ಅಪನಂಬಿಕೆಗಳು ಮನೋರೋಗ ಚಿಕಿತ್ಸೆಯ ಬಗ್ಗೆ ಇರುವಷ್ಟು ದೈಹಿಕ ರೋಗದ ಬಗ್ಗೆ ಇಲ್ಲ. ಇವುಗಳಲ್ಲಿ ಕೆಲವು ಈ ರೀತಿ ಇವೆ:

. ಮನೋರೋಗಕ್ಕೆ ಮದ್ದಿಲ್ಲ: ಇದು ಈಗ ಸುಳ್ಳಾಗಿದೆ. ಮನೋರೋಗಕ್ಕೆ ಮದ್ದಿದೆ.

. ಮನೋವೈದ್ಯರು ಕೊಡುವ ಔಷಧಗಳ ಪ್ರಮಾಣ ಹೆಚ್ಚು : ಇದು ಕೊಂಚ ಮಟ್ಟಿಗೆ ನಿಜ. ಕಡಿಮೆ ಪ್ರಮಾಣದ ಔಷಧಗಳು ಇವೆ. ಹೆಚ್ಚು ಪ್ರಮಾಣದ ಔಷಧಗಳೂ ಇವೆ. ಇದೇ ರೀತಿ ದೈಹಿಕ ರೋಗಗಳಿಗೆ ಸಹ ಉದಾಹರಣೆಗೆ ದಿನಕ್ಕೆ ಒಂದು ಮಾತ್ರೆಗೆ ೩೦೦ ಮಿಲಿ ಗ್ರಾಂ ಪ್ರಮಾಣ ಬೇಕಾಗಬಹುದು. ಕೆಮ್ಮಿಗೆ ಸಿಪ್ರೋಫ್ಲಾಕೆಸಿನ್ ೫೦೦ ಮಿಲಿಗ್ರಾಮ್ ಎರಡು ಬಾರಿ ಅಂದರೆ ೧೦೦೦ ಮಿಲಿಗ್ರಾಮ ಆಯಿತಲ್ಲ. ಇದರ ಬಗ್ಗೆ ಬಹುತೇಕ ಜನರಿಗೆ ಈ ರೀತಿ ಎನಿಸುವುದಿಲ್ಲ. ಇಂತಹವರಿಗೆ ನಾನು ಹೇಳುವುದು ಏನೆಂದರೆ ಇದು ಮಿಲಿ ಗ್ರಾಂ, ಗ್ರಾಂ ಅಲ್ಲ. ಕೇಜಿ ಅಲ್ಲ, ಸಂಖ್ಯೆಯ ಬಗ್ಗೆ ಯೋಚಿಸಬೇಡಿ.  ನಿ‌ಮ್ಮ ರೋಗ ನಿವಾರಣೆ ಆಗಬೇಕಾದರೆ ಇಷ್ಟು ಪ್ರಮಾಣದ ಔಷಧ ಬೇಕಾಗುತ್ತದೆ ಎಂದು. ಇದರಿಂದ ರೋಗಿಗೆ ಮನವರಿಕೆ ಆಗುತ್ತದೆ.

. ಔಷಧಗಳು ಅಭ್ಯಾಸವಾಗುತ್ತವೆ; ಇದು ನಿಜವಲ್ಲ. ಆದರೆ ಹಲವಾರು ತಿಂಗಳು ಹಲವಾರು ವರ್ಷ ಔಷಧ ಸೇವಿಸಿದ ನಂತರ ಪೂರ್ತಿ ನಿಲ್ಲಿಸುವ ಮುಂಚೆ ಮಾತ್ರೆಯನ್ನು ನಿಧಾನವಾಗಿ ಕಡಿಮೆ ಮಾಡುತ್ತಾ ಮುಂದುವರೆಸಿ, ನಂತರ ಪೂರ್ತಿ ನಿಲ್ಲಿಸಬೇಕು.

. ಮನೋವೈದ್ಯರು ಕೊಡುವ ಮಾತ್ರೆ, ನಿದ್ದೆಯ ಮಾತ್ರೆಗಳು.

ಈ ಹೇಳಿಕೆ ಸುಳ್ಳು. ಮಾನಸಿಕ ರೋಗಕ್ಕೆ ಉಪಯೋಗಿಸುವ ಔಷಧಿಗಳಲ್ಲಿ ಎರಡು ವಿಧಗಳಿವೆ. ನಿದ್ದೆ ಬರಿಸುವುದು ಮತ್ತು ಬರಿಸದೆ ಇರುವುದು. ಆದರೆ ಮೂಲದಲ್ಲಿ ಈ ಎರಡೂ ಔಷಧಗಳನ್ನು ಮಾನಸಿಕ ರೋಗಕ್ಕೆ ಕೊಡುವರು ಅನೇಕ ಮಾನಸಿಕ ರೋಗಗಳಲ್ಲಿ ನಿದ್ರಾಹೀನತೆ ಇರುವುದರಿಂದ ನಿದ್ದೆ ಮಾತ್ರೆಗಳನ್ನು ರೋಗಕ್ಕೆ ಒಂದೇ ಮಾತ್ರೆ ಕೊಡಲಾಗುವುದು. ನಿದ್ದೆ ಕೆಡದವರಿಗೆ, ನಿದ್ದೆ ಬರದ ಆದರೆ ರೋಗಕ್ಕೆ ಉಪಯುಕ್ತವಾಗುವ ಔಷಧಿ ಕೊಡಲಾಗುತ್ತದೆ. ಎಷ್ಟೋ ಜನರು ನಾನು ಯಾವ ಮಾತ್ರೆ ಬರೆದು ಕೊಟ್ಟಿದ್ದೆ? ಎಂದು ಕೇಳಿದರೆ ತಕ್ಷಣ ಬರುವ ಉತ್ತರ ಅದೇ ಸಾರ್ ನಿದ್ದೆ ಮಾತ್ರೆ ಎಂದು.

೫. ಔಷಧಗಳು ಇತರೆ ಅಂಗಗಳ ಮೇಲೆ ದುಷ್ಪರಿಣಾಮ ಬೀರುತ್ತವೆ. ಇದು ದುಷ್ಪರಿಣಾಮವಲ್ಲ. ಅಡ್ಡಪರಿಣಾಮ ಸೈಡ್ ಎಪೆಕ್ಟ್ ಪರಿಣಾಮ ಅಂದರೆ ಮನಸ್ಸಿನ ಮೇಲೂ ಪರಿಣಾಮ ಬೀರುವುದರ ಜೊತೆಗೆ ಬಾಯಿಗೆ ಒಣಗುವುದು ಇತ್ಯಾದಿ. ಜ್ವರಕ್ಕೆಂದು ಆ ವ್ಯಕ್ತಿ… ಸೇವಿಸಿದರೆ ಕೆಲವರಿಗೆ ಭೇದಿಯಾಗುವುದಿಲ್ಲವೇ? ಇದೂ ಅದೇ ರೀತಿ. ಇವು ಚಿಕ್ಕ ಪುಟ್ಟ ತೊಂದರೆಗಳು ಸಹಿಸಿಕೊಳ್ಳಬಹುದು.

. ಮನೋವೈದ್ಯರು ಔಷಧಗಳನ್ನು ಬಹಳ ಸಮಯ ಕೊಡುತ್ತಾರೆ :

ಬಹುತೇಕ ಸಂದರ್ಭಗಳಲ್ಲಿ ನಿಜ.

ಇದು ಸತ್ಯ. ಮೊದಲನೇ ಬಾರಿ ಕಂಡುಬಂದ ರೋಗಕ್ಕೆ ರೋಗದ ಲಕ್ಷಣಗಳು ಪೂರ್ತಿ ನಿವಾರಣೆಯಾದ  ನಂತರವೂ ಆರರಿಂದ ಹನ್ನೆರಡು ತಿಂಗಳು ಔಷಧ ಮುಂದುವರೆಸಿ ನಂತರ ನಿಲ್ಲಿಸಬಹುದು. ಆದರೆ ಕೆಲವರಿಗೆ ಕೆಲವು ತಿಂಗಳು ಕೆಲವು ವರ್ಷಗಳಾದ ನಂತರ ಪುನಃ ರೋಗದ ಲಕ್ಷಣಗಳು ಕಂಡುಬರುತ್ತದೆ. ಅಂತಹವರಿಗೆ ಮಾತ್ರೆ ಕೊಟ್ಟ ವರ್ಷ ಅಥವಾ ಅನಿರ್ದಿಷ್ಟ ಅವಧಿ ಮುಂದುವರೆಸಲಾಗುತ್ತದೆ. ರೋಗವನ್ನು ಹತೋಟಿಯಲ್ಲಿಡಲು ಅವಶ್ಯಕ. ಇಲ್ಲದಿದ್ದರೆ ರೋಗದ ಲಕ್ಷಣಗಳು ಮುಂದುವರೆದು ವ್ಯಕ್ತಿ ಮತ್ತು ಅವನ ಕುಟುಂಬದವರಿಗೆ ತೊಂದರೆಯಾಗುತ್ತದೆ. ಡಯಾಬಿಟಿಸ್, ಬ್ಲಡ್‌ಪ್ರೆಶರ್ ಮುಂತಾದ ರೋಗಗಳಿಗೆ ಅನಿರ್ದಿಷ್ಟ ಸಮಯ ಔಷಧ ಸೇವಿಸಿದಂತೆ ಇದು ಅಲ್ಲವೇ?

. ಮನೋರೋಗಿಗಳಿಗೆ ವಿಶ್ರಾಂತಿ ಬೇಕು

ಮನೋರೋಗಿಗಳಿಗೆ ವಿಶ್ರಾಂತಿ ಬೇಕಿಲ್ಲ. ಆದಷ್ಟು ಬೇಗ ಅವರು ಕೆಲಸದಲ್ಲಿ ನಿರತರಾಗಲು ಕುಟುಂಬದವರು ಒತ್ತಾಯ ಮಾಡಬೇಕು.

. ಮದುವೆ ಮಾಡಿದರೆ ಸರಿಯಾಗುತ್ತಾನೆ. ಔಷಧ ನಿಲ್ಲಿಸಬಹುದು.

ಭ್ರಾಂತು ರೋಗದ ವ್ಯಕ್ತಿ ತಾನೇ ಸೃಷ್ಟಿ ಮಾಡಿಕೊಂಡ ಪ್ರಪಂಚದಲ್ಲಿ ಇತರರ ಸಂಪರ್ಕದಿಂದ ದೂರವಿರುತ್ತಾನೆ. ತನ್ನ ತನ್ನಷ್ಟಕ್ಕೆ ತಾನು ಮಾತನಾಡಿಕೊಳ್ಳುತ್ತಿರುತ್ತಾನೆ.

ಖಿನ್ನತೆ ರೋಗದ ವ್ಯಕ್ತಿ ಸಹ ಇತರರ ಜೊತೆ ಬೆರೆಯದೆ ಸುಮ್ಮನೆ ಇರುತ್ತಾನೆ. ಮೇನಿಯಾದಿಂದ ಬಳಲುತ್ತಿರುವ ವ್ಯಕ್ತಿ ಇತರರೊಡನೆ ಸುಲಭವಾಗಿ ಬೆರೆಯುತ್ತಾ, ತಮಾಷೆ ಮಾಡುತ್ತಾ ಇರುತ್ತಾನೆ. ಇವನಲ್ಲಿ ಲೈಂಗಿಕ ಆಸಕ್ತಿ ಹೆಚ್ಚಿರುವುದು.

ಈ ಮೂರೂ ರೋಗಿಗಳನ್ನು ಕಂಡ ಮನೆಯವರು ಮತ್ತು ಆತ್ಮೀಯರು ಇವರಿಗೆ ಲೈಂಗಿಕ ಆಕಸ್ತಿಯಿಂದ ಹೀಗೆ ಮಾಡುತ್ತಿದ್ದಾನೆ ಎಂದು ಭಾವಿಸಿ ಮದುವೆ ಮಾಡಿಬಿಡಿ ಎಲ್ಲಾ ಸರಿಯಾಗುತ್ತದೆ ಎನ್ನುತ್ತಾರೆ ಮತ್ತು ಹಾಗೇ ಮಾಡುತ್ತಾರೆ. ಆದರೆ ವಿವಾಹ ಮನೋರೋಗಕ್ಕೆ ಮದ್ದಲ್ಲ ಎನ್ನುವುದನ್ನು ಎಲ್ಲರೂ ತಿಳಿಯುವುದು ಮುಖ್ಯ. ಭ್ರಾಂತು ರೋಗ ಮತ್ತು ಖಿನ್ನತೆ ರೋಗಿಗಳ ವಿವಾಹದ ನಂತರವೂ ಇದೇ ರೀತಿ ಮುಂದುವರೆಯುತ್ತದೆ. ಮೇನಿಯ ರೋಗಿಯಲ್ಲಿ ವಿವಾಹದ ನಂತರವೂ ಲೈಂಗಿಕಾಸಕ್ತಿ ಹೆಚ್ಚಾಗಿಯೇ ಇರುತ್ತದೆ. ಇವರಿಂದ ಅನೈತಿಕ ಸಂಬಂಧವೂ ಕಂಡುಬರಬಹುದು. ಮಾನಸಿಕ ರೋಗಿಗಳು ವಿವಾಹವಾಗಬಾರದೆಂದು ಲೇಖಕ ಹೇಳುತ್ತಿಲ್ಲ. ಚಿಕಿತ್ಸೆ ಕೊಡಿಸಿ ರೋಗದ ಲಕ್ಷಣಗಳು ನಿವಾರಣೆಯಾದ ನಂತರ ವಿವಾಹದ ಬಗ್ಗೆ ಯೋಚಿಸಬೇಕು. ವಿವಾಹ ಮಾಡಿದರೆ ಔಷಧ ನಿಲ್ಲಿಸಬೇಕೆಂದಿಲ್ಲ ನಿಲ್ಲಿಸಬಾರದು.

. ಇತರೆ ರೋಗ ಬಂದಾಗ ಔಷಧ ನಿಲ್ಲಿಸಬೇಕು

ಇತರೆ ದೈಹಿಕ ರೋಗಗಳಾದ ಕೆಮ್ಮು, ಜ್ವರ ಇತ್ಯಾದಿಗಳಿಗೆ ಔಷಧ ತೆಗೆದುಕೊಳ್ಳುತ್ತಿರುವಾಗ ಮಾನಸಿಕ ಚಿಕಿತ್ಸೆಗೆಂದು ಕೊಟ್ಟಿರುವ ಔಷಧಗಳನ್ನು ಕೆಲವರು ನಿಲ್ಲಿಸಿಬಿಡುತ್ತಾರೆ ಇದು ತಪ್ಪು. ಯಾವುದೇ ಎರಡು ವಿಧದ ಮಾತ್ರೆಗಳನ್ನು ಸರಿಸುಮಾರು ಒಂದು ತಾಸಿನ ಅಂತರದಲ್ಲಿ ಔಷಧ ತೆಗೆದುಕೊಳ್ಳಬೇಕು. ಔಷಧ ನಿಲ್ಲಿಸಬಾರದು.

೧೦. ಔಷಧ ಕೆಲಸ ಮಾಡುತ್ತಿಲ್ಲ: ಮಾನಸಿಕ ರೋಗಕ್ಕೆ ಔಷಧ ಚಿಕಿತ್ಸೆ ಪ್ರಾರಂಭಿಸಿ ಒಂದೆರಡು ವಾರದೊಳಗೆ ರೋಗಿ ಗುಣಮುಖವಾಗದಿದ್ದರೆ ಮಾತ್ರೆ ಕೆಲಸಮಾಡುತ್ತಿಲ್ಲ ಎಂದು ತೀರ್ಮಾನಿಸಿ ಬೇರೆ ಔಷಧಿ ಬರೆದುಕೊಡುವಂತೆ ವೈದ್ಯರನ್ನು ಒತ್ತಾಯಿಸುತ್ತಾರೆ. ಕೆಲವರು ವೈದ್ಯರನ್ನು ಬದಲಾಯಿಸುತ್ತಾರೆ. ಇದು ತಪ್ಪು. ಔಷಧ ಕೆಲಸ ಮಾಡಲು ಕನಿಷ್ಟವೆಂದರೂ ಮೂರರಿಂದ ನಾಲ್ಕು ವಾರವೇ ಬೇಕಾಗುತ್ತದೆ. ನಮ್ಮ ಅವಸರಕ್ಕೆ ಮಾತ್ರೆ ಬೇಗ ಕೆಲಸ ಮಾಡುವುದಿಲ್ಲ. ಆದುದರಿಂದ ಮೊದಲ ಮೂರ್ನಾಲ್ಕು ವಾರ ರೋಗಿಗೆ, ರೋಗಿ ಕಡೆಯವರಿಗೆ ಮತ್ತು ಚಿಕಿತ್ಸೆ ನೀಡುವ ವೈದ್ಯರಿಗೆ ತಾಳ್ಮೆ ಇರಬೇಕು. ಪ್ರತಿಯೊಂದು ಔಷಧಕ್ಕೂ ಕನಿಷ್ಟ ಮತ್ತು ಗರಿಷ್ಠ ಪ್ರಮಾಣವಿರುತ್ತದೆ. ಕನಿಷ್ಟ ಪ್ರಮಾಣದಲ್ಲಿ ಔಷಧ ಪ್ರಾರಂಭಿಸಿ, ಗುಣಮುಖರಾಗದಿದ್ದಲ್ಲಿ ಗರಿಷ್ಠ ಪ್ರಮಾಣಕ್ಕೆ ಹೋಗಬೇಕಾಗುತ್ತದೆ. ಗರಿಷ್ಠ ಪ್ರಮಾಣಕ್ಕೆ ರೋಗಿ ಸ್ಪಂದಿಸದಿದ್ದರೆ ಔಷಧ ಬದಲಾಯಿಸಬೇಕು.

೧೧. ಔಷಧ ದೈಹಿಕ ಸಂಪರ್ಕದಿಂದ ಮತ್ತೊಬ್ಬರ ದೇಹ ಸೇರುತ್ತದೆ : ಇದು ಕೆಲವರ ನಂಬಿಕೆ. ಮಾನಸಿಕ ರೋಗಿಯ ದೈಹಿಕ ಸಂಪರ್ಕದಿಂದ ಒಬ್ಬರಿಂದ ಮತ್ತೊಬ್ಬರಿಗೆ ವರ್ಗಾವಣೆಯಾಗುವುದಿಲ್ಲವೋ ಅದೇ ರೀತಿ ಮಾನಸಿಕ ರೋಗಕ್ಕೆ ಉಪಯೋಗಿಸುವ ಔಷಧಗಳೂ ಒಬ್ಬರಿಂದ ಮತ್ತೊಬ್ಬರಿಗೆ ವರ್ಗಾವಣೆಯಾಗುವುದಿಲ್ಲ.

೧೨. ಗರ್ಭಿಣಿ ಔಷಧ ಉಪಯೋಗಿಸಿದರೆ ಹೊಟ್ಟೆಯಲ್ಲಿರುವ ಮಗುವಿಗೆ ತೊಂದರೆಯಾಗುತ್ತದೆ.

ಅದು ಅಕ್ಷರಶ ನಿಜ. ಗರ್ಭಿಣಿಯರು ಮಾನಸಿಕ ರೋಗದ ಔಷಧಗಳಲ್ಲ ಬೇರೆ ಯಾವುದೇ ಔಷಧ ಸೇವಿಸಿದರೆ ಅದು ಹೊಟ್ಟೆಯಲ್ಲಿರುವ ಮಗುವಿನ ಮೇಲೆ ದುಷ್ಪರಿಣಾಮ ಉಂಟುಮಾಡಬಹುದು. ದೈಹಿಕ ನ್ಯೂನತೆ ಕಂಡುಬರಬಹುದು. ಆದ್ದರಿಂದ ಗರ್ಭಿಣಿಯರು ಮೊದಲ ೩ ತಿಂಗಳಲ್ಲಿ ಔಷಧ ತೆಗೆದುಕೊಳ್ಳಬಾರದು.

೧೩. ಎದೆಹಾಲಿನ ಮೂಲಕ ಔಷಧ ಮಗುವಿನ ದೇಹ ಸೇರುತ್ತದೆ. ಇದೂ ನಿಜ. ಆದ ಪ್ರಯುಕ್ತ ಮಗುವಿಗೆ ಈ ರೀತಿಯಿಂದ ತೊಂದರೆಯಾಗದಂತೆ ಔಷಧಗಳನ್ನು ವೈದ್ಯರ ಲಹೆ ಮೇರೆಗೆ ತೆಗೆದುಕೊಳ್ಳಬೇಕು.

ಸಾಹಿತಿಯಾಗಿನನ್ನಅನುಭವ
“ನನ್ನ ಗಂಡನ ಕೊಂದರೆ ಲಕ್ಷ ಕೊಡುವೆ
– ಡಾ|| ಜಿ.ಎಸ್. ಫಾಲಾಕ್ಷ ಒಬ್ಬ ಸಾಮಾನ್ಯ ವೈದ್ಯ ಸಾಹಿತಿಯಾಗಿ ನನಗೆ ಅಪಾರ ಅನುಭವವಾಗಿದೆ. ಎಷ್ಟೋ ಜನರಿಗೆ ತಮ್ಮಲ್ಲಿ ಅಥವಾ ನಮ್ಮ ಕುಟುಂಬದ ಸದಸ್ಯರಲ್ಲಿ ಮಾನಸಿಕ ರೋಗವಿದೆ ತಿಳಿರುವುದಿಲ್ಲ. ವೈದ್ಯಕೀಯ ಲೇಖನಗಳನ್ನು ಕೆಲವು ಪತ್ರಿಕೆಗಳಲ್ಲಿ ಓದಿದ ಅವರು ಮಾಹಿತಿ ಸಂಗ್ರಹಿಸಿ ತಮ್ಮಲ್ಲಿರುವ ಲಕ್ಷಣಗಳು ಮಾನಸಿಕ ರೋಗದಿಂದ ಎಂದು ತಿಳಿಯುವುದಲ್ಲದೆ, ಇದಕ್ಕೆ ಚಿಕಿತ್ಸೆ ಲಭ್ಯವಿದೆ, ಎಂದೂ ಅರಿವು ಮಾಡಿಕೊಳ್ಳುತ್ತಾರೆ. ಮತ್ತು ಇದರ ಪ್ರಯುಕ್ತ ಯಾವ ತಜ್ಞರನ್ನು ಸಂದರ್ಶಿಸಬೇಕು ಎಂದೂ ತಿಳಿಯುತ್ತದೆ. ಇದರಿಂದ ತಮ್ಮ ರೋಗ ನಿವಾರಣೆ ಮಾಡಿಕೊಳ್ಳಬಹುದು. ಇದರಿಂದ ಅಂತಹ ರೋಗಿಗಳಲ್ಲಿ ಸಮಾಧಾನವೂ ಆಗುತ್ತದೆ. ಚಿಕಿತ್ಸೆ ನೀಡಿದ ವೈದ್ಯನಿಗೂ ಸಂತೋಷವಾಗುತ್ತದೆ. ಎಷ್ಟು ಜನ ದೂರದ ಊರುಗಳಿಂದ ದೂರವಾಣಿಯ ಮೂಲಕ ತಮ್ಮ ಸಮಸ್ಯೆಗಳಿಗೆ ಪರಿಹಾರ ಯಾಚಿಸುತ್ತಾರೆ. ಆಗ ರೋಗವು ಮತ್ತು ವೈದ್ಯನಿಗೂ ಸಂತೋಷವಾಗುವುದಿಲ್ಲವೇನು? ನನ್ನಿಂದ ಜನಗಳಿಗೆ ಎಷ್ಟೋ ಉಪಕಾರವಾಗಿವೆ. ಸೇವೆಯಾಗಿದೆ ಎಂದು ನನಗೆ ಸಂತಸವಾಗುತ್ತದೆ. ಮನೋರೋಗದ ಬಗ್ಗೆ ಈಗಲೂ ಇರುವ ಮೂಢನಂಬಿಕೆಗಳು ಮಾಯವಾಗಲೂ ಸಹಾಯವಾಗುತ್ತದೆ. ಲೇಖನಗಳ ಮೂಲಕ ಮನೋರೋಗಿಗಳಿಗೂ ಅವರಲ್ಲಿ ಮನೆಯವರಿಗೂ ಜ್ಞಾನಾರ್ಜನೆಯಾಗುತ್ತದೆ. ಮನೋರೋಗಕ್ಕೆ ಮದ್ದಿಲ್ಲ’ ಎಂಬ ಪುರಾತನ ಹೇಳಿಕೆಯ ಮಾತು ಇವುಗಳ ಮೂಲಕ ಈಗ ಹುಸಿಯಾಗುವುದಕ್ಕೆ ಹಲವು ಕಾರಣಗಳಲ್ಲಿ ಒಂದೊಂದರೆ ಮಾನಸಿಕ ರೋಗಗಳ ಬಗ್ಗೆ ಅರಿವು ಮೂಡಿಸುವ ವೈದ್ಯ ಸಾಹಿತ್ಯ. ನಮಗೆ ಪ್ರಿಯವಾದ ವೈದ್ಯ ಸಾಹಿತ್ಯ ನಮ್ಮನ್ನು ಕೆಲವೊಮ್ಮೆ ಪೇಚಿಗೆ ಸಿಲುಕಿಸುತ್ತದೆ. ಹಲವು ವರ್ಷಗಳ ಹಿಂದೆ ಒಂದು ವಾರಪತ್ರಿಕೆಯಲ್ಲಿ ನಾನು ಮೂತ್ರಪಿಂಡಗಳ ಬಗ್ಗೆ ಒಂದು ಲೇಖನ ಬರೆದಿದ್ದೆ. ಆಗ ಇಪ್ಪತ್ತು ಪುಟಗಳಷ್ಟು ತನ್ನ ಮೂತ್ರಪಿಂಡರೋಗದ ಬಗ್ಗೆ ಜೆರಾಕ್ಸ್ ಕಳಿಸಿ ನನ್ನ ಸಲಹೆ ಕೇಳಿದ್ದದ್ದು ಆಗ ನಾನು ಅವನಿಗೆ ಚಿಕಿತ್ಸೆ ನೀಡುವ ಸಾಮರ್ಥ್ಯ ನನಗಿಲ್ಲವೆಂದು ತಿಳಿಸಿದೆ ಮತ್ತು ಅದೇ ನನ್ನ ಮಾನಸಿಕ ಆರೋಗ್ಯವಲ್ಲದ ವಿಷಯದ ಬಗ್ಗೆ ಕೊನೆ ಲೇಖನವಾಯಿತು.

ಇನ್ನೊಮ್ಮೆ ಒಬ್ಬ ಗೃಹಿಣಿ ಅನುಮಾನದ ಪ್ರವೃತ್ತಿಯ ತನ್ನ ಗಂಡನಿಂದ ತನಗೆ ಅತಿಯಾದ ಹಿಂಸೆಯಾಗುತ್ತಿದೆ ಎಂದೂ, ಅವನನ್ನು ನಾನು ಯಾವರೀತಿಯಾದರೂ ಔಷಧ ಕೊಟ್ಟು ಕೊಂದರೆ ನನಗೆ ಐದು ಲಕ್ಷ ಕೊಡುವುದಾಗಿಯು ಬೇಡಿಕೊಂಡಳು. ನಾನು ಕೊಲ್ಲುವ ವೈದ್ಯನಲ್ಲ. ಬದುಕಿಸುವ ವೈದ್ಯನೆಂದು ಅರಿವು ಮೂಡಿಸಲು ಶತಪ್ರಯತ್ನ ಮಾಡಿ ಕೊನೆ ಸೋಲೊಪ್ಪಿಕೊಂಡೆ. ಆಗ ಆಕೆ ಕೋಪದಿಂದ ನೀವು ಬರೆಯುವುದೊಂದು ಮಾಡುವುದೊಂದು. ಜನರ ಕಷ್ಟ ಹೊಟ್ಟೆ ತುಂಬಿದ ನಿಮಗೆಲ್ಲಿ ಅರ್ಥವಾಗಬೇಕು? ಎಂದು ನನ್ನ ದಪ್ಪ ಹೊಟ್ಟೆಯತ್ತ ಒಮ್ಮೆ ತಿರಸ್ಕಾರದಿಂದ ನೋಡಿಹೋದಳು. ಸದ್ಯ ಮತ್ತೆ ಆ ಪುಣ್ಯಸ್ತ್ರೀ ನನ್ನಲ್ಲಿಗೆ ಬರಲಿಲ್ಲ!

* * *