ಮುನ್ನಮೊರ್ವ ನಿರ್ಬುದ್ಧಿ ಗಾರುಡಿಗಂ ಗಾರುಡಮಂ ಕಲ್ತು ವಿದ್ಯಾಪ್ರತ್ಯಯಮಂ ನೋಡಲೆಂದು ಸರ್ಪದಷ್ಟನನಱಸುತ್ತುಂ ಬರ್ಪಾತಂ ಅಡವಿಯೊಳೊಂದು ಪೊದಱೊಳ್ ಪುಲಿಯಂ ಪಾವು ಕೊಂಡು ಪ್ರಾಣವಿಯೋಗಮಾಗಲಿರ್ದುದಂ ಕಂಡು ಸರ್ಪದಷ್ಟನೆಚಿದಱ*ದೀ ಪ್ರಾಣಿಯಂ ಸಾಯಲೀಯೆನೆತ್ತಿದ ಪೆನೆ೦ದೊಡೊಡನೆಯವರ್ ಸತ್ತ ಪುಲಿಯನೆತ್ತುವುದಾವ ಬುದ್ಧಿ ಬೇಡೆಂಬುದಂ ಮಾಣದಾತನೆತ್ತುವುದುಮಾ ಪುಲಿ ಮುಂದಿರ್ದ ಗಾರುಡಿಗನಂ ತಿಂದುದು.

ಅದಱ*ಂದಿದರ್ಕೆ ಪ್ರಾಣಮಂ ಪಡೆಯಲ್ವೇೞ್ಕಮೆಂಬುದೊಂದಾಗ್ರಹಮಂ ದೇವರ್ ಮಾಣ್ಬುದೆನೆ  ತುಂಗಭುಜನತಿಪ್ರಸಂಗದೊಳೇನುಮನುಸಿರದಿರಿಮೆಂದು ಮತ್ತಮಿಚಿತೆಂದಂ:

ಇಷ್ಟನ್ನ ಮಾಡಿದಿರಿ. ಇವರಿಬ್ಬರ ವಿದ್ಯೆ ಹೇಗೆ ಸತ್ಯವಾಯಿತೋ ಹಾಗೆ ಮಂತ್ರಸಿದ್ದನ ವಿದ್ಯೆಯೂ ಸತ್ಯವಾಗುವುದರಲ್ಲಿ ಸ೦ದೇಹವಿಲ್ಲ. ಅದರಿಂದ ಈ ಸಿಂಹಕ್ಕೆ ಪ್ರಾಣ ಬರಿಸಿ ನೋಡುವ ವಿನೋದ ತರವಲ್ಲ. ಅರಸನು ಈ ಆಶ್ಚರ್ಯವನ್ನು ನೋಡೋಣ ಸುಮ್ಮನಿರಿ ಎನ್ನಲು ಮತ್ತೊಬ್ಬ ಮ೦ತ್ರಿಯು ಹೀಗೆಂದನು: ದೇವಾ! ನೀವು ಹೀಗೆ ಅಸದಾಗ್ರಹಿಗಳಾಗಿ ಹೇಳಿದಿರಿ; ಹಿರಿಯ ಮಂತ್ರಿ ಹೇಳಿದಂತೆ ೩೪೫. ಸಿಂಹವಲ್ಲವೆ, ಅದು ತಂತ್ರಮಂತ್ರಗಳಿಂದ ದಿವ್ಯ ಸಂಭೂತವಾದುದಲ್ಲವೇ; ಅದರ ಮುಂದೆ ನಿಲ್ಲಲೂ, ಅದನ್ನುಗೆಲ್ಲಲೂ ನಮ್ಮಿಂದ ಸಾಧ್ಯವೇ; ವ || ಅದರಿಂದ ಅದಕ್ಕೆ ಜೀವ ಬರಿಸುವುದು ಯೋಗ್ಯವಲ್ಲ; ಈ ಸಂದರ್ಭಕ್ಕೆ ಒಂದು ಕಥೆಯುಂಟು. ಅರಸನು ಅದೇನೆಂದು ಕೇಳಲು ಮಂತ್ರಿ ಹೇಳುವನು: ಹಿಂದೆ ಒಬ್ಬ ಬುದ್ಧಿಹೀನ ಗರುಡಿಗನು ಗಾರುಡವನ್ನು ಕಲಿತು ವಿದ್ಯಾಪ್ರತ್ಯಯವನ್ನು ನೋಡಲೆಂದು ಸರ್ಪದಷ್ಟನನ್ನು ಅರಸುತ್ತ ಬರುತ್ತ ಅಡವಿಯಲ್ಲಿ ಒಂದು ಪೊದೆಯಲ್ಲಿ ಹುಲಿಯನ್ನು ಹಾವು ಕಚ್ಚಿ ಸತ್ತುಹೋಗಲಿದ್ದುದನ್ನು ಕಂಡು ಸರ್ಪದಷ್ಟನೆಂದು ತಿಳಿದು ಈ ಪ್ರಾಣಿಯನ್ನು ಸಾಯಲು ಬಿಡುವುದಿಲ್ಲ; ಬದುಕಿಸುವೆನು ಎನ್ನಲು ಅವರು ಸತ್ತ ಹುಲಿಯನ್ನು ಬದುಕಿಸುವುದು ಯಾವ ಬುದ್ಧಿ, ಬೇಡ ಎನ್ನಲು ಕೇಳದೆ ಆತನು ಅದನ್ನು ಬದುಕಿಸಲು ಆ ಹುಲಿ ಮುಂದೆ ಇದ್ದ ಗಾರುಡಿಗನನ್ನು ತಿಂದಿತು. ಅದರಿಂದ ಇದಕ್ಕೆ ಪ್ರಾಣವನ್ನು ತುಂಬಬೇಕು ಎಂಬ ಒಂದು ಆಗ್ರಹವನ್ನು ಪ್ರಭುಗಳು ಬಿಡಬೇಕು ಎನ್ನಲು ತುಂಗಭುಜನು

ಪೊಂಗುವುದು ಗಡತಿಕೋಪದೆ
ಕೆಂಗೋಲ್ಗೊಳ್ವುದು ಗಡಿಂದ್ರಜಾಲದ ಸಿಂಗಂ
ತಾಂ ಗಡ! ಪರಿಗುಂ ಗಡ ! ಪಾ-
ಯುಂ ಗಡ! ತಿಂಗು ಗಡಮಾದೊಡೇಂ ನೋೞ*ವಿದಂ  ೩೫೬

ಎಂದೆಂತಾನುಂ ಮಂತ್ರಿಗಳ ಮಾತಂ ಕೈಕೊಳ್ಳದೆ ಮಂತ್ರಸಿದ್ಧನಂ ಕರೆದು ಬೇಗಮಿದಱ ಪ್ರಾಣಮಂ ಪಡೆಯಿಮೆನಲಾತನಂತೆಗೆಯ್ವೆನೆಂದು ಮತ್ತಮಿಂತೆಂದಂ; ದೇವಾ ! ನೀವೀ ಸಿಂಹ ಮನಿಂದ್ರಜಾಲದ ಸಿಂಹಮೆಂದಪಹಾಸ್ಯಂಗೆಯ್ಯಲ್ವೇಡೆಂತಕ್ಕುಮೆಂದಱ*ಯಲ್ ಬಾರದಾಂ ಮಂತ್ರಿಸುವನ್ನಂ ತಂತ್ರಮಂ ಬರಿಸಿ ಸನ್ನದ್ಧರಾಗಿರಿಮೆನಲರಸನಂತೆಗೆಯ್ವನೆಂದು ಮದಾಂಧಸಿಂಧುರಮನೇಱ*ಚತುರಂಗಬಲಮನೊಂದು ಮಾಡಿಕೊಂಡು ನಿಂದಂ. ಅನ್ನೆಗಮಾ ಸಿದ್ದಂ ಸಿಂಗಕ್ಕೆ ಪ್ರಾಣಮಂ ಪಡೆವುದುಂ ಮಹಾಪ್ರಳಯಕಾಲಾಂಭೋದನಿನದದಿಂ Uಜಱ* ಗರ್ಜಸಿ ಮಾಣದೆಣ್ದೆಸೆಯುಮಂ ನೋಡಿ ತುಂಗಭುಜನೇಱ*ದುತ್ತುಂಗ ಮತ್ತಮಾತಗಮಂ ಕಂಡು ಕೆಂಗೋಲ್ಗೊಂಡು,

ತುಂಗಭುಜಂಬೆರಸವನ ಮ-
ತಂಗಜಮುಮನಾಂತು ನಿಂದ ಚತುರಂಗಮುಮಂ
ಸಿಂಗಂ ಕೊಂದುದು ದುರ್ಮಂ-
ತ್ರಂಗಳನೆಸಗಿದೊಡೆ ಕಿಡದನಾವನುಮೊಳನೇ  ೩೪೭

ಅದಱ*ಂದೀ ಚಿರಂಜೀವಿ ಶತವೃದ್ಧನುಂ ಶಸ್ತ್ರಹತನುಮೆಂದು ಬಗೆಯದೆ ಈತನನೆತ್ತಿ ಕೊಂಡೊಯ್ದು ನಮ್ಮೊಳಗಿಟ್ಟುಕೊಂಡೊಡಿಂತಪ್ಪನರ್ಥಮಕ್ಕುಮೆಂದು ನುಡಿದ ಮಂತ್ರಿಮುಖ್ಯನ ಮಾತಂ ಕೇಳ್ದರಿಮರ್ದನನಿಂತೆಂದಂ: ನಿನ್ನ ಪೇೞ* ಮಾತಂ ಪೊಲ್ಲದೆನಲ್‌ಬಾರದು. ಅರಸುಗೆಯ್ವಾತಂ,

ಅತಿಪ್ರಸಂಗದಲ್ಲಿ ಎನನ್ನೂ ಹೇಳಬೇಡಿರಿ ಎಂದು ಹೀಗೆಂದನು: ೩೫೬. ಬಾಣಗಳು ಕೋಪ ಮಾತ್ರದಿಂದ ಹೋಗುವುವಲ್ಲವೇ ! ಇಂದ್ರಜಾಲದ ಸಿಂಹವು  ಹರಿದು ಹಾಯುವುದಲ್ಲವೆ; ತಿನ್ನುವುದಲ್ಲದೇ; ಇದನ್ನು ನೋಡೋಣ ಎಂದು ಎನು ಮಾಡಿದರೂ ಮಂತ್ರಿಗಳ ಮಾತನ್ನು ತೆಗೆದುಕೊಳ್ಳದೆ ಮಂತ್ರಸಿದ್ದನನ್ನು ಕರೆದು ಬೇಗನೆ ಇದಕ್ಕೆ ಪ್ರಾಣವನ್ನು ಬರಿಸು ಎನ್ನಲು ಆತನು ಹಾಗೆಯೇ ಆಗಲೆಂದನು ಹೀಗೆಂದನು: ದೇವಾ! ನೀವು ಈ ಸಿಂಹವನ್ನು ಇಂದ್ರಜಾಲದ ಸಿಂಹವೆಂದು ಅಪಹಾಸ್ಯ ಮಾಡಬೇಡಿರಿ; ಏನಾಗುವುದೆಂದು ಹೇಳಲಾಗದು; ನಾನು ಮಂತ್ರಿಸುವಷ್ಟರಲ್ಲಿ ತಂತ್ರಗಳನ್ನು ತರಿಸಿ ಸನ್ನದ್ಧರಾಗಿರಿ ಎನ್ನಲು ಅರಸನು ಹಾಗೆಯೇ ಆಗಲಿ ಎಂದು ಮದಾಂಧಗಂಧಸಿಂಧುರವೆನ್ನೇರಿ ಚತುರಂಗಬಲವನ್ನು ಕೂಡಿಕೊಂಡು ನಿಂತನು. ಅಷ್ಟರಲ್ಲಿ ಆ ಸಿದ್ಧನು ಸಿಂಹಕ್ಕೆ ಪ್ರಾಣವನ್ನು ಬರಿಸಲು ಅದು ಮಹಾಪ್ರಳಯಕಾಲಾಂಬೋದನಿನಾದದಿಂದ ಗದರಿಸಿ ಗರ್ಜಿಸಿ ಎಂಟು ದಿಕ್ಕುಗಳನ್ನೂ ನೋಡಿ ತುಂಗಭುಜನು ಎರಿದ ಉತ್ತುಂಗ ಮತ್ತಮಾತಂಗವನ್ನು ಕಂಡು ಬಾಣವನ್ನು ತಪ್ಪಿಸಿ ೩೪೭. ತುಂಗಭುಜನು ಸಹಿತ ಅವನ ಮತಾಂಗಜವನ್ನೂ ಪ್ರತಿಭಟಿಸಿ ನಿಂತ ಚತುರಂಗಬಲವನ್ನು ಸಿಂಹವು ಕೊಂದಿತು. ಚುರ್ಮಂತ್ರಗಳನ್ನು ಮಾಡಿದರೆ ಕೆಡದವರು ಯಾರಾದರೂ ಇರುವರೇ ಅದರಿಂದ ಈ ಚಿರಂಜೀವಿ ಶತವೃದ್ಧನೂ ಶಸ್ತ್ರಹತನೂ ಎಂದು ಬಗೆಯದೆ ಈತನನ್ನು ಎತ್ತಿಕೊಂಡು ನಮ್ಮೊಡನೆ ಇಟ್ಟುಕೊಂಡಲ್ಲಿ ಇಂತಹ ಅನರ್ಥವಾಗುವುದು ಎಂದು ಹೇಳಿದ ಮುಖ್ಯಮಂತ್ರ್ರಿಯ ಮಾತನ್ನು ಕೇಳಿ ಅರಿಮರ್ದನನು

ಶರಣೆನೆ ಕಾವುದು ಬೇಡಿದೊ-
ಡರದೀವುದು ತೊಡರೆ ಸೆಡೆಯದಿಱ*ವುದು ಪುಸಿಯೊಳ್
ಪೊರೆಯದೆ ನಡೆವುದುದದಲ್ಲದೊ-
ಡರಸು ಕಡಲ್ವೆರಸು ಪೊಡವಿಗರಸಾದಪನೆ  ೩೪೮

ಅದಱ*ಂದಿವಂ ನಮಗೆ ಶರಣಾಗತನೆಂದು ಪೋಗದೆ ನಿಂದನದಱ*ಂದೆಂತುಂ ಕಾಯಲ್ವೇೞ್ಪು ದಿನ್ನೀಮುಸಿರದಿರಿಮೆಂದ ಕೌಶಿಕಾಶ್ವರನ ಮಾತೆಲ್ಲಮಂ ಕೇಳ್ದು ಚಿರಂಜೀವಿಯಿಂತೆಂದಂ :

ಗುಣನಿ ದೇವ ಕೌಶಿಕಶಿಖಾಮಣಿ ಬುದ್ಧಿವಿಹೀನ ನಿನ್ನನೆಂ
ವ್ರಣಗಣವೇದನಾವಿಕಳನೆಂ ಶತವೃದ್ಧನೆನೆನ್ನನುಯ್ದೊಡೇ-
ನಣಿಯರವಿಷ್ಟಮಪ್ಪುದೆನೆ ನೀಂ ಕರುಣಂಬೆಸಸಿತ್ತೊಡಿತ್ತೊಡಾ
ಕ್ಷಣದೊಳೆ ತೋಱುವೆಂ ಸಲೆ ಮದೀಯ ಮನೋಗತಮಪ್ಪ ಕಾರ್ಯಮಂ ೩೪೯

ಎಂದೊಡರಿಮರ್ದನನಿಂತೆಂದಂ :

ನಿನಾಗಾವುದಿಷ್ಟಮದನಿ-
ತ್ತೆನಮೋಘಂ ಬೇಡಿಕೊಳ್ವುದೆನಲೊಡಮಾ ಕಾ-
ಕನಿಕಾಯ ನಾಯಕಾಮಾ-
ತ್ಯನಿಕರಮುಖ್ಯಂ ಹಸಾದಮೆಂದಿಂತೆಂದಂ  ೩೫೦

ದೇವಾ! ನಿನ್ನ ಸತ್ಯತ್ಯಾಗಪರಾಕ್ರಮಾದಿಗುಣವರ್ಣನಂಗೆಯ್ಯೆ ಮೇಘವರ್ಣನೆನಗಿನಿತವತೆಯಂ ಮಾಡಿದನೀ ಪರಾಭವಮನಗ್ನಿಪ್ರವೇಶಂಗೆಯ್ದು ನೀಗಿ ಪತತ್ರಿಗೋತ್ರಾಪನಪ್ಪ ಭವಯ ವಂಶದೊಳ್ ಪುಟ್ಟಿ,

ಹೀಗೆಂದನು : ನೀನು ಹೇಳಿದ ಮಾತು ತಪ್ಪು ಎಂದು ಹೇಳಲಾಗುವುದಿಲ್ಲ : ೩೪೮. ಅರಸುಗೈವಾತನು ಶರಣು ಎಂದರೆ ಕಾಪಾಡಬೇಕು; ಬೇಡಿದರೆ ನೀಡಬೇಕು; ತೊಂದರೆಯನ್ನು ಉಂಟುಮಾಡಿದರೆ ಹೆದರದೆ ಇರಿಯಬೇಕು ; ಹುಸಿತನವನ್ನು ರಕ್ಷಿಸದೆ ನಡೆಯಬೇಕು ; ಅಲ್ಲದಿದ್ದರೆ, ಕಡಲವರೆಗಿನ ಪೊಡವಿಗೆ ಅರಸನೆನಿಸುವನೇ ! ವ|| ಅದರಿಂದ ಇವನು ನಮಗೆ ಶರಣಾಗತನೆಂದು ಹೋಗದೆ ನಿಂತನು ; ಅದರಿಂದ ಹೇಗೂ ಕಾಪಾಡಲೇ ಬೇಕು ; ಇನ್ನು ನೀವು ಸುಮ್ಮನಿರಿ ಎಂದು ಹೇಳಿದ ಕೌಶಿಕಾಶ್ವರನ ಮಾತೆಲ್ಲವನ್ನೂ ಕೇಳಿ ಚಿರಂಜೀವಿ ಹೀಗೆಂದನು : ೩೪೯. ಗುಣನಿದೇವಾ! ಕೌಶಿಕಶಿಖಾಮಣಿ! ನಾನು ಬುದ್ಧಿವಿಹೀನನಾಗಿರುವೆನು; ವ್ರಣಗಣ ವೇದನಾವಿಕಳನಾಗಿರುವೆನು; ಶತವೃದ್ಧನಾಗಿರುವೆನು; ನನ್ನನ್ನು ನೀನು ತೆಗೆದುಕೊಂಡು ಹೋದರೆ ಅದೇನು ನಿನ್ನವರಿಗೆ ಇಷ್ಟವೆನಿಸೀತೇ? ನೀನು ಕರುಣೆಯಿಂದ ನನಗೆ ದಯಪಾಲಿಸುವುದಾದರೆ ಆ ಕ್ಷಣದಲ್ಲೇ ನನ್ನ ಮನೋಗತ ಕಾರ್ಯವನ್ನು ತೋರಿಸುವೆನು. ವ|| ಅದಕ್ಕೆ ಅರಿಮರ್ದನನು ಹೀಗೆಂದನು: ೩೫೦. ನಿನಗೇನು ಇಷ್ಟವೋ ಅದನ್ನು ತಪ್ಪದೆ ಕೊಟ್ಟೆನು; ಬೇಡಿಕೊಳ್ಳು ಎನ್ನಲು ಆ ಕಾಕನಿಕಾಯ ನಾಯಕಾಮಾತ್ಯನಿಕರಮುಖ್ಯನು ಪ್ರಸಾದವೆಂದು ಹೀಗೆಂದನು : ವ|| ದೇವಾ! ನಿನ್ನ ಸತ್ಯ ತ್ಯಾಗದ ಪರಾಕ್ರಮಾದಿ ಗುಣಗಣವರ್ಣನೆಯನ್ನು ಮಾಡಲು ಮೇಘವರ್ಣನು ನನಗೆ ಇಂಥ ಅವಸ್ಥೆಯನ್ನು ಉಂಟುಮಾಡಿದನು. ಈ ಪರಾಭವವನ್ನು ಅಗ್ನಿಪ್ರವೇಶ ಮಾಡಿ ನೀಗಿಕೊಳ್ಳುವೆನು. ಬಳಿಕ ಪತತ್ರಿಗೋತ್ರಾಪನಾದ ಭವದೀಯವಂಶದಲ್ಲಿ ಹುಟ್ಟಿ

ಪವಮಾನ ಪ್ರಿಯನಂದನಂ ಫಣಿಪತಾಕಾನೀಕಮಂ ಚಕ್ರಿ ದಾ-
ನವರಂ ಸಂಗರದಲ್ಲಿ ಕೊಂದ ತೆಱದಿಂದಾಭೀಳ ಕಾಕಾಳಿಯಂ
ತವೆ ಕೊಂದೀ ಧರೆ ಮೆಚ್ಚೆ ಮೞ*ಸುವೆನುಗ್ರಾಟೋಪಮಂ ಮೇಘವ-
ರ್ಣವಧೂಲೋಚನ ವಾರಿಧಾರೆಯೊಳಮಸ್ಮತ್ಕೋಪಗ್ನಿಯಂ ೩೫೧

ಎಂದು ನುಡಿದ ಚಿರಂಜೀವಿಯ ಮಾತಂ ರಕ್ತಾಕ್ಷಂ ಕೇಳ್ದು ಮುಕ್ತೋಷ್ಠನಾಗಿ ಮತ್ತಮಿಂತೆಂದಂ: ಎಲೆ ವಾಯಸ ! ನಿನ್ನ ಮಾಯಾಪಾಶದೊಳರಿಮರ್ದನಂ ತೊಡರ್ದನದುವೆ ಸಾಲ್ಗುಮೆಂದಿರದಾಗ ಮಾನುಗತಮಲ್ಲದುದಂ ನುಡಿವೆಯಪ್ಪೆಯದೆಂತೆನೆ : ವಾಕ್ಯಂ || ಸ್ವಯೋನಿಂ ಮೂಷಿಕಂ ಪ್ರಾಪ್ತಾ ಎಂಬ ಕಥೆಯಂ ಕೇಳ್ದಱ*ವುದಿಲ್ಲಕ್ಕುಮೆಂದಾ ರಕ್ತಾಕ್ಷನಿಂತೆಂದಂ