ನಮಗ್ಯಾರಿಲ್ಲಾ || ನಮಗ್ಯಾರಿದ್ದರೇನಯ್ಯ ಮಹಲಿಂಗ ಪ್ರಭುವೆ || ದಾರಿ ಸುಖವಿಲ್ಲಾ | ಇಂಥಾ ನೀರಮೇಲಣ ಗುಳ್ಳೆ ನಿಜವಿಲ್ಲೋ ಪ್ರಭುವೇ | ನಮಗ್ಯಾರಿಲ್ಲಾ || ಪ || ತಾಯಿ ತಂದೆಗಳಿಲ್ಲಾ ಬಂಧು ಬಳಗವಿಲ್ಲಾ | ಇಂಥ ಪರದೇಶಿ ನಾನಾದೆ ಮಹಲಿಂಗ ಪ್ರಭುವೆ || ೧ || ಅಡವೀಲಿ ಮನೆಮಾಡಿ ಗಿಡಕೆ ತೊಟ್ಟಿಲಕಟ್ಟಿ | ಇಂಥಾ ಸುಡುಗಾಡು ಬಟಬೈಲುಧಿಕ್ಕಾರೊಶಿವನೇ ನಮಗ್ಯಾರಿಲ್ಲಾ || ೨ || ವೃಕ್ಷಾ ಒಳ್ಳೇದೆಂದು ನೆರಳೀಗೇ ನಾಹೋದ || ವೃಕ್ಷಾದ ನೆರಳೋಗಿ || ಬೆಂಕಿಕೆಂಡವಾಯಿತೋ ಶಿವನೆ || ೩ || ಭಾವಿ ಒಳ್ಳೇದೆಂದು ಭ್ರಮಿಸಿ ನೀರಿಗೆ ಹೋದೆ || ಭಾವೀಯ ಜಲಬತ್ತಿ ಬಟ್ಟ ಬಯಲೋ ಶಿವನೇ ನಮಗ್ಯಾರಿಲ್ಲಾ || ೪ || ಕಂಚಿಗೆ ಧ್ವನಿಯುಂಟು ಧ್ವನಿಗೆ ವತ್ತೇಯುಂಟು | ನಾನಿಲ್ಲಿ ಕೂಗಿದ ಕೂಗು ಚಿದ್ಘಗನಕ್ಕೆ ಕೇಳಿತೋ ಶಿವನೇ || ನಮಗ್ಯಾರಿಲ್ಲಾ || ೫ ||