋಗಿಸುವುದಂತಿರ್ಕೆ ನಾವೀಗಳ್ ಕೌಶಿಕಾಶ್ವರಂಗೆ ಶತ್ರುಗಳಾಗಿರ್ದು ವಾಕ್ಯಂ|| ದುರ್ಗಹಿನೋ ನರಪತಿಃ ವಾತಾಭ್ರಾವಯವೈಸ್ಸಮಃ ಟೀ|| ದುರ್ಗಂಗಳಿಲ್ಲದರಸು ಗಾಳಿಯೊಡಗೂಡಿದ ಮೇಘಂಗಳಹಗೆ ಎಂಬ ನೀತಿಯುಂಟದಱ*ಂದಾ ದುರ್ಗಂಗಳೆಂತಪ್ಪುವೆಂದೊಡೆ.

ಶ್ಲೋ || ದುರ್ಗಂ ಚತುರ್ವಿಧಂ ಪ್ರೋಕ್ತಮಾಪತ್ಸಾಶ್ರಯ  ಕಾರಣಂ
ಜಾಲಕಂ ಪಾರ್ವತಂ ಚೈವ ಧಾನ್ವನಂ ವನಜಂ ತಥಾ  ||೧೫೪||

ಟೀ || ಅಪತ್ತಿಗಾಸ್ರಯಮಾಗಿ ಜಲದುರ್ಗ ಗಿರಿದುರ್ಗ ಸ್ಥಳದುರ್ಗ ವನದುರ್ಗಮೆಂದಿಂತು ದುರ್ಗಂಗಳ್ ನಾಲ್ಕು ತೆರನಕ್ಕುಂ. ಇಂತು ಚತುರ್ವಿಧಮಾಗಿಯುಮಷ್ಟವಿಧಮಕ್ಕುಮದೆಂತೆಂದೊಡೆ ಉಭಯನದೀಸಂಗಮುಮಪ್ಪ ಮಧ್ಯಪ್ರದೇಶಮಂತರ್ದ್ವೀಪಮೆಂಬುದಕ್ಕುಂ. ಅಗಾಧಮಾದ ಬೃಹತ್ತಟಾಕಂಗಳಿಂ ಕರ್ಕಶ ಖರದಂಡಸಲಿಲಮೀನವಿರಾಜಿತ ಸರೋವರಪರಿವೃತಮಪ್ಪ ಭೂಪ್ರದೇಶಂ ಮಹಾಸ್ಥಳಮೆಂಬುದಕ್ಕುಮೀಯೆರಡುಂ ಜಲದುರ್ಗಭೇದಂಗಳ್. ಗರುಡಂಗಂ ಅಡರಲ್ಬಾರದ ಸಮುತ್ತುಂಗಶಿಖರಂಗಳ್ ನಾಲ್ಕುಂ ದೆಸೆಯೊಳುಮಾಗಿ ಬಾಗಿಲೊಂದೆಯಾಗಿರ್ಪುದು ಗುಹ್ಮಾಖ್ಯಮೆಂಬುದಕ್ಕುಂ. ಅವ ದೆಸೆಯೊಳುಂ ಬಟ್ಟೆಯಿಲ್ಲದೆ ಸಱ*ವೀೞ್ದುಚ್ಚಮಪ್ಪ ಬೆಟ್ಟುಗಳ ನಡುವೆ ಕರಮಸಿದ್ದಪ್ಪ ಬಟ್ಟೆಯಾಗೇಱುವುದುಂ ಪ್ರಸ್ತರಮೆಂಬುದಕ್ಕುಂ. ಈಯೆರಡುಂ ಗಿರಿದುರ್ಗದ ಭೇದಂಗಳ್. ಪೊಱಗೆ ನೀರುಂ ಭೂರಿಭೂರುಹಸಂದೋಹಮುಂ ತೃಣಗುಲ್ಮಲತಾಸ್ತೋಮಮುಮಿಲ್ಲದೆ ಒಳಗೆ ತೃಣಕಾಷ್ಠ ಜಲಸಂಪೂರ್ಣಮಪ್ಪುದು ಉದಕಸ್ತಂಭಮೆಂಬುದಕ್ಕುಂ. ಪೊಱಗೆ ಕರಮುಪ್ಪುಮಪೇಯ ಮುಮಲ್ಪಜಲಮುಳ್ಳುದು ವೈರಣಿಯೆಂಬುದಕ್ಕುಂ. ಈಯೆರಡುಂ ಸ್ಥಲದುರ್ಗ ಭೇದಂಗಳ್. ಜಲಪರಿಪೂರ್ಣ ಜಲಾಶಯಮುಂ ದುರ್ದರಕರ್ದಮೋಪೇತಾಶೀತಮಪ್ಪುದು ಕರ್ದಮೋದಕಮೆಂಬುದಕ್ಕುಂ. ಅನೇಕತರುನಿಕಪರಿವೃತಮುಂ ತೃಣಪಟಲಪ್ರಾವೃತಮುಮಪ್ಪುದು ಸ್ತಂಭನ ಗಹನಮೆಂಬುದಕ್ಕುಂ. ಈಯೆರಡುಂ ವನದುರ್ಗದ ಭೇದಂಗಳ್. ಇಂತಷ್ಟವಿಧಮಪ್ಪ ದುರ್ಗಂಗಳೊಳಂ ನಮ್ಮಾಶ್ರಯಿಸಿದ ದುರ್ಗಕ್ಕೆ ದುರ್ಗಗುಣಮಿಲ್ಲ. ಮಿತ್ರಗುಣಸಂಪನ್ನರಪ್ಪ ಪತತಿಸ್ತೋಮಂಗಳಿಲ್ಲವಪ್ಪುದಱ*ಂ ಮಿತ್ರಬಲಮಿಲ್ಲ. ನಮ್ಮ ಬಲಮೆಲ್ಲಂ ಕಳಕುಳಮಾದ ಕಾರಣದಿಂ ತಂತ್ರಬಲಮಿಲ್ಲ. ಕೌಶಿಕಂಗಳ್ ಬಂದು ಇರುಳ್ ಕಾದುವುದಱ*ಂ ಕಾಲಬಲಮಿಲ್ಲ. ಇಂತೀ ಬಲಂಗಳೊಳೊಂದುಮಿಲ್ಲದ ಕಾರಣದಿಂ ನಿಮ್ಮಡಿಗುತ್ಸಾಹಶಕ್ತಿ  ಸಾಧಾರಣಂ. ಅದಱ*ಂ ನಾವುಮುಚ್ಛೇದ್ಯಶತ್ರುಗಳಾಗಿರ್ದೆವೆಂದು ನುಡಿದ ಚಿರಂಜೀವಿಯ ಮಾತಂ ಮೇಘವರ್ಣಂ ಕೇಳ್ದು ಮೇಘಗರ್ಜನೆಯಿಂ ಗರ್ಜಿಸಿ ಬೞ*ಕ್ಕಿಂತೆಂದಂ:

ಪಿರಿದಾಳಾಪದೊಳೇಂ ಸಂ-
ಗರದೊಳ್ ಭೀಕರಮೆನಿಪ್ಪ ಮದ್ಭುಜಬಲದಿಂ-
ದರಿಮರ್ದನನಂ ತವೆ ಕೋಂ-
ದರಿಮರ್ದನನೆಂಬ ಪೆಸರನಾಂ ತಳೆದಪ್ಪೆಂ  ೨೯೪

ಎಂದು ನುಡಿದ ಮೇಘವರ್ಣನ  ಮಾತಂ ಚಿರಂಜೀವಿ ಕೇಳ್ದು ಇಂತೆದಂ: ನಿಮ್ಮಡಿ ನೀಮರಿಮರ್ದನನೊಳ್ ಕಾದಿ ಗೆಲ್ವುದೊಂದುಂ ಸಂದೆಯಮಿಲ್ಲಂ. ಅದೊಡಾ ಗೂಗೆಗಳ್ ದಿವಸಾಂಧಂಗಳಾಗಿಯುಂ ನಮ್ಮೊಳ್ ಪಗೆಯುಂಟಾಗಿಯುಂ ಘೋರಾಂಧಕಾರದಿಂದತಿಸಂಕೀರ್ಣಮಪ್ಪ ಗುಹಾಗಹ್ವರಂಗಳೊಳ್ ಪೊಕ್ಕಿರ್ಪುವು. ಅದು ಕಾರಣದಿಂದಾವ ಕಾಲಂಗಳನುಪಾಯಮಿಲ್ಲದೆ ಕಾದಿ ಕೊಲಲುಂ ಗೆಲಲುಂ ಬಾರದು ಅಂತುಮಲ್ಲದೆ,

ಮತಿಹೀನರಪ್ಪ ಮನುಜರ್
ಪತಂಗವ್ಲತ್ತಿಯನೆ ಕೊಂಡು  ಕೊನೆಯುತ್ತಿರ್ಪರ್
ಸತತಮದೆಂತುಂ ವಿಬುಧ
ಪ್ರತತಿಗನಿಷ್ಟಂ ನಯಾಗಮಕ್ಕೆ ವಿರುದ್ಧಂ  ೨೯೫

ತಂತ್ರಾವಾಸನಿದಂ ಪರ
ತಂತ್ರಪ್ರವಿಭೇದ ವಶ್ಯತಂತ್ರ ದಕ್ಷಂ
ಮಂತ್ರಜ್ಞಂ ವಿನಯಾನ್ವಿತ
ಮಂತ್ರಿಪ್ರಕರಂ ಸುಮಿತ್ರನಮಳಚರಿತ್ರಂ  ೨೯೬

ವ್ಯಸನವಿದೂರಂ ನಯಶಾ
ಲಿ ಸತ್ಯವಾಕ್ಯಂ ಕೃತಜ್ಞನಸ್ತಬ್ಧಂ ಕ್ಲೇ
ಶಸಹಿಷ್ಣು ಸುತೇಜನಮಾ
ತ್ಯಸುಮಂತ್ರಿಸಮೇತನಖಿಲವಿಜ್ಞಾನವಿದಂ  ೨೯೭

ಕುಲಜಂ ಸೋತ್ಸಾಹಂ ಸ್ಥೂ
ಲ ಲಕ್ಷನಭಿಮಾನಿ ಬುದ್ಧಿಮಂತಂ ಚತುರಂ
ಬಲಯುಕ್ತಂ ವಾಗ್ಮಿ ಕಲಾ
ಕಲಿತಂ ಶರಣಾಗತೈಕರಕ್ಷಣದಕ್ಷಂ  ೨೯೮

ವಿಪುಲತರಕೋಶನಕ್ರೂ
ರಪರಿಜನಂ ದೇಶಕಾಲವೇದಿ ದೃಢಂ ನೀ
ತಿಪರಂ ಕ್ಷಮಾನ್ವಿತಂ ಜಿತ
ರಿಪುಷಡ್ವರ್ಗಂ ಪ್ರಭೂತನನುಪಮದುರ್ಗಂ  ೨೯೯

ಗುರುದೇವದ್ವಿಜಭಕ್ತಂ
ತರುಣವಯಸ್ಕಂ ಪರೇಂಗಿತಜ್ಞನುದಾರಂ
ಪರಿವಾರಕಲ್ಪವೃಕ್ಷಂ
ಪರದಾರವಿದೂರನಖಿಲಭುವನಾಧಾರಂ  ೩೦೦

ಪ್ರಣತಾರಾತಿ ಧನುರ್ಗುಣ
ಕಿಣೀಕೃತೋದ್ಯತ್ಪ್ರಕೋಷ್ಠನನುಪವ್ಮಧೈರ‍್ಯಂ
ರಣಕೇಳಿಲೋಲಂ ವಾ
ರಣವಾಜಿ ರಥಾಶ್ವ ಭಟಬಲಪ್ರಖ್ಯಾತಂ  ೩೦೧

ಎನೆ ನೆಗೞ್ದ ನೃಪಂ ತನಗಹಿ-
ತನಾಗೆ ಮೈಮರೆದು ನೆಗೞ್ವ ಭೂಪಂ ನಿಜಸೈ
ನ್ಯನಿತಂಬಿನೀ ಜನಾಕ್ರಂ
ದನಮುಂ ಕೇಳುತ್ತಮಿರ್ಪನಿರುಳುಂ ಪಗಲುಂ  ೩೦೨

ಅದಱ*ಂ ಭೂಭುಜಂ ಸಮುತ್ಸುಕನಾಗಲಾಗದು.  ಅದೆಂತೆನೆ ಧರ್ಮಪುತ್ರಂ ಜೂದಾಡಿ ಮೇದಿನಿಯಂ ಸೋಲ್ತು ಸಹೋದರರ್ ಸಹಿತಮರಣ್ಯಮಂ ಪೊಕ್ಕೊಡೆ ಪುಣ್ಯವಿಹೀನರಾಗಿರ್ದರಂ ದ್ರೌಪದಿ ಕಂಡು ತಾನುಂ ವನವಾಸದಾಯಾಸಕ್ಕೆ ಬೇಸತ್ತು ನಿಜಪತಿಗಿಂತೆಂದಳ್: ದೇವಾ, ನೀಂ ನಿನ್ನ ನನ್ನಿಯನೆ ಕಾದು ನಿನ್ನನುಜರ್ ಬನ್ನದ ಕೂೞನುಂಡರ್; ಪನ್ನೆರಡುವರ್ಷ ಬೇಡರಂತಡವಿಯೊಳ್ ನಾರಸೀರೆಯನುಟ್ಟು ಬೇರುಮಂ ಬಿಕ್ಕೆಯುಮಂ ತಿಂದು ಕಂದಿ ಕುಂದಿ ಪಂದೆಯ ಮನದಂತಳ್ಳಾಡುತಿರ್ದಪರ್ ಇವರಂ ಕೌರವರ್ಗೆ ತೊಡರ್ದು ಬಿಡು ಪಿಡಿದಿರದಿರೆಂದು ಮೂದಲಿಸಿ ನುಡಿದ ಪಾಂಚಾಲರಾಜತನೂಜೆಗೆ ಧರ್ಮರಾಜತನೂಜನಿಂತೆಂದಂ:

ಶ್ಲೋ || ಯಶೋಗಂತುಮ ಸುಖಲಿಪ್ಸಯಾ ವಾ
ಮನುಷ್ಯಸಂಖ್ಯಾಮತಿವರ್ತಿತುಂ ವಾ
ಮಹೋತ್ಸುಕಾನಾಮಭಿಯೋಗಜನ್ಮಾ
ಸಮುತ್ಸುಕೇವಾಂಕಮುಪೈತಿ ಲಕ್ಷ್ಮೀಃ  ||೧೫೫||

ಟೀ || ಕೀರ್ತಿಯನೈದಲೋಸ್ಕರಂ ಮೇಣ್ ಸುಖಂಬಡೆಯಲೋಸ್ಕರಂ ಮೇಣ್ ಸಾಮಾನ್ಯ ಜನಂಗಳತಿಕ್ರಮಿಸಲೋಸ್ಕರಮಾಗಿ ಅಳಿಪಿಲ್ಲದೆ ಉದ್ಯೋಗಂಗೆಯ್ವ ಮನುಷ್ಯರ ತೊಡೆಯ ಮೇಲೆ ಲಕ್ಷ್ಮೀ ನೆಲಸಿಹಳು ಎಂಬೀ ನೀತಿಯನಜಾತಶತ್ರು ಪೇೞ್ದಂ ಅಂತುಮಲ್ಲದೆಯುಂ:

೨೭೯: ನೀತಿಜ್ಞರಾಗಿರುವ  ಈ ನಾಲ್ಕು ಜನ ಮಂತ್ರಿಗಳು ಹೇಳಿದ ನೀತಿಯು ನೀತಿಯಲ್ಲ ದೇವಾ ! ನೀವು ಹೇಳಿದುದೇ ನೀತಿ. ಅದೇ ನೀತಿಶಾಸ್ತ್ರದ ಪಂಚಾಂಗ. ಸೋಮದೇವ ನೀತಿಯ ಪ್ರಕಾರ ಕಾರ್ಯೋದ್ಯೋಗೋಪಾಯ ಪುರುಷದ್ರವ್ಯಸಂಪತ್ತಿ ದೇಶಕಾಲಪರಿಜ್ಞಾನ ವಿಘ್ನಪ್ರತಿಕಾರ ಕಾರ‍್ಯಸಿದ್ದಿಯೆಂಬ ಮಂತ್ರಾಲೋಚನೆ ಎಂದು ಐದು ರೀತಿಯಾಗಿರುವವು. ೨೮೦. ರಾಜ್ಯಬಾರ ಮಾಡುವವನಿಗೆ ಮಂತ್ರಾಲೋಚನೆಯೇ ಮುಖ್ಯವಾದುದು. ದರ್ಪಿಷ್ಟನಾದ ವೈರಿರಾಜನನ್ನು ಗೆಲ್ಲುವದಕ್ಕೆ ಚತುರಂಗಬಲವೇನು ಮಾಡುವುದು ಒಳ್ಳೆಯ ಮಂತ್ರಾಲೋಚನೆಯೇ ಸಾಕು. ‘ಮಂತ್ರಮೂಲೋ ಹಿ ವಿಜಯ’ ಎಂಬ ವಾಕ್ಯ ಸುಳ್ಳಾಗುವುದೇ ೨೮೧: ಅದರಿಂದ ರಾಜನಾದವನು  ಮಂತ್ರಮುಖ್ಯನಾದಂದು ಅರಿರಾಜ ಮಧುಕರ ಸಮೂಹವನ್ನು ತನ್ನ ಪದಕಮಲಕ್ಕೆ ಎರಗಿಸುವನು, ವ|| ಅಲ್ಲದೆ ಸಮಸ್ತ ಪ್ರಪಂಚವನ್ನು ಅಜ್ಞಾವಶವರ್ತಿಯಾಗಿ ಮಾಡುವ ಪರಾಕ್ರಮಿಯೂ ಸರ್ವವಿಜಯನಾಗಬೇಕೆಂಬವನೂ ಪ್ರಭುಮಂತ್ರೋತ್ಸಾಹಶಕ್ತಿತ್ರಯ ಸಂಪನ್ನನಾಗಿರಬೇಕು. ಅವು ಯಾವುವೆಂದರೆ ೨೮೨. ಇಂದ್ರ್ರನೀಲ, ವಜ್ರ ಮೌಕ್ತ್ತಿಕ, ಮರಕತ ಮಾಣಿಕ್ಯ, ಕಾಂಚನಗಳು ಹಸ್ತಿ ಅಶ್ವ ಪದಾತಿಗಳೂ ರಾಜನಾದವನಿಗೆ ಪ್ರಭುಶಕ್ತಿಯೆನಿಸಿಕೊಳ್ಳುವವು. ೨೮೩. ಹಿತರೂ ಅರ್ಥಶಾಸ್ರ್ತಕುಶಲರೂ ಚತುರುಪಧಾವಿರುದ್ಧರೆನಿಸಿದ ಶ್ರೇಷ್ಠ ಮಂತ್ರಿಗಳು ಮಾಡುವ ಕೆಲಸವು ರಾಜನಾದವನಿಗೆ ಮಂತ್ರಶಕ್ತಿಯೆನಿಸಿಕೊಳ್ಳುವುದು ೨೮೪. ಅಗಣಿತವಾದ ಭುಜಬಲದಿಂದ ಎದುರಿಸಿದ ವೈರಿರಾಜನನ್ನು ಲಕ್ಷಿಸದೆ ಕೊಲ್ಲುವ ಪರಾಕ್ರಮವು ರಾಜನ ಉತ್ಸಾಹಶಕ್ತಿಯೆನಿಸಿಕೊಳ್ಳುವುದು. ೨೮೫. ಹೀಗೆ ಪ್ರಸಿದ್ಧವಾದ ಈ ಶಕ್ತಿತ್ರಯಗಳಲ್ಲಿ ಮಂತ್ರ ಶಕ್ತಿಯೇ ಅಸಾಧಾರಣವಾದುದು. ಮಂತ್ರಸಹಾಯವಿರುವ ರಾಜನಿಗೆ ಎಷ್ಟೇ ಅಶಕ್ಯವಾದ ಕಾರ್ಯಗಳಿದ್ದರೂ ಸಾಧ್ಯವಾಗುವುವು. ೨೮೬: ಉತ್ಸಾಹ ಪ್ರಭುಶಕ್ತಿಗಳಿಂದ ಕೂಡಿದ ದೇವೇಂದ್ರನಿಗಿಂತ ಮಂತ್ರಶಕ್ತಿ ಪ್ರಭಾವ ಸಿದ್ಧಿಸಿರುವ ಅವನ ಮಂತ್ರಿ ಅಗ್ಗಳನು. ಆದ್ದರಿಂದ ಮಂತ್ರಬಲವೇ ಬಲ. ೨೮೭. ಮಂತ್ರಪ್ರಯೋಗಪಟುವಾದ ಅರಸನು ವ್ಶೆರಿಗಳನ್ನು ಮರ್ದಿಸುವನು. ೨೮೮. ದುರ್ಮಂತ್ರದಿಂದ ಕೂಡಿ  ಅರಕ್ಷಕವಾಗಿರುವ ಯಜ್ಞವು ರಾಕ್ಷಸರಿಂದ  ನಾಶವಾಗುವಂತೆ ದುರ್ಮಂತ್ರವುಳ್ಳ ಅರಕ್ಷಕವಾದ ನೃಪಬಲವು ವ್ಶೆರಿಗಳಿಂದ ನಾಶವಾಗುವುದು, ವ|| ಅದರಿಂದ ರಾಜನು ಮಂತ್ರವನ್ನು ಮಾಲಾಮಂತ್ರವಾಗದಂತೆ ಅಚರಿಸಬೇಕು. ಮಂತ್ರಿಮಂಡಲದ ಅಪ್ತರಲ್ಲಿರುವ ಧೂರ್ತವರ್ಗದಿಂದಲೂ ಮದಪ್ರಲಾಪ ಸುಪ್ತಪ್ರಲಾಪಿತಗಳಿಂದಲೂ ಶುಕಶಾರಿಕಾದಿ ತಿರ್ಯಗ್ಯೋನಿಗಳಿದಲೂ ಮಂತ್ರಾಲೋಚನೆಯು ಬಹಿರಂಗಗೊಳ್ಳುವುದು. ಹಾಗಾದಂತೆ ಮಂತ್ರವನ್ನು ರಕ್ಷಸಿಕೊಳ್ಳಬೇಕು ೨೮೯. ವಿಪುಲವಾದ ಅರ್ಥದಿಂದ ಕೂಡಿದ ಮಂತ್ರವೂ ನೌಕೆಯೂ ಭಿನ್ನವಾದಂದು ವಸುಧಾಪನೂ ಕರ್ಣಧಾರನೂ ತಮ್ಮ ಅಪರಿಮಿತ ಅತ್ಮೀಯರ ಸಮೇತ ನಾಶಹೊಂದುವರು. ವ|| ಅಗ ಮೇಘವರ್ಣನು ಹೀಗೆಂದನು; ಹಾಗಾದರೆ ನೀನು ಹೇಳಿದಂತೆ ಅರಸನು ತಾನೇ ಮಂತ್ರಿಯಾಗಿ ಚಿಂತಿಸಿ ಮರುಗಬೇಕಾಗಿಲ್ಲವೆ? ಅದಕ್ಕೆ ಚಿರಂಜೀವಿ ಹೀಗೆಂದನು: ನಾನು ಮಂತ್ರವನ್ನು ರಕ್ಷಿಸಬೇಕು  ಎಂದೆನಲ್ಲದೆ ಮಂತ್ರಿಗಳಾಗಬೇಕು ಎನ್ನಲಿಲ್ಲ. ದೇವಾ ! ನೀವು ಹೀಗೆ ವಿಪರೀತಗ್ರಹಣ ಮಾಡಿ ಶೂನ್ಯವಾದಿಗಳಾಗಬಾರದು. ಅದರೇನು, ಅರಸರಾದವರು ಕಾಮ ಕ್ರೋಧ ಲೋಭ ಮಾನ ಮದ ಹರ್ಷ ಪ್ರಮೋದಾಲಸ್ಯವಶದಿಂದ ಎಂತಹ ಬುದ್ಧಿವಂತರೂ ತಮ್ಮನ್ನೂ ತಾವು ಅರಿತುಕೊಳ್ಳಲಾರರು. ಅದರಿಂದ ಎಂಥ ಸಮರ್ಥನಾದರೂ ಅಪ್ತರಾದ ಬುದ್ಧಿವಂತರಲ್ಲಿಯೂ ಮಂತ್ರಿಗಳಲ್ಲಿಯೂ ಸಮಾಲೋಚಿಸಿ ಕಾರ್ಯೋನ್ಮುಖರಾಗಬೇಕು. ಶ್ಲೋ || ತೇಜೋವಂತನಾಗಿದ್ದು ಸಮರ್ಥನಾದರೂ ಸಹಾಯವಿಲ್ಲದವನೂ ಗಾಳಿಯಿಲ್ಲದ ಕಿಚ್ಚಿನಂತೆ ಯಾವುದಕ್ಕೂ ಪ್ರಯೋಜನವಾಗಲಾರನು. ೨೯೦. ಅಸಹಾಯನಾದ ನೃಪನು ಎಷ್ಟೇ ಸಮರ್ಥನಾದರೂ ತನ್ನ ತೇಜೋಜ್ವಾಲೆಯ ಶಿಖಾವಳಿಗೆ ಅಭಿವೃದ್ಧಿಯನ್ನು ಪಡೆಯಲಾರನು. ವ|| ಅದರಿಂದ ಅರಸನಾದವನು ಸಹಾಯ ಸಂಪನ್ನನೂ ಪ್ರಭುಮಂತ್ರೋತ್ಸಾಹ ಶಕ್ತಿಯುಕ್ತನೂ ಅಗಿರಬೇಕು. ಹೇಗಾದರೂ ಜಯಶಾಲಿಯಾಗಬೇಕೆಂಬ ಅಪೇಕ್ಷೆಯಿದ್ದಲ್ಲಿ ಶತ್ರುಗಳ ಸಮಾವಸ್ಥೆ ಯೋಗಕ್ಷೇಮಗಳನ್ನೂ ವಿಚಾರಿಸಿಕೊಂಡಿರಬೇಕು. ಅದು ಹೇಗೆಂದರೆ, ೨೯೧. ಉದ್ಯೋಗಹೀನನಾದವನೂ, ಮಿತ್ರನಿಲ್ಲದವನೂ, ದುರ್ಗಬಲರಹಿತನೂ, ಕೆಟ್ಟ ವಿದ್ಯೆಗಳಲ್ಲಿ ಮಗ್ನನಾದವನೂ ಶತ್ರುವಿಗೆ ನಿರಂತರವೂ ಭೇದ್ಯನಾಗುವನು. ೨೯೨. ಅಸಾಧಾರಣವಾದ ದುರ್ಗಬಲವುಳ್ಳವನಾದರೂ ವಿಪುಳಮಂತ್ರವಿಕ್ರಮಸಂಯುಕ್ತನಲ್ಲದವನು ಶ್ರೇಷ್ಠ ನೀತಿ ಶಾಸ್ತ್ರಜ್ಞರ ಪ್ರಕಾರ ಪೀಡನೀಯನೆನ್ನಿಸುವನು. ೨೯೩. ದುರ್ಗುಣಾನ್ವಿತವಾದ ದುರ್ಗಬಲವಿದ್ದರೂ ಬಲಶಾಲಿಗಳಾದ ಸುಹೃದ್ವರ್ಗಗಳಿಂದ ಕೂಡಿದ್ದರೂ ಕು ನೀತಿಯಲ್ಲಿ ತೊಡಗಿರುವವನು ತಿಕ್ಕಾಟಕ್ಕೆ ಯೋಗ್ಯನಾಗುವನು. ವ|| ಇಂತಹ ಹಗೆಗಳನ್ನು ನಿರ್ಮೂಲಿಸುವುದು  ಛೇದವೆನಿಸುವುದು. ಹಸ್ತಶ್ವರಥ ಪದಾತಿ ಬಲPಯವನ್ನಂಟುಮಾಡುವುದು ಪೀಡನವೆನಿಸುವುದು. ಅಲ್ಲದೆ ಇವನ್ನು ತಿಳಿದುಕೊಂಡಿದ್ದೂ ದೇಶ ಕಾಲ ಬಲವನ್ನರಿತುಕೊಂಡೂ ಪ್ರಯೋಗಿಸುವುದು ಹಾಗಿರಲಿ. ನಾವು ಈಗ ಗೂಬೆಗಳ ರಾಜನಿಗೆ ಶತ್ರುಗಳಾಗಿದ್ದು ವಾ|| ದುರ್ಗಹೀನೋನರಪತಿಃ ವಾತಾಭ್ರಾವಯ ವೈಸ್ಸಮಃ, ದುರ್ಗಗಳಿಲ್ಲದ ಅರಸನು ಗಾಳಿಯೊಡಗೂಡಿದ ಮೋಡಗಳಿಗೆ ಸಮ ಎಂಬ ನೀತಿಯುಂಟು. ಶ್ಲೋ|| ಅಪತ್ತಿಗೆ ಅಶ್ರಯವಾಗಿ ಜಲದುರ್ಗ, ಗಿರಿದುರ್ಗ, ಸ್ಥಳದುರ್ಗ, ವನದುರ್ಗವೆಂದು ನಾಲ್ಕು ರೀತಿಯ ದುರ್ಗಗಳಿವೆ. ವ|| ಅವು ನಾಲ್ಕು ರೀತಿಯವಾಗಿದ್ದರೂ ಸೂಕ್ಷ್ಮವಾಗಿ ಎಂಟು ರೀತಿಯವಾಗಿರುವವು. ವ||  ಅವು ಹೇಗೆಂದರೆ ಎರಡು ನದಿಗಳ ಸಂಗಮವಾದ  ಮಧ್ಯಪ್ರದೇಶವು ಅಂತರ್ದ್ವೀಪವೆನಿಸುವುದು. ಅಗಾಧವಾದ ಬೃಹತ್ತಟಾಕಗಳಿಂದಲೂ ಕರ್ಕಶ ಸರೋವರಗಳಿಂದಲೂ ಪರಿವೃತವಾದ ಭೂಪ್ರದೇಶವು ಮಹಾಸ್ಥಳವೆನಿಸುವುದು. ಈ ಎರಡು ಜಲದುರ್ಗಭೇದಗಳೆನಿಸುವುವು. ಗರುಡನಿಗೂ ಏರಲಾಗದ ಉತ್ತುಂಗ ಶಿಖರಗಳು ನಾಲ್ಕು ದಿಕ್ಕುಗಳಲ್ಲಿದ್ದು ಒಂದೇ ಬಾಗಿಲು ಇದ್ದಲ್ಲಿ ಅದು ಗುಹ್ಯಾಖ್ಯವೆನಿಸುವುದು. ಯಾವ ದಿಕ್ಕಿನಲ್ಲಿಯೂ ದಾರಿಯಿಲ್ಲದೆ ಕಡಿದಾಗಿದ್ದು ಎತ್ತರವಾದ ಬೆಟ್ಟಗಳ ನಡುವೆ ಕಿರಿದಾದ ದಾರಿಯಲ್ಲಿ ಏರುವುದು ಪ್ರಸ್ತರವೆನಿಸುವುದು.

ಈ  ಎರಡೂಗಿರಿದುರ್ಗದ ಭೇದಗಳಾಗಿವೆ.  ಹೊರಗೆ ನೀರೂ ದೊಡ್ಡ ದೊಡ್ಡ ಮರಗಳ ಗುಂಪುಗಳೂ ತೃಣಗುಲ್ಮಲತಾಸ್ತೋಮವೂ ಇಲ್ಲದೆ ಒಳಗೆ ತೃಣಕಾಷ್ಟ ಜಲಸಂಪೂರ್ಣವಾಗಿರುವುದು ಉದಕಸ್ತಂಭವೆನಿಸುವುದು. ಹೊರಗೆ ಉಪ್ಪಾಗಿಯೂ ಅಪೇಯವೂ ಅಲ್ಪ ಜಲವುಳ್ಳುದೂ ವೈರಿಣಿ ಎನಿಸುವುದು. ಈ ಎರಡು ಸ್ಥಲದುರ್ಗ ಭೇದಗಳಾಗಿರುವುವು. ಜಲಪರಿಪೂರ್ಣ ಜಲಾಶಯವೂ ಕೆಸರಿನಿಂದ ಕೂಡಿ ಅತಿ ಶೀತವಾಗಿಯೂ ಇರುವಂಥದು ಕರ್ದಮೋದಕವೆನಿಸುವುದು. ಅನೇಕ ತರುನಿಕರ ಪರಿವೃತವೂ ತೃಣಪಟಲ ಪ್ರಾವ್ರತವೂ ಆಗಿರುವುದು ಸ್ತಂಭನಗಹನ ವೆನಿಸುವುದು. ಈ ಎರಡೂ ವನದುರ್ಗದ ಭೇದಗಳಾಗಿರುವುವು. ಈ ರೀತಿಯಲ್ಲಿ ಎಂಟು ವಿಧವಾದ ದುರ್ಗಗಳಲ್ಲಿ ನಾವು ಆಶ್ರಯಿಸಿದ ದುರ್ಗಕ್ಕೆ ದುರ್ಗಗುಣವಿಲ್ಲ. ಮಿತ್ರಗುಣಸಂಪನ್ನರಾದ ಪಕ್ಷಿಬಲವಿಲ್ಲದುದರಿಂದ ಮಿತ್ರಬಲವಿಲ್ಲ. ನಮ್ಮ ಬಲವೆಲ್ಲವೂ ನುಚ್ಚುನೂರಾದುದರಿಂದ ತಂತ್ರಬಲವಿಲ್ಲ. ಗೂಬೆಗಳು ಬಂದು ರಾತ್ರಿಹೊತ್ತು ಕಾದುವುದರಿಂದ ಕಾಲಬಲವಿಲ್ಲ.  ಹೀಗೆ ಈ ಬಲಗಳಲ್ಲಿ  ಒಂದೂ ಇಲ್ಲದ  ಕಾರಣದಿಂದ ನಿಮ್ಮ ಉತ್ಸಾಹಶಕ್ತಿ ಸಾಧಾರಣವಾಗಿದೆ. ಅದರಿಂದ ನಾವೂ ವಿನಾಶರಾಗುವ ಶತ್ರುಗಳಾಗಿದ್ದೇವೆ ಎಂದು ಹೇಳಿದ ಚಿರಂಜೀವಿಯ ಮಾತನ್ನು ಮೇಘವರ್ಣನು  ಕೇಳಿ ಮೇಘಗರ್ಜನೆಯಿಂದ ಗರ್ಜಿಸಿ ಬಳಿಕ ಹೀಗೆಂದನು: ೨೯೪. ಹೆಚ್ಚು ಮಾತಿನಿಂದೇನು ಪ್ರಯೋಜನ? ಯುದ್ಧದಲ್ಲಿ ಭೀಕರವಾದ ನನ್ನ ಭುಜಬಲದಿಂದ ಅರಿಮರ್ದನನನ್ನು ಸಂಹರಿಸಿ ಅರಿಮರ್ದನನೆಂಬ ಹೆಸರನ್ನು ನಾನು ಧರಿಸುವೆನು. ವ|| ಆ ಮಾತನ್ನು ಕೇಳಿದ ಚಿರಂಜೀವ ಹೀಗೆಂದನು: ನೀವು ಅರಿಮರ್ದನನೊಡನೆ ಕಾದಾಡಿ ಗೆಲ್ಲುವುದರಲ್ಲಿ ಸಂದೇಹವಿಲ್ಲ. ಆದರೆ ಆ ಗೂಬೆಗಳು ಹಗಲುಗುರುಡರಾಗಿರುವುದರಿಂದಲೂ ನಮ್ಮೊಡನೆ ಹಗೆ ಕಟ್ಟಿಕೊಂಡಿರುವುದರಿಂದಲೂ  ಘೋರಾಂಧಕಾರದಿಂದ ಅತ್ಯಂತ ಇಕ್ಕಾಟ್ಟದ ಗುಹಾಗಹ್ವರಗಳಲ್ಲಿ  ಹೊಕ್ಕಿರುವುವು. ಅದರಿಂದ ಉಪಾಯವಿಲ್ಲದೆ ಅವುಗಳೊಡನೆ ಕಾದಾಡುವುದೂ ಕೊಲ್ಲುವುದೂ ಗೆಲ್ಲುವುದೂ ಸಾಧ್ಯವಿಲ್ಲ. ಅಲ್ಲದೆ, ೨೯೫. ಮತಿಹೀನರಾದ ಮನುಷ್ಯರು ಪತಂಗವೃತ್ತಿಯಿಂದ ಬಾಳುವರು. ಅದು ಬುದ್ಧಿವಂತರಾದವರಿಗೆ ಅನಿಷ್ಟಕರ; ನೀತಿಶಾಸ್ತ್ರಕ್ಕೆ ವಿರುದ್ಧವಾದುದು. ೨೯೬. ತಂತ್ರವನ್ನು ಬಲ್ಲವನೂ ಪರತಂತ್ರಗಳನ್ನು ಭೇದಿಸಬಲ್ಲವನೂ ದಕ್ಷನೂ ಮಂತ್ರಜ್ಞನೂ ವಿನಯಾನ್ವಿತ ಮಂತ್ರಿಗಳಿಂದ ಕೂಡಿದವನೂ ಸುಮಿತ್ರನೂ ಅಮಲಚರಿತ್ರನೂ ೨೯೭. ವ್ಯಸನದೂರನೂ ನಯಶಾಲಿಯೂ ಸತ್ಯವಾಕ್ಯನು ಕೃತಜ್ಞನೂ ಅಸ್ತಬ್ಧದನೂ ಕ್ಲೇಶಸಹಿಷ್ಣವೂ ಸುತೇಜನೂ ಅಮಾತ್ಯಸುಮಂತ್ರಿಸಮೇತನು ಅಖಿಲವಿಜ್ಞಾನವಿದನು ೨೯೮. ಕುಲಜನೂ ಉತ್ಸಾಹ ಶಾಲಿಯೂ ಅಭಿಮಾನಿಯೂ ಬುದ್ಧಿವಂತನೂ ಚತುರನೂ ಬಲಯುಕ್ತನೂ ವಾಗ್ಮಿಯೂ ಕಲಾವಿದನೂ ಶರಣಾಗತೈಕರಕ್ಷಣದಕ್ಷನೂ ೨೯೯. ಅತಿಶಯವಾದ ಕೋಶವುಳ್ಳವನೂ ಅಕ್ರೂರ ಪರಿಜನರಿಂದ ಕೂಡಿದವನೂ ದೇಶಕಾಲಜ್ಞನೂ ದೃಢಚಿತ್ತನೂ ನೀತಿಪರನೂ ಕ್ಷಮಾನ್ವಿತನೂ ಅರಿಷಡ್ವರ್ಗವನ್ನು ಗೆದ್ದವನೂ ಅನುಪಮದುರ್ಗನೂ ೩೦೦: ಗುರುದೇವ ದ್ವಿಜರ ಭಕ್ತನೂ ತರುಣವಯಸ್ಕನೂ ಪರೇಂಗಿತಜ್ಞನೂ ಉದಾರನೂ ಪರಿವಾರ ಕಲ್ಪವೃಕ್ಷನೂ ಪರದಾರವಿದೂರನೂ ಅಖಿಲಭುವನದ ಅಧಾರಸ್ವರೂಪನೂ ೩೦೧. ಅನುಪಮ ಧೈರ್ಯವಂತನೂ ರಣಕೇಳೀಲೋಲನೂ ವಾರಣವಾಜಿರಥ ಭಟಬಲದಿಂದ ಕೂಡಿದವನೂ ೩೦೨. ಆದ ರಾಜನೂ ತನಗೆ ಅಹಿತನಾಗಿರಲು ಮೈಮರೆತು ವರ್ತಿಸುವ ಭೂಪನು ತನ್ನ ಸೈನಿಕರ ಹೆಂಡಿರ ಆಕ್ರಂದನವನ್ನೂ ಹಗಲಿರುಳು ಕೇಳುತ್ತಿರುವನು. ವ || ಅದರಿಂದ ರಾಜನು ಸಮುತ್ಸುಕನಾಗಿರಬಾರದು. ಹೇಗೆಂದರೆ, ಧರ್ಮರಾಯನು ಜೂಜಾಡಿ ಮೇದಿನಿಯನ್ನು ಸೋತು ಸಹೋದರರ ಸಹಿತ ಅರಣ್ಯವನ್ನು ಹೊಕ್ಕಲ್ಲಿ ಪುಣ್ಯವಿಹೀನರಾಗಿದ್ದ ಪಾಂಡವರನ್ನು ದ್ರೌಪದಿ ಕಂಡು ತಾನೂ ವನವಾಸದ ಅಯಾಸಕ್ಕೆ ಬೇಸತ್ತು ತನ್ನ ಪತಿಗೆ ಈರೀತಿ ಹೇಳಿದಳು: ದೇವಾ ! ನೀನು ನಿನ್ನ ಸತ್ಯವನ್ನೇ ಕಾಪಾಡಿ ನಿನ್ನ ಸಹೋದರರು ಬನ್ನದ ಕೂಳನ್ನುಂಡರು. ಹನ್ನೆರಡು ವರ್ಷ ಬೇಡರಂತೆ ಅಡವಿಯಲ್ಲಿ ನಾರಿನ ಬಟ್ಟೆಯನ್ನುಟ್ಟು ಬೇರೆನ್ನೂ ಭಿಕ್ಷೆಯನ್ನವನ್ನೂ ತಿಂದು ಕಂದಿ ಕುಂದಿ ಹೇಡಿಯ ಮನಸ್ಸಿನಂತೆ ಅಲ್ಲಾಡುತ್ತಿರುವರು. ಇವರನ್ನು ಕೌರವರ ಮೇಲೆ ಹೊರಾಟಕ್ಕೆ, ಬಿಡು, ತಡೆದಿರಬೇಡ ಎಂದು ನುಡಿದ ಪಾಂಚಾಲರಾಜತನೂಜೆಗೆ ಧರ್ಮರಾಜನು ಹಿಗೆಂದನು: ಶ್ಲೋ || ಕ್ಭಿರ್ತಿಯನ್ನು ಪಡೆಯಲೂ ಸುಖವನ್ನು ಹೊಂದಲೂ ಸಾಮಾನ್ಯಜನಗಳನ್ನೂ ಮೀರಲೂ ಉತ್ಸಾಹದಿಂದ ಉದ್ಯೋಗಶೀಲರಾದ ಮನುಷ್ಯರ ತೂಡೆಯ ಮೇಲೆ ಲಕ್ಷ್ಮಿ ನೆಲೆಸಿರುವಳು ಎಂಬ ನೀತಿಯನ್ನು ಅಜಾತಶತ್ರುವು ಹೇಳಿದನು. ಅಲ್ಲದೆ

ಸಮರಪ್ರಾರಂಭದೊಳ್ ಕೌಶಿಕ ಶಕುನಿಗಣಾಶನೊಳ್ಕಾದಿ ಗೆಲ್ವು
ದ್ಯಮಮೀಗಳ್ ಕೂಡದೆಂತುಂ ನಮಗೆ ಬಹುತರಾಳಾಪದಿಂ ಬರ್ಪುದೇಂ ದೇ
ವ ಮಹಾಶಾಸ್ತ್ರ ಪ್ರಾಜ್ಞರುಜ್ಞರುಮೆನಿಪ ಮುನೀಂದ್ರೋತ್ತಮರ್ ಪೇಳ್ದ ನೀತಿ
ಕ್ರಮದಿಂ ಷಾಡ್ಗುಣ್ಯಮಂ ಯೋಜಿಸುವುದೆ ಸುನಯಂ ಪ್ರಾಪ್ತಕಾಲಾನು ರೂಪಂ  ೩೦೩

ಎನಲಾ ಷಾಡ್ಗುಣ್ಯಮೆಂತೆಂದೊಡೆ; ಸಂ ವಿಗ್ರಹ ಯಾನಸನ ಸಂಶ್ರಯದ್ವೈದೀ*ಭಾವಮೆಂದಾಱು ತೆಱನಾಗಿರ್ಕುಂ. ಅಲ್ಲಿ  ಬಲವಂತನಪ್ಪ ಪಗೆವಂ ಮೇಲೆತ್ತಿ ಬರೆ ವಸ್ತುವಾಹನಂಗಳನಿತ್ತಾತನಂ ಸಂತೈಸುವುದು ಸಂಧಾನಮೆಂಬುದಕ್ಕುಂ. ವಿಜಿಗೀಷುಗಳಿರ್ವರುಂ ಪರಸ್ಪರಾಹಂಕಾರಂಗೆಯ್ವುದು ವಿಗ್ರಹಮೆಂಬುದಕ್ಕುಂ. ಶಕ್ತಿತ್ರಯಸಂಪನ್ನರಪ್ಪ ವಿಜಿಗೀಷುಗಳಿರ್ಬರುಂ ಮೇಲೆತ್ತಿ ಬರ್ಪುದು ಯಾನಮೆಂಬುದಕ್ಕುಂ. ಅರಿವಿಜಿಗೀಷುಗಳೊರ್ವರೊರ್ವರ ಮೇಲೆತ್ತಿ ಯೊತ್ತಲಾಱದೆ ನಿಲ್ವದು ಅಸನಮೆಂಬುದಕ್ಕುಂ. ನಿಜಬಲಮಿಲ್ಲದೆ ಶತ್ರುವಿಜಿಗೀಷುವಾದೊಡಾಶ್ರಯಿಸುವುದು ಸಂಶ್ರಯಮೆಂಬುದಕ್ಕುಂ. ಬಲವತಂರಪ್ಪ ಶತ್ರುಗಳ ನಡುವೆ ದುರ್ಬಲನಪ್ಪ ನೃಪನಾ ರಿಪುಗಳಂ ವಾಙ್ಮೂತ್ರದಿನತಿ ಸಂಧಾನಮಂಗೆಯ್ದು ತನ್ನ ಮನಮನೆನ್ನರುಮಱೆಯದಂತು ಕಾಕಾಕ್ಷಿಗೋಳಕನ್ಯಾಯದಿಂದಿರ್ಪುದು ದ್ವೈದೀಭಾವಮೆಂಬುದಕ್ಕುಂ. ಇಂತು ಷಾಡ್ಗುಣ್ಯಾಭಿಪ್ರಾಯದೊಳೀಗಳಿನವರಸಕ್ಕೆ  ಸಂದೀಪಿ ಪೇೞ್ದಂತೆ ಸಂದಿಯಂಮಾಡವೇೞ್ಕುಂ. ಆ ಸಂ ಯಾವುವೆಚಿದೊಡೆ: ಸಂಪ್ರದಾನ ಕಪಾಲ ಉಪಹಾಸನ ಸಂತಾನ ಸಂಗತ ಉಪನ್ಯಾಸ ಪ್ರತೀಕಾರ ಸಂಯೋಗ ಪುರುಷಾಂತರ ಅದೃಷ್ಟಪುರುಷ ಅದೃಷ್ಟ ಅತ್ಮಾಮಿಪ ಉಪಗ್ರಹ ಪರಿಕ್ರಮ ಅರಿಪರದೂಷಣ ಸ್ಕಂದೋಪನಯಮೆಂದು ಷೋಡಶವಿಧಮಕ್ಕುಂ. ಅಲ್ಲಿ ದ್ರವ್ಯವಾಹನಮಂ ಕೊಟ್ಟು ಮನ್ನಿಪುದು ಸಂಪ್ರದಾನಮೆಂಭುದಕ್ಕುಂ ಸಮಸಂ ಕಪಾಲಮೆಂಬುದಕ್ಕುಂ. ಸಂಧಾನಂ ಉಪಹಾಸನಸಂಯೆಂಬುದುಕ್ಕುಂ ಕನ್ಯಾದಾನಪೂರ‍್ವಕಮಪ್ಪ ಸಂ ಸಂತಾನಮೆಂಬುದಕ್ಕುಂ. ಮಿತ್ರಭಾವದೊಳ್ ನೆಗೞ್ವ ಸಂ ಸಂಗತಮೆಂಬುದಕ್ಕುಂ. ಭಾವಿಯಪ್ಪೆಕಾರ್ಥಸಿದ್ದಿಚಿiನ್ನುದ್ದೇಶಂಗೆಯ್ದು ನಡೆವುದು ಉಪನ್ಯಾಸಸಂಯೆಂಬುದಕ್ಕುಂ. ಪರಸ್ಪರೋಪಕಾರಂಗೆಯ್ವುದು ಪ್ರತೀಕಾರ ಸಂಯೆಂಬುದಕ್ಕುಂ. ಅರಿವಿಜಿಗೀಷುಗಳೇಕಾರ್ಥಸಿದ್ದಿಯಂ ಕುಱೆತು ನಡೆವ ಸಂ ಸಂಯೋಗಮೆಂಬುದಕ್ಕುಂ. ನಿನ್ನ ಸೇನಾನಾಯಕರಿಂದೆನ್ನ ಕಾರ‍್ಯಮಂ ಸಾಸಿದೊಡೆ ನುಡಿದ ಪಣಮಂ ಕುಡುವನೆಂಬುದು ಪುರುಷಾಂತರಸಂಯೆಂಬುದಕ್ಕುಂ. ಎನ್ನ ಕಾರ‍್ಯಮಂ ನಿನ್ನ ಬಲ್ಲ ಮಾೞ*ಯಿಂ ತೀರ್ಚಿದೊಡೆ ನೀನೆಂದುದು ಮಾೞ್ಪೆನೆಂಬುದು ಅದೃಷ್ಟಪುರುಷಸಂಯೆಂಬುದಕ್ಕುಂ. ಅರವಿಜಿಗೀಷುಗೆ  ಭೂಮ್ಯೇಕಪ್ರದೇಶಮಂ ಕೊಟ್ಟು ಮಾೞ್ಪುದು ಅದುಷ್ಟ ಸಂಯೆಂಬುದಕ್ಕುಂ. ಶತ್ರುಸಮಸ್ತಬಲಂ ಬೆರಸು ವಿಜಿಗೀಷುವಂ ಕಾಣ್ಬುದುಂ ಆತ್ಮಾಮಿಷಸಂಯೆಂಬುದಕ್ಕುಂ, ಸರ‍್ವಸ್ವಮಂ ತೆತ್ತು ಪ್ರಾಣರಕ್ಷಣಂಗೆಯ್ವದು ಉಪಗ್ರಹಸಂಯೆಂಬುದಕ್ಕುಂ. ಭಂಡಾರಮನಕ್ಕೆ ಅದಱೊಳರ್ಧಮನಕ್ಕೆ ಕೊಟ್ಟು ದೆಶಪ್ರವೃತ್ತಿಯಂ ರಕ್ಷಿಸುವ ಸಂ ಪರಿಕ್ರಮಸಂಯೆಂಬುದಕ್ಕುಂ. ಸಾರಭೂಮಿಯಂ ಕುಡುವುದು ಸ್ಖಂಧೋಪನಯಸಂಯೆಂಬುದಕ್ಕುಂ. ಇಂತೀ ಪೞ್ದ ಪದಿನಾಱುಂ ಸಂ ವಾಷಸ್ಪ್‌ತಿನೀತಿಯಲ್ಲಿರ್ಕುಂ; ಸೋಮದೇವನನಿತಿಯಲ್ಲಿರ್ಕುಂ. ಇವಱಲ್ಲಿ ನಾವಾವ ಸಂಯಂ ಪೊಣರ್ಚುವೊಡಮರಿಮರ್ದನನೊಡಂಬಡುವನಲ್ಲ ಅದೆಂತೆನೆ:

ಙತಿಬಹಿಷ್ಕ್ರತಂ ವ್ಯಸನಿ ದೈವಪರಂ ಶಿಶು ದೀರ್ಘರೋಷಿ ಸ
ತ್ಯೇತರನಸ್ಥಿರಂ ಸುರಗುರುದ್ವಿಜವೈರಿ ಬಹುದ್ವಿಷಂ ಭಯೋ
ಪೇತನಧಾರ್ಮಿಕಂ ವಿಕಳತಂತ್ರನನಿಶ್ಷಿತಮಂತ್ರನಾಗುಳುಂ
ಭೀತಪರಿಗ್ರಹಂ ಕೃಪಣನಾತ್ಮಬಲವ್ಯಸನಾತಿ ವಿಹ್ವಲಂ ೩೦೪

ವಸುಹೀನ ದುಶ್ಯಿಕ್ಷಂ
ವ್ಯಸನಯುತಂ ದೇಶಕಾಲಬಲರಹಿತಂ ಭಾ-
ವಿಸೆ ದೈವಹೀನನವಿನೀ-
ತಸೈನ್ಯನನ್ಯಾಯಿಯೆನಿಪ ನರಪನೊಳೆಂದುಂ  ೩೦೫

ವಿಜಿಗೀಮಗಳಪ್ಪ ಮಹೀ-
ಭುಜರೆಂದುಂ ಸಂಮಾಡರದಱೆಂ ಬಲಿಭು-
ಗ್ರ್ವಜಮುಖ್ಯ ಕೇಳುಲೂಕ
ವ್ರಜವರನೊಳ್ ನಮಗೆ ಸಂಯಾಗದಮೋಘಂ  ೩೦೬

ಅದಱೆಂ ಕೌಶಿಕಂಗಳ್ಗಂ ನಮಗಂ ದುರ್ದರಮಪ್ಪ ವೈರಮುಂಟಾಗಿಯುಂ ನಾವೆಲ್ಲರುಂ ರಾತ್ರ್ಯಂಧರುಮಮರೆಲ್ಲರುಂ ದಿವಾಂಧರುಮಪ್ಪುದಱೆಂ ಸಂಧಾನಮೆಂತುಮಾಗಲಱೆಯದೆಂದು ನುಡಿದ ಚಿರಂಜೀವಿಯ ಮಾತಂ ಕೇಳ್ದು ಮೇಘವರ್ಣನಿಂತೆಂದಂ:

ಆಸ್ತಾಂತವನ್ಮಂತ್ರ
ಪ್ರಸ್ತಾವನಮಾರ್ಯ ನಮಗಮಾ ಕೌಶಿಕಪ-
ತ್ರಿ ಸ್ತೋಮವಲ್ಲಭಂಗಂ
ಪ್ರಸ್ತುತಮತಿವೈರಮಾದ ತೆಱನೇಂ ಮೊದಲೊಳ್  ೨೦೭

ಎನೆ ಚಿರಂಜೀವಿಯಿಂತೆಂದಂ:

ಶ್ಲೋ || ಸಾಪತ್ನಂ ವಸ್ತುಜಂ ಸ್ತ್ರೀಜಂ ವಾಗ್ಭೋತಮಪರಾಧಜಂ
ವೈರಪ್ರಭೇದ ನಿಪುಣೈಃ ವೈರಂ ಪಂಚವಿಧಂ ಸ್ಮ್ರತಂ  ||೧೫೬||

ಟೀ || ಇರ್ವರ್ ಪೆಂಡಿರ ದೆಸೆಯಿಂದಾದುದು ವಸ್ತುವಿನ ದೆಸೆಯಿಂದಾದುದು ಸ್ತ್ರೀಯರ ದೆಸೆಯಿಂದಾದುದು ವಾಗ್ದೋಷದಿಂದಾದುದು, ಅಪರಾಧದಿಂದಾದುದುಯೆಂದಿಂತು ವೈರಮೈದು ತೆಱನಾಗಿಹುದು ಅದಱೊಳಗೆ,

ನಮಗಂ ಕೌಶಿಕಲಕ್ಷ್ಮೀ
ರಮಣಂಗಂ ವಚನದೋಷದಿಂ ಕಾಕವಿಹಂ
ಗಮಚಕ್ರವರ್ತಿ ಶತ್ರು
ತ್ವಮಾಯ್ತು ವಿಹಗಪ್ರದಾನರೆಲ್ಲರುಮಱೆಯಲ್  ೨೦೮

ಅದು ಕಾರಣದಿಂ,

ಮೊದಲೊಳ್ ವೈರಂ ವಾಗ್ದೋ-
ಷದಿನಾದುದು ಕೌಶಿಕಾಪತಿಗಂ ನಮಗಂ
ತೊದಳಲ್ತುಪೇಕ್ಷಿಸಿರೆ ಬಳೆ-
ದುದು ಬೞ*ಕೀ ತೆಱದೆ ಸಕಲಕಾಕಾಶಾ  ೨೦೯

ಎನೆ, ಮೇಘವರ್ಣಂ ವಾಗ್ದೋಷವಾವ ಕಾರಣದಿನಾದುದೆನೆ ಚಿರಂಜೀವಿ ಪೇೞ್ಗುಂ ಏನಾನುಮೊಂದು ನೆವದೊಳ್ ಸಕಲಶಕುನಿಕುಲಪ್ರಧಾನರೆಲ್ಲಂ ನೆರೆದು ತಮ್ಮೊಳಿಂತೆಂದರ್:

ವಿನತಾನಂದನನೆಂದುಮಿಂದುಧವಳಶ್ರೀಮತ್ಪಯೋರ್ವಾಯೊಳ್
ವಿನತಾನಂದನನಂ ಮುಕುಂದನನಮೋಘತ್ರಾಯಿಯಂ ಭಕ್ತಿಯಿಂ-
ದೆನಸುಂ ಸೇವಿಸುತಿರ್ಪನಾರ್ಗಮರೆದೆಯ್ದಲ್ ನಮ್ಮ ಕಜ್ಜಂಗಳಂ
ನೆನೆಯಂ ನಮ್ಮೊಳಗೋರ್ವನಂ ಗುಣಗಣೈಕಾಧಾರನಂ ರನಂ  ೨೧೦

ಪ್ರವರವಿಹಂಗಮ ಕುಲ ಚ-
ಕ್ರವರ್ತಿಪಟ್ಟಕ್ಕೆ ಯೊಗ್ಯನಂ ಮಾಡಿ ಮಾಹೋ-
ತ್ಸವದಿಂ ಮಾಡುವುದಬೀಷೇ-
ಕವನುತ್ತಮ ಭಗಣ ವಿನುತ ಲಗ್ನೋದಯದೊಳ್  ೨೧೧

ಎಂದು ಪತತ್ರಿಪ್ರದಾನರೆಲ್ಲಮಾಳೋಚಿಸಿ ಕೌಶಿಕವಿಹಂಗಮಕ್ಕೆ ವಿಹಂಗಮಕುಲ ಚಕ್ರವರ್ತಿತ್ವಮಂ ಮಾೞ್ಪಮೆಂದು ನಿಶ್ಚಯಿಸಿ ಪಟ್ಟಬದ್ಧೋತ್ಸವಯೋಗ್ಯಂಗಳಪ್ಪ ಮಂಗಳದ್ರವ್ಯಂಗಳಂ ತನ್ನಿಮೆಂದು ಪೇೞಲೊಡಂ,

ವರದಾ ಸಿಂಧು ಸರಸ್ವತೀ ರವಿಸುತಾ ಗೋದಾವರೀ ನರ್ಮದಾ
ಸರಯೂ ಭೋಗವತೀ ಕವೇರತನಯಾ ತಾಪೀ ಪಯೋಷ್ಣೀ ಸರಿ
ದ್ವರಗಂಗಾಸಲಿಲಂಗಳಂ ಹಿಮಕರಸ್ವಚ್ಛಂಗಳಂ ತಂದರಾ-
ದರದಿಂ ಹೇಮಘಟಂಗಳಿಂ ಕೆಲಬರುದ್ಯತ್ಪತ್ರಿಗೋತ್ರೋತ್ತಮರ್  ೨೧೨

ವಿನುತಶ್ವೇತಾತಪತ್ರಾವಳಿಯರುಣಮಣಿಪ್ರಸ್ಛುಟೋತ್ತುಂಗುಸಿಂಹಾ-
ಸನಮಂ ಗಂಗಾತರಂಗೋಪಮ ಚಮರರುಹಸ್ತೋಮಮಂ ಶಂಖಮಂ ಪ್ರಾಂ-
ಜನಮಂ ನಾನಾಪ್ರಕಾರಧ್ವಜಸಮುದಯಮಂ ತೂರ‍್ಯಸಂದೋಹಮಂ ಚಂ-
ದನಮಂ ಪ್ರತಿಪ್ರಧಾನರ್ ಕೆಲರಕತರಾನಂದದಿಂ ತಂದರಾಗಳ್ ೨೧೩

ಕುಂಕುಮಪಂಕಮಂ ದಯನ್ಮಜ್ಜ್ವಳದರ್ಪಣಮಂ ನವೀನದೂ-
ರ್ವಾಂಕುರಮಂ ಹಿಮಾಂಶುಧವಳಾಂಬರಮಂ ಮಧುವಂ ಮನೋಹರಾ-
ಳಂಕರಣಂಗಳಂ ವರಸಿತಾಕ್ಷತಮಂ ರಮಣೀಯಮಪ್ಪ ಮು-
ತ್ತಂ ಕರಿದಾನಮಂ ನೆರಪಿದರ್ ಕೆಲಬರ್ ವಿಹಗಾನಾಯರ್  ೨೧೪

ಕಮನೀಯ ಗಂಧ ಬಂಧುರ
ನಮೇರು ಮಂದಾರ ಪಾರಿಜಾತಾದಿ ಸುರ-
ದ್ರುಮಕುಸುಮದಾಮಮಂ ಶಕು-
ನಿಮುಖ್ಯರಾದರದೆ ತಂದರಾಗಳ್ ಕೆಲಬರ್ ೨೧೫

ಇಂತು ರಾಜ್ಯಾಭಿಷೇಕಯೋಗ್ಯಂಗಳಪ್ಪ ನಾನಾ ಪ್ರಕಾರ ಮಂಗಳದ್ರವ್ಯಂಗಳಂ ನೆಱಪಿ ಕೌಶಿಕ ವಿಹಂಗಮಕ್ಕೆ ಪಟ್ಟಂಗಟ್ಟಲಿರ್ದವಸರದೊಳ್ ರಾಮರಾಜ್ಯಾಭಿಷೇಕಮಂಟಪಕ್ಕೆ ಕೈಕೆ ಬರ್ಪಂತುಲೂಕ ರಾಜ್ಯಾಭಿಷೇಕಮಂಟಪಮಾಗಿರ್ದ ವಿಶಾಲಮಪ್ಪ ಅಲದ ಮರದ ಮೆಲೆ ಕಾಗೆ ಬಂದು ಪಾಯ್ದುಂ ದುಸ್ಸ್ವವರದಿಂ ಕರೆವುದುಮದಂ ಕೇಳ್ದಂಡಜ ಪ್ರಧಾನರೋರೊರ್ವರ ಮೊಗಮಂ ನೋಡಿ ನಮ್ಮ ಮಾೞ್ಪ ಕಜ್ಜಮಪ್ಪೊಡೆ ಮಹಾಪ್ರಾರಂಬಮದಱೆಂ ಶಕುನನಿಮಿತ್ತಂಗಳಂ ನೋಡಿ ಮಾಡಲ್ವೇೞ್ಕುಂ. ಈ ವಾಯುಸಸ್ವರಂ ದುಸ್ಸ್ವರಮಾಗಿರ್ದುದಿದುವುಂ ಪತತ್ರಿಗೋತ್ರಮಪ್ಪು ದಱೆಂದಿದರ್ಕಱೆಪಲೆವೇೞ್ಕುಮೆಂದು ಸಮೀಪಕ್ಕೆ ಕರೆದು ಕೌಶಿಕಪಟ್ಟಬದ್ಧಮಂ ಸುವಿಸ್ತರಂ ಪೇಱೆ ಕೇಳ್ದು ವಾಯಸಂ ಶಕುನಿ ಸಮೂಹಕ್ಕಿಂತೆಂದುದು:

ಶುಭಲಕ್ಷಣಂಗೆ ಸತತಂ
ಪ್ರಭುಮಂತ್ರೋತ್ಸಾಹಶಕ್ತಿಯುಕ್ತಂಗೆ ಖಗ-
ಪ್ರಭುತೆಯನೀವುದು ಮಾಡುವು-
ದಭಿಷೇಕಮನಲ್ಲದಂದು ಮಾಣ್ಬುದಮೋಘಂ  ೨೧೬

ಅಂತುಮಲ್ಲದೆ ಸುರಾಸುರಭಾಸುರಚೂಡಾಮಣಿಮರೀಚಿಮಾಲಾಲಂಕೃತ ಚಾರುಚರಣನೆನಿಪ್ಪವನಜನಾಭಂಗೆ ವಾಹನಮಾಗಿರ್ದ  ತಾರ್ಕ್ಷ್ಯಾನ್ವಯದ ಪಕ್ಷಿನಿಕಾಯಮುಂ ಸಕಳ ಜಗಜ್ಜನವಂದ್ಯನೆನಿಪ ವನಜಾಸನಂಗೆ ವಾಹನಮಾಗಿರ್ದ ರಾಜಹಂಸಾನ್ವಯದ ಹಂಸಸಮಾಜಮುಂ ದೇವಾದೇವನಪ್ಪ ಮಹಾದೇವನ ತನೂಭವನುಂ ತಾರಕವಿದಾರಕನುಮಾಗಿರ್ಪ ಕುಮಾರಂಗೆ ವಾಹನಮಾಗಿರ್ದ ಮಯೂರ ವಂಶದ ಮೂಯೂರಮಂಡಲಮುಂ ರಘುಕುಲತಿಲಕನಪ್ಪ ರಾಮನ ಮನೋನಯನವಲ್ಲಭೆಯನುಯ್ದ ರಾವಣಂಗೆ ಭಂಗಂ ಮಾಡಿದ ಜಟಾಯುವಂಶದ ಪಕ್ಷಿಪ್ರಧಾನರುಂ ಲೋಕೈಕನೇತ್ರನುಂ ಶತಪತ್ರಮಿತ್ರನುಮಪ್ಪ ಆದಿತ್ಯಂ ತಮಗೆ ಪರಮಮಿತ್ರನೆಂಬಹಂಕಾರದ ಚಕ್ರವಾಕಚಕ್ರಮುಂ ಸುರಾಸುರನಿಕಾಯಮೆಕ್ಕೆಕ್ಕೆಯಿಂ ಕಡೆವ ಪಾಲ್ಗಡಲೊಳಗೊಗೆದ ಸಿರಿಯೊಡನುದಯಿಸಿದ ಅಮೃತಕಳಾಭರನೆನಿಪ್ಪ ಚಂದನಕಿರಣಾಮೃತಮನೀಂಟಿ ತಣಿದಿರ್ಪ ಚಾರುಚಕೋರಾನ್ವಯದ ಪತಂಗಪುಂಗವರುಂ ಶ್ರವಣಮಾತ್ರದಿಂ ನಾನಾ ವಿಧದೋದುಗಳನೊದಲ್ಬಲ್ಲ ಶುಕಶಾರಿಕಾಸಂಕುಳಮುಂ ಮಕರಕೇತನಮಹೀವಲ್ಲಭ ಮಹಾಪ್ರತೀಹಾರಪದವೀವಿರಾಜಮಾನಮೆನಿಪ್ಪ ಕೋಕಿಲಕುಲಮುಂ ದರ್ಶನಮಾತ್ರದಿಂ ಶುಭದಂಗಳೆನಿಪಭಾರದ್ವಾಜರಾಜಿಗಳುಂ ಸಲಕ್ಷ ಸೌಂದರ‍್ಯ ಸ್ತ್ರೀಜನನೇತ್ರ ಚಾಂಚಲ್ಯೋಪಮೆಗೆ ಬಣ್ಣಿಸಲ್ ಯೊಗ್ಯಮಪ್ಪ ಖಂಜನಪುಂಜಮುಂ ರಾಜಕುಮಾರರಾರೋಗಿಸುವಮೃತಾಹಾರ ಪರೀಕ್ಷಾ ಯೋಗ್ಯಂಗಳೆನಿಪ್ಪ ಜೀವಚಿಜೀವಕಸಮೂಹಮುಂ ಮಹಾಸಮುದ್ರಕ್ಕುಪ್ರದವಂ ಮಾಡಿದ ರೌದ್ರಟೋಪಪ್ರಕೊಪಮಪ್ಪ ಟಟ್ಟಿಭಪ್ರಕರಮುಂ ಸಕಲಶಕುನಿಗಣಂಗಳೊಳಗೆ ಸತ್ತ್ವದೊಳಂ ಸಾಹಸದೊಳಮಕಮಪ್ಪ ಭೇರುಂಡಮಂಡಳಿಯುಂ ಅಂಡಜಕುಲಪ್ರಸೂತಂಗಳಾಗಿಯುಂ ಮಾರ್ತಂಡತನೂಜರೆನಿಪ್ಪ ಮಹಿಮೆಗಾಸ್ಪದಮಾಗಿ ದೀರ್ಘಾಯುಗಳೆನಿಪ್ಪ ವಾಯಸ ಸಮುದಾಯಮುಂ ಖಾಂಡವವನಮನಗ್ನಿಯನೂಡಿದ ಪಾಂಡವಂಗುಪಕರಿಸಿ ಪಾಂಡವೋಪಕಾರಿಗಳಾಗಿಯುಂ ಮೇದಿನಿಯ ಜನಕ್ಕೆ ಶುಭಾಶುಭಾದಿಕಾರ‍್ಯಂಗಳಂ ಸೂಚಿಸುತಿರ್ಪ ಪೋದೆಗೆಗಳಂ ಕಿರಾತಂಗೆ ತನ್ನಸುವನಿತ್ತು ಜಸಂಬಡೆದ ಕಪೋತವಂಶದ ಕಪೋತವ್ರಾತಮುಮಿರ್ದಂತೆ

ದಿವಸಾಂಧಗವಲಕ್ಷಣಂಗೆ ಕ್ರೂರಂಗೆ ವಿಪ್ರಾನ್ವಯಾ
ಧವನಪ್ಪಂಗತಿದುರ್ಮುಖಂಗೆಸೆವ ಸತ್ಯತ್ಯಾಗಶೌರ‍್ಯೋಚಿತ
ವ್ಯವಸಾಯೇತರನಪ್ಪವಂಗೆ ದಿಷಣರ್ ನಿಮ್ಮಂದಿಗರ್ ತೊಟ್ಟನಿಂ-
ತವಿಚಾರಕ್ರಮದಿಂದಮೀವುದೆ ಖಗೋದ್ಯಚಕ್ರವರ್ತಿತ್ವಮಂ  ೩೧೭

ಅವಿವೇಕಂ ಕ್ಷುದ್ರನೆನಿ-
ಪ್ಪವನರಸಾದಂದು ಭೂತಳಕ್ಕೆಲ್ಲಮುಪ-
ದ್ರವಮಕ್ಕುಮೆಂಬರೆಲ್ಲಂ
ಪ್ರವರನಯಾಗಮವಿದಗ್ಧರಪ್ಪ ಮುನೀಶರ್  ೩೧೮

ಅದಲ್ಲದೆಯುಂ,

ಶ್ಲೋ || ಕ್ಷುದ್ರಮರ್ಥಪತಿಂ ಪ್ರಾಪ್ಯ ನ ತದ್ವಿವದತಾಂ ಸುಖಂ ||೧೫೭||

ಟೀ|| ಕ್ಷುದ್ರನಹ ಅರ್ಥಪತಿಯ ಕೂಡೆ ಪ್ರಸಂಗವ ಮಾಡುವಂಗೆ ಸೌಖ್ಯಮಿಲ್ಲ. ಎಂಬ ಕಥೆಯಂತಕ್ಕುಮೆನೆ ಶಕುನಿಸಮೂಹಮದೆಂತೆಂದು ಬೆಸೆಗೊಳೆ ವಾಯಸಂ ಪೇೞ್ಗುಂ:

೩೦೩. ಸಮರಪ್ರಾರಂಭದಲ್ಲಿ ಕೌಶಿಕರಾಜನೊಡನೆ ಕಾದಾಡಿ ಗೆಲ್ಲುವ ಉದ್ಯಮ ಈಗ ನನಗೆ ಸಾಧ್ಯವಾಗದು. ಹೆಚ್ಚು ಮಾತಿನಿಂದ ಏನು ಪ್ರಯೋಜನ? ಅದರಿಂದ ದೇವಾ, ಮಹಾಶಾಸ್ತ್ರಪ್ರಾಜ್ಞರಾದ ಮುನೀಚಿದ್ರೋತ್ತಮರು ಹೇಳಿದ ನೀತಿಕ್ರಮದಿಂದ ಷಾಡ್ಗಣ್ಯವನ್ನು ಯೋಜಿಸುವದೇ ನೀತಿಯಾಗಿರುವುದು. ವ|| ಆ ಷಾಡ್ಗುಣ್ಯಗಳು ಯಾವುವು ಎಂದರೆ, ಸಂ, ವಿಗ್ರಹ, ಯಾನ, ಆಸನ, ಸಂಶ್ರಯ, ದ್ವೈಭಾವ ಎಂಬ ಆರು ವಿಧವಾಗಿವೆ. ಬಲಶಾಲಿಯಾದ ಹಗೆಯು ಆಕ್ರಮಿಸಿ ಬರಲು ವಸ್ತುವಾಹನಾದಿಗಳನ್ನು ಕೊಟ್ಟು ಅವನನ್ನು ಸಂತೈಸುವುದು ಸಂಧಾನವೆನಿಸುವುದು. ವಿಜಯೇಚ್ಛುಗಳಿಬ್ಬರೂ ಪರಸ್ಪರ ಅಹಂಕಾರ  ತೋರಿಸುವುದು  ವಿಗ್ರಹವೆನಿಸುವುದು. ಶಕ್ತಿತ್ರಯಸಂಪನ್ನರಾದ ವಿಜಯಾಪೇಕ್ಷಿಗಳಿಬ್ಬರೂ ಪರಸ್ಪರ ಆಕ್ರಮಣ ಮಾಡುವುದು ಯಾನವೆನಿಸುವುದು. ವೈರಿರಾಜರು ಪರಸ್ಪರ ಆಕ್ರಮಣ ಮಾಡಿ ಮುಂದರಿಯಲಾರದೆ ನಿಲ್ಲುವುದು ಅಸನವೆನಿಸುವುದು. ತನ್ನಲ್ಲಿ ಬಲವಿಲ್ಲದೆ ಶತ್ರು ಜಯಿಸಿದಲ್ಲಿ ಅವನನ್ನು ಆಶ್ರಯಿಸುವುದು ಸಂಶ್ರಯವೆನಿಸುವುದು. ಬಲಶಾಲಿಗಳಾದ  ಶತ್ರುಗಳ ನಡುವೆ ದುರ್ಬಲನಾದ ರಾಜನು ಆ ಶತ್ರುಗಳನ್ನು ವಾಙತ್ರದಿಂದ ಅತಿ ಸಂಧಾನಮಾಡಿ ತನ್ನ ಮನಸ್ಸನ್ನು  ಎಂಥವರೂ ಅರಿಯದಂತೆ ಕಾಕಾಕ್ಷಿಗೋಳಕ ನ್ಯಾಯದಿಂದ ಇರುವುದು ದ್ವೈಭಾವ ಎಂದೆನಿಸುವುದು. ಈ ರೀತಿಯಲ್ಲಿ ಷಾಡ್ಗಣ್ಯಾಭಿಪ್ರಾಯದಲ್ಲಿ ಈ ಸಂದರ್ಭದಲ್ಲಿ ಸಂದೀಪಿ ಹೇಳಿದಂತೆ ಸಂಯನ್ನು ಮಾಡಿಕೊಳ್ಳಬೇಕು. ಅ ಸಂಗಳು ಸಂಪ್ರಧಾನ, ಕಪಾಲ, ಉಪಹಾಸನ, ಸಂತಾನ, ಸಂಗತ, ಉಪನ್ಯಾಸ, ಪ್ರತೀಕಾರ, ಸಂಯೋಗ, ಪುರುಷಾಂತರ ಅದೃಷ್ಟ ಪುರುಷ, ಅದುಷ್ಟ, ಅತ್ಮಾಮಿಷ, ಉಪಗ್ರಹ ಪರಿಕ್ರಮ, ಅರಿಪರದೂಷಣ, ಸ್ಕಂದೋಪನಯ ಎಂದು ಹದಿನಾರು ವಿಧಗಳಾಗಿವೆ. ಅಲ್ಲಿ ದ್ರವ್ಯವಾಹನಗಳನ್ನು ಕೊಟ್ಟು ಮನ್ನಿಸುವುದು ಸಂಪ್ರದಾನವೆನಿಸುವುದು. ಸಮಸಂ ಕಪಾಲವನಿಸುವುದು. ಸಂಧಾನವು ಉಪಹಾಸನಸಂಯೆನಿಸುವುದು. ಕನ್ಯಾದಾನ ಪೂರ್ವಕವಾದ ಸಂಯು ಸಂತಾನವೆನಿಸುವುದು ಮಿತ್ರಭಾವದಿಂದ  ಮಾಡಿದ ಸಂಯು ಸಂಗತವೆನಿಸುವುದು. ಏಕಾರ್ಥಸಿದ್ದಿಯನ್ನು ಉದ್ದೇಶಿಸಿ ನಡೆಯುವುದು ಉಪನ್ಯಾಸ ಸಂಯನಿಸುವುದು. ಪರಸ್ಪರ ಉಪಕಾರ ಮಾಡುವುದು ಪ್ರತೀಕಾರ ಸಂಯನಿಸುವುದು. ವಿಜಯಿಗಳೆನಿಸಿದ ವ್ಶೆರಿಗಳು ಏಕಾರ್ಥಸಿದ್ದಿಯನ್ನು ಮಾಡಿ ವರ್ತಿಸುವುದು ಸಂಯೋಗವೆನಿಸುವದು. ನಿನ್ನ ಸೇನಾನಾಯಕರಿಂದ ನನ್ನ   ಕಾರ‍್ಯವನ್ನು ಸಾಸಿದರೆ ಹೇಳಿದಷ್ಟು ಹಣವನ್ನು ಕೂಡುವೆನು ಎಂಬುದು ಪುರುಷಾಂತರಸಂಯೆನಿಸುವುದು. ನನ್ನ ಕಾರ‍್ಯವನ್ನು ನೀನು ತಿಳಿದ ರೀತಿಯಲ್ಲಿ ತೀರಿಸಿದರೆ ನೀನು ಹೆಳಿದುದನ್ನು ಮಾಡುವೆನು ಎಂಬುದು ಅದೃಷ್ಟ ಪುರುಷ ಸಂಯೆನಿಸುವುದು. ವಿಜಯಿಯಾದ ವೈರಿಗೆ ಭೂಮಿಯ ಒಂದು ಪ್ರದೇಶವನ್ನು ಕೊಟ್ಟು ಸಂಮಾಡಿಕೊಳ್ಳುವುದು ಅದುಷ್ಟಸಂಯೆನಿಸುವುದು. ಶತ್ರುಸಮಸ್ತಸೈನ್ಯಸಮತನಾದ ವಿಜಯಿಯನ್ನು  ಕಾಣುವುದು ಅತ್ಮಾಮಿಷಸಂಯೆನಿಸುವುದು. ಸರ್ವಸ್ವವನ್ನೂ ಕೊಟ್ಟು ಪ್ರಾಣರಕ್ಷಣೆಯನ್ನೂ ಮಾಡಿಕೊಳ್ಳವುದು ಉಪಗ್ರಹಸಂಯೆನಿಸವುದು. ಭಂಡಾರವನ್ನೋ ಅದರ ಅರ್ಧವನ್ನೋ ಕೊಟ್ಟು ದೇಶವನ್ನು ರಕ್ಷಿಸುವುದು ಪರಿಕ್ರಮಸಂಯೆನಿಸುವುದು. ಹೇಳಿದಷ್ಟು ಸಾರವತ್ತಾದ ಭೂಮಿಯನ್ನು ಕೊಡುವುದು ಅರಿಪರದೂಷಣಸಂಯೆನಿಸುವುದು. ಹೇಳಿದಷ್ಟು ದ್ರವ್ಯವನ್ನು ಕಂದಾಯವಾಗಿ ಕೊಡುವುದು ಸ್ಕಂದೋಪನಯಸಂಯೆನಿಸುವುದು. ಈ ಹದಿನಾರು ವಿಧಧ ಸಂಗಳು ವಾಚಸ್ಪತಿನೀತಿಯಲ್ಲಿವೆ: ಸೋಮದೇವ ನೀತಿಯಲ್ಲಿವೆ. ಇವುಗಳಲ್ಲಿ ನಾವು ಯಾವ ಸಂಯನ್ನು ಕೈಗೊಂಡರೂ ಅರಿಮರ್ದನನೂ ಒಡಂಬಡುವವನಲ್ಲ. ೩೦೪. ದಾಯದಿಗಳಿಂದ ಬಹಿಷ್ಕೃತನೂ ವ್ಯಸನಿಯೂ ದೈವಪರನೂ ಶಿಶುಬುದ್ಧಿಯವನೂ ಸದಾ ಕೋಪಿಯೂ ಅಸತ್ಯನೂ ಅಸ್ಥಿರನೂ ಸುರಗುರು ದ್ವಿಜವೈರಿಯೂ ಬಹು ದ್ವೇಷಿಯೂ ಭಯಗ್ರಸ್ತನೂ ವಿಕಳತಂತ್ರನೂ ಅನಿಶ್ಚಿತ ಮಂತ್ರನೂ ಕೃಪಣನೂ ೩೦೫. ವಸುಹೀನನೂ ದುಶ್ಶಿಕ್ಷಕನೂ ದಶಕಾಲಬಲರಹಿತನೂ ಅವಿನೀತಸೈನ್ಯನೂ ಆದ ಅರಸನು ಎಂದೆಂದೂ ಅನ್ಯಾಯಯೆನಿಸುವನು. ೩೦೬. ವಿಜಯಾಕಾಂಕ್ಷೆಯುಳ್ಳ ರಾಜರೆಂದೂ ಸಂಗೆ ಒಪ್ಪುವುದಿಲ್ಲ. ಅದರಿಂದ ದೇವಾ, ಗೂಬೆರಾಜನೊಡನೆ ನಮಗೆ ಸಂಯಾಗುವುದು ಸಾದ್ಯವಿಲ್ಲ. ವ|| ಅದರಿಂದ ಗೂಬೆಗಳಿಗೂ ನಮಗೂ ದುರ್ದರವಾದ ವೈರವುಂಟಾಗಿರುವುದರಿಂದ ನಾವೆಲ್ಲರೂ ರಾತ್ರ್ಯಂಧರೂ, ಅವರೆಲ್ಲರೂ ದಿವಾಂಧರೂ ಅಗಿರುವುದರಿಂದ ಸಂಧಾನವಾಗುವುದು ಸಾದ್ಯವಿಲ್ಲ. ಅದಕ್ಕೆ ಮೇಘವರ್ಣನು ಹೀಗೆಂದನು: ೩೦೭. ನಮಗೂ ಆ ಉಲೂಕರಾಜನಿಗೂ ಅತಿವೈರವಾದ ಮೂಲಕಾರಣವೇನು? ವ || ಅದಕ್ಕೆ ಚಿರಂಜೀವಿ ಹೀಗೆಂದನು: ಶ್ಲೋ || ಇಬ್ಬರು ಹೆಂಡಿರ ದೆಸೆಯಿಂದಲೂ ವಾಗ್ದೋಷದ ಕಾರಣಂದಲೂ ಅಪರಾಧದ ಕಾರಣದಿಂದಲೂ ವೈರವುಂಟಾಗುವುದು ೩೦೮. ಪqಗಳಿಗೆಲ್ಲ ತಿಳಿದಂತೆ ನಮಗೂ ಗೂಬೆರಾಜನಿಗೂ ವಚನ ದೋಷದಿಂದ ಶತ್ರುತ್ವವುಂಟಾಯಿತು. ೩೦೯. ಅದನ್ನು ಉಪೇಕ್ಷಿಸಿದುದರಿಂದ ಅದು ಬೆಳೆದು ಬಲಿಯಿತು. ಅದಕ್ಕೆ ಮೇಘವರ್ಣನು ವ || ವಾಗ್ದೋಷವು ಯಾವ ಕಾರಣದಿಂದ  ಅಯಿತು ಎನ್ನಲು ಚಿರಂಜೀವಿಯು ಹೇಳಿತು: ಏನೋ ಒಂದು ನೆಪದಿಂದ ಎಲ್ಲ ಗೂಬೆಗಳೂ ಒಟ್ಟಿಗೆ ಸೇರಿ ಒಮ್ಮೆ ತಮ್ಮೊಳಗೆ ಹೀಗೆ ಮಾತನಾಡಿಕೊಂಡರು: ೩೧೦. ಗರುಡನು ಮುಕುಂದನನ್ನು ಕ್ಷೀರಸಾಗರದಲ್ಲಿ ಸೇವಿಸುತ್ತಿರುವನು. ಅಲ್ಲಿಗೆ ಹೋಗುವುದು ನಮಗಾರಿಗೂ ಸಾದ್ಯವಿಲ್ಲ.  ಅವನು ನಮ್ಮ ಕೆಲಸವನ್ನು ನೆನೆಯುವುದಿಲ್ಲ. ಅದರಿಂದ ನಮ್ಮಲ್ಲಿ ಒಬ್ಬನನ್ನು ೩೧೧. ವಿಹಂಗಮ ಕುಲಚಕ್ರವರ್ತಿಪದವಿಗೆ ಯೋಗ್ಯನಾದವನನ್ನು ಆರಿಸಿ ಅವನಿಗೆ ಶುಭಲಗ್ನದಲ್ಲಿ ಪಟ್ಟಾಬಿಷೇಕ ಮಾಡಬೇಕೆಂದು ಮಂಗಳದ್ರವ್ಯಗಳನ್ನು ತನ್ನಿ ಎಂದು ಹೇಳಿದ. ೩೧೨. ಅಗ ಹೇಮಘಟ್ಟಗಳಲ್ಲಿ ವರದಾ, ಸಿಂಧು, ಸರಸ್ವತಿ, ಯಮುನಾ, ಗೋದಾವರೀ, ನರ್ಮದಾ, ಸರಯೂ, ಭೋಗವತೀ, ಕಾವೇರೀ, ತಾಪೀ, ಪಯೋಷ್ಣೀ, ಗಂಗಾ ಮೊದಲಾದ ಶ್ರೇಷ್ಟ ಪವಿತ್ರನದಿಗಳ ಪುಣ್ಯೋದಕಗಳನ್ನು ತುಂಬಿ ತಂದರು. ೩೧೩. ಉತ್ತುಂಗ ಸಿಂಹಾಸನವನ್ನೂ ಗಂಗಾತರಂಗದಂತಹ ಚಾಮರಸಮೂಹವನ್ನು ಶಂಖವನ್ನೂ ಪ್ರಾಂಜವನನ್ನೂ ಧ್ವಜಗಳನ್ನೂ ತೂರ್ಯಗಳನ್ನೂ, ಚಂದನ ಮೊದಲಾದ ನಾನಾ ಪ್ರಕಾರದ ಮಂಗಳ ದ್ರವ್ಯಗಳನ್ನೂ ಸಿದ್ದಪಡಿಸಿ ೩೧೪. ಕುಂಕುಮ, ದದಿ, ದರ್ಪಣ, ದೂರ್ವೆ, ದವಳಾಂಬರ ಮಧು, ಸಿತಾಕ್ಷತೆ ಮುಂತಾದ ಮನೋಹರ ಅಲಂಕರಣ ಸಾಮಗ್ರಿಗಳನ್ನು ತಂದರು. ೩೧೫. ಮಧುರ ಮರಿಮಳದಿಂದ ಕೂಡಿದ ನಮೇರು ಮಂದಾರ ಪಾರಿಜಾತಾದಿ ಪುಷ್ವಮಾಲೆಗಳನ್ನು ತಂದರು. ವ || ಹೀಗೆ ಅವರು ಕೌಶಿಕವಿಹಂಗಮಕ್ಕೆ ಪಟ್ಟಗಟ್ಟಬೇಕೆಂವ ಸಂಧರ್ಭದಲ್ಲಿ ರಾವರಾಜ್ಯಾಭಿಷೇಕದ ಮಂಟಪಕ್ಕೆ ಕೈಕೆ ಬಂದಂತೆ ಗೂಗೆರಾಜನ ರಾಜ್ಯಾಭಿಷೇಕಮಂಟಪವಾಗಿದ್ದ ವಿಶಾಲವಾದ ಆಲದ ಮರದ ಮೇಲೆ ಕಾಗೆ ಬಂದು ಕರ್ಕಶಸ್ವರದಿಂದ ಕೂಗಿತು. ಅದನ್ನೂ ಕೇಳಿ ಪಕ್ಷಿ ಪ್ರಧಾನರು ಒಬ್ಬೊಬ್ಬರು ಒಬ್ಬೊಬ್ಬರ ಮುಖ ನೋಡಿ ನಾವು ಮಾಡುವ ಕಾರ್ಯವಾದರೋ ಮಹಾಪ್ರಾರಂಭ. ಅದರಿಂದ ಶಕುನ ನಿಮಿತ್ತಗಳನ್ನು ನೋಡಿ ಮಾಡಬೇಕು. ಈ ವಾಯಸಸ್ವರ ದುಸ್ವರವಾಗಿದೆ, ಇದೂ ಪಕ್ಷಿಜಾತಿಯಾದುದರಿಂದ ಇದಕ್ಕೆ ತಿಳಿಸಬೇಕು ಎಂದು ಹತ್ತಿರಕ್ಕೆ ಕರೆದು ಕೌಶಿಕಪಟ್ಟಾಭಿಷೇಕದ ವಿಚಾರವಾಗಿ ವಿವರವಾಗಿ ತಿಳಿಸಲು ಕಾಗೆಯು ಪಕ್ಷಿಗಳ ಸಮೂಹಕ್ಕೆ ಹೀಗೆ ಹೇಳಿತು:’ ೩೧೬. ಶುಭಲಕ್ಷಣವಾದ ಪ್ರಭು ಮಂತ್ರೋತ್ಸಾಹ ಶಕ್ತಿಯುಕ್ತನೂ ಆದವನಿಗೆ ಪಕ್ಷಿ ಪ್ರಭುತ್ವವನ್ನೂ ನೀಡಬೇಕು. ವ|| ಅಲ್ಲದೆ ವನಜನಾಭನಿಗೆ ವಾಹನನಾಗಿರುವ ಗರುಡನ ವಂಶದ ಪಕ್ಷಿಗಳೂ ವನಜಾಸನನ ವಾಹನನಾಗಿರುವ ರಾಜಹಂಸಾನ್ವಯದ ಹಂಸ ಸಮಾಜವೂ ದೇವಾದೇವನಾದ ಮಹಾದೇವನ ಮಗನಾದವನೂ ತಾರಕನನ್ನು ಸೀಳಿದವನೂ ಅದ ಕುಮಾರನಿಗೆ ವಾಹನವಾಗಿದ್ದ ಮಯೂರ ವಂಶದ ಮಯೂರ ಸಮೂಹವೂ ರಘುಕುಲತಿಲಕನಾದ ರಾಮನ ಮನೋನಯನವಲ್ಲಭೆಯನ್ನೂ ಒಯ್ದು ರಾವಣನನ್ನು ಭಂಗಿಸಿದ ಜಟಾಯುವಂಶದ ಪಕ್ಷಿ ಪ್ರಧಾನರೂ, ಲೋಕೈಕನೇತ್ರನೂ ಕಮಲಸಖನೂ ಆದ ಆದಿತ್ಯನು ತಮ್ಮ ಪರಮಮಿತ್ರನೆಂಬ ಹೆಮ್ಮೆಯುಳ್ಳ ಚಕ್ರವಾಕ ಸಮೂಹವೂ ಸುರಾಸುರ ಸಮೂಹವು ಕಡೆದ ಕ್ಷೀರಸಾಗರದಲ್ಲಿ ಲಕ್ಷ್ಮಿಯೊಡನೆ ಹುಟ್ಟಿದ ಅಮೃತಕಿರಣನಾದ ಚಂದ್ರನ ಬೆಳುದಿಂಗಳನ್ನು ಕುಡಿದು ತೃಪ್ತರಾದ ಸುಂದರ ಚಕೋರ ಶ್ರೇಷ್ಟರೂ,  ಕೇಳಿದ ಕೂಡಲೇ ಸಮಸ್ತ ಶಾಸ್ತ್ರಗಳನ್ನು ಓದಬಲ್ಲ ಶುಕಶಾರಿಕಾ ಸಮೂಹವೂ ಮನ್ಮಥರಾಜನ ಮಹಾಪ್ರತೀಹಾರನ ಪದವಿಯಲ್ಲಿ ವಿರಾಜಿಸುವ ಕೋಗಿಲೆಗಳೂ, ದರ್ಶನಮಾತ್ರದಿಂದ ಶುಭವನ್ನಂಟುಮಾಡುವ  ಭಾರದ್ವಾಜ ಪಕ್ಷಿಗಳೂ ಸುಂದರಿಯರ ಕಡೆಗಣ್ಣಿನ  ಚಂಚಲತೆಗೆ ಹೋಲಿಕೆಗೆ ವರ್ಣನಾಯೋಗ್ಯವಾದ ಗವುಜಲ ಹಕ್ಕಿಗಳೂ, ರಾಜಕುಮಾರರು ಉಣ್ಣುವ ಅಮೃತಾಹಾರವನ್ನೂ ಪರೀಕ್ಷಿಸಲು ಯೋಗ್ಯತೆಯುಳ್ಳ ಜೀವಂಜೀವಕಸಮೂಹವೂ, ಮಹಾಸಮುದ್ರಕ್ಕೆ ಉಪದ್ರವವನ್ನು ಮಾಡಿದ ಟಿಟ್ಟಿಭಸಮೂಹವೂ, ಪಕ್ಷಿಪ್ರಪಂಚದಲ್ಲೇ ಪರಾಕ್ರಮದಲ್ಲಿಯೂ  ಸಾಹಸದಲ್ಲಿಯೂ ಹೆಚ್ಚು ಎನಿಸಿದ ಭೇರುಂಡಗಳೂ, ಪಕ್ಷಿಪ್ರಪಂಚದಲ್ಲಿ ಹುಟ್ಟಿಯೂ ಸೂರ್ಯಪುತ್ರರೆಂಬ ಮಹಿಮಾಸ್ಪದರೆನ್ನಿಸಿದ ದೀರ್ಘಾಯುಗಳಾದ ವಾಯಸಸಮುದಾಯವೂ, ಖಾಂಡವವನವನ್ನು ಸುಡಲು ಅರ್ಜುನನಿಗೆ ಉಪಕರಿಸಿ ಪಾಂಡವೋಪಾಕಾರಿಗಳಾಗಿಯೂ ಪ್ರಪಂಚದ ಜನರಿಗೆ ಶುಭಾಶುಭಾದಿ ಕಾರ‍್ಯಗಳನ್ನು  ಸ್ರಚಿಸುತ್ತಿರುವ ಪೋದೆಗೆಗಳೂ,  ಬೇಡನಿಗೆ ತನ್ನ ಪ್ರಾಣವನ್ನಿತ್ತು ಯಶಸ್ಸನ್ನು ಪಡೆದ ಕಪೋತಗಳೂ ಇರುತ್ತಿರಲು ೩೧೭. ದಿವಾಸಾಂಧನೂ ಅವಲಕ್ಷಣನೂ ಸತತಕ್ರೂನೂ ಬ್ರಾಹ್ಮಣ ವಂಶಕ್ಕೆ ಅಧಮನೂ ಅತಿದುರ್ಮುಖನೂ ಸತ್ಯತ್ಯಾಗ ಕಾರ್ಯೊಚಿತ ವ್ಯವಸಯೇತರನೂ ಆದ ಗೂಬೆರಾಜನಿಗೆ ನಿಮ್ಮಂತಹ ಬುದ್ದಿವಂತರು ಇದ್ದಕ್ಕಿಂದಂತೆಯೇ ವಿಚಾರಮಾಡದೆ ಪಕ್ಷಿಗಳ ಚಕ್ರವರ್ತಿತ್ವವವನ್ನು ನೀಡುವುದೇ? ೩೧೮. ಅವಿವೇಕಿಯೂ ಕ್ಷುದ್ರನೂ ಆದವನೂ ಅರಸನಾದಂದು ಲೋಕಕ್ಕೆಲ್ಲ ಉಪದ್ರವವುಂಟಾಗುವುದು. ಅಲ್ಲದೆ ಶ್ಲೋ|| ಕ್ಷುದ್ರನಾದ ಒಡೆಯನೊಡನೆ ವ್ಯವಹರಿಸುವವನಿಗೆ ಸುಖವಿಲ್ಲ ಎಂಬ ಕಥೆಯಾದೀತು ಎನ್ನಲು ಪಕ್ಷಿ ಸಮೂಹವು ಅದೇನೆಂದು ಕೇಳಲು ಕಾಗೆ ಹೇಳಿತು: