ಚಿತ್ತವಿಚಿತ್ರ

“ನಾನು ಬೆಂಗಳೂರು ನಿವಾಸಿ. ನಲವತ್ತು ವರ್ಷ ವಯಸ್ಸು. ಹತ್ತು ಹನ್ನೆರಡು ವರ್ಷದ ಹಿಂದೆ ಶಿವಾಜಿ ಚಿತ್ರಮಂದಿರದ ಬಳಿ ಸಾಯಂಕಾಲ ಸತ್ತವರನ್ನು ಸ್ಮಶಾನಕ್ಕೆ ಸಾಗಿಸುವ ವ್ಯಾನನ್ನು ತದೇಕಚಿತ್ತದಿಂದ ನೋಡುತ್ತಾ ಮನಸ್ಸಿನಲ್ಲಿ ಅನೇಕ ವಿಷಯಗಳು ಮನಸ್ಸಿನಲ್ಲಿ ಆಳವಾಗಿ ಬೇರೂರಿ ನನ್ನ ಸ್ಥೈರ್ಯವನ್ನು ಕೆಡಿಸಿದೆ. ಈಗ ನಾನು ನಾಲ್ಕು ಗೋಡೆಯ ಮಧ್ಯೆ ಕುಳಿತು ಆಕಾಶವೇ ನೆತ್ತಿಯ ಮೇಲೆ ಬಿದ್ದಹಾಗೆ ಯೋಚಿಸುತ್ತಿರುತ್ತೇನೆ. ನಾಲ್ಕು ಜನರ ಮಧ್ಯೆ ಬೆರೆತುಕೊಳ್ಳವುದಿಲ್ಲ. ಹೊರಗಡೆ ಅಡ್ಡಾಡುವುದಿಲ್ಲ. ಸದಾ ಇಲ್ಲದ ವಿಚಾರಗಳನ್ನು ಮೆಲುಕುಹಾಕುತ್ತ ನರಕಯಾತನೆ ಅನುಭವಿಸುತ್ತೇನೆ.

ಬೆಳಿಗ್ಗೆ ಹಾಸಿಗೆಯಿಂದ ಏಳುವಾಗಲೇ ಈ ಭಯಂಕರ ವಿಚಾರಗಳು ನನ್ನ ವಯಸ್ಸಿನಲ್ಲಿ ಮೂಡುತ್ತವೆ. ದೇವರನ್ನು ನೆನಸುತ್ತಾ ಏಳಲು ಏಷ್ಟೇ ಪ್ರಯತ್ನ ಮಾಡಿದರೂ ಈ ನೆನಪುಗಳು ನನ್ನ ಮನಸ್ಸಿನಲ್ಲಿ ಮೂಡುತ್ತವೆ. ಹಾಸಿಗೆಯಿಂದ ಏಳುವಾಗಲೇ ಸತ್ತವರನ್ನು ಸಾಗಿಸುವ ವ್ಯಾನು ಮತ್ತು ಸ್ಮಶಾನದ ದೃಶ್ಯಗಳು, ಮನುಷ್ಯನ ಆಸ್ತಿಪಂಜರದ ಆಕಾರಗಳು, ಮನುಷ್ಯರನ್ನು ಸುಡುವ ದೃಶ್ಯಗಳು, ಹೀಗೆ ಅನೇಕೆ ಭಯಂಕರ ಭಾವನೆಗಳು ಮನಸ್ಸಿನಲ್ಲಿ ಬಂದು ಭಯ ಉಂಟುಮಾಡುತ್ತವೆ. ಚಳಿ ಭಯದಿಂದ ನಡುಗುತ್ತಲೇ ಮೇಲೆ ಏಳುತ್ತೇನೆ. ಏನು ಮಾಡಲಿ?

ನಾನು ಏಕಾಂಗಿಯಾಗಿದ್ದಾಗ ಯಾರಾದರೂ ಸತ್ತರು ಎಂದರೆ ಸಾಕು ಅಥವಾ ಜನರು ಸತ್ತವರ ವಿಷಯ ಮಾತನಾಡುತ್ತಿದ್ದರೂ ಸಾಕು, ಭಯದಿಂದ ನಡುಗುತ್ತೇನೆ. ದಾರಿಯಲ್ಲಿ ‘ವ್ಯಾನು’ ನೋಡಿದರೆ ಸಾಕು ಭಯದಿಂದ ತತ್ತರಿಸುತ್ತೇನೆ. ಸತ್ತವರ ಮನೆಯ ಹತ್ತಿರವೂ ಸುಳಿಯುವುದಿಲ್ಲ. ಸ್ಮಶಾನ ಇರುವ ಜಾಗದಲ್ಲಿ ಸಂಚರಿಸುವುದಿಲ್ಲ ಹಾಗೂ ಆ ಕಡೆ ಕಣ್ಣು ಎತ್ತಿ ಸಹ ನೋಡುವುದಿಲ್ಲ. ಆಸ್ಪತ್ರೆ ನೋಡಲು ಭಯಪಡುತ್ತೇನೆ. ಡಾಕ್ಟರನ್ನು ನೊಡಲು, ಈ ವಿಚಾರ ತಿಳಿಸಲು ಹಿಂಜರಿಯುತ್ತಿದ್ದರು ಇಲ್ಲದ ಕಲ್ಪನೆ ಮಾಡಿಕೊಂಡು ಅವರಸಮೀಪ ಹೋಗಲು ಭಯ ಪಡುತ್ತೇನೆ ಪರಿಹಾರ ಸೂಚಿಸಿ”.

“ನಿಮ್ಮ ಮನಸ್ಸಿನಲ್ಲಿ ನಿರಂತರವಾಗಿ ಮೂಡಿಬರುವ ಭಯಂಕರ ವಿಚಾರಗಳ ಬಗ್ಗೆ ನಮೂದಿಸಿದ್ದೀರಿ. ಸಾವು, ಸ್ಮಶಾನ, ಶವವನ್ನು ತೆಗೆದುಕೊಂಡು ಹೋಗುವ ವಾಹನ ಅಂತ್ಯ ಸಂಸ್ಕಾರ ಇವುಗಳ ಬಗ್ಗೆ ಕಾಲ್ಪನಿಕ ವಿಷಯಗಳು ನಿಮ್ಮ ಇಚ್ಛೆಯ ವಿರುದ್ಧ ಮನಸ್ಸಿನಲ್ಲಿ ಮೂಡಿಬರುವುದರ ಬಗ್ಗೆ ಚಿಂತಾಕ್ರಾಂತರಾಗಿ ಬರೆದಿದ್ದೀರಿ. ಒಂದು ವಿಷಯವಂತೂ ಖಚಿತ. ಮನಸ್ಸಿನಲ್ಲಿ ಸತತವಾಗಿ ಉತ್ಪತ್ತಿಯಾಗುತ್ತಿರುವ ವಿಚಾರಗಳ ಬಗ್ಗೆ ನಮ್ಮ ನಿಯಂತ್ರಣ ಇರುವುದಿಲ್ಲ. ಇದು ನೈಸರ್ಗಿಕ ಹಾಗೂ ಸಾಮಾಜಿಕ. ಆದರೂ ವೈಜ್ಞಾನಿಕವಾಗಿ ಇದೊಂದು ಆತಂಕದ ಸ್ಥಿತಿಯ ಪ್ರಕಟಣೆ. ಸುಪ್ತ ಮನಸ್ಸಿನಲ್ಲಿ ಹತ್ತಿಕ್ಕಲಾಗುವ ಹಲವಾರು ಕಾಣದ ಮಾನಸಿಕ ಜಂಜಾಟ ಸಮಸ್ಯೆಗಳಿಗೂ ಜಾಗೃತ ಮನಸ್ಸಿನಲ್ಲಿ ಸಾಂಕೇತಿಕವಾಗಿ ವಿಭಿನ್ನ ಚಿಹ್ನೆಗಳ ಮೂಲಕ ಪ್ರಕಟವಾಗುವ ರೋಗಲಕ್ಷಣಗಳಿಗೂ ನಿರ್ದಿಷ್ಟ ಹೊಂದಾಣಿಕೆ ಇರುತ್ತದೆ ಎಂದು ಮನಃಶಾಸ್ತ್ರಜ್ಞರು ಅಭಿಪ್ರಾಯಪಡುವುದುಂಟು. ಅದರಂತೆ ನಿಮ್ಮ ಸಮಸ್ಯೆ ಚಿತ್ತ ಚಾಂಚಲ್ಯವಾಗಲಿ, ಗೀಳು ಚಾಂಚಲ್ಯವಾಗಲಿ ಅಥವಾ ಇಚ್ಛಿತ ವಿಕಲತೆಯಲ್ಲಿನ ಭ್ರಮಾಧೀನತೆಯ ಸ್ಥಿತಿಯಲ್ಲಿ ಕಾಣಿಸಿಕೊಳ್ಳುವವು. ಆದ್ದರಿಂದ ನೇರ ಸಂವಾದ ಹಾಗೂ ಇತರೆ ಮನೋರೋಗ ನಿರ್ಧಾರಕ ಪರೀಕ್ಷೆಗಳ ಸಹಾಯವಿಲ್ಲದೆ ಖಚಿತ ಅಭಿಪ್ರಾಯ ನೀಡುವುದು ಕಷ್ಟ.

ಒಟ್ಟಿನಲ್ಲಿ ಬರುವ ಯೋಚನೆ ಒಳ್ಳೆಯದೇ ಕೆಟ್ಟದ್ದೇ ಅನ್ನುವುದು ಅವರವರ ಮನೋಭಾವ ಹಾಗೂ ಪ್ರಸಕ್ತ ಪರಿಸರದ ಮೇಲೆ ಅವಲಂಬಿತವಾಗಿರುತ್ತದೆ. ಉದಾ: ಪರೀಕ್ಷಾ ಸಮಯದಲ್ಲಿ ಗೆಳತಿಯ ವಿಚಾರ ಮನಸ್ಸಿನಲ್ಲಿ ಮೂಡಿ ಬಂದು ಏಕಾಗ್ರತೆಗೆ ಭಂಗ ಉಂಟಾದರೆ ಅದೇ ಭಯಂಕರ ವಿಚಾರವಾದೀತು. ಆದರೆ ವಿರಾಮ ಕಾಲದಲ್ಲಿ ಅದೇ ಯೋಚನೆ ಮನಸ್ಸಿಗೆ ಮುದ ಕೊಡಬಹುದು. ಇಲ್ಲಿ ಪ್ರಶ್ನೆ ವಿಚಾರ ಒಳ್ಳೆಯದು, ಕೆಟ್ಟಿದ್ದು ಎಂದಲ್ಲ. ಬದಲಾಗಿ ಅದಕ್ಕೆ ಎಷ್ಟು ಮಹತ್ವ ಕೊಡುತ್ತೇವೆ ಎಂಬುದು. ಉದಾ: ಪರೀಕ್ಷಾ ಭೀತಿಗೆಂದು ಒಬ್ಬಿಬ್ಬರು ಚಿಕಿತ್ಸೆ ತೆಗೆದುಕೊಂಡರೆ ಮಿಕ್ಕವರಿಗೆ ಭೀತಿ ಇರಲಿಲ್ಲವೆಂದಲ್ಲ. ಬದಲಾಗಿ ಚಿಕಿತ್ಸೆಗೆ ಒಳಪಟ್ಟವರು ಈ ಭೀತಿಗೆ ತುಂಬಾ ಮಹತ್ವ ಕೊಟ್ಟು ತೊಂದರೆಗೊಳಗಾಗುವರು. ಸ್ಮಶಾನ, ಅಂತ್ಯಕ್ರಿಯೆಯ ಬಗ್ಗೆ ಯೋಚನೆ ಬರುತ್ತದೆ ಎಂದು ನೀವು ಹೇಳಿದ್ದೀರಿ. ಆದರೆ ನಿಜಸ್ಥಿತಿ ಅಂತಹ ಯೋಚನೆ ಬರಲು ನೀವು ಅವಕಾಶ ಕಲ್ಪಿಸಿಕೊಳ್ಳುತ್ತೀರಿ ಎಂಬುದು. ಹೆಚ್ಚು ಹೆಚ್ಚಿನ ಜವಾಬ್ದಾರಿಯ ಕೆಲಸಗಳಲ್ಲಿ ಮನಸ್ಸನ್ನು ತೊಡಗಿಸಿಕೊಂಡರೆ, ಈ ಸ್ಮಶಾನ ಚಿಂತನೆಯನ್ನು ನಿರ್ಲಕ್ಷಿಸಿದರೆ ಈ ಮನೋದೌರ್ಬಲ್ಯತೆಯಿಂದ ಹೊರಬರುತ್ತೀರಿ. ಗುಂಪಿನಲ್ಲಿ ಆಟ, ನಿಯಮಿತ ಕೆಲಸ, ವ್ಯಾಯಾಮ ಹವ್ಯಾಸ, ಸ್ನೇಹಿತರೊಡನೆ ವಾಕಿಂಗ್, ಜಾಗಿಂಗ್ ಸಂಗೀತಾಭ್ಯಾಸ, ನಿಮ್ಮ ಆತ್ಮವಿಶ್ವಾಸ ಮರುಕಳಿಸುವಂತೆ ಮಾಡೀತು. ಬೆಂಗಳೂರಿನಲ್ಲಿ ಒಳ್ಳೆಯ ಮನೋವಿಜ್ಞಾನಿಗಳಿದ್ದಾರೆ. ಮೇಲ್ಕಂಡ ಸಲಹೆಯಿಂದ ಪರಿಹಾರ ಸಿಕ್ಕದಿದ್ದರೆ ಅವರನ್ನು

* * *