ಜನನ : ೫-೬-೧೯೪೭- ಹಾಸನ ಜಿಲ್ಲೆಯ ಯಡತರೆಯಲ್ಲಿ

ಮನೆತನ :  ಕೃಷಿಕ ಮನೆತನ – ತಂದೆ ಕೃಷ್ಣೇಗೌಡ – ತಾಯಿ ಕೆಂಚಮ್ಮ.

ಗುರುಪರಂಪರೆ : ಸ್ವಯಂ ಪ್ರತಿಭೆಯಿಂದ ಗಾಯನದಲ್ಲಿ ಪರಿಶ್ರಮ. ನಾಟಕ ಕ್ಷೇತ್ರದಲ್ಲಿದ್ದು ಸಾಕಷ್ಟು ಅನುಭವ. ಹಿರಿಯ ಸುಗಮ ಸಂಗೀತ ಗಾಯಕರ ಗಾಯನ ಕೇಳಿ ಅವರ ಅನುಕರಣೆ. ಲೌಕಿಕ ವಿದ್ಯಾಭ್ಯಾಸದಲ್ಲಿ ವಿಜ್ಞಾನಶಾಸ್ತ್ರ ಪದವೀಧರರು ಹಾಗೂ ಕರ್ನಾಟಕ ಆಡಳಿತ ಸೇವಾ ಪದವಿ ಗಳಿಸಿದ್ದಾರೆ.

ಸಾಧನೆ : ಬಾಲ್ಯದಿಂದಲೂ ನಾಟಕರಂಗದಲ್ಲಿ ಆಸಕ್ತಿ ಹೊಂದಿ ಅನೇಕ ವಿಧದ ಪಾತ್ರ ನಿರ್ವಹಣೆ – ಗಾಯಕ ನಟನಾಗಿ – ನಿರ್ದೇಶಕನಾಗಿ ದುಡಿಮೆ. ಅಲ್ಲಿನ ರಂಗಗೀತೆಗಳ ಮೂಲಕ ಕನ್ನಡ ಗೀತೆಗಳ ಗಾಯನವನ್ನು ರೂಢಿಸಿಕೊಂಡವರು. ಮುಂದೆ ಸಿ. ಅಶ್ವಥ್, ರತ್ನಮಾಲಾ ಪ್ರಕಾಶ್ ಅವರ ತಂಡದೊಡನೆ ಅನೇಕ ಕಾರ್ಯಕ್ರಮಗಳಲ್ಲಿ ಪಾಲ್ಗೊಂಡಿದ್ದಾರೆ. ಆಕಾಶವಾಣಿ ದೂರದರ್ಶನಗಳಲ್ಲೂ ಕಾರ್ಯಕ್ರಮ ಪ್ರಸಾರವಾಗಿದೆ. ಬಿಜಾಪುರದ ಪಟ್ಟದಕಲ್ಲು ಉತ್ಸವ, ನವರಸಪುರ ಉತ್ಸವ, ಮೈಸೂರು ದಸರಾ ಉತ್ಸವ, ಧ್ವನಿ ಸುಗಮ ಸಂಗೀತದ ಕೇಂದ್ರದ ಕಾವ್ಯ ಸೌರಭದಲ್ಲಿ ಕಾರ್ಯಕ್ರಮಗಳನ್ನು ನೀಡಿದ್ದಾರೆ. ಅನೇಕ ಧ್ವನಿ ಸುರುಳಿಗಳು ಹೊರಬಂದಿವೆ. ಅಮೆರಿಕಾದ ’ಅಕ್ಕ’ ಸಮ್ಮೇಳನದಲ್ಲಿ ಭಾಗವಹಿಸಿರುತ್ತಾರೆ. ಧ್ವನಿ ಸುಗಮ ಸಂಗೀತ ಕೇಂದ್ರದ ಸ್ಥಾಪಕರು. ತಮ್ಮದೆ ಆದ ಕರ್ನಾಟಕ ಸುಗಮ ಸಂಗೀತ ಪರಿಷತ್ತನ್ನು ಸ್ಥಾಪಿಸಿ ತನ್ಮೂಲಕ ಅನೇಕ ರಾಜ್ಯ ಮಟ್ಟದ ಸಮ್ಮೇಳನಗಳನ್ನು ರಾಜ್ಯದ ಹಲವೆಡೆ ನಡೆಸಿದ್ದಾರೆ. ಅನೇಕ ಟಿ. ವಿ. ಧಾರಾವಾಹಿಗಳಲ್ಲೂ ಪಾತ್ರಗಳನ್ನು ನಿರ್ವಹಿಸುತ್ತಿದ್ದಾರೆ.

ಕನ್ನಡ ಮತ್ತು ಸಂಸ್ಕೃತಿ ಇಲಾಖಾ ನಿರ್ದೇಶಕರಾಗಿ ಸಾಕಷ್ಟು ಕಾಲ ಸೇವೆ. ಈಗ ತಲೆ ಎತ್ತಿ ನಿಂತಿರುವ ಕನ್ನಡ ಭವನದ ರೂವಾರಿ.

ಪ್ರಶಸ್ತಿ – ಸನ್ಮಾನ : ದಸರಾ ಪ್ರಶಸ್ತಿ, ನಾಟಕ ಅಕಾಡೆಮಿ ಪ್ರಶಸ್ತಿ, ೧೯೯೮-೯೯ ಕರ್ನಾಟಕ ಸಂಗೀತ ನೃತ್ಯ ಅಕಾಡೆಮಿ ಪ್ರಶಸ್ತಿ, ಸರ್.ಎಂ. ವಿಶ್ವೇಶ್ವರಯ್ಯ ಪ್ರಶಸ್ತಿ, ಎಸ್.ಕೆ. ಕರೀಂಖಾನ್ ಪ್ರಶಸ್ತಿ, ಕೆಂಪೇಗೌಡ ಪ್ರಶಸ್ತಿ ರಾಜ್ಯೋತ್ಸವ ಪ್ರಶಸ್ತಿಗಳು ಇವರಿಗೆ ಸಂದಿವೆ.