ಹೆಸರು ಚನ್ನಪಟ್ಟಣ ರಾಜಣ್ಣಾಚಾರ್‌ ಚಂದ್ರಶೇಖರ್‌
ಹುಟ್ಟಿದ ದಿನ ೧೨ನೇ ಡಿಸೆಂಬರ್ ೧೯೪೮
ಹುಟ್ಟಿದ ಸ್ಥಳ ಬೆಂಗಳೂರು
ತಂದೆ ಲೇಟ್ ಶ್ರೀ ಬಿ.ಎಂ. ರಾಜಣ್ಣಾಚಾರ್
ತಾಯಿ ಶ್ರೀಮತಿ ಎಸ್.ಪಿ. ಸರೋಜಮ್ಮ
ಪತ್ನಿ ಶ್ರೀ ಡಿ.ಎಸ್. ರಾಜೇಶ್ವರಿ ಎಂ.ಎ (ಕನ್ನಡ) ವಿದ್ವತ್ ಕರ್ನಾಟಕ ಸಂಗೀತ ಹಾಡುಗಾರಿಕೆ, ಪತ್ರಿಕೋದ್ಯಮದ ಡಿಪ್ಲೋಮ.
ವಿದ್ಯಾಭ್ಯಾಸ ಪ್ರಾಥಮಿಕ -ಪ್ರೌಢಶಾಲಾ ಶಿಕ್ಷಣ ಸರ್ಕಾರಿ ಶಾಲೆಗಳು, ಚನ್ನಪಟ್ಟಣ. ಪಿಯುಸಿ, ಸರ್ಕಾರಿ ಕಲೆ ಮತ್ತು ವಿಜ್ಞಾನ ಕಾಲೇಜು, ಬೆಂಗಳೂರು.ಎಂ.ಬಿ.ಬಿ.ಎಸ್. ಬೆಂಗಳೂರು ವೈದ್ಯ ಮಹಾವಿದ್ಯಾಲಯ.

ಡಿ.ಪಿ.ಎಂ. ಮತ್ತು ಎಂ.ಡಿ. ನಿಮ್ಹಾನ್ಸ್ ಬೆಂಗಳೂರು

ಉದ್ಯೋಗ ಉಪನ್ಯಾಸ (೧೯೮೧) ಪ್ರಾಧ್ಯಾಪಕ, ಮನೋವೈದ್ಯ ವಿಭಾಗ ನಿಮ್ಸಾನ್ ೨೦೦೦ ರಿಂದ…
ರೋಗಿಗಳ ಚಿಕಿತ್ಸೆ, ಬೋಧನೆ, ತರಬೇತಿ ನೀಡುವುದು, ಸಂಶೋಧನೆ ಮತ್ತು ಆರೋಗ್ಯ ಶಿಕ್ಷಣ. ಒಟ್ಟು ಸೇವಾ ಅವಧಿ ೩೦ ವರ್ಷಗಳು. ಆಡಳಿತಾನುಭವ, ನಿಮ್ಹಾನ್ಸ್ ಹಾಸ್ಟಲ್ ವಾರ್ಡನ್, ಡೆಪ್ಯೂಟಿ ಮೆಡಿಕಲ್ ಸುಪರಿಂಟೆಂಡೆಂಟ್, ಮನೋ ವೈದ್ಯವಿಭಾಗದ ಮುಖ್ಯಸ್ಥ.
ಗೌರವ ಹುದ್ದೆ ನಿಮ್ಹಾನ್ಸ್‌‘ರಿಕ್ರಿಯೇಶನ್ ಕ್ಲಬ್‌’ನ ಕಾರ್ಯದರ್ಶಿ (೧೯೮೦-೮೧) ಭಾರತೀಯ ಮನೋವೈದ್ಯ ಸಂಘ, ಕರ್ನಾಟಕ ಶಾಖೆಯ ಕಾರ್ಯದರ್ಶಿ, ಅಧ್ಯಕ್ಷ ೧೯೯೧-೯೨ ವಿಶ್ವ ಆರೋಗ್ಯ ಸಂಸ್ಥೆ, (WHO)ಯ ಅಲ್ಪಾವಧಿ ತಜ್ಞ ಸಲಹೆಗಾರ, ೧೯೯೧ ಭಾರತೀ ಮನೋವೈದ್ಯ ಸಂಘದ ‘ಫೆಲೋ’ ಭಾರತೀಯ ಮನೋವೈದ್ಯಸಂಘ, ದಕ್ಷಿಣ ಭಾರತ, ಕರ್ನಾಟಕ ಶಾಖೆಯ ಅಜೀವ ಸದಸ್ಯ.
ಭಾರತೀಯ ಮನೋವೈದ್ಯ ಸಂಘ (ಐಎಮ್‌ಎ) ದ ಸದಸ್ಯ ಪ್ರಸನ್ನ ಆಪ್ತ ಸಲಹಾಕೇಂದ್ರ. (ಬಸವನಗುಡಿ) ಬೆಂಗಳೂರು ಹಾಗೂ ಸಮಾಧಾನ ಆಪ್ತ ಸಲಹಾ ಕೇಂದ್ರ, ಅರಕೆರೆ ಮೈಕೋ ಲೇ ಔಟ್ ಬೆಂಗಳೂರು : ಗೌರವ ತಜ್ಞ ಸಲಹೆಗಾರರು.
ಸಂಪಾದಕ ಮಂಡಳಿಯ ಸದಸ್ಯತ್ವ, ಜನಪ್ರಿಯ ವಿಜ್ಞಾನ, ವಿವೇಕ ಹಂಸ, ಹೊಸತು, ಇತ್ಯಾದಿ ಅನೇಕ ಪತ್ರಿಕೆಗಳು, ಕನ್ನಡ ವಿಶ್ವವಿದ್ಯಾಲಯ ಹಂಪಿ ಪ್ರಕಟಿಸಿದ ‘ವೈದ್ಯ ವಿಶ್ವ ಕೋಶ’, ರಾಜೀವ್ ಗಾಂಧಿ ಆರೋಗ್ಯ ವಿಶ್ವವಿದ್ಯಾಲಯದ ಪ್ರಸಾರಾಂಗ ಇತ್ಯಾದಿ.
ಕೌನ್ಸಿಲ್ ಆಫ್ ಸೆಕ್ಸ್ ಎಜುಕೇಷನ್ ಮತ್ತು ಪೇರೆಂಟ್ ಹುಡ್ ಇಂಟರ್ ನ್ಯಾಶನಲ್ (ಎಸ್‌ಇಪಿ) ಸಂಸ್ಥೆಯ ಅಜೀವ ಸದಸ್ಯ.
ವೈದ್ಯ ಸಾಹಿತ್ಯ ನಾಡಿನ ಬಹುತೇಕ ಪತ್ರಿಕೆಗಳಲ್ಲಿ ೧೦೦೦ ಕ್ಕೂ ಹೆಚ್ಚಿನ ರಚನೆ ಲೇಖನಗಳು, ಮಿದುಳು ನರಮಂಡಲ ಮನಸ್ಸು
ಮಾನಸಿಕ ಆರೋಗ್ಯದ ಬಗ್ಗೆ ೧೦೭ ಪುಸ್ತಕಗಳು
ಸಾಮಾನ್ಯ ಆರೋಗ್ಯದ ಬಗ್ಗೆ ೧೪ ಪುಸ್ತಕಗಳು
ಕಥೆ ಕಾದಂಬರಿಗಳು ೭ ಪುಸ್ತಕಗಳು
ಅನುವಾದ ಕೃತಿಗಳು ೬ ಪುಸ್ತಕಗಳು
ಸಂಪಾದಿತ ಕೃತಿಗಳು (ವ್ಯಕ್ತಿ ವಿಕಸನ ಮಾಲೆಯಲ್ಲಿ ೩೭ ಪುಸ್ತಕಗಳು) ೪೪ ಪುಸ್ತಕಗಳು
ಇಂಗ್ಲಿಷ್‌ನಲ್ಲಿ ಕೃತಿಗಳು ೧೭ ಪುಸ್ತಕಗಳು
ವೈದ್ಯರಿಗೆ (ಆರೋಗ್ಯ ಕಾರ್ಯಕರ್ತರು/ಶಿಕ್ಷಕರು/ಸ್ವಯಂ ಸೇವಕರಿಗೆ ಮಾನಸಿಕ ಆರೋಗ್ಯ ಕೈಪಿಡಗಳ ರಚನೆ ೮ ಪುಸ್ತಕಗಳು
ವಿವಿಧ ಗ್ರಂಥಗಳು, ಪಠ್ಯಪುಸ್ತಕಗಳಲ್ಲಿ ಅಧ್ಯಾಯಗಳು ಇಂಗ್ಲಿಷ್ ೩ ಪುಸ್ತಕಗಳು
ಕನ್ನಡ ೪ ಪುಸ್ತಕಗಳು
ಪ್ರಶ್ನೋತ್ತರ ಆರೋಗ್ಯದ ಅಂಕಣಗಳು ೧೨ ಪತ್ರಿಕೆಗಳು
ಪ್ರಸಕ್ತ, ಪ್ರಜಾವಾಣಿ, ಸಮಸ್ಯೆ ಸಮಾಧಾನ (ವಾರಕ್ಕೊಮ್ಮೆ)
ಉದಯವಾಣಿ (ವಾರಕ್ಕೊಮ್ಮೆ)
ಪ್ರಮುಖ ಚಟುವಟಿಕೆಗಳು :

  • ಪತ್ರಿಕೆಗಳ ಮೂಲಕ, ರೇಡಿಯೋ ಟೀವಿಗಳ ಮೂಲಕ, ಉಪನ್ಯಾಸ ಸಂವಾದಗಳ ಮೂಲಕ ಜನರಿಗೆ ಆರೋಗ್ಯ ಶಿಕ್ಷಣ.
  • ಕರ್ನಾಟಕ ಸರ್ಕಾರದ ಕಾಲೇಜು ಶಿಕ್ಷಣ ಇಲಾಖೆಯ ಸಹಭಾಗಿತ್ವದಲ್ಲಿ ಕಾಲೇಜು ಉಪನ್ಯಾಸಕರಿಗೆ, ವಿದ್ಯಾರ್ಥಿಗಳಿಗೆ ಆಪ್ತಸಲಹೆ ನೀಡುವ ತರಬೇತಿ ಕಾರ್ಯಕ್ರಮದ ಸಂಚಾಲಕ.
  • ಬೆಂಗಳೂರು ನಗರ ಮತ್ತು ಗ್ರಾಮೀಣ ತರಬೇತಿ ಕೇಂದ್ರದಲ್ಲಿ ಕರ್ನಾಟಕ ಸರ್ಕಾರದ ಬಿ ಮತ್ತು ಸಿ ಗುಂಪಿನ ಸಿಬ್ಬಂದಿಗೆ ಮೂರು ದಿನಗಳ ಅವಧಿಯ ‘ಒತ್ತಡ ನಿವಾರಣೆ ಮತ್ತು ಮಾನಸಿಕ ಆರೋಗ್ಯ’ ಕಾರ್ಯಕ್ರಮ.
  • ಪ್ರಸನ್ನ ಆಪ್ತ ಸಲಹಾ ಕೇಂದ್ರ, ಬಸವನಗುಡಿಯಲ್ಲಿ ಪ್ರತಿ ಬುಧವಾರ ಉಚಿತ ಆಪ್ತಸಲಹೆ, ಚಿಕಿತ್ಸೆ.
  • ಬೆಂಗಳೂರಿನ ಅರಕೆರೆ ಮೈಕೋ ಲೇ ಔಟ್‌ನಲ್ಲಿರುವ ಸಮಾಧಾನ ಆಪ್ತ ಸಲಹಾ ಕೇಂದ್ರದಲ್ಲಿ ಪ್ರತಿದಿನ ಸಂಜೆ ಉಚಿತ ಆಪ್ತಸಲಹೆ ಮತ್ತು ಚಿಕಿತ್ಸೆ, ಹಾಗೂ ಒಂದು ವರ್ಷಕ್ಕೆ ೩೦ ಜನರಿಂದ ತಂಡ – ಮೂರು ತಂಡಗಳಿಗೆ, ೩ ತಿಂಗಳ ಅವಧಿಯ ಆಪ್ತ ಸಲಹೆ ತರಬೇತಿ ಕೋರ್ಸ್‌‌ಗಳು (೨೫ ತರಗತಿಗಳು)
  • ಸ್ವಯಂ ಸೇವಾ ಆಪ್ತಸಲಹೆ ತರಬೇತಿ ಕಾರ್ಯಕ್ರಮಗಳಿಗೆ ಸಂಪನ್ಮುಲ ವ್ಯಕ್ತಿ.
  • ವೈದ್ಯರು-ವೈದ್ಯೇತರ ಸಿಬ್ಬಂದಿಗೆ ‘ಮಾನಸಿಕ ಆರೋಗ್ಯ’ ಸೇವೆಗಳ ಬಗ್ಗೆ ತರಪೇತಿ.
  • ಪ್ರತಿ ತಿಂಗಳು ೧೫೦ ರಿಂದ ೨೦೦ ವ್ಯಕ್ತಿಗಳಿಗೆ ಪತ್ರಮುಖೇನ ಆಪ್ತಸಲಹೆ ಮತ್ತು ಚಿಕಿತ್ಸೆ.
ಭೇಟಿ ನೀಡಿದ ದೇಶಗಳು ಮಕಾವ್, ಹಾಂಕಾಂಗ್, ಸಿಂಗಪುರ, ಮಲೇಶಿಯಾ, ಬ್ಯಾಂಕಾಕ್, ಇಂಗ್ಲೆಂಡ್, ಫ್ರಾನ್ಸ್, ಜರ್ಮನಿ, ಇಟಲಿ.೭೦ ಕ್ಕೂ ಹೆಚ್ಚಿನ ವೈಜ್ಞಾನಿಕ ಪ್ರಬಂಧಗಳನ್ನು ರಾಷ್ಟ್ರೀಯ ಮತ್ತು ಅಂತರರಾಷ್ಟ್ರೀಯ ಜರ್ನಲ್‌ಗಳಲ್ಲಿ ಪ್ರಕಟವಾಗಿವೆ.

* * *