ಜನರಿಗೆ ಅತ್ಯಂತ ಉಪಯುಕ್ತವಾದದ್ದು ಮತ್ತು ಹತ್ತಿರವಾಗಿರುವುದು ವೈದ್ಯಸಾಹಿತ್ಯ. ಇಲ್ಲಿಯವರೆಗೆ ಕನ್ನಡದಲ್ಲಿ ಪ್ರಕಟವಾದ ವೈದ್ಯ ಸಾಹಿತ್ಯದ ಪುಸ್ತಕಗಳು ೨೦೦೦ ವೆಂಬ ಅಂದಾಜಿದೆ. ಈ ಸಂಖ್ಯೆಯನ್ನು ಗಮನಿಸಿದರೆ ಮತ್ತು ಮಾರಾಟವಾಗುತ್ತಿರುವ ಪುಸ್ತಕಗಳಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ವೈದ್ಯಸಾಹಿತ್ಯದ ಕೃತಿಗಳೇ ಎಂಬುದನ್ನು ಗಮನಿಸಿದಾಗ ವೈದ್ಯ ಸಾಹಿತ್ಯ ಅದೆಷ್ಟು ಜನೋಪಯೋಗಿ ಎಂಬುದು ಅರಿವಾಗುತ್ತದೆ. ಜನಸಾಮಾನ್ಯನಲ್ಲಿರುವ ಅಜ್ಞಾನ, ಮೂಢನಂಬಿಕೆ, ಕಂದಾಚಾರಗಳನ್ನು ಹೋಗಲಾಡಿಸಿ ವೈಜ್ಞಾನಿಕ ಮನೋಭಾವ ಬೆಳೆಸುವಲ್ಲಿ ವೈದ್ಯ ಸಾಹಿತ್ಯ ಮುಂಚೂಣಿಯಲ್ಲಿದೆ.

ಆರೋಗ್ಯದ ಕುರಿತು ತಿಳಿವಳಿಕೆ ಪಡೆಯುವಲ್ಲಿ, ಜೀವನದ ಗುಣಮಟ್ಟ ಹೆಚ್ಚಿಸಿಕೊಳ್ಳುವಲ್ಲಿ ವೈದ್ಯ ಸಾಹಿತ್ಯ ನೆರವಾಗುತ್ತದೆ. ಸಾಮಾನ್ಯ ಓದು-ಬರಹ ಬಲ್ಲವನಾಗಲು ಅರ್ಥವಾಗುವಂತಿದ್ದಲ್ಲಿ ಹೆಚ್ಚು ಜನಪ್ರಿಯವಾಗುತ್ತದೆ. ವೈದ್ಯಕೀಯ ವ್ಯವಸ್ಥೆ ದುಬಾರಿಯಾಗಿರುವ ಈ ಕಾಲದಲ್ಲಿ ಕಾಯಿಲೆಗಳ ಕುರಿತು ಔಷಧಿಗಳ ಬಗ್ಗೆ ಅನೇಕ ಗೊಂದಲಗಳು ಉಂಟಾಗುತ್ತವೆ. ಇಂತಹ ಗೊಂದಲಗಳನ್ನು ನಿವಾರಿಸಿ ಅವರಿಗೆ ಸರಿಯಾದ ಮಾಹಿತಿ ನೀಡಬೇಕಾದುದು ಅತ್ಯಂತ ಅಗತ್ಯ. ಇದನ್ನು ಲೇಖನಗಳನ್ನು, ಪುಸ್ತಕಗಳು, ಭಾಷಣಗಳು ರೇಡಿಯೋ ಮತ್ತು ಟಿ.ವಿ. ಮುಖಾಂತರ ನೀಡಬೇಕಾಗುತ್ತದೆ. ಇಂತಹ ಸಾಹಿತ್ಯದಿಂದ ತಜ್ಞರು ಜನರ ನಡುವೆ ಪರಸ್ಪರ ಸಂವಹನ ಮೂಡಲು ಸಾಧ್ಯವಾಗುತ್ತದೆ. ಅನಾರೋಗ್ಯದ ಕಾರಣ, ರೋಗನಿಧಾನ ಚಿಕಿತ್ಸೆ ಮುಂತಾದವುಗಳು ತಜ್ಞವೈದ್ಯರಿಗಷ್ಟೇ ಸೀಮಿತವಾದಲ್ಲಿ ಜನರು ಅವೈಜ್ಞಾನಿಕ ಪದ್ಧತಿಗಳಿಗೆ, ದುಷ್ಟ ಶಕ್ತಿಗಳಿಗೆ ಮಾರುಹೋಗಿ ತಮ್ಮ ಹಣ, ಸಮಯ, ಶಕ್ತಿ ವ್ಯಯ ಮಾಡಿಕೊಳ್ಳುತ್ತಾರೆ. ಅನೇಕರು ಹಣದಿಂದ ಆರೋಗ್ಯ ಪಡೆದುಕೊಳ್ಳುವೆಂಬ ಭ್ರಮೆಯಲ್ಲಿದ್ದಾರೆ. ಹಾಗಾಗಿ ವೈದ್ಯರಿಂದ ವೈದ್ಯ ವ್ಯವಸ್ಥೆಯಿಂದ ತಕ್ಷಣ ತಮಗೆ ಫಲಿತಾಂಶ ದೊರೆಯಬೇಕೆಂದು ಆಶಿಸುತ್ತಾರೆ.

ರೋಗಪತ್ತೆ ಮತ್ತು ಚಿಕಿತ್ಸೆಯ ವಿಷಯದಲ್ಲಿ ವೈದ್ಯರು ರೋಗಿ-ಕುಟುಂಬದವರು ಎಲ್ಲರೂ ಸಮಪಾಲು ಇದೆ ಎಂದು ತಿಳಿಯುವುದಿಲ್ಲ. ಎಲ್ಲವನ್ನು ಹಗುರವಾಗಿ ತಿಳಿದುಕೊಳ್ಳುತ್ತಾರೆ. ಈ ಆಧುನಿಕ ಯುಗದಲ್ಲಿ ವೈದ್ಯಕೀಯ ತಂತ್ರಜ್ಞಾನ ತಲುಪಿರುವ ಉನ್ನತ ಸ್ಥಿತಿ ನಿಜಕ್ಕೂ ಅಚ್ಚರಿಗೊಳ್ಳುವಂತಹದು. ಎಲ್ಲವನ್ನೂ ಅರ್ಥೈಸಿಕೊಳ್ಳಲು ಇಡೀ ಜೀವನವೇ ಬೇಕಾಗುತ್ತದೆ. ಅಲ್ಲದೇ ಕಾಯಿಲೆ ಬಂದ ಮೇಲೆ ಅದರ ಕುರಿತು ತಿಳಿದುಕೊಳ್ಳುವುದಕ್ಕಿಂತ ಮುಂಚಿತವಾಗಿಯೇ ತಿಳಿವಳಿಕೆ ಇದ್ದರೆ ಉತ್ತಮವಲ್ಲವೆ? ಇಂತಹ ಕೆಲಸವನ್ನು ವೈದ್ಯ ಸಾಹಿತ್ಯ ಮಾಡುತ್ತದೆ.

ಸಂಸ್ಕೃತದಲ್ಲಿರುವ ಮತ್ತು ಇಂಗ್ಲಿಷನಲ್ಲಿರುವ ವೈದ್ಯ ಸಾಹಿತ್ಯವನ್ನು ಕನ್ನಡಕ್ಕೆ ತರುವ ಕೆಲಸ ಬಹು ಹಿಂದಿನಿಂದಲೇ ನಡೆದುಬಂದಿವೆ. ಆದಿಕಾಲದಲ್ಲಿ ರಾಷ್ಟ್ರಕೂಟ ನೃಪತುಂಗನ (೮೧೫-೮೭೧) ಆಸ್ಥಾನದಲ್ಲಿ ಉಗ್ರದಿತ್ಯನೆಂಬ ಜೈನವೈದ್ಯ ಕನ್ನಡ ಭಾಷೆ ವೈದ್ಯ ಗ್ರಂಥ ಕಲ್ಯಾಣಕಾರಕ’ ರಚಿಸಿದ. ಚಾಳುಕ್ಯರಾಜ ಇಮ್ಮಡಿ ಜಯಸಿಂಹನ ಆಸ್ಥಾನದಲ್ಲಿ (೧೦೧೫-೧೦೪೨) ಬ್ರಾಹ್ಮಣ ಕವಿ ಚಾವುಂಟರಾಯ ಲೋಕೋಪಕಾರದಲ್ಲಿ ಆಯುರ್ವೇದದ ಕುರಿತು ಸವಿಸ್ತಾರವಾಗಿ ವಿವರಿಸಿದ್ದಾನೆ. ಚಂದ್ರರಾಜನ (೧೦೭೯) ಮದನ ತಿಲಕ, ಕೀರ್ತಿಕಾಮನ ಗೋವೈದ್ಯ (೧೧೨೫) ಚಕ್ರವರ್ತಿ ಸೋಮೇಶ್ವರನ ಮಾನಸೋಲ್ಲಾಸ, ಕೇಶವ ಪಂಡಿತನ ಸಿದ್ದ ಮಂತ್ರ, ಚೋಪದೇವನ (೧೨೬೩) ಸಿದ್ದಮಂತ್ರ ಪ್ರಕಾಶ ವೈದ್ಯ ಶತಕ, ಹೃದಯ ದೀಪಿಕ ನಿಘಂಟು ಮುಂತಾದವು ಈ ಕಾಲದ ಪ್ರಮುಖ ಗ್ರಂಥರಾದ ಲಿನಸ್ ಮಂಗರಾಜ (೧೩೬೦) ರಚಿಸಿದ ‘ಖಗೇಂದ್ರ ಮಣಿದರ್ಪಣ’ ಕನ್ನಡ ಸಾಹಿತ್ಯದಲ್ಲಿ ಶ್ರೇಷ್ಠ ಗ್ರಂಥ ಅಭ್ಯಿವ ಚಂದ್ರನ ಅಶ್ವಶಾಸ್ತ್ರ ಗ್ರಂಥ, ಶ್ರೀಧರ ದೇವನ (೧೫೦೦) ವೈದ್ಯ ಮೃತ ಚಾಚರಸ ಅಶ್ವವೈದ್ಯ, ಕಳಲೆಯವೀರಗಾಜನ ಸಕಲ ವೈದ್ಯಸಂಹಿತ ನೀರಾರ್ಣವ ನಂಜರಾನ ವೈದ್ಯಾಸಾರ ಸಂಗ್ರಹ ಮುಂತಾದವು ಮುಖ್ಯ ಗ್ರಂಥಗಳು.

೧೯೦೪ರಲ್ಲಿ ಅಲೋಪತಿ ವೈದ್ಯಶಾಸ್ತ್ರ ಕುರಿತಂತ ಮೈಸೂರು ಸಂಸ್ಥಾನದ ಸೇವೆಯಲ್ಲಿದ್ದ ಶ್ರೀ ಎಂ. ಗುರುರಾವ್‌ರವರು ‘ಆಂಗ್ಲೇಯ ವೈದ್ಯಶಾಸ್ತ್ರ’ ಪುಸ್ತಕ ಬರೆದರು. ೧೯೨೩ರಲ್ಲಿ ದಾಂಪತ್ಯ ವಿಜ್ಞಾನ’ ಸಂತಾನ ವಿಜ್ಞಾನ, ಆಹಾರ ವಿಜ್ಞಾನ’ದಂತಹ ಪುಸ್ತಕಗಳನ್ನು ರಚಿಸಿದ ದ.ಕೃ ಭಾರದ್ವಾಜರು ಯುಗಪ್ರವರ್ತಕರು. ಪಂಡಿತ ಲೋಕನಾಥರು ರಚಿಸಿ ತಾಯಿಂದಿರಿಗಾಗಿ ‘ಪ್ರೇಮಕಲಾ ಗರ್ಭನಿರೋಧ’ ಪುಸ್ತಕವನ್ನು ರಚಿಸಿದ್ದಲ್ಲದೇ ೧೯೩೬-೩೭ರಲ್ಲಿ ಕಲಿಯುಗ’ ಎಂಬ ಕಾಮ ವಿಜ್ಞಾಣದ ಪತರಿಕೆಯ ಸಂಪಾದಕರಾದರು. ಲೈಂಗಿಕ ಆರೋಗ್ಯದ ಬಗ್ಗೆ ಬರೆದ ಮತ್ತೊಬ್ಬ ಮಹನೀಯರೆಂದರೆ ಡಾ|| ದೊಡ್ಡೇರಿ ವೆಂಕಟಗಿರಿರಾವ್‌ರವರು. ‘ವಿಕೃತಕಾಮ’ ಪುಸ್ತಕವನ್ನು ವಿಜ್ಞಾನ ರಚಿಸಿ ವೈದ್ಯ ಸಾಹಿತ್ಯಕ್ಕೆ ಅನುಪಮ ಕೊಡುಗೆ ಕೊಟ್ಟಿದ್ದಾರೆ. ವೈದ್ಯ ಸಾಹಿತ್ಯಕ್ಕೆ ಜನಪ್ರಿಯತೆ, ಜನಮನ್ನಣೆಯನ್ನು ತಂದುಕೊಟ್ಟವರಲ್ಲಿ ರಾಶಿ’ ಎಂದೇ ಖ್ಯಾತರಾಗಿರುವರೆಂದರೆ ಡಾ|| ಎಂ.ಶಿವರಾಂ ಮತ್ತು ಡಾ|ಸ ಅನುಪಮಾ ನಿರಂಜನರರು. ಡಾ|| ಅನುಪಮಾ ನಿರಂಜನರವರ ‘ತಾಯಿ-ಮಗು’ ಪುಸ್ತಕ ೨೦೦೮ರಲ್ಲಿ ೩೫ನೇ ಮುದ್ರಣ ಕಂಡಿರುವುದನ್ನು ಗಮನಿಸಿದರೆ ಸಾಹಿತ್ಯ ಕ್ಷೇತ್ರದಲ್ಲಿ ಒಂದು ದಾಖಳೆಯೇ ಸೈ. ಅವರ ದಾಂಪತ್ಯ ಜೀವನ ಪುಸ್ತಕ ೩೨ ಮುದ್ರಣ ಕಂಡಿದೆ. ವೈದ್ಯ ಸಾಹಿತ್ಯದ ಮತ್ತೊಬ್ಬ ದಿಗ್ಗಜರೆಂದರೆ ಡಾ|| ಡಿ. ಎಸ್. ಶಿವಪ್ಪನವರು. ಕನ್ನಡ ‘ವೈದ್ಯ ಪದಕೋಶ’ ಮತ್ತು ‘ವೈದ್ಯ ಪದಗಳ ಹುಟ್ಟು’ ಗ್ರಂಥಗಳನ್ನು ರಚಿಸಿ ವೈದ್ಯ ಬರಹಗಾರರಿಗೆ ಪ್ರೇರಕ ಶಕ್ತಿಯಾದರು.

ಶರೀರ ರಚನಾ ಶಾಸ್ತ್ರವನ್ನು ಕನ್ನಡದಲ್ಲಿ-ರಚಿಸಿದ್ದಲ್ಲದೇ ಕನ್ನಡದಲ್ಲಿ ೧೦೦ಕ್ಕೂ ಹೆಚ್ಚು ಪುಸ್ತಕಗಳನ್ನು ಬರೆದಿರುವ ಗುಲ್ಬರ್ಗದ ಡಾ| ಪಿ.ಎಸ್. ಶಂಕರ್‌ರವರು. ಅವರ ಹೆಸರಿನಲ್ಲಿ ಸ್ಥಾಪಿಸಲಾಗಿರುವ ಪ್ರತಿಷ್ಠಾನದ ಮೂಲಕ ಉದಯೋನ್ಮುಖ ವೈದ್ಯ ಸಾಹಿತ್ಯ ಪ್ರಶಸ್ತಿ ನೀಡುತ್ತಿದ್ದಾರೆ. ೧೦೦ಕ್ಕೂ ಜನ ಹೆಚ್ಚಿನ ಪುಸ್ತಕಗಳನ್ನು ರಚಿಸಿರುವವರಲ್ಲಿ ಮತ್ತೊಬ್ಬ ಪ್ರಮುಖ ವೈದ್ಯ ಬರಹಗಾರರು ಡಾ|| ಸಿ.ಆರ್. ಚಂದ್ರಶೇಖರ್ ರವರು. ರಾಷ್ಟ್ರೀಯ ವಿಜ್ಞಾನ ಪುರಸ್ಕಾರ ಪಡೆದ ಪ್ರಥಮ ಕನ್ನಡಿಗ ವೈದ್ಯ ಎಂಬ ಹೆಗ್ಗಳಿಗೆ ಪಾತ್ರರಾಗಿರುವವರು ಡಾ|| ಸಿ.ಆರ್. ಚಂದ್ರಶೇಖರ್‌ರವರು ವೈದ್ಯ ಸಾಹಿತ್ಯವನ್ನು ರಚಿಸುತ್ತ ಜನರಿಗೆ ಆರೋಗ್ಯ ಶಿಕ್ಷಣವನ್ನು ನೀಡುವುದರಲ್ಲಿ ನಿರತರಾದವರೆಂದರೆ ಡಾ|| ಎಚ್.ಡಿ. ಚಂದ್ರಪ್ಪಗೌಡ, ಡಾ|| ಲೀಲಾವತಿ ದೇವದಾಸ್ , ಡಾ|| ಪ್ರಕಾಶ್ ಸಿ.ರಾವ್, ಡಾ|| ಅನ್ನಪೂರ್ಣಮ್ಮ, ಡಾ|| ಅಶೋಕ್ ಪೈ, ಡಾ|| ಕೆ.ಆರ್.ಶ್ರೀಧರ್, ಡಾ|| ಗಿರಿಜಮ್ಮ ಡಾ|| ಸಿ.ಜೆ. ಕೇಶವಮೂತಿ, ಪ್ರೋ|| ಬಿ.ಎಂ.ಹೆಗ್ಡೆ, ದಿ||ಡಾ|| ಸಜ ನಾಗಲೋಟಿಮಠ, ಡಾ|| ಮೀನಗುಂಡಿ ಸುಬ್ರಹಣ್ಯ, ಎನ್. ಡಾ|| ವಸಂತ ಕುಲಕರ್ಣಿ, ಡಾ|| ನಾ. ಸೋಮೇಶ್ವರ, ಡಾ|| ಸುನಂದಾ ಕುಲಕರ್ಣಿ, ಡಾ|| ಟಿ.ಎನ್. ಸತ್ಯನಾರಾಯಣರಾವ್, ಡಾ|| ಬಿ.ಟಿ. ರುದ್ರೇಶ್, ಡಾ|| ಪದ್ಮಿನಿ ಪ್ರಸಾದ್, ಡಾ|| ವಸುಂಧರಾ ಭೂಪತಿ, ಡಾ||ಡಿ.ಕೆ. ಮಹಾಬಲರಾಜು, ಡಾ|| ಪೂರ್ಣಿಮಾ ಮುಂತಾದವರು.

ಕನ್ನಡದ ಎಲ್ಲ ದಿನಪತ್ರಿಕೆಗಳಲ್ಲಿ ವಾರಪತ್ರಿಕೆಗಳು, ಮಾಸಪತ್ರಿಕೆಗಳು ಆರೋಗ್ಯ ವಿಷಯಕ್ಕೆಂದೇ ಪುಟಗಳನ್ನು ಮೀಸಲಿರಿಸಿವೆ. ವೈದ್ಯಸಾಹಿತ್ಯಕ್ಕೆ ಮೀಸಲಾದ ಪತ್ರಿಕೆಗಳೆಂದರೆ ಆರೋಗ್ಯ ಅನುರಾಗ’, ‘ಜೀವನಾಡಿ’, ‘ವೈದ್ಯಲೋಕ ಆರೋಗ್ಯವಾಣಿ’, ‘ಆರೋಗ್ಯ ಸಂಪತ್ತು’, ‘ವೈದ್ಯ ತರಂಗ’ ಮುಂತಾದವು.

ಕನ್ನಡ ವೈದ್ಯಸಾಹಿತ್ಯ ಪರಿಷತ್ತು-ಕನ್ನಡದಲ್ಲಿ ವೈದ್ಯ ಸಾಹಿತ್ಯ ರಚಿಸಲು ಪ್ರೇರಕವಾಗುವಂತೆ ರಚಿಸಿದ ಸಾಹಿತ್ಯ ಜನರಿಗೆ ತಲುಪಿಸುವಲ್ಲಿ ನೆರವಾಗುವ, ವೈದ್ಯ ಸಾಹಿತ್ಯದ ಗುಣಮಟ್ಟ ಕಾಪಾಡುವ ನಿಟ್ಟಿನಲ್ಲಿರುವ ಮಾಡುವ ಅವಶ್ಯಕತೆಯನ್ನು ಮನಗುಂಡು ಡಾ|| ಎಂ.ಎಸ್.ರಾಜಣ್ಣ, ದಿ||ಡಾ|| ಅಶ್ವಥ್, ಡಾ|| ಸಿ.ಆರ್. ಚಂದ್ರಶೇಖರ್ ಹಾಗೂ ಡಾ|| ಬಿ.ಜಿ. ಚಂದ್ರಶೇಖರ್ ಮುಂತಾದವರು ಸೇರಿ ೧೯೮೬ರಲ್ಲಿ ಕನ್ನಡ ವೈದ್ಯ ಸಾಹಿತ್ಯ ಪರಿಷತ್ತು ಸ್ಥಾಪಿಸಿದರು. ೧೫ ಪುಸ್ತಕವನ್ನು ಪ್ರಕಟಿಸಿದ ಈ ಸಂಸ್ಥೆ ಪ್ರಸಕ್ತ ವರ್ಷದಿಂದ ಪುಸ್ತಕ ನಿಧಿ ಸ್ಥಾಪಿಸಿ ಆ ಮೂಲಕ ಪ್ರತಿವರ್ಷ ಪುಸ್ತಕಗಳನ್ನು ಪ್ರಕಟಿಸುವ ಯೋಜನೆ ಹಾಕಿಕೊಂಡಿದೆ. ಏಳೆಂಟು ರಾಜ್ಯ ಮಟ್ಟದ ಸಮ್ಮೇಳನವನ್ನು ನಡೆಸಿದೆ ಉದಯೋನ್ಮುಖ ಬರಹಗಾರರಿಗೆ ವೈದ್ಯ ಲೇಖನ ರಚನಾ ಕಾರ್ಯಾಗಾರ ಗಳನ್ನು ಏರ್ಪಡಿಸಿದೆ. ಕಾಲೇಜು ವಿದ್ಯಾರ್ಥಿಗಳು ವೈದ್ಯ ಪುಸ್ತಕ ವಿಮರ್ಶೆ ಲೇಖನ ಸ್ಪರ್ಧೆಯನ್ನು ನವಕರ್ನಾಟಕ ಪ್ರಕಾಶನದ ಸಹಯೋಗದಲ್ಲಿ ಏರ್ಪಡಿಸಿದೆ. ‘ಆಸ್ಪತ್ರೆಯಿಂದ ಆಸ್ಪತ್ರೆಗೆ ವೈದ್ಯಸಾಹಿತ್ಯ’ ಎಂಬ ಪ್ರಮುಖ ಯೋಜನೆಯನ್ನು ಹಾಕಿಕೊಂಡು ಕಳೆದ ಸಾಲಿನಲ್ಲಿ ನವಕರ್ನಾಟಕ ಪ್ರಕಾಶನ ಸಹಯೋಗದಲ್ಲಿ ಬೆಂಗಳೂರಿನ ಪ್ರಮುಖ ಆಸ್ಪತ್ರೆಗಳಲ್ಲಿ ಪುಸ್ತಕ ಪ್ರದರ್ಶನ ಮತ್ತು ಮಾರಾಟ ಹಮ್ಮಿಕೊಂಡಿತ್ತು. ಓದುಗರಲ್ಲಿಗೇ ವೈದ್ಯ ಸಾಹಿತ್ಯ ಕೊಂಡೊಯ್ಯುವ ಕೆಲಸ ತುಂಬ ಯಶಸ್ವಿಯಾಗಿ ಜರುಗಿತು. ಡಾ|| ವಸುಂಧರಾ ಭೂಪತಿಯರು ರಾಜ್ಯಮಟ್ಟದ ಅಧ್ಯಕ್ಷರಾಗಿರುವ ಕನ್ನಡ ವೈದ್ಯ ಸಾಹಿತ್ಯ ಪರಿಷತ್ತು ಗುಲ್ಬರ್ಗ ದಾವಣಗೆರೆ, ಶಿವಮೊಗ್ಗದ ಜಿಲ್ಲಾ ಶಾಖೆಗಳೂ ಸಕ್ರಿಯವಾಗಿ ಕಾರ್ಯನಿರ್ವಹಿಸುತ್ತಿವೆ.

ಪ್ರತಿಯೊಂದು ಚಿಕಿತ್ಸಾಲಯ ಗ್ರಮಥಾಲಯ ವೈದ್ಯಕೀಯ ಆಯುರ್ವೇದ, ಹೋಮಿಯೋಪತಿ ಕಾಲೇಜುಗಳು ಎಲ್ಲಾ ಶಾಲಾ ಕಾಲೇಜುಗಳ ಗ್ರಂಥಾಲಯಗಳಲ್ಲಿ ವೈದ್ಯ ಸಾಹಿತ್ಯದ ಪುಸ್ತಕಗಳು ಇರಬೇಕು. ನವಕರ್ನಾಟಕ ಪ್ರಕಾಶನದ ಶ್ರೀ ಆರ್ ಎನ್ ರಾಜಾರಾಮ್‌ರವರು ಹೇಳುವಂತೆ ವೈದ್ಯರು ಬರೆಯುವ ಔಷಧಿ ಚೀಟಿಯಲ್ಲಿ ಪುಸ್ತಕವೂ ಒಳಗೊಂಡಿರಬೇಕು. ಆಗಲೇ ವೈದ್ಯಸಾಹಿತ್ಯ ಜನರನ್ನು ಸಂಪೂರ್ಣವಾಗಿ ತಲುಪಲು ಸಾಧ್ಯ. ಅಲ್ಲದೇ ಔಷಧಿ ಅಂಗಡಿಯಲ್ಲಿ ಪುಸ್ತಕವೂ ದೊರೆಯುವಂತಿರಬೇಕು.

* * *