ಧರ್ಮಪುತ್ರನಪ್ಪ ಯುಷ್ಠಿರಂ ಧರ್ಮಾರ್ಥಿಯುಂ ಯಶೋರ್ಥಿಯುಮಾಗಿ ರಾಜಸೂಯಯಾಗಂ ಮಾಡಲುದ್ಯೋಗಂಗೆಯ್ದು ನಾರಾಯಣಾದಿಗಳುಮಪ್ಪ ಯಾದವರುಮಂ ದುರ‍್ಯೋಧನಂ ಮೊದಲಾದನೇಕ ದೇಶಾಶ್ವರರುಮಪ್ಪ ರಾಜಿತನೂಜರುಮಂ ಶಿಶುಪಾಲಂ ಮೊದಲಾದ ದನುಜಸಮಾಜಮುಮಂ ವ್ಯಾಸ ಕಶ್ಯಪ ವಿಶ್ವಾಮಿತ್ರ ವಾಲ್ಮೀಕಿ ವಸಿಷ್ಠಾಗಸ್ತ್ಯ ಪರಾಶರಾದಿ ಮಹಾಮುನಿಸಮೂಹಮುಮಂ ಬೞ*ಯನಟ್ಟಿ ಬರಿಸಿ ಯಾಗಂಗೆಯ್ದು ತದನಂತರಂ ಭೀಮಾಗ್ರಜನ್ಮನಗ್ರಪೂಜೆಗಗ್ರೇಸರರಾರ್ ಪೆೞ*ಮೆಂಬುದುಂ ಗಾಂಗೇಯಂ ಗಂಭೀರಧ್ವನಿಯಿನಿಂತೆಂದಂ:

(ಮಲ್ಲಿಕಾ ಮಾಲೆ)

ಉಗ್ರಸಂಗರರಂಗದೊಳ್ ಬಲವನ್ನಿಶಾಚರಮುಖ್ಯವೀ-
ರಾಗ್ರಗಣ್ಯರನಿಕ್ಕಿ ಭೂಚರಖೇಚರಾಖಿಲಲೋಕಪಾ-
ಲಾಗ್ರಗಾಮರ ಪೀಡೆಯಂ ಕಳೆದಿರ್ದ ವಿಷ್ಣುಗೆ ಭಕ್ತಿಯಿಂ
ದಗ್ರಪೂಜೆಯನೀವುದಬ್ಧಿಪರೀತ ಭೂತಳವಲ್ಲಭಾ  ೩೨೭

ಹೀಗೆಂದಿತು : ವಾಙತ್ರದಿಂದ ಬಂದ ವೈರವನ್ನು ಸಾಸಿಕೊಂಡು ಯುದ್ಧಮಾಡಿ ಕೊಂದು ಹಾಕಿದರೆಂಬ ಕಥೆಗಳನ್ನು ಎಂದೂ ನಾನು ಕೇಳಿಲ್ಲ ಎನ್ನಲು ಮತ್ತೆ ಚಿರಂಜೀವಿ ಹೀಗೆಂದಿತು. ೩೨೬. ಅಹಿತ ದಿವಿಜವಲ್ಲಭಲೀಲನೂ ವಿಕ್ರಮನಿರಸ್ತಕಾಳನೂ ದಿವಿಜಾಭೀಳನೂ ಮಥಿತಾಖಿಳ ದಿಕ್ಪಾಲನೂ ಆದ ಶಿಶುಪಾಲನೆಂಬೊಬ್ಬ ದನುಜನಿದ್ದನು. ವ|| ಹಾಗೆ ಆತನು ವಾಗ್ದೋಷದಿಂದ ಹತನಾದ ಕಥೆಯನ್ನು ಪೂಜ್ಯರು ಕೇಳಿರಲಿಕ್ಕಿಲ್ಲ ಎಂದು ಹೇಳಲು ತೊಡಗಿದನು : ವ|| ಧರ್ಮಪುತ್ರನಾದ ಯುಷ್ಟಿರನು ಧರ್ಮಾರ್ಥಿಯೂ ಂiಶೋರ್ಥಿಯೂ ಆಗಿ ರಾಜಸೂಯಯಾಗ ಮಾಡಲು ಅಪೇಕ್ಷಿಸಿ ನಾರಾಯಣಾದಿಗಳಾದ ಯಾದವರನ್ನೂ ದುರ್ಯೋಧನ ಮೊದಲಾದ ಅನೇಕ ದೇಶಾಶ್ವರರಾದ ರಾಜಕುಮಾರರನ್ನೂ ಶಿಶುಪಾಲ ಮೊದಲಾದ ದನುಜಸಮೂಹವನ್ನೂ, ವ್ಯಾಸ, ಕಶ್ಯಪ, ವಿಶ್ವಾಮಿತ್ರ, ವಾಲ್ಮೀಕಿ, ವಸಿಷ್ಠ, ಅಗಸ್ತ್ಯ, ಪರಾಶರಾದಿ ಮಹಾಮುನಿ ಸಮೂಹವನ್ನೂ ದೂತರನ್ನಟ್ಟಿ ಕರೆಯಿಸಿ ಯಾಗವನ್ನು ಮಾಡಿ ಬಳಿಕ ಭೀಮಾಗ್ರಜನು ಅಗ್ರಪೂಜೆಗೆ ಅಗ್ರೇಸರರು ಯಾರು ಹೇಳಿರಿ ಎನ್ನಲು ಗಾಂಗೇಯನು ಗಂಭೀರ ಧ್ವನಿಯಿಂದ ಹೀಗೆಂದನು: ೩೨೭. ಅಬ್ಧಿಪರೀತ ಭೂತಳವಲ್ಲಭ ! ಉಗ್ರಸಂಗರರಂಗದಲ್ಲಿ ಬಲಶಾಲಿಗಳಾದ ನಿಶಾಚರಮುಖ್ಯವೀರಾಗ್ರಗಣ್ಯರನ್ನು ಕೊಂದು ಭೂಚರ ಖೇಚರ ಅಖಿಲ ಲೋಕಪಾಲ

ಎಂದು ನುಡಿದ ಮಂದಾಕಿನೀನಂದನನ ಮಾತಿಂಗೆ ಯಮನಂದನನಾನಂದಮನಸ್ಕನಾಗಿ ದೇವಕೀ ನಂದನಂಗಗ್ರಪೂಜೆಯನೆತ್ತುವಾಗಳ್  ದಾನವಕುಲಚಕ್ರವರ್ತಿಯುಮಧರೀಕೃತದಿಕ್ಪಾಲನು ಮಾಸನ್ನಕಾಲನುಮಪ್ಪ ಶಿಶುಪಾಲಂ ಕಂಡು ಕಡುಮುಳಿದು ಯುಷ್ಠಿರಂಗೆ ನಿಷ್ಠುರನಾಗಿ ಗಾಂಗೇಯನಂ ನೋಯೆ ನುಡಿದು ಮಾಣದೆ ಬಾಣಾಸುರ ಕರಾಂತಕನುಮಂ ಬಾಯ್ಗೆವಂದಂತೆ ಭಂಗಿಸಿ ಪೆಂಡಿರಂ ಬಯ್ವಂತೆ ಬಯ್ವುದುಮನಂತನಂತಕನಂತೆ  ಮುಳಿದು ದಿವಿಜಾಂತಕನಂ ಕೃತಾಂತಭವನಮಂ ಪೊಗಿಸಿದಂ.

ಅದಲ್ಲದೆಯುಮನೂನಬಳರಪ್ಪ ದಾನವಮಾನವರೆನಿಬರಾನುಂ ವಾಕ್ಪಾರುಷ್ಯದಿಂ ಕೆಟ್ಟರೆಂದು ಚಿರಂಜೀವಿ ಪೇೞ್ದುದಂ ಕೇಳ್ದು ಮೇಘವರ್ಣಂ ನೀವಿಲ್ಲದುದನೇಕೆ ಪೇೞ್ವರಿದೆಲ್ಲಮನಾನಱ*ದೆಂ ; ಇನ್ನಾ ಕೌಶಿಕಾಶ್ವರನಂ ಸಾಸುವುಪಾಯಮಂ ಅನ್ನೆವರಂ ನಮಗೆ ನಿಶ್ಚಿಂತಮಪ್ಪೆಡೆಯುಮುಂ ಚಿಂತಿಸಿಮೆನೆ ಚಿರಂಜೀವಿಯಿಂತೆಂದಂ

ಅರಿ ಬಲವಂತಂ ಮತಿಯೊಳ್
ಪಿರಿಯಂ ಸಾಸುವೊಡಱ*ಯೆನೆಂಬವಸರದೊಳ್
ಪಿರಿದಾಳಾಪದೊಳೇನಪ-
ಸರಣಮೆ ಶರಣಂ ನಯಾಗಮಜ್ಞರ ಮತದಿಂ  ೩೨೮

ಎನೆ ಮೇಘವರ್ಣನಂತಪ್ಟೊಡೆ ನಾವಪಸರಣಂಗೆಯ್ವಮೆನೆ ಚಿರಂಜೀವಿಯಿಂತೆಂದಂ :

ಅಗ್ರಗಾಮಿಗಳ ಪೀಡೆಯನ್ನು ಕಳೆದ ವಿಷ್ಣುವಿಗೆ ಭಕ್ತಿಯಿಂದ ಅಗ್ರಪೂಜೆಯನ್ನು ಅರ್ಪಿಸು  ಎಂದು ನುಡಿದ ಮಂದಾಕಿನೀನಂದನನ ಮಾತಿಗೆ ಯಮನಂದನನು ಆನಂದಮನಸ್ಕನಾಗಿ ದೇವಕೀನಂದನನಿಗೆ ಅಗ್ರಪೂಜೆಯನ್ನು ಅರ್ಪಿಸಿದನು. ಅಗ ದಾನವಕುಲ ಚಕ್ರವರ್ತಿಯೂ ದಿಕ್ಪಾಲಕರನ್ನು ಸೋಲಿಸಿದವನೂ ಅಸನ್ನಕಾಲನೂ ಅದ ಶಿಶುಪಾಲನು ಕಂಡು ಕ್ರೋಧಾಕ್ರಾಂತನಾಗಿ ಯುದಿಷ್ಠಿರನಿಗೆ ನಿಷ್ಠುರವಾಗಿ ಗಾಂಗೇಯನಿಗೆ ನೋಯುವಂತೆ ನುಡಿದನು.  ಅಲ್ಲದೆ,  ವಿಷ್ಣುವನ್ನೂ ಬಾಯಿಗೆ ಬಂದಂತೆ ಭಂಗಿಸಿ ಹೆಂಡಿರನ್ನು ಬಯ್ಯುವಂತೆ ಬಯ್ಯಲು ಅನಂತನು ಅಂತಕನಂತೆ ಕೋಪಿಸಿ ದವಿಜಾಂತಕನನ್ನು ಯಮಪುರಕ್ಕೆ ಅಟ್ಟಿದನು. ಅಲ್ಲದೆ ಅಸಾಧ್ಯಬಲರಾದ ಎಷ್ಟೋ ಜನ ದಾನವ ಮಾನವರು ವಾಕ್ಪಾರುಷ್ಯದಿಂದ ಕೆಟ್ಟರು ಎಂದು ಚಿರಂಜೀವಿ ಹೇಳಿದುದನ್ನು ಕೇಳಿ ಮೇಘವರ್ಣನು ನೀವು ಇಲ್ಲದುದನ್ನು  ಏಕೆ ಹೇಳುವಿರಿ;  ಇದೆಲ್ಲವನ್ನೂ ನಾನು ತಿಳಿದವನೇ. ಇನ್ನು ಆ ಕೌಶಿಕಾಶ್ವರನನ್ನು ಸಾಸುವ ಉಪಾಯವನ್ನೂ ಅಲ್ಲಿಯವರೆಗೆ ನಾವು ನಿಶ್ಚಿಂತರಾಗಿರುವ ಎಡೆಯನ್ನೂ ಯೋಚಿಸಿರಿ ಎನ್ನಲು ಚಿರಂಜೀವಿ ಹೀಗೆಂದನು : ೩೨೮. ಶತ್ರು ಬಲಾಢ್ಯನು, ಬುದ್ಧಿಯಲ್ಲಿ ಹಿರಿಯನು, ಅವನೂಡನೆ ಸಾಸಲಾರೆವು. ಇಂಥ ಸಂದರ್ಭದಲ್ಲಿ ಹಿರಿಯ ಆಲಾಪದಿಂದ ಏನು ಪ್ರಯೋಜನ ; ನೀತಿಜ್ಞರ ಅಭಿಪ್ರಾಯದಂತೆ  ಈಗ ಅಪಸರಣವೇ ಶರಣು ವ|| ಎನ್ನಲು ಮೇಘವರ್ಣನು ಹಾಗಾದರೆ ನಾವು ಅಪಸರಣ ಮಾಡೋಣ ಎನ್ನಲು ಚಿರಂಜೀವಿ

ಚಾರುಮಯೂರಮಂ ಸಮದಚಾತಕವಾರಮನುದ್ಘಕೇತಕಾ-
ಧಾರಮನತ್ಯುದಾತ್ತಸುರಗೋಪಮನುದ್ಯದಶೇಷ ನೀಪಮಂ
ಭೂರಿಸುರೇಂದ್ರ ಚಾಪಮನಪಾಸ್ತಧರಾಧರತಾಪಮಂ ಗತಾಂ-
ಭೋರುಹಜಾಳಮಂ ಜಳದಕಾಳಮನಸ್ತಲಸನ್ಮರಾಳಮಂ ||*  ೩೨೯

ವಾನರಬಲಸಹಿತಂ ತೇ-
ಜೋನಿ ದಶರಥತನೂಭವಂ ವಿಶದಯಶ-
ಶ್ಯ್ರೀನಿಲಯಂ ವಿಜಿತಾರಿ ನೃ-
ಪಾನೀಕಂ ಋಷ್ಯಮೂಕನಗದೊಳ್ ಕೞ*ದಂ  ೩೩೦

ಅದಱ*ಂ ನಿಮ್ಮಡಿ ನೀವುಮಾ ಪರ್ವತಕ್ಕೆ ಸಕಲಕಾಕವಲಂಬೆರಸು ಬಿಜಯಂಗೆಯ್ವುದು ಮಾನೆನ್ನ ಬಲ್ಲ ಮಾರ್ಗದಿಂದರಿಮರ್ದನನ ಬೀಡಂ ಪೂಕ್ಕು ಸಮಸ್ತಕಾರ‍್ಯಮುಮನಱ*ದು ಬಂದ ಬೞ*ಕ್ಕೆ ತಕ್ಕುದನಾಳೋಚಿಸಿ ನೆಗೞ*ಮೆನೆ ಮೇಘವರ್ಣಂ ನೀವೆಂಬುದೆಲ್ಲಮಪ್ಪುದು, ದೂತಕಾರ‍್ಯಕ್ಕೆ ನೀವೇ ಪೋದಲ್ಲಿ ಕಾರ‍್ಯಸಿದ್ಧಿಯಪ್ಪುದೊಂದೆಸೆಯೊಳಿರ್ಕೆ ನೀಮುಂ ಕ್ಷೇಮದಿಂ ಬರ್ಪುದುಂ ಸಂದೆಯಮಪ್ಪುದದಱೆಂ ಪೆಱರನಟ್ಟಿಮೆನೆ ಚಿರಂಜೀವಿ ನಿಮ್ಮಡಿ ! ಸ್ವಾಮಿತನಕ್ಕೆ ತಕ್ಕುದಂ ಬೆಸಸಿದಿರ್; ಆದೊಡಮೆನ್ನಿಂದಪ್ಪೊಡೆ ಸಂಕಟಮುಮಧ್ವಾನಮುಮಪ್ಪ ಕಜ್ಜಂಗಳಂ ಕೇವಲಂ ದೂತಮಾತ್ರನಪ್ಪಾತಂ

ಹೀಗೆಂದನು :  ೩೨೯. ಸುಂದರವಾದ ನವಿಲುಗಳನ್ನೂ ಮದಭರಿತವಾದ ಚಾತಕವೃಂದವನ್ನೂ ಉತ್ತಮ ಕೇತಕಾಧಾರವನ್ನೂ ಉದಾತ್ತವಾದ ಇಂದ್ರಗೋಪವನ್ನೂ ಎತ್ತರವಾದ ಕದಂಬವೃಕ್ಷವನ್ನೂ ಸುಂದರವಾದ ಕಾಮನ ಬಿಲ್ಲನ್ನೂ ಬೆಟ್ಟದ ಹೋಗಲಾಡಿಸಿದ ತಾಪವನ್ನೂ ಹೋದ ತಾವರೆಗಳ ಸಮೂಹವನ್ನೂ ಹೊಳೆಯುವ ಹಂಸಗಳು ಅಸ್ತವ್ಯಸ್ತವಾದ ವರ್ಷಾಕಾಲವನ್ನು (?) ಹಿಂದೆ ೩೩೦. ವಾನರಬಲಸಹಿತವಾಗಿ ತೇಜೋನಿಯಾದ ದಶರಥಕುಮಾರನು ಋಷ್ಯಮೂಕ ಪರ್ವತದಲ್ಲಿ ಕಾಲವನ್ನು ಕಳೆದನು. ವ|| ಅದರಿಂದ  ಪೂಜ್ಯರಾದ ನೀವೂ ಸಕಲ ಕಾಕಬಲ ಸಹಿತರಾಗಿ ಅಲ್ಲಿಗೆ ಬಿಜಯಮಾಡಬೇಕು. ನಾನು ನನಗೆ ತಿಳಿದ ಮಾರ್ಗದಿಂದ ಅರಿಮರ್ದನನ ಬೀಡನ್ನು ಹೊಕ್ಕು ಸಮಸ್ತಕಾರ್ಯವನ್ನು ತಿಳಿದುಕೊಂಡು ಬಂದ ಬಳಿಕ ಯೋಗ್ಯವಾದುದನ್ನು ಆಲೋಚಿಸಿ ಕೆಗೊಳ್ಳೋಣ ಎಂದಿತು. ಅದಕ್ಕೆ ಮೇಘವರ್ಣನು ನೀವು ಹೇಳುವದೆಲ್ಲ ಸರಿ. ಆದರೆ ದೂತಕಾರ್ಯಕ್ಕೆ ನೀವೇ ಹೋದರೆ ಕಾರ್ಯಸಿದ್ಧಿ  ಯಾಗುವುದು ಹಾಗಿರಲಿ ; ನೀವೊ ಕ್ಷೇಮದಿಂದ ಬರುವುದು ಸಂದೇಹವಾದುದುರಿಂದ ಬೇರೆಯವರನ್ನು ಕಳುಹಿಸಿರಿ ಎನ್ನಲು ಚಿರಂಜೀವಿ ಪೊಜ್ಯರೇ, ಸ್ವಾಮಿತನಕ್ಕೆ

ತಕ್ಕುದಾದುದನ್ನು ಹೇಳಿದಿರಿ. ಆದರೂ ನನಗೇ ಸಂಕಟಕರವೂ ಅಧ್ವಾನಮಯವೂ ಅದ ಕಾರ್ಯಗಳನ್ನು ಕೇವಲ ದೂತಮಾತ್ರನಾದವನು ಸಾಸಲೂ

* ಈ ಪದ್ಯವು ಸರಿಯಾಗಿ ಅನ್ವಯವಾಗಿದೆ ಎಲ್ಲಿಂದಲೋ ಬಂದು ಸೇರಿಕೊಂಡಹಾಗಿದೆ.  ಇದನ್ನು ಪ್ರಕ್ಷಿಪ್ತ ಎಂದು ಪರಿಗಣಿಸಬಹುದು.

ಸಾಸಲುಂ ಭೇದಿಸಲುಂ ನಿರುತಮಱ*ಯಂ ಅದಱ*ಂ ಸತ್ತ್ವಮುಂ ದೃಢಮುಂ ಶೌರ‍್ಯಮುಂ ಧೈರ‍್ಯಮುಂ ಸ್ನೇಹಮುಂ ಮೋಹಮುಂ ಸಾಹಸಮುಂ ಸೈರಣೆಯುಮುಳ್ಳರನಟ್ಟಲ್ವೇೞ್ಕುಮದೆಂತೆನೆ: ಚಿರಂತನಕಾರ‍್ಯಂಗಳೊಳಂ ಹನೂಮಂತನಂತಪ್ಪನಂ ದಶಾಸ್ಯಾಂತಕಂ ದೂತನಾಗಿ ಕಳಿಪಿದಂ. ಮುರಾಂತಕನಂತಪ್ಪನಂ ಯುಷ್ಠಿರಂ ದೂತಕಾರ‍್ಯಕ್ಕಟ್ಟಿದಂ ಅದುಕಾರಣದಿನಿಂತಪ್ಪ ವಿಷಮಕಾರ‍್ಯಮೆನ್ನಿಂದಲ್ಲದೆ ತೀರಲಱ*ಯದು. ನೀವಿಂತೆನ್ನ ದೆಸೆಗೆ ಚಿಂತಿಸದೆ ನಿಶ್ಚಿಂತರಾಗಿ ಪೋಗಿಮೆಂದೊಡಂತೆಗೆಯ್ವೆನೆಂದು ಸಮಸ್ತವಾಯಸಬಲಂಬೆರಸು,

ಸಮದಾನೇಕಪಮಂ ಮಹಾಭಯದಮಂ ಪ್ರೋದ್ಧಾಮ ಜಂಬೂ ಕದಂ-
ಬಮನಭ್ರಂಕಷಕೂಟಮಂ ತಪನಕಾಂತಾಶ್ಮಪ್ರಭಾಪಾಸ್ತ ಸಂ-
ತಮಸಸ್ತೋಮಮನೂರ್ಜಿತಂ ಜಿತಲಸನ್ಮೈನಾಕಮಂ ಋಷ್ಯಮೂ-
ಕಮನಾನಂದದಿನೆಯ್ದಿದಂ ಸಕಲ ಕಾಕಾನೀಕಲಕ್ಷ್ಮೀಶ್ವರಂ

ಧ್ವಾಂಕ್ಷಬಲಂಬೆರಸರಿಜಯ
ಕಾಂಕ್ಷೇಯಿನಾತ್ಮೀಯಮಂತ್ರಿ ಪೇೞ*ಂದಿದಿನಿ-
ರ್ದಂ ಕ್ಷೇಮದಿಂ ಪ್ರಚಂಡ ಬ-
ಲಂ ಕ್ಷಿತಿಭೃತ್ತಟದೂಳಖಿಳಕಾಕಾಶಂ

ಅನ್ನೆಗಮಿತ್ತಲ್ ಚಿರಂಜೀವಿ  ಮುನ್ನಮೆ ಕೌಶಿಕಬಲಚರಣ ನಖಚಂಚುಪಕ್ಷಘಾತದಿಂ ಸಂಪೂರ್ಣ ಮಾಗಿ ಕಾದಿ ಸತ್ತ ವಾಯಸಂಗಳ ರಕ್ತಕರ್ದಮಮಂ ತನ್ನ ಮೇಲೊಟ್ಟಿಕೊಂಡು ಮೂರ್ಛಾಗತನಂತಾಗಿ ಭೇದಿಸಲೂ ಖಂಡಿತವಾಗಿಯೂ ತಿಳಿಯಲಾರನು. ಅದರಿಂದ ಸತ್ತ್ವವೂ ದೃಢವೂ ಶೌರ್ಯವೂ ಧೈರ್ಯವೂ ಸ್ನೇಹವೂ ಮೋಹವೂ ಸಾಹಸವೂ ಸೈರಣೆಯೂ ಇರುವವರನ್ನು ದೌತ್ಯಕ್ಕೆ ಅಟ್ಟಬೇಕು. ಅದು ಹೇಗೆಂದರೆ, ಚಿರಂತನಕಾರ್ಯಗಳಲ್ಲಿ ಹನುಮಂತನಂಥವನನ್ನು ರಾಮನು ದೂತನನ್ನಾಗಿ ಕಳುಹಿಸಿದನು; ಮುರಾಂತಕನಂಥವನನ್ನು ಯುಷ್ಠಿರನು ದೂತಕಾರ್ಯಕ್ಕಾಗಿ ಕಳುಹಿಸಿದನು. ಅದರಿಂದ ಇಂತಹ ವಿಷಮಕಾರ್ಯವು ನನ್ನಿಂದಲ್ಲದೆ ಸಾಧ್ಯವಾಗದು. ನೀವು ಹೀಗೆ ನನ್ನ ಬಗೆಗೆ ಚಿಂತಿಸದೆ ನಿಶ್ಚಿಂತರಾಗಿ ಹೋಗಿರಿ ಎನ್ನಲು ೩೩೧. ಸೊಕ್ಕಿದ ಆನೆಗಳಿಂದಲೂ, ಮಹಾ ಭಯಂಕರವೂ, ಎತ್ತರವಾದ ನೇರಿಳೆ ಕದಂಬವೃಕ್ಷಗಳಿಂದಲೂ, ಮುಗಿಲು ಮುದ್ದಿಡುವ ಶಿಖರಗಳಿಂದಲೂ, ಸೂರ್ಯನ ಕಿರಣಗಳಿಂದ ಹೋಗಲಾಡಿಸಿದ ಅಂಧಕಾರದಿಂದಲೂ ಮೈನಾಕಪರ್ವತವನ್ನೇ ಗೆದ್ದ ಋಷ್ಯಮೂಕ ಪರ್ವತಕ್ಕೆ ಸಮಸ್ತ ವಾಯಸಬಲದೊಡನೆ ಆ ಸಕಲ ಕಾಕಾನೀಕಲಕ್ಷ್ಮೀಶ್ವರನು ಆನಂದದಿಂದ ಹೊರಟನು. ೩೩೨. ಧ್ವಾಂಕ್ಷಬಲದೊಡನೆ ಶತ್ರುಜಯಾಕಾಂಕ್ಷೆಯಿಂದ ಆತ್ಮಿಯಮಂತ್ರಿಯಾದ ಚಿರಂಜೀವಿ ಹೇಳಿದಂತೆ ಪ್ರಚಂಡಬಲನಾದ ಕಾಕಾಶನು ಹೋಗಿ ಕ್ಷೇಮದಿಂದ ಇದ್ದನು. ವ|| ಅಷ್ಟರಲ್ಲಿ ಇತ್ತ ಚಿರಂಜೀವಿ ಮೊದಲೇ ಕೌಶಿಕಬಲ ಚರಣನಖಚಂಚುಪಕ್ಷಘಾತದಿಂದ ಸಂಪೂರ್ಣವಾಗಿ ಕಾದಾಡಿ ಸತ್ತವಾಯಸಗಳ ರಕ್ತದ ಕೆಸರನ್ನು ತನ್ನ ತಲೆ ಮೇಲೆ ಬಳಿದುಕೊಂಡು ಮೂರ್ಚ್ಛಾಗತನಂತಾಗಿ ಮೇಘವರ್ಣನ  ಮೇಘವರ್ಣನ ರಾಜ್ಯಲಕ್ಷ್ಮಿವಿಲಾಸಭವನಮೆನಿಪ್ಪ ವಿಶಾಲ ವಟವಿಟಪಿಯ ಕೆಳಗೆ ಬಿೞ್ದರ್ದಂ. ಅನ್ನೆಗಮಿತ್ತಲ್,

ಅರುಣೀಭೂತವಿಯತ್ತಳಂ ನವವಿಯೋಗೋದ್ವೇಗ ಸಂತಾಪಿತಾಂ-
ಗರಥಾಂಗಂ ಮುಕುಳೀಕೃತಾಂಬುಜವನಂ ಮಂದೀಕೃತಾಶೀತರ-
ಶ್ಮಿರಥಾಶ್ವಾಸ್ಯ ಸುಪೀತ ನೀರಧಜಲವ್ರಾತಂ ದಿನಾಂತಂ ಮನೋ-
ಹರಮಾಗಿರ್ದುದು ವಾಸಯಷ್ಠಿಗತ ಶುಂಭತ್ತಾಮ್ರಚೂಡವ್ರಜಂ  ೩೩೩

ಅಂತೆಸೆವ ದಿವಸಾವಸಾನಸಮಯದೊಳ್ ದಿವಸಕರಂ ಪರಲೋಕ ಪ್ರಕಾಶನಾರ್ಥಂ ಪೋಪುದಂ ಕವಿದ ಕೞ್ತಲೆಯಂ ಕಂಡರಿಮರ್ದನಂ ಮಂತ್ರಿಮಂಡಲಮುಮನುಲೂಕವ್ರಜಮುಮಂ ಬರಿಸಿ ಬೞ*ಕ್ಕಿಂತೆಂದಂ : ನಿನ್ನೆ ನಮ್ಮ ಕಾದಿದ ಕೊಳುಗುಳದೊಳೇನಾನುಮುೞ*ದ ಕಾಕಬಲಮುಮನಿಂದು ನಿರವಶೇಷಮಾಗಿ ಕೊಂದು ಬರ್ಪಂ ಬನ್ನಿಮೆಂದು ಪೊಱಮಟ್ಟು ಬಂದು ವಾಯಸನಿವಾಸಮಪ್ಪ ವಟಿವಿಟಪಿಯಂ ಸುತ್ತಿಮುತ್ತಿ ಕಾಕಬಲಮಂ ಕಾಣದುಲೂಕಂಗಳ್ ಬೊಬ್ಬಿಱ*ದಾರ್ದು ನಿಜನಿವಾಸಕ್ಕೆ ಪೋಗಲಿರ್ದವಸರಮಂ ಚಿರಂಜೀವಿಯಱದು,

ಶ್ಲೋ|| ಅನಾರಂಭೋ ಮನುಷ್ಯಾಣಾಂ ಪ್ರಥಮಂ ಬುದ್ದಿಲಕ್ಷಣಂ
ಅರಬ್ಧಸ್ಯಾಂತಗಮನಂ ದ್ವಿತೀಯಂ ಬುದ್ಧಿಲಕ್ಷಣಂ ||೧೬೪||

ಟೀ || ಕೆಲಸವಂ ತೊಡಗದಿಹುದೆ ಮನುಷ್ಯರ ಬುದ್ದಿಗೆ ಮೊದಲ ಕುಱುಹು, ಕೆಲಸವಂ

ತೊಡಗಿದ ಬೞ*ಕ ಅದಂ ಕೊನೆಮುಟ್ಟಿಸುವುದೇ ಎರಡನೆಯ ಕುಱುಹು. ಎಂಬ ನೀತಿಯುಂಟು. ಅದಱೆಂದೆನ್ನಿರವನಱೆಪುವೆನೆಂದು ಭಿನ್ನಸ್ವರದಿಂ ಸರಂಗೆಯ್ವುದುಮುಳೂಕಂಗಳ್ ಕೇಳ್ದು

ರಾಜ್ಯಲಕ್ಷ್ಮೀವಿಲಾಸಭವನವೆನಿಸಿದ ವಿಶಾಲವಟವೃಕ್ಷದ ಕೆಳಗೆ ಬಿದ್ದಿದ್ದನು. ೩೩೩. ಆಕಾಶಮಂಡಲ ಕೆಂಬಣ್ಣವನ್ನು ಹೊಂದಿತು. ಆಗ ತಾನೇ ಉಂಟಾದ ಅಗಲುವಿಕೆಯಿಚಿದ ಉಚಿಟಾದ ದುಃಖದಿಂದ ಚಕ್ರವಾಕಪಕ್ಷಿಗಳು ಸಂತಾಪವನ್ನು ಹೊಂದಿದುವು. ತಾವರೆಗಳೆಲ್ಲವೂ ಮೊಗ್ಗಾದುವು. ಸಮುದ್ರದ ನೀರನ್ನು ಚೆನ್ನಾಗಿ ಹೀರಿದುದರಿಂದ ಚಂದ್ರನ ರಥದ ಗತಿ ನಿಧಾನವಾಯಿತು. ಕೋಳಿಗಳ ಗುಂಪು ತಮ್ಮ ಗೂಡುಗಳಲ್ಲಿ ಸೇರಿಕೊಂಡುವು. ಹೀಗೆ ಸಂಜೆ ಮನೋಹರವಾಗಿತ್ತು. ವ|| ಅಷ್ಟರಲ್ಲಿ ಸಂಜೆಯಾಗಲು ಸೂರ್ಯನು ಪರಲೋಕಪ್ರಕಾಶನಾರ್ಥವಾಗಿ ಹೋಗಲು ಕವಿದ ಕತ್ತಲೆಯನ್ನು ಕಂಡು ಅರಿಮರ್ದನನು ಮಂತ್ರಿಮಂಡಲವನ್ನೂ ಉಲೂಕವ್ರಜವನ್ನೂ ಕರೆಯಿಸಿಕೊಂಡು ಹೀಗೆಂದನ್ನು : ನಿನ್ನೆ ನಾವು ಕಾದಾಡಿದ ಯುದ್ಧರಂಗದಲ್ಲಿ ಏನಾದರೂ ಉಳಿದ ಕಾಕಬಲವನ್ನು ಇಂದು ನಿಶ್ಯೇಷವಾಗಿ ಕೊಂದು ಬರೋಣ, ಬನ್ನಿರಿ ಎಂದು ಹೊರಹೊರಟು ಬಂದು ವಾಯಸನಿವಾಸವಾದ ವಟವೃಕ್ಷವನ್ನು ಸುತ್ತಿ ಮುತ್ತಿ ಕಾಕಬಲವನ್ನು ಕಾಣದೆ ಉಲೂಕಗಳು ಬೊಬ್ಬಿರಿದು ನಿಜನಿವಾಸಕ್ಕೆ ಹೋಗುವ ಸಂದರ್ಭವನ್ನು ಚಿರಂಜೀವಿ ಅರಿತು, ಶ್ಲೋ|| ಕೆಲಸವನ್ನು ತೊಡಗದಿರುವುದೇ ಮನುಷ್ಯರ ಬುದ್ಧಿಗೆ ಮೊದಲ ಕುರುಹು; ಕೆಲಸವನ್ನು ತೊಡಗಿದ ಬಳಿಕ ಅದನ್ನು ಕೊನೆಮುಟ್ಟಿಸುವುದೇ ಎರಡನೆಯ ಕುರುಹು ಎಂಬ ನೀತಿಯುಂಟು. ಅದರಿಂದ ನನ್ನ ಇರವನ್ನು ತಿಳಿಸುವೆನೆಂದು, ಭಿನ್ನಸ್ವರದಿಂದ ಕೂಗಲು ಉಲೂಕಗಳು ಕೇಳಿ ಕಾಕರುತವೆಂದು ಅರಿಮರ್ದನನಿಗೆ ತಿಳಿಸಲು ಆತನು ಕಾಕರುತಮಪ್ಪುದೆಂದರಿಮರ್ದನಂಗಱೆಪುವುದುಮಾತಂ ಬಂದು ನೋಡಿ ರಕ್ತಸಿಕ್ತಶರೀರನಾಗಿ ಮುಕ್ತಜೀವನಾಗಿರ್ದ ಚಿರಂಜೀಯಂ ಕಂಡು ನೀನಾರ್ಗೇನೆಂಬ ಪೆಸರಾತನೆಂದು ಕೌಶಿಕಾಶ್ವರಂ ಬೆಸಗೊಳೆ ಚಿರಂಜೀವಿಯಿಂತೆಂದಂ :

ಅಸಮ ಪರಾಕ್ರಮ ಪೆಱತೇಂ
ಪೆಸರೊಳ್ ಚಿರಂಜೀವಿಯೆಂ ಜಗದ್ವಿಶ್ರುತವಾ-
ಯಸ ಚಕ್ರವರ್ತಿ ಮಂತ್ರಿ-
ಪ್ರಸರಾಗ್ರೇಸರನೆನಖಿಳನಯಕೋವಿದನೆಂ

ಎಂಬುದುಂ ನಿನ್ನಂತಪ್ಪ ಮಂತ್ರಿಯಂ ಕಾಕಂಗಳೇಕೆ ಬಿಸುಟು ಪೋದುವೆನೆ ಚಿರಂಜೀವಿ ಪೇೞ್ಗುಂ : ನಿಮ್ಮಡಿ ! ನೀಂ ನಿನ್ನೆ ಬಂದೆಮ್ಮ ಬಲಮೆಲ್ಲಮಂ ಕೊಂದು ನಿಮ್ಮ ಬೀಡಿಂಗೆ ಬಿಜಯಂಗೆಯ್ವುದುಮೆಮ್ಮರಸಂ ಮಂತ್ರಿಗಳಂ ಬರಿಸಿ ಪೇೞ*ಮಿನ್ನೇಗೆಯ್ವಮೆನೆ ಮಂತ್ರಿಗಳ್ ನಾವಿಂದೆ ಸಖಲವಾಯಸಬಲಮೆಲ್ಲಮನೊಂದುಮಾಡಿ ಕೊಡಿಕೊಂಡರಿಮರ್ದನನೊಳ್ ಕಾದುವ ಮೆಂದೊಡಾನವಂದಿರಂ ಮಾರ್ಕೊಂಡು ಮತ್ತಮಿಂತೆಂದೆಂ : ಒಂದಾನುಮೊಂದು ಕಾಲದೊಳ್ ನಮ್ಮ ವಂಶದ ಕಾಗೆ ಕೌಶಿಕಂಗಳೊಳ್ ಪಗೆಗೊಂಡ ಕಾರಣದಿನುಳೂಕಂಗಳ್ ಕೊಂದುವಲ್ಲದೆ ಪೆಱತೊಂದು ಕಾರಣಮಿಲ್ಲ. ನಾಮವರೊಳ್ ಪಗೆಯನೆತ್ತಿಕೊಂಡು ನಿತ್ತಱ*ಸಲಱ*ಯೆವದಱ*ಂ ಸತ್ತು ಸೈರಿಸಿದರೆಂಬುತ್ತಮಿಕೆಯಂ ಮಾಡಿಕೊಂಡು ಕೌಶಿಕಶಿಖಾಮಣಿಯಂ ಕಂಡು ಬಾೞ್ವುದೆಂತುಂ ನಯಂ. ಅಲ್ಲದೆಯುಂ ಪೂರ‍್ವೋಕ್ತಮಿಂತೆಂಬುದಲ್ತೆ :

ಬಂದು ನೋಡಿ ರಕ್ತಸಿಕ್ತ ಶರೀರನಾಗಿ ಮುಕ್ತಜೀವನಾಗಿದ್ದ ಚಿರಂಜೀವಿಯನ್ನು ಕಂಡು ನೀನು ಯಾರು, ನಿನ್ನ ಹೆಸರೇನು ಎಂದು ಕೌಶಿಕಾಶ್ವರನು ವಿಚಾರಿಸಲು ಚಿರಂಜೀವಿ ಹೀಗೆಂದನು : ೩೩೪. ಅಸಮಪರಾಕ್ರಮ ! ಬೇರೆ ಏನಿದೆ ! ನನ್ನ ಹೆಸರು ಚಿರಂಜೀವಿ; ಅಖಿಲ ನೀತಿ ಕೋವಿದನಾಗಿರುವೆ. ಜಗದ್ವಿಶ್ರುತ ವಾಯಸಚಕ್ರವರ್ತಿ  ಮಂತ್ರಿಪ್ರಸರಾಗ್ರೇಸರನಾಗಿರುವೆನು. ವ|| ಅದಕ್ಕೆ ಅರಿಮರ್ದನನು ನಿನ್ನಂತಹ ಮಂತ್ರಿಯನ್ನು ಕಾಗೆಗಳು ಎಕೆ ಬಿಸುಟು ಹೋದುವು ಎಂದು ಕೇಳಲು ಚಿರಂಜೀವಿ ಹೀಗೆಂದನು : ಪೂಜ್ಯರೇ; ನೀವು ನಿನ್ನೆ ಬಂದು ನಮ್ಮ ಬಲವನ್ನೆಲ್ಲ ಕೊಂದು ನಿಮ್ಮ ಬೀಡಿಗೆ ಬಿಜಯಮಾಡಲು ನಮ್ಮ ಅರಸನು ಮಂತ್ರಿಗಳನ್ನು ಕರೆಯಿಸಿ, ಹೇಳಿ ಇನ್ನೇನು ಮಾಡಲಿ? ಎನ್ನಲು, ಮಂತ್ರಿಗಳು ನಾವು ಇಂದೇ ಸಕಲ ವಾಯಸಬಲವನ್ನೆಲ್ಲ ಒಂದು ಮಾಡಿ ಕೂಡಿಕೊಂಡು ಅರಿಮರ್ದನನೊಡನೆ ಕಾದಾಡೋಣವೆಂದನು. ಆಗ ನಾನು ಅವನ ಅಭಿಪ್ರಾಯವನ್ನು ಪ್ರತಿಭಟಿಸಿ ಪುನಃ ಹೀಗೆಂದೆನು: ಒಂದಾನೊಂದು ಕಾಲದಲ್ಲಿ ನಮ್ಮ ವಂಶದ ಕಾಗೆ ಕೌಶಿಕಗಳಲ್ಲಿ ಹಗೆಯುಂಟಾದ ಕಾರಣದಿಂದ ಉಲೂಕಗಳು ನಮ್ಮನ್ನು ಕೊಂದುವಲ್ಲದೆ ಬೇರೇನೂ ಕಾರಣವಿಲ್ಲ. ನಾವು ಅವರೊಡನೆ ಹಗೆ ಕಟ್ಟಿಕೊಂಡು ಬದುಕುವುದು ಸಾಧ್ಯವಿಲ್ಲ. ಅದರಿಂದ ಸತ್ತು ಸೈರಿಸಿದರು ಎಂಬ ಉತ್ತಮಿಕೆಯನ್ನು ಮಾಡಿಕೊಂಡು ಕೌಶಿಕಶಿಖಾಮಣಿಯನ್ನು ಕಂಡು ಬಾಳುವುದು ಹೇಗಿದ್ದರೂ

ಶ್ಲೋ|| ಬಲೀಯಸಾ ಹೀನಬಲೋ ವಿರೋಧಂ
ನ ಭೂತಿ ಕಾಮೋ ಮನಸಾಪಿ ಕುರ್ಯಾತ್
ತಥಾ ಚ ಕುರ್ವನ್ ನ ವಿಶೇತ್ವತಂಗೋ
ದೀಪಾಂತರಂ ಪ್ರಾಪ್ಯ ಯಥಾ ವಿನಶ್ಯೇತ್  ||೧೬೫||

ಟೀ|| ಬಲ್ಲಿದನೊಡನೆ ಬಡವಂ ಸ್ಪರ್ಧೆಯಂ ಮಾಡಲಾಗದು ಮಾಡಿದೊಡುರಿಯೊಳಗೆ ಪತಂಗದ ಪುೞು ಬಿರ್ದಹಗಹುದು ಎಂದೆನಿತಾನುಂ ತೆಱದಿಂ ಪೇೞಲೆನ್ನ ಮಂತ್ರಮೆ ರೋಷಗ್ರಹಾವೇಶದಂತಾಗೆ ಕೆರಳ್ದು ಕೋಪಾನಳ ಬಹಳ ಶಿಖಾಸ್ತೋಮಧೂದುಚಾಯಾಪಟಳ ಪರಿವೃತನಾಗಿ ದಾವಾನಳಶಿಖಿಶಿಖಾನಿಕರಪರಿಷಿಕ್ತನೀಳಾಚಳವರ್ಣಂ ಮೇಘವರ್ಣಂ ಮುಳಿದೀ ಬೂತು ಪಗೆಯೊಳೊಡಂಬಟ್ಟು ಬಂದನಾಗಲ್ವೇೞ್ಕುಮಿವಂಗಂ ತಕ್ಕುದಂ ಮಾಡಿಮೆನೆ ಸಕಳಕಾಕಬಳಮೆನ್ನಂ ಮುಸುಱ* ನಿಶಿತಾಶನಿಪ್ರತಿಮನಿಜಚಂಚೂಚರಣ ಪಕ್ಷಾಘಾತದಿಂದೆನಗಿನಿತವಸ್ಥೆಯಂ ಮಾಡಿ ಪೋದುವೆಂಬುದುಂ ಅರಿಮರ್ದನನದೆಲ್ಲಮಂ ಕೇಳ್ದಿಂತೆಂದಂ : ನಿನ್ನ

ಪೇೞ್ದ ಬುದ್ಧಿ ಹಿತಮುಂ ಉಚಿತಮುಮಪ್ಪುದಾಗಿಯಮಲ್ಲದೊಡೇನಾಯ್ತು

ನಿನಗಲ್ಲದ ಪರಿಭವಮಂ ಮಾಡಿದ ಪ್ರಭು ಪ್ರಭುಗುಣಕಲ್ಲದುದಂ ನೆಗೞ್ದನೆನೆ ಮತ್ತಂ ಚಿರಂಜೀವಿಯಿಂತೆಂದಂ :

ವಿನಯವಿಹೀನನಾತ್ಮಹಿತಕಾರ‍್ಯವಿದೂರನಕಾರಣಪ್ರಕೋ-
ಪನನತಿಮೂರ್ಖನರ್ಥಪರನಸ್ಥಿರನಿಷ್ಟಸುಹೃದ್ವಿರೋ ದು-
ರ್ಜನಪರಿವಾರನೆಂಬವನಿಪಂಗೆ ಹಿತೋಚಿತಮಪ್ಪ ಕಾರ್ಯಮಂ
ಘನತರಭಕ್ತಿಯಿಂ ನುಡಿದವಂ ಕಿಡುಗುಂ ಪರಮಾರ್ಥವೆಲ್ಲಿಯುಂ  ೩೩೫

ನೀತಿಯೆನಿಸುವುದು. ಅಲ್ಲದೆ ಪೂರ್ವೋಕ್ತ ಹೀಗೆನ್ನುವುದಲ್ಲವೇ : ಶ್ಲೋ|| ಬಲ್ಲಿದನೊಡನೆ ಬಡವನು ಸ್ವರ್ಧೆಯನ್ನು ಹೂಡಬಾರದು. ಮಾಡಿದರೆ ಉರಿಯೊಳಗೆ ಪತಂಗದ ಹುಳು ಬಿದ್ದಂತಾಗುವುದು ಎಂದು ಎಷ್ಟೋ ರೀತಿಗಳಿಂದ ಹೇಳಲು ನನ್ನ ಬುದ್ಧಿವಾದವೇ ರೋಷ ಗ್ರಹಾವೇಶದಂತಾಗಲು ಕೆರಳಿ ಕೋಪಾನಳ ಬಹಳ ಶಿಖಾಸ್ತೋಮಧೂಮಚಾಯಾ ಪಟಲಪರಿವೃತನಾಗಿ ದಾವಾನಳಶಿಖಿಶಿಖಾನಿಕರಪರಿಷಿಕ್ತ ನೀಳಾಚಳ ವರ್ಣನಾದ ಮೇಘವರ್ಣನು ಮುನಿಸಿನಿಂದ ಈ ದುಷ್ಟನು ಹಗೆಯೊಡನೆ ಒಪ್ಪಂದ ಮಾಡಿಕೊಂದು ಬಂದಿರಬೇಕು : ಇವನಿಗೆ ತಕ್ಕುದನ್ನುಮಾಡಿರಿ ಎನ್ನಲು ಸಕಲ ಕಾಕಬಲವು ನನ್ನನ್ನು ಮುತ್ತಿ ಮುಸುರಿ ನಿಶಿತಾಶನಿಪ್ರತಿಮ ನಿಜಚಂಚೂಚರಣ ಪಕ್ಷಾಘಾತದಿಂದ ನನಗೆ ಈ ಅವಸ್ಥೆಯನ್ನುಂಟುಮಾಡಿ ಹೋದವು ಎನ್ನಲು ಅರಿಮರ್ದನನು ಅದೆಲ್ಲವನ್ನೂ ಕೇಳಿ ಹೀಗೆಂದನು : ನೀನು ಹೇಳಿದ ಬುದ್ಧಿ ಹಿತಕರವೂ ಉಚಿತವೂ ಆಗದಿದ್ದರೇನಾಯಿತು; ನಿನಗೆ ಮಾಡಬಾರದ ಸೋಲನ್ನೂ ನೋವನ್ನೂ ಮಾಡಿದ ಪ್ರಭು ಪ್ರಭುಗುಣಕ್ಕೆ ಸಲ್ಲದುದನ್ನು ಮಾಡಿದನೂ ಎನ್ನಲು ಪುನಃ ಚಿರಂಜೀವಿ ಹೀಗೆಂದನು: ೩೩೫. ವಿನಯವಿಹೀನನೂ ಆತ್ಮಹಿತಕಾರ್ಯವಿದೂರನೂ ಅಕಾರಣ ಪ್ರಕೋಪನು ಅತಿಮೂರ್ಖನೂ ಅರ್ಥಪರನೂ ಅಸ್ಥಿರನೂ ಇಷ್ಟಸುಹೃದ್ವಿರೋಯೂ ದುರ್ಜನಪರಿವಾರನೂ ಆದ ಅವನಿಪನಿಗೆ ಹಿತೋಚಿತವಾದ ಕಾರ್ಯವನ್ನು ಘನತರ ಭಕ್ತಿಯಿಂದ ನುಡಿದವನು ಕೆಡುವನು. ಇದಕ್ಕೆ

ಅಂತುಮಲ್ಲದೆಯುಂ, ವಾಕ್ಯಂ || ಶ್ರೇಯೋ ಮೂರ್ಖಸ್ಯ ನ ಬ್ರೂಯಾತ್ ಎಂಬ ಕಥೆಗಾನುದಾಹರಣಮಾದೆನೆಂದೊಡರಿಮರ್ದನನದೆಂತೆಂದು ಬೆಸಗೊಳ್ವುದುಂ, ಚಿರಂಜೀವಿಯಿಂತೆಂದಂ: