ಜನಿಸಿದ ಕೂಸುಗಳಲ್ಲಿ ನೂರರಲ್ಲಿ ೩೦ ಅಪಕ್ವ ಶಿಶುಗಳು. ತೂಕ ೧.೮ ಕೆ.ಜಿ. ಗಿಂತ ಕಡಿಮೆ ಇರುತ್ತವೆ. ಇವರಲ್ಲಿ ಸಾಮಾನ್ಯವಾಗಿ ಕಾಮಾಲೆ ಕಂಡುಬರುತ್ತದೆ. ಇಂಥ ಮಕ್ಕಳನ್ನು ನಿಗಾ ಘಟಕದಲ್ಲಿಟ್ಟು ಆರೈಕೆ ಮಾಡಬೇಕು. ಈ ರೀತಿ ಶಿಶುಗಳು ಜನನಕ್ಕೆ ತಾಯಿಯಲ್ಲಿ ಈ ಕೆಳಗಿನ ಕಾರಣಗಳನ್ನು ಗುರುತಿಸಬಹುದು.

. ತಾಯಿಯ ಅನಾರೋಗ್ಯ : ಪೌಷ್ಠಿಕಾಂಶದ ಕೊರತೆ, ತಾಯಿಯಲ್ಲಿ ರಕ್ತದ ಕೊರತೆ ರಕ್ತದೊತ್ತಡ, ಕಾಮಾಲೆ, ಬಸುರಿ ಇರುವಾಗ ಹೆರಿಗೆಗೆ ಮುಂಚೆ ವಿಷಯುಕ್ತ ಔಷಧ ಬಹಳ ದಿನಗಳವರೆಗೆ ಸೇವಿಸುವುದು.

. ನಂಜು ಬಸಿರು : ಚೊಚ್ಚಲ ಬಿಸಿರಿನಲ್ಲಿ ಬರುವ ಈ ಕಾಯಿಲೆ ಬಡವರಲ್ಲಿ ಸಾಮಾನ್ಯವಾಗಿ ಕಾಣುತ್ತವೆ. ಕೈಕಾಲು ಊತ, ಮುಖದಲ್ಲೂ ಊತ. ಹೆಚ್ಚಾದ ರಕ್ತದೊತ್ತಡ, ಮೂತ್ರದಲ್ಲಿ ಆಲ್ಬುಬಿನ್ ವಿಜರ್ಸನೆ, ಸೆಳೆತ, ನಂಜುಬಸಿರಿನ ಲಕ್ಷಣಗಳು.

. ದಿನ ತುಂಬುವ ಮೊದಲೇ ಪ್ರಸವ : ಅಕಾಲಿಕ ಹೆರಿಗೆಯಾಗುವುದು. ಮನೆಯಲ್ಲಿ ತಾಯಿಗೆ ಮಾನಸಿಕ ಹಿಂಸೆ ಕೊಡುತ್ತಿದ್ದರೆ ಉದಾ : ಎರಡೂ ಹೆಣ್ಣು ಮಕ್ಕಳಿದ್ದರೆ ಗಂಡು ಹಡೆಯಬೇಕು, ಇಲ್ಲವಾದಲ್ಲಿ ನಿನ್ನ ಮನೆ ಸೇರಿಸುವುದಿಲ್ಲ. ನಾನು ಮರು ಮದುವೆಯಾಗುತ್ತೇನೆ ಎಂದೆಲ್ಲ ಹೇಳಿದಾಗ ಬಸುರಿಗೆ ಒತ್ತಡ ಉಂಟಾಗುತ್ತದೆ. ಗರ್ಭಚೀಲದಲ್ಲಿ ನೀರು ಜಾಸ್ತಿಯಾಗಿ ತುಂಬಿದ್ದರೆ ಹೊಟ್ಟೆ ಜೋಲು ಬೀಳುತ್ತದೆ.

. ಅವಳಿ ತ್ರಿವಳಿ : ೨-೩ ಮಕ್ಕಳು ಇದ್ದಾಗ ತಾಯಿಗೆ ಆಹಾಋದ ಕೊರತೆ ಉಂಟಾಗಿ ಕ್ಷೀಣ ಮಕ್ಕಳು ಹುಟ್ಟುವುದು ಸಹಜ. ಇದಕ್ಕೆ ಅನುವಂಶಿಕತೆಯೂ ಒಂದು ಕಾರಣ.

. ಜಲಾಯ ಕೊರತೆ : (Oligo Thydramnias) ಅಂದರೆ ತಾಯಿಯ ಗರ್ಭ ಚೀಲದಲ್ಲಿ ನೀರಿನ ಕೊರತೆ ಇರುವುದು.

. ತಾಯಿಯ ರಕ್ತದ ಗುಂಪು : ಕೆಲವು ಸಂದರ್ಭದಲ್ಲಿ ತಾಯಿಯ ರಕ್ತದ ಗುಂಪಿನಲ್ಲಿ Rh factor (-ve) Blood group ಇದ್ದಾಗ H.I.V. ಸೋಂಕು ಇದ್ದಾಗಲೂ premature delivery ಆಗಬಹುದು.

ನವಜಾತ ಶಿಶು (ಅಪಕ್ವ)ವಾಗಿದ್ದರೆ ಮೈಮೇಲಿರುವ ಬಿಳೀಹಿಟ್ಟನ್ನು (Vernin) ಮೆದುವಾದ ಬಟ್ಟೆಯಿಂದ ಸಾವಕಾಶವಾಗಿ ಒರೆಸಿ ತೆಗೆದು ಮಗುವನ್ನು ಬೆಚ್ಚಗಿಡಬೇಕು. ಮೂಗು ಗಂಟಲನ್ನು, ಹೀರುವ ಟ್ಯೂಬಿನಿಂದ ಸ್ವಚ್ಛಗೊಳಿಸಬೇಕು ಮಗು ತಾಯಿಯ ಹೊಟ್ಟೆಯಿಂದ (ಜರಾಯ) Amni  ಕುಡಿದಿದ್ದರೆ ಹೊಟ್ಟೆ ತೊಳೆಯಬೇಕು. ಒಮ್ಮೊಮ್ಮೆ ಮಗು ಹೊಟ್ಟೆಯಿಲ್ಲಿರುವಾಗಲೇ ಕಕ್ಕಸ್ಸು (Meconiam) ನೀರು ಕುಡಿಯುತ್ತದೆ. ಅದಕ್ಕೆ (Meconiam aspiration) ಎನ್ನುತ್ತೇವೆ. ಹೊಟ್ಟೆಯಲ್ಲಿ (Normal saline) ನಿಂದ ತೊಳೆಯಬೇಕು.

ಮಗುವಿಗೆ ಗುದದ್ವಾರವಿದೆಯೇ ಎಂದು ತಿಳಿಯಲು ನಮ್ಮ ಚಿಕ್ಕ ಕೈಬೆರಳಿಗೆ Gloves ಹಾಕಿ ಬೆರಳು ತೂರಿಸಿ ಪರೀಕ್ಷಿಸಬೇಕು.

ಈ ಮಗುವಿಗೆ ಮತ್ತಷ್ಟು ಆರೈಕೆಯನ್ನು ಆಸ್ಪತ್ರೆಯಲ್ಲಿ ಮಾಡಲಾಗುತ್ತದೆ. ಶಾಖದ ಪೆಟ್ಟಿಗೆಯಲ್ಲಿಡಬೇಕಾಗುತ್ತದೆ.

* * *