ಮಾನವನ ಜೀವನ ಇಂದು ಒತ್ತಡದ ಬದುಕಿನಲ್ಲಿ ಸಿಲುಕಿರುವಾಗ ಒತ್ತಡ ನಿವಾರಣೆಗೆ ಹಲವು ದಾರಿಗಳಿಂದಲೂ ಹೆಚ್ಚು ಜನರು ಎಂಬುದು ಮದ್ಯ ಮತ್ತು ಮಾದಕ ವಸ್ತುಗಳ ಜಾಲಕ್ಕೆ ಆರಂಭದಲ್ಲಿ ಜೇಡರ ಬಲೆಯ ಹಾಗೆ ಕಾಣುವ ಚಟಗಳು ಕೊನೆಗೆ ಕಬ್ಬಿಣದ ಸರಳುಗಳಾಗಿ ಬಂಧಿಸುತ್ತವೆ. ಡಾ| ಸಿ.ಆರ್. ಚಂದ್ರಶೇಖರರವರು ಈ ಪುಸ್ತಕದಲ್ಲಿ ಈ ಜಾಲಗಳಿಂದ ಹೊರಬರುವ ಬಗ್ಗೆ ಸಲಹೆಗಳು ತುಂಬ ಸಹಕಾರಿ ಹಾಗೂ ಸಾಮಾನ್ಯ ಜನರು ಈ ಪುಸ್ತಕದಿಂದ ತಿಳಿಯಬಹುದಾದ ಒಂದೊಂದು ಪದಗಳೂ ಅಮೂಲ್ಯ ರತ್ನಗಳು. ಅವರು ಮದ್ಯಪಾನೀಯಗಳ ಬಗ್ಗೆ ವಿವರಣಾತ್ಮಕ ಲೇಖನದಿಂದ ಜನರಲ್ಲಿ ಇರುವ ತಪ್ಪುಕಲ್ಪನೆಗಳು ದೂರವಾಗಲು ಸಹಕಾರಿ. ಪಾನ ಮಸಾಲಗಳು ಗಾಂಜಾ ಗುಟ್ಕಾಗಳು ಇವುಗಳ ಬಗ್ಗೆ ತಿಳಿಯಲು ಪ್ರತಿಯೊಬ್ಬ ನಾಗರೀಕನು ಓದಲೇಬೇಕಾದ ಪುಸ್ತಕವಿದು. ಮದ್ಯದ ಬಗ್ಗೆ ಜನರಲ್ಲಿ ಇರುವ ತಪ್ಪುಕಲ್ಪನೆಗಳನ್ನು ದೂರಮಾಡಲು ನೆರವಾಗುತ್ತದೆ. ಯುವಕರು ಶ್ರೀಮಂತರು ಹಾಗೂ ಬಡಜನತೆಯು ಮದ್ಯದ ಒಂದೊಂದು ಹನಿಯು ವಿಷಮಯವೆಂದು ಭಾವಿಸಬೇಕಾಗಿದೆ. ಈಗ ಯುವ ವಿದ್ಯಾರ್ಥಿಗಳಲ್ಲಿ ಶೇ. ೨೦ ರಷ್ಟು ಮಂದಿಗಳು ಮಾದಕ ವಸ್ತು ಸೇವನೆಗಳಿಂದ ಬದುಕುತ್ತಿದ್ದಾರೆ ಎಂದು ಹೇಳಿದ್ದಾರೆ. ಈ ಮಾಯಾಜಾಲದಿಂದ ಸಮಾಜ ಕುಟುಂಬ ದೇಶಕ್ಕೆ ಗಂಡಾತರಕಾರಿ ಎಂದು ತಿಳಿಸಿದ್ದಾರೆ. ಅಂಕಿ ಅಂಶಗಳು, ಹಾನಿಯಾಗುವ ರೀತಿ, ಕೆಟ್ಟಪರಿಣಾಮಗಳನ್ನು ಸರಳ ಕನ್ನಡದಲ್ಲಿ ಅರ್ಥವಾಗುವ ರೀಗಿಯಲ್ಲಿ ಬರೆದಿದ್ದಾರೆ.

ಈ ಚಟಗಳಿಂದ ಆಕ್ಸಿಡೆಂಟ್, ಕೊಲೆ ಕಳ್ಳತನ, ದರೋಡೆಗೆ ಸುಲಭದ ದಾರಿ. ಈ ಮಾದಕ ಮಾಯಜಾಲದ ಬಗ್ಗೆ ಎಚ್ಚರಿಸುತ್ತಾರೆ. ಪ್ರತಿಯೊಬ್ಬ ನಾಗರೀಕ ಓದಲೇಬೇಕಾದ ಪುಸ್ತಕ ‘ಮದ್ಯ ಮಾದಕ ವಸ್ತುಗಳ ಮಾಯಾಜಾಲ’. ಆಲ್ಕೋಹಾಲ್‌ನಿಂದ ನರಕೋಶಗಳು ಹಾಳಾಗಿ ಮತ್ತೆ ನೆನಪಿನ ಶಕ್ತಿ ಕಡಿಮೆಯ ಬಗ್ಗೆ ವಿವರಿಸಿದ್ದಾರೆ. ಮದ್ಯಪಾನ ಚಟ ದಿನೇ ದಿನೇ ಹೆಚ್ಚುತ್ತಿದೆ ಎಂದು ಜನತೆ ಸರಕಾರ ಸಮಾಜವನ್ನು ಎಚ್ಚರಿಸಿದ್ದಾರೆ. ಬಾಣಂತಿಯರಿಗೂ ಕೊಡುವ ಬ್ರಾಂದಿ ಬಗ್ಗೆ ಎಚ್ಚರಿಸಿದ್ದಾರೆ. ಯಾವುದೇ ವೈದ್ಯಕೀಯ ಪುಸ್ತಕದಲ್ಲಿ ಆಲ್ಕೋಹಾಲ್ ಆರೋಗ್ಯ ವರ್ಧಕವಲ್ಲ  ಎಂದು ವಿವರಿಸಿದ್ದಾರೆ. ನೋವು ನಿರಾಶೆ ದುಃಖಕ್ಕೆ ಮದ್ಯ ಮಾದಕ ವಸ್ತುಗಳು ಪರಿಹಾರವಲ್ಲ ಎಂದಿದ್ದಾರೆ.

ಮದ್ಯಸಾರ, ಗಾಂಜಾ, ಆಫೀಮು ಕೊಕೆನ್ ಮಾದಕ ವಸ್ತುಗಳು ನಮ್ಮನ್ನು ಕೊಲ್ಲುತ್ತವೆ ಮತ್ತು ಶ್ವಾಸಕೋಶಗಳಿಗೆ ಹಾನಿ ಮಾಡಿ ಮರಣವನ್ನು ಬೇಗ ತರಬಲ್ಲವು ಎಂದು ಸೂಚಿಸಿದಾರೆ. ಇಲ್ಲಿ ಸರಕಾರಗಳ ಪಾತ್ರ ಹಾಗೂ ಪೋಷಕರ ಪಾತ್ರವನ್ನು ಹೇಳಿದ್ದಾರೆ. ರೋಗಿಗೆ ಭರಿಸಲಾಗದ ನಷ್ಟ ಉಂಟುಮಾಡುತ್ತವೆ ಎಂದಿದ್ದಾರೆ. ಈ ಚಟಗಳಿಂದ ಹೊರಬರುವ ಪರಿಹಾರಗಳ ಬಗ್ಗೆ ಸಲಹೆ ಸೂಚನೆ ಮಾರ್ಗದರ್ಶನ ಈ ಪುಸ್ತಕದಲ್ಲಿ ಕಾಣಿಸಿದ್ದಾರೆ. ಎಚ್ಚರಿಕೆ ನುಡಿಗಳನ್ನು ಸೇರಿಸಿದಾರೆ, ಈ ಮಾದಕ ವಸ್ತುಗಳಿಂದ ಬರುವ ದುಷ್ಪರಿಣಾಮಗಳನ್ನು ಉದಾಹರಣೆ ಸಹಿತ ವಿವರಿಸಿದ್ದಾರೆ. ಇಲ್ಲಿ ನೋವು ನಿರಾಸೆಯನ್ನು ಧನಾತ್ಮಕವಾಗಿ ಪರಿಗಣಿಸಬೇಕು. ಅವರ ‘ಮಾನಸಿಕ ಆರೋಗ್ಯಕ್ಕೆ ೧೨ ಸೂತ್ರಗಳು’, ‘ಸುಖಜೀವನಕ್ಕೆ ೧೨ ಸೂತ್ರಗಳು’ ನಮ್ಮ ನಲ್ಮೆಯ ಡಾ| ಸಿ.ಆರ್. ಚಂದ್ರಶೇಖರ್‌ರವರು ಸಮಾಜಕ್ಕೆ ಲೇಖನ ಸಲಹೆಗಳನ್ನು ನೀಡುತ್ತಾ ವೈದ್ಯನಾರಾಯಣನ ಹಾಗಿದ್ದಾರೆ. ಅವರಿಗೆ ಸಮಸ್ತ ಜನತೆಯ ಚಿರ ಋಣಿಗಳು. ಈ ಪುಸ್ತಕ ಸಕಲರ ಪಾಲಿಗೆ ಕೈ ದೀಪವಾಗಿದೆ.

* * *