ಭುವನವಿಭೂಷಣಮೆನಿಸಿ-
ರ್ದ ವರ್ಧಮಾನಾಭಿಧಾನಪುರದೊಳ್ ವಿಲಸ-
ದ್ಭವನದೊಳಿರ್ಪಂ ವಿಪ್ರಂ
ವಿವೇಕನಿ ವಿಷ್ಣುಶರ್ಮನೆಂಬೊಳ್ವೆಸರಿಂ  ೩೮೪

ಅಂತಾತನ ಪೆಂಡತಿ ದುರ್ಮತಿಯೆಂಬಳ್ ಕುಲಟೆ ಕಪಟಪಟುವಪ್ಪುದಱ*ಂ ಪರಪುರುಷರಲ್ಲಿಯೇ ಆಸಕ್ತೆಯಾಗಿರ್ಪುದನಾ ಪಾರ್ವನವಳ ಚೇಷ್ಟಾಭಾವದಿಂದಱ*ತು ನಿಶ್ಚೈಸುವೆನೆಂದೊಂದು ದಿವಸಂ ನೆರೆಯೂರ‍್ಗೆ ಪೋಗಿ ಬಂದಪೆಂ ನೀನ್ ಕರಂ ಬುದ್ಧಿವಂತೆಯಾಗಿರೆಂದ ಪೊಱಮಟ್ಟು ಪೋಗುವಂತೆ ಪೇೞ* ಪೋಗಿ ಮಗುೞ್ದು ಬಂದು ಆಕೆಯಂ ವಂಚಿಸಿ ಮನೆಯೊಳಡಂಗಿರ್ದಂ ಅನ್ನೆಗಮವಳ್ ನೆರೆಮನೆಯ ಪಾದರಿಗನಂ ಬರಿಸುವುದುಮವಂ ಬಂದಾಕೆ ಯನನೇಕಸ್ತೋತ್ರ ಪ್ರಕಾರದಿಂ ಬಯ್ದು ಬಡಿದುಮೆನಗಿನಿತು ದಿವಸಮೇಕೆ ಬೞ*ಯನಟ್ಟಿದೆಯಿಲ್ಲೆಂದು ಮುಳಿದೊಡಾ ಪಾಣ್ಬೆಯಿಂತೆಂದಳ್ :

ಮುನಿಯದಿರು ನಲ್ಲ ನೀನಿಂ-
ತೆನಗೆಲೆ ಸಲೆ ಗಂಡನಪ್ಪ ಷಂಡಂ ನಿಚ್ಚಂ
ಮನೆಸನಿಗೊಂಡಿರೆ ಬರಿಸ-
ಲ್ಕೆನಗಿಂಬಿಲ್ಲಾಗಿ ನಿನ್ನನಾಂ ನೆನೆದಿನಿಸುಂ  ೩೮೫

ಮಱುಗುತ್ತುಂ ಚಿಂತಿಸುತುಂ
ಬೆಱಗಾದಂತಿರ್ದೆನಲ್ಲದಾನೋಪಳೆ ಮೆ-
ಯ್ಗರೆದಿರ್ದೆನಲ್ಲೆನೆಂದಡಿ-
ಗೆಱಗಿರ್ದಾ ಪಾಣ್ಬೆ ಪಾಣ್ಬನಂ ನಂಬಸಿದಳ್  ೩೮೬

ಕೇಳಲು ಉರಗವು ಹೀಗೆಂದಿತು : ೩೮೪. ಭುವನವಿಭೂಷಣವೆನಿಸಿದ್ದ ವರ್ಧಮಾನ ಎಂಬ ಹೆಸರಿನ ಪುರದಲ್ಲಿ ವಿಷ್ಣುಶರ್ಮನೆಂಬ ವಿವೇಕನಿಯಾದ ಬ್ರಾಹ್ಮಣನಿದ್ದನು. ವ|| ಅವನ ಹೆಂಡತಿ ಕುಲಟೆಯೂ ಕಪಟಪಟುವೂ ಆಗಿದ್ದುದರಿಂದ ಪರಪುರುಷರಲ್ಲಿಯೇ ಆಸಕ್ತೆಯಾಗಿರುವುದನ್ನು ಆ ಬ್ರಾಹ್ಮಣನು ಅವಳ ಚೇಷ್ಟಾಭಾವದಿಂದಲೇ ಅರಿತು ನಿಶ್ಚಯಿಸುವೆನು ಎಂದು ಒಂದು ದಿವಸ ನೆರೆಯೂರಿಗೆ ಹೋಗಿ ಬರುವೆನು; ನೀನು ಬುದ್ಧಿವಂತೆಯಾಗಿರು ಎಂದು ಹೊರಹೊರಟು ಹೋಗುವಂತೆ ಹೋಗಿ ಮರಳಿ ಬಂದು ಆಕೆಯನ್ನು ಮನೆಯಲ್ಲಿ ಅಡಗಿಕೊಂಡನು. ಅಷ್ಟರಲ್ಲಿ ಅವಳು ನೆರೆಮನೆಯ ಹಾದರಿಗನನ್ನು ಬರಿಸಲು ಅವನು ಬಂದು ಆಕೆಯನ್ನು ಅನೇಕ ಸ್ತೋತ್ರ ಪ್ರಕಾರದಿಂದ ಬಯ್ದು ಬಡಿದು ನನ್ನನ್ನು ಇಷ್ಟು ದಿವಸ ಏಕೆ ಕರೆಕಳುಹಿಸಲಿಲ್ಲವೆಂದು ಕೋಪಿಸಲು ಆ ನೀಚೆ ಹೀಗೆಂದಳು : ೩೮೫. ನಲ್ಲ ! ನೀನು ಹೀಗೆ ನನ್ನ ಮೇಲೆ ಮುನಿಯಬೇಡ. ನನ್ನ ಗಂಡನಾದ ಷಂಡನು ನಿತ್ಯವೂ ನನ್ನ ಮನೆಶನಿಯಾಗಿರಲು ನಿನ್ನನ್ನು ನಾನು ಕರೆಯಿಸಲು ಸಾಧ್ಯವಾಗಲಿಲ್ಲ. ೩೮೬. ನಿನ್ನನ್ನೇ ನಾನು ಚಿಂತಿಸುತ್ತ ಮರುಗುತ್ತ ಇದ್ದೆ ಎಂದು ಅವನ

ಅಂತು ಚಿತ್ತಂಬಡೆದೆನ್ನಾಣ್ಮನ ಕಣ್ಣೊಡೆವಂತುಪಾಯಮಂ ಚೆಂತಿಸಿದೆಯಪ್ಪೊಡೆ ನಮ್ಮ ಮನಂ ಬಂದಂದದಿಂದ ಕ್ರೀಡಿಸುವಮೆಂಬುದುಮಾ ಪಾಣ್ಬನೆಂದಂ : ಅಂತಪ್ಪೊಡೆ ನಮ್ಮೂರ ಮುಂದಣ ಬಟ್ಟೆಯ ಬೆನಕಂ ಚಿಂತಿತಾರ್ಥಪ್ರದನೆಂಬರಲ್ಲಿಗೆ ನೀಂ ನಾಳೆ ಪೋಗಿ ಪೊಡೆವಟ್ಟು ಪರಕೆಯಂ ತೆಗೆದೆಯಪ್ಪೊಡೆ ನಿನ್ನ ಮನೋರಥ ಸಿದ್ಧಿಯಕ್ಕುಮೆಂದು ಪೇೞ್ವುದುಮವಳಂತೆಗೆಯ್ವೆನೆಂಬುದು ಮದೆಲ್ಲಮನಾ ಪಾರ್ವಂ ಕೇಳ್ದಿಂದೆ   ಮೇಲ್ವಾಯ್ವೆನಪ್ಪೊಡೆ                             ಪುಷ್ಕರನೆನ್ನಂ                ಕೊಂದಪನಾನೀಗಳ್  ಹೀನಸತ್ತ್ವನಾಗಿರ್ಪೆನದಱ*ಂದೇನಾನುಮೊಂದುಪಾಯದಿಂ ಶಕ್ತಿಯಪ್ಪಂತು ಮಾಡಿಕೊಂಡು ಬೞ*ಕ್ಕಿವರ್ಗೆ ತಕ್ಕುದಂ ಮಾೞ್ಪೆನೆಂದಾಗಳೆ ಪೋಗಿ ಚಿಂತಾಸಿದ್ಧಿವಿನಾಯಕನ ಪಿಂತೆ ಕುಳ್ಳಿರ್ಪುದುಮಾ ಜೋಡೆ ನೇಸರ್ಮೂಡಲೊಡಂ ವಿನಾಯಕನಲ್ಲಿಗೆ ಬಂದು ಗಂಧಾಕ್ಷತಧೂಪ ದೀಪಾದಿಗಳಿಂದರ್ಚಿಸಿ ತದನಂತರಂ,

(ರಥೋದ್ಧತೆ)

ಕ್ಷೀರಸಾರಘೃತಪೂರ ಮಂಡಕಾ
ಧಾರಖಂಡಯುತಲಡ್ಡುಕಾವಳೀ
ಪೂರಿಕಾದ್ಯಖಿಲಭಕ್ಷ್ಯ ರಾಶಿಯಿಂ
ಜಾರೆಯರ್ಚಿಸಿದಳಾ ಗಣೇಶನಂ  ೩೮೭

ಷಟ್ಟದರಾಜಿಚುಂಬಿತ ಕಪೋಲಯುಗಂ ದ್ವಿರದಾನನಂ ಸುರ-
ದ್ವಿಟ್ಪುರಘಸ್ಮರಪ್ರಿಯಸುತಂ ಗಣನಾಥನಘೌಘವೇದನಾ-
ರುಟ್ಟಟಲಪ್ರಣಾಶದಹನಂ ಫಣಿನಾಯಕಭೂಷಣಂ ಮರು-
ದ್ರಾಟ್ಟೃಥುಮೌಳಿಲಾಲಿತಪದಂ ನಮಗೀಗೆ ಮನೋರಥಂಗಳಂ  ೩೮೮

ಅಡಿಗಳಿಗೆರಗಿ ಆ ನೀಚೆ ಹಾದರಿಗನನ್ನು ನಂಬಿಸಿದಳು. ವ|| ಹಾಗೆ ದುಃಖಿಸುತ್ತ ನನ್ನ ಗಂಡನ ಕಣ್ಣೊಡೆಯುವ ಉಪಾಯವನ್ನು ಚಿಂತಿಸಿದರೆ ನಮ್ಮ ಮನಸ್ಸು ಬಂದಂತೆ ಕ್ರೀಡಿಸೋಣ ಎನ್ನಲು ಆ ಹಾದರಿಗನು ಹೀಗೆಂದನು : ಹಾಗಾದರೆ ನಮ್ಮೂರು ಮುಂದಿನ ಮಾರ್ಗದಲ್ಲಿರುವ ವಿನಾಯಕನು ಚಿಂತಿತಾರ್ಥಪ್ರದನೆಂದು ಪ್ರಸಿದ್ಧನಾಗಿರುವನು. ಅಲ್ಲಿಗೆ ನೀನು ನಾಳೆ ಹೋಗಿ ನಮಸ್ಕರಿಸಿ ಹರಕೆಯನ್ನು ಹೇಳಿಕೊಂಡರೆ ನಿನ್ನ ಮನೋರಥ ಸಿದ್ಧಿಯಾಗುವುದು ಎಂದು ಹೇಳಲು ಅವಳು ಹಾಗೆಯೇ ಮಾಡುವೆನು ಎಂದಳು. ಆ ಬ್ರಾಹ್ಮಣನು ಅದೆಲ್ಲವನ್ನೂ ಕೇಳಿ ಇಂದೇ ಮೇಲೆ ಹಾಯ್ದರೆ ಹಾದರಿಗನು ನನ್ನನ್ನು ಕೊಲ್ಲುವನು. ನಾನು ಅಸಮರ್ಥನಾಗಿರುವೆನು. ಅದರಿಂದ ಏನಾದರೂ ಒಂದು ಉಪಾಯದಿಂದ ಶಕ್ತನೆನಿಸಿ ಬಳಿಕ ಇವರಿಗೆ ತಕ್ಕುದನ್ನು ಮಾಡುವೆನು ಎಂದು ಆಗಲೇ ಹೋಗಿ ಚಿಂತಾಸಿದ್ಧಿ ವಿನಾಯಕನ ಹಿಂದೆ ಕುಳ್ಳಿರಲು ಆ ಜೋಡೆ ಸೂರ್ಯೋದಯವಾಗಲು ವಿನಾಯಕನಲ್ಲಿಗೆ ಬಂದು ಗಂಧಾಕ್ಷತಧೂಪದೀಪಾದಿಗಳಿಂದ ಅರ್ಚಸಿ ಬಳಿಕ ೩೮೭. ಕ್ಷೀರಸಾರ, ಘೃತಪೂರ, ಮಂಡಿಗೆ, ಲಡ್ಡುಗೆ, ಪೂರಿಗೆ ಮೊದಲಾದ ಅಖಿಲ ಭಕ್ಷ್ಯರಾಶಿಗಳಿಂದ ಆ ಜಾರೆ ಗಣೇಶನನ್ನು ಅರ್ಚಿಸಿದಳು. ೩೮೮. ತುಂಬಿಗಳ ಸಮೂಹದಿಂದ ಮುತ್ತಿಟ್ಟ ಕೆನ್ನೆಗಳನ್ನುಳ್ಳವನೂ ಆನೆಮುಖದವನೂ ತ್ರಿಪುರಾಸುರರನ್ನು ನಾಶಮಾಡಿದ ಶಿವನ ಪ್ರಿಯಸುತನೂ ಗಣನಾತನೂ ಪಾಪಸಮೂಹದ ನೋವೆಂಬ ರೋಗಗಳನ್ನು ಪರಿಹರಿಸುವ ಅಗ್ನಿಯೂ ಫಣಿನಾಯಕಭೂಷಣನೂ ದೇವೇಂದ್ರನ ಕಿರೀಟವು ಆಡುತ್ತಿರುವ ಎಂದು ತುತಿಯಿಸಿ ಪೊಡೆವಟ್ಟೆನ್ನ ಗಂಡನಂ ಕಣಾಣ್ಗದಂತು ಮಾಡಿದೊಡೆ ನಿನಗೆ ನಾಂ ಪೊನ್ನಪಟ್ಟಮಂ ಬೊಟ್ಟುಮನೀವೆನೆಂಬುದುಂ ಪ್ರತಿಮೆಯ ಪೆಱಗಿರ್ದ ಪಾರ್ವನಂತಪ್ಪೊಡೆ ನಿನ್ನ ಗಂಡಂಗೆ ತಲೆವೂಸಿ ಮೀಯಲೆಱೆದು ಷಡ್ರಸಾನ್ನಮನಿರ್ಪತ್ತೊಂದುದಿವಸಮಿಂಬಾಗಿಯುಣ ಲಿಕ್ಸಿದೆಯಪ್ಪೊಡೆಯಾತನ ಕಣ್ಣೊಡೆಗುಮೆಂಬುದುಂ ಪಾಣ್ಬೆ ನಂಬಿ ದೈವಂ ಸನ್ನಿದಮಾಗಿರ್ದೆನ್ನೊಡನೆ ನುಡಿದುದಿನ್ನೆನಗೇನೆಂದು ಮನದೊದಳ್ ಪಿರಿದು ಸಂತಸಂಬಡೆದು ಮನೆಗೆ ಪರಿತಂದು ನಾನಾವಿಧಭಕ್ಷ್ಯಭೋಜ್ಯಂಗಳುಮನನೇಕ ಫಲಪತ್ರಶಾಕಂಗಳುಮಂ ಸುಸ್ವಾದುಗಳಪ್ಪಂತಟ್ಟು ಪಾರ್ವಂ ಬರಲತ್ಯಾದರದಿಂ ಕಾಲ್ಗೆರಗಿ ಮೆಯ್ಯಂ ಕಯ್ಯಿನೊತ್ತಿ ಮೀಯಲಱೆದು ದಿವ್ಯಾಹಾರಂಗಳನುಣಲಿಕ್ಕಿ ಬೞ*ಕ್ಕಿಂತೆಂದಳ್ : ಈಗಳ್ ಕೆಲವುದಿವಸದಿಂದಿತ್ತ ನಿಮ್ಮೊಡಲ್ ಬಡವಾಗುತ್ತುಂ ಬಂದಪುದು; ಶರೀರಂ ಸಮಂತಿರ್ಷಿನಂ ಸಂತತಮಿಂತೆ ಸ್ನಾನ ಭೋಜನಂಗೆಯ್ದು ನಿಶ್ಚಿಂತಮಿರಿಮೆಂಬುದುಂ ವಿಷ್ಣುಶರ್ಮಂ ದುರ್ವ್ಮತಿಯ  ಕೂರ್ಮೆಗೆ ಸಂತೋಷಂಬಟ್ಟುಮಂತೆಗೆಯ್ವೆನೆಂಬುದುಮಾ ಸ್ಥಿತಿಯೊಳೆ ನಿಚ್ಚನಿಚ್ಚಂ ಸ್ನಾನಭೋಜನಂಗೆಯ್ಯುತ್ತಿರ್ದೊಂದು ದಿವಸಂ ಪಾರ್ವನಾ ಪಾಣ್ಬೆಗೆ ನಂಬುಗೆಯಂ ಪುಟ್ಟಸಲೆಂದು ಸಮೀಪಕ್ಕೆ ಕರೆದಿಂತೆಂದಂ :

ಪಟಲಂ ಕಣ್ಣೊಳ್ ಕವಿದುಂ
ಗುಟಮಂ ಮೊದಲಾಗಿ  ಕಾಣೆನೆಂದೊಡೆ ಕುಲಟಾ
ಪಟು ರಾಗಿಸಿ ಮನದೊಳಗ
ಕ್ಕಟ ಮರ್ದಂ ಮಾೞ್ಪಮುಸಿರದಿರಿಮೆನೆ ಪಾರ್ವಂ  ೩೮೯

ಪಾದಗಳುಳ್ಳವನೂ ಆದ ಗಣೇಶನು ನಮ್ಮ ಮನೋರಥಗಳನ್ನು ಈಡೇರಿಸಲಿ ವ|| ಎಂದು ಸ್ತುತಿಸಿ ನಮಸ್ಕರಿಸಿ ನನ್ನ ಗಂಡನನ್ನು ಕಣ್ಗಾಣದಂತೆ ಮಾಡಿದರೆ ನಿನಗೆ ನಾನು ಹೊನ್ನಪಟ್ಟವನ್ನೂ ಬೊಟ್ಟನ್ನೂ ಕೊಡುವೆನು ಎನ್ನಲು ಪ್ರತಿಮೆಯ ಹಿಂದಿದ್ದ ಬ್ರಾಹ್ಮಣನು ಹಾಗಾದರೆ ನಿನ್ನ ಗಂಡನ ತಲೆಗೆ ಎಣ್ಣೆ ಹಚ್ಚಿ ಮೀಯಿಸಿ ಷಡ್ರಸಾನ್ನವನ್ನು ಇಪ್ಪತ್ತೊಂದು ದಿವಸಗಳವರೆಗೆ ತೃಪ್ತಿಯಾಗುವಷ್ಟು ತಿನ್ನಿಸಿದರೆ ಆತನ ಕಣ್ಣು ಒಡೆಯುವುದು ಎಂದನು. ಆ ಜೋಡೆಯು ಅದನ್ನು ನಂಬಿ ದೈವವು ಸಾಕ್ಷಾತ್ಕಾರವಾಗಿ ತನ್ನೊಡನೆ ನುಡಿಯಿತು ; ಇನ್ನು ನನಗೇನು ಎಂದು ಮನಸ್ಸಿನಲ್ಲೇ ಅತಿಶಯ ಸಂತಸತಾಳಿ ಮನೆಗೆ ಬಂದು ನಾನಾವಿಧ ಭಕ್ಷ್ಯಭೋಜ್ಯಗಳನ್ನೂ ಅನೇಕ ಫಲಪತ್ರಶಾಕಗಳನ್ನೂ ಸುಸ್ವಾದುವಾಗುವಂತೆ ಅಡುಗೆಮಾಡಿ ಬ್ರಾಹ್ಮಣನು ಬರಲು ಅತ್ಯಾದರದಿಂದ ಕಾಲಿಗೆ ಎರಗಿ ಮೆಯ್ಯನ್ನು ಕಯ್ಗಳಿಂದ ಒತ್ತಿ ಮೀಯಿಸಿ ದಿವ್ಯಾಹಾರಗಳನ್ನು ಬಡಿಸಿ ಹೀಗೆಂದಳು : ಈಗ ಕೆಲವು ದಿವಸಗಳಿಂದ ನಿಮ್ಮ ಒಡಲು ಬಡವಾಗುತ್ತಿರುವುದು. ಶರೀರವು ಸರಿಯಾಗುವವರೆಗೆ ಹೀಗೆ ಸದಾ ಸ್ನಾನಭೋಜನಗಳನ್ನು ಮಾಡಿ ನಿಶ್ಚಿಂತರಾಗಿರಿ ಎನ್ನಲು ವಿಷ್ಣುಶರ್ಮನು ದುರ್ಮತಿಯ ಪ್ರೀತಿಗೆ ಸಂತೋಷಪಟ್ಟು ಹಾಗೆಯೇ ಆಗಲಿ ಎನ್ನಲು ಹಾಗೆಯೇ ನಿತ್ಯನಿತ್ಯವೂ ಸ್ನಾನಭೋಜನಗಳನ್ನು ಮಾಡುತ್ತಿರಲು ಒಂದು ದಿನ ಆ ಬ್ರಾಹ್ಮಣನು ಆ ಜೋಡೆಗೆ ನಂಬಕೆಯನ್ನು ಹುಟ್ಟಿಸಲು ಸಮೀಪಕ್ಕೆ ಕರೆದು ಹೀಗೆಂದನು : ೩೮೯. ಕಣ್ಣಿನಲ್ಲಿ ಪೊರೆ ಕವಿದು ಉಂಗುಟವನ್ನೂ ಕಾಣಲಾರೆ ಎನ್ನಲು ಆ ಕುಲಟಾಪಟು ಮನಸ್ಸಿನಲ್ಲೇ ಸಂತೋಷಿಸಿ

ಅಂತೆಗೆಯ್ವೆನೆಂದುಸಿರದಿರ್ದು ಮತ್ತಂ ಕೆಲವು ದಿವಸಕ್ಕಾತಂ ತನಗಳವುಂ ಮನೋಬಲಮುಮಾಗೆಪಗೆಯಂ ಕೊಲಲ್ಬಗೆದುಮೀಗಳ್ ನೀನಪ್ಪುದಂ ಕಾಣೆನೆಂದಿರ್ಪುದುಮಾ ಪಾಣ್ಬೆ ನಂಬಿ ನಿಮ್ಮ ಕಣ್ಗೊಳ್ಳಿದುವಕ್ಕೆಂದು ವಿನಾಯಕಂಗೆ ಪಟ್ಟಮಂ ಬೊಟ್ಟುಮಂ ಕೊಟ್ಟು ಪೊಡೆಮಟ್ಟುವಂದಪೆನೆಂದಾ ನೆವದೊಳೆ ಪರಕೆಯಂ ವಿನಾಯಕಂಗೆ ಕೊಟ್ಟುಬಂದು ಬೞ*ಕ್ಕೆ ಪಾಣ್ಬನಂ ಬರಿಸಿ ಪಾರ್ವನಿರ್ದಂತಿರ್ವರುಂ ಒಡಗೊಂಡು ನಡುವಿರುಳವರ್ ನಾಟಕಂ ನಲಿದು ಮಱೆದೊಱಗಿರ್ದ ಸಮಯದೊಳಾ ಪಾಣ್ಭನಂ ಕೊಂದು ತನ್ನ ಬಗೆಯುಮಂ ಬಗೆದಂತೆ ತೀರ್ಚಿದಂ.

ಅಂತೆ ಅನುಮೆನ್ನ ಪಗೆಯುಮಂ ಬಗೆಯೊಳೆ ಸಾಸಲಿರ್ದಪೆಂ ನೀನುಸಿರದಿರೆಂದಾ ನಾಗಿಗೆ ನಾಗಂ ಪೇೞ್ದು ಮತ್ತಂ ಮಂಡೂಕಂಗಳಂ ಪೊತ್ತು ಮೆಲ್ಲಮೆಲ್ಲನೆ ತೊೞಲುತ್ತಮಿರೆ ಜಲಪಾಲನೆಂದನೇಂ ಗಡ ಭಾವಾ! ನೀನಿಂದು ಕರಂ ಮಂದಗಮನನೆಯಾದೆಯೆಂದೊಡೆ ವೃದ್ಧೋರಗನಿಂತೆಂದಂ : ದೇವಾ! ನಾಂ ಹಲವು ದಿವಸಮಾಹಾರಂಬಡೆಯದೆ ನಡೆಯಲಾರ್ತಪೆ ನಿಲ್ಲೆಂಬುದುಮಂತಪ್ಪೊಡಂ ನಿನ್ನ ಪಸಿವು ಕೆಟ್ಟು ಬಲಮಪ್ಪನ್ನವರಂ ಕಿಱುಕಿಱುಗಪ್ಪೆಗಳಂ ತಿನುತಿರೆನೆ ಮಹಾಪ್ರಸಾದಮಂತೆಗೆಯ್ವನೆಂದು ದಿವಸಗತಿಯಿಂ ಕಿಱುಗಪ್ಪೆಗಳೆಲ್ಲಮುವಂ ಬಱ*ದಾಗೆ ಮಾಡೆ ತನಗೆ ಸ್ತ್ಪತಂ ಸಮನಿಸೆ ಪಿರಿಯ ಕಪ್ಪೆಗಳೆಲ್ಲಮಂ ಗತಿಗೆಟ್ಟವನೆಲ್ಲಮನೊಟ್ಟನೆ ಮಾಡಿ ಬೞ*ಕ್ಕೆ ಜಲಪಾಲನುಮಂ ತಿಂದುದು, ಅದಱ*ಂ.

ಶ್ಲೋ|| ಸ್ಕಂಧೇನಾಪಿವಹೇಚ್ಛತ್ರುಂ ಕಾರ‍್ಯಸಾಧನ ಬುದ್ಧಿಮಾನ್
ವಹತಾ ಕೃಷ್ಣಸರ್ಪೇಣ ಮಂಡೂಕೋ ವಿನಿಪಾತಿತಃ  ||೧೮೬||

ಮದ್ದನ್ನು ಮಾಡೋಣ ಸುಮ್ಮನಿರಿ ಎನ್ನಲು ಬ್ರಾಹ್ಮಣನು ವ|| ಹಾಗೆಯೇ ಆಗಲಿ ಎಂದು ಸುಮ್ಮನಿದ್ದನು. ಕೆಲವು ದಿವಸಗಳಲ್ಲಿ ಆತನು ತನ್ನಲ್ಲಿದ್ದ ಸಾಮರ್ಥ್ಯವೂ ಮನೋಬಲವೂ ಅಕವಾದುದನ್ನು ಕಂಡು ಹಗೆಯನ್ನು ಕೊಲ್ಲಬೇಕೆಂದು ಬಗೆದು ಈಗ ನಿನ್ನನ್ನೂ ಕಾಣಲಾರೆ ಎನ್ನಲು ಆ ಜೋಡೆ ನಂಬಿ ನಿಮ್ಮ ಕಣ್ಣಿಗೆ ಒಳ್ಳೆಯದಾಗಲಿ ಎಂದು ವಿನಾಯಕನಿಗೆ ಪಟ್ಟವನ್ನೂ ಬೊಟ್ಟನ್ನೂ ಕೊಟ್ಟು ನಮಸ್ಕರಿಸಿ ಬರುವೆನು ಎಂದು ಆ ನೆಪದಿಂದ ಹರಕೆಯನ್ನು ವಿನಾಯಕನಿಗೆ ಅರ್ಪಿಸಿ ಬಂದು ಹಾದರಿಗನನ್ನು ಕರೆಯಿಸಿ ಬ್ರಾಹ್ಮಣನು ಇದ್ದಂತೆಯೇ ಜತೆಯಾಗಿ ನಡುರಾತ್ತಿಯಲ್ಲಿ ನಾಟಕನಲಿದು ಮರೆದೊರಗಿದ್ದ ಸಮಯದಲ್ಲಿ ಆ ನೀಚನನ್ನು ಕೊಂದು ತನ್ನ ಸಂಕಲ್ಪವನ್ನು ನೆರವೇರಿಸಿಕೊಂಡನು. ಹಾಗೆಯೇ, ನಾನೂ ನನ್ನ ಹಗೆಯನ್ನು ಅಂತರಂಗದಲ್ಲೇ ಸಾಸಲಿರುವೆನು ; ನೀನು ಸುಮ್ಮನಿರು ಎಂದು ಆ ನಾಗಿಗೆ ನಾಗನು ಹೇಳಿ ಪುನಃ ಮಂಡೂಕಗಳನ್ನು ಹೊತ್ತು ಮೆಲ್ಲ ಮೆಲ್ಲನೆ ತೊಳಲಾಡುತ್ತಿರಲು ಜಲಪಾಲನು ಹೀಗೆಂದನು : ಏನಯ್ಯಾ ಭಾವ ! ನೀನಿಂದು ತುಂಬ ಮಂದಗಮನನಾದೆ ಎನ್ನಲು ಅದಕ್ಕೆ ವೃದ್ಧೋರಗನು ಹೀಗೆಂದನು : ದೇವಾ ! ನಾನು ಹಲವು ದಿವಸಗಳಿಂದ ಆಹರ ಪಡೆಯದೆ  ಸಾಧ್ಯವಾಗುವುದಿಲ್ಲ ಎನ್ನಲು ಹಾಗಾದರೆ ನಿನ್ನ ಹಸಿವು ನೀಗುವಂತೆಯೂ ಬಲಬರುವಂತೆಯೂ ಕಿರುಗಪ್ಪೆಗಳನ್ನು ತಿನ್ನುತ್ತಿರು ಎನ್ನಲು ಮಹಾಪ್ರಸಾದ, ಹಾಗೆಯೇ ಆಗಲಿ ಎಂದು ದಿವಸಗತಿಯಿಂದ ಕಿರುಗಪ್ಪೆಗಳೆಲ್ಲವನ್ನೂ ಬರಿದಾಗುವಂತೆ ಮಾಡಿ ತನ್ನಲ್ಲಿ ಸತ್ತ್ವವುಂಟಾಗಲು ಹಿರಿಯ ಕಪ್ಪೆಗಳೆಲ್ಲವನ್ನೂ ತಿಂದು ಎಂಬ ಕಥಾಪ್ರಪಂಚಮನಱ*ದೆನಪ್ಪುದಱ*ಂ ರಿಪುವನುಪಾಯದೊಳೆ ಕಿಡಿಸುವೆನೆಂದುಮವಂದಿರೇನೆಂದೊಡಂ ಸೈರಿಸಿಯವರ ಮನಕ್ಕೆ ವಿಶ್ವಾಸಂ ಪುಟ್ಟುವಂತೆ ನಡೆದು ಸ್ವಾರ್ಥಮಂ ಸಿದ್ಧಿಸಿದೆಂ. ಎಂತುಂ ಪೂರ್ವೋಕ್ತಮಿಂತೆಂಬುದಲ್ತೆ :

ಶ್ಲೋ|| ಶಸ್ತ್ರೈರ್ಹತಾಸ್ತು ರಿಪವೋ ನ ಹತಾ ಭವಂತಿ
ಪ್ರಜ್ಞಾಹತಾಸ್ತು ರಿಪವಃ ಪ್ರಹತಾ ಭವಂತಿ
ಶಸ್ತ್ರಂ ನಿಹಂತಿ ಪುರುಷಸ್ಯ ಶರೀರಮೇಕಂ
ಪ್ರಜ್ಞಾಕುಲಂ ಸಹಬಲಂ ಸಹಸಾ ನಿಹಂತಿ  ||೧೮೭||

ಟೀ|| ಕೈದುಗಳಿಂ ಗಾಯವಡೆದರ್ ಮರಳಿಯೇೞ್ವರ್ ಪುರುಷಬುದ್ಧಿಹತರ್ ಕೆಟ್ಟವರುಗಳೇ ಅದಹಗೆಂದೊಡೆ ಶಸ್ತ್ರಮೆಂಬುದು ಪುರುಷನ ಶರೀರಮೊಂದನೆ ಕಿಡಿಸುವುದು, ಪ್ರಜ್ಞೆಯೆಂಬುದು ಹಗೆಗಳಂ ವಂಶಸಹಿತಂ ಕಿಡಿಸುವುದು ಎಂಬುದು ಮತ್ತಂ,

ಶ್ಲೋ|| ಏಕಂ ನಿಹನ್ಯಾತ್ ಸಂದೇಹಃ ಕಾಂಡೋ ಮುಕ್ತೋ ಧನುಷ್ಮತಾ
ಬುದ್ಧಿರ್‌ಬುದ್ಧಿಮತಾಂ ದೃಷ್ಟ್ವಾ ಹನ್ಯಾದ್ರಾಷ್ಪ್ರಂ ಸರಾಜಕ  ||೧೮೮||

ಟೀ|| ಬಿಲ್ಗಾಱನೆಚ್ಚಂಬು ಒರ್ಬನ ಕೊಲ್ವುದೋ ಕೊಲ್ಲದೋ ಸಂದೇಹವು. ಬುದ್ಧಿವಂತರ ಮಂತ್ರವು ಅರಸುಸಹಿತವಾಗಿರ್ದ ರಾಜ್ಯವನ್ನೇ ಕಿಡಿಸುವುದು.

ಸುರರಾಜಪ್ರಿಯಮಂತ್ರಿಯಿಂತಖಳ ದೈತ್ಯಾಮಾತ್ಯರಂ ಗೆಲ್ದುವ
ಚ್ಚರಿಯಪ್ಪಂತಿರೆ ಸಾಹಸಾಂಕಗುಣನಂ ಶೌರ‍್ಯಾನ್ವಿತಂ ಗೆಲ್ದನಾ
ಸುರಮಪ್ಪಂತಿರೆ ಕಾಕಮಂತ್ರಿಯುಮುಳೂಕಾಮಾತ್ಯರಂ ಗೆಲ್ದನಂ
ತಿರೆ ವಿಶ್ವಾಸದಿ ಗೆಲ್ವಸಾಧ್ಯನೃಪರಂ ವಿದ್ವಜ್ಜನಕ್ಕಾಶ್ರಯಂ  ೩೯೦

ಬಳಿಕ ಜಲಪಾಲನನ್ನೂ ತಿಂದಿತು. ಅದರಿಂದ ಶ್ಲೋ|| ಕಾರ್ಯಸಾಧನೆಯ ಬುದ್ಧಿಯುಳ್ಳ ಕೃಷ್ಣಸರ್ಪವು ಶತ್ರುಗಳನ್ನು ಭುಜದ ಮೇಲೆ ಹೊತ್ತು ಕೊಂಡು ಕೂಡ ಮಂಡೂಕಗಳನ್ನು ನಾಶಮಾಡಿತು ಎಂಬ ಕಥಾಪ್ರಪಂಚವನ್ನು ತಿಳಿದುಕೊಂಡೆನು. ಅದರಿಂದ ಶತ್ರುವನ್ನು ಉಪಾಯದಿಂದ ಕೆಡಿಸುವೆನು ಎಂದು ಅವರು ಏನೆಂದರೂ ಸಹಿಸಿಕೊಂಡು ಅವರ ಮನಸ್ಸಿಗೆ ವಿಶ್ವಾಸಹುಟ್ಟುವಂತೆ ನಡೆದು ಸ್ವಾರ್ಥವನ್ನು ಸಿದ್ಧಿಸಿದೆ. ಹೇಗೂ ಪೂರ್ವೋಕ್ತ ಹೀಗಿರುವುದಲ್ಲವೇ? : ಶ್ಲೋ|| ಆಯುಧಗಳಿಂದ ಗಾಯಗೊಂಡವರು ಮರಳಿಯೇಳುವರು; ಬದ್ಧಿಹತರಾದ ಪುರುಷರು ಸರ್ವನಾಶ ಹೊಂದುವರು. ಶಸ್ತ್ರವೆಂಬುದು ಪುರುಷನ ಶರೀರವೊಂದನ್ನೇ ನಾಶಮಾಡುವುದು ; ಪ್ರಜ್ಞೆಯೆಂಬುದು ಹಗೆಗಳನ್ನು ವಂಶಸಹಿತ ನಿರ್ಮೂಲ ಮಾಡುವುದು. ಅಲ್ಲದೆ, ಶ್ಲೋ|| ಬಿಲ್ಲುಗಾರನ್ನು ಪ್ರಯೋಗಿಸಿದ ಬಾಣವು ಒಬ್ಬನನ್ನೂ ಕೊಲ್ಲುವುದೋ ಕೊಲ್ಲದೋ ಎಂಬುದರಲ್ಲಿ ಸಂದೇಹ ; ಬುದ್ಧಿವಂತರಾದವರ ಮಂತ್ರೋಪಾಯವು ರಾಜಸಹಿತವಾಗಿ ರಾಜ್ಯವನ್ನೇ ನಾಶಮಾಡುವುದು. ೩೯೦. ದೇವೇಂದ್ರನ ಮಂತ್ರಿಗಳು ಹೀಗೆ ರಾಕ್ಷಸರ ಮಂತ್ರಿಗಳನ್ನು ಗೆದ್ದು ಆಶ್ಚರ್ಯವಾಗುವಂತೆ ಇರಲು ಸಾಹಸಾಂಕಗುಣನನ್ನು ಶೌರ್ಯಾನ್ವಿತನು ಗೆದ್ದನು. ಭಯಂಕರವಾಗಿ ಹೋರಾಡಿ ಕಾಕಮಂತ್ರಿಯು ಗೂಬೆಗಳ ಅಮಾತ್ಯರನ್ನು ಗೆದ್ದನು. ಹಾಗಿರಲು ಅಸಾಧ್ಯರಾದವರನ್ನು ಅಂತು ಗೆಲ್ದ ಮೇಘವರ್ಣಂ ಪ್ರಧಾನರ್ ಸಹಿತಂ ಸುಖಸಂಕಥಾವಿನೋದದಿಂದಿರ್ದಂ.

ಇದು ವಿನಮದಮರರಾಜಮೌಳಿಮಾಣಿಕ್ಯ ಮರೀಚಿಮಂಜರೀ ಪುಂಜರಂಜಿತ ಭಗವದ್ಭವಾನೀ ವಲ್ಲಭಚರಣ ಸರಸೀರುಹಷಟ್ಟರಣಂ ಶ್ರೀಮನ್ಮಹಾಸಂವಿಗ್ರಹಿ ದುರ್ಗಸಿಂಹವಿರಚಿತಮಪ್ಪ ಪಂಚತಂತ್ರದೊಳ್ ವಿಶ್ವಾಸಪ್ರಕರಣ ವರ್ಣನಂ ತೃತೀಯ ತಂತ್ರಂ

ಸಮಾಪ್ತಂ

ಗೆದ್ದು ವಿದ್ವಜ್ಜನಕ್ಕೆ ಆಶ್ರಯವಾಗುವುದು. ಹಾಗೆ ಗೆದ್ದ ಮೇಘವರ್ಣನು ಪ್ರಧಾನರ ಸಹಿತ ಸುಖಸಂಕಥಾವಿನೋದದಲ್ಲಿದ್ದನು. ಇದು ವಿನಮದಮರರಾಜಮೌಳಿಮಾಣಿಕ್ಯ ಮರೀಚಿ   ಮಂಜರೀಪುಂಜರಂಜಿತಭಗವದ್ಭವಾನೀವಲ್ಲಭಚರಣಸರಸೀರುಹಷಟ್ಚರಣನಾದ ಶ್ರೀಮನ್ಮಹಾಸಂವಿಗ್ರಹಿ ದುರ್ಗಸಿಂಹವಿರಚಿತವಾದ ಪಂಚತಂತ್ರದಲ್ಲಿ ವಿಶ್ವಾಸಪ್ರಕರಣ ವರ್ಣನವೆಂಬ ತೃತೀಯ ತಂತ್ರವು ಸಮಾಪ್ತವಾದುದು.