ಯೋಗ ಅಂದರೆ ಮನುಷ್ಯನ ದೇಹ ಮನಸ್ಸು ಮತ್ತು ಆಧ್ಯಾತ್ಮಿಕಗಳ ಆರೋಗ್ಯ. ಆದರೆ ಆಧುನಿಕತೆಯ ಇಂದಿನ ಕಾಲದಲ್ಲಿ ರೋಗದಿಂದ ನರಳುವುದು, ಬಾಧೆ ಪಡುವುದು ಹೆಚ್ಚಾಗಿದೆ. ಎಲ್ಲಾ ವಿಧದ ಒತ್ತಡಗಳಿಂದ ನರಳುವುದು. ದೌರ್ಬಲ್ಯವಾಗಿದೆ. ಮನುಷ್ಯನಿಗೆ ಯೋಚಿಸುವ, ತಿಳಿದುಕೊಳ್ಳುವ ಶಕ್ತಿ ಇದೆ. ಆದರೆ ಅದರ ಬಗ್ಗೆ ಚಿಂತಿಸುವ ಶಕ್ತಿ ಕಳೆದುಕೊಂಡಿದ್ದಾನೆ. ಆತನ ದೃಷ್ಟಿಯೆಲ್ಲಾ ಪ್ರಾಪಂಚಿಕತೆ ಕಡೆ ಹರಿಯುತ್ತಿದೆ. ದೂರದೃಷ್ಟಿ ಎಷ್ಟೇ ಇದ್ದರೂ ಒಳದೃಷ್ಟಿ ಇಲ್ಲ. ಶರೀರ ಮತ್ತು ಮಾನಸಿಕ ಆರೋಗ್ಯದ ಕಡೆ ನಿರ್ಲಕ್ಷ್ಯ. ೧೫೦ ವರ್ಷದಿಂದ ಈಚೆಗೆ ಈ ಕಡೆ ದೃಷ್ಟಿ ಬೀಳುತ್ತಿದೆ. ಈಗ ಒಳ್ಳೆಯ ಆರೋಗ್ಯ ಪಡೆಯಲು ವಿಜ್ಞಾನದ ಕಡೆ ದೃಷ್ಟಿ ಹೆಚ್ಚುತ್ತಿದೆ. ಯೋಗ ಹೊಸದೇನೂ ಅಲ್ಲ. ನಿತ್ಯ ಜೀವನದಲ್ಲಿ ಹಾಸು ಹೊಕ್ಕಾಗಿದ್ದ ಯೋಗ ಇಂದು ಮರೆಯಲ್ಲಿದೆ. ನಿತ್ಯ ಜೀವನಕ್ಕೆ ಅವಶ್ಯಕತೆ ಇಲ್ಲ, ಬೇಕಿಲ್ಲ ಅನ್ನುವ ಹಾಗೆ ಆಗಿದೆ.

ಭಾರತದಿಂದ ಯೋಗ ಜಗತ್ತಿನ ಮಾನವನ್ನು ನರಳುವಿಕೆಯಿಂದ ದೂರ ಮಾಡಲು ಹೊರಟಿದೆ. ಇದು ಇತ್ತೀಚೆಗೆ ಹೆಚ್ಚಿದೆ. ಯೋಗ ವಿಶ್ವವ್ಯಾಪಿ ಇದು ಸ್ವಂತ ಆಸ್ತಿ ಅಲ್ಲ. ಇದು ಬಾರತದ ಜಗತ್ತಿಗೆ ಕೊಟ್ಟ ಕೊಡುಗೆ. ಎಲ್ಲಾ ದೇಶಗಳು ಕತ್ತಲಲ್ಲಿ ಇದ್ದಾಗ ಭಾರತದಲ್ಲಿ ಯೋಗ ಪ್ರಜ್ಞಲಿಸುತ್ತಿತ್ತು. ಭಾರತದಲ್ಲಿ ಸನ್ಯಾಸಿಗಳು ಧಾರ್ಮಿಕ ವಿಜ್ಞಾನ/ಅದ್ಭುತದ ಮೂಲಕ ಮನುಷ್ಯನನ್ನು ಆರೋಗ್ಯವಾಗಿ ಇಡುವುದರಲ್ಲಿ ತಮ್ಮ ಶಕ್ತಿ ಮೀಸಲಾಗಿ ಇಡುತ್ತಿದ್ದರು. ಭಾರತದಲ್ಲಿ ಮಾತ್ರ ಯೋಗ ಉಳಿಯಿತು. ಬೇರೆ ದೇಶಗಳಲ್ಲಿ ಇಲ್ಲ. ಈಗಲೂ ಕೆಲವು ಆಸಕ್ತಿಯುಳ್ಳ ಜನರಿಂದ ಯೋಗ ಉಳಿದುಕೊಂಡು ಬಂದಿದೆ. ಈಗ ಜಗತ್ತಿನ ಎಲ್ಲಾ ಕಡೆ ಹರಡುತ್ತಿದೆ.

ಎಲ್ಲರಿಗೂ ಯೋಗ ಅವಶ್ಯಕ. ಆರೋಗ್ಯಕ್ಕೆ ಜಾತಿ, ಮತ, ದೇಶದ ಭೇದವಿಲ್ಲ. ಮನುಷ್ಯನ ಆರೋಗ್ಯಕ್ಕಾಗಿ ಯೋಗ ಅವಶ್ಯಕ.

ಯೋಗದಲ್ಲಿ ಹಠ ಯೋಗ, ರಾಜಯೋಗ, ಭಕ್ತಿಯೋಗ, ಕರ್ಮಯೋಗ, ಲಯಯೋಗ, ಕ್ರಿಯಾ ಯೋಗ ಎಂಬ ವಿಧಾನಗಳಿವೆ. ಎಲ್ಲವೂ ಮನುಷ್ಯನ ಶರೀರ, ಮನಸ್ಸು ಮತ್ತು ಆಧ್ಯಾತ್ಮಿಕ ಚಿಂತನೆಯ ಬಗ್ಗೆಯೇ.

ಹಟಯೋಗ: ಯೋಗದಲ್ಲಿ ಸಮತೋಲನ ಇದೆ. ಹಠ ಎಂದರೆ ಸೂರ್ಯ ಮತ್ತು ಚಂದ್ರಶಕ್ತಿ. ಮನುಷ್ಯನ ಶರೀರದಲ್ಲಿದೆ.

ಹಠಯೋಗದಿಂದ ಸಮತೋಲನ ದೊರಕುವುದು. ಚಕ್ರವು ಶುದ್ಧಿಯಾಗಿ ಶಾಂತಿ ಸಿಗುತ್ತದೆ. ಅನಾರೋಗ್ಯ ಮನಸ್ಸು ಅಥವಾ ಮಾನಸಿಕ ದೈಹಿಕ ಅಸಮಾನತೆ ಹೋಗುತ್ತದೆ.

ಪ್ರಾಣ: ನಾವು ಬದುಕಿರುವುದು.

ಚಿತ್ತ: ದೇವರ ಎಲ್ಲಾ ಕ್ರಿಯೆಗಳನ್ನು ನಿಯಂತ್ರಿಸುತ್ತದೆ. ಓಡಾಡಲು ಯೋಚಿಸಲು ಒಟ್ಟಿನಲ್ಲಿ ಆರೋಗ್ಯವಾಗಿ ಬದುಕಲು ಸಮತೋಲನ ಅವಶ್ಯಕ. ಸಮತೋಲನ ತಪ್ಪಿದರೆ ಅನಾರೋಗ್ಯ. ಅಶಾಂತಿ, ಸಮತೋಲನ ಇದ್ದರೆ ಶಾಂತಿ, ಆರೋಗ್ಯ.

ದೈಹಿಕ ಅಂದರೆ ಪ್ರಾಣಶಕ್ತಿ. ಮನಸ್ಸಿಗೆ ಸಂಬಂಧವಾದದ್ದು ಮಾನಸಿಕ. ದೈಹಿಕ ಅನಾರೋಗ್ಯದಿಂದ ಮಾನಸಿಕ ರೋಗ ಉಂಟಾಗುವುದು. ಕೆಲವು ಸಾರಿ ಮಾನಸಿಕ ರೋಗ ದೈಹಿಕ ರೋಗಕ್ಕೆ ಕಾರಣವಾಗುವುದು.

ಆಸನ ಪ್ರಾಣಾಯಾಮ: ಯೋಗದ ಪ್ರಕಾರ ಪ್ರತಿ ಕಾಯಿಲೆಗೂ ಎರಡು ಕಾರಣಗಳು. ಆದುದರಿಂದ ಯೋಗ ವ್ಯಾಯಾಮ ಅಲ್ಲ. ಭಾವ, ಭಂಗಿ, ದೇಹದಲ್ಲಿ ವಿದ್ಯುತ್ ಶಕ್ತಿ ಚಲನೆಯನ್ನು ಸರಾಗಗೊಳಿಸುತ್ತದೆ. ದೈಹಿಕ ಶುದ್ಧೀಕರಣ ಸರಾಗವಾಗಿ ಆಸನಗಳನ್ನು ಮಾಡಲು ಅವಶ್ಯಕ.

ಪ್ರಾಣಾಯಾಮ ಅಂದರೆ ಉಸಿರಾಟದ ವಿಜ್ಞಾನ. ಪ್ರಾಣಾಯಾಮ ಉಸಿರಾಟದ ವ್ಯಾಯಾಮ ಎಂಬ ತಪ್ಪು ಭಾವನೆ ಇದೆ. ಪ್ರಾಣಾಯಾಮ ಬಳಸದ ಪ್ರಾಣವನ್ನು ಎಚ್ಚರಗೊಳಿಸುತ್ತದೆ. ನಿದ್ರಿಸುತ್ತಿರುವ ದೇಹದ ಮುಖ್ಯ ಶಕ್ತಿಯನ್ನು ಎಚ್ಚರಗೊಳಿಸಿ ದೇಹದ ಜೀವಕೋಶಗಳನ್ನು ರಿಪೇರಿ ಮಾಡುತ್ತದೆ. ನಿತ್ಯಕರ್ಮಗಳನ್ನು ಪೂರೈಸಿ ಆಸನಗಳನ್ನು ಮಾಡಿ ನಂತರ ಪ್ರಾಣಾಯಾಮ ಮಾಡಬೇಕು. ಪ್ರಾಣಾಯಾಮ ಅಭ್ಯಾಸದಿಂದ ದೇಹ ಶಕ್ತಿಯನ್ನು ಪುನಃರಾವೇಶಿಸುತ್ತದೆ. ವಿದ್ಯುತ್ ಚಾಲಕ ಶಕ್ತಿ, ದೇಹದ ಎಲ್ಲಾ ಭಾಗಕ್ಕೂ (ಮೆದುಳು ಸೇರಿ) ದೇಹದ ಶಕ್ತಿಯನ್ನು ಪುನಃರಾವೇಶಿಸುತ್ತದೆ.

ಮಂತ್ರ, ತಂತ್ರ, ಮತ್ತು ಮಂಡಲ

ಮಂತ್ರ, ತಂತ್ರ, ಮಂಡಲ, ವಿಜ್ಞಾನ ಒಟ್ಟು ಆರೋಗ್ಯಕ್ಕೆ ಮುಖ್ಯ. ಮಂತ್ರ ವಿಜ್ಞಾನ ಶಬ್ದ ವಿಜ್ಞಾನ, ಶಬ್ದತರಂಗಗಳು, ದೇಹ ಮತ್ತು ಮನಸ್ಸಿನ ಮೇಲೆ ಪೂರ್ಣ ಪರಿಣಾಮ ಬೀರುತ್ತವೆ. ಮೈಕ್ರೋವೇವ್‌ನಿಂದ ನಿಮಿಷಗಳಲ್ಲಿ ಆಹಾರ ಬಿಸಿ ಮಾಡುವುದನ್ನು ಈಗ ವಿಜ್ಞಾನ ಉಪಯೋಗಿಸಿಕೊಳ್ಳುತ್ತಿದೆ.

ಜನರು, ಮದ್ದು, ಇಂಜೆಕ್ಷನ್ ಮತ್ತು ಮಾತ್ರೆಗಳಿಂದ ಮಾತ್ರ ಖಾಯಿಲೆಗಳು ವಾಸಿಯಾಗುತ್ತವೆ ಎಂದು ಮಾತ್ರ ತಿಳಿದಿದ್ದಾರೆ. ಆದರೆ ಮಂತ್ ರೂಪದಲ್ಲಿ, ಶಬ್ದ ತರಂಗಗಳ ಮೂಲಕ ಹೆಚ್ಚು ಶಕ್ತಿಯನ್ನು ಪಡೆಯಬಹುದು.

ಮಂತ್ರ ಯೋಗದಲ್ಲಿ ಒಬ್ಬ ಮನುಷ್ಯನಿಗೆ ತಕ್ಕಂತೆ ಶಬ್ದ ಅಥವಾ ಪದಗಳನ್ನು ಪುನಃ ಉಚ್ಚರಿಸುವ ಮೂಲಕ ಶಕ್ತಿ ಪಡೆಯಬಹುದು.

ಮಂತ್ರ ಶಬ್ದವಾಗಿ ಬದಲಾವಣೆಯಾಗಿ, ಶುದ್ಧ ಶಕ್ತಿಯಾಗಿ ಸತ್ತ ಜೀವಕೋಶಗಳಿಗೆ ಪುರ್ನರುತ್ಪಾದನೆ, ಪುನರುಜ್ಜೀವನ ಕೊಡುತ್ತದೆ.

ಯೋಗ ನಿದ್ರಾ:

ನಿತ್ಯ ಜೀವನದಲ್ಲಿ ಮನಸ್ಸು, ದೇಹ ಒತ್ತಡಗಳನ್ನು ಶೇಖರಿಸುತ್ತವೆ. ಇವು ಆರೋಗ್ಯದ ಮೇಲೆ ಕೆಟ್ಟ ಪರಿಣಾಮ ಬೀರುತ್ತವೆ. ಯೋಗ ನಿದ್ರೆ ಅಥವಾ ಪರಿಪೂರ್ಣ ವಿಶ್ರಾಂತಿಯಿಂದ ಇವುಗಳನ್ನು ವಿವೇಚಿಸಿಕೊಳ್ಳಬಹುದು. ಒಳ ಅರಿವು ಪ್ರತ್ಯೇಕಗೊಂಡಾಗ, ಮೆದುಳು ಪೂರ್ಣ ಬದಲಾವಣೆ ಆಗುತ್ತದೆ. ಹೊಸ ಮೆದುಳು ಮನಸ್ಸು ಹುಟ್ಟಿಕೊಳ್ಳುತ್ತದೆ. ಇದರಿಂದ ದೇಹ ಮತ್ತು ಮನಸ್ಸು ಪೂರ್ಣ ವಿಶ್ರಾಂತಿ ಪಡೆಯುತ್ತದೆ.

ಕ್ರಿಯಾಯೋಗ

ಕೆಲವರು ಸಮಾಧಾನ ಚಿತ್ತರಾಗಿರುತ್ತಾರೆ. ಆದರೆ ಅನೇಕರಿಗೆ ಮನಸ್ಸಿನಲ್ಲಿ ದ್ವಂದ್ವ ಯುದ್ಧ ನಡೆಯುತ್ತಲೇ ಇರುತ್ತದೆ. ಅವರಿಗೆ ಅದರ ಅರಿವು ಇರುವುದಿಲ್ಲ. ಸಮಾಧಾನ ಚಿತ್ತ ಇರುವವರಿಗೆ ಧ್ಯಾನ ಯೋಗ ಸಾಕು. ಒಂದು ವಸ್ತುವಿನ ಮೇಲೆ ಏಕಾಗ್ರತೆಯಿಂದ ಪುನಃ ಪುನಃ ಏಕಾಗ್ರತೆ ಸಾಧ್ಯ. ದ್ವಂದ್ವ ರೀತಿಯಲ್ಲಿ ಮನಸ್ಸು ಇರುವವವರಿಗೆ ಒಂದು ವಸ್ತುವಿನ ಮೇಲೆ ಏಕಾಗ್ರತೆ ಮಾಡಲು ಸಾಧ್ಯವಿಲ್ಲ. ಮಾಡಲು ಹೋದರೆ ದೇಹ ಮತ್ತು ಮನಸ್ಸಿಗೆ ಸಮಸ್ಯೆಗಳು ಉತ್ಪತ್ತಿಯಾಗುತ್ತದೆ. ಆದರೆ ಕ್ರಿಯಾಯೋಗದಿಂದ ಸಾಧ್ಯ.

ಸಂತೋಷ ಮತ್ತು ಆರೋಗ್ಯ

ರಕ್ತದೊತ್ತಡ, ದೈಹಿಕ ಕಾಯಿಲೆ ಇಲ್ಲದಿದ್ದರೂ ಆರೋಗ್ಯವಂತ ಎಂದು ಹೇಳಲು ಸಾಧ್ಯವಿಲ್ಲ. ನಿದ್ದೆ ಬಾರದಿರಬಹುದು, ಮನೆಯಲ್ಲಿ ಜಗಳವಾಡುತ್ತಿರಬಹುದು. ಇಂತಹದರಲ್ಲಿ ದೈಹಿಕ ಆರೋಗ್ಯ ಹೇಗೆ ಸಾಧ್ಯ? ಯೋಗದ ನೀತಿಯಲ್ಲಿ ಇದು ಅವಶ್ಯಕ.

ಹಠಯೋಗ ಆಸನ, ಪ್ರಾಣಾಯಾಮಗಳಿಂದ ಒಳ್ಳೆಯ ಜೀವನ ನಡೆಸಬಹುದು. ಸರಿಯಾದ ಆಹಾರಗಳಿದ್ದರೂ ಸಂತೋಷವಿಲ್ಲದಿರುವುದು, ಸಂತೋಷವಿಲ್ಲದ ಮನಸ್ಸು ಆರೋಗ್ಯವಂತವೇ? ಸಂತೋಷವಾಗಿ ಇಲ್ಲದಿರುವುದು ರೋಗವಲ್ಲವೇ? ಇದನ್ನು ಗಳಿಸುವುದೇ ಹೇಗೆ? ಹೃದಯದಲ್ಲಿ ಸಂತೋಷ ಪಡುವುದು ಹೇಗೆ? ಮನಸ್ಸಿನ ಆನಂದ, ಶಾಂತಿಯಿಂದ ಇಟ್ಟುಕೊಳ್ಳುವುದು ಮತ್ತೊಂದು ಧ್ಯೇಯ. ಊಟಕ್ಕೆ ಇರಬಹುದು, ಒಳ್ಳೆಯ ಮನೆ, ಕೈತುಂಬಾ ದುಡ್ಡು ಖರ್ಚುಮಾಡಲು ಇದೆ. ಆದರೆ ಮನಸ್ಸು ಕತ್ತಲೆ, ಅಜ್ಞಾನ ಇದ್ದರೆ ಆತನು ಅವಿದ್ಯಾವಂತ.

ಈ ಅವಿದ್ಯೆಯೇ ಮನುಷ್ಯನ ಎಲ್ಲಾ ರೋಗಗಳಿಗೆ ಕಾರಣ. ಈ ಅವಿದ್ಯೆಯೇ ಮನುಷ್ಯನ ಎಲ್ಲಾ ರೋಗಗಳಿಗೆ ಕಾರಣ. ಈ ಅವಿದ್ಯೆಯನ್ನು ಹೋಗಲಾಡಿಸುವುದು ಯೋಗ ಮಾರ್ಗದಲ್ಲಿ ಮಾತ್ರ ಸಾಧ್ಯ.

ಹಠಯೋಗ, ರಾಜಯೋಗ, ಕ್ರಿಯಾ ಯೋಗ, ಯೋಗನಿದ್ರೆಗಳ ಎಲ್ಲಾ ಬದಲಾವಣೆಗಳು ಸಾಧ್ಯ. ಯೋಗ ಮಾನವನಿಗೆ ಏನು ಕೊಟ್ಟಿದೆ? ಪ್ರಪಂಚದ ಎಲ್ಲಾ ಭಾಗಗಳಲ್ಲಿ ಯೋಗ ಅಭ್ಯಾಸದಿಂದ ಅನೇಕ ವಾಸಿಯಾಗದಂತಹ ಕಾಯಿಲೆಗಳು ವಾಸಿಯಾಗಿವೆ. ಸಮಾಜವನ್ನು ಆನಂದದಿಂದ ಇಡಲು ಪ್ರಯತ್ನಿಸುತ್ತಿದೆ. ಕಾಯಿಲೆಯಿಂದ ನರಳುತ್ತಿರುವವರು ಆರೋಗ್ಯ ವಂತರಾಗಿದ್ದಾರೆ. ಯೋಗಧರ್ಮವೇ? ಯಕ್ಷಿಣಿಯೇ? ಅಲ್ಲ ‘ವಿಜ್ಞಾನ’ -ದೇಹ ಮತ್ತು ಮನಸ್ಸನ್ನು ಬದಲಾಯಿಸುವ ವಿಜ್ಞಾನ. ಈ ವಿಜ್ಞಾನ ಮನುಷ್ಯನಿಗೆ ಹಿಂದೆ ಸಂತೋಷ ಕೊಟ್ಟಿದೆ, ಮುಂದೆಯೂ ಕೊಡುತ್ತದೆ.

* * *