ಬೇಟೆಯನ್ನೇ ಬದುಕಿನ ಭಾಗವಾಗಿಸಿಕೊಂಡ ಬುಡಕಟ್ಟು ಜನಾಂಗವು “ಬೇಡ” ರೆಂದು ಕರೆಯಿಸಿಕೊಂಡ ಬಗ್ಗೆ ನಮ್ಮಲ್ಲಿ ವರ್ಣರಂಜಿತ ಇತಿಹಾಸವೇ ಇದೆ. ಕಾಡು, ಕಣಿವೆ, ಗುಡ್ಡ ಗವಿಗಳನ್ನೇ ತಮ್ಮ ವಾಸಸ್ಥಳ ಮಾಡಿಕೊಂಡ ಇವರು ಚರ್ಮ ತೊಗಟೆಯನ್ನು ಉಡುಪಾಗಿ ಧರಿಸಿದರು. ಆದಿ ಮಾನವನ ಎಲ್ಲಾ ಅವಸ್ಥೆಗಳನ್ನು ಹೊತ್ತುಕೊಂಡ ಇವರು ಕ್ರೂರ ಪ್ರಾಣಿಗಳ ಮಧ್ಯೆ ಬಾಳಿದರು. ಇಂಥ ಬೇಡ ಜನಾಂಗದ ರೋಮಾಂಚನ ಹೆಜ್ಜೆಗಳು ಎಲ್ಲಿಂದ ಆರಂಭವಾಗುತ್ತವೆ ಎಂಬುದಕ್ಕೆ ಹಲವಾರು ವಿದ್ವಾಂಸರು ಅನೇಕ ವಾದಗಳನ್ನು ನೀಡಿದ್ದಾರೆ.

ಆದಿ ಮೂಲವಾದ ಭಗವಂತನು ಬೇಡರ ಚಂಚುಲಕ್ಷ್ಮಿಯನ್ನು ಮದುವೆಯಾಗುವ ಮೂಲಕ ಬೇಡರ ವಂಶವನ್ನು ಬೆಳೆಯಿಸಿದನಂತೆ. ಅದರಂತೆ, ಮನುವಿನ ಏಳನೆಯ ತಲೆಯವನಾಗಿ ಚಂದ್ರವಂಶದಲ್ಲಿ ಕಾರ್ತ್ಯಾರ‍್ಯಾರ್ಜುನ ಹುಟ್ಟಿದ. ಈತ ಹೇಹಯ ರಾಜ್ಯವನ್ನು ಆಳುತ್ತಿರುವಾಗ ವೈಷ್ಣವಯಾಗಾದಿಗಳನ್ನು ಮಾಡುತ್ತಿದ್ದ. ಇದೇ ಸಂದರ್ಭದಲ್ಲಿ ಜಮದಗ್ನಿ ಈತನಿಂದ ಹತನಾದ. ಇದರಿಂದ ಕುಪಿತನಾದ ವೇಂದನ್, ವೆಟ್ಟುನ್ ಎಂದೆಲ್ಲ ಕರೆಯಲಾಗಿದೆ. ಹಳೆಗನ್ನಡದಲ್ಲಿ ವೇಡರ್, ವೇಳರ್, ವಿದಿರ್, ಬಿಲ್ಲ, ಬೇಂಟೆಯವರ್, ಬೇಂಟೆಕಾರ, ವಿಯದರ್, ಬಿಯದರ್, ಕುಣಿಂದರ್, ಕೋವರ್ ಎಂಬ ನಾಮಗಳಿವೆ. ರಾಷ್ಟ್ರಕೂಟರ ಅಪಭ್ರಂಶ ಭಾಷೆಯಲ್ಲಿ ನಾಹಲ, ನಾಹಿಲ ನಾಇಲ್ಲ, ನಾಹ, ಸಮರ, ನಿಮಿರ, ಬೆಲಾಡ, ಬಾದ್ದಿಯ ಮುಂತಾಗಿ ಗುರುತಿಸಲಾಗಿದೆ. ಇವೆಲ್ಲ ಪದಗಳು ಬೇಡ ಜನಾಂಗದ ಪ್ರಾಚೀನತೆಯ ವ್ಯಾಪ್ತಿಯನ್ನು ಸ್ಪಷ್ಟೀಕರಿಸುತ್ತದೆ.

“ಬೇಡ ಜನಾಂಗದ ಮೂಲ ವಾಲ್ಮೀಕಿ”ಯೆಂದು ಹಲವರ ಅನಿಸಿಕೆ. ಕಿರಾತರ ಯಜಮಾನ ನಾದ ಈತ ಕಾಮಕೇತು, ಲಕ್ಷ, ಮೀನು, ಮಲ್ಲರೆಂಬ ಇನ್ನಿತರ ಏಳು ಜನ ಮಕ್ಕಳ ನೇತೃತ್ವದಲ್ಲಿ ಏಳು ಪಡೆಗಳನ್ನು ರಚಿಸಿ ದರೋಡೆ ನಡೆಸುತ್ತಿದ್ದನು. ಮುಂದೆ ಕಾಡಿನಲ್ಲಿ ಕಾಲಾನಂತರ ಚದುರಿಹೋದ ಈ ಪಡೆಗಳು ಬೇಡರ ಜನಾಂಗದ ವಂಶ ವಿಕಾಸಕ್ಕೆ ನಾಂದಿ ಹಾಡಿದವು ಎಂಬ ಒಂದು ಐತಿಹ್ಯವಿದೆ. ಅದೇನೇ ಇದ್ದರೂ ತೂರಿಹೋದ ಇಂಥ ಬೇಡ ಪಡೆಯ ತುಕುಡಿಗಳು ಆಯಾ ಪ್ರದೇಶಗಳಲ್ಲಿ ಗಟ್ಟಿಯಾಗಿ ನೆಲೆಯೂರಿದವು ಎಂಬುದರಲ್ಲಿ ಸಂಶಯವಿಲ್ಲ. ಅವರೀಗ ಅಲ್ಲಿಯ ಹೆಸರುಗಳಿಂದಲೇ ಇಂದು ದೇಶಾದ್ಯಂತ ಗುರುತಿಸಲ್ಪಡುತ್ತಿದ್ದಾರೆಂಬುದೇ ಬಹು ಮಹತ್ವಪೂರ್ಣ ಅಂಶ. ಅದರ ಒಂದು ಪಟ್ಟಿಯನ್ನು ಈ ರೀತಿ ನೋಡಬಹುದು.

ಬೇಡರ ಪರ್ಯಾಯ ಪದಗಳು ತಮಿಳುನಾಡು ನಾಯಾಕ್ಷಾ, ನಾಯಕರ್, ವಾಲ್ಮೀಕಿ ವೇಡನ್ ವೆತ್ತಲೆ, ಸಿಲೋನ್, ವೇಟನ್, ವೇಡುವಾಸ, ವೆದ್ಹಾನ್, ವೇಟೆಕಾರನ್, ಉತ್ತರ ಪ್ರದೇಶ ಜಾಟ್, ಪಂಜಾಬ ಭೀಲ್, ಬಾಲಮೀಕಿ, ವಾಲ್ಮೀಕಿ, ನಾಯಕಮಾಂಗ್ ಬಾಂಗಾಲ ಬಿಹಾರ ಸೇನ್, ಎಂದು ಗುರುತಿಸಲಾಗುತ್ತಿದೆ. ಬೇಡರಲ್ಲಿ ೩೦ ಉಪವಿಭಾಗಗಳಿರುವುದರಿಂದ ಇವರಲ್ಲಿ ಮೇಲ್ನೋಟಕ್ಕೆ ಭಿನ್ನತೆ ಕಾಣಬಹುದು. ಆದರೆ ಮೂಲ ಮಾತ್ರ ಒಂದೆ. ಪಾಳೆಗಾರ, ಮ್ಯಾಸನಾಯಕ, ಬಾರಿಕ್, ಕನ್ನಯ್ಯ ಜಾತಿ, ಕಿರಾತಕ ಜಾತಿ ಎಂದು ಕರ್ನಾಟಕದ ಗಡಿಭಾಗ ಗಳಲ್ಲಿ ಬಳಕೆಯಲ್ಲಿದೆ. ಇದರಲ್ಲಿ ಬೇರಡ, ವೇರನ್ ಬಾರಕ್, ದೊರೆಬಿಡ್ಡನಾಯಕ, ನಾಯಕವಾಡಿ ಎಂಬ ಇನ್ನಿತರ ಉಪನಾಮಗಳು ಸಹ ಪ್ರಚಲಿತದಲ್ಲಿವೆ.

ಬೇಡರು ಪಂಜಾಬಿನ ಗಿರಿಶಿಖರಗಳಿಂದ ಕರ್ನಾಟಕದೆಡೆ ಬಂದರೆಂದು, ಇವರಿಗೆ ಭಿಲ್ಲರು, ನಾಯಕರು, ಬೇರಾರ್ ಎಂದು ಕರೆಯುತ್ತಿದ್ದಾರೆಂದು ಕೆಲವು ವಿದ್ವಾಂಸರ ಅಭಿಪ್ರಾಯವಿದೆ. ಅದರಂತೆ, ಮಧ್ಯಪ್ರದೇಶದಲ್ಲಿರುವ ನಾಯಕರು ಮತ್ತು ಮುಂಬೈ, ಸಿಂಧೂಪ್ರದೇಶ, ಗುಜರಾತ್, ಮಹಾರಾಷ್ಟ್ರಗಳಲ್ಲಿರುವ ರಾಮೋಶಿಗಳು ಹಾಗೆ ಡೆಕ್ಕನ್ ಭೂಮಿ, ಉತ್ತರ ಇಂಡಿಯಾದಲ್ಲಿರುವ ಬಾಲಮೀಕಿ ನಾಯಕರು ಒಂದೇಯಾಗಿದ್ದರೆಂಬುದು ಹಲವರ ಸ್ಪಷ್ಟ ವಿಚಾರಗಳಿವೆ.

ಬೇಡರಲ್ಲಿ ಕವಲೊಡೆದ ಅನೇಕ ಪಂಗಡಗಳು ಮುಂದೆ ಪ್ರಭಾವಪೂರ್ಣವಾಗಿ ಬೆಳೆದವು. ಇವು ಬೇಡರ ವಿಕಾಸದ ಪ್ರಮುಖ ಘಟ್ಟವೆಂದೇ ಗುರುತಿಸಬೇಕಾಗುತ್ತದೆ. ಅಂಥವುಗಳಲ್ಲಿ ವಾಲ್ಮೀಕಿ, ತಳವಾರ, ಪರಿವಾರ ಮುಂತಾದವು ಮುಖ್ಯವು.

ವಾಲ್ಮೀಕಿ “ತ್ರೇತಾಯುಗದ ಮೂಲ ಸಂವೇದನೆಯನ್ನು, ಬದುಕಿನ ಮೌಲ್ಯವನ್ನು, ಸೋಲುಗೆಲುವುಗಳನ್ನೆಲ್ಲಾ ಒಟ್ಟಾಗಿ ಹಿಡಿದಿಟ್ಟ ದಾರ್ಶನಿಕ ಶಕ್ತಿ ವಾಲ್ಮೀಕಿಗೆ ದಕ್ಕಿತು ಮತ್ತು ಅದು ರಾಮಾಯಣದ ರೂಪದಲ್ಲಿ ಹೊರಬಿತ್ತು” ಇಂಥ ಶಕ್ತಿ ಸಿಗುವ ಮುನ್ನ ಆದಿ ಮಾನವನಂತೆ ಅಡವಿಯಲ್ಲಿ ಅಲೆಯುತ್ತಿದ್ದ ವಾಲ್ಮೀಕಿ ಪ್ರಚೇತನ ಮತ್ತು ಪ್ರಮೋಜಿಯರ ಮಗನಾಗಿ ಹುಟ್ಟಿ ತಾಮಸಾ ನದಿ ತೀರದಲ್ಲಿ ವಾಸವಾಗಿದ್ದನು. ನಂತರ ಕಿರಾತರ ಯಜಮಾನ ನಾಗುವ ಮೂಲಕ ಕಾಮಕೇತು, ಲಕ್ಷ, ‘ತಳವಾರ’ಯವನರ ವಿರುದ್ಧ ಸದಾ ಖಡ್ಗಧಾರಿ ಯಾಗಿದ್ದ ಇವರು ವೃತ್ತಿಯಿಂದ ಯುದ್ಧಕ್ಕಾಗಿ ಹೋರಾಡುವ ಸೈನಿಕರಾಗಿದ್ದರು.

ಆದುದರಿಂದಲೇ ಇವರಿಗೆ ತಲವಾರು (ಖಡ್ಗ) ಎಂದ್ಹೆಸರು ಬಂತೆಂದು ತರ್ಕ. ಆದರೆ ಐತಿಹಾಸಿಕವಾಗಿ ನೋಡುವುದಾದರೆ ಕ್ರಿ.ಶ. ಮೂರನೆಯ ಶತಮಾನಕ್ಕೆ ಸಂಬಂಧಿಸಿದ ನಾಗಾರ್ಜುನಕೊಂಡದ ಇಕ್ಷ್ವಾಕು ವಂಶದ ದೊರೆಗಳಲ್ಲಿ ಸ್ಥಲವರ, ತಲವರ, ತಳವರು, ತಳಾರ, ತಲಾ, ತಳವಾರ, ಮಹಾತಲವಾರ, ನಾಡತಳವಾರ ಎಂಬ ರಕ್ಷಣ ವಿಭಾಗದ ಹುದ್ದೆಗಳಿದ್ದವೆಂದು ತಿಳಿದುಬರುತ್ತದೆ. ಕ್ರಿ.ಶ. ೬ ಮತ್ತು ೮ನೇ ಶತಮಾನದ ಶಾಸನಗಳಲ್ಲಿ ತಳಾ, ತಳರ, ಥಲವಾರನೆಂದು ಗುರುತಿಸಲ್ಪಟ್ಟಿದೆ. ವಡ್ಡಾರಾಧನೆಯಲ್ಲೂ ತಳವ, ತಳಾರ ಎಂಬಿತ್ಯಾದಿ ರೂಪಗಳನ್ನು ಹೇಳಿದೆ. ಇವೆಲ್ಲವೂ ಕಾವಲುಗಾರ, ಗ್ರಾಮರಕ್ಷಕ, ನಾಡನಗರ ಅಧಿಕಾರಿಯೆಂಬ ಅರ್ಥವನ್ನು ಸ್ಫುರಿಸುತ್ತವೆ. ಇಂಥ ಅನೇಕ ತಳವಾರರು ಪಾಳೆಯಗಾರರಾಗಿ ಕೋಟೆಗಳನ್ನು ಕಟ್ಟಿ ಆಳಿದ ಉದಾಹರಣೆಗಳು ಉಲ್ಲೇಖಗೊಂಡಿವೆ. ತರುವಾಯ ಸುದ್ದಿ ತಲುಪಿಸುವ, ಪತ್ರ ಒಯ್ಯುವ ಓಲೆಕಾರ ವೃತ್ತಿಗೆ ಸೀಮಿತವಾಗುತ್ತಾ ಸಾಗಿದೆ. ಈ ತಳವಾರರು ‘ಬೇಡ ಜನಾಂಗ’ದ ಅವಿಭಾಜ್ಯ ಅಂಗವೆನ್ನುವುದು ಮರೆಯಲಾಗದು.

ನಾಯಕ : ಬೇಡರ ಗುಂಪಿನಲ್ಲಿ ಶೂರನಾದ ವ್ಯಕ್ತಿ ಪಾಳೆಪಟ್ಟುಗಳನ್ನು ಕಟ್ಟಿಕೊಂಡು ಪಾಳೆಯಗಾರನೆನಿಸಿದ. ಆತನೇ ಮುಂದೆ ಮುಖಂಡನಾದ, ನೇತೃತ್ವ ವಹಿಸಿದ ಈತನಿಗೆ ‘ನಾಯಕ’ನೆಂದೇ ಗೌರವ ಸೂಚಕ ಅಭಿದಾನವಿತ್ತರು. ‘ನಾಯಕ’ ಎಂಬ ಪದವು ಕ್ರಿ.ಶ. ೬ನೇ ಶತಮಾನದವರೆಗೆ ಕರ್ನಾಟಕದಲ್ಲಿ ಸೇನಾಪತಿ, ಪಡೆದಳ, ಮುಂದಾಳು, ಮುಖ್ಯಸ್ಥನೆಂಬ ಅರ್ಥಗಳಲ್ಲೇ ಬಳಕೆಯಾಗಿದೆ. ಬೇಡರ ಹೆಸರುಗಳು ಕೊನೆಗೆ ‘ನಾಯಕ’ ಪದ ಬಳಕೆಯಾಗುವ ಪೂರ್ವದಲ್ಲಿ ಬೋವ, ಬೋಯ, ಬೋಯಿ ಎಂದಿದ್ದ ಬಗ್ಗೆ ಹಲವಾರು ದಾಖಲೆಗಳು ಇಂದಿಗೂ ದೃಢೀಕರಿಸುತ್ತವೆ. ಬೇಡರ ರಾಜ್ಯಗಳಲ್ಲಿ ಸುಮಾರು ೫೭೦ ವರ್ಷಗಳಷ್ಟು ದೀರ್ಘಕಾಲ ಇಂಥ ವಿದ್ವಾಂಸರು ಅನೇಕ ವಾದಗಳನ್ನು ನೀಡಿದ್ದಾರೆ.

ಆದಿ ಮೂಲವಾದ ಭಗವಂತನು ಬೇಡರ ಚಂಚುಲಕ್ಷ್ಮಿಯನ್ನು ಮದುವೆಯಾಗುವ ಮೂಲಕ ಬೇಡರ ವಂಶವನ್ನು ಬೆಳೆಯಿಸಿದನೆಂಬ ಕಥೆಯೊಂದು ನಮ್ಮಲ್ಲಿ ಇಂದಿಗೂ ಪ್ರಚಲಿತವಿದೆ. ಅದರಂತೆ, ಮನುವಿನ ಏಳನೆಯ ತಲೆಯವನಾಗಿ ಚಂದ್ರವಂಶದಲ್ಲಿ ಕಾರ್ತ್ಯಾರ‍್ಯಾರ್ಜುನ ಹುಟ್ಟಿದ. ಈತ ಹೇಹಯ ರಾಜ್ಯವನ್ನು ಆಳುತ್ತಿರುವಾಗ ವೈಷ್ಣವ ಯಾಗಾದಿಗಳನ್ನು ಮಾಡುತ್ತಿದ್ದ. ಇದೇ ಸಂದರ್ಭದಲ್ಲಿ ಜಮದಗ್ನಿ ಈತನಿಂದ ಹತನಾದ. ಇದರಿಂದ ಕುಪಿತನಾದ ಪರಶುರಾಮ ಕಾರ್ತ್ಯಾರ‍್ಯಾರ್ಜುನ ಹಾಗೂ ಅವನ ಮಕ್ಕಳನ್ನು ಕೊಂದು ಕ್ಷತ್ರಿಯರೆಲ್ಲರನ್ನು ಸದೆಬಡಿಯಲು ೨೧ ಭಾರಿ ಭೂಮಿ ಮೇಲೆ ದಂಡಯಾತ್ರೆ ಕೈಗೊಂಡ. ಬೆದರಿದ ಕ್ಷತ್ರಿಯರೆಲ್ಲ ಕಾಡಿಗೆ ಹೋದರು ಕಾಡುವಾಸಿಗಳಾದರು. ಇವರೇ ಮುಂದೆ ಬೇಡರಾದರೆಂದು ಹೇಳುತ್ತ ಕ್ಷತ್ರಿಯರಿಗೂ, ಬೇಡರಿಗೂ ಭಿನ್ನತೆಯಿಲ್ಲವೆಂದು ಕೆಲ ಶೋಧಕರು ಸಾಧಿಸಿದ್ದಾರೆ.

“ಪಾಂಡವರಲ್ಲಿ ಪ್ರತಿಯೊಬ್ಬರಿಗೂ ಒಂದೊಂದು ಬೇಡರ ಪಡೆ ಅವರ ಬೆಂಗಾವಲಿಗೆ ಇತ್ತಂತೆ”. ದಕ್ಷಿಣದ ಪೈನ ಗಂಗಾತೀರದ ಸುತ್ತಿನ ಪ್ರದೇಶ ಬೇಡರ ರಾಜ್ಯವಾಗಿತ್ತೆಂದು ಹೇಳುವ ಮೂಲಕ ಮಹಾಭಾರತ ಕಾಲೀನ ಬೇಡರ ರಾಜ್ಯ ಮತ್ತು ಅವರ ಅಸ್ತಿತ್ವವನ್ನು ಗುರುತಿಸಲಾಗಿದೆ. ಕಲಿಯುಗದ ಆರಂಭಕ್ಕೆ ದಕ್ಷಿಣ ದೇಶದಲ್ಲಿ ಬೇಡರ ವಿನಃ ಬೇರೆ ಯಾವ ಜನಾಂಗವು ಇರಲಿಲ್ಲ. ಅನಂತರ ಉದಯಿಸಿದ ಮನೆತನಗಳಿಗೆಲ್ಲ ಬೇಡರೇ ಮೂಲರೆಂದು ಪ್ರತಿಪಾದಿಸುವ ಅನೇಕ ಊಹೆಯವಾದಗಳಿವೆ.

ಬೇಡರ ಜನಾಂಗವು ಮೂಲ ದ್ರಾವಿಡ ಜನಾಂಗವೆಂಬ ವಾದದಲ್ಲಿ ಎರಡಿಲ್ಲ. ಅವರಿಗಿದ್ದ ಪುಳಿಂದ, ಭಿಲ್ಲ, ಕಿರಾತ, ವ್ಯಾಧ, ಶಿಬಿರ, ನಿಷಾಧ ಮುಂತಾದ ಪುರಾತನ ಹೆಸರುಗಳೇ ಸಾಕ್ಷಿ. ಅಂತೆಯೇ ದ್ರಾವಿಡ ಭಾಷೆಯಲ್ಲಿ ವೇಡನ್, ಈ ರೀತಿ ನೋಡಬಹುದು.

ಪ್ರದೇಶ ಬೇಡರ ಪರ್ಯಾಯ ಪದಗಳು
ತಮಿಳುನಾಡು ನಾಯಾಕ್ಷಾ, ನಾಯಕ, ನಾಯಕರ್, ವಾಲ್ಮೀಕಿ, ವೇಡನ್, ವೆತ್ತಲೆ, ನಾಯಕರ್, ವೇತುಕನ್, ಗೆಂಡು
ಸಿಲೋನ್ ವೆಟನ್, ವೆಡುವಾಸ, ವದ್ಹಾನ್, ವೇಟಕಾರನ್
ಉತ್ತರ ಪ್ರದೇಶ ಜಾಟ್
ಪಂಜಾಬ ಭೀಲ್, ಬಾಲಮೀಕಿ, ವಾಲ್ಮೀಕಿ ನಾಯಕಮಾಂಗ್
ಬಂಗಾಲ, ಬಿಹಾರ ಸೇನ್
ಕೇರಳ ಮಲೇಶಿಯಾ ನಾಯರ್
ಕಾಶ್ಮೀರ ಡೋಗ್ರಾ
ಮಹಾರಾಷ್ಟ್ರ ರಾಮೋಶಿ, ರಾಣವಾಸಿ
ಆಂಧ್ರಪ್ರದೇಶ ಬೋವಿ, ಬೋಯಿ, ನಾಯನಿ, ದೊರೆಬಿಡ್ಡಲು, ಬೊಯಾಸು

ಹೀಗೆ ವ್ಯಕ್ತಪಡಿಸಿರುವ ಹಲವು ಪ್ರದೇಶದಲ್ಲಿಯ ಬೇಡರ ಪದಗಳು ಅನೇಕ ವೃತ್ತಿಯ ವಿಚಾರದಿಂದ ಎಂಬುದನ್ನು ನಾವು ಗಮನಿಸಬೇಕು. ‘ಇಂದು’ ಇಲ್ಲಿಯ ಕೆಲವು ಪದಗಳು ಬೇರೊಂದು ಮತ ಜಾತಿಗಳನ್ನು ಸೂಚಿಸುತ್ತದೆ ಎಂಬುದನ್ನು ಸಹ ನಾವು ಮರೆಯುವಂತಿಲ್ಲವಾದರೂ ಮೂಲದಲ್ಲಿ ಇವೆಲ್ಲ ಒಂದೇ ಕರುಳು ಬಳ್ಳಿಯ ಕುಡಿಗಳಾಗಿದ್ದವೆಂಬುದನ್ನು ತಳ್ಳಿ ಹಾಕುವಂತಿಲ್ಲ.

ಕರ್ನಾಟಕ ಮತ್ತು ಕೇರಳ ಪ್ರದೇಶದಲ್ಲಿ ಬೇಡ, ಬ್ಯಾಡ, ಬ್ಯಾಡರ, ಕನ್ನಯ್ಯ, ರಾಮೋಶಿ, ಬೈಡರ್ ಎಂಬ ವಿಭಿನ್ನ ಹೆಸರು ಬೇಡರಲ್ಲಿ ಬಳಕೆಯಾಗುತ್ತಿವೆ. ರಾಜಸ್ಥಾನದಲ್ಲಿಯೂ ಸಹ ಅವರು ಮಾಡುತ್ತಿರುವ ಬನ್ನೆ ಆಧಾರವಾಗಿಟ್ಟುಕೊಂಡು ವೇಟೆಗಾರನ್, ಬಿಲ್ ನಾಯ್ಕರ್, ಕಾಟ್ಟುನಾಯಕರಂ, ವೆತ್ತಲೆ ನಾಯ್ಕರಂ, ವೇಟುವನ್, ತೋಟಿಯಾನಾಯ್ಕರಣ ಎಂಬಿತ್ಯಾದಿ ಹೆಸರನ್ನು ಶೋಧಿಸಲಾಗಿದೆ. ಕರ್ನಾಟಕದ ಕೆಲ ಭಾಗದಲ್ಲಿ ನಾಯಕ, ನಾಯಕ ಮಕ್ಕಳು, ಅರಮನೆಯ ರಾಜಪರಿವಾರ, ಬೇಡರು, ಬೋಯಿಗಳು ಪರಿವಾರದವರು. ಇದೆಲ್ಲ ಬೇಡರೆಂದೇ. ತಳವಾರ, ಪರಿವಾರ ಮುಂತಾದವು ಮುಖ್ಯವು. “ವಾಲ್ಮೀಕಿ ತ್ರೇತಾಯುಗದ ಮೂಲ ಸಂವೇದನೆಯನ್ನು ಬದುಕಿನ ಮೌಲ್ಯವನ್ನು ಸೋಲುಗೆಲುವುಗಳನ್ನೆಲ್ಲಾ ಒಟ್ಟಾಗಿ ಹಿಡಿದಿಟ್ಟ ದಾರ್ಶನಿಕ ಶಕ್ತಿ ದಕ್ಕಿತು ಮತ್ತು ಅದು ರಾಮಾಯಣದ ರೂಪದಲ್ಲಿ ಹೊರಬಿತ್ತು” ಇಂಥ ಶಕ್ತಿ ಸಿಗುವ ಮುನ್ನ ಆದಿಮಾನವನಂತೆ ಅಡವಿಯಲ್ಲಿ ಅಲೆಯುತ್ತಿದ್ದ ವಾಲ್ಮೀಕಿ ಪ್ರಚೇತನ ಮತ್ತು ಪ್ರಮೋಜಿಯರ ಮಗನಾಗಿ ಹುಟ್ಟಿ ತಮಸಾ ನದಿ ತೀರದಲ್ಲಿ ವಾಸವಾಗಿದ್ದನು. ನಂತರ ಕಿರಾತರ ಯಜಮಾನನಾಗುವ ಮೂಲಕ ಕಾಮಕೇತು, ಲಕ್ಷ ಮೀನಮಲ್ಲರೆಂಬ ಹನ್ನೆರಡು ಮಕ್ಕಳಲ್ಲಿ ಏಳು ಮಕ್ಕಳನ್ನು ಆಯ್ಕೆ ಮಾಡಿಕೊಂಡು ವಾಲ್ಮೀಕಿಯು, ಅವರ ಮುಖಂಡತ್ವದಲ್ಲೇ ಪಡೆ ರಚಿಸಿ ದರೋಡೆ ನಡೆಸುತ್ತಿದ್ದನೆಂದು ಒಂದು ಅಭಿಪ್ರಾಯವಿದೆ. ಮುಂದೆ ಕಾಡಿನಲ್ಲಿ ಚದುರಿಹೋದ ಈ ಪಡೆಗಳನ್ನೇ ಹಿನ್ನೆಲೆ ಯಾಗಿಟ್ಟುಕೊಂಡು ಹಲವರು ‘ಬೇಡ’ ಜನಾಂಗದ ಮೂಲ ವಾಲ್ಮೀಕಿಯೆಂದು ವಾದಿಸುತ್ತಾರೆ. ಇದರಿಂದ ಬೇಡರ ಒಂದು ಗುಂಪು ತಮ್ಮನ್ನು ‘ವಾಲ್ಮೀಕಿ’, ವಾಲ್ಮೀಕಿ ಮಕ್ಕಳೆಂದು ಕರೆಯಿಸಿ ಕೊಳ್ಳಲು ಇಚ್ಛಿಸುತ್ತಾರೆ. ಮಹಾರಾಷ್ಟ್ರದಲ್ಲಿ ಕಬ್ಬಲಿಗರು ವಾಲ್ಮೀಕಿ ಪೂಜಕರಾಗಿರುವುದರಿಂದ ಅವರಿಗೆ ವಲ್ಯಾಲ್ಯಾ (ವಾಲ್ಮೀಕಿ) ಕೋಳಿ ಎನ್ನುತ್ತಾರೆ. ಅದರಂತೆ ತ್ರೆತಾಯುಗದಲ್ಲಿದ್ದ ಗುಹ, ಶಬರಿ, ದ್ವಾಪರದಲ್ಲಿದ್ದ ಏಕಲವ್ಯ, ಧರ್ಮವ್ಯಾಧ, ಕಲಿಯುಗದಲ್ಲಿದ್ದ ಬೇಡರ ಕಣ್ಣಪ್ಪರನ್ನು ಬೇಡರು ತಮ್ಮ ಪೂರ್ವಜರೆಂದು ಇಂದಿಗೂ ಆರಾಧಿಸುತ್ತಿರುವುದರ ಅರ್ಥ, ಇವರ ವಂಶ ವಿಕಾಸವನ್ನು ಸೂಚಿಸುತ್ತದೆ. ಅಷ್ಟೇ ಅಲ್ಲ ಅವರ ವಂಶದವರೆಂದು ಹೇಳಿ ಕೊಳ್ಳಲು ಹೆಮ್ಮೆ ಪಡುತ್ತಾರೆ. ವಾಲ್ಮೀಕಿ ತನ್ನ ವಂಶದ ಚರಿತ್ರೆಯನ್ನು ರಾಮಾಯಣವಾಗಿಸಿರಬಹುದು ಎಂಬ ಬಲವಾದ ಊಹೆಯೊಂದು ಇದೆ.

ತಳವಾರ ಬೇಡರಲ್ಲಿಯೇ ಇನ್ನೊಂದು ಹೆಸರು. ಮುಖಂಡನಾದ, ನೇತೃತ್ವ ವಹಿಸಿದ ಈತನಿಗೆ ‘ನಾಯಕ’ನೆಂದೇ ಗೌರವ ಸೂಚಕ ಅಭಿದಾನವಿತ್ತರು. ‘ನಾಯಕ’ ಎಂಬ ಪದವು ಕ್ರಿ.ಶ. ೬ನೆಯ ಶತಮಾನದವರೆಗೆ ಕರ್ನಾಟಕದಲ್ಲಿ ಸೇನಾಪತಿ, ಪಡೆದಾಳ, ಮುಂದಾಳು, ಮುಖ್ಯಸ್ಥನೆಂಬ ಅರ್ಥಗಳಲ್ಲೇ ಬಳಕೆಯಾಗಿದೆ. ಬೇಡರ ಹೆಸರುಗಳು ಕೊನೆಗೆ ‘ನಾಯಕ’ರು ಪದ ಬಳಕೆಯಾಗುವ ಪೂರ್ವದಲ್ಲಿ ಬೋವ, ಬೋಯ, ಬೋಯಿ, ಎಂದಿದ್ದ ಬಗ್ಗೆ ಹಲವಾರು ದಾಖಲೆಗಳು ಇಂದಿಗೂ ದೃqsಕರಿಸುತ್ತವೆ. ಬೇಡರ ರಾಜ್ಯಗಳಲ್ಲಿ ಸುಮಾರು ೫೭೦ ವರ್ಷಗಳಷ್ಟು ದೀರ್ಘಕಾಲ ಇಂಥ ‘ನಾಯಕ’ರು “ಶ್ರೀಮನ್ಮಹಾನಾಯಕಾಚಾರ್ಯ” ಎಂಬ ಬಿರುದು ಹೊತ್ತು ಆಳ್ವಿಕೆ ಮಾಡಿದರೆಂಬುದು ಗಮನಾರ್ಹ.

‘ನಾಯಕ್ಡಾ’ ಎಂದರೆ ತೆಲುಗಿನಲ್ಲಿ ಅಪರಾಧಿ ಕೆಲಸ ಮಾಡುವವ ಎಂದರ್ಥವಿದೆ. ಅದರಂತೆ ಅಡವಿಯಲ್ಲಿ ಬಟ್ಟೆಯಿಲ್ಲದೆ ತಿರುಗುವ ‘ಚೋಳಿ’ ಪಾಲನಾಯಕರನ್ನು ಇದೇ ಸಾಲಿಗೆ ಸೇರಿಸಲಾಗಿದ್ದು ಇವರೆಲ್ಲ ಮೇಲಿನ ‘ನಾಯಕ’ ಶ್ರೇಣಿಗೆ ಸೇರಿದವರಲ್ಲ ಎಂಬುದು ಹಲವಾರು ತಜ್ಞರ ಅಭಿಪ್ರಾಯ.

ಇನ್ನಿತರರು : ಮಹಾರಾಷ್ಟ್ರದಲ್ಲಿ ರಾಮೋಶಿ, ರಾಣವಾಸಿಗಳೆಂದು ಕರೆಯಿಸಿಕೊಳ್ಳುವವರು ತಾವು ಶ್ರೀರಾಮನ ವಂಶದವರೆಂದು ಹೆಮ್ಮೆಪಡುತ್ತಾರೆ; ಹೇಳಿಕೊಳ್ಳುತ್ತಾರೆ. ಇದೇ ಪದ್ಧತಿ, ಪಂಥದ ರಾಮಕೊಂಡಾಡಿಗಳು ರಾಮನ ಜಪ – ತಪ ಮಾಡುತ್ತ ಆತನ ಮಹಿಮೆಯನ್ನು ಸ್ತುತಿಸುತ್ತಾ ಸಂಚರಿಸುತ್ತಾರೆ. ಇವರಿಬ್ಬರ ಮೂಲ ‘ಬೇಡ’ ಜನಾಂಗವೆಂಬುದು ನಿರ್ವಿವಾದ. ಇಟ್ಟ ಗುರಿತಪ್ಪದಂತೆ ಹೊಡೆಯುವ ಗುರಿಕಾರ, ಪಾಳೆಪಟ್ಟುಗಳನ್ನು ಕಟ್ಟಿಕೊಂಡು ಆಳಿದ ಪಾಳೆಯಗಾರರೆಲ್ಲ ಬೇಡ ಜನಾಂಗದ ವಿಕಾಸಕ್ಕೆ ಕಾರಣವಾದವರು. ಇವರೆಲ್ಲ ನಂತರ ನಾಯಕರೆನಿಸಿಕೊಂಡರು. ನಾಯಿಡು, ನಾಯಿನನೆಂದು ಕರೆಸಿದ್ದು ತೆಲುಗಿನಲ್ಲಿ. ಅದೇ ಅರ್ಥಕ್ಕಾಗಿ ಸದ್ಯ ಕರ್ನಾಟಕದಲ್ಲಿ ಬೇಡರನ್ನು ಮುಖ್ಯವಾಗಿ ಎರಡು ಬಣಗಳಲ್ಲಿ ಕಾಣುತ್ತೇವೆ. ಮ್ಯಾಸಬೇಡರು, ಊರ ಬೇಡರೆಂದು ತಮ್ಮನ್ನು ತಾವೇ ಇವರು ಸೀಳಿಕೊಂಡಿದ್ದಾರೆ. ಆಳುತ್ತಿರುವ ಅರಸನಿಗೆ ವೈರಿಗಳ ಬರುವಿಕೆ ಬಗ್ಗೆ ಗೂಢಚಾರಿಕೆ ತಲುಪಿಸುತ್ತ ಕಾಡಿನಲ್ಲಿ ಅಲೆಯುತ್ತಿದ್ದವರೆಲ್ಲ ಮ್ಯಾಸಬೇಡರಾದರೆ, ಊರಲ್ಲಿದ್ದವರೆಲ್ಲ ಊರ ಬೇಡರಾದರು, ಮ್ಯಾಸಬೇಡರಲ್ಲಿ ಊರು ಮ್ಯಾಸ, ಅಡವಿಮ್ಯಾಸ, ಕಳ್ಳಮ್ಯಾಸ, ಮುಂಜಿಮ್ಯಾಸಗಳೆಂದು ವಿಧಗಳಿವೆ. ‘ಮೋಯಿಸ’ ಇದರರ್ಥವೇ ಮ್ಯಾಸವೆಂದು ಡಾ. ಕೃಷ್ಣಮೂರ್ತಿ ಹನೂರರ ತರ್ಕ. ‘ಮೀಸಲು’ ಸೈನ್ಯವಾಗಿದ್ದ ಇವರ ವೃತ್ತಿಯನ್ನು ಗ್ರಾಮೀಣರು ‘ಮ್ಯಾಸ’ ಎಂಬರ್ಥದಲ್ಲಿ ಪ್ರಯೋಗಿಸಿರುವುದನ್ನು ಡಾ. ಹನೂರ ಪ್ರತಿಪಾದಿಸುತ್ತಾರೆ.

ಇವರನ್ನೇ ಕೆಲವೆಡೆ ಊರು ನಾಯಕರು, ಮ್ಯಾಸನಾಯಕರೆಂದು ಗುರುತಿಸಲಾಗುತ್ತಿದೆ. ಮಾರಮ್ಮ ನಾಯಕರು, ಮುತ್ಯಾಲ ನಾಯಕರು, ಹಾಲುಬೇಡರು, ಮೊಂಡಬೇಡರು, ಸಂಚಲು ಭೀಲ್ಲರು, ರಾಜಪರಿವಾರದವರು, ಕೊಂಡರಾಜುಲು ಎಂದೆಲ್ಲ ಕರೆಯುವಲ್ಲಿ ಅವರ ವೃತ್ತಿ ಮತ್ತು ಗುಣವಿಶೇಷಗಳನ್ನು ಅರ್ಥೈಸಲೇಬೇಕಾಗುತ್ತದೆ. ಇದರಲ್ಲಿ ಕೆಲವರು ಕ್ರಮೇಣ ಊರು ಕಟ್ಟಿ ವಿಸ್ತರಿಸಿ ಅವುಗಳ ಮೇಲೆ ಒಡೆತನ ಸಾಧಿಸಿ ರಾಜ್ಯಪಾಲರಾದರು. ರಾಜರಿಗೆ ಸಹಾಯಕರಾಗಿ ದೇವತಾ ಪೂಜೆ ಮಾಡಿಕೊಂಡು ದೇವರ ನೈವೇದ್ಯಕ್ಕೆ ಮೀಸಲು ಹಾಲು ತರುವ ಉದ್ದೇಶದಿಂದ ಬೇರೆ ಹಟ್ಟಿಗಳನ್ನೇ ಕಟ್ಟಿಕೊಂಡಿದ್ದ ಕೆಲವರು ಗೋಪಾಲಕರಾದರು. ಅವರನ್ನೇ ಮುಂದೆ ಯಾದವರೆಂದು ಗುರುತಿಸಲಾಯಿತು. ಇವರನ್ನು ಕೆಲವು ಭಾಗಗಳಲ್ಲಿ ಮ್ಯಾಸನಾಯಕರು ಮೀಸಲು ನಾಯಕರು ಕಾಡುಗೊಲ್ಲರೆಂದು ಸಹ ಕರೆಯಲಾಗುತ್ತಿರುವುದು ಉಲ್ಲೇಖಾರ್ಹ. ಗಡಿ ಪ್ರದೇಶದಲ್ಲಿ ಶೃತಿಗಳನ್ನು ಗುರುತಿಸುವ ಗೂಢಚಾರರಿಗೆ ಗುಡ್ಲನಾಯಕ ರೆಂದು, ಅಡವಿಯಲ್ಲೇ ಗುಡಿಸಲು ಹಾಕಿಕೊಂಡು ವೇಷ ಮರೆಸಿಕೊಂಡು ತಿರುಗುತ್ತಾ ವೈರಿ ಸುಳಿವು ನೀಡುವ ಇನ್ನೂ ಕೆಲವು ಗೂಢಚಾರರಿಗೆ ವೆತ್ತಡೆ ಮಾರೆಮ್ಮ ನಾಯಕರು, ಮುತ್ಯಾಲಮ್ಮ ನಾಯಕರು ಮತ್ತು ಮೊಂಡರೆಂದೆಲ್ಲಾ ಶೋಧಕರು ಅವರನ್ನು ಗುರುತಿಸುತ್ತಾರೆ. ಇವರೆಲ್ಲ ಅಲೆಮಾರಿಗಳಾಗಿಯೇ ಇಂದಿಗೂ ಉಳಿದಿದ್ದು ಸತ್ಯಸಂಗತಿ. ಅದರಂತೆ ಮೂಲ ಬೇಡ ವಂಶೀಯರಾದ ಬಿಲ್ಲರು ಸಹ ಅಡವಿಯಲ್ಲಿಯೇ ಬೇಟೆಯಾಡಿ ಜೀವಿ ಸುತ್ತಿದ್ದಾರೆ. ಇವರಂತೆ ಸಂಚರು ಅಥವಾ ರಾಮಕೊಂಡಾಡಿಗಳು ರಾಮಜಪದಲ್ಲಿ ಸಂಚರಿಸಿ ಜೀವನ ಸವೆಸಲು ಆರಂಭಿಸಿದ್ದಾರೆ. ಹೀಗೆ ಬೇಡ ಜನಾಂಗದ ಉಗಮ ಮತ್ತು ವಿಕಾಸವನ್ನು ನೋಡುವಾಗ ನಾಡಿನ ಪ್ರಾಚೀನ ಜನಪದವನ್ನೇ ಆಶ್ರಯಿಸಬೇಕಾಗುತ್ತದೆ. ಹಾಗಾದಾಗ ಮಾತ್ರ ಇವರು ನಮಗೆ ಅರ್ಥವಾಗಬಲ್ಲರು. ಜನಾಂಗಿಕ ಅಧ್ಯಯನದ ಪರ್ವ ಕಾಲದಲ್ಲಿರುವ ನಮ್ಮ ಇಂದಿನ ಸಂಶೋಧನೆ ಬೇಡ ಜನಾಂಗದಂತಹ ವಿಶಿಷ್ಟ ಸಂಸ್ಕೃತಿಯ ಪರಿಕರಗಳನ್ನು ಅತಿ ಬೇಗ ಗುರುತಿಸಿದಷ್ಟು ಅನುಕೂಲ. ಯಾಕೆಂದರೆ ನಾಗರೀಕತೆಯ ಮುದ್ರೆ ಇವರ ಮೇಲೆ ಪ್ರಬಲವಾಗಿ ಅಚ್ಚೊತ್ತುತ್ತಿರುವುದರಿಂದ ಅದರ ಉಳಿವು ಮುಂದಿನ ಅಭ್ಯಾಸಿಗರಿಗೆ ಅವಶ್ಯವಿದೆ.

ಕೃಪೆ : ವಾಲ್ಮೀಕಿ  ಕರ್ನಾಟಕ

* * *