ನಾನು ಸ್ವಯಂ ವೈದ್ಯನಾದರೂ ಸೈನುಸೈಟಿಸ್ ಹಾಗೂ ನಿರಂತರ ಸೀನಿನಿಂದ ನರಳುತ್ತಿದ್ದೆ. ಆಧುನಿಕ ವೈದ್ಯಕೀಯದಲ್ಲಿ ಈ ಸಮಸ್ಯೆಗಳಿಗೆ ತಾತ್ಕಾಲಿಕ ಉಪಶಮನ ಮಾತ್ರ ದೊರೆಯುತ್ತದೆ. ಹಾಗಾಗಿ ಸಿದ್ದಿ ಸಮಾಜ ಯೋಗ ಶಿಬಿರವನ್ನು ಸೇರಿ, ಗುರುಮುಖೇನ ಪ್ರಾಣಾಯಾಮ ಕಲಿತೆ. ಹಾಗಾಗಿ ಪ್ರಾಣಾಯಾಮದ ಉಪಯೋಗ ಎಲ್ಲರಿಗೂ ಆಗಲಿ ಎಂದು, ಪ್ರಾಣಾಯಾಮವನ್ನು ವೈಜ್ಞಾನಿಕವಾಗಿ ವಿವರಿಸಲು ಪ್ರಯತ್ನಿಸುತ್ತಿದ್ದೇನೆ.

ನಾವು ಪ್ರಾಣಾಯಾಮವನ್ನು ತಿಳಿಯುವ ಮೊದಲು, ಪ್ರಾಣಾಯಾಮದಲ್ಲಿ ಪ್ರತ್ಯಕ್ಷವಾಗಿ ಭಾಗಿಯಾಗುವ ಶ್ವಾಸಕಾಂಗ, ಹೃದಯ ಹಾಗೂ ವಪೆಗಳ ಬಗ್ಗೆ ತಿಳಿದುಕೊಳ್ಳೋಣ. ನಾವು ಸೇವಿಸಿದ ಆಹಾರ ಪದಾರ್ಥಗಳು ಅಂತಿಮವಾಗಿ ಗ್ಲೂಕೋಸ್ ಆಗುತ್ತದೆ. ಗ್ಲೂಕೋಸ್ ರಕ್ತದ ಮೂಲಕ ಎಲ್ಲ ಜೀವಕೋಶಗಳನ್ನು ತಲುಪುತ್ತವೆ. ಜೀವಕೋಶದೊಳಗೆ ಗ್ಲೂಕೋಸ್ ಆಮ್ಲಜನಕದ ಉಪಸ್ಥಿತಿಯಲ್ಲಿ ಉರಿದು ಶಕ್ತಿಯನ್ನು ಬಿಡುಗಡೆ ಮಾಡುತ್ತದೆ. ಈ ಶಕ್ತಿ ನಮ್ಮೆಲ್ಲರ ಬದುಕಿಗೆ ಆಧಾರವಾಗಿರುತ್ತದೆ. ಗ್ಲೂಕೋಸ್ ಉರಿಯಲು ಅಗತ್ಯವಾದ ಆಮ್ಲಜನಕವನ್ನು ಶ್ವಾಸಕೊಶಗಳು ಒದಗಿಸುತ್ತವೆ. ರಕ್ತವು ಆಮ್ಲಜನಕವನ್ನು ಶ್ವಾಸಕೋಶಗಳಿಂದ ತಂದು ಜೀವಕೋಶಗಳಿಗೆ ಪೂರೈಸುತ್ತದೆ. ಹಾಗೆಯೇ ಶಕ್ತಿ ಉತ್ಪಾದನೆಯಲ್ಲಿ ತ್ಯಾಜ್ಯ ವಸ್ತುವಾಗಿ ಬಿಡುಗಡೆಯಾದ ಕಾರ್ಬನ್ ಡೈ ಆಕ್ಸೈಡ್ ರಕ್ತದಲ್ಲಿ ಸಾಗಿ ಶ್ವಾಸಕೋಶಗಳ ಮೂಲಕ ಹೊರ ಸಾಗುತ್ತದೆ. ಉಸಿರಾಟದಲ್ಲಿ ವಪೆ ಎಂಬ ಸ್ನಾಯು ಪ್ರಧಾನ ಪಾತ್ರವಹಿಸುತ್ತದೆ. ಇದು ಎದೆಗೂಡು ಹಾಗೂ ಉದರಗೂಡಿನ ನಡುವೆ ಇರುತ್ತದೆ.

ಶ್ವಾಸಕೋಶವು ಮೇಲಿನ ಹಾಲೆ (ಅಪ್ಪರ್ ಲೋಬ್), ಮಧ್ಯದ ಹಾಲೆ (ಮಿಡಲ್ ಲೋಬ್) ಹಾಗೂ ಕೆಳಹಾಲೆ (ಲೋವರ್ ಲೋಬ್) ಎಂಬ ಮೂರು ಭಾಗಗಳನ್ನು ಹೊಂದಿರುತ್ತದೆ. ಉಸಿರಾಟ ಎನ್ನುವುದು ಸಹಜವಾಗಿ, ನಮ್ಮ ಅರಿವಿಗೆ ಬಾರದೆ, ಅನೈಚ್ಛಿಕವಾಗಿ ನಡೆಯುವ ಕ್ರಿಯೆ. ನಾವು ನಿಮಿಷಕ್ಕೆ ಸುಮಾರು ೧೮ರಿಂದ ೨೦ ಸಲ ಉಸಿರಾಡುತ್ತೇವೆ. ಪ್ರಾಣಾಮಾಯದಲ್ಲಿ ನಾವು ಪ್ರಜ್ಞಾಪೂರ್ವಕವಾಗಿ ಹಾಗೂ ಕ್ರಮಬದ್ಧವಾಗಿ ಉಸಿರಾಡುತ್ತೇವೆ.

ಗಾಳಿಯು ಹಗುರವಾಗಿರುತ್ತದೆ. ನಾವು ಸಾಮಾನ್ಯ ಉಸಿರಾಟ ನಡೆಸುವಾಗ, ಹಗುರವಾದ ಗಾಳಿಯು ಶ್ವಾಸಕೋಶದ ಮೇಲಿನ ಹಾಗೂ ಮಧ್ಯದ ಹಾಲೆಗಳನ್ನು ಮಾತ್ರ ಪ್ರವೇಶಿಸುತ್ತದೆ, ಕೆಳಹಾಲೆಯನ್ನು ತಲುಪುವುದಿಲ್ಲ. ರಕ್ತವು ಘನವಾದದ್ದು. ಗುರುತ್ವದ ಕಾರಣ, ರಕ್ತವು ಮೊದಲು ಕೆಳ ಹಾಲೆಯನ್ನು ತುಂಬುತ್ತದೆ. ನಂತರ ಮಧ್ಯದ ಹಾಲೆಯನ್ನು ಆಮೇಲೆ ಮೇಲಿನ ಹಾಲೆಯನ್ನು ತುಂಬುತ್ತದೆ. ಹಾಗಾಗಿ ಸಾಮಾನ್ಯ ಉಸಿರಾಟದಲ್ಲಿ ಆಮ್ಲಜನಕವು ಮೇಲಿನ ಹಾಗೂ ಮಧ್ಯದ ಹಾಲೆಯಲ್ಲಿರುವ ರಕ್ತವನ್ನು ಮಾತ್ರ ತಲುಪುತ್ತದೆ. ಕೆಳಹಾಲೆಯಲ್ಲಿರುವ ರಕ್ತವನ್ನು ತಲುಪುವುದಿಲ್ಲ. ಹಾಗಾಗಿ ಕೆಳಹಾಲೆಯಲ್ಲಿರುವ ಕಾರ್ಬನ್‌ಡೈಆಕ್ಸೈಡ್ ಭರತ ರಕ್ತವು, ಆಮ್ಲಜನಕವನ್ನು ಪಡೆಯದೇ ಹಾಗೆಯೇ ಹೃದಯಕ್ಕೆ ಹಿಂದಿರುಗುತ್ತದೆ. ಇದರಿಂದ ನಮ್ಮ ದೇಹಕ್ಕೆ ಅಗತ್ಯವಾಗುವಷ್ಟು ಆಮ್ಲಜನಕ ಪೂರೈಕೆಯಾಗುವುದಿಲ್ಲ. ಈ ಕೊರತೆ ನಾನಾ ರೋಗಗಳಿಗೆ ಮೂಲವಾಗಬಹುದು. ಪ್ರಾಣಾಯಾಮದಲ್ಲಿ ನಾವು ಪ್ರಜ್ಞಾಪೂರ್ವಕವಾಗಿ ಉಸಿರಾಡುವುದರಿಂದ ಗಾಳಿಯು ಶ್ವಾಸಕೋಶದ ಕೆಳಹಾಲೆಗೂ ಹರಿಯುವಂತಾಗುತ್ತದೆ. ಪ್ರಾಣಾಯಾಮದಲ್ಲಿ ಎದೆ, ತೋಳು, ಕೈಗಳ ಸ್ಥಾನಗಳ ಬಗ್ಗೆ ವಿಶೇಷ ಗಮನ ಕೊಡುವುದರಿಂದ ನಾವು ಉಸಿರುಆಡುವ ಪ್ರಾಣಾಯಾಮವನ್ನು ಸರಿಯಾದ ವಿಧಾನದಲ್ಲಿ ನಿತ್ಯ ಮಾಡುವುದರಿಂದ ನಮಗಾಗುವ ಲಾಭಗಳನ್ನು ಈ ಕೆಳಕಂಡತೆ ಸಂಗ್ರಹಿಸಬಹುದುಃ

  • ಪ್ರಾಣಾಯಾಮದಿಂದ ಅಗತ್ಯ ಪ್ರಮಾಣದ ಆಮ್ಲಜನಕವು ದೇಹದ ಎಲ್ಲ ಜೀವಕೋಶಗಳಿಗೆ ಸರಬರಾಜಾಗುವುದರಿಂದ, ನಾವು ಸೇವಿಸಿದ ಆಹಾರ ಪೂರ್ಣ ಭಸ್ಮವಾಗಿ ಶಕ್ತಿ ಬಿಡುಗಡೆಯಾಗುತ್ತದೆ. ಆ ಕಾರಣದಿಂದ ಆಲಸ್ಯ, ಸುಸ್ತು, ನಿಃಶಕ್ತಿ ಮುಂತಾದವು ಕಡಿಮೆಯಾಗಿ ಉತ್ಸಾಹ, ಲವಲವಿಕೆ ತುಂಬುತ್ತದೆ.
  • ಪ್ರಜ್ಞಾಪೂರ್ವಕವಾಗಿ ಕ್ರಮಬದ್ಧ ಉಸಿರಾಟದಿಂದ ಎದೆಗೂಡಿನ ಸ್ನಾಯುಗಳು ಬಲವಾಗುತ್ತವೆ. ಶ್ವಾಸಕೋಶಗಳ ಸಾಮರ್ಥ್ಯ ಹೆಚ್ಚುತ್ತದೆ. ಶ್ವಾಸಕೋಶಗಳು ಹಿಗ್ಗುವುದರಿಂದ ಉಸಿರಾಟದಲ್ಲಿ ವಿನಿಮಯವಾಗುವ ಗಾಳಿಯ ಪ್ರಮಾಣ ಹೆಚ್ಚುತ್ತದೆ.

ಪ್ರಾಣಾಯಾಮವು ನೇರವಾಗಿ ಶ್ವಾಸಕೋಶಗಳ ಮೇಲೆ ಪರಿಣಾಮ ಬೀರುವುದರ ಜೊತೆಗೆ ಹೃದಯದ ಕೆಲಸ ಕಾರ್ಯಗಳ ಮೇಲೂ ಪರಿಣಾಮವನ್ನು ಬೀರುತ್ತದೆ. ಇದು ಹೃದಯ ಹಾಗೂ ರಕ್ತನಾಳಗಳ ಆರೋಗ್ಯವನ್ನು ಹೆಚ್ಚಿಸುತ್ತದೆ.

  • ಪ್ರಾಣಾಯಾಮದ ಉಸಿರಾಟದಲ್ಲಿ ವಪೆಯು ಉದರಗೂಡಿನೆಡೆ ಬಾಗಿ, ಅಲ್ಲಿರುವ ಅಂಗಾಂಗಳ ಕಾರ್ಯಗಳ ಮೇಲೆ ಪ್ರಭಾವ ಬೀರುತ್ತದೆ. ಅತ್ಯಾಮ್ಲೀಯತೆ, ಹೊಟ್ಟೆ ಉಬ್ಬುರಿಕೆ, ಮಲಬದ್ಧತೆ, ಮೂತ್ರ ಜನಕಾಂಗಗಳಲ್ಲಿ ಕಲ್ಲು, ಋತುಉ ಸಮಸ್ಯೆ ಮುಂತಾದ ಆರೋಗ್ಯ ಸಮಸ್ಯೆಯನ್ನು ನಿಗ್ರಹಿಸಲು ನೆರವಾಗುತ್ತದೆ.
  • ಪ್ರಾಣಾಯಾಮವು ಉದರ ಸ್ನಾಯುಗಳ ಮೇಲೂ ಪರಿಣಾಮವನ್ನು ಬೀರುವುದರಿಂದ ಉದರ ಬೊಜ್ಜನ್ನು ಕಡಿಮೆಮಾಡಲು ನೆರವಾಗುತ್ತದೆ.
  • ಚರ್ಮಕ್ಕೆ ರಕ್ತ ಸಂಚಾರ ಹೆಚ್ಚಿ ಚರ್ಮ ಸುಕ್ಕು ಗಟ್ಟುವುದು ಕಡಿಮೆಯಾಗಿ ಚರ್ಮದ ಕಾಂತಿ ಹೆಚ್ಚುತ್ತದೆ.
  • ಪ್ರಾಣಾಯಾಮದ ಅವಧಿಯಲ್ಲಿ ಮಿದುಳು ಅಲ್ಫಾ ಅಲೆಗಳನ್ನು (ಅಲ್ಫಾ ವೇವ್ಸ್) ಉತ್ಪಾದಿಸುವುದನ್ನು ಗಮನಿಸಲಾಗಿದೆ. ಈ ಅಲೆಗಳು ಚಿತ್ತನಿಗ್ರಹ ಮಾಡಿ ಪ್ರಶಾಂತತೆಯನ್ನು ಮೂಡಿಸುತ್ತವೆ. ಸ್ಮರಣಶಕ್ತಿ ಉತ್ತಮಗೊಳ್ಳುತ್ತದೆ.
  • ಮುಖದಲ್ಲಿ ಹಲವು ಗಾಳಿಗೂಡುಗಳಿವೆ. ಇವೇ ಮುಖವೆ ಕುಹುರ ಅಥವಾ ಸೈನಸ್. ಸೋಂಕಿನ ಕಾರಣ ಇವುಗಳಲ್ಲಿ ಉರಿಯೂತವುಂಟಾಗಿ (ಸೈನುಸೈಟಿಸ್) ಕೀವು ಸಂಗ್ರಹವಾಗಿ ನಾನಾ ಸಮಸ್ಯೆಗಳಿಗೆ ಎಡೆ ಕೊಡುತ್ತದೆ. ಪ್ರಾಣಾಯಾಮವು ಇಂತಹ ಕೀವು, ಲೋಳೆ ಸಂಗ್ರಹವನ್ನು ತಪ್ಪಿಸುತ್ತದೆ.
  • ಆಸ್ತಮಾ ಇರುವವರ ಶ್ವಾಸಕೋಶಗಳಲ್ಲಿ ಸಂಗ್ರಹವಾಗಿರುವ ಕಫವನ್ನು ಹೊರದೂಡಲೂ ಪ್ರಾಣಾಯಾಮ ನೆರವಾಗುತ್ತದೆ.
  • ಪ್ರಾಣಾಯಾಮವು ನಮ್ಮ ಮನಸ್ಸಿನ ಮೇಲೆ ಪ್ರಭಾವ ಬೀರಿ ಆತಂಕ ಕಡಿಮೆ ಮಾಡುವುದರಿಂದ ಅದು ರಕ್ತದ ಒತ್ತಡವನ್ನೂ ನಿಗ್ರಹಿಸಬಲ್ಲದು. ನಮಗೆ ಇನ್ನೂ ಸ್ಪಷ್ಟವಾದ ಇತರ ವಿಧಾನಗಳ ಮೂಲಕವೂ ಮೂಲಕವೂ ಮಾಡುವುದರಿಂದ ಅದು ರಕ್ತದ ಒತ್ತಡವನ್ನೂ ನಿಗ್ರಹಿಸಬಲ್ಲದು. ನಮಗೆ ಇನ್ನೂ ಸ್ಪಷ್ಟವಾದ ಇತರ ವಿಧಾನಗಳ ಮೂಲವೂ ಅತಿರಕ್ತದೊತ್ತಡವನ್ನು ನಿಗ್ರಹಿಸುತ್ತಿರಬಹುದು.
  • ಪ್ರಾಣಾಯಾಮವು ಮಾಂಸಲಿಯ (ಪ್ಯಾನ್ ಕ್ರಿಯಾಸ್) ಮೇಲೆ ಪ್ರಭಾವ ಬೀರಿ ಇನ್ಸುಲಿನ್ ಉತ್ಪಾದನೆಯನ್ನು ಚುರುಕುಗೊಳಿಸುತ್ತದೆ ಎನ್ನಲಾಗಿದೆ. ಸಂಧಿವಾತ, ತಲೆಗೂದಲು ಉದುರುವುದು, ಬಾಲನೆರೆ, ಕಣ್ಣಿನ ಪರೆ (ಕ್ಯಾಟರಾಕ್ಟ್) ಇತ್ಯಾದಿಗಳನ್ನು  ನಿಗ್ರಹಿಸಿ ರೋಗನಿರೋಧಕ ಶಕ್ತಿ (ಇಮ್ಯೂನಿಟಿ) ಯನ್ನು ಹೆಚ್ಚಿಸುತ್ತದೆ ಎನ್ನಲಾಗಿದೆ.

ಪ್ರಾಣಾಯಾಮವು ಮನುಕುಲಕ್ಕೆ ಸನಾತನ ಭಾರತದ ಕೊಡುಗೆ. ಪ್ರಾಣಾಯಾಮವು ನಮ್ಮ ಜೀವನ ಶೈಲಿಯಲ್ಲಿ ಹಾಸುಹೊಕ್ಕಾಗಬೇಕು. ಗುರುಗಳ ನಿರ್ದೇಶನದಲ್ಲಿ ಪ್ರಾಣಾಯಾಮ ಕಲಿತು ನಿಯಮಿತವಾಗಿ ಪರಿಪಾಲಿಸುವುದರಿಂದ ಶಕ್ತಿವರ್ಧನೆ, ಕಾಂತಿ ವರ್ಧನೆ ಹಾಗೂ ಜೀವವರ್ಧನೆಯಾಗುತ್ತದೆ.

ವೈದ್ಯಸಾಹಿತಿಯಾಗಿನನ್ನಅನುಭವ
ನಕಲಿ ವೈದ್ಯರ ಹಾವಳಿಗೆ ಬ್ರೇಕ್ ಹಾಕಬಹುದು
– ಡಾ|| ಎಂ.ಕೆ. ಕೃಷ್ಣಭಟ್ 

೧೯೭೫ರಲ್ಲಿ ನನ್ನ ವೈದ್ಯವೃತ್ತಿಯನ್ನು ಪ್ರಾರಂಭಿಸಿದ ಕೆಲವೇ ವರ್ಷಗಳಲ್ಲಿ, ನಾನು ವೈದ್ಯಕೀಯ ಸತ್ಯವನ್ನು ಮನಗಂಡೆ-ಅದೇನೆಂದರೆ Prevention is better than cure. ಕಾಯಿಲೆಗಳನ್ನು ಗುಣಪಡಿಸುವ ವೈದ್ಯನಿಗಿಂತ ಕಾಯಿಲೆ ಬರದಂತೆ ತಡೆಯುವ ವೈದ್ಯನೆ, ಉತ್ತಮ ವೈದ್ಯ ಎಂದು ನನಗೆ ಮನವರಿಕೆಯಾಯಿತು. ಆಧುನಿಕ ವೈದ್ಯಶಾಸ್ತ್ರದ ಬಗ್ಗೆ, ಅರೋಗ್ಯಶಾಸ್ತ್ರದ ಬಗ್ಗೆ ಸರಳ ಚಿಕಿತ್ಸೆಗಳ ಬಗ್ಗೆ ಜನಸಾಮಾನ್ಯರಿಗೆ ತಿಳಿಸಿ ಹೇಳಬೇಕು. ಜನ ಸಾಮಾನ್ಯರಲ್ಲಿ ಆರೋಗ್ಯದ ಬಗ್ಗೆ ಇರಬಹುದಾದ ಅಜ್ಞಾನ, ಅಲ್ಪಜ್ಞಾನ, ತಪ್ಪು ಜ್ಞಾನ, ಅತಿರೇಕದ ಜ್ಞಾನಗಳನ್ನೆಲ್ಲ ಹೋಗಲಾಡಿಸಿದರೆ ಜನಸಾಮಾನ್ಯರಲ್ಲಿ ಮಡುಗಟ್ಟಿರುವ ಅವೈಜ್ಞಾನಿಕ ನಂಬಿಕೆಗಳನ್ನು ಕೆಲವು ಅಪಾರ್ಥಗಳನ್ನು ಕಿತ್ತುಹಾಕಿದರೆ, ಅನೇಕ ರೋಗಗಳನ್ನು ತಡೆಯಬಹುದು. ರೋಗಗಳೊಂದಿಗೆ ಬದುಕಲು ಕಲಿಸಬಹುದು. ಜೊತೆಎ ನಕಲಿ ವೈದ್ಯರ ಹಾವಳಿಗೆ ಬ್ರೇಕ್ ಹಾಕಬಹುದು ಎಂದು ನನಗೆ ತಿಳಿಯಿತು. ಆರೋಗ್ಯಶಾಸ್ತ್ರದ ಬಗ್ಗೆ ಅನೇಕ ಕರಪತ್ರಗಳನ್ನು ಆಗಾಗ ಪ್ರಕಟಿಸಿದೆ. ಶಾಲೆಕಾಲೆಜುಗಳ ವಿದ್ಯಾರ್ಥಿಗಳಿಗೆ ಆರೋಗ್ಯಶಾಸ್ತ್ರದ ‘ಸಂಪನ್ಮೂಲ ವ್ಯಕ್ತಿಯಾಗಿ’ ಹೇಗೆ ಆರೋಗ್ಯ ಶಾಸ್ತ್ರವನ್ನು ಹನಿಕನ್ನಡದಲ್ಲಿ ಸರಳವಾಗಿ ತಿಳಿಸಿದೆ. ಮುಂದೆ ಬರೆಯುವುದು ಹಾಗೂ ತಿಳಿಸುವುದು ಇವೆಲ್ಲ ನನ್ನ ಪ್ರವೃತ್ತಿಯಾಗಿ, ಪ್ರವೃತ್ತಿಯೇ ಶಕ್ತಿಯಾಗಿ ೧೯೯೦ರಲ್ಲಿ ನಾನು ‘ಆರೋಗ್ಯ ಸಂಪತ್ತನ್ನು’ ಎನ್ನುವ ವೈದ್ಯ ವಿಜ್ಞಾನ ಮಾಸಪತ್ರಿಕೆಯನ್ನು ಸಂಪಾದಿಸಿ ಪ್ರಕಟಿಸಿದೆ ಕನ್ನಡ ವೈದ್ಯ ಸಾಹಿತ್ಯ ದಿಗ್ಗಜರಾದ ಡಾ|ಸಿ.ಆರ್. ಚಂದ್ರಶೇಖರ್, ಡಾ| ಅಶೋಕ ಪೈ, ಡಾ| ಸ.ಜ.ನಾಗಲೋಟಿಮಠ, ಡಾ| ಚಂದ್ರಪ್ಪ ಗೌಡ ಮೊದಲಾದ ಸಾಹಿತಿಗಳ ಪುಸ್ತಕಗಳನ್ನು ಕಲೆ ಹಾಕಿ ಓದಲು ಪ್ರಾರಂಭಿಸಿದೆ. ಗಮನವಾದ ವಿಷಯಗಳನ್ನು ಅಡುಭಾಷೆಯಲ್ಲಿ ಸರಳವಾಗಿ ನಿರೂಪಿಸುವ, ಬರೆಯುವ ಕಲೆಯನ್ನು ಕರಗತ ಮಾಡಿಕೊಂಡೆ. ನನ್ನ ಪತ್ರಿಕೆಯಲ್ಲಿ ‘ಸಂಪಾದಕರ ಸ್ಪಂದನ’ ಎನ್ನುವ ಅಂಕಣ ವಿಶೇಷ ಆಚರಣೆ ಆಗಿತ್ತು. ಕರ್ನಾಟಕದಲ್ಲಿ ಪ್ರಕಟಗೊಳ್ಳುವ ಎಲ್ಲ ಸುದ್ದಿ ಪತ್ರಿಕೆಗಳಲ್ಲಿ, ಆರೋಗ್ಯಶಾಸ್ತ್ರದ ಬಗ್ಗೆ ಪ್ರಕಟವಾಗಿರುವ ಅತಿರೇಕದ ಸುದ್ದಿಗಳು, ಪ್ರಚೋದನೆ ಸುದ್ದಿಗಳು, ಭಯಭೀತಿ ಹುಟ್ಟಿಸುವ ಸುದ್ದಿಗಳು, ತಪ್ಪು ಮಾಹಿತಿಗಳು ಸ್ವಲ್ಪ ಮಾಹಿತಿಗಳು, ಇವುಗಳನ್ನೆಲ್ಲ ಕಲೆಹಾಕಿ ಸುದ್ದಿಗಳು, ತಪ್ಪು ಮಾಹಿತಿಗಳು ಸ್ವಲ್ಪ ಮಾಹಿತಿಗಳು, ಇವುಗಳನ್ನೆಲ್ಲ ಕಲೆಹಾಕಿ ಅವುಗಳ ಬಗ್ಗೆ ಜನರಿಗೆ ಸರಿಯಾದ ವಿಷಯ ಮಾಹಿತಿಯಾಗುವ ದಿಟ್ಟ-ನೇರ ಲೇಖನವನ್ನು ಸ್ಪಂದನ ಅಂಕಣದಲ್ಲಿ ಪ್ರಕಟಿಸುತ್ತೇವೆ. ಸಂದೇಹ ಸಮಾಧಾನ ಅಂಕಣ ಓದುಗರ ಅಚುಮೆಚ್ಚು ಅಂಕಣವಾಗಿದೆ. ಜನಸಾಮಾನ್ಯರ ಆರೋಗ್ಯ ಸಮಸ್ಯೆಗಳಿಗೆ ಸಮರ್ಪಕ ವಿವರಣೆಗಳನ್ನು ನೀಡಿ ಜೊತೆಗೆ ಸರಳ ಚಿಕಿತ್ಸೆ ಮುನ್ನೆಚ್ಚರಿಕೆಯ ಬಗ್ಗೆಯೂ ತಿಳಿಸುತ್ತೇವೆ.

ಖ್ಯಾತ ವೈದ್ಯಸಾಹಿತಿಗಳ ಲೇಖನಗಳನ್ನು ಅವರ ಪುಸ್ತಕಗಳಿಂದ ಆಯ್ದು ಪತ್ರಿಕೆಯ ಮುಖಪುಟದಲ್ಲಿ ಪ್ರಕಟಿಸುತ್ತೇವೆ. ಅನೇಕ ಯುವ ವೈದ್ಯರಿಗೆ ವೈದ್ಯಸಾಹಿತ್ಯ ಬರೆಯಲು ಪ್ರೇರೇಪಿಸಿದ್ದೇವೆ. ಅವರಲ್ಲಿ ಕೆಲವರು ಉತ್ತಮ ವೈದ್ಯ ಲೇಖಕರೂ ಆಗಿದ್ದಾರೆ.

ನಾನು ಪತ್ರಿಕೆಯ ಸಂಪಾದಕನಾದ ಮೇಲೆ ನನಗೆ ದೊರೆತ ಬಹಳ ದೊಡ್ಡ ಅವಕಾಶವೆಂದರೆ ಕನ್ನಡದ ದೊಡ್ಡ ದೊಡ್ಡ ಸಾಹಿತಿಗಳ ಪರಿಚಯ, ಒಡನಾಟ, ಭಾಗ್ಯ. ಕನ್ನಡ ವೈದ್ಯಸಾಹಿತ್ಯ ಪರಿಷತ್ತಿನ ಸದಸ್ಯನಾಗಿ ನನಗೆ ಒಂದು ಧನ್ಯತೆಯ ಭಾವನೆ ಮೂಡಿದೆ. ದೊರೆತ ಪ್ರಶಸ್ತಿ, ಸನ್ಮಾನಗಳು ನಾವು ರೋಗಿಗಳಿಗೆ ನೀಡುವ ಟಾನಿಕ್ ರೀತಿ ನನಗೆ ಹೊಸ ಹುರುಪು, ಉತ್ಸಾಹ, ತುಂಬಿ ಇನ್ನೂ ಹೆಚ್ಚಿನ ಕಾರ್ಯಮುಖಿಯಾಗುವ ಹಾಗೆ ಮಾಡಿವೆ.

ಹೆಚ್ಚಿನ ವೈದ್ಯಮಿತ್ರರು ನನ್ನನ್ನು ಪ್ರೋತ್ಸಾಹಿಸಿದರು, ನನ್ನ ಬರಹಗಳನ್ನು ಮೆಚ್ಚಿದರು. ಸಲಹೆ ಸೂಚನೆಗಳನ್ನು ನೀಡಿದರು. ಇವೆಲ್ಲ ನನ್ನ ಪ್ರವೃತ್ತಿಯ ಹೆಮ್ಮೆಯ ವಿಷಯಗಳಾಗಿ ನನ್ನ ಮನದಾಳದ ನೋವೂ ಇದೆ. ನನ್ನ ಈ ಪತ್ರಿಕೆಯನ್ನು ಸಮಸ್ತ ಕನ್ನಡಿಗರ ಮೇಲಿನ ‘ಆರೋಗ್ಯ ದೀಪವನ್ನಾಗಿಸುವ ನನ್ನ ಕನಸು ನನಸಾಗಲಿಲ್ಲ. ನನ್ನ ವೃತ್ತಿ ಮತ್ತು ಪ್ರವೃತ್ತಿಗಳ ಸೆಣಸಾಟದಲ್ಲಿ ವೃತ್ತಿಗೆ ಹೆಚ್ಚು ಅಂಟಿಕೊಂಡೆ. ಪ್ರವೃತ್ತಿಯನ್ನು ಬೆಳೆಸಲಾಗಲಿಲ್ಲ. ಪೋಷಿಸಲಾಗಲಿಲ್ಲ. ನನ್ನ ಪತ್ರಿಕೆಯು PCM ಆಗಿ ಬಳಲಹತ್ತಿದುದು ನನ್ನ ಮನಸ್ಸಿಗೆ ಚುಚ್ಚುತ್ತಿರುತ್ತದೆ. ನನ್ನ ಹೃದಯಕ್ಕೆ ಬಹಳ ನೋವು ತಂದ ವಿಷಯವೆಂದರೆ ಇಂದಿನ ಸುದ್ದಿ ಪತ್ರಿಕೆಗಳು, ಟಿವಿ ಮಾಧ್ಯಮಗಳು ಆರೋಗ್ಯದ ಬಗ್ಗೆ ಕಾಯಿಲೆಗಳ ಬಗ್ಗೆ ಮೂಢ ನಂಬಿಕೆಗಳ ಬಗ್ಗೆ, ಅತಿರೇಕದ ತಪ್ಪು ಮಾಹಿತಿಗಳನ್ನು ಅಬ್ಬರದಿಂದ ನಿರಂತರ ಪ್ರಚಾರ ಮಾಡುತ್ತಿವೆ. ಈ ಮಾಧ್ಯಮಗಳ ಹಣ ಗಳಿಕೆಯ ದಾಹದಿಂದ ಜನಸಾಮಾನ್ಯರು ಇನ್ನೂ ಆರೋಗ್ಯ ಮೂಢರಾಗುತ್ತಿದ್ದಾರೆ ಮೂರ್ಖರಾಗುತ್ತಿದ್ದಾರೆ, ಇವುಗಳಿಗೆ ತಡೆ ನೀಡಬೇಕಾದರೆ ವೈದ್ಯಸಾಹಿತಿಗಳು ಒಟ್ಟಾಗಿ ಸಮರ ಸಾರಬೇಕು. ಇವೆಲ್ಲವುಗಳನ್ನು ಸೆನ್‌ಸಾರ್ ಮಾಡಿ ಪ್ರಕಟಿಸುವ ವ್ಯವಸ್ಥೆ ಆಗಬೇಕಾಗಿದೆ.

ನನ್ನ ಮನದಾಳದ ಅನಿಸಿಕೆಗಳನ್ನು ಹಂಚಿಕೊಳ್ಳಲು ಅವಕಾಶ ನೀಡಿದ ಡಾ|| ಸಿ.ಆರ್. ಚಂದ್ರಶೇಖರ್ ಮತ್ತು ವೈದ್ಯ ಸಾಹಿತ್ಯ ಪರಿಷತ್ತಿಗೆ ಅನಂತ ಅನಂತ ಧನ್ಯವಾದಗಳು.

* * *