ಮಾನವ ದೇಹದ ಅತ್ಯಂತ ಸೋಜಿಗಮಯ ಕ್ರಿಯಾವ್ಯಾಪಾರ ನಡೆಯುವುದು ನರಮಂಡಲದಲ್ಲಿ. ದೊಡ್ಡ ಮಿದುಳು, ಚಿಕ್ಕ ಮಿದುಳು, ಮಧ್ಯ ಮಿದುಳು ಹಾಗೂ ಮಿದುಳು ಬಳ್ಳಿ ಎಲ್ಲವೂ ಚಿಕ್ಕ ಚಿಕ್ಕ ನರತಂತುವಿನಿಂದ ಕೂಡಿರುವವು ಒಟ್ಟಾರೆ ನರಮಂಡಲವು ನರತಂತು ಇಲ್ಲವೆ ನರಕೋಶಗಳ ಗೂಡು ಎಂದೆನ್ನಬಹುದು. ನರಮಂಡಲದ ಮೂಲ ಘಟಕವೇ ನ್ಯೂರಾನ್ ನರಕೋಶ. ಇದು ರಚನಾತ್ಮಕ ಹಾಗೂ ಕ್ರಿಯಾತ್ಮಕ ಘಟಕವೇ ಸರಿ. ನರಕೋಶಕ್ಕೆ ಒಂದು ಶರೀರ (Body) ಕೇಂದ್ರಬಿಂದು (Nuclous). ಶರೀರಕ್ಕೆ ಅಂಟಿಕೊಂಡ ಕವಲುಗಳು Dendrans ಮತ್ತು ಜಾಲ (axan) ಇರುತ್ತವೆ. ನರಕೋಶಗಳ ಮುಖ್ಯ ಕೆಲಸ ಒಂದು ಸಂದೇಶವನ್ನು ಮತ್ತೊಂದೆಡೆಗೆ ಸಾಗಿಸುವುದು. ಕೆಲವು ನರಕೋಶಗಳು ಒಂದು ಮಿಲಿಮಿಟರಿಗಿಂತ ಚಿಕ್ಕದಾಗಿದ್ದರೆ ಇನ್ನೂ ಕೆಲವು ಒಂದು ಮಿಟರ್‌ದಷ್ಟು ಉದ್ದವಿರುತ್ತದೆ. ಇವೊಂದು ಮಿನಿ ‘ಕಂಪ್ಯೂಟರ್’ ತರಹ ಕೌಶಲ್ಯಯುತವಾಗಿ ಕೆಲಸ ನಿರ್ವಹಿಸುತ್ತವೆ.

ಒಂದು ನರಕೋಶ ಮತ್ತೊಂದು ನರಕೋಶದ ‘ಶರೀರ’ ಇಲ್ಲವೆ ಕವಲುಗಳು-ಅಥವಾ ‘ಬಾಲ’ಕ್ಕೆ ಸಂಧಿಸಿ ಒಂದಕ್ಕೊಂದು ಉದ್ದ ಸರಪಳಿ ಮಾಡಿ. ಕ್ರಿಯೆಯಲ್ಲಿ ಭಾಗಿಯಾಗುತ್ತವೆ. ಅದು ಯಾವುದೇ ಸಂವೇದನೆ ಇರಲಿ ಅವನ್ನು ವಿದ್ಯುತ್ ಸಂಕೇತಗಳನ್ನಾಗಿ ಮಾರ್ಪಡಿಸಿ (ಉದಾ: ಸ್ಪರ್ಶ, ನೋವು, ದೃಶ್ಯ, ಧ್ವನಿ, ರುಚಿ ವಾಸನೆ) ಮಿದುಳಿಗೆ ಕಳಿಸಲ್ಪಡುತ್ತವೆ. ಮಿದುಳು ಅದನ್ನು ಸರಿಯಾಗಿ ಅರ್ಥೈಸುತ್ತದೆ ಮತ್ತು ಅಲ್ಲಿಂದ ಮರಳಿ ಸೂಕ್ತ ಕ್ರಿಯೆಗೆ ಆಜ್ಞೆಯಾಗುತ್ತವೆ.

ಒಂದು ನರಕೋಶದ ತುದಿ ಕೊನೆಗೊಂಡಾಗ ಅದು ನೆರವಾಗಿ ಮತ್ತೊಂದು ನರಕೋಕ್ಕೆ ಅಂಟಿಕೊಳ್ಳದೆ ಮುಂದೆ ಸ್ವಲ್ಪ ಅಂತರದಲ್ಲಿ (ಜಾಗದಲ್ಲಿ) ಮತ್ತೊಂದು ನರಕೋಶ ಆರಂಭಗೊಂಡಿರುತ್ತದೆ. ಆದ್ದರಿಂದ ಈ ಜಂಕ್ಷನ್‌ಗೆ Synapse  ಅಥವಾ ‘ನರಸಂಧಿ’ ಎಂದು ಕರೆಯಲಾಗುತ್ತದೆ. ಮೊದಲಿನದ್ದು ಪೂರ್ವ ನರಕೋಶ ಇನ್ನೊಂದು ಉತ್ತರ ನರಕೋಶ. ಆದ್ದರಿಂದ ಅದು ರಚನಾತ್ಮಕ ಸಂಧಿಯಾಗಿರದೆ ಕ್ರಿಯಾತ್ಮಕ ಸಂಧಿಯಾಗಿರುತ್ತದೆ. ಈ ಸಂಧಿಯಲ್ಲಿಯೇ ನರರಾಸಾಯನಿಕಗಳು ತುಂಬ ಮಹತ್ವದ ಪಾತ್ರವಹಿಸುತ್ತವೆ. ಇದಕ್ಕೆ ನರವಾಹಕ (ನರ ರಾಸಾಯನಿಕ)ವೇ ಕಾರಣ. ನರಕೋಶಕ್ಕೆ ಬಂದ ವಿದ್ಯುತ್ ಸಂಕೇತದಿಂದ ನರರಾಸಾಯನಿಕವು ಬಿಡುಗಡೆಗೊಳ್ಳುತ್ತದೆ. ಅದು ನರತುದಿಯಲ್ಲಿ ಇದ್ದು ಚಿಕ್ಕ ಚಿಕ್ಕ ಪಾಕೀಟುಗಳಲ್ಲಿ ಸಂಗ್ರಹಗೊಂಡಿರುತ್ತದೆ. ನರ ರಾಸಾಯನಿಕ ಬಿಡುಗಡೆಗೊಂಡು – ಮುಂದಿನ ನರತಂತುವಿನಡೆಗೆ ಸಾಗುವ ವಿದ್ಯುತ್ ಸಂಕೇತವನ್ನು ಉದ್ವೇಗಗೊಳಿಸುತ್ತದೆ (Excitation) ಅಥವಾ ಅನುದ್ವೇಗಗೊಳಿಸುತ್ತದೆ. ಈ ಕಾರ್ಯವು ನರರಾಸಾಯನಿಕ ಗುಣಧರ್ಮದ ಮೇಲೆ ಅವಲಂಬಿಸಿರುತ್ತದೆ ಹಾಗೂ ಮುಂದಿನ ನರತಂತುವಿನ ವಿದ್ಯುತ್ ಕಣಗಳ ಕಾಲುವೆ ತೆರೆಯುವ / ಮುಚ್ಚುವ ಕ್ರಿಯೆಯ ಮೇಲೆಯೂ ಅವಲಂಬಿಸುತ್ತದೆ.

ಮಿದುಳಿನಲ್ಲಿ ಅಂದಾಜಿನ ಪ್ರಕಾರ ೧೦೦೦೦ ಕೋಟಿ ನರಕೋಶಗಳಿವೆ. ಜನ್ಮ ಪಡೆದಾಗ ಇದ್ದ ನರಕೋಶಗಳ ಸಂಖ್ಯೆ ಸಾಯುವಾಗಲೂ ಅಷ್ಟೇ ಇರುತ್ತವೆ. ಎಂದು ಹೇಳಲಾಗುತ್ತದೆ. ಕಾರಣಾಂತರಗಳಿಂದ ಸತ್ತ ನರತಂತು ಮತ್ತೆ ಹುಟ್ಟಲಾರದು ಎಂಬ ಪರಿಕಲ್ಪನೆಯಿತ್ತು. ಈಗ ಅದು ಸುಳ್ಳಾಗಿದೆ. ಸತ್ತ ನರತಂತುವಿನ ಜಾಗದಲ್ಲಿ ಮತ್ತೊಂದು ಹೊಸ ನರತಂತು ಸ್ಥಾನ ಆಕ್ರಮಿಸುತ್ತದೆ ಎಂದು ಹೇಳಲಾಗುತ್ತಿದೆ. ಮಿದುಳಿನಲ್ಲಿ ಚಲನವಲನ ಕ್ರಿಯೆಗೆ ಆದೇಶ ನೀಡುವುದು, ಒಂದು ಸಂವೇದನೆಯ ಸಂಕೇತಗಳಿಗೆ ಯಥಾರ್ಥ ಅರ್ಥೈಸಿ ದಾಖಲಿಸುವುದು, ಮಿದುಳು ಹೊಸ ಕಲಿಕೆಯನ್ನು ಆರಂಭಿಸುವುದು ಹೇಗೆ ಈ ಎಲ್ಲದರ ಹಿಂದೆ ಇರುವ ಮಹತ್ವದ ಪಾತ್ರ ನರರಾಸಾಯನಿಕಗಳದ್ದು. ಇವು ಸುಮಾರು ೧೨೦ ಪ್ರಕಾರದ್ದು ಎಂದು ಗುರುತಿಸಲಾಗಿವೆ. ಅವುಗಳನ್ನು ನಾಲ್ಕು ವಿಧವಾಗಿ ವಿಂಗಡಿಸಬಹುದು.

೧. ಬಾಯೋಜೆನಿಕ್ ಅಮೈನ್ಸ (Biogenic Amines) ಕೆಟಕೋಲಮೈನ್ಸ್ Catocholamines
Epinephrine
Nor epinephrine
Dopamine
– ಹಿಸ್ಟಾಯಿನ್
– ಸಿರೋಟೋನಿನ್
೨. ಪೈಪ್ಟೈಡ್ಸ್ Peptides ಓಪಿಯಾಡ್ಸ್
Subranecp
Somatostatin
೩. ಅಮೈನೋ ಆಸಿಡ್ಸ್‌ Aminoacids ಗಾಬಾ
ಗ್ಲೈಸಿನ್
ಗುಟಾಮಿಕ್ ಆಸಿಡ್‌
೪. ಇನ್ನಿತರ other ಅಡೆನೊಸಿನ್
ಎ.ಟಿ.ಪಿ (A.T.P)
ನೈಟ್ರಿಕ್ ಅಕ್ಸಾಯಿಡ್
ಕಾರ್ಬನ್ (CNo) ಮೊನೊ
ಆಕ್ಸಾಯಿಡ್ ಪ್ರೋಸ್ಟಾಗ್ಲಾಂಡಿನ್
ಅಸಿಟೈಲ್ ಕೋಲಿನ್

ನರರಾಸಾಯನಿಕಗಳು ನರತಂತು (ನರಕೋಶ) ತುದಿಯಲ್ಲಿ ಸಿದ್ಧಗೊಂಡು ಚಿಕ್ಕವೆಸೈಕಲ್ ಪಾಕಿಟುಗಳಲ್ಲಿ ಸಂಗ್ರಹಗೊಳ್ಳುತ್ತದೆ. ಎರಡು ಅಥವಾ ಮೂರು ರಾಸಾಯನಿಕ ವಸ್ತುಗಳಿಂದ ಸಂಯೋಜನೆಗೊಂಡು ಕಾರ್ಯಕ್ಕೆ ಅಣಿಯಾಗುತ್ತವೆ. ನರಕೋಶದ ಮೇಲೆ ವಿದ್ಯುತ್ ಸಂಕೇತ ಬಂದಾಗ ಈ ಪಾಕೀಟ್‌ಗಳು ಒಡೆದು ನರರಾಸಾಯನಿಕ ಬಿಡುಗಡೆಗೊಂಡು ಮುಂದಿನ ನರದ ಆರಂಭಿಕ ಭಾಗದಲ್ಲಿ ಸಾಗಿ ತನ್ನ ಕ್ರಿಯೆ ಆರಂಭಿಸುತ್ತದೆ. ನರರಾಸಾಯನಿಕಗಳು ಸಿದ್ಧವಾಗಲು ‘ಕಿಣ್ವ’ಗಳು ಹೇಗೆ ಬೇಕೋ ಹಾಗೇ ಅವು ವಿಭಜನೆಗೊಂಡು ಕ್ಷೀಣಿಸಲು ಸೂಕ್ತ ಕಿಣ್ವಗಳ ಅಗತ್ಯವಿದೆ. ಅದರಂತೆ ಸಹಾಯಕ ನರರಾಸಾಯನಿಕಗಳೂ ಕೂಡ ನೆರವಾಗುವುವು.

ನರರಾಸಾಯನಿಕ ತನ್ನ ಕೆಲಸ ಮುಗಿದ ಮೇಲೆ ಪುನಃ ಸಂಯೋಜನೆಗೊಂಡು (ಪೂರ್ವ, ನರತಂತುವಿನ ತುದಿಯಲ್ಲಿರುವ ಪಾಕೀಟುಗಳಲ್ಲಿ ಸಂಗ್ರಹಗೊಳ್ಳುತ್ತವೆ. ಇದೊಂದು ಅತ್ಯಂತ ವಿಸ್ಮಯಕಾರಕ ಕೆಲಸ. ಪೈರೋಗ್ರಾಂ ಕಂತುಗಳು ಕಡಿಮೆ ಹಾಗೂ ಸೂಕ್ಷ್ಮವಾಗಿರುವ ನರರಾಸಾಯನಿಕ ದೇಹದ ಚಟುವಟಿಕೆಗಳ ಮೇಲೆ ಅಗಾಧ ಪರಿಣಾಮ ಬೀರುತ್ತದೆ. ಒಂದು ನರ ರಾಸಾಯನಿಕ ಒಂದು ತಾಣದಲ್ಲಿ ‘ಉದ್ವೇಗ’ ಉಂಟು ಮಾಡಿದರೆ ಇನ್ನೊಂದು ತಾಣದಲ್ಲಿ ‘ಅನುದ್ವೇಗ’ ಗೊಳಿಸುತ್ತದೆ. ಇಲ್ಲದೆ ಉದ್ವೇಗಕ್ಕೆ ಕಡಿವಾಣ ಹಾಕುತ್ತದೆ. ಹೀಗೆ ಯಾವುದೇ ಕ್ರಿಯೆಯನ್ನು ದೇಹದ ಸಾಮರ್ಥ್ಯಕ್ಕೆ ಅನುಗುಣವಾಗಿ ಸಮತೋಲನ ಕಾಯ್ದುಕೊಳ್ಳುವ ಹೊಣೆ ಈ ನರರಾಸಾಯನಿಕಗಳಾಗಿರುತ್ತದೆ.

ನರವಾಹಕಗಳು ಭಾವನೆಗಳನ್ನು ಉಂಟುಮಾಡಿ ಅದನ್ನು ಹದ್ದು ಬಸ್ತಿನಲ್ಲಿಡುತ್ತವೆ. ಉದಾಹರಣೆಗೆ ‘ಅಸೆಟೈಲ್‌ಕೋಲಿನ್’, ‘ಶಾಂತಿಪ್ರಿಯ’, ಎಂದು ಹೇಳಲಾಗುತ್ತದೆ. ಅಡ್ರೆನಾಲಿನ್ ಹೃದಯ ಬಡಿತ ಹೆಚ್ಚಿಸಿ ರಕ್ತದ ಏರೊತ್ತಡಕ್ಕೆ ಕಾರಣವಾಗುತ್ತದೆ. ಅದೇ ಅಸೆಟೈಲ್ ಕೋಲಿನ್ ನರವೂ ಹೃದಯ ಬಡಿತವನ್ನು ಸಮಸ್ಥಿತಿಗೆ ತರುತ್ತದೆ. ಅದೇ ಅಸೆಟೈಲ್ ಕೋಲಿನ್ ಸೀದ ಗ್ರಂಥಿಗಳಲ್ಲಿ ಅತೀ ಹೆಚ್ಚಿನ ಬೆವರು ಉಂಟುಮಾಡುತ್ತದೆ. Substance ‘p’ ಮತ್ತು Acetylcholine ನೋವು ಉಂಟುಮಾಡಿದರೆ (Opioids) ಓಪಿಯಾಡ್ಸ್ ನೋವು ಶಮನಕಾರಕಗಳು. ಇದರಂತೆ ಪಚನಾಂಗಗಳಲ್ಲಿಯೂ ಪಚನ ಕ್ರಿಯೆಗೆ ಸಹಾಯಕವಾಗಲು ಹಲವಾರು ನರರಾಸಾಯನಿಕಗಳು ಬಿಟ್ಟಿವೆ. ಮನಸ್ಸಿನ ಏಕಾಗ್ರತೆ ತರಲು ಹಲವು ನರರಾಸಾಯನಿಕಗಳು ಸಹಾಯಕವಾದರೆ ಮನಸ್ಸಿನ ಚಂಚಲತೆ ಉಂಟುಮಾಡುವ ಕೆಲವು ಇವೆ. ಇವು ವ್ಯಕ್ತಿಯ ಮನೋಧರ್ಮಕ್ಕೆ ಅನುಗುಣವಾಗಿ ಕೆಲಸ ಮಾಡುತ್ತವೆ.

ಮುಖ್ಯವಾಗಿ Mental chemistry  ಎಂದು ವಾಡಿಕೆಯಲ್ಲಿರುವ ನುಡಿಗಟ್ಟು ಈ ಚರ್ಚೆಯಲ್ಲಿ ಅನ್ವರ್ಥಕವಾಗುತ್ತದೆ. ನಮ್ಮ ನಿತ್ಯದ ಆಹಾರ ಸೇವನೆಯಲ್ಲಿ ಪಿಷ್ಟ ಸಾರಜನಕ ವಸ್ತುಗಳೂ ಹಾಗೂ ಕೊಬ್ಬು ಖನಿಜಾಂಶಗಳು ವಿಟಮಿನ್‌ಗಳು ಮತ್ತು ನೀರು ದೇಹದ ಆರೋಗ್ಯಕ್ಕೆ ಅವಶ್ಯಕ. Fatty acids ಹೃದಯಕ್ಕೆ ವಿಪತ್ಕಾರಿ ಎಂಬುದನ್ನು ಸಾರಿಸಾರಿ ಹೇಳಿದರೂ ಅದು ಮಿದುಳನ್ನು ಚುರುಕುಗೊಳಿಸುತ್ತದೆ ಎಂದು ಒಂದು ಸಂಶೋಧನೆ ಹೇಳುತ್ತದೆ. ಕಾರಣ ಬಹುಶಃ ಎಲ್ಲ ನರರಾಸಾಯನಿಕಗಳು ಇದು ಮೂಲವಾಗಿದ್ದರಿಂದ ಮಿದುಳು ವ್ಯವಸ್ಥಿತವಾಗಿ ಕಾರ್ಯ ನಿರ್ವಹಿಸುವದು ಎಂದೂ ತಿಳಿಯಬಹುದು. ಮನವನ್ನು ನಿಗ್ರಹಿಸಿ ಮನವನ್ನು ನೆಮ್ಮದಿಯಿಂದ ಇಟ್ಟುಕೊಳ್ಳಿ ಇದರರ್ಥವೇ ನರರಾಸಾಯನಿಕಗಳನ್ನು ಸಮತೋಲನದಲ್ಲಿ ಇಟ್ಟುಕೊಳ್ಳು ಎಂದು ಅರ್ಥ. ಇದು ಯೋಗಾನುಷ್ಟಾನದಿಂದ ಸಾಧ್ಯ. ಎಂದೂ ಹೇಳಲಾಗಿದೆ! ಮಿದುಳು ನರರಾಸಾಯನಿಕಗಳ ಕಾರ್ಯ ಸಾಗರವಾದರೂ ಅವುಗಳ ಆರೋಗ್ಯ ಮಾನವನ ಮನದಲ್ಲಿದೆ ಎಂದೂ ಹೇಳಬಹುದು.

ನರರಾಸಾಯನಿಕ

ನರವಾಹಕ ಪ್ರಮಾಣದಲ್ಲಿ ಮತ್ತು ಅವು ‘ಗ್ರಾಹಿ’ (Rateptors) ಗಳಿಗೆ ಅಂಟಿಕೊಳ್ಳುವ ವೇಗದ ಪ್ರಮಾಣದಲ್ಲಿ ಏರುಪೇರಾದರೆ ಅನೇಕ ಮಾನಸಿಕ ರೋಗಗಳು ಹಾಗೂ ನರರೋಗಗಳು ಬರುತ್ತವೆ. ಅದರ ವಿವರ ನೋಡಿ ನರವಾಹಕದ ಕೊರತೆ/ಅಭಾವ ಇಲ್ಲವೆ ಅತೀ ಸಂಗ್ರಹ ಕಂಡು ಹಿಡಿದು ಉಪಚಾರ ಕಲ್ಪಿಸಲಾಗುವದು.

ನರವಾಹಕಗಳು

ಬದಲಾವಣೆ

ಬರುವ ವ್ಯಾಧಿಗಳು

೧. ಡೋಪಮಿನ್ (Dopamine) ಅತೀಸಂಗ್ರಹ ಶೇಖರಣೆ – ಸ್ಕಿಜೋಫ್ರೆನಿಯಾ
– ಕೋರಿಯಾ
– ಅತೀ ಚಲನವಲನದ ಲಕ್ಷಣಾವಳಿ.
ಕೊರತೆ/ಅಭಾವ – ಪಾರ್ಕಿಸ್‌ನ್‌ಸೋನಿಸಂ
– ಖಿನ್ನತೆ
೨. ಸೀರೋಟೊನಿನಸ್ (5HT) Serotonin ಅತೀಸಂಗ್ರಹ ಶೇಖರಣೆ – ಮ್ಯಾನೀಯಾ
– ಆತಂಕದ ರೋಗ
ಕೊರತೆ/ಅಭಾವ – ಖಿನ್ನತೆ
– ಗೀಳುತನ
– ನಿದ್ರೆ ಮತ್ತು ಆಹಾರ-ಸೇವಿಸುವಲ್ಲಿ ತೊಂದರೆ
– ಮರೆಗುಳಿತನ
೩. ಅಸಿಟೈಲ ಕೋಲಿನ್  Acetyl choline ಕೊರತೆ/ಅಭಾವ – ಡೆಮೆನ್ಷಿಯಾ (ಮರೆವು)
– ಪಾರ್ಕಿನ್‌ಸನ್ ರೋಗ
– ಖಿನ್ನತೆ ಅಪಸ್ಮಾರ
ಅತೀಸಂಗ್ರಹ / ಶೇಖರಣೆ
೪. ಗಾಬಾ GABA ಕೊರತೆ/ಅಭಾವ – ಆತಂಕದ ತೊಂದರೆ
– ನಿದ್ರಾ ತೊಂದರೆ
– ಬುದ್ಧಿ ಮಾಂದ್ಯತೆ
೫. ಗ್ಲೈಸಿನ್ (Glycine) ಕೊರತೆ/ಅಭಾವ – ಸೆಳೆತಗಳು
– ಅತೀ ಬಿಗಿತದ
– ಅಂಗ ನಿಷ್ಕ್ರಿಯತೆ

 

ವೈದ್ಯಸಾಹಿತಿಯಾಗಿನನ್ನಅನುಭವ
ಪತಿಗಳಿಗೆ ಪುನಃ ಮಗುವಾಯಿತು
ಡಾ|| ವಸಂತ . ಕುಲಕರ್ಣಿ ಎಂ.ಡಿ.

೧೯೬೫ ರಲ್ಲಿ ನನ್ನ ಪ್ರಪ್ರಥಮ ಲೇಖನ ‘ಕರ್ಮವೀರ’ ವಾರಪತ್ರಿಕೆಯಲ್ಲಿ ಪ್ರಕಟವಾಯಿತು. ಅಲ್ಲಿಂದೀಚೆಗೆ ಹಲವಾರು ಲೇಖನಗಳು ನಾಡಿನ ಎಲ್ಲ ಪ್ರಮುಖ ಪತ್ರಿಕೆಗಳಲ್ಲಿ ಪ್ರಕಟಗೊಂಡಿವೆ. ಹೀಗಾಗಿ ಗಣ್ಯ ಸಂಪಾದಕರ, ವಿದ್ವಾಂಸರ, ಸಾಹಿತಿಗಳ ಕವಿಗಳ ನಿಕಟಸಂಪರ್ಕ ಬಂದಿತು. ಅದರಲ್ಲಿ ಪತ್ರಿಕಾ ಪ್ರಪಂಚದ ಭೀಷ್ಮ-ಕಸ್ತೂರಿ ಮಾಸಪತ್ರಿಕೆಯ ಸಂಪಾದಕ ‘ಪಾವೆಂ’ ಅವರೊಡನೆ ಇದ್ದ ಒಡನಾಟ ಕೆಲ ಅನನ್ಯ ಅನುಭವಗಳನ್ನು ಒದಗಿಸಿತು. ೧೯೭೩ರಲ್ಲಿ ‘ಗರ್ಭಪಾತ’ಕ್ಕೆ ಕಾನೂನಿನ ಸ್ವರೂಪ ನೀಡಿ ಅದಕ್ಕಾಗಿ ವಿಶೇಷ ಶಾಸನ ಜಾರಿಯಲ್ಲಿ ತಂದಿತು. ಈ ವಿಷಯ ಕುರಿತು ‘ಪಾವೆಂ’ ಅವರು ವೈದ್ಯ ಸ್ತ್ರೀರೋಗ ತಜ್ಞರೊಬ್ಬರ ಸಂದರ್ಶನ ಮಾಡಿ ಲೇಖನ ಸಿದ್ಧಪಡಿಸಿದರು. ಅದಕ್ಕೆ ಸಾಕಷ್ಟು ವಿಷಯ ಸಾಮಗ್ರಿ ಸಂಗ್ರಹಿಸಿ ‘ಪಾವೆಂ’ ಅವರಿಗೆ ನೀಡಿದೆ. ಇದಲ್ಲದೆ ಸ್ತ್ರೀಗೆ ಸಂತಾನಹರಣ ಶಸ್ತ್ರ ಚಿಕಿತ್ಸೆಯಾಗಿದ್ದರೂ, ಶಸ್ತ್ರಕ್ರಿಯೆ ಮಾಡಿ ಅದನ್ನು ಸರಿಪಡಿಸಿ ಮಕ್ಕಳನ್ನು ಪಡೆಯಬಹುದೆಂಬ ಕುತೂಹಲಕಾರಿ ವಿಷಯವನ್ನು ಉಪಶೀರ್ಷಿಕೆಯಾಗಿ ಸೇರಿಸಿದೆ, ಅದು ‘ಕಸ್ತೂರಿ’ಯಲ್ಲಿ ಪ್ರಕಟವಾದ ನಂತರ ಓದುಗರೊಬ್ಬರು ತಮ್ಮ ಅಳಲಿನ್ನು ತೋಡಿಕೊಂಡು, ಸಂಪಾದಕರಿಗೆ ಪತ್ರ ಬರೆದರು. ಅದರ ಸಾರಾಂಶವಿಷ್ಟೆ. ಅವರಿಬ್ಬರಿಗೆ (ಓದುಗ ದಂಪತಿ) ಒಂದು ಗಂಡು ಮಗುವಿತ್ತು ಆದರೆ ಆಕಸ್ಮಾತ್ತಾಗಿ ಅದು ದುರ್ಮರಣಕ್ಕೀಡಾಯಿತು. ಶೋಕಸಾಗರದಲ್ಲಿ ಮುಳುಗಿದ ದಂಪತಿಗಳು (ಮಗುವಿನ ತಾಯಿ, ಹೆಂಡತಿ ಈಗಾಗಲೇ ಸಂತಾನಹರಣ ಶಸ್ತ್ರಚಿಕಿತ್ಸೆಗೆ ಒಳಗಾಗಿದ್ದಳು. ಪುನಃ ಮಗುವಾಗಬೇಕೆಂಬ ಬಲವಾದ ಆಸೆಯಿಂದ  ಮಾರ್ಗದರ್ಶನ ಕೋರಿ ‘ಪಾವೆಂ’ ಅವರಿಗೆ ಪತ್ರ ಬರೆದಿದ್ದರು. ನನ್ನ ಉಪಲೇಖನ ದಂಪತಿಗಳಿಗೆ ಆಶಾಕಿರಣ ಮೂಡಿಸಿತ್ತು. ಆ ಪತ್ರ ಪಾವೆಂ ನನಗೆ ನೀಡಿ ದಂಪತಿಗಳಿಗೆ ಲಭ್ಯವಿದ್ದ ಸೌಲಭ್ಯ ಹಾಗೂ ಆಸ್ಪತ್ರೆಗಳ ವಿವರ ತಿಳಿಸಲು ನನ್ನನ್ನು ಕೋರಿದರು.

ಹುಬ್ಬಳ್ಳಿಯ ಹಿರಿಯ ಸರ್ಜನ್ ಡಾ|| ಜಿ.ವ್ಹಿ. ಜೋಶಿ, ಡಾ|| ಸುಭಾಷ್ ಜೋಶಿ ಮತ್ತು ಡಾ|| ಕ್ರೂಣ ಪುರಿಕರ ಅವರನ್ನು ಕಂಡು Recanalisation operation ಲಭ್ಯವಿದ್ದ ಮುಂಬಯಿ ಆಸ್ಪತ್ರೆಗಳ ವಿವರ ಹಾಗೂ ಸರ್ಜನ್‌ರ ಹೆಸರು ಮುಂತಾದವುಗಳ ವಿವರ ನೀಡಿ ಶಿರಸಿ ದಂಪತಿಗಳಿಗೆ ಪತ್ರ ಬರೆದೆ.

ಸುಮಾರು ಒಂದೂವರೆ ವರ್ಷದ ನಂತರ ನಾನು ಹೌಸ್ ಸರ್ಜನ್‌ಶಿಪ್ ಮುಗಿಸಿ ನನ್ನೂರಿಗೆ ಮರಳುವ ತರಾತುರಿಯಲ್ಲಿದೆ. ಈ ಮೊದಲಿನ ನನ್ನ ಹಾಸ್ಟೆಲ್ ವಿಳಾಸಕ್ಕೆ.

* * *