ಮರ ಆಧಾರಿತ ಕೃಷಿಯಲ್ಲಿ ಧಾನ್ಯ, ಹಣ್ಣಿನ ಗಿಡ.. ಇತ್ಯಾದಿಗಳನ್ನು ಬೆಳೆಯುವುದು ಸಾಮಾನ್ಯ. ಆದರೆ ಮರಗಳ ಜೊತೆ ಸಂಬಾರ ಬೆಳೆಗಳನ್ನು ಬೆಳೆದು ಸುಸ್ಥಿರ ಆದಾಯ ಪಡೆಯುವುದು ವಿಶೇಷ. ಅಂಥ ವಿಶೇಷ ಕೃಷಿ ಪದ್ಧತಿಯೊಂದನ್ನು ಶಿವಮೊಗ್ಗ ಜಿಲ್ಲೆ ಸಾಗರ ತಾಲ್ಲೂಕು ಬೇಳೂರು ಗ್ರಾಮದ ರೈತರೊಬ್ಬರು ಅಳವಡಿಸಿಕೊಂಡಿದ್ದಾರೆ. ಅವರ ಕೃಷಿ ಪದ್ಧತಿಗಳ ಸುತ್ತಾ ಒಂದು ಇಣುಕು ನೋಟ

ಮಲೆನಾಡಿನಲ್ಲಿ ಸಂಬಾರ ಬೆಳೆಗಳಿಗೆ ಪ್ರತ್ಯೇಕ ಸ್ಥಾನವಿದೆ. ಆರ್ಥಿಕ ಆದಾಯ ನೀಡುವ ಈ ಬೆಳೆಗಳನ್ನು ವಾಣಿಜ್ಯ ಬೆಳೆಗಳನ್ನಾಗಿ ಪ್ರತ್ಯೇಕವಾಗಿ ಬೆಳೆಯುತ್ತಾರೆ. ಹೆಚ್ಚು ಒಳಸುರಿ ಬಳಸಿ, ತೀವ್ರ ನಿಗಾವಹಿಸಿ ಬೆಳೆಸಿ ಲಾಭ ಗಳಿಸುತ್ತಾರೆ.

ಇಂಥ ಸಂದರ್ಭದಲ್ಲಿ ಶಿವಮೊಗ್ಗ ಜಿಲ್ಲೆ ಸಾಗರ ತಾಲ್ಲೂಕಿನ ಬೇಳೂರು ಗ್ರಾಮದ ರೈತ ನರೇಂದ್ರ ಮರಗಳ ನಡುವೆ ಸಂಬಾರ ಬೆಳೆ ಬೆಳೆದಿದ್ದಾರೆ. ಈ ಬೆಳೆಗಳು ಸದ್ದಿಲ್ಲದೇ ದೊಡ್ಡ ಆದಾಯವನ್ನೇ ನೀಡುತ್ತಿವೆ. ಇಷ್ಟೆಲ್ಲಾ ಆರ್ಥಿಕ ನೆರವು ನೀಡುವ ಸಂಬಾರ ಬೆಳೆಗಳಿಗೆ ಹೆಚ್ಚುವರಿ ಬಂಡವಾಳ ಸುರಿದಿಲ್ಲ, ಆರೈಕೆ ಕೂಡ ಮಾಡಿಲ್ಲ. ಆದರೂ ಕಳೆದ ಹನ್ನೆರಡು-ಹದಿಮೂರು ವರ್ಷಗಳಿಂದ ಎಲ್ಲ್ಲಾ ಸಂಬಾರ ಬೆಳೆಗಳು ನಿರಂತರ ಫಲ ಕೊಡುತ್ತಿವೆ.

ನರೇಂದ್ರ ಅವರದ್ದು ಐದಾರು ಎಕರೆ ಜಮೀನಿದೆ. ಒಂದು ಎಕರೆ ಐದು ಗುಂಟೆಯಲ್ಲಿ ಮರ ಆಧಾರಿತ ಕೃಷಿ ಕೈಗೊಂಡಿದ್ದಾರೆ. ಇದರಲ್ಲಿ ಮುಖ್ಯ ಬೆಳೆ ಅಡಿಕೆ. ಉಳಿದಂತೆ ಬಾಳೆ, ಕೋಕೋ, ಕಾಫಿ ಇದೆ. ಇವುಗಳ ನಡುವೆಯೇ ಸಂಬಾರ ಬೆಳೆಗಳಾದ ಜಾಯಿಕಾಯಿ, ಲವಂಗ, ಏಲಕ್ಕಿ, ಕಾಳುಮೆಣಸು, ಶುಂಠಿ ಮತ್ತು ಅರಿಶಿಣ ಬೆಳೆಯುತ್ತಿದ್ದಾರೆ.

ತೋಟದ ಮೇಲ್ಭಾಗದಲ್ಲಿ ಐದು ಮಾವಿನ ಮರಗಳಿವೆ. ಕೆಳಬಾಗದಲ್ಲಿ ೯೮೦ ಅಡಿಕೆ ಮರಗಳಿವೆ, ೩೦೦ ಬಾಳೆ, ೩೫೦ ಕಾಫಿ, ಕೋಕೋ, ೩೫೦ ಕಾಳುಮೆಣಸು ಬಳ್ಳಿ, ೧೦೦ ಜಾಯಿಕಾಯಿ ಮರಗಳು, ೧೫ ಲವಂಗ ಗಿಡಗಳು, ಸ್ವಲ್ಪ ಏಲಕ್ಕಿ ಇದೆ.  ಮನೆ ಬಳಕೆಗೆ ಶುಂಠಿ, ಅರಿಶಿಣ ಮತ್ತು ಸುವರ್ಣಗೆಡ್ಡೆ ಬೆಳೆದುಕೊಳ್ಳುತ್ತಾರೆ.

ಮಿಶ್ರಬೆಳೆಯಲ್ಲಿ ನಂಬಿಕೆ :

ಕಾq ಹಣ್ಣಿನ ಮರಗಳು, ವಾಣಿಜ್ಯ ಬೆಳೆ ಅಡಿಕೆ, ಅಲ್ಪಾವಧಿ ಬೆಳೆ ಬಾಳೆ ಇವುಗಳ ನಡುವೆ ಸಂಬಾರ ಬೆಳೆಗಳು – ಹೀಗೆ ಮಿಶ್ರ ಬೆಳೆ ಬಗ್ಗೆ ನರೇಂದ್ರ ಅವರಿಗೆ ಅಪಾರ ನಂಬಿಕೆ. ದುಡ್ಡು ಕೊಡುವ ಬೆಳೆ ಅಡಿಕೆಯಾದರೂ ಒಮ್ಮೊಮ್ಮೆ ಕೊಳೆ ರೋಗ ಕಾಣಿಸಿಕೊಂಡರೆ, ಬೆಲೆ ಕುಸಿದರೆ ಆರ್ಥಿಕವಾಗಿ ನಷ್ಟ ಅನುಭವಿಸಬೇಕಾಗುತ್ತದೆ. ಮಿಶ್ರ ಬೆಳೆಯಿದ್ದರೆ ಒಂದಲ್ಲ ಒಂದು ಬೆಳೆ ನೆರವಿಗೆ ಬರುತ್ತದೆ. ‘ಮುಖ್ಯ ಬೆಳೆ ಉಪ ಬೆಳೆ ಕೈಹಿಡಿಯುತ್ತವೆ’ ಎನ್ನುವುದು ನರೇಂದ್ರ ಅವರು ನಂಬಿರುವ ಸಿದ್ಧಾಂತ. ‘ಒಮೊಮ್ಮೆ ಎರಡು ಬೆಳೆಗಳು ಸಮೃದ್ಧವಾಗಿ ಫಸಲು ನೀಡಿ ನನ್ನ ಜೇಬು ತುಂಬಿಸಿರುವ ಉದಾಹರಣೆಗಳಿವೆ’ ಎಂದು ಖುಷಿಯಿಂದ ಹೇಳುತ್ತಾರೆ ನರೇಂದ್ರ.

ಮಿಶ್ರ ಬೆಳೆ ಎಂದಾಕ್ಷಣ ಎಲ್ಲೆಂದರಲ್ಲಿ ಗಿಡಗಳನ್ನು ಬೆಳೆಸಿಲ್ಲ. ಪ್ರತಿಯೊಂದು ಗಿಡ ನಾಟಿ ಮಾಡುವಾಗಲೂ ಒಂದೊಂದು ವಿಧಾನ ಅನುಸರಿಸಿದ್ದಾರೆ. ೯ ಅಡಿ ಅಂತರದಲ್ಲಿ, ‘ಜಿಗ್ ಜಾಗ್’ ವಿಧಾನದಲ್ಲಿ ಅಡಿಕೆ ಗಿಡಗಳನ್ನು ನಾಟಿ ಮಾಡಿದ್ದಾರೆ. ‘ಈ ವಿಧಾನದಿಂದ ಪ್ರತಿ ಗಿಡಗಳಿಗೆ ಸಾಕಷ್ಟು ಬೆಳಕು ಸಿಗುತ್ತದೆ. ಗಿಡಗಳ ಬೆಳವಣಿಗೆ ಉತ್ತಮವಾಗಲು, ಅಧಿಕ ಇಳುವರಿ ನೀಡಲು ಸೂರ್ಯನ ಬೆಳಕು ನೆರವಾಗುತ್ತದೆ’ ಎಂಬುದು ಅವರ ಅನುಭವದ ಮಾತು.

ನೆರಳು-ಬೆಳಕಿನಾಟವನ್ನು ಅರಿತುಕೊಂಡು ಅಡಿಕೆ ಮರಗಳ ನಡುವೆ ಜಾಯಿಕಾಯಿ ಗಿಡಗಳನ್ನು ನಾಟಿ ಮಾಡಿದ್ದಾರೆ. ಕಾಳುಮೆಣಸನ್ನು ಬಳ್ಳಿಗಳನ್ನು ಅಡಿಕೆಗೆ ಹಬ್ಬಿಸಿದ್ದಾರೆ. ಕೆಲವೊಂದು ಮರಗಳಿಗೆ ವೀಳ್ಯೆದೆಲೆ ಬಳ್ಳಿಯನ್ನೂ ಹಬ್ಬಿಸಿದ್ದಾರೆ. ಬಳ್ಳಿಗಳು ಮರವನ್ನು ತಬ್ಬಿ ಬೆಳೆಯುವುದರಿಂದ, ಮರಕ್ಕೆ ರಕ್ಷಣೆ ಜೊತೆಗೆ ಬಳಿಗಳಿಗೆ ಗಟ್ಟಿ ಆಸರೆ ದೊರೆಯುತ್ತದೆ.

ಅಡಿಕೆ ಮತ್ತು ಜಾಯಿಕಾಯಿ ಮರಗಳು ಎತ್ತರವಾದ ನಂತರ ಇವುಗಳ ಆಸುಪಾಸಿನಲ್ಲಿ ಕಾಫಿ, ಬಾಳೆ, ಲವಂಗ ನಾಟಿ ಮಾಡಿದ್ದಾರೆ. ಎರಡು-ಮೂರು ಮರಗಳ ನಡುವೆ ಶುಂಠಿ, ಅರಿಶಿಣ, ಸುವರ್ಣಗೆಡ್ಡೆ ಹಾಕಿದ್ದಾರೆ. ‘ಹೀಗೆ ಒಟ್ಟೊಟ್ಟಾಗಿ ಬೆಳೆ ಬೆಳೆಯುವುದರಿಂದ ಪ್ರತಿ ಬೆಳೆಗೂ ಪ್ರತ್ಯೇಕ ಗೊಬ್ಬರ, ನೀರು ಕೊಡುವ ಶ್ರಮ ಕಡಿಮೆಯಾಗುತ್ತದೆ. ಆಳುಗಳ ಅವಲಂಬನೆ ಕೈ ಬಿಡಬಹುದು’ – ಎನ್ನುತ್ತಾ ಸಮಕಾಲೀನ ಕಾರ್ಮಿಕರ ಕೊರತೆಗೆ ಮಿಶ್ರ ಬೆಳೆ ಪರೋಕ್ಷ ಪರಿಹಾರ ಎಂದು ಹೇಳುತ್ತಾರೆ ನರೇಂದ್ರ.

‘ಮಿಶ್ರ ಬೆಳೆಯಾಗಿ ಸಂಬಾರ ಬೆಳೆಗಳನ್ನೇ ಬೆಳೆಸಿರುವುದರ ಹಿಂದಿನ ರಹಸ್ಯವೇನು’ ಅಂತ ಪ್ರಶ್ನಿಸಿದರೆ ; ಅದಕ್ಕೆ ನರೇಂದ್ರ ಥಟ್ಟನೆ ಉತ್ತರಿಸುತ್ತಾರೆ; ಜಾಯಿಕಾಯಿ ಗಿಡಗಳಿಗೆ ಹೆಚ್ಚು ನೀರು, ಗೊಬ್ಬರ ಆರೈಕೆ ಬೇಡ. ರೋಗ ಕೀಟದ ಬಾಧೆಯೂ ಕಡಿಮೆ. ಹದಿನೈದು ದಿನಕ್ಕೊಮ್ಮೆ ದ್ರವರೂಪಿ ಗೊಬ್ಬರ ಮತ್ತು ವಾರಕ್ಕೊಮ್ಮೆ ನೀರುಕೊಟ್ಟರೆ ಸಾಕು. ಇನ್ನು  ಶುಂಠಿ, ಅರಿಶಿಣ – ಇವುಗಳನ್ನು ನಾಟಿ ಮಾಡಿದಾಗ ಆರೈಕೆ ಮಾಡಿದ್ದು. ನಂತರದ ದಿನಗಳಲ್ಲಿ ಬೇರೆ ಬೆಳೆಗಳಿಗೆ ಗೊಬ್ಬರ- ನೀರು ಕೊಟ್ಟಾಗ, ಇವುಗಳಿಗೆ ಸೋಕಿಸಿದ್ದೇನೆ. ಇಷ್ಟು ಸರಳವಾಗಿರುವ ಕೃಷಿಗಿಂತ ಇನ್ನೇನು ಬೇಕು’.

ಮಾರುಕಟ್ಟೆಗೆ ಚಿಂತೆಯಿಲ್ಲ:

ಸಂಬಾರ ಬೆಳೆಗಳಿಂದ ನನಗೆ ಭರಪೂರ ಆದಾಯ ಬೇಕಿಲ್ಲ. ನಿಗದಿತವಾಗಿ ಮಾರುಕಟ್ಟೆಗೆ ರವಾನಿಸುವುದಿಲ್ಲ. ಅಗತ್ಯ ಬಿದ್ದಾಗ ಮಾರಾಟ ಮಾಡುತ್ತೇನೆ. ಆದಾಯ- ಇಳುವರಿ ನಿರೀಕ್ಷಿಸದೇ ಇದ್ದಾಗ ಚಿಂತಿಸುವ ಪ್ರಮೇಯವೇ ಬರುವುದಿಲ್ಲ’ – ನರೇಂದ್ರ ತಮ್ಮ ನಿಲುವಿನಲ್ಲಿ ಸ್ಪಷ್ಟವಾಗಿದ್ದಾರೆ.

ಇಂಥ ಪರಿ ಕೃಷಿಯ ಹಾದಿ ತುಳಿದಿರುವ ನರೇಂದ್ರ ಎಂದೂ ಮಾರುಕಟ್ಟೆ ಬಗ್ಗೆ ಚಿಂತಿಸಿಲ್ಲ. ಕಾಳುಮೆಣಸು, ಜಾಕಾಯಿ, ಪತ್ರೆಯನ್ನು ಬೆಂಗಳೂರು, ಬೆಳಗಾವಿ ಶಿರಸಿ ಮುಂತಾದ ಕಡೆಗೆ ಮಾರಾಟಕ್ಕೆ ಕಳುಹಿಸುತ್ತಾರೆ.. ಅಡಿಕೆ, ಬಾಳೆ, ಕಾಫಿ, ಏಲಕ್ಕಿ, ಲವಂಗವನ್ನು ಎಂಟು ಕಿ.ಮೀ ಸಾಗರದ ಅಂಗಡಿಗಳಿಗೆ ಕೊಡುತ್ತಾರೆ. ವೀಳೆಯದೆಲೆಯನ್ನು ಕೂಲಿ ಕಾರ್ಮಿಕರೇ ಕೊಳ್ಳುತ್ತಾರೆ. ಇಷ್ಟು ಮಾರ್ಗಗಳಿದ್ದಾಗ, ಮಾರುಕಟ್ಟೆ ಬಗ್ಗೆ ಚಿಂತೆ ಏಕೆ?  ಎನ್ನುತ್ತಾರೆ ಅವರು.

ಸಂಬಾರ ಬೆಳೆಗಳಲ್ಲಿ ಇಂತಿಷ್ಟೇ ಇಳುವರಿ ನಿರೀಕ್ಷೆ ಕಷ್ಟ. ಏಕೆಂದರೆ ಪ್ರತಿಯೊಂದು ಬೆಳೆಯೂ ವಾತಾವರಣದ ಮೇಲೆಯೇ ನಿಂತಿದೆ. ಒಂದು ವರ್ಷ ಕಡಿಮೆಯಾದರೆ, ಮತ್ತೊಂದು ವರ್ಷ ಹೆಚ್ಚಾಗುತ್ತದೆ. ಆದರೆ, ಒಂದು ಸತ್ಯ. ನಾವು ಹಾಕಿದ ಬಂಡವಾಳಕ್ಕಂತೂ ಮೋಸವಾಗುವುದಿಲ್ಲ’ ಎಂದು ನಿಖರವಾಗಿ ಹೇಳುತ್ತಾರೆ ನರೇಂದ್ರ.

ಕೊನೆ ಮಾತು :

ಟೊಮೆಟೊ, ಆಲೂಗೆಡ್ಡೆ, ಈರುಳ್ಳಿಯಂತ ಏಕ ಬೆಳೆ ಬೆಳೆದು ರೈತರು ಅನುಭವಿಸುತ್ತಿರುವ ಕಷ್ಟವನ್ನು ನಾವೆಲ್ಲ ನೋಡಿದ್ದೇವೆ. ಹೀಗೆ ಏಕ ಬೆಳೆ ಪದ್ಧತಿಗೆ ಬದಲು ಮಿಶ್ರ ಬೆಳೆ ಬೆಳೆದರೆ ರೈತರು ಸೋಲುವ ಪ್ರಮೇಯವೇ ಬರುವುದಿಲ್ಲ. ಕೃಷಿಯ ಜೊತೆಗೆ ನಮ್ಮ ಹಿರಿಯರು ಅನುಸರಿಸಿದ ದೇಸಿ ವಿಧಾನಗಳನ್ನು ಅಳವಡಿಸಿಕೊಂಡರೆ ನರೇಂದ್ರ ಅವರಂತೆ ಕೂಲಿ ಕಾರ್ಮಿಕರ ಸಮಸ್ಯೆಯನ್ನು ಬಗೆಹರಿಸಿಕೊಳ್ಳಬಹುದು. ರಸಾವರಿ ತೊಟ್ಟಿ ನಿರ್ಮಾಣ, ದರಕು ಮುಚ್ಚಿಗೆ, ಬೆಳೆ ನಾಟಿಯ ಪ್ರಯೋಗದಂತಹ ಪ್ರಯೋಗಗಳನ್ನು ಮಾಡಿ ಇಳುವರಿ ಹೆಚ್ಚಿಸಿಕೊಳ್ಳಬಹುದು. ಜೊತೆಗೆ ಭೂಮಿಯ ಫಲವತ್ತತೆಯನ್ನು ಕಾಯ್ದುಕೊಳ್ಳ್ಳಬಹುದು.

ಗೊಬ್ಬರ, ಕೀಟನಾಶಕಗಳಿಗೋಸ್ಕರ ಹಣ ಸುರಿದು ಸಾಲಗಾರರಾಗುವ ಬದಲಿಗೆ ಕಡಿಮೆ ಖರ್ಚಿನಲ್ಲಿ  ಉತ್ತಮ ಇಳುವರಿ ಮತ್ತು ಸುಸ್ಥಿರ ಆದಾಯ ಪಡೆಯಬಹುದು. ಸಂಬಾರ ಬೆಳೆಗಳನ್ನು ಮಿಶ್ರಬೆಳೆಗಳನ್ನಾಗಿ ಬೆಳೆದು ಉಪ ಆದಾಯವನ್ನು ಹೆಚ್ಚಿಸಿಕೊಳ್ಳಬಹುದು. ಈ ಸಲಹೆಗಳಿಗೆ ಬೇಳೂರಿನ ನರೇಂದ್ರ ಅವರ ಕೃಷಿ ಪೂರಕ ಉದಾಹರಣೆಯಾಗುತ್ತದೆ.

ನರೇಂದ್ರ ಅವರ ಸಂಪರ್ಕ ವಿಳಾಸ ಮತ್ತು ಸಂಖ್ಯೆ: ನರೇಂದ್ರ, ಬೇಳೂರು, ಸಾಗರ ತಾಲ್ಲೂಕು, ಶಿವಮೊಗ್ಗ ಜಿಲ್ಲೆ. ದೂರವಾಣಿ ಸಂಖ್ಯೆ :೦೮೧೮೩೨೬೦೧೩೫, ೦೮೧೮೩೨೧೨೨೨೨

ಮಣ್ಣಿನ ಫಲವತ್ತತೆ ಹಿಂದಿನ ಗುಟ್ಟು :ತೋಟದ ಮೂಲೆಯಲ್ಲಿ ನಿಂತು , ಅಲ್ಲಿರುವ ಬೆಳೆ ಸಂಖ್ಯೆ ಅಂದಾಜು ಮಾಡಿದರೆ, ಇಪ್ಪತ್ತೆರಡಕ್ಕೂ ಹೆಚ್ಚು ಬೆಳೆಗಳು ಲೆಕ್ಕಕ್ಕೆ ಸಿಗುತ್ತವೆ. ಇಷ್ಟು ಬೆಳೆಗಳು ಸಮೃದ್ಧಿಯಾಗಿ ಫಸಲು ಕೊಡಲು ತೋಟದಲ್ಲಿ ಉತ್ಕೃಷ್ಟವಾದ ಮಣ್ಣಿರಬೇಕು. ರಸವತ್ತಾದ ಗೊಬ್ಬರವೂ ಬೇಕು. ಇದಕ್ಕಾಗಿ ನರೇಂದ್ರ ಇಡೀ ತೋಟಕ್ಕೆ ಬೇಸಿಗೆಯಲ್ಲಿ ಅರ್ಧ ಅಡಿ ದರಕಿನ ಹಾಸಿಗೆ (ಒಣ ಎಲೆ) ಹಾಸುತ್ತಾರೆ. ಪ್ರತಿಯೊಂದು ಗಿಡಕ್ಕೂ ಡ್ರಿಪ್ ಪೈಪ್ ಅಳವಡಿಸಿದ್ದಾರೆ. ದರಕಿನ ಎಲೆ ಹರಡಿಕೊಂಡಿರುವುದರಿಂದ ತೋಟದಲ್ಲಿ ತೇವಾಂಶ ನಿರಂತರವಾಗಿರುತ್ತದೆ. ಒಂದು ಪಕ್ಷ ತೇವಾಂಶ ಹೆಚ್ಚಾದರೆ, ನೀರು ಬಸಿದು ಹೋಗಲು ಅಡಿಕೆ ಮರದ ಬದಿಯಲ್ಲಿ ಬಸಿಗಾಲುವೆ ನಿರ್ಮಿಸಿದ್ದಾರೆ.

ದರಕಿನ ಹಾಸಿಗೆಯಿಂದ ಮಣ್ಣಿನಲ್ಲಿ ಸೂಕ್ಷ್ಮಾಣುಜೀವಿಗಳು ವೃದ್ಧಿಯಾಗಿರುವುದನ್ನು ಗಮನಸಿದ್ದಾರೆ. ಸೂಕ್ಷ್ಮ ಜೀವಿಗಳ ಜೊತೆ ಎರೆ ಹುಳು, ಉಪಕಾರಕ ಕೀಟಗಳು ಮಣ್ಣಿನ ವೃದ್ಧಿಯಾಗಿವೆ. ಇವೆಲ್ಲವು ಸೇರಿಕೊಂಡು ತೋಟದಲ್ಲಿ ಭೂಮಿಯ ಫಲವತ್ತತೆಯನ್ನು ಹೆಚ್ಚಿಸಿವೆ. ಫಲವತ್ತತೆ ಹೆಚ್ಚಾಗಿ, ಮಣ್ಣಿನ ತೇವಾಂಶ ಹಿಡಿದಿಟ್ಟುಕೊಳ್ಳುವ ಶಕ್ತಿ ವೃದ್ಧಿಯಾಗಿರುವುದರಿಂದಲೇ ಇಡೀ ತೋಟದ ವಾತಾವರಣ ವರ್ಷ ಪೂರ್ತಿ ತಂಪಾಗಿರುತ್ತದೆ ಎನ್ನುವುದು ಅವರ ಮೂರು ದಶಕಗಳ ಕೃಷಿ ಜೀವನದ ಅನುಭವದ ಮಾತು.

ಮಿಶ್ರಬೆಳೆ ಪದ್ಧತಿ, ವೃಕ್ಷಾಶ್ರಯದಲ್ಲಿ ಸಂಬಾರ ಕೃಷಿ ಮಾಡುತ್ತಿರುವ ನರೇಂದ್ರ ಅವರಿಗೂ ಕೂಲಿ ಕಾರ್ಮಿಕರ ಕೊರತೆ ತಪ್ಪಿಲ್ಲ. ಸಮಸ್ಯೆಯಿಂದಾಗಿ ಬೃಹತ್ ಪ್ರಮಾಣದಲ್ಲಿ ಬೆಳೆಯುತ್ತಿದ್ದ ಏಲಕ್ಕಿ ಕೃಷಿಯನ್ನೂ ನಿಲ್ಲಿಸಿದ್ದಾರೆ. ಈಗ ಮನೆಯ ಬಳಕೆಗಾಗಿ ಏಲಕ್ಕಿ ಬೆಳೆದುಕೊಳ್ಳುತ್ತಿದ್ದಾರೆ. ದರಕು ಹರಡುವಾಗ, ಅಡಿಕೆ ಕೊಯ್ಲಾಗುವಾಗ, ಬೋರ್ಡೊ ಸಿಂಪಡಣೆ ಇಂಥ ಸಮಯದಲ್ಲಷ್ಟೇ ಕೂಲಿಕಾರರನ್ನು ಆಶ್ರಯಿಸುತ್ತಾರೆ. ಉಳಿದಂತೆಸ್ವಾವಲಂಬಿಯಾಗಿದುಡಿಯುತ್ತಾರೆ.

 

ಪ್ರಯೋಗಗಳುಫಲಿತಾಂಶಗಳು :ದರಕು ಕೇವಲ ಗೊಬ್ಬರ ಅಥವಾ ಮುಚ್ಚಿಗೆ ಅಷ್ಟೇ ಅಲ್ಲ, ಕೆಲವು ಸಂಬಾರ ಬೆಳೆಗಳಿಗೆ ತಗಲುವ ರೋಗ ನಿವಾರಕವೂ ಹೌದು. ಅದನ್ನು ನರೇಂದ್ರ ಸಂಶೋಧಿಸಿ ನೋಡಿದ್ದಾರೆ. ಅಡಿಕೆ ಮರದ ಬುಡದಲ್ಲಿ ದರಕು ಹೊದಿಸಿ, ಮೆಣಸಿನ ಬಳ್ಳಿ ನಾಟಿ ಮಾಡಿದ್ದಾರೆ. ಮೆಣಸಿನ ಬಳ್ಳಿಯ ಸಮೀಪದಲ್ಲೇ ಅರಿಶಿಣ ಗೆಡ್ಡೆಯನ್ನು ನಾಟಿ ಮಾಡಿದ್ದಾರೆ.  ‘ ವಿಧಾನದಿಂದ ಕಾಳುಮೆಣಸಿಗೆ ಬರುವ ಸೊರಗು ರೋಗವನ್ನು ಹತೋಟಿ ತರಬಹುದುಎನ್ನುವುದು ಅವರ ಇತ್ತೀಚಿನ ಪ್ರಯೋಗ. ಏಕೆಂದರೆ, ಅರಿಶಿಣದಲ್ಲಿ ಆಂಟಿಸೆಪ್ಟಿಕ್ ಅಂಶವಿದೆ. ಇದು ಬಳ್ಳಿಗೆ ತಗುಲುವ ರೋಗವನ್ನು ನಿಯಂತ್ರಿಸುತ್ತದೆ ಎನ್ನುವುದು ಅವರ ಅಭಿಪ್ರಾಯ.

ಇಷ್ಟೆಲ್ಲ ಕಾಳಜಿ ತೆಗೆದುಕೊಂಡರೂ ಒಮೊಮ್ಮೆ ಸೊರಗು ರೋಗ ವಿಪರೀತ ಕಾಟ ಕೊಡುತ್ತದೆ. ರೋಗ ನಿಯಂತ್ರಣಕ್ಕೆಇಪ್ಪತ್ತು ಕೆ.ಜಿ ಟ್ರೈಕೋಡರ್ಮವನ್ನು ಕಾಡು ಮಣ್ಣಿನೊಂದಿಗೆ ಬೆರೆಸಿ ಎಂಟರಿಂದ ಹತ್ತು ದಿವಸಗಳ ಅಂತರದಲ್ಲಿ ಮೆಣಸಿನ ಬಳ್ಳಿಯ ಬುಡಕ್ಕೆ ಹಾಕಿದರೆ ರೋಗ ಹತೋಟಿಗೆ ಬರುತ್ತದೆಎನ್ನುತ್ತಾರೆ ನರೇಂದ್ರ.

ನರೇಂದ್ರ ಒಂದು ವಿಶಿಷ್ಟ ಪದ್ಧತಿ ಅನುಸರಿಸಿದ್ದಾರೆ. ಅದೇನೆಂದರೆ, ಶುಂಠಿ, ಅರಿಶಿಣ, ಸುವರ್ಣಗೆಡ್ಡೆಯಂತಹ ಗೆಡ್ಡೆ ತರಕಾರಿ/ಸಂಬಾರ ಬೆಳಗಳನ್ನುಅಡುಗೆ ಮನೆಗೆ ಅಗತ್ಯವಿದ್ದಾಗಮಾತ್ರ ಕೊಯ್ಲು ಮಾಡುತ್ತಾರೆ. ಉಳಿದಂತೆ ಅವುಗಳನ್ನು ಮಣ್ಣಿನಲ್ಲೇ ಬಿಡುತ್ತಾರೆ. ‘ಗೆಡ್ಡೆ ಗೆಣೆಸುಗಳು ಭೂಮಿಯಲ್ಲಿದ್ದರೆ ಚೆನ್ನಾಗಿ ಉಳುಮೆ ಮಾಡುತ್ತವೆ. ಮಣ್ಣಿಗೆ ಬೇಕಾದ ಪೂರಕ ಪೋಷಕಾಂಶಗಳನ್ನು ನೀಡುತ್ತವೆ. ಅವುಗಳನ್ನು ಕಿತ್ತು ಮಾರುಕಟ್ಟೆಗೆ ಹಾಕಿ ಇನ್ನೆಷ್ಟು ಹಣ ಸಂಪಾದಿಸಲು ಸಾಧ್ಯ. ಅದಕ್ಕೇ ನಮಗೆ ಬೇಕಾದಷ್ಟು ತೆಗೆದುಕೊಂಡು ಉಳಿದವುಗಳನ್ನು ಮಣ್ಣಿನಲ್ಲೇ ಉಳಿಸುತ್ತೇನೆ’ – ಎಂದುಗೆಡ್ಡೆ ಬೆಳೆಹೇಗೆ ಪೋಷಕಾಂಶದ ಬ್ಯಾಂಕ್ ಆಗುತ್ತದೆ ಎಂಬುದನ್ನು ನರೇಂದ್ರ ವಿವರಿಸುತ್ತಾರೆ.