ಬೆಳೆದೊಱಗಿದ ಕೞವೆಯ ಕ-
ಯ್ಗಳಿನೊಪ್ಪುವ ತಿಳಿಗೊಳಂಗಳಿಂ ರಮ್ಯವನಾ-
ವಳಿಯಿಂ ಸೊಗಯಿಸುವುದು ಭೂ-
ತಳಮಂಡನಮೆನಿಸಿ ಮಳಯವಿಷಯಂ ಜಗದೊಳ್  ೩೧೯

ಆ ವಿಷಯದೊಳ್ ನಂಬಿನಾರಾಯಣಮೆಂಬ ಅಗ್ರಹಾರಮುಂಟು. ಅದಱೂಳ್ ನಾರಾಯಣಭಟ್ಟನೆಂಬನೋರ್ವ ಪಾರ್ವಂ ತೀರ್ಥಯಾತ್ರಾಪರನಾಗಿ ಗಂಗಾಸ್ನಾನಮುಮಂ ಕುರುಕ್ಷೇತ್ರದೊಳ್ ದಾನಮುಮಂ ಮಾಡುವೆನೆಂದು ವೇಣುದಂಡದೊಳ್ ನೇರಾಣಿಯ ಪೊನ್ನಂ ತೀವಿ ಪೆೞರದಱೆಯದಂತಾಗಿ ಮಾಡಿಕೊಂಡಾರ್ಗಂ ಪೇೞದರ್ದರಾತ್ರಿಯೊಳ್ ಮನೆಯಂ ಪೊಱಮಟ್ಟುತ್ತ ರಾಭಿಮುಖಮಾಗಿ ಬರ್ಪನ್ನಂ ಮತ್ತೊರ್ವಂ ಧೂರ್ತಶಿಖಾಮಣಿಯೆಂಬ ಪಾರ್ವಂ ಕಂಡೀತನ ಕೈಯೊಳೇನಾನುಂ ದ್ರವ್ಯಮಾಗದಿರದೆಂದು ಭಟ್ಟರೇ ! ನಿವೆತ್ತಲ್ ಪೋಪಿರೆನೆ ಗಂಗಾಸ್ನಾನಂಗೆಯ್ಯಲ್ ಪೋದಪ್ಪೆನೆಂದೊಡಾನುಂ ಬಂದಪ್ಪೆನೆಂದೊಡಾ ಪಾರ್ವಂ ನೆರಂಬಡೆದೆನೆಂದು ಕರಮೊಳ್ಳಿತ್ತೆಂದು ಬನ್ನಿಮೆಂದು ಇರ್ವರುಮನೇಕದೇಶಂಗಳಂ ಕಳೆದು ಚಂಪಾನಗರಮನೆಯ್ದೆವಂದಾ ಪೊೞಲಂ ಪೊಕ್ಕುಮೊರ್ವ ಪಾರ್ವನ ಮನೆಗೆ ಬಂದು ಸಂಧ್ಯಾವಂದನಂಗೆಯ್ದುಂಡು ಕುಳ್ಳಿರ್ಪುದುಮಾ ಗೃಹಸ್ಥನ ಪೆಂಡತಿ ಮುಖದೊಳ್ ಸೆಱಂಗನಿಕ್ಕಿಕೊಂಡು ಮಗಂಗೆ ಮೊಲೆಯೂಡುವುದಂ ಕಂಡು ದೇಶಾಂತರಿಗರಿದೇನೆಂದು ಬೆಸಗೊಂಡೊಡಾ ಮನೆಯ ಪರ್ವನಿಂತೆಂದಂ: ಎನ್ನ ಪೆಂಡತಿ ಪತಿವ್ರತೆ ಪರಪುರುಷನ ಮುಖಾವಳೋಕನಂಗೆಯ್ಯಳದುಕಾರಣದಿಂದೀ ಶಿಶು ಗಂಡುಗೂಸಪ್ಪುದಱೆಂ ನೋಡಿದೊಡೆ ದೋಷಮೆಂದು ತನ್ನ ಮುಖಮಂ ಮುಚ್ಚಿಕೊಂಡು ಮೊಲೆಯೂಡಿದಪಳೆಂದು ಪೇಳ್ವದುಂ ನಾರಾಯಣ ಭಟ್ಟಂ ವಿಸ್ಮಯಂಬಟ್ಟಿಂದಿನ ದಿವಸಮೀ ಚೋದ್ಯಮನಿಲ್ಲಿರ್ದು ನೋೞ್ಪನೆಂದಿರ್ಪನುಮಾ ಮನೆಯ ಪಾರ್ವನರಮನೆಗೆ ಪೋಗಿ ಪಿರಿದು ಪೊೞ್ತು ತಡೆದಿರಲಾ ಜೋಡೆ ತನ್ನ ಮನೆಯ ಪಸುಗಾವ ಗೋವನಂ ಪಿಡಿದು ಸ್ಮರತಕ್ರೀಡೆಯಾಡುವುದಂ ನಾರಾಯಣಭಟ್ಟಂ ಕಂಡಾ ಪಾಣ್ಬೆಯ ಡಂಭತನಕ್ಕೆ ಬೆಱಗಾಗಿ ಮಱುದಿನಮರ್ಧರಾತ್ರಿಯೊಳೆರ್ದು ಪಯಣಂಬೋಗಿ ನಿಶಾವಸಾನಸಮಯಯಮ ಪ್ಪಾಗಳ್,

ಮದವದ್ವನ್ಯಗಜೇಂದ್ರದಾನಮಲಿನೋದ್ಯದ್ಭೃಂಗಸಂಘಾತಸಂ-
ಪದೆಯಂ ಬಾಲಮೃಣಾಳಜಾಲಕಲಸತ್ಸ್ವಾದುಪ್ರಪುಷ್ಟೋತ್ಕರ
ಚ್ಛದೆಯಂ ತೀರನವೀನಚೂತ ಕುಸುಮವ್ರಾತಾಸವೋನ್ಮತ್ತಷ
ಟ್ಟದೆಯಂ ನರ್ಮದೆಯಂ ಮಹಾಹ್ರದೆಯನಾ ವಿಪ್ರಂ ಸಮಂತೆಯ್ದಿದಂ  ೩೨೦

ಅಂತೆಯ್ದಿವಂದಾ ಮಹಾನದಿಯೊಳ್ ಸ್ನಾನಂಗೆಯ್ಯಲೆಂದು ಭಟ್ಟಂ ನಿಲ್ವುದುಮಾ ಧೂರ್ತಶಿಖಾಮಣಿ ನಾರಾಯಣಭಟ್ಟಂಗೆ ನಂಬುಗೆಯನೆಂತು ಮಾೞ್ಪೆನೆಂದು ಚಿಂತಿಸುವ ಸಮಯದೊಳ್ ಪತ್ತಿ ಬಂದುದೊಂದು ಪುಲ್ಲಂ ಕಂಡು ಭಟ್ಟರ್ಗೆ ತೋಱೆ ನೊಡಿರೆ ! ಪಾಪ ಕರ್ಮನೆಂ, ಪರದ್ರವ್ಯಾಪಹರಣಂಗೆಯ್ದನೆನ್ನಂತು ನಿಕೃಷ್ಟನಾವನುಮಿಲ್ಲೆನೆ ಭಟ್ಟರೆಂದರಿದಂ ನೀವಱೆತು ತಂದುದಿಲ್ಲದೊಂದು ಪುಲ್ ತಲೆಯೊಳ್ ಪತ್ತಿ ಬಂದುದರ್ಕೇನುಂ ದೋಷಮಿಲ್ಲೆಂದೊಡಾ ದೂರ್ತಂ ಮತ್ತಮಿಂತೆಂದಂ:

ಈ ಪುಲ್ಲದೆಂತು ಬಂದೊಡ-
ಮೇ ಪಡೆಮಾತೆನಗೆ ದೋಷಮಕ್ಕುಮಮೊಘಂ
ಪಾಪಕ್ಕಂಜುವೆನದಱೆಂ-
ದೀ ಪುಲ್ಲಂ ಮತ್ತಮಲ್ಲಿ ಬಿಸುಟಾಂ ಬರ್ಪೆಂ  ೩೨೧

ಎಂದು ನೀವೀ ಮುಂದಣೂರೊಳೊಂದು ದಿವಸಮಿರಿಮೆಂದಾ ಪುಲ್ಲಂ ಪಿಡಿದು ಮಗುೞ್ದು ಕಿಱ*ದಂತರಂ ಬಂದು ಪುಲ್ಲನಲ್ಲಿಯೆ ಬಿಸುಟು ಕಿಱ*ದು ಪೊೞ್ತುಗಳೆದು ಮಗುೞ*ರುಳರೆಜಾವ ಮಾದಾಗಳ್ ಭಟ್ಟರಿರ್ದೆಡೆಯನಱಸುತ್ತುಂ ಬಂದು ಕಂಡು ಪಥಶ್ರಮದೊಳಂ ಕ್ಷುಧೆಯೊಳಂ ಕರಂ ಬೞಲ್ದೆನೆನೆ ನಾರಾಯಣಭಟ್ಟನಿಂತೆಂದಂ: ನೀವಿಂತಿರ್ದೊಡೆ ಪೊತ್ತುಪೋದಪುದು ಬೞ*ಕ್ಕೆ ಭೈಕ್ಷಮನಿಕ್ಕುವರಿಲ್ಲ ಈಗಳೆ ಪೋಗಿಮೆನೆ  ದೂರ್ತನೆಂದನೀ ಪೊೞ್ತು ಪೋದೊಡೆ ನಾಯ್ಗಳ್ ತಿಂಗುಮೆಂತು ಪೋಪೆನೆನೆ ಭಟ್ಟನಾ ದುಷ್ಟನಂ ಶಿಷ್ಟನೆಂದು ಬಗೆದು ತನ್ನ ಕಯ್ಯ ಪೊನ್ನ ಕೋಲಂ ಪಿಡಿದು ಪೋಗಿ ಕಿಡಿಸದೆ  ಕೊಂಡು ಬೇಗಂ ಬಾ ಪೊಗೆಂಬುದುಮಂತೆಗೆಯ್ವೆನೆಂದಾ ಧೂರ್ತಶಿಖಾಮಣಿ ಸ್ವಾರ್ಥ ಸಿದ್ಧಿಯಂ ಮಾಡಿಕೊಂಡು ಸ್ವೇಚ್ಚೆಯೊಳೋಡಿಪೋದಂ. ಆ ಭಟ್ಟನಾತಂ ಬಂದಪನೆಂದಿರುಳೆಲ್ಲಂ ಜಾಗರಮಿರ್ದು ನೆಸಱ ಮೂಡೆ ನಾಡೆಯುಂ ಪೊೞ್ತರ್ದು ಎಂತುಂ ಬರವಂ ಕಾಣದೆ ಚಿಂತಾಕ್ರಾಂತನಾಗಿ ಕಿರಿದುಬೇಗಮನಿರ್ದು, ವಾಕ್ಯಂ || ಶ್ರೇಯಾಂಸಿ ಬಹುವಿಘ್ನಾನಿ ಟೀ|| ನಲ್ಮೆಗೆ ತಡೆಗಳು ಹೇರಳವಾಗಿಹುವು- ಎಂಬುದುಂಟೆಂದರ್ಥದಱಲಂ ಪತ್ತುವಿಟ್ಟು ಮತ್ತಂ ಸತ್ತ್ವಾವಲಂಬಿಯಾಗಿ ಪೋಗಿ ತೀರ್ಥಸ್ನಾನಾರ್ಥಂ ಬರ್ಪಿನಮೊಂದು ಮಹಾರಣ್ಯದ ಪುಣ್ಯತೀರ್ಥದ ತಡಿಯೊಳೊಂದು ಮಹಾಕಾಯನಪ್ಪ ಬಕಂ ಶಕುನಿಗಳ್ಗೆ ಧರ್ಮವ್ಯಾಖ್ಯಾನಂಗೆಯ್ದುದಂ ಮತ್ಸ್ಯಂಗಳ್ ಮೊದಲಾಗಿ ಜಲಚರಂಗಳುಂ ವಿವಿಧವಿಹಂಗಂಗಳುಂ ಕೇಳ್ವುದಂ ಕಂಡು ಭಟ್ಟನೀ ಚೋದ್ಯಮಂ ನೋೞ್ಪನೆಂದು ಅದರ ಕೆಲದೊಳ್ ಪರ್ವಿ ಕೊರ್ವಿ ಸುರ್ವುಗೊಂಡ ಮಾಧವಿಯ ಪೊದಱೊಳಡಂಗಿರ್ದು ನೋೞ್ಪದುಂ ಕಿಱ*ದುಂ ಬೇಗಕ್ಕೆ ಆ ಬಕಂ ವ್ಯಾಖ್ಯಾನಮುಂ ಮಾಣ್ದು ಇನ್ನಾಂ ನಿಯಮಂಗೆಯ್ದಪೆಂ ನೀವೆಲ್ಲ ಪೋಗಿಮೆನೆ ಪಕ್ಷಿಗಳೆಲ್ಲಂ ಒರ್ಮೆಯೆ ಪಾಱ* ಪೋದವು. ಜಲಚರಂಗಳೊಂದೊಂದೆ ಪೋಪಾಗಳ್ ಪಿಂದುಱ*ದ ಮತ್ಸ್ಯಮನೊಂದೊಂದಂ ಪಿಡಿದು ತಿಂದುದಂ ಭಟ್ಟಂ ಕಂಡು ಚೋದ್ಯಂಬಟ್ಟು ಅಲ್ಲಿಂ ತಳರ್ದು ಕೆಲವಾನುಂ ದಿವಸಕುಜ್ಜಯಿನಿಯನೆಯ್ದುವುದುಮಾ ಪೋಱವೊೞಲೊಳೊಂದು ನಂದನವನದೊಳಗೊರ್ವಂ ತಾಪಸರೂಪಧಾರಿಯಾಗಿ ತಪನತಾಪಕ್ಕೆ ಮೊಗಮನೊಡ್ಡಿ ನಾಲ್ಕುಂ ದೆಸೆಯೊಳಂ ಕಿಚ್ಚನೊಟ್ಟಿ ನಡುವೆ ನಿಂದಿರ್ದನಂ ಕಂಡು

೩೧೯. ಜಗತ್ತಿನಲ್ಲಿ ಮಲಯರಾಜ್ಯವು ಬೆಳೆದೊರಗಿದ ಕಳವೆಯ ಕಯ್ಗಳಿಂದಲೂ ತಿಳಿಗೊಳಗಳಿಂದಲೂ ರಮ್ಯ ವನಾವಳಿಗಳಿಂದಲೂ ಭೂತಳ ಮಂಡನವೆನಿಸಿ ಸೊಗಯಿಸುತ್ತಿತ್ತು. ವ ||  ಆ ರಾಜ್ಯದಲ್ಲಿ ನಂಬಿನಾರಾಯಣ ಎಂಬ ಅಗ್ರಹಾರವುಂಟು. ಅಲ್ಲಿ ನಾರಾಯಣಭಟ್ಟನೆಂಬ ಒಬ್ಬ ಬ್ರಾಹ್ಮಣನು ತೀರ್ಥಯಾತ್ರಾಪರನಾಗಿ ಗಂಗಾಸ್ನಾನವನ್ನೂ ಕುರುಕ್ಷೇತ್ರದಲ್ಲಿ ದಾನವನ್ನೂ ಮಾಡುವೆನೆಂದು ಬಿದಿರಿನ ದಂಡದಲ್ಲಿ ಅಪರಂಜಿ ಚಿನ್ನವನ್ನು ತುಂಬಿ ಬೇರೆಯವರಿಗೆ ತಿಳಿಯದಂತೆ ಬಚ್ಚಿಟ್ಟುಕೊಂಡು ಯಾರಿಗೂ ತಿಳಿಸದೆ ಅರ್ಧರಾತ್ರಿಯ ಹೊತ್ತು ಮನೆಯಿಂದ ಹೊರಟು ಉತ್ತರಾಭಿಮುಖವಾಗಿ ಬರುತ್ತಿದ್ದನು. ಮತ್ತೊಬ್ಬ ಧೂರ್ತಶಿಖಾಮಣಿಯೆಂಬ ಬ್ರಾಹ್ಮಣನು ಕಂಡು ಈತನ ಕೈಯಲ್ಲಿ ಏನಾದರೂ ದ್ರವ್ಯವಿರದೆ ಇರಲಿಕ್ಕಿಲ್ಲ ಎಂದು ಭಾವಿಸಿ, ಭಟ್ಟರೇ ನೀವು ಎತ್ತ ಹೋಗುವಿರಿ ಎನ್ನಲು ಗಂಗಾಸ್ನಾನ ಮಾಡಲು ಹೋಗುವೆನು ಎಂದನು. ನಾನೂ ಬರುವೆನು ಎನ್ನಲು ಆ ಬ್ರಾಹ್ಮಣನು ನನಗೊಬ್ಬ ಸಹಾಯಕನಾದನು ಒಳ್ಳೆಯದಾಯಿತು ಎಂದು ಭಾವಿ ಬನ್ನಿ ಎಂದನು. ಇಬ್ಬರೂ ಅನೇಕ ದೇಶಗಳನ್ನು ದಾಟಿ ಚಂಪಾನಗರವನ್ನು ಸೇರಿ ಆ ಪಟ್ಟಣದ ಒಬ್ಬ ಬ್ರಾಹ್ಮಣನ  ಮನೆಗೆ ಬಂದು ಸಂಧ್ಯಾವಂದನೆಯನ್ನು ಮಾಡಿ ಉಂಡು ಕುಳಿತುಕೊಂಡಿದ್ದನು. ಆಗ ಆ ಗೃಹಸ್ಥನ ಹೆಂಡತಿ ಮುಖದ ಮೇಲೆ ಸೆರಗು ಹಾಕಿಕೊಂಡು ಮಗನಿಗೆ ಮೊಲೆಯೂಡುವುದನ್ನು ಕಂಡು ದೇಶಾಂತರಿಗರು ಇದೇನು ಎಂದು ಕೇಳಲು ಆ ಮನೆಯ ಬ್ರಾಹ್ಮಣನು ಹೀಗೆಂದನು. ನನ್ನ ಹೆಂಡತಿ ಪತಿವ್ರತೆ, ಪರಪುರುಷರ ಮುಖವನ್ನು ನೋಡಲಾರಳು. ಅದರಿಂದ ಶಿಶು ಗಂಡುಮಗುವಾದುದರಿಂದ ನೋಡಿದರೆ ದೋಷವೆಂದು ತನ್ನ ಮುಖವನ್ನು ಮುಚ್ಚಿಕೊಂಡು ಮೊಲೆಕೊಡುತ್ತಿರುವಳು ಎಂದು ಹೇಳಿದನು. ನಾರಾಯಣಭಟ್ಟನು ವಿಸ್ಮಿತನಾಗಿ ಇಂದು ಈ ಚೋದ್ಯವನ್ನೂ ಇಲ್ಲಿದ್ದು ನೋಡುವೆನು ಎಂದಿರಲು ಅ ಮನೆಯ ಬ್ರಾಹ್ಮಣನು ಅರಮನೆಗೆ ಹೋಗಿ ಸ್ವಲ್ಪ ಹೊತ್ತಾಗಲು ಆ ಜಾರೆ ತನ್ನ ಮನೆಯ ಹಸುಗಳನ್ನು ಕಾಯುವ ಗೋವಳನನ್ನು ಹಿಡಿದು ಸುರತಕ್ರೀಡೆಯಾಡುವುದನ್ನು ಕಂಡು ನಾರಾಯಣಭಟ್ಟನು ಆ ಹಾದರಗಿತ್ತಿಯ ಢಂಭತನಕ್ಕೆ ಬೆರಗಾಗಿ ಮರುದಿನ ಅರ್ಧರಾತ್ರಿಯಲ್ಲೆದ್ದು ಪ್ರಯಾಣಮಾಡಿ ಮುಂಜಾನೆಯ ಸಮಯವಾಗಲು ೩೨೦. ಮದಿಸಿದ ಕಾಡಾನೆಗಳ ಮದಜಲಕ್ಕೆ ಮುತ್ತುವ ಭೃಂಗಗಳ ಸಮೂಹದಿಂದ ಸಂಪನ್ನಳಾಗಿಯೂ ಎಳೆಯ ತಾವರೆ ದಂಟಿನ ಸಮೂಹದಿಂದ ಶೋಭಿಸುವ ಮಧುರಮ್ಯ ಪುಷ್ಪಗಳಿಂದ ಕಾಂತಿಯುಕ್ತಳಾಗಿಯೂ ದಡದಲ್ಲಿಯ  ಹೊಸ ಮಾವಿನ ಹೂವಿನ ಮಧುವಿನಿಂದ ಉನ್ಮತ್ತವಾದ ತುಂಬಿಗಳಿಂದ ಕೂಡಿದವಳೂ ಮಹಾಸರೋವರಗಳಿಂದ ಕೂಡಿದವಳೂ ಆದ ನರ್ಮದಾನದಿಯನ್ನೂ ಆ ವಿಪ್ರನು ಸೇರಿದನು. ವ || ಅ ಮಹಾನದಿಯಲ್ಲಿ ಸ್ನಾನಮಾಡಬೇಕೆಂದು ನಿಲ್ಲಲು ಆ ದೂರ್ತಶಿಖಾಮಣಿಯು ನಾರಾಯಣಭಟ್ಟನಿಗೆ ನಂಬಿಕೆಯನ್ನು ಹೇಗೆ ಹುಟ್ಟಿಸಲಿ ಎಂದು  ಚಿಂತಿಸುವ ಸಮಯದಲ್ಲಿ ಅಲ್ಲೆ ಹತ್ತಿರಕ್ಕೆ ಬಳಿದು ಬಂದ ಹುಲ್ಲನ್ನು ಕಂಡು ಭಟ್ಟರಿಗೆ ತೋರಿಸಿ ನೋಡಿ, ನಾನು ಪಾಪಕರ್ಮಿ, ಪರದ್ರವ್ಯಾಪಹರಣ ಮಾಡಿದೆ. ನನ್ನಷ್ಟು ನಿಕೃಷ್ಟನು ಯಾರೂ ಇಲ್ಲ ಎನ್ನಲು ಭಟ್ಟರು ಹೀಗೆಂದರು: ಇದನ್ನು ನೀವು ಅರಿತು ತಂದುದಲ್ಲ : ಇಲ್ಲಿ ಇದೊಂದು ಹುಲ್ಲ ತಲೆಯ ಮೇಲೆ ಏರಿ ಬಂದುದಕ್ಕೆ ಏನೂ ದೋಷವಿಲ್ಲ ಎನ್ನಲು ಆ ಧೂರ್ತನು ಮತ್ತೂ ಹೀಗೆಂದನು: ೩೨೧: ಈ ಹುಲ್ಲು ನನ್ನ ಮೇಲೆ ಹೇಗೆ ಬಂದರೆ ತಾನೆ ಏನು, ನನಗೆ ದೋಷ ತಪ್ಪಿದುದಲ್ಲ. ಪಾಪಕ್ಕೆ ನಾನು ಅಚಿಜುವೆನು. ಅದರಿಂದ ಈ ಹುಲ್ಲನ್ನು ನಾನು ಮತ್ತೊಮ್ಮೆ ಅಲ್ಲಿಯೇ ಬಿಸುಟು ಬರುವೆನು, ವ ||  ನೀವು ಈ ಮುಂದಿನ ಊರಿನಲ್ಲಿ ಒಂದು ದಿವಸ ಇರಿ ಎಂದು ಆ ಹುಲ್ಲನ್ನು ಹಿಡಿದು ಸ್ವಲ್ಪ ದೂರ ಬಂದು ಹುಲ್ಲನ್ನು ಅಲ್ಲಿಯೇ ಬಿಸುಟು ಸ್ವಲ್ಪ ಹೊತ್ತು ಬಿಟ್ಟು ಪುನಃ ರಾತ್ರಿ ಅರ್ಧಜಾವವಾದಾಗ ಭಟ್ಟರಿದ್ದ ಸ್ಥಳವನ್ನು ಅರಸುತ್ತ ಬಂದು ಕಂಡು ಮಾರ್ಗಾಯಾಸದಿಂದಲೂ ಹಸಿವೆಯಿಮದಲೂ ತುಂಬ ಬಳಲಿರುವೆನು ಎನಲು ನಾರಾಯಣಭಟ್ಟನು ಹಿಗೆಂದನು: ನೀವು ಹೀಗೆಯೇ ಇದ್ದರೆ ಹೊತ್ತು ಹೋಗುವುದು: ಬಳಿಕ ಭಿಕ್ಷೆಯನ್ನು ಹಾಕುವವರಿಲ್ಲ: ಈಗಲೇ ಹೋಗಿ. ಅದಕ್ಕೆ ಆ ಧೂರ್ತನು ಈ ಹೊತ್ತು ಹೋದರೆ ನಾಯಿಗಳು ಕಚ್ಚುವವು: ಹೇಗೆ ಹೋಗಲಿ ಎನ್ನಲು, ಭಟ್ಟನು ಆ ದುಷ್ಟನನ್ನು  ಶಿಷ್ಟನೆಂದೇ ಬಗಿದು ತನ್ನ ಕಯ್ಯ ಹೊನ್ನಕೋಲನ್ನು ಹಿಡಿದುಕೊಂಡು ಹೋಗಿ ಹಾಳು ಮಾಡದೆ ತೆಗೆದುಕೊಂಡು ಬಾ, ಹೋಗು ಎನ್ನಲು ಹಾಗೆಯೇ ಅಗಲಿ ಎಂದು ಆ ಧೂರ್ತಶಿಖಾಮಣಿ ಸ್ವಾರ್ಥಸಿದ್ಧಿಯನ್ನು ಮಾಡಿಕೊಂಡು ಸ್ವೇಚ್ಚೆಯಿಂದ ಓಡಿಹೋದನು. ಆ ಭಟ್ಟನು ಆತನು ಬರುತ್ತಾನೆ ಎಂದು ಆ ರಾತ್ರಿಯೆಲ್ಲ ಎಚ್ಚರವಾಗಿದ್ದು ಹೊತ್ತು ಮೂಡಿದ ಮೇಲೂ ಸ್ವಲ್ಪ ಕಾಲವಿದ್ದು ಎಷ್ಟ ಹೊತ್ತಾದರೂ ಅವನನ್ನು ಕಾಣದೆ ಚಿಂತಕ್ರಾಂತನಾದನು.  ವಾ || ಶ್ರೇಯಸ್ಸಿಗೆ ವಿಘ್ನಗಳು ಬಹಳ ಎಂದು ಹೇಳುತ್ತಾರೆ. ಹಣದ ದುಃಖವನ್ನು ಪರಿಹರಿಸಿಕೊಂಡು ಸತ್ವಾವಲಂಬಿಯಾಗಿ ಹೊಗಿ ತೀರ್ಥಸ್ನಾನಾರ್ಥವಾಗಿ ಬರುತ್ತಿದ್ದನು. ಅಲ್ಲಿ ಒಂದು ಮಹಾರಣ್ಯದ  ಪುಣ್ಯತೀರ್ಥದ ತಡಿಯಲ್ಲಿ ಒಂದು ಮಹಾಕಾಯಕದ ಬಕನು ಶಕುನಿಗಳಿಗೆ ಧರ್ಮವ್ಯಾಖ್ಯಾನ ಮಾಡುತ್ತಿದ್ದುದ್ದನ್ನು ಮತ್ಸ್ಯಗಳು ಜಲಚರಗಳೂ  ವಿವಿಧ ಪಕ್ಷಿಗಳೂ ಕೇಳುತ್ತಿದ್ದುದನ್ನು ಕಂಡು ಭಟ್ಟನು ಈ ಚೋದ್ಯವನ್ನೂ  ನೋಡುವೆನೆಂದು ಅದರ ಕೆಲದಲ್ಲಿದ್ದ ಹಬ್ಬಿ ಕೊಬ್ಬಿ ಹುಲುಸಾಗಿ ಬೆಳದ ಮಾಧವಿಯ ಹೊದರಿನಲ್ಲಿ ಅಡಗಿದ್ದು ನೋಡುತ್ತಿದ್ದನು. ಸ್ವಲ್ಪ ಸಮಯದಲ್ಲಿ ಆ ಬಕನು ವ್ಯಾಖ್ಯಾನವನ್ನು ಮುಗಿಸಿ ಇನ್ನು ನಾನು ನಿಯಮವನ್ನು ಅಚರಿಸುವೆನು. ನಿವೆಲ್ಲರೂ ಹೊಗಿರಿ ಎನ್ನಲೂ ಹಕ್ಕಿಗಳೆಲ್ಲವೂ ಒಮ್ಮೇಯೇ ಹಾರಿಹೋದವು. ಜಲಚರಗಳು ಒಂದೊಂದಾಗಿ ಹೊಗುವಾಗ ಹಿಂದೆ ಉಳಿದ ಮತ್ಸ್ಯಗಳನ್ನೂ ಒಂದೊಂದಾಗಿ ಹಿಡಿದು ತಿನ್ನುತ್ತಿದ್ದನ್ನು ಕಂಡು ಭಟ್ಟನು ಚೋದ್ಯಪಟ್ಟನು. ಅಲ್ಲಿಂದ ಹೊರಟು ಭಟ್ಟನು ಕೆಲವು ದಿವಸಗಳಲ್ಲಿ ಉಜ್ಜಯಿನಿಯನ್ನು ತಲುಪಿದನು. ಆ ನಗರದ ಹೊರಭಾಗದಲ್ಲಿ ಒಂದು ನಂದನವನದಲ್ಲಿ ಒಬ್ಬ ತಾಪಸರೂಪಧಾರಿಯಾಗಿ  ಸೂರ್ಯನ ಬಿಸಿಲಿಗೆ ಮುಖವನ್ನೊಡ್ಡಿ ನಾಲ್ಕು ದಿಕ್ಕಿನಲ್ಲಿಯೂ ಕಿಚ್ಚನ್ನು ಒಟ್ಟಿ ನಡುವೆ

ಇದು ಕೌತುಕಮಾಗಲೆ ವೇ-
ೞ್ಪುದು ನೋಡುವೆನಿದುಮನೆಂದು ತದ್ವಿಪ್ರಂ ನಿ-
ಲ್ವುದು ಮಪರಗಿರಿಯನೆಯ್ದಿದ-
ನದಿತಿಪ್ರಿಯಪುತ್ರನಬ್ಜಮಿತ್ರಂ ಮಿತ್ರಂ  ೩೨೨

ಅಂತಾದಿತ್ಯನಪರಗಿರಿಯನೈದುವುದುಂ ಕವಿದ ಕೞ್ತಯೊಳಾ ಕೃತಕ ತಾಪಸಂ ತಪಮಂ ಸಂಹರಿಸಿ ನಿಲ್ವದುಂ ಮತ್ತಮೊರ್ವನುತ್ತರಸಾಧಕನಾತಂಗುಡಲುಂ ತುಡಲುಂ ಪೊದೆಯಲುಂ ತಂದುಕೊಟ್ಟು ಕನ್ನದ ಮುಟ್ಟುಗಳಂ ತಂದೆನೆಂದು ಪೇೞ್ವದುಂ ಕರಂ ಲೇಸಾಯ್ತು ನಡೆಯೆಂದಿರ್ವರುಂ ಪೋಗಿ ರಾಜಭವನಮಂ ಪೊಕ್ಕು ಕನ್ನಮನಿಕ್ಕಿ ಭಂಡಾರಮಂ ಕಳ್ದು ಪೊಱಮಡುವಾಗಳ್ ಕಾಪಿನವರ್ ಕಂಡು ಕಳಕುಳಂಗೆಯ್ಯೆ ತಳಾಱರ್ ಕೇಳ್ದು ಪರಿತಂದು ಬಟ್ಟೆಗಳೆಲ್ಲಮಂ ಕಟ್ಟಿಮೆಂದು ಪೇೞ್ವುದುಮಾ ಕಳ್ಳರ್ ಕೇಳ್ಧು ಪೊನ್ನ ಪೊಱೆಯೊಳೆ ಪೋಗಲಿಂಬಿಲ್ಲದೆ ನಂದನವನಕ್ಕೆ ಬಂದು ತನ್ನ ತಂದ ಪೊನ್ನ ಪುಡಿಕೆಯುಮನುೞ*ಯುಮಂ ಬಳಪಮುಮಂ ಅಲ್ಲಿ ಪಟ್ಟಿರ್ದ ಭಟ್ಟನ ಮುಂದೆ ತಂದಿಕ್ಕಿ ತನ್ನ ಮುನ್ನಿನ ತಪೋರೂಪದೊಳಿರ್ದಂ ಅನ್ನೆಗಂ ತಳಾಱರ್ ಪರಿತಂದು ನಿಮ್ಮಡಿ ನಿಮ್ಮತ್ತಲ್ ಪೆಱರ್ ಮಾನಸರ್ ಬಂದರೊಳರೆ ಪೇೞ*ಮೆನೆ ತಸ್ಕರತಾಪಸನಾ ಮರದಡಿಯೊಳೊರ್ಬಂ ಬಂದಿರ್ಪನೆಂದು ಸನ್ನೆಯಿಂ ಪೇೞ್ವದುಮವರ್ ಪರಿತಂದು ನೋಡಿ ಪಟ್ಟಿರ್ದ ಭಟ್ಟನ ಮುಂದಿರ್ದ ಭಂಡಾರದ ಪುಡಿಕೆಗಳುಮಂ ಕನ್ನದ ಮುಟ್ಟುಗಳುಮಂ ಕಂಡವಂ ಕೊಂಡಾ ಪಾರ್ವನ ತಲೆಯೊಳಿಟ್ಟರಸಂಗೆ ತಂದೊಪ್ಪಿಸುವುದುಮರಸನಾ ಭಟ್ಟನಂ ನೆಟ್ಟನೆ ಕಳ್ಳನೆಂದೆ ಬಗೆದೀ ದುಷ್ಟಂಗೆ ತಕ್ಕುದಂ ಮಾಡಿಮೆನೆ ನಾರಾಯಣಭಟ್ಟನಿಂತೆಂದಂ :

ನಿಂತುಕೊಂಡಿರುವವನನ್ನು ಕಂಡನು. ೩೨೨. ಇದು ಕೌತುಕವಾಗಿರಲೇ ಬೇಕು ಇದನ್ನೂ ನೋಡುವೆನು ಎಂದು ಆ ವಿಪ್ರನು ನಿಲ್ಲಲು ಸೂರ್ಯಸ್ತಮಾನವಾಯಿತು. ವ || ಆಗ ಕವಿದ ಕತ್ತಲೆಯಲ್ಲಿ ಆ ಕೃತಕತಾಪಸನು ತನ್ನ ತಪಸ್ಸನ್ನು ನಿಲ್ಲಿಸಲು ಮತ್ತೊಬ್ಬ ಉತ್ತರಸಾಧಕನು ಆತನಿಗೆ ಉಡಲೂ ತೊಡಲೂ ಹೊದೆಯಲೂ ತಂದುಕೊಟ್ಟು ಕನ್ನ ಹಾಕುವ ಸಾಧನಗಳನ್ನು ತಂದೆನೆಂದು ಹೇಳಿದನು. ಅದಕ್ಕೆ ಅವನು ಬಹಳ ಚೆನ್ನಾಯಿತು, ನಡೆ ಎಂದು ಇಬ್ಬರು ಹೋಗಿ ರಾಜಭವನವನ್ನು ಹೊಕ್ಕು ಕನ್ನವನ್ನು ಹಾಕಿ ಭಂಡಾರವನ್ನು ಕದ್ದು ಹೊರಹೊರಡಲು ಕಾವಲುಗಾರರು ಕಂಡು ಗಲಾಟೆ ಎಬ್ಬಿಸಿದರು. ತಳವಾರರು ಆ ರಾದ್ಧಾಂತವನ್ನು ಕೇಳಿ ಓಡಿಬಂದು ಬಟ್ಟೆಗಳನ್ನೆಲ್ಲ ಕಟ್ಟಿ ಎಂದು ಹೇಳಲು ಆ ಕಳ್ಳರು ಕೇಳಿ ಹೊನ್ನ ಹೊರೆಯನ್ನು ಏನು ಮಾಡುವುದೆಂದು ತೋಚದೆ ನಂದನವನಕ್ಕೆ ಬಂದು ತಾವು ತಂದ ಪೆಟ್ಟಿಗೆಯನ್ನೂ ಉಳಿಯನ್ನೂ ಬಳಪವನ್ನೂ ಅಲ್ಲಿ ಮಲಗಿದ್ದ ಭಟ್ಟನ ಮುಂದೆ ತಂದು ಹಾಕಿ ತನ್ನ ಮೊದಲಿನ ತಪೋರೂಪದಲ್ಲಿದ್ದನು. ಅಷ್ಟರಲ್ಲಿ ತಳವಾರರು ಓಡೋಡಿ ಬಂದು ಪೂಜ್ಯರೇ, ನಿಮ್ಮಲ್ಲಿಗೆ ಬೇರೆ ಯಾರಾದರೂ ಬಂದವರಿರುವರೇ ಹೇಳಿ ಎನ್ನಲು ಆ ಕಳ್ಳ ಋಷಿಯು ಆ ಮರದಡಿಯಲ್ಲಿ ಒಬ್ಬನು ಬಂದಿರುವನು ಎಂದು ಸನ್ನೆಯಿಂದ ಹೇಳಿದನು. ಅವರು ಓಡಿ ಬಂದು ನೋಡಿ ಮಲಗಿದ್ದ ಭಟ್ಟನ ಮುಂದಿದ್ದ ಭಂಡಾರದ ಪೆಟ್ಟಿಗೆಗಳನ್ನೂ ಕನ್ನ ಹಾಕುವ ಸಾಧನಗಳನ್ನೂ ಕಂಡು ಅವನ್ನು ಕದ್ದುಕೊಂಡು ಬಂದ ಆ ಹಾರುವನ ತಲೆಯ ಮೇಲೆ ಹೊರಿಸಿ ಅರಸನಿಗೆ ತಂದು ಒಪ್ಪಿಸಿದರು. ಅರಸನು ಆ ಭಟ್ಟನನ್ನು ನೇರವಾಗಿ  ಕಳ್ಳನೆಂದೇ ಬಗೆದು ಈ ದುಷ್ಟನಿಗೆ ತಕ್ಕುದನ್ನು ಮಾಡಿ ಎನ್ನಲು ನಾರಾಯಣಭಟ್ಟನು ಹೀಗೆಂದನು;

ಶ್ಲೋ||  ಬಾಲ ಚುಂಬಿತನಾರೀ ಚ ತೃಣಚೋರಶ್ಚ ಬ್ರಾಹ್ಮಣಃ
ಧರ್ಮಂ ಕರೋತಿ ಶಕುನಿಃ ತಾಪಸೋ ನಾಸ್ತಿ ಸಂಶಯಃ ||೧೬೦||

ಎಂದೊಡರಸನದೆಂತೆಂದು ಬೆಸಗೊಳೆ ತತ್ಪ್ರಪಂಚಮನರಸಂಗೆ ಭಟ್ಟಂ ಸವಿಸ್ತರಂ ಪೇೞ್ವುದುಮರ ಸನಾ ಕೃತಕತಪೋಧಾರಿಯ ಗುಹೆಯಂ ಶೋಸೆ ಮುನ್ನ ತನ್ನ ಪೊೞಲೊಳ್ ಪೋದ ಪಲವು ವಸ್ತುಗಳಂ ಸನ್ಯಂಗವೆರಸಿ ಕಂಡಾ ತಸ್ಕರತಪಸ್ವಿಗೆ ತಕ್ಕುದಂ ಮಾಡಿ ನಾರಾಯಣಭಟ್ಟಂಗೆ ಪಿರಿದಪ್ಪರ್ಥಮಂ ಕೊಟ್ಟು ಕಳುಪಿದಂ, ಅದು ಕಾರಣದಿಂ.

ಶ್ಲೋ|| ಅತ್ಯಾಚಾರಮನಾಚಾರಮತಿನಿಂದ್ಯಮತಿಸ್ತುತಿಃ
ಅತಿಶೌಚಮಶೌಚಂ ವಾ ಷಡ್ವಿಧಂ ಧೂರ್ತಲಕ್ಷಣಂ  ||೧೬೧||

ಟೀ|| ಅತಿ ಅಚಾರಮುಂ ಅಂತೆ ಅತಿ ಅನಾಚಾರಮುಂ ಅತಿನಿಂದೆಯುಮತಿಸ್ತುತಿಯುಂ ಅತಿಶೌಚಮುಂ ಶೌಚಮಿಲ್ಲದಿರ್ಪುದುಂ ಈ ಆಱು ಗುಣಂಗಳುಂ ಧೂರ್ತಂಗೆ ಲಕ್ಷಣವು ಎಂಬುದು ನೀತಿಯುಂಟು. ಈ ಪುಲಿಯುಮತ್ಯಾಚಾರಮಾಗಿರ್ದುದು. ಇದಱ ಬಲೆಯೋಳ್ ಸಿಲ್ಕಲ್ವೇಡ ಪೆಱತೊಂದೆಡೆಗೆ ಪೋಪಂ ನಡೆಯೆನೆ ಮೊಲನಿಂತೆಂದುದು : ಇಂತಪ್ಪುಪಶಮಮನುಳ್ಳ ತಪಸ್ವಿ ನಮಗೆ ತಪ್ಪಲಱ*ಯಂ, ಕೞ*ಯೆ, ಗಳಪದಿರ್ ನಡೆಯೆನೆ ಕಪಿಂಜರನದರ್ಕಂಜಿ ನಿನಗಾದುಪಹತಿಯೆನಗಾದಪುದು ನಡೆಯೆಂದೆರಡುಂ ಆ ಕಪಟತಾಪಸರೂಪಧಾರಿಯಪ್ಪ ದ್ವೀಪಿಯ ಸಮೀಪಕ್ಕೆ ಬಂದು ಪೊಡೆವಟ್ಟು ನಿಮ್ಮಡಿ ನಿಮ್ಮಲ್ಲಿ ವಿಚಾರಂಗೆಯ್ಯಲ್ ಬಂದೆವೆಮ್ಮಂ ವಿಚಾರಿಸಲ್ವೇೞ್ಕು

ಬಾಲ ಚುಂಬಿತ ನಾರೀ ಚ ತೃಣಚೋರಶ್ಚ ಬ್ರಾಹ್ಮಣಃ
ಧರ್ಮಂ ಕರೋತಿ ಶಕುನಿಃ ತಾಪಸೋ ನಾಸ್ತಿ ಸಂಶಯಃ  ||

ವ|| ಅದಕ್ಕೆ ಅರಸನು ಅದೇನು ಎಂದು ವಿಚಾರಿಸಲು ಆ ಪ್ರಪಂಚವನ್ನೆಲ್ಲ ಭಟ್ಟನು ಸವಿವರವಾಗಿ ಹೇಳಲು ಅರಸನು ಆ ಕೃತಕತಪೋಧಾರಿಯ ಗುಹೆಯನ್ನು ಶೋಸಲು ಹಿಂದೆ ತನ್ನ ಪಟ್ಟಣದಲ್ಲಿ ಕಳುವಾದ ಹಲವು ವಸ್ತುಗಳನ್ನು ಕನ್ನ ಹಾಕುವ ಸಾಧನಗಳೊಡನೆ ಕಂಡು ಆ ಕಳ್ಳ ತಪಸ್ವಿಗೆ ತಕ್ಕದನ್ನು ಮಾಡಿ ನಾರಾಯಣಭಟ್ಟನಿಗೆ ಅತಿಶಯ ಐಶ್ವರ್ಯವನ್ನು ಕೊಟ್ಟು ಕಳುಹಿಸಿದನು. ಅದರಿಂದ, ಶ್ಲೋ|| ಅತ್ಯಾಚಾರವೆಸಗುವವನೂ, ಅನಾಚಾರದಲ್ಲಿ ನಿರತನಾಗಿರುವವನೂ, ಅತಿ ನಿಂದೀಸುವವನೂ, ಅತಿಸ್ತುತಿ ಮಾಡುವವನೂ, ಅತಿಶುಚಿಯಾಗಿರುವವನೂ ಈ ಆರು ವಿಧಗಳು ಧೂರ್ತರ ಲಕ್ಷಣಗಳಾಗಿವೆ ಎಂಬ ನೀತಿ ಇದೆ. ಈ ಹುಲಿಯೂ ಅತ್ಯಾಚಾರದಲ್ಲಿ ನಿರತವಾಗಿರುವುದು; ಇದರ ಬಲೆಗೆ ಸಿಕ್ಕಬೇಡ ; ಬೇರೊಂದು ಕಡೆಗೆ ಹೋಗೋಣ ನಡೆ ಎನ್ನಲು ಮೊಲವು ಹೀಗೆಂದಿತು: ಇಂತಹ ಉಪಶಮವುಳ್ಳ ತಪಸ್ವಿ ನಮಗೆ ಕೇಡನ್ನು ಮಾಡನು. ಅಂದಮೇಲೆ ಗಳಹಬೇಡ, ನಡೆಯೆನ್ನಲು ಕಪಿಂಜರನು ಅದಕ್ಕಂಜಿ ನಿನಗೆ ಆಗುವ ಕೇಡು ನನಗೂ ಸಂಭವಿಸುವುದು, ನಡೆ ಎಂದು ಎರಡೂ ಆ ಕಪಟ ತಾಪಸರೂಪಧಾರಿಯಾದ ದ್ವೀಪಿಯ ಸಮೀಪಕ್ಕೆ ಬಂದು ನಮಸ್ಕರಿಸಿದುವು. ಪೂಜ್ಯರೇ, ನಿಮ್ಮೊಡನೆ ವಿಚಾರಮಾಡಲು ಬಂದೆವು. ನಮ್ಮನ್ನು ವಿಚಾರಿಸಿಕೊಳ್ಳಬೇಕು ಎಂದು ಆಗ್ರಹಮಾಡಲು ನನ್ನ ನಿತ್ಯ ನಿಯಮಕ್ಕೆ ವಿಘ್ನಮಾಡದೆ ಬೇರೆಡೆಗೆ ಹೋಗಿ ಎನ್ನಲು ಅವುಗಳಿಗೆ ನಂಬಿಕೆ ಹುಟ್ಟಿತು. ಪೂಜ್ಯರೇ, ನೀವೇ ವಿಚಾರಿಸಿಕೊಳ್ಳಬೇಕು ಎಂದು ಪುನಃ ಬಿನ್ನಯಿಸಲು ದ್ವೀಪಿ ಅದಕ್ಕೆ ಒಪ್ಪಿ ಸಾವಧಾನವಾಗಿ ಮೆಂದಾಗ್ರಹಂಗೆಯ್ದೊಡೆ ಎನ್ನ ನಿತ್ಯನಿಯಮಕ್ಕೆ ವಿಘ್ನಂ ಮಾಡದೆ ಪೆಱತೊಂದೆಡೆಗೆ ಪೋಗಿಮೆಂಬುದುಮವರ್ಕೆ ನಂಬುಗೆ ಪುಟ್ಟಿ ನಿಮ್ಮಡಿ ನೀವೆ ವಿಚಾರಿಸಲ್ವೇೞ್ಕುಮೆನೆ ದ್ವೀಪಿಯದರ್ಕೊಡಂಬಟ್ಟು ಸಾವಧಾನವಾಗಿ ನಿಂದಿಂತೆಂದುದು : ಇಂದಿಂಗೊಂದು ತಿಂಗಳುಪವಾಸಂ ಗೆಯ್ದೆನದು ಕಾರಣದಿಂ ಧಾತುಕ್ಷಯಮಾಗಿ ಕಿವಿ ಕೆತ್ತು ಕೇಳಲ್ ಬರ್ಪುದಿಲ್ಲ ಕರ್ಣೋಪಾಂತಮಂ ಸಾರ್ದು ಪಿರಿಯ ಸರದಿಂ ಪೇಱ*ಮೆಂದೊಡೆ ಆ ಪ್ರಾಣಿಗಳೆರಡುಂ ಶ್ರವಣಸಮೀಪಸ್ಥಂಗಳಾಗಿ ತಮ್ಮ ಬಂದ ವೃತ್ತಾಂತಮೆಲ್ಲಮುಮಂ ಪೇೞ* ಕೇಳ್ದನೇಕಪ್ರಕಾರದಿಂ ವಿಚಾರಿಸುತ್ತುಮಿರೆ ಶಶಕ ಪಿಂಜರಂಗಳೆರಡುಂ ಜವಂಗೆಟ್ಟು ಮೆಯ್ಮಱೆದಿರ್ದುದನಱ*ದು ಪಿಡಿದು ತಿಂದುದು. ಅದಱೆಂ,

ಶ್ಲೋ|| ಕ್ಷುದ್ರಮರ್ಥಪತಿಂ ಪ್ರಾಪ್ಯ ನ ತದ್ವಿವದತಾಂ ಸುಖಂ
ಉಭಾವೇವ ಕ್ಷಯಂ ಯಾತೌ ಯಥಾ ಶಶ ಕಪಿಂಜರೌ  ||೧೬೨||

ಟೀ|| ಕ್ಷುದ್ರನಪ್ಪರ್ಥಪತಿಯನೆಯ್ದಿ ಕೂಡಿದವರ್ಗೆ ಸುಖಮಿಲ್ಲ. ಅದು ಹೇಗೆಂದೊಡೆ ಮೊಲನುಂ ಕಪಿಂಜರನೆಂಬ ಹಕ್ಕಿಯುಂ ಕೇಡನೈದಿದ ಹಾಂಗೆ. ಎಂದಾ ಕಾಗೆ ಗೂಗೆಗೇಗೈಯ್ದುಂ ರಾಜ್ಯಮಾಗದಂತೆ ಎನಿತಾನುಮುಪಕಥೆಗಳಂ ಪೇೞ* ಕೇಳ್ದು.

ಶಕುನಿಗಣಮೆಲ್ಲಮಭಿಷೇ
ಕಕಾರ‍್ಯಮಂ ಮಾಣ್ದು ಪರೆದುಪೋದವು ನಿಜನೀ
ಡಕುಳಕ್ಕೆ ಕಾಗೆ ವಕ್ರಿಸೆ
ಸಕಳಪ್ರಾರಂಭಕಾರ‍್ಯಮಂ ಮಾಣದರಾರ್                       ೩೨೩

ಅಂತಾ ಶಕುನಿಸಮುದಾಯಂ ಪರೆದು ಪೋಪುದಂ ಕಂಡು ಕೋಪಾರುಣೀಭೂತಲೋಚನ ನುಳೂಕರಾಜಂ ಕಂಕಂಗೆ ಮುಳಿದಿಂತೆಂದೆಂ ಏನೆಲವೋ ! ನಿಮಗಂ ನಮಗಂ ಮುನ್ನಾದ ಪಗೆಯೊಂದುಮಿಲ್ಲಮೆನಗಾದ ರಾಜ್ಯಮಂ ಕಿಡಿಸಿದುದಲ್ಲದೆನ್ನುಮಂ ಕೆಡೆ ನುಡಿದೆ. ನಿನ್ನನೊರ್ವನಂ

ಹೀಗೆಂದಿತು : ಇಂದಿಗೆ ಒಂದು ತಿಂಗಳಿನಿಂದ ಉಪವಾಸವ್ರತದಲ್ಲಿರುವೆ ; ಅದರಿಂದ ಧಾತುಕ್ಷಯವಾಗಿ ಕಿವಿ ಕೇಳುವುದಿಲ್ಲ ; ಕಿವಿಯ ಹತ್ತಿರಕ್ಕೆ ಬಂದು ದೊಡ್ಡ ಸ್ವರದಿಂದ ಗಟ್ಟಿಯಾಗಿ ಹೇಳಿ ಎನ್ನಲು ಆ ಪ್ರಾಣಿಗಳೆರಡೂ ಕಿವಿಯ ಬಳಿಗೆ ಹೋಗಿ ತಾವು ಬಂದ ವೃತ್ತಾಂತವೆಲ್ಲವನ್ನೂ ಹೇಳಲು ಕೇಳಿ ಅನೇಕ ಬಗೆಯಿಂದ ವಿಚಾರಿಸುತ್ತಿರಲು ಮೊಲ ಕಪಿಂಜರಗಳೆರಡೂ ಶಕ್ತಿಗುಂದಿ ಮೆಯ್ಮರೆದಿದ್ದುದನ್ನು ತಿಳಿದು ಹಿಡಿದು ತಿಂದಿತು. ಅದರಿಂದ, ಶ್ಲೋ|| ಮೊಲವೂ, ಕಪಿಂಜರನೆಂಬ ಹಕ್ಕಿಯೂ ಕೇಡನ್ನು ಹೊಂದಿದ ಹಾಗೆ ಕ್ಷುದ್ರನಾದ ಅರ್ಥಪತಿಯನ್ನು ಸೇರಿದವರಿಗೆ ಸುಖವಿಲ್ಲ. ಎಂದು ಆ ಕಾಗೆ ಎನು ಮಾಡಿದರೂ ಗೂಬೆಗೆ ರಾಜ್ಯವಾಗದಂತೆ ಅನೇಕ ಉಪಕಥೆಗಳನ್ನು ಹೇಳಲು ಕೇಳಿ ೩೨೩. ಪಕ್ಷಿಸಮೂಹವೆಲ್ಲವೂ ಅಭೀಷೇಕಕಾರ್ಯವನ್ನು ಬಿಟ್ಟು ತಮ್ಮ ಗೂಡುಗಳಿಗೆ ಚೆದರಿ ಹೋದುವು. ಕಾಗೆಯು ವಕ್ರಿಸಲು ಸಕಲಪ್ರಾರಂಭಕಾರ್ಯವನ್ನೂ ನಿಲ್ಲಿಸಿ ಬಿಡದವರು ಯಾರಿದ್ದಾರೆ? ವ || ಹಾಗೆ ಆ ಪಕ್ಷಿಸಮೂಹವು ಹಾರಿಹೋದುದನ್ನು ಕಂಡು ಕೋಪಾರುಣೀ ಭೂತಲೋಚನನಾದ ಉಲೂಕರಾಜನು ಕಾಗೆಯ ಮೇಲೆ ಕೋಪಿಸಿಕೊಂಡು ಹೀಗೆಂದನು: ಏನೆಲವೋ ! ನಿಮಗೂ ನಮಗೂ ಹಿಂದೆ ಆದ ಹಗೆ ಒಂದೂ ಇಲ್ಲ ; ಅಲ್ಲದೆ ನನಗಾದ ರಾಜ್ಯವನ್ನು ತಪ್ಪಿಸಿದೆ, ಅಲ್ಲದೆ ನನ್ನನ್ನೂ ನಿಂದಿಸಿದೆ. ನಿನ್ನೊಬ್ಬನನ್ನು ಕೊಂದೆನಾದರೆ ಮುಂದೆ

ಕೊಂದೆನಪ್ಪೊಡೆ ಮುಂದಪ್ಪ ಪಗೆಗಳ್ಕಿ ಕೊಂದಂತಕ್ಕುಮದಱ*ಂದಿಲ್ಲಿ ನಿನ್ನಂ ಕೊಲ್ಲೆನೆಂದು ಮತ್ತಮಿಂತೆಂದಂ:

ಕುರುಕುಲಮಂ ಬಕಾರಿ ಭುಜಗವ್ರಜಮಂ ಭುಜಗಾರಿ ದಾನವೇ
ಶ್ವರಕುಲಮಂ ಮುರಾರಿ ಭುಜವಿಕ್ರಮದಿಂ ತವೆ ಕೊಂದ ಮಾೞ*ಯಿಂ
ದುರುತರ ಬಾಹುವಿಕ್ರಮದೆ ನಾಂ ತವೆ ಕೊಲ್ಲದೆ ಮಾಣೆನುಗ್ರಸಂ
ಗರಮುಖದಲ್ಲಿ ಕಾಕಬಳಮಂ ಕುಸುಮಾಯುಧವೈರಿ ಕಾವೊಡಂ  ೩೨೪

ಎಂದುಳೂಕಾರಾಜನತಿಪ್ರತಿಜ್ಞೆಗೆಯ್ದು ನಿಜನಿವಾಸಕ್ಕೆ ಪೋದಂ. ಇತ್ತಲಾ ವಾಯಸಂ ಕೌಶಿಕಾಶ್ವರನ ಮಾತಿಂಗೆ ಭೀತನಾಗಿ ತನ್ನೊಳಿಂತೆಂದುದು :

ಶ್ಲೋ|| ಹೇ ಜಿಹ್ವೇ ಮಧುರೇ ಸ್ನಿಗ್ಧೇ ಕಿಂ ಮಧುರಂ ನ ಭಾಷಸೇ
ಮಧುರಂ ವದ ಕಲ್ಯಾಣಿ ಲೋಕೋ ಹಿ ಮಧುರಪ್ರಿಯಃ  ||೧೬೩||

ಟೀ|| ಎಲೆ ನಯವಹಂತಹ ನಾಲಗೆಯೆ ನಿಷ್ಠುರವನೆಂದುಂ ನುಡಿಯದಿರು; ಮಧುರವನೆ ನುಡಿ ; ಮಧುರವೆಂಬುದು ಸರ್ವಜನಪ್ರಿಯವಾಗಿಹುದು ಎಂದು ಮತ್ತಮಿಂತೆಂದುದು :

ಜಯಮಂ ಕೀರ್ತಿಯನಭಿವೃ-
ದ್ಧಿಯನೊಳ್ಪಂ ಕಾರ‍್ಯಸಿದ್ಧಿಯಂ ಸತಲಮಂ
ಬಯಸುವ ಮನುಜರಿ ಸತತಂ
ಪ್ರಿಯವನೆ ನುಡಿವುದು ವಿಪಕ್ಷಮಾಗಿರ್ಪವರೊಳ್  ೩೨೫

ಎಂಬ ನೀತಿಯಂ ಬಿಸುಟ್ಟು ಮಾತಱ*ಯದೆ ನುಡಿದು ಎನ್ನ ಜಾತಿಗಮುತ್ಪಾತಕೇತುವಾದೆನೆಂದು ತನ್ನಂ ತಾನೆ ನಿಂದಿಸಿಕೊಂಡು ವಾಯಸಂ ಪೋದುದು. ಅಂದಿಂದಿತ್ತ ಕೌಶಿಕಂಗಳ್ಗಂ ನಮಗಂ ಪಗೆಯಾದುದೆಂದು ಚಿರಂಜೀವಿ ಪೇೞೆ ಮೇಘವರ್ಣನಿಂತೆಂದಂ ; ವಾಙತ್ರದಿಂ ಬಂದ

ಆಗುವ ಹಗೆಗೆ ಅಂಜಿ ಕೊಂದಂತಾಗುವುದು. ಅದರಿಂದ ಇಲ್ಲಿ ನಿನ್ನನ್ನು ಕೊಲ್ಲುವುದಿಲ್ಲ ಎಂದು ಮತ್ತೂ ಹೀಗೆಂದನು : ೩೨೪. ಕುರುಕುಲವನ್ನು ಬಕಾರಿ, ಸರ್ಪಕುಲವನ್ನು ಗರುಡ, ದಾನವೇಶ್ವರಕುಲವನ್ನು ಮುರಾರಿ ಭುಜವಿಕ್ರಮದಿಂದ ನಾಶ ಮಾಡಿದಂತೆ ಉರುತರ ಬಾಹುವಿಕ್ರಮದಿಂದ ಉಗ್ರಸಂಗರಮುಖದಲ್ಲಿ ನಾನು ಕಾಕಬಲವನ್ನು ಹರನು ಬಂದು ರಕ್ಷಿಸಿದರೂ ಕೂಂದಲ್ಲದೆ ಬಿಡೆನು! ವ|| ಹೀಗೆ ಉಲೂಕಾಪತಿಯು ಅತಿಪ್ರತಿಜ್ಞೆಮಾಡಿ

ನಿಜನಿವಾಸಕ್ಕೆ ಹೋದನು. ಇತ್ತ ಆ ವಾಯಸವು ಕೌಶಿಕಾಶ್ವರನ ಮಾತಿಗೆ ಭೀತನಾಗಿ ತನ್ನಲ್ಲೇ ಹೀಗೆಂದಿತು : ಶ್ಲೋ|| ಎಲೈ ನಯವಾದ ನಾಲಗೆಯೇ ನಿಷ್ಠುರವಾದುದನ್ನು ಎಂದೂ ನುಡಿಯದಿರು, ಮಧುರವನ್ನೇ ನುಡಿ ; ಮಧುರವಚನ ಸರ್ವಜನಪ್ರಯವಾಗಿರುವುದು. ಅಲ್ಲದೆ ಮತ್ತೆ ಹೀಗೆಂದಿತು : ೩೨೫. ಜಯವನ್ನು ಕೀರ್ತಿಯನ್ನೂ ಅಭಿವೃದ್ಧಿಯನ್ನೂ ಒಳಿತನ್ನೂ ಕಾರ್ಯಸಿದ್ಧಿಯನ್ನೂ ಸತಲವನ್ನೂ ಬಯಸುವ ಮನುಜನು ಸತತವಾಗಿ ವೈರಿಗಳಲ್ಲಿ ಪ್ರಿಯವನ್ನೇ ನುಡಿಯಬೇಕು ವ|| ಎಂಬ ನೀತಿಯನ್ನು ಬಿಟ್ಟು ಮಾತನ್ನರಿಯದೆ ನುಡಿದು ತನ್ನ ಜಾತಿಗೇ ಉತ್ಪಾತಕೇತುವಾದೆನೆಂದು ತನ್ನನ್ನು ತಾನೇ ನಿಂದಿಸಿಕೊಂಡು ವಾಯಸವು ಹೋಯಿತು. ಅಂದಿನಿಂದ ಇಂದಿನವರೆಗೆ ಗೂಬೆಗಳಿಗೂ ನಮಗೂ ವೈರ ಸಂಭವಿಸಿತು ಎಂದು ಚಿರಂಜೀವಿ ಹೇಳಲು ಮೇಘವರ್ಣ

ವೈರಮನೆತ್ತಿಕೊಂಡು ಯುದ್ಧಂಗೆಯ್ದು ಕೊಂದಿಕ್ಕಿದರೆಂಬ ಕಥೆಗಳನೆಂದುಂ ಕೇಳ್ದಱ*ಯೆನೆನೆ ಮತ್ತಂ ಚಿರಂಜೀವಿಯಿಂತೆಂದಂ :

ಕೇಳಹಿತದಿವಿಜವಲ್ಲಭ
ಲೀಳಂ ವಿಕ್ರಮನಿರಸ್ತಕಾಳಂ ದಿವಿಜಾ
ಭೀಳಂ ಮಥಿತಾಖಿಳ ದಿ
ಕ್ಪಾಳಂ ಶಿಶುಪಾಳನೆಂಬನೊರ್ವಂ ದನುಜಂ  ೩೨೬

ಅಂತಾತಂ ವಾಗ್ದೋಷದಿಂ ನಿಶ್ಯೇಷಜೀವಿತನಾದ ಕಥೆಯಂ ನಿಮ್ಮಡಿ ಕೇಳ್ದಱ*ಯಿರಕ್ಕುಮೆಂದು ಪೇೞಲ್ ತಗುಳ್ದಂ :