ಒಂದು – ಶಾಸ್ತ್ರಿಗಳ ಜೀವನ ವಿವರ

ಜನನ: ೧೮೯೩

ಜನ್ಮಸ್ಥಳ: ಏಳುಬೆಂಚೆ (ಬಳ್ಳಾರಿ – ತಾಲೂಕು)

ತಂದೆತಾಯಿ: ಶ್ರೀ ನಯನಯ್ಯ ಮತ್ತು ಶ್ರೀಮತಿ ನೀಲಮ್ಮ

ವಿದ್ಯಾಭ್ಯಾಸ: ನಾಲ್ಕನೇ ತರಗತಿಯವರೆಗೆ, ಏಳುಬೆಂಚೆಯಲ್ಲಿ ಬಳ್ಳಾರಿ, ಕಂಪ್ಲಿ, ಹೊಸಪೇಟೆ, ಕೊಪ್ಪಳಗಳಲ್ಲಿ ಸಂಸ್ಕೃತ
ಅಧ್ಯಯನ, ೧೯೨೫ರಲ್ಲಿ ಮದ್ರಾಸ್‌ ವಿಶ್ವವಿದ್ಯಾಲಯ ಉಭಯಭಾಷಾ ಕನ್ನಡ – ಸಂಸ್ಕೃತ ವಿದ್ವಾನ್‌ ಪರೀಕ್ಷೆಯ ಉತ್ತೀರ್ಣ, ೧೯೨೫ರಲ್ಲಿ, ‘ಸಾಂಖ್ಯತೀರ್ಥ’ ಮತ್ತು ‘ಸರ್ವದರ್ಶನ ತೀರ್ಥ’ (Master of Indian Philosophy) ಕಲಕತ್ತಾ ಸಂಸ್ಕೃತ ಅಸೋಷಿಯೇಷನ್‌ ದಿಂದ ಸ್ನಾತಕೋತ್ತರ ಪದವಿ (ಈ ಪದವಿ ಪಡೆದ ಮೊದಲ ಕನ್ನಡಿಗ).

ವಿವಾಹ: ೧೯೧೬ ಕಂಪ್ಲಿಯ ಮರೆಮ್ಮನವರೊಂದಿಗೆ

ವೃತ್ತಿ: ಏಳುಬೆಂಚೆಯ ಶಾಲೆಯಲ್ಲಿ (ಅನಧಿಕೃತ) ಕನ್ನಡ ಶಿಕ್ಷಕರು ಬಳ್ಳಾರಿ ವಾಡ್ಲಾ ಪ್ರೌಢಶಾಲೆಯಲ್ಲಿ ಸಂಸ್ಕೃತ ಉಪಧ್ಯಾಯರು ೧೯೧೪ ಬೆಳಗಾವಿಯ ಲಿಂಗರಾಜ ಕಾಲೇಜಿನಲ್ಲಿ (೧೯೨೭) ಮದನಪಲ್ಲಿಯ ಥಿಯಾಸಾಫಿಕಲ್‌ ಕಾಲೇಜಿನಲ್ಲಿ (೧೯೨೮) (ಸಂಸ್ಕೃತ – ಕನ್ನಡ ಪ್ರಾಧ್ಯಾಪಕರು). ಬಳ್ಳಾರಿ ವೀರಶೈವ ಕಾಲೇಜಿನಲ್ಲಿ ಕನ್ನಡ ಪ್ರಾಧ್ಯಾಪಕರು (೧೯೪೫ – ೧೯೫೫) (೧೯೫೫ರಲ್ಲಿ ನಿವೃತ್ತಿ).

ಪತ್ರಿಕೆ: ಕರ್ಣಾಟಕ ಬಂಧು ಪ್ರಾರಂಭ (ಮುದ್ರಕರು, ಸಂಪಾದಕರು – ೧೯೨೫).

ಸಮ್ಮೇಳನದ ಅಧ್ಯಕ್ಷತೆ: ೧೯೩೩ರಲ್ಲಿ ಹುಬ್ಬಳ್ಳಿಯಲ್ಲಿ ನಡೆದ ೧೯ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನದ ಅಧ್ಯಕ್ಷತೆ. ೮ನೇ(ಅಖಿಲಭಾರತ) ಶಿವಾನುಭವ ಸಮ್ಮೇಳನ ಅಧ್ಯಕ್ಷತೆ(೧೯೫೧). ಸ್ವಾಗತ ಸಮಿತಿ ಅಧ್ಯಕ್ಷತೆ: ೧೯೩೮, ೧೯೫೯ರಲ್ಲಿ ಬಳ್ಳಾರಿಯಲ್ಲಿ ನಡೆದ ಸಾಹಿತ್ಯ ಸಮ್ಮೇಳನಗಳ ಸ್ವಾಗತ ಸಮಿತಿ ಅಧ್ಯಕ್ಷತೆ. ೧೯೪೨ ಮದ್ರಾಸ್‌ ವೀರಶೈವ ವಿದ್ಯಾವರ್ಧಕ ಸಂಘ ಬಳ್ಳಾರಿ ಕಾರ್ಯಕಾರಿ ಮಂಡಳಿ ಸದಸ್ಯ. ೧೯೫೧(ಏಪ್ರಿಲ್‌೨೫). ಬೆಂಗಳೂರಿನ ವಿದ್ವಜ್ಜನರಿಂದ ಮಾನಪತ್ರ ನಿಧಿಸಮರ್ಪಣೆಯೊಂದಿಗೆ ‘ಇಪ್ಪತ್ತನೆಯ ಶತಮಾನದ ಮಹಾಕವಿ’ ಮನ್ನಣೆ. ೧೯೫೩ರಲ್ಲಿ ಬಳ್ಳಾರಿಯಲ್ಲಿ ನಾಗರಿಕ ಕವಿಸನ್ಮಾನ ಹಾಗೂ ‘ಕಲಾ ಪ್ರಪೂರ್ಣ’ ಪ್ರಶಸ್ತಿ ಗೌರವ.

ಷಷ್ಠ್ಯಬ್ಧಿ ಸಮಾರಂಭ: ೧೨.೦೯.೧೯೫೬ ಬಳ್ಳಾರಿಯಲ್ಲಿ ‘ಶ್ರೀನಾಗೇಶ ಕವಿಪ್ರಶಸ್ತಿ’ ಅಭಿನಂದನ ಕೃತಿ ಸಮರ್ಪಣೆ.

ಪರೀಕ್ಷಕರು: ೧೯೫೨ರವರೆಗೆ ಬೆಂಗಳೂರು ಮೈಸೂರು ಸಂಸ್ಕೃತ ಕಾಲೇಜುಗಳಲ್ಲಿ ‘ಶಕ್ತಿ ವಿಶಿಷ್ಟಾದ್ವೈತ ಸಿದ್ಧಾಂತ’
ಪಠ್ಯಕೃತಿಯ ಪರೀಕ್ಷಕರು.

ಸ್ಮಾರಕ: ೧೯೬೬ರಲ್ಲಿ ತಾಯಿ ನೀಲಮ್ಮನವರ ಸ್ಮಾರಕವಾಗಿ ಚೇಳಗುರ್ಕಿಯಲ್ಲಿ ಒಂದು ಕೊಠಡಿಗೆ ಆರ್ಥಿಕ ನೆರವು.

ಪ್ರಶಸ್ತಿಪುರಸ್ಕಾರ: ಮೈಸೂರು ಒಡೆಯರ ಆಸ್ಥಾನ ವಿದ್ವಾಂಸ (೧೯೩೨) ಸಂಡೂರು ಘೋರ್ಪಡೆ ಅರಸರ ಆಸ್ಥಾನ ವಿದ್ವಾಂಸ (ವರ್ಷತಿಳಿದಿಲ್ಲ). ವೈ. ನಾಗೇಶಶಾಸ್ತ್ರಿಗಳ ಅಧ್ಯಕ್ಷತೆಯಲ್ಲಿ ಸಭೆ ಸೇರಿ ಬಳ್ಳಾರಿಯಲ್ಲಿ ಕರ್ನಾಟಕ ಸಂಘ ಸ್ಥಾಪನೆ.(೧೯೩೫) (ಮೊದಲ ಅಧ್ಯಕ್ಷರು, ವೈ.ಮಹಾಬಲೇಶ್ವರಪ್ಪ. ಈ ಕರ್ನಾಟಕ ಸಂಘವೇ ಬಳ್ಳಾರಿ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತು ಎಂದಾಯಿತು). ಮದ್ರಾಸ್‌ ವೀರಶೈವ ವಿದ್ಯಾವರ್ಧಕ ಸಂಘದ ರಜತ ಮಹೋತ್ಸವ ಆಚರಣೆಯ ಸ್ವಾಗತ ಸಮಿತಿ ಸದಸ್ಯ (೧೯೪೨) ಮದ್ರಾಸ್‌ ವೀರಶೈವ ವಿದ್ಯಾವರ್ಧಕ ಸಂಘ ಕಾರ್ಯಕಾರಿ ಸಮಿತಿ ಸದಸ್ಯ. ಅಖಿಲ ಭಾರತ ಶಿವಾನುಭವ ಸಂಸ್ಥೆಯ ಸಮ್ಮೇಳನಾಧ್ಯಕ್ಷತೆ, ಧಾರವಾಡ (೧೯೫೨). ಗವಿಸಿದ್ಧೇಶ್ವರನ ವಿಶ್ವಸ್ಥ ಮತ್ತು ಸಮಸ್ತ ಮಂಡಳಿ ಸನ್ಮಾನ, ಬಳ್ಳಾರಿ (೨೩. – ೦೩.೫೩). ಸಾಹಿತ್ಯ ಸಂಸ್ಕೃತಿ ಪ್ರಚಾರ ಶಾಖೆ, ಬೆಂಗಳೂರು (೧೯೫೫). ಧಾರವಾಡ ಮುರುಘಾಮಠದ ವೀರಶೈವ ವಿದ್ವತ್ಪರಿಷತ್ತಿನಿಂದ ‘ಪಂಡಿರತ್ನಂ’ ಬಿರುದು (೧೯೫೬). ಕಂಪ್ಲಿ ಕಲ್ಲುಮಠದಿಂದ ಸನ್ಮಾನ (೧೯೬೪). ಮೈಸೂರು ರಾಜ್ಯದ ಸಾಹಿತ್ಯ ಅಕಾಡೆಮಿ, ಬೆಂಗಳೂರು (ಅಕಾಡೆಮಿ ಗೌರವ – ೧೯೬೬). ಶ್ರೀ ಎರಿಸ್ವಾಮಿಗಳ ಜೀವಸಮಾಧಿ ಮಠ ಮತ್ತು ಚೇಳುಗುರ್ಕಿ ಗ್ರಾಮದ ಮಹಾದೈವದವರು ಸನ್ಮಾನ (೨೧.೦೮.೬೬). ಬಳ್ಳಾರಿ ಜಿಲ್ಲಾ ಸಾಹಿತ್ಯ ಸಮ್ಮೇಳನದ ಅಧ್ಯಕ್ಷತೆ (೧೯೬೯). ಬಳ್ಳಾರಿ ಜಿಲ್ಲಾ ಸಾಹಿತ್ಯ ಸಮ್ಮೇಳನದ ಸಮಾರೋಪ ಸಮಾರಂಭದ ಅಧ್ಯಕ್ಷತೆ(೧೯೭೦). ಜಿಲ್ಲಾ ಸಾಹಿತ್ಯ ಪರಿಷತ್ತು, ಕಾರ್ಯಕಾರಿ ಸಮಿತಿ, ವಿಶೇಷ ಆಮಂತ್ರಿತ (ಸಂಘ ಸ್ಥಾಪನೆಯಿಂದ ಶಾಸ್ತ್ರಿಗಳ ನಿಧನರಾಗುವವರೆಗೆ). ಗೌರವ ಡಾಕ್ಟರೇಟ್‌ ಕರ್ನಾಟಕ ವಿಶ್ವವಿದ್ಯಾಲಯ ಧಾರವಾಡ (೧೯೭೪). ಶ್ರೀ ರಾಮೇಶ ಧರ್ಮದರ್ಶಿಗಳ ಸಮಿತಿ, ಜೋಳದರಾಶಿಯ ಆತ್ಮೀಯ ಬಳಗದವರಿಂದ ಸನ್ಮಾನ (೧೪.೧೨.೭೪). ಸನ್ಮಾನ, ಬಳ್ಳಾರಿ ಸಾಹಿತ್ಯ” ಅಕಾಡೆಮಿ ೦೯.೦೪.೭೫ ಮೈಸೂರು ಸಾಹಿತ್ಯ ಅಕಾಡೆಮಿಯ ಗೌರವ ಸದಸ್ಯತ್ವ (೧೯೬೬). ‘ಶಿವಕವಿ’, ‘ಶಿವಾನುಭವಾಚಾರ್ಯ’, ‘ಕಳಾಪ್ರಪೂರ್ಣ’, ‘ಸಾಹಿತ್ಯ ಸುಧಾಕರ’ ವಿವಿಧ ಸಂಘಟನೆಗಳಿಂದ

ನಿಧನ: ೧೪.೦೫.೧೯೭೫.

 

ಎರಡು – ಶಾಸ್ತ್ರಿಗಳ ಸಮಗ್ರ ಸಾಹಿತ್ಯ

ಸ್ವತಂತ್ರ

ಅಷ್ಟಾವರಣ ವಿವೇಕ
ಪಂಚಾಚಾರ ಪ್ರಕಾಶಿಕ
ಷಟ್‌ಸ್ಥಲ ತತ್ವದರ್ಪಣ
ವೀರಶೈವ ಧರ್ಮಬೋಧಿನಿ
ಇಷ್ಟಲಿಂಗೋಪಾಸನಾಕ್ರಮ
ಶಿವಯೋಗ
ಶಕ್ತಿ ವಿಶಿಷ್ಟಾದ್ವೈತ ಸಿದ್ಧಾಂತ
ಶ್ರೀ ಬಸವಣ್ಣನವರ ವೀರಶೈವ ಸಮಾಜ
ಶ್ರೀ ಮುರುಘೇಂದ್ರ ಶಿವಯೋಗಿಗಳ ಸಹಜಾಚರಣೆ
ಶ್ರೀ ಮದ್ಭಗವದ್ಗೀತೆಯ ಬೋಧಾಮೃತ
ಶ್ರೀ ಗೀತೆಯ ಬೋಧಾಮೃತ
ಷಡ್ದರ್ಶನಗಳು

 

ಪದ್ಯ

ನೀತಿ ಚಿಂತಾಮಣಿ
ಜಯಚಾಮರಾಜೇಂದ್ರ ಪಟ್ಟಾಭಿಷೇಕ
ಯಶವಂತರಾಯ ಯಶೋವಿಲಾಸ
ದಯಾವೀರ (ಗಾಂಧಿ) ಚರಿತೆ
ಶ್ರೀ ಮೃತ್ಯುಂಜಯ ಸುಪ್ರಭಾತಂ
ಶ್ರೀ ಮದಥಣಿ ಶಿವಯೋಗಿ ಸುಪುಭಾತಂ
ಶ್ರೀ ಮೃತ್ಯುಂಜಯ ಭಕ್ತಿಗೀತೆಗಳು.
ಶ್ರೀ ಸಂಡೂರು ಕುಮಾರೇಶ್ವರ ಸುಪ್ರಭಾತಂ
ಇತರ ಪದ್ಯಗಳು.

 

ಪುರಾಣ

ಶ್ರೀ ಮರಿಶಿವಯೋಗೀಶ್ವರ ಪುರಾಣ (ಬಳ್ಳಾರಿ ಮರಿಸ್ವಾಮಿ ಮಠದ ಶ್ರೀಗಳ ಕುರಿತು).

ಶ್ರೀ ಗವಿಸಿದ್ಧೇಶ್ವರ ಪುರಾಣ (ಬಳ್ಳಾರಿ ಸಮೀಪದ ಹಿರೇಹಾಳು ಬೆಟ್ಟದಲ್ಲಿದ್ದ ಅವಧೂತನನ್ನು ಕುರಿತು).

ಶ್ರೀ ಫಲಹಾರೇಶ್ವರ ಪುರಾಣ (ಅವರದಿ ಮಠದ ಶ್ರೀಗಳ ಕುರಿತು).

ಶ್ರೀ ಅರ್ಧನಾರೀಶ್ವರ ಪುರಾಣ (ಗದಗಿನ ತೋಂಟದಾರ್ಯ ಮಠದ ಶ್ರೀಗಳನ್ನು ಕುರಿತು).

ಶ್ರೀ ಮದಥಣಿ ಸಿದ್ಧಲಿಂಗೇಶ್ವರ (ಪುರಾಣ ಅಥಣಿ ಗಚ್ಚಿನ ಮಠದ ಶ್ರೀಗಳನ್ನು ಕುರಿತು).

ಶ್ರೀ ಮೃತ್ಯುಂಜಯ ಲೀಲಾ ವಿಲಾಸ (ಧಾರವಾಡದ ಮರುಘಾಮಠದ ಶ್ರೀಗಳನ್ನು ಕುರಿತು).

ಶ್ರೀ ಗುರುಶಾಂತೇಶ್ವರ ಪುರಾಣ (ಶಲವಡಿಮಠದ ಶ್ರೀಗಳನ್ನು ಕುರಿತು).

ಶ್ರೀ ಶಿವಲಿಂಗೇಶ್ವರ ಪುರಾಣ (ನಿಡಸೋಸಿ ಮಠದ ಶ್ರೀಗಳನ್ನು ಕುರಿತು).

ಶ್ರೀ ಲೀಲಾಮೃತ ಪುರಾಣ (ಬಳ್ಳಾರಿ ಸಮೀಪದ ಚೇಳಗುರ್ಕಿ ಏರಿತಾತನನ್ನು ಕುರಿತು).

ಶ್ರೀ ಕರಿಬಸವೇಶ್ವರ ಪುರಾಣ (ಕುಷ್ಟಗಿ ಮಠದ ಶ್ರೀಗಳನ್ನು ಕುರಿತು).

ಶ್ರೀ ರುದ್ರಮುನೀಶ್ವರ ಪುರಾಣ (ಶಿರಾಳಕೊಪ್ಪದ ಅಗಡಿಮಟದ ಶ್ರೀಗಳನ್ನು ಕುರಿತು).

ಶ್ರೀ ಚನ್ನಬಸವ ಶಿವಯೋಗೀಶ್ವರ ಪುರಾಣ (ನರಗುಂದ ಮಠದ ಶ್ರೀಗಳನ್ನು ಕುರಿತು).

ಶ್ರೀ ಕೊಪಳ ಗವಿಸಿದ್ದೇಶ್ವರ ಪುರಾಣ (ಕೊಪ್ಪಳ ಗವಿಸಿದ್ದೇಶ್ವರ ಮಠದ ಶ್ರೀಗಳನ್ನು ಕುರಿತು).

 

ಪುರಾಣೇತರ

ನಾಟಕ

ವಜ್ರಾಂಗಳೀಕ
ವಿಜಯನಗರಾಭ್ಯುದಯ
ಆಂಜನೇಯ ಲಿಂಗಧಾರಣ
ಮಲ್ಹಣ
ಪಂಪಾಬಿಕಾ ಪರಿಣಯ
ಮೈರಾವಣ ಚರಿತ್ರೆ

ಕಾದಂಬರಿ

ಅಭಿನವ ಸೀತೆ
ವಿದ್ಯಾವಿನೋದಿನಿ

ಅನುವಾದ

ಕರ್ಣಾಟಕ ರಘುವಂಶ
ಕರ್ಣಾಟಕ ಭಗವದ್ಗೀತೆ
ಕರ್ಣಾಟಕ ಕುಮಾರ ಸಂಭವ
ಕರ್ಣಾಟಕ ಚಂದ್ರಲೋಕಂ

ಸಂಕೀರ್ಣ

ಮಾಸಪತ್ರಿಕೆ(ಕರ್ಣಾಟಕ ಬಂಧು)

ಸಂಪಾದನೆ

ಮೊಗ್ಗೆಯ ಮಾಯಿದೇವರ ಶಿವಾನುಭವ ಸೂತ್ರ
ಮೊಗ್ಗೆಯ ಮಾಯಿದೇವರ ವಿಶೇಷಾರ್ಥ ಪ್ರಕಾಶಿಕೆ
ಮೊಗ್ಗೆಯ ಮಾಯಿದೇವರ ಶತಕತ್ರಯ
ಸರ್ಪಭೂಷಣರ ಕೈವಲ್ಯ ಕಲ್ಪವಲ್ಲಿರಿ
ರಾಘವಾಂಕನ ಹರಿಶ್ಚಂದ್ರ ಕಾವ್ಯ ಸಂಗ್ರಹ

ಲೇಖನಗಳು

ಇಪ್ಪತ್ತ್ಮೂರು ಲೇಖನಗಳು.