ಬಾಯಿಯ ದುರ್ವಾಸೆ

ಬಾಯಿಯ ದುರ್ಗಂಧವನ್ನು ಎಂದಿಗೂ ಉಪೇಕ್ಷಿಸಬೇಡಿ, ಬಾಯಿಯ ಸ್ವಚ್ಛತೆಯ ಅಲಕ್ಷ್ಯವೇ ಬಾಯಿಯ ದುರ್ವಾಸನೆಗೆ ಕಾರಣ.

ಬಾಯಿಯ ದುರ್ವಾಸನೆಗೆ ಕಾರಣಗಳು

೧. ಹುಳುಕು ಹಲ್ಲು

೨. ಧೂಮಪಾನ ಮತ್ತು ಮದ್ಯಪಾನ

೩. ಸುತ್ ಪೊರೆ ರೋಗ

೪. ಶ್ವಾಸಕೋಶ ಮತ್ತು ಜೀರ್ಣಾಂಗ ರೋಗಗಳೂ ಮತ್ತು ಸಕ್ಕರೆ ಕಾಯಿಲೆಗಳು

. ವಸಡಿನ ರಕ್ತಸ್ರಾವ

ಬಹುಕಾಲ ತೆಗೆಯದೇ ಹಾಗೇ ಶೇಖರಗೊಂಡ ಕಿಟ್ಟ. ಕೀಟಾಣುಗಳಿಗೆ ಆಶ್ರಯ ನೀಡುವುದರಿಂದ ಹಲ್ಲಿಗೆ ಹಾನಿಕಾರಕವಾದ ರಾಸಾಯನಿಕ ಆಮ್ಲಗಳು ಉತ್ಪತ್ತಿಯಾಗುತ್ತದೆ. ಕಿಟ್ಟ ಸ್ವಲ್ಪ ದಿನಗಳಲ್ಲಿ ಲವಣೀಕೃತಗೊಂಡು ಗಟ್ಟಿಯಾಗಿ ಕಲ್ಲಿನಂತಾಗುತ್ತದೆ. ಇದು ವಸಡಿನ ಸುತ್ತ ಶೇಖರಗೊಳ್ಳುವ ಕಾರಣದಿಂದ ವಸಡಿನ ಉರಿ ಹಾಗೂ ರಕ್ತಸ್ರಾವ ಪ್ರಾರಂಭಗೊಳ್ಳುತ್ತದೆ.

. ದಂತ ಕುಳಿ ಅಥವಾ ಹುಳುಕು ಹಲ್ಲು

ಹಲ್ಲಿನ ಒಳಭಾಗ, ಹೊರಭಾಗ ಅಥವಾ ಅಗಿಯುವ ಭಾಗದಲ್ಲಿ ಸಣ್ಣದಾಗಿ ಕಪ್ಪು ಕಾಣಿಸಿಕೊಂಡಲ್ಲಿ ಅದು ಹುಳುಕು ಹಲ್ಲು ಆರಂಭವಾಗಿರುವ ಮೊದಲ ಸೂಚನೆ. ಮೊದಲ ಹಂತದಲ್ಲಿ ಇದಕ್ಕೆ ಚಿಕಿತ್ಸೆ ನೀಡುವುದರಿಂದ, ಇದರಿಂದ ಉಂಟಾಗುವ ಗಂಭೀರ ಸಮಸ್ಯೆಗಳನ್ನು ನಿವಾರಿಸಿಕೊಳ್ಳಬಹುದು.

. ಸುತ್ಪರೆಯ ಉರಿ

ಲವಣೀಕೃತಗೊಂಡಿರುವ ಕಿಟ್ಟ ಇಡೀ ಹಲ್ಲನೇ ಆವರಿಸಿಕೊಂಡಿದ್ದ ಸೂಕ್ತ ಚಿಕಿತ್ಸೆ ತೆಗೆದುಕೊಳ್ಳದೇ ಅಲಕ್ಷಿಸಿದಾಗ ಹಲ್ಲಿಗೆ ಆಧಾರವಾಗಿರುವ ಮೂಳೆಯನ್ನು ರೋಗಾಣು ತಿಂದು ಹಲ್ಲು ಕ್ರಮೇಣ ಸಡಿಲಗೊಳ್ಳಲು ಪ್ರಾರಂಭವಗುತ್ತದೆ. ಈ ಸನ್ನಿವೇಶಗಳನ್ನು ಸುತ್ಪರೆಯ ಉರಿ  ಅಥವಾ ಹಾನಿ ಎಂದು ಕರೆಯಲಾಗುತ್ತದೆ. ಆದರೂ ಸಹ ನಿಮ್ಮ ಹಲ್ಲು ಸುರಕ್ಷಿತವಾಗಿದ್ದು ಸೂಕ್ತ ಸಮಯದಲ್ಲಿ ಚಿಕಿತ್ಸೆ ಪಡೆದರೆ ಈ ಸಮಸ್ಯೆಯಿಂದ ಚೇತರಿಸಿಕೊಳ್ಳಬಹುದು.

. ಬಾಯಿ ಹುಣ್ಣು

ಬಾಯಿಯಲ್ಲಿ, ನಾಲಿಗೆಯಲ್ಲಿ ಅಥವಾ ಕೆಂಪು ಬಣ್ಣದ ಕಲೆಗಳು ಎರಡು ವಾರವಾದರೂ ಗುಣವಾಗದೇ ಉಳಿದಿರುವ, ನೋವಿಲ್ಲದ ಹುಣ್ಣು, ಕುಡಿಯಲು, ತಿನ್ನಲು ಅಥವಾ ಮಾತನಾಡಲು ತೊಡಕುಂಟಾಗುವುದು. ಇವು ಕ್ಯಾನ್ಸರ್ ಅಥವಾ ಅರ್ಬುದ ರೋಗದ ಮೊದಲ ಚಿಹ್ನೆಗಳಾಗಿರಬಹುದು. ಇಂತಹ ಚಿಹ್ನೆಗಳು ಕಾಣಿಸಿಕೊಂಡಲ್ಲಿ ಅವಶ್ಯಕವಾಗಿ ದಂತ ವೈದ್ಯರನ್ನು ಭೇಟಿ ಮಾಡಿ. ಬಾಯಿಯಲ್ಲಿ ಅಥವಾ ದವಡೆಯಲ್ಲಿ ಯಾವುದೇ ಬಗೆಯ ನೋವು ಉಂಟಾದಾಗ ಅದನ್ನು ಉತ್ಪ್ರೇಕ್ಷಿಸಬೇಡಿ. ಏಕೆಂದರೆ ಅತಿ ಸರಳವಾದ ನೋವು ಅನಂತರ ಗಂಭೀರ ತೊಂದರೆಗಳುಂಟಾಗಬಹುದು.

. ಅಪಘಾತದಿಂದ ಹಲ್ಲು ಬೇರ್ಪಟ್ಟ ಸಂದರ್ಭದಲ್ಲಿ ನೀವು ಮಾಡಬೇಕಾಗಿರುವುದು:

ಬೇರ್ಪಟ್ಟ ಹಲ್ಲುಗಳನ್ನು ಉಗುಳು ಇಲ್ಲವೇ ಹಾಲಿನಲ್ಲಿ ಆದಷ್ಟು ಬೇಗ ದಂತ ವೈದ್ಯರಲ್ಲಿಗೆ ಕೊಂಡೊಯ್ಯುವುದು. ಹಲ್ಲನ್ನುಯಾವುದೇ ಕಾರಣಕ್ಕೂ ಒದ್ದೆಯಾಗಿಯೇ ಇಡಬೇಕು.

ವೈದ್ಯಸಾಹಿತಿಯಾಗಿನನ್ನಅನುಭವ
ಮೂಢನಂಬಿಕೆಗಳ ನಿವಾರಣೆಯಲ್ಲಿ…’
– ಡಾ. ಹೆಚ್.ಜೆ. ಶಾಂತಕುಮಾರ್ಸುಮಾರು ೧೨ ವರ್ಷದಿಂದ ಸಾಹಿತಿಯಾಗಿ ಬಹಳಷ್ಟು ಪ್ರಬಂಧಗಳು, ಲೇಖನಗಳನ್ನು, (ದೇಶಭಕ್ತರು, ಗುರುಗಳು, ಶರಣು, ಹಾಸ್ಯ) ಬರೆದರೂ ಸಹ, ನನಗೆ ಬಹಳ ಸಂತೋಷ ಕೊಟ್ಟ ಲೇಖನಗಳು ‘ವೈದ್ಯ ಲೇಖನಗಳು’ ಎಂದರೆ ತಪ್ಪಾಲಗರದು.

ನಾನು ಸುಮಾರು ೮ ವರ್ಷದ ವೈದ್ಯ ಸಾಹಿತಿ. ಜೀವನದಲ್ಲಿ ಬಹಳಷ್ಟು ವೈದ್ಯಲೇಖನಗಳು, “ಚಿಕಿತ್ಸೆಗಿಂತ ತಡೆಗಟ್ಟುವುದು ಮೇಲು” (Prevention is better than cure) ಎಂಬಂತೆ ನನ್ನ ಬಹಳಷ್ಟು ಲೇಖನಗಳು ದಂತ ರೋಗಗಳನ್ನು ತಡೆಗಟ್ಟುವುದರ ಬಗ್ಗೆ ಉದಾ:

೧. ಆರೋಗ್ಯ ಪೂರ್ವ ಹಲ್ಲುಗಳ ಸಂರಕ್ಷಣೆ

೨. ನಿಮ್ಮ ದಂತ ಆರೋಗ್ಯ ರಕ್ಷಣೆಯಲ್ಲಿ ನೀವು ವಹಿಸಬಹುದಾದ ಪಾತ್ರ

೩. ದಂತ ಆರೋಗ್ಯ ರಕ್ಷಣೆಗೆ ಮನೆಯಲ್ಲಿ ಪಾಲಿಸಬಹುದಾದ ಅಂಶಗಳು

೪. ಬಾಯಿಯ ಅರ್ಬುದ ರೋಗವನ್ನು (ಕ್ಯಾನ್ಸರ್) ತಡೆಗಟ್ಟುವುದಕ್ಕೆ ಕೆಲವು ಸಲಹೆಗಳು, ಮುಂತಾದ ಲೇಖನಗಳು, ದಿನಪತ್ರಿಕೆಗಳಲ್ಲಿ ಪ್ರಕಟವಾದ ಮೇಲೆ ಬಹಳಷ್ಟು ಜನರು ನನ್ನ ಲೇಖನಗಳಿಗೆ ಸ್ಪಂದಿಸಿ ಪತ್ರಗಳನ್ನು ಬರೆದು, ನಿಮ್ಮ ಲೇಖನಗಳು ಜನ ಸಾಮಾನ್ಯರಿಗೆ ಮುಟ್ಟುವಂತಿದೆ ಎಂದು ಪ್ರಶಂಸಿದರು.

ಅನಂತರ ನನ್ನ ‘ದಂತ ಚಿಕಿತ್ಸೆಯ ಬಗ್ಗೆ ಇರುವ ಕೆಲವು ಮೂಢನಂಬಿಕೆಗಳು’ (Taboos about dentistry) ಎಂಬ ಲೇಖನ ಸಹ ಜನರಿಗೆ ಬಹಳ ಹತ್ತಿರವಾಯಿತು. ಏಕೆಂದರೆ ಈಗಲೂ ಜನರಿಗೆ ದಂತ ವೈದ್ಯರ ಹತ್ತಿರ ಬರುವುದಕ್ಕೆ ಹೆದರುತ್ತಾರೆ. ಏಕೆಂದರೆ ಮೇಲು ದವಡೆ ಹಲ್ಲು ಕಿತ್ತಿದರೆ ಕಣ್ಣಿನ ದೃಷ್ಟಿ ಹೋಗುತ್ತದೆ ಎಂದು ಎಷ್ಟೋ ಜನ ನೋವಿನಲ್ಲಿ ಕಾಲ ಕಳೆಯುತ್ತಾರೆ, ಹೀಗೆ ನನ್ನ ಲೇಖನದ ಮುಖಾಂತರ ಇನ್ನೂ ಅನೇಕ ಮೂಢನಂಬಿಕೆಗಳ ಬಗ್ಗೆ ವೈಜ್ಞಾನಿಕವಾಗಿ ಉತ್ತರ ಕೊಟ್ಟು ಜನರ ಪ್ರೀತಿ, ವಿಶ್ವಾಸಕ್ಕೆ ಪಾತ್ರನಾದೆ. ಇದಲ್ಲದೆ ನನ್ನ ಅನೇಕ ಲೇಖನಗಳನ್ನು ಜನರು ನೋಡಿ ಪತ್ರಗಳ ಮೂಲಕ ಸ್ಪಂದಿಸಿದವರಿಗೆ ನನ್ನ ಸಲಹೆಗಳನ್ನು ನಿಸ್ವಾರ್ಥವಾಗಿ ಪತ್ರ ಮುಖಾಂತರ ಉತ್ತರ ಕೊಟ್ಟಾಗ ಇನ್ನಷ್ಟು ಪ್ರಶಂಸೆಗೆ ಪಾತ್ರನಾದೆ.

ಹೀಗೆ ವೈದ್ಯ ಸಾಹಿತಿಯಾದ ಮೇಲೆ ಅನೇಕ ಸಂಘ-ಸಂಸ್ಥೆಗಳು, ಶಾಲೆಗಳು, ವಿದ್ಯಾರ್ಥಿ ನಿಲಯಗಳು, ಅನಾಥಾಶ್ರಮಗಳು, ಮಠಗಳು, ಮಹಿಳಾ ಸಂಘಗಳು ನನ್ನನ್ನು ಗುರುತಿಸಿ ನನ್ನ ಮುಖಾಂತರ ಅನೇಕ ದಂತ ಚಿಕಿತ್ಸಾ ಶಿಬಿರ, ದಂತ ಆರೋಗ್ಯ ತಪಾಸಣಾ ಶಿಬಿರ ನಡೆಸಿ ನನಗೆ ಗೌರವನ್ನು ಸಲ್ಲಿಸಿವೆ.

 • ಸಿದ್ಧಾರ್ಥ ದಂತ ವೈದ್ಯಕೀಯ ಮಹಾವಿದ್ಯಾಲಯ ಮತ್ತು ಆಸ್ಪತ್ರೆ ತುಮಕೂರು ಇಲ್ಲಿ ೫ ವರ್ಷ ಬಿ.ಡಿ.ಎಸ್ ಪದವಿ ಮುಗಿಸಿ ಸುಮಾರು ೫ ವರ್ಷಗಳಿಂದ ಉಪನ್ಯಾಸಕನಾಗಿ ಸೇವೆ ಸಲ್ಲಿಸುತ್ತಿದ್ದೇನೆ. ಇದರೊಂದಿಗೆ ನಾಲ್ಕೂವರೆ ವರ್ಷದಿಂದಲೂ ಸಿಲ್ವರ್ ಡೆಂಟಲ್ ಕ್ಲಿನಿಕ್ ದಂತ ಚಿಕಿತ್ಸಾಲಯವನ್ನು ತೆರೆದು ವೈದ್ಯನಾಗಿ ಸೇವೆ ಸಲ್ಲಿಸುತ್ತಿದ್ದೇನೆ.
 • ಸಾಹಿತ್ಯ ಕ್ಷೇತ್ರದಲ್ಲಿ ಆಸಕ್ತಿ ಹೊಂದಿರುವ ನಾನು ಆರೋಗ್ಯದ ಬಗ್ಗೆ ಇಪ್ಪತ್ತು ಲೇಖನಗಳನ್ನು ಬರೆದಿರುತ್ತೇನೆ. ಇವೆಲ್ಲ ಪ್ರಕಟಗೊಂಡಿರುತ್ತವೆ.
 • ದಂತ ಆರೋಗ್ಯದ ಬಗ್ಗೆ ಎಚ್ಚರಿಕೆಯ ಮಾಹಿತಿಗಳ ಲೇಖನಗಳು ಜಿಲ್ಲಾ ಪತ್ರಿಕೆಗಳಲ್ಲಿ ಹಾಗೂ ದಾವಣಗೆರೆ, ಬೆಂಗಳೂರು ಪತ್ರಿಕೆಗಳಲ್ಲಿಯೂ ಪ್ರಕಟಿತವಾಗಿರುತ್ತವೆ.
 • ವೈಯಕ್ತಿಕವಾಗಿ ಹಾಗೂ ಸಂಘ ಸಂಸ್ಥೆಗಳ ಸಹಯೋಗದೊಂದಿಗೆ ದಂತ ಆರೋಗ್ಯ ತಪಾಸಣಾ ಶಿಬಿರಗಳನ್ನು ನಡೆಸಿರುತ್ತೇನೆ.
 • ಸಿದ್ಧಾರ್ಥ ದಂತ ವೈದ್ಯಕೀಯ ಮಹಾವಿದ್ಯಾಲಯದಲ್ಲಿ ಉಪನ್ಯಾಸಕನಾಗಿ ಸೇವೆ ಸಲ್ಲಿಸುತ್ತಿದ್ದು, ಸಂಸ್ಥೆ ವತಿಯಿಂದ ದಂತ ವಿದ್ಯಾರ್ಥಿಗಳಿಗೆ ತರಬೇತಿ ನೀಡುವುದಕ್ಕಾಗಿ ದಂತ ಆರೋಗ್ಯ ಶಿಬಿರವನ್ನು ಸುಮಾರು ೩೦ ಹಳ್ಳಿಗಳಲ್ಲಿ ಹಮ್ಮಿಕೊಂಡು ಕಾರ್ಯನಿರ್ವಹಿಸಿರುತ್ತೇನೆ.
 • ರೋಟರಿ, ಕ್ಲಬ್, ತುಮಕೂರು ವತಿಯಿಂದ ಜಿಲ್ಲೆಯ ಚಿಕ್ಕತೊಟ್ಲುಕೆರೆ ಅಡವಿ ಸ್ವಾಮಿ ಮಠದಲ್ಲಿ ಆರೋಗ್ಯ ತಪಾಸಣಾ ಶಿಬಿರದಲ್ಲಿ ಭಾಗವಹಿಸಿದ ಜನರಿಗೆ ಮಾಹಿತಿ ನೀಡಿ ಉಚಿತವಾಗಿ ದಂತ ಚಿಕಿತ್ಸೆ ನೀಡಿರುತ್ತೇನೆ.
 • ತುಮಕೂರು ಜಿಲ್ಲೆ ಗುಬ್ಬಿ ತಾಲ್ಲೂಕಿನ ತೊರೆ ಮಠದಲ್ಲಿ, ಮಠದ ವತಿಯಿಂದ ಹಮ್ಮಿಕೊಂಡಿದ್ದ ಆರೋಗ್ಯ ಶಿಬಿರದಲ್ಲಿ ಪಾಲ್ಗೊಂಡಿದ್ದು ದಂತಕ್ಷಯದ ಬಗ್ಗೆ ಸೂಕ್ತ ಸಲಹೆಗಳನ್ನು ನೀಡುವ ಮೂಲಕ ಉಚಿತ ಚಿಕಿತ್ಸೆ ನೀಡಿರುತ್ತೇನೆ.
 • ಜಿಲ್ಲೆಯ ಬಾಪೂಜಿ ಅನಾಥ ಆಶ್ರಮದಲ್ಲಿ ಮಕ್ಕಳಿಗೆ ಹಲ್ಲು ಸ್ವಚ್ಛತೆಯ ಬಗ್ಗೆ ಮಾಹಿತಿ ನೀಡಿ ದಂತಕುಂಚ(ಬ್ರಷ್) ಹಾಗೂ ದಂತಮಂಜನ (ಪೇಸ್ಟ್) ಉಚಿತವಾಗಿ ವಿತರಿಸುತ್ತೇನೆ.
 • ಇದಲ್ಲದೆ ಅನೇಕ ಶಾಲಾ, ಕಾಲೇಜುಗಳಲ್ಲಿ ಸಂಘ ಸಂಸ್ಥೆಗಳಲ್ಲಿ ದಂತ ಆರೋಗ್ಯದ ಬಗ್ಗೆ ತಪಾಸಣಾ ಶಿಬಿರ ಮಾಡಿ ಸೂಕ್ತಸಲಹೆಗಳನ್ನು ಹಾಗೂ ಉಚಿತ ಚಿಕಿತ್ಸೆ ನೀಡಿರುತ್ತೇನೆ.
 • ಇದರೊಂದಿಗೆ ಅಂಚೆಯ ಮೂಲಕ ಅಥವಾ ದೂರವಾಣಿ ಮೂಲಕ ಸಂಪರ್ಕಿಸುವ ಜನ ಸಾಮಾನ್ಯರೊಂದಿಗೆ ಸ್ಪಂದಿಸಿ ಅವರಿಗೆ ದಂತ ಆರೋಗ್ಯದ ಬಗ್ಗೆ ಸಲಹೆ ಮತ್ತು ಮಾಹಿತಿಗಳನ್ನು ನೀಡುತ್ತೇನೆ.
 • ಇಷ್ಟೆಲ್ಲಾ ನಾನು ವೈದ್ಯ ಸಾಹಿತಿಯಾಗಿರುವುದರಿಂದಲೇ ಸಾಧ್ಯವಾಯಿತು.

 

* * *