ನಮ್ಮ ದೇಶದ ಇತಿಹಾಸದಲ್ಲಿ ನೂರಾರು-ಸಾವಿರಾರು ಮತಭೇದಗಳುಳ್ಳ ಜಾತಿ ಜನಾಂಗಗಳನ್ನು ಅವರುಗಳ ಸಂಸ್ಕೃತಿ ನಾಗರೀಕತೆ ವೈಶಿಷ್ಟ್ಯಗಳನ್ನು ಓದಿ ತಿಳಿಯ ಬಹುದಾಗಿದೆ. ಒಂದೊಂದು ಜನಾಂಗದವರಿಗೂ ಅವರದೇ ಆದ ಐತಿಹಾಸಿಕ, ಚಾರಿತ್ರಿಕ, ಸಾಮಾಜಿಕ ಹಿನ್ನೆಲೆಗಳನ್ನು ಕಾಣುತ್ತೇವೆ. ಅಂಥಹ ಜಾತಿ ಜನಾಂಗಗಳಲ್ಲಿ ‘ನಾಯಕ ಜನಾಂಗದ ಚರಿತ್ರೆ’ ಸುವರ್ಣಾಕ್ಷರಗಳಲ್ಲಿ ಬರೆದಿಡುವಂತಹದು.

ಈ ನಾಯಕ ಜನಾಂಗಕ್ಕೆ ತನ್ನದೇ ಆದ ಸಂಸ್ಕೃತಿ ಇದೆ, ಇತಿಹಾಸವಿದೆ. ಅನೇಕರು ರಸಾಹಸಿಗಳಾಗಿ ಬಾಳಿ ಬದುಕಿ ಪಾಳೇಗಾರರಾಗಿ, ರಾಜರೆನಿಸಿಕೊಂಡು ಅಧಿಕಾರದಲ್ಲಿ ಮೆರೆದು, ಧೀಮಂತರೆನಿಸಿಕೊಂಡು ಗಂಡುಗಲಿಗಳಾಗಿ ಅಜೇಯರೆನಿಸಿ ನಾಡಿನ ಉದ್ದಗಲಕ್ಕೂ ತಮ್ಮ ಪ್ರಭುತ್ವ ಸ್ಥಾಪಿಸಿ ಧರ್ಮಪ್ರಭುಗಳಾಗಿ, ರಾಷ್ಟ್ರಪ್ರೇಮಕ್ಕೆ, ಧೈರ್ಯಕ್ಕೆ, ಸಾಹಸಕ್ಕೆ, ಶೌರ್ಯ ಪರಾಕ್ರಮಗಳಿಗೆ ಹೆಸರಾಗಿ ರಾದಿ ರರು, ಶೂರಾದಿ ಶೂರರು ಎಂದು ಹೆಸರು ವಾಸಿಯಾಗಿ ಸಾಹಿತ್ಯ, ಸಂಸ್ಕೃತಿ, ಕಲೆಗಳ ಪ್ರೋಕೊಡುಗೈದಾನಿಗಳಾಗಿ ಬಾಳಿ ಬದುಕಿದ ಈ ಜನ, ಇಂದು ಹರಿದು ಹಂಚಿ ಹೋಗಿ ಹಲವಾರು ಹೆಸರುಗಳಿಂದ ಕರೆಸಿಕೊಂಡು ತಮ್ಮ ಉಳುವಿಗಾಗಿ ಹೋರಾಡುತ್ತಿದ್ದಾರೆ.

ಅಪ್ರತಿಮ ರರೆನಿಸಿ ನಾಡಸೇವೆಗೆ ಕಂಕಣ ಬದ್ಧರಾಗಿ ಯೋಧರಾಗಿ ದುಡಿದು ರಾಜಮಹಾರಾಜರುಗಳಾಗಿ ಪ್ರಭುತ್ವಮಾಡಿ, ನಾಡರಕ್ಷಣೆಯಲ್ಲಿ ನಿರತರಾಗಿ, ಹಿಂದೂಧರ್ಮ ಸಂಸ್ಕೃತಿಯನ್ನು ಉಳಿಸಿ ಪೋಷಿಸಿ ರಕ್ಷಿಸಿದವರಲ್ಲಿ ಈ ಜನಾಂಗ ಪ್ರಥಮ ಶ್ರೇಣಿಯದೆಂದರೆ ತಪ್ಪಾಗಲಾರದು. ಜ್ಞಾನ ಪ್ರಸಾರದಲ್ಲೂ ನಿಸ್ಸೀಮರಾಗಿ ಪ್ರಪ್ರಥಮ ಮೇರುಕೃತಿಗಳನ್ನು ರಚಿಸಿ ಇಡೀ ಮಾನವ ಕುಲಕ್ಕೆ ಶ್ರೇಷ್ಠ ಸಾಹಿತ್ಯ ರಚಿಸಿ, ಕೀರ್ತಿ ಪಡೆದು ಇತಿಹಾಸದ ಪುಟಗಳಲ್ಲಿ ಮೊದಲ ಪಂಕ್ತಿಯಲ್ಲಿ ಸೇರಿರುವುದು ಈ ಜನಾಂಗದ ಉಜ್ವಲ ಚರಿತ್ರೆಗೆ ಕಿರೀಟಪ್ರಾಯವಾಗಿದೆ. ಇಂಥ ಶ್ರೇಷ್ಠ ಪರಂಪರೆಯ ಜನಾಂಗದ ಚರಿತ್ರೆಯನ್ನು ಓದುವುದು ತಿಳಿಯುವುದು ಪ್ರತಿಯೊಬ್ಬ ಮಾನವನ ಆದ್ಯ ಕರ್ತವ್ಯವೆಂದೇ ಭಾವಿಸಬೇಕಾಗಿದೆ.

ಬೇರೆಬೇರೆ ಪ್ರದೇಶಗಳಲ್ಲಿ ಬೇರೆಬೇರೆ ಹೆಸರಿನಿಂದ ಕರೆಸಿಕೊಳ್ಳುತ್ತಾ ಬಂದಿರುವ ಈ ಜನಾಂಗವು ಮೂಲದಲ್ಲಿ “ಬೇಡರು” “ನಾಯಕರು” ಎಂದೇ ಪ್ರಖ್ಯಾತಿ ಪಡೆದವರಾಗಿದ್ದು ಕಾಲ ಉರುಳಿದಂತೆ ಈ ಜನಾಂಗದವರನ್ನು ಮೇಲ್ವರ್ಗದ ಜನರು ತುಳಿತಕ್ಕೆ ಒಳಪಡಿಸುತ್ತಾ ಬಂದಿದ್ದರೂ ವಂಶಪಾರಂಪರ‍್ಯದಿಂದ ಬೆಳೆದುಬಂದಿರುವ ಇವರ ಕೆಚ್ಚೆದೆಯ ಮನೋದಾರ್ಢ್ಯದಿಂದ ಧೈರ್ಯ ಶೌರ್ಯಾದಿ ಗುಣಗಳಿಂದ ಜ್ಞಾನ ಸಂಪತ್ತಿನಿಂದ ಆಡಳಿತ ದಕ್ಷತೆಯಿಂದ ಪ್ರತಿ ಕಾಲಕಾಲಕ್ಕೂ ಕೀರ್ತಿಗಳಿಸುತ್ತಾ ಇತಿಹಾಸದಲ್ಲಿ ಮಿಂಚಿದ್ದಾರೆ ಹಾಗೂ ಮಿಂಚುತ್ತಿದ್ದಾರೆ.

ನಾಡಿಗೋಸ್ಕರ ತಮ್ಮ ಪ್ರಾಣವನ್ನೇ ಪಣವಾಗಿಟ್ಟು ತಮ್ಮ ಮನೆ-ಮಕ್ಕಳು-ಮಡದಿಯರ ವ್ಯಾಮೋಹವನ್ನು ಧಿಕ್ಕರಿಸಿ ಬಂಧು ಬಳಗದವರನ್ನು, ಐಶ್ವರ್ಯ ಸುಖ ಸಂಪತ್ತನ್ನು ಕಡೆಗಣಿಸಿ, ಹೋರಾಡಿದ ಅದೆಷ್ಟೋ ವೀರ ತರುಣರು ತಮ್ಮ ಶೌರ‍್ಯ ಪರಾಕ್ರಮಗಳಿಂದ ವೈರಿಗಳ ಎದೆ ನಡುಗಿಸಿ ಅವರುಗಳನ್ನು ಸದೆ ಬಡಿದು, ಹಿಂದೂ ಧರ್ಮಕ್ಕೆ ಹಿಂದೂ ಸಂಸ್ಕೃತಿಗೆ ಪರಕೀಯರಿಂದ ಗಂಡಾಂತರ ಬಂದಾಗ ಗಂಡುಗಲಿಗಳಾಗಿ ಹೋರಾಡಿ ರಕ್ಷಿಸಿದ ಪ್ರಥಮ ಸ್ವಾತಂತ್ರ್ಯ ರರು ಈ ಜನಾಂಗದವರು.

ಕಂಪಿಲ, ಗಂಡುಗಲಿ ಕುಮಾರರಾಮ, ರಾಷ್ಟ್ರರ ಎಚ್ಚಮ್ಮ ನಾಯಕ, ವಿಜಯನಗರ ಸಾಮ್ರಾಜ್ಯ ಸ್ಥಾಪಕರಾದ ಹಕ್ಕ-ಬುಕ್ಕರು, ಚಿತ್ರದುರ್ಗದ ರಾಜರ ಮದಕರಿ ನಾಯಕ, ಸುರಪುರದ ರಾಜಾ ಚಿಕ್ಕವೆಂಕಟಪ್ಪನಾಯಕ, ರ ಸಿಂಧೂರ ಲಕ್ಷ್ಮಣ, ಹೀಗೆ ಒಬ್ಬರೇ ಇಬ್ಬರೆ, ನೂರಾರು ಸಾವಿರಾರು ಕಲಿಗಳು ಈ ಜನಾಂಗದಲ್ಲಿ ಜನಿಸಿದ ವೀರ ರತ್ನಗಳು. ಈ ವೀರಾಗ್ರಣಿಗಳ ಧೈರ್ಯ ಶೌರ್ಯ-ಪರಾಕ್ರಮಗಳ ಸಾಹಸಮಯ ಧಿರೋದ್ದಾತ ಚರಿತ್ರೆಯು ನಮ್ಮ ಇಂದಿನ ಯುವಕರಿಗೆ ಸ್ಫೂರ್ತಿದಾಯಕ. ಈ ಜನಾಂಗದಲ್ಲಿ ಜನ್ಮವೆತ್ತಿದ ಇಂತಹ ಅನೇಕ ವ್ಯಕ್ತಿಗಳು ರಾಷ್ಟ್ರರರ ಮಹಾಪುರುಷರ ಮಾಲಿಕೆಯಲ್ಲಿ ಅತ್ಯಂತ ಶೋಭಾಯಮಾನ ವಾಗಿ ರಾರಾಜಿಸಬಹುದಾದ ಶ್ರೇಷ್ಠ ರತ್ನಗಳು.

ಇಂಥಹ ರ ಪರಂಪರೆಯ ಜನಾಂಗದಲ್ಲಿ ಜನಿಸಿದ ನಮ್ಮವರು ಕೆಲವರು ತಮ್ಮ ಜಾತಿಯ ಇತಿಹಾಸದ ಪ್ರಾಮುಖ್ಯತೆ ಗೊತ್ತಿಲ್ಲದಿರುವುದರಿಂದಲೇ ಏನೋ ತಮ್ಮ ಜಾತಿ ಯನ್ನು ಬೇರೆಯವರು ಕೇಳಿದಾಗ ಕೀಳುಭಾವನೆಯನ್ನು ಹೊಂದುವರೆಂಬ ಭಯದಿಂದಲೇ ಮರೆಮಾಚಿ ‘ನಾಯಕರು-ನಾಯಕ ಜಾತಿಯವರು’ ಎಂದು ಹೇಳಿಕೊಳ್ಳದೆ ಮೇಲ್ವರ್ಗದ ಜಾತಿಯವರ ಹೆಸರನ್ನು ಹೇಳಿಕೊಂಡು ಜೀವಿಸುವುದನ್ನು ಕಾಣುತ್ತೇವೆ. ಇಂತಹ ಕುಲ ಬಾಂಧವರು ನಿಜಕ್ಕೂ ತಮ್ಮ ಜನಾಂಗದ ಶ್ರೇಷ್ಠತೆಯನ್ನು ಹಾಗೂ ಐತಿಹಾಸಿಕ ಮಹತ್ವವನ್ನು ಮನದಟ್ಟು ಮಾಡಿಕೊಳ್ಳುವುದರ ಮೂಲಕ ತಮ್ಮಲ್ಲಿರುವ ಕೆಳದರ್ಜೆಯ ಕೀಳು ಪ್ರವೃತ್ತಿ ಯನ್ನು ಅಳಿಸಿಹಾಕಲು ಅನುಕೂಲವಾಗುವುದರ ಜೊತೆಗೆ ಹೆಮ್ಮೆಯಿಂದ ತಮ್ಮ ಜನಾಂಗದ ಹೆಸರನ್ನು ಹೇಳಿಕೊಂಡು ತಮ್ಮ ಪೂರ್ವಜರು ಬಾಳಿದಂತೆ ಒಂದಂಶವಾದರೂ ಬಾಳಿ ಬದುಕಬೇಕೆಂಬ ಛಲ ಮೂಡುತ್ತದೆ ಎಂದು ಭಾವಿಸಿದ್ದೇನೆ. ಇಂಥಹ ಕುಲಬಾಂಧವರು ಜನಾಂಗದ ಏಳಿಗೆಗಾಗಿಯೇ ಕಾರ್ಯಪ್ರವೃತ್ತರಾಗಿ ದುಡಿಯುತ್ತಿರುವ ವೃತ್ತಪತ್ರಿಕೆಗಳಿಗೆ, ಸಾಹಿತ್ಯ ಕೃತಿಗಳಿಗೆ ಪ್ರೋಉಳಿಸಿ ಬೆಳೆಸಿಕೊಂಡು ಹೋಗುವುದರ ಮೂಲಕ ಅಂತಹ ಸಾಹಿತ್ಯಕ ಕೃತಿಗಳನ್ನು ಕೊಂಡು ಓದಿ ಸಹಕಾರ ನೆರವುಗಳನ್ನು ನೀಡುವ ಮೂಲಕ ತಮ್ಮ ಜ್ಞಾನಸಂಪತ್ತನ್ನು ಹೆಚ್ಚಿಸಿಕೊಂಡು ತಮ್ಮ ಪೂರ್ವಜರ ಶೌರ‍್ಯ ಸಾಹಸಾದಿ ಗುಣಗಳನ್ನು ತಮ್ಮ ಜೀವನದಲ್ಲಿ ಬೆಳೆಸಿಕೊಂಡು ಎಂದಿಗಿಂತಲೂ ಇಂದು ಕಡ್ಡಾಯವಾಗಿ ನಮ್ಮ ಮಕ್ಕಳು ವಿದ್ಯಾವಂತರಾಗಿ, ಒಳ್ಳೆಯ ಪ್ರಜೆಗಳಾಗಿ, ಜನರಿಗೆ ಉಪಯುಕ್ತರಾಗಿ ಬಾಳು ಬೆಳಗಿಸಿಕೊಂಡು ಹೋಗುವಲ್ಲಿ ನೆರವಾಗಬೇಕಾಗಿದೆ.

ಕರ್ನಾಟಕ ಪ್ರಾಂತ್ಯದಲ್ಲಿ ಮೂಲೆಮೂಲೆಯಲ್ಲಿ ವಾಸವಾಗಿರುವ ಈ ನಾಯಕ ಜನಾಂಗ ದವರು ತಮ್ಮ ಇತಿಹಾಸವನ್ನೇ ಅರಿಯದೆ ಗಾಢಾಂಧಕಾರದಲ್ಲಿ ಮುಳುಗಿ ಆಯಾ ಪ್ರಾಂತದ ಮೇಲ್ವರ್ಗದ ಜನತೆಯ ತುಳಿತಕ್ಕೆ ಒಳಪಟ್ಟು ದಿಕ್ಕು ತಪ್ಪಿದವರಂತೆ ಬಾಳುತ್ತಿರುವುದನ್ನು ನೋಡಬಹುದಾಗಿದೆ. ವಿದ್ಯಾವಂತರು ತರುಣರು ಇಂದು ತಮ್ಮ ಜನಾಂಗದಲ್ಲಿ ಅಕ್ಷರ ಕ್ರಾಂತಿಯನ್ನೇ ಎಬ್ಬಿಸಬೇಕಾಗಿದೆ. ನಮ್ಮ ಜನಾಂಗದ ಉಜ್ವಲ ಇತಿಹಾಸವನ್ನು ಕಿರಿಯರಿಂದ ಹಿರಿಯರವರೆಗೆ ಮನದಟ್ಟುಮಾಡಿಕೊಡುವಲ್ಲಿ ನೆರವಾಗಬೇಕಾಗಿರುವ ಸಂದರ್ಭ ಎಂದಿ ಗಿಂತಲೂ ಇಂದು ಹೆಚ್ಚು ಪರಿಣಾಮಕಾರಿ ಆಗಿರುವುದೆಂಬುದನ್ನು ಕೂಡಲೇ ಮನಗಂಡು ಕಾರ್ಯತತ್ಪರರಾಗುವುದು ಜನಾಂಗದ ಭವಿಷ್ಯಕ್ಕೆ ಒಳ್ಳೆಯದೆಂಬುದನ್ನು ಅರಿತುಕೊಳ ಬೇಕಾಗಿದೆ.

ಇತಿಹಾಸದ ಪುಟಗಳಲ್ಲಿ ಬೇಡರು-ನಾಯಕರು ಪಾಳೇಗಾರರು ಎಂದು ಪ್ರಖ್ಯಾತಿ ಪಡೆದಿರುವ ಈ ಜನಾಂಗದವರು ರೂಢಿಯಲ್ಲಿ ಪಾಳೇಗಾರರು, ನಾಯಕ, ಬೇಡರು, ವಾಲ್ಮೀಕಿ, ವಾಲ್ಮೀಕಿ ಮಕ್ಕಳು, ಕನ್ನಯ್ಯನ ಕುಲದವರು, ತಳವಾರರು, ದೊರೆಮಕ್ಕಳು, ಪರಿವಾರದವರು, ಕ್ಷತ್ರಿಯರು, ಗುರಿಕಾರರು ಮುಂತಾದ ಹೆಸರುಗಳಿಂದ ಕರೆದುಕೊಳ್ಳಲ್ಪಟ್ಟಿರುವ ಒಂದೇ ಜನಾಂಗದವರಾಗಿರುತ್ತಾರೆ.

ಮೂಲದಲ್ಲಿ ನಾಯಕರಾಗಿದ್ದವರು ಮೇಲ್ಕಂಡ ಒಂದೊಂದು ಹೆಸರು ಪಡೆಯುವುದಕ್ಕೂ ಒಂದೊಂದು ಇತಿಹಾಸದ ಹಿನ್ನೆಲೆ ಇದೆ. ಸಂಕ್ಷಿಪ್ತವಾಗಿ ವಿವರಿಸುವುದಾದರೆ, ಸೃಷ್ಟಿಯ ಮೊದಲ ಮಾನವ ಮಗನಾಗಿ ತನ್ನ ಅಸನವ್ಯಸನಗಳಿಗಾಗಿ ಧನುರ್ಧಾರಿಯಾಗಿ ಬೇಟೆ ಮಾಡಿದ ಮೊದಲ ಮಾನವನೇ ಬೇಡ, ವಿಶ್ವದ ಎಲ್ಲೆಡೆಯಲ್ಲಿಯೂ ಮೂಲ ನಿವಾಸಿಯಾಗಿ ರುವವನು ಬೇಡ, ಸ್ವಬಲ, ಸ್ವಶಕ್ತಿ, ಸ್ವಾಭಿಮಾನದ ಗುರಿ ಇಟ್ಟು ಸಾಧಿಸಿದವನು ಬೇಡ. ಕೊಟ್ಟ ಮಾತು, ತೊಟ್ಟ ಬಾಣ, ಇಟ್ಟ ಗುರಿ ಮುಟ್ಟಿಸದೇ ತಪ್ಪದವ ಬೇಡ, ಕ್ಷತ್ರಿಯ ವಂಶದ ಮೂಲ ಪುರುಷ ಬೇಡ.

ವಿಜಯನಗರದ ಸ್ಥಾಪನೆಯ ಪೂರ್ವದಲ್ಲಿ ಮಹಮ್ಮದೀಯರ ಧಾಳಿಯನ್ನು ರಾವೇಶದಿಂದ ಎದುರಿಸಿ ಅನೇಕ ಬಾರಿ ಹಿಮ್ಮೆಟ್ಟಿಸಿ ಅವರಿಂದ “ಬೇಡರ್” ಎನಿಸಿ ಕೊಂಡರು. ನಮ್ಮ ಪುರಾತನ ಪುರಾಣಗಳಲ್ಲಿ ಬರುವ ನಿಷಾದರು, ಕಿರಾತ, ವ್ಯಾಧ, ಪುಳಿಂದ, ಬಿಲ್ಲ ಎಂದು ಉಲ್ಲೇಖವಾಗಿರುವ ಜನಾಂಗವೇ ನಮ್ಮ ಮೂಲ ಜನಾಂಗವೆಂಬ ತರ್ಕವೂ ವಿದ್ವಜ್ಜನರಲ್ಲಿದೆ. ಈ ಪದಗಳಿಗೆ “ಬೇಡರು” ಎಂದು ಅರ್ಥವಿದೆ. ಇವರು ರಾಜ ಮರ‍್ಯಾದೆಯಿಂದ ಬೇಟೆಯಾಡುವುದರಲ್ಲಿ ನಿಸ್ಸೀಮರಾಗಿದ್ದುದರಿಂದಲೂ ಬೇಡರೆಂದು ಕರೆಯಲ್ಪಟ್ಟರು.

ಕಾಡಿನಲ್ಲಿ ನೆಲೆಸಿ ತಮ್ಮ ಮೂಲಧರ್ಮವಾದ ದುಷ್ಟ ಶಿಕ್ಷಣ, ಶಿಷ್ಟ ಪರಿಪಾಲನೆ ಕರ್ತವ್ಯ ನಿಷ್ಠೆಯಿಂದ ದುಷ್ಟಮೃಗಗಳಿಂದ ಸಾಧುಸಂತರಿಗೆ ಆಗುತ್ತಿದ್ದ ತೊಂದರೆಯನ್ನು ತಪ್ಪಿಸುತ್ತ, ಜಗತ್ ಕಲ್ಯಾಣಕ್ಕಾಗಿ ಶ್ರಮಿಸುತ್ತಿದ್ದ ಋಷ್ಯಾಶ್ರಮಗಳನ್ನು ದುಷ್ಟರಿಂದ ರಕ್ಷಣೆ ಮಾಡಿಕೊಂಡು ಬಂದುದರಿಂದ ಜನನಾಯಕರಾಗಿದ್ದ ಅವರನ್ನು ಆಶ್ರಮವಾಸಿಗಳು “ನಾಯಕ” ನಾಮದಿಂದ ಕರೆದರು. ಕ್ಷತ್ರಿಯ ನಾಮಕ್ಕೆ ಅನ್ವಯಿಸುವ ಅಖಿಲಾಂಡ ಕೋಟಿ  ಬ್ರಹ್ಮಾಂಡ ನಾಯಕನಾದ ದೇವ ದೇವನ ನಾಮಾಂಕಿತವಾದ ನಾಯಕ ನಾಮವನ್ನು ಸ್ವೀಕರಿಸಿ ಕಂಗೆಟ್ಟ ಕ್ಷತ್ರಿಯರು “ನಾಯಕ” ಎಂಬ ನಾಮಧೇಯದಿಂದ ಅರಣ್ಯದಲ್ಲಿ ವಾಸಿಸತೊಡಗಿದರು. ಅಂದಿನಿಂದ ಇಂದಿನವರೆಗೂ ಈ ಜನಾಂಗದವರು “ನಾಯಕ ಜನಾಂಗ”ದವರೆಂದು ಕರೆಸಿಕೊಳ್ಳಲ್ಪಡುತ್ತಿದ್ದಾರೆ.

ಹೀಗೆ ಅರಣ್ಯವಾಸಿಯಾದ ನಾಯಕರಲ್ಲಿ ದಿನ ಕ್ರಮೇಣ ಬಾಹ್ಯ ಪ್ರಪಂಚದ ಸಂಪರ್ಕವಿಲ್ಲದೆ ರಾಜ್ಯಕಟ್ಟುವುದು ಆಳುವುದು ಮುಂತಾದವು ಮಾಯವಾಗಿ ಕೇವಲ ಅರಣ್ಯವಾಸಿಗಳ ಧರ್ಮ ಸಂಪ್ರದಾಯಗಳು ಬೇಟೆಯಾಡುವುದು ಮೃಗ ಪಕ್ಷಿಗಳ ಚರ್ಮದಿಂದ, ಗರಿಗಳಿಂದ ಅಲಂಕರಿಸಲ್ಪಟ್ಟು ಉಡುಪುಗಳನ್ನು ಧರಿಸುವುದೂ ಮುಂತಾಗಿ ರೂಢಿಗೆ ಬಂದು “ಕಿರಾತ”ರೆನಿಸಿಕೊಂಡರು.

ಈ ನಾಯಕರು ರಾಜಮರ‍್ಯಾದೆಯಲ್ಲಿ ಬೇಟೆಯಾಡುವುದರಲ್ಲಿ ನಿಸ್ಸೀಮರಾಗಿದ್ದರು. ಇಟ್ಟ ಗುರಿ ತಪ್ಪದೆ ಹೊಡೆಯುವುದರಲ್ಲಿ ಪ್ರಣರಾಗಿದ್ದುದರಿಂದ ಇವರನ್ನು ಗುರಿಕಾರರೆಂತಲೂ ಕರೆಯುತ್ತಾರೆ.

ನಿಷಾದರು, ವ್ಯಾದರು ಎಂದು ಸಂಸ್ಕೃತ ಶಬ್ದದಲ್ಲಿ ಕರೆಸಿಕೊಳ್ಳಲ್ಪಡುವ ಈ ಬೇಡರ ಕುಲದಲ್ಲಿ ವಾಲ್ಮೀಕಿ ಮಹೋದಯನು ಜನ್ಮತಾಳಿದನು. ನಿಷಾದರು (ಬೇಡರು) ಅತ್ಯಂತ ಅಜ್ಞರೆಂದಾಗಲಿ, ಕ್ರೂರಿಗಳಾದ ಕಾಡು ಜನರೆಂದಾಗಲಿ, ಭಾವಿಸಬೇಕಾಗಿಲ್ಲ. ಶ್ರೀರಾಮನ ಪ್ರೀಯ ಸ್ನೇಹಿತನಾದ ಗುಹನೂ ಬೇಡರ ದೊರೆ ಎಂಬುದನ್ನು ಗಮನಿಸಿದರೆ ಬೇಡರಿಗೂ ಅವರ ನೆಲದ, ಕುಲದ ವಿದ್ಯೆ, ಸಂಸ್ಕೃತಿ ಇದ್ದವೆಂದು ಒಪ್ಪಿಕೊಳ್ಳಬೇಕಾಗುತ್ತದೆ ಎಂದು ರಾಷ್ಟ್ರಕವಿ ಕುವೆಂಪುರವರು ಅಭಿಪ್ರಾಯಪಟ್ಟಿದ್ದಾರೆ.

ವ್ಯಾಧ (ಬೇಡರ) ಕುಲದಲ್ಲಿ ಹುಟ್ಟಿದ ವಾಲ್ಮೀಕಿ ವ್ಯಾಧ ವೃತ್ತಿಯಿಂದಲೇ ಬಾಳುತ್ತಿದ್ದ ನೆಂದರೆ ಅಧರ್ಮವೂ ಅಲ್ಲ, ಆಶ್ಚರ್ಯವೂ ಅಲ್ಲ. ಇವನು ರಚಿಸಿದ ಕಾವ್ಯವೇ ಮಾನವನಿಗೆ ಪವಿತ್ರ ಗ್ರಂಥವೂ, ಮಾರ್ಗದರ್ಶನವನ್ನೀಯುತ್ತಿರುವ ಚೇತನವೂ ಆಗಿರುವ ಜಗದ್‌ವಿಖ್ಯಾತ ವಾಲ್ಮೀಕಿ ರಾಮಾಯಣ. ಇವನು ಬೋಧಿಸಿ ಪ್ರಚುರಪಡಿಸಿದ ಧರ್ಮವೇ ವಾಲ್ಮೀಕಿ ಧರ್ಮ, ಜಗತ್ ಕಲ್ಯಾಣಕ್ಕಾಗಿ ಸಾರಿದ ಸಂದೇಶವೇ ವಾಲ್ಮೀಕಿ ಸಂದೇಶ, ಈ ಮಹೋದಯ ಆದಿಕವಿ ವಾಲ್ಮೀಕಿಯ ಅನುಯಾಯಿಗಳೇ ಅಂದಿನಿಂದ ಇಂದಿನವರೆಗೂ ವಾಲ್ಮೀಕಿ ಮಕ್ಕಳೆಂತಲೂ, ವಾಲ್ಮೀಕಿ ಮತದವರೆಂತಲೂ ಕರೆಸಿಕೊಳ್ಳುತ್ತಾ ಬಂದಿದ್ದಾರೆ.

ಶ್ರೀರಾಮಚಂದ್ರನಿಗೆ ತಾನು ತಿಂದ ಹಣ್ಣುಗಳನ್ನು ತಿನ್ನಿಸಿ ತೃಪ್ತಳಾಗಿ, ಶರೀರವನ್ನು ತ್ಯಜಿಸಿದ ಮಹಾಭಕ್ತೆ, ‘ಶಬರಿ’, ಶ್ರೀರಾಮಚಂದ್ರನ ಪರಮ ಸ್ನೇಹಿತ ಬೇಡರ ದೊರೆ ‘ಗುಹ’ ಇವರು ಭಕ್ತಿಯ ಭುಗ್ಗೆಗಳಾದರೆ, ದ್ವಾಪರದ ಏಕಲವ್ಯ, ಧರ್ಮವ್ಯಾದರೂ ಗುರು ಹಿರಿಯರ ಭಕ್ತಿಯಲ್ಲಿ ಅಗ್ರಗಣ್ಯರು. ಕಲಿಯುಗದ ಬೇಡರ ಕಣ್ಣಪ್ಪ ಮೂಢಭಕ್ತಿಯ ಪ್ರತೀಕ.

ಬೇಡರ ಕಣ್ಣಪ್ಪನ ಸ್ಮಾರಕದೋಪಾದಿ ನೆಲೆ ನಿಂತಿರುವ ಮಹಾಕ್ಷೇತ್ರಕಾಳಾಹಸ್ತಿ ಹಿಂದೂಗಳ ಪವಿತ್ರ ಕ್ಷೇತ್ರವೂ ಅಹುದು. ಪ್ರವಾಸಿಗಳಿಗೆ ಯಾತ್ರಾಸ್ಥಳವೂ ಅಹುದು. ಇಂತಹ ಮಹಾಕ್ಷೇತ್ರವೇ ಬೇಡರ ಕಣ್ಣಯ್ಯನ ವಾಸಸ್ಥಳ. ಪರಮ ಭಗವದ್ಭಕ್ತನೂ, ಮಹಾಮಹಿಮನೂ ಅಚಲನಿಷ್ಠನೂ, ದೃಢಕಾಯನೂ ತನ್ನ ಬೇಡರಪಡೆಗೆ ಮುಖಂಡರೂ ಆಗಿದ್ದ ಕಣ್ಣಯ್ಯನು ದುಷ್ಟ ಮೃಗಗಳನ್ನು ನಾಶ ಮಾಡುತ್ತಾ ಸಜ್ಜನ ಸೇವೆಯಲ್ಲಿ ನಿರತರಾಗಿದ್ದು ಶಿವಸಾನಿಧ್ಯವನ್ನು ಸೇರಿದರು. ಈ ಜನಾಂಗದವರು ಈಗಲೂ ಲಗ್ನಾದಿ ಶುಭಕಾರ್ಯಗಳಲ್ಲಿ ಪ್ರಥಮ ಪೂಜೆಯನ್ನು ಈ ಕಣ್ಣಯ್ಯನವರಿಗೆ ಸಲ್ಲಿಸುವುದನ್ನು ನೋಡ ಬಹುದು. ಅಲ್ಲದೆ ಕಣ್ಣಯ್ಯನ ಪೂಜೆ ಇಲ್ಲದೆ ಯಾವ ಶುಭಕಾರ್ಯವೇ ಆಗಲಿ ಫಲಪ್ರದಾಯಕವಲ್ಲವೆಂಬ ಭಾವನೆ ಈಗಲೂ ಈ ಜನಾಂಗದಲ್ಲಿ ಬೇರೂರಿದೆ. ಆದ್ದರಿಂದ ಈ ಜನಾಂಗದವರು ನಾವು “ಕಣ್ಣಯ್ಯನ ಕುಲದವರು” (ಕನ್ನಯ್ಯನವರು) ಎಂದು ಕರೆದು ಕೊಳ್ಳುತ್ತಾರೆ.

ನಾಯಕರು (ಬೇಡರು) ಮೊದಲಿನಿಂದಲೂ ದಂಡಿನ ಊಳಿಗಕ್ಕಾಗಿ ಮೀಸಲಾಗಿ ನಿಂತ ಕ್ಷಾತ್ರವೃತ್ತಿಯ ರ ಜನಾಂಗ ಎನ್ನುವ ವಿಷಯವು ಸಾಹಿತ್ಯ, ಚರಿತ್ರೆ, ಶಾಸನಾಧಾರಗಳಿಂದ ಸ್ಥಿರವಾಗಿದೆ.

ಈ ನಾಯಕರರು ತಮ್ಮ ಎದುರಾಳಿಗಳನ್ನು ಸದೆ ಬಡಿಯುವಲ್ಲಿ ಅಪ್ರತಿಮ ಸಾಹಸಿಗಳಾಗಿದ್ದರು. ವೈರಿಗಳಿಗೆ ಸಿಂಹಪ್ರಾಯರಾಗಿದ್ದರು. ಈ ಜನಾಂಗದವರು ಕರ್ನಾಟಕದ ವಿಸ್ತಾರವಾದ ಪ್ರದೇಶಗಳಲ್ಲಿಯೂ ನೆಲೆಸಿರುವರಾಗಿದ್ದಾರೆ. ಈ ಜನಾಂಗದವರು ಇಡೀ ಭರತಖಂಡದಲ್ಲಿಯೇ ಮೂಲನಿವಾಸಿಗಳಾಗಿದ್ದ ಜನಾಂಗವೆಂಬ ಮಾತಿದೆ. ಬೇಡರು ದ್ರಾವಿಡರಿಗಿಂತ ಪೂರ್ವದ ಆದಿವಾಸಿಗಳೆಂಬ ನಂಬಿಕೆಯೂ ಕೆಲವು ಇತಿಹಾಸ ಸಂಶೋಧಕ ರಲ್ಲಿ ಇದೆ.

ಬೇಡರೆಂದರೆ ಕರ್ನಾಟಕದ ರಜಪೂತರು ಎಂಬುದು ಕೆಲವು ಇತಿಹಾಸ ಸಂಶೋಧಕರ ವಾದ. ರಜಪೂತರು ತಾವು ರಾಜಪುತ್ರರು ಎಂದರೆ ಅರಸನ ಮಕ್ಕಳು ಎಂದು ಹೇಳಿಕೊಳ್ಳುವಂತೆ ಈ ಬೇಡರು ತಾವು “ದೊರೆ ಮಕ್ಕಳು” “ನಾಯಕ ಮಕ್ಕಳು” ಇಲ್ಲವೇ ಕನ್ನಯ್ಯನವರು, ರಾಜಪರಿವಾರದವರು ಎಂಬುದಾಗಿ ಗೌರವದಿಂದ ಕರೆಸಿಕೊಳ್ಳುತ್ತಾರೆ.

ವಿಜಯನಗರ ಸಾಮ್ರಾಜ್ಯ ಸ್ಥಾಪನೆಯ ಪೂರ್ವದಲ್ಲಿ ಪ್ರಭುತ್ವ ನಡೆಸಿದ ಮಹಮದೀ ಯರು ಹಾಗೂ ಪಾಳೇಗಾರರ ಪಡೆಗಳಲ್ಲಿ ಬೇಡರ ಪಡೆಗಳು ನೇಮಿಸಲ್ಪಟ್ಟಿದ್ದವು. ವಿಜಯನಗರ ಸಾಮ್ರಾಜ್ಯ ಸ್ಥಾಪಕರೂ ಬೇಡ ದೊರೆಗಳೇ ಆಗಿದ್ದರು. ಅಷ್ಟೇ ಏಕೆ ವಿಜಯನಗರ ಸಾಮ್ರಾಜ್ಯದಲ್ಲಿ ಸೈನ್ಯದ ಬಹುಭಾಗವು ಈ ಬೇಡರ ಕಾಲಾಳುಗಳ ಪಡೆಯಿಂದ ಕೂಡಿದ್ದಿತು. ವಿಜಯನಗರ ಸಾಮ್ರಾಜ್ಯದ ಅನಂತರವೂ ಪ್ರಾಮುಖ್ಯತೆಗೆ ಬಂದ ಅನೇಕ ಪಾಳೇಗಾರರ ವಿಸ್ತಾರವಾದ ರಾಜ್ಯಗಳು ಈ ಬೇಡ ನಾಯಕ ರರಿಂದ ಸ್ಥಾಪನೆಯಾದವು ಗಳಾಗಿವೆ.

ನವಾಬ ಹೈದರಾಲಿ ಹಾಗೂ ಈತನ ಪುತ್ರ ಟೀಪುವಿನ ದಂಡಿನಲ್ಲಿ ಈ ಬೇಡ ರರು ಬಹುಸಂಖ್ಯೆಯಲ್ಲಿದ್ದುಕೊಂಡು ಆ ಪಿತಾಪುತ್ರರ ವಿಜಯಗಳ ಶ್ರೇಯಸ್ಸಿನ ಬಹುಭಾಗವು ಈ ಬೇಡ ನಾಯಕರೆ ಆಗಿದ್ದರು, ಈ ಬೇಡ ರರು ಯುದ್ಧ ಕುಶಲತೆ ತಂತ್ರವನ್ನು ಅವರು ರಣಭೂಮಿಯಲ್ಲಿ ತೋರ್ಪಡಿಸುತ್ತಿದ್ದ ಶೌರ್ಯ, ಧೈರ್ಯಗಳನ್ನು ಮನಗಂಡಿದ್ದ ಹೈದರನು ತನ್ನ ಕುತಂತ್ರ ರಾಜಕಾರಣ, ಆಡಳಿತ ನೈಪುಣ್ಯತೆಯಿಂದ ಇವರನ್ನು ತನ್ನ ಪರವಾಗಿ ಮಾಡಿಕೊಂಡು ಹೆಚ್ಚು ಸಂಖ್ಯೆಯಲ್ಲಿ ತನ್ನ ಸೈನ್ಯ ಪಡೆಗಳಲ್ಲಿ ಈ ಬೇಡ ತರುಣರನ್ನು ನೇಮಿಸಿಕೊಂಡು ಶತೃಗಳ ಮೇಲೆರಗಿ ವಿಜಯೋತ್ಸವಗಳನ್ನು ಮಾಡುವ ಮೂಲಕ ಇಡೀ ಕರ್ನಾಟಕದ ಪ್ರದೇಶವನ್ನೇ ತನ್ನ ಕೈವಶಮಾಡಿಕೊಳ್ಳುವ ಹೊಂಚು ಹೂಡಿದ್ದನು. ಅಲ್ಲದೆ ಈ ಬೇಡ ತರುಣರನೇಕರು ಆ ಕಾಲದಲ್ಲಿ ಸಾಕಷ್ಟು ಸಂಖ್ಯೆಯಲ್ಲಿ ಮತಾಂತರ ಮಾಡಿರುವ ರೆಂಬ ಐತಿಹ್ಯವಿದೆ.

ನಾಯಕ ಜನಾಂಗಕ್ಕೆ ಮತ್ತೊಂದು ಪ್ರಮುಖ ಪರ‍್ಯಾಯ ಹೆಸರೆಂದರೆ ಪಾಳೆಯಗಾರ ಅಥವಾ ಪಾಳೇಗಾರ ಎಂದು ಕರೆಯುತ್ತಾರೆ. ಈ ನಾಯಕರು ಪಾಳೆಯಗಳ ಮುಖಂಡರುಗಳಾಗಿ ಪ್ರಭುತ್ವ ಮಾಡಿದ್ದರಿಂದ ಇವರಿಗೆ ಪಾಳೆಯಗಾರರೆಂದು ಕರೆಯುತ್ತಾರೆ.

ಒಂದು ಪಾಳೆಯ ಗುಂಪಿನ ನಾಯಕನಿಗೆ ಪಾಳೇಗಾರ ಎಂದು ಸಾಮಾನ್ಯವಾಗಿ ಅರ್ಥೈಸಬಹುದಾದರೂ ಈ “ಪಾಳೇಯಗಾರ” ಎನ್ನುವುದು ಒಂದು ಜನಾಂಗದ ಹೆಸರೂ ಕೂಡ ಆಗಿದೆ ಎಂಬುದನ್ನು ಮುಖ್ಯವಾಗಿ ಗಮನದಲ್ಲಿಡಬೇಕಾದ ಅಂಶ.

ವ್ಯಕ್ತಿಶಃ ಶೂರರಾಗಿದ್ದ ನಾಯಕರು ಸ್ವಸಂರಕ್ಷಣೆ ಸ್ವಾಭಿಮಾನ ಮತ್ತು ಸೃಜನ ಪರಿಪಾಲನೆಯ ಸಲುವಾಗಿ ತಕ್ಕ ಸನ್ನಾಹ ಮಾಡಿಕೊಳ್ಳಬೇಕಾಯಿತು. ಗುಂಪು ಕೂಡಿಕೊಂಡು ಸತ್ಯ ಪರಿಪಾಲನೆಯ ಸಲುವಾಗಿ ಅತ್ತಿಂದಿತ್ತ, ಇತ್ತಿಂದತ್ತ ತಮ್ಮ ಪಡೆಗಳನ್ನು ಒಯ್ಯಬೇಕಾ ಗುತ್ತಿತ್ತು. ಹೀಗೆ ಪರಿಭ್ರಮಿಸುವ ಪಡೆಗೆ ಪಾಳೆಯವೆಂದೂ ಅದರ ನಾಯಕನಿಗೆ ಪಾಳೆಯಗಾರ ನೆಂದೂ ಹೆಸರಾಯಿತು. ಹೀಗೆ ಪಾಳೆಯಗಾರರೆಂದು ಕರೆಯಲ್ಪಟ್ಟು ನಾಯಕರು ಕರ್ನಾಟಕದಲ್ಲಿ ನೆಲೆಸಿದ್ದುದು ಸುಮಾರು ಹತ್ತನೆಯ ಶತಮಾನದಲ್ಲಿ ಈ ರೀತಿ ಸ್ಥಾಪನೆಯಾಗಿ ಪ್ರಖ್ಯಾತಿ ಹೊಂದಿದ ಪಾಳೆಯಪಟ್ಟುಗಳಲ್ಲಿ ಆನೆಗೊಂದಿಯೇ ಮೊದಲನೆಯದೆನ್ನಬಹುದು ಎಂದು ಇತಿಹಾಸತಜ್ಞರಾದ ಶ್ರೀ ಎಚ್.ವಿ. ರನಾಯಕರು ತಮ್ಮ ಕ್ಷಾತ್ರಾಂಶ ಪ್ರಭೋದ (೧೯೪೮) ಗ್ರಂಥದಲ್ಲಿ ಹೇಳಿದ್ದಾರೆ. ಈ ರೀತಿ ಉಲ್ಲೇಖವಿದೆ : ಪೊಲ್ಲಂ ಪ್ರದೇಶದ ಮೇಲೆ ಅಧಿಕಾರ ವ್ಯಾಪ್ತಿ ಇದ್ದ ಈ ಪಾಳೆಗಾರರು ಹಿಂದೂ ರಾಜರ ಸಾಮಂತ ವರ್ಗಕ್ಕೆ ಸೇರಿದವರಾಗಿದ್ದರು. ಇವರ ಅಧೀನದಲ್ಲಿದ್ದ ಭೂಪ್ರದೇಶಕ್ಕೆ “ಪೊಲ್ಲಂ” ಎಂದು ಹೆಸರಿದ್ದ ಕಾರಣ ಇವರಿಗೆ “ಪಾಳೆಯಗಾರ” ಎಂಬ ಹೆಸರು ಪ್ರಾರಂಭವಾದಂತೆ ತೋರುವುದು. ಈ ಪಾಳೆಯ ಗಾರರನೇಕರು ಕಷ್ಟ ಸಹಿಷ್ಣುಗಳಾದ “ಬೇಡರ ಜಾತಿಗೆ” ಸೇರಿದವರಾಗಿದ್ದರು ಎಂಬ ಅಭಿಪ್ರಾಯವಿದೆ.

ಇವರು ರಪುರುಷರಾಗಿ ಭಾರತ ದೇಶದಲ್ಲೆಲ್ಲಾ ಪ್ರಸಿದ್ದಿಗೆ ಬಂದರಾದರೂ ಅವರು ದರೋಡೆಗಾರರು, ಸುಲಿಗೆಕೋರರು ಎಂಬ ಕೀರ್ತಿಗೆ ಪಾತ್ರರಾದರು. ಕನ್ನಡದ ಪಾಳೆಯಗಾರ ರೆಂಬ ಹೆಸರಿನ ಇವರು ತೆಲುಗಿನಲ್ಲಿ “ಪಾಳೇಗಾಡು”, ತಮಿಳಿನಲ್ಲಿ ‘ಪಾಲೈಕ್ಕಾರನ್’, ಮರಾಠಿಯಲ್ಲಿ ‘ಪಾಳೇಗಾರ’ ಎಂದು ಪ್ರಸಿದ್ಧರಾಗಿದ್ದರು. ಇವರು ಭಯವರಿಯದ ಕಲಿ ಪುರುಷರಾಗಿದ್ದರು. ಶಸ್ತ್ರಾಸ್ತ್ರ ಸಜ್ಜಿತರಾಗಿ ಅಭಯಾರಣ್ಯಗಳಲ್ಲಿ ಸಂಚರಿಸುತ್ತಾ ಎಂತಹ ಭೀಕರವಾದ ಜಂತುವನ್ನು ಏಕಾಂಗಿಯಾಗಿ ಸಂಹರಿಸಬಲ್ಲವರಾಗಿದ್ದರು, ಕ್ರೂರವಂತರಾದರೂ, ಅಸಹಾಯ ಶೂರರೂ, ನಿಸ್ಸೀಮ ದೈವಭಕ್ತರೂ ಪ್ರಜಾಹಿತರೂ ಆಗಿದ್ದರು. ಮುಸಲೀಮರ ಹಾವಳಿಯು ದೇಶಾದ್ಯಂತ ತುಂಬಿ ಅಕೃತ್ಯ, ಅನ್ಯಾಯ, ಅನ್ಯಮತ ದ್ವೇಷದಿಂದ ಜರ್ಜರಿತ ವಾಗಿದ್ದ ಕಾಲದಲ್ಲಿ ಇವರನ್ನು ತಡೆಗಟ್ಟುವ ರ ಜನಾಂಗವು ಉತ್ತರದ ಹಿಂದೂ ಸ್ಥಾನದಲ್ಲಿ ಇಲ್ಲದಿದ್ದುದರ ಪರಿಣಾಮವಾಗಿ ರಕ್ತದ ಕೋಡಿ ಹರಿದು ಇವರ ಪ್ರಭಾವವು ದಕ್ಷಿಣ ಹಿಂದೂ ಸ್ಥಾನಕ್ಕೂ ಪಸರಿಸುತ್ತಾ ಬಂತು.

ಮುಸಲೀಮ ಸಾಮ್ರಾಟರ ಮತ್ತು ಸರದಾರರ ರಾಜ್ಯದಾಹ ಮತ್ತು ರಾಕ್ಷಸೀ ಕೃತ್ಯವು ಮುಗಿಲಿಗೇರಿದಾಗ ಹಿಂದೂ ಧರ್ಮ ರಕ್ಷಣೆಗಾಗಿ ಈ ಜನಾಂಗದ ಯುವಕರನೇಕರು ಮನೆ ಮಠಗಳನ್ನು ಸರ್ವತ್ಯಾಗ ಮಾಡಿ ಯಾವಾಗಲೂ ಸ್ವಯಂ ಸೇವಕರಾಗಿ ಖಡ್ಗ ಹಿಡಿದು ಮಹಿಳೆಯರ ಮತ್ತು ನಾಡಿನ ಮಾನರಕ್ಷಣೆಗಾಗಿ ಎಲ್ಲೆಂದರಲ್ಲಿ ತುರುಕರ ದಂಡಿನ ಮೇಲೆ ಬಿದ್ದು ತುಂಡರಿಸುತ್ತಿದ್ದರು. ಖಡ್ಗದಾರಿಗಳಾದ ನಾಯಕ ತರುಣರು ಮದೋನ್ಮತ್ತ ಮುಸಲ್ಮಾನ ಪಾಳೆಯಗಳನ್ನು ಹೊಕ್ಕು ಸಿಕ್ಕಿ ಸಿಕ್ಕಿದವರ ರುಂಡ ಚಂಡಾಡುತ್ತಿರಲು ಭೀತಿಗೊಂಡ ಮುಸಲ್ಮಾನ ಸೈನಿಕರು ಇವರ ದರ್ಶನ ಮಾತ್ರದಿಂದಲೇ ಜರ್ಜರಿತರಾಗಿ ‘ತಲೆವಾರ್’ (ಖಡ್ಗ ಅಥವಾ ಕತ್ತಿ) ಎಂದು ಕೂಗುತ್ತಿದ್ದರು. ತಲ್‌ವಾರ್‌ಧಾರಿಯಾದ ರನಾಯಕ ತರುಣರಿಗೆ ಸಂಬೋಧನಾರೂಪದಿಂದ ಅವರ ಭಾಷೆಯಲ್ಲಿ ‘ತಲ್‌ವಾರ್’ ಎಂದು ಕೂಗುತ್ತಿದ್ದರು. ಇದರ ಪರಿಣಾಮವಾಗಿ ಮುಸಲ್ಮಾನ ದಾಳಿಯ ಕಾಲದಿಂದ ಈ ನಾಯಕ ಜನಾಂಗಕ್ಕೆ ಸಂಪ್ರದಾಯವಾಗಿ ರೂಪಾಂತರ ಹೊಂದಿದ ‘ತಳವಾರ’ನೆಂಬ ಹೆಸರು ಬಂದಿರುತ್ತದೆ.

ಹೀಗೆ ಸ್ವಯಂಸೇವಕರಾಗಿ ಜನಸೇವೆ ದೇಶ ಸೇವೆ ಸಲ್ಲಿಸಿದ ಈ ರರಿಗೆ ಪ್ರಭುತ್ವದಲ್ಲಿದ್ದ ನಾಯಕರು ಇವರು ಸಲ್ಲಿಸಿದ ಸೇವೆಯ ಕುರುಹಾಗಿ ತಳವಾರರು, ಕೋಲಕಾರರೆಂತೂ ಕರೆದು, ತಮ್ಮ ಸಂಸ್ಥಾನದ, ದುರ್ಗದ ಪ್ರತಿ ಊರಿನ ಸ್ಥಳ ವಿಚಾರಗಳನ್ನು ತಿಳಿಯಲು ತಮ್ಮ ಪ್ರತಿನಿಧಿಯಾಗಿ ನೇಮಿಸಿಕೊಳ್ಳುತ್ತಿದ್ದರು, ಇವರು ಯಾವಾಗಲೂ ಖಡ್ಗದಾರಿ ಗಳಾಗಿದ್ದು ಪ್ರಭುವಿನ ಅಧೀನದಲ್ಲಿದ್ದ ನಾಡಿನ ಆಗು ಹೋಗುಗಳನ್ನು ನೋಡಿಕೊಂಡು ದುಷ್ಟ ವರ್ತನೆಗೆ ಎಡೆಗೊಡದಂತೆ ನೋಡಿಕೊಳ್ಳುತ್ತಿದ್ದರು. ದುರ್ಗದ ತಳವಾರನಲ್ಲದೆ ಪಾಳೆಗಾರನ ಪ್ರತಿನಿಧಿ ಎನಿಸಿಕೊಳ್ಳುತ್ತಿದ್ದ ಅನೇಕ ತಳವಾರರು ನಾಯಕನ ಪಾಳೆಪಟ್ಟಿಗೆ ಒಳಪಟ್ಟು ಅಧೀನ ನಾಯಕರುಗಳ ಗ್ರಾಮಾಂತರಗಳಲ್ಲಿ ಸಂಚರಿಸುತ್ತಾ ಶತೃಗಳು ಮತ್ತು ಕೆಟ್ಟವರು ಸುಳಿಯದಂತೆ ನೋಡಿಕೊಂಡು, ರಾಜ್ಯದಲ್ಲಿ ಕಂಡುಬರುವ ಅವಶ್ಯಕವಾದ ಸಮಾಚಾರಗಳನ್ನು ನಾಯಕರಿಗೆ ತಿಳಿಸುತ್ತಾ ಅವನ ಆಜ್ಞಾ ಪಾಲಕರಾಗಿರುತ್ತಿದ್ದರು. ಇವರನ್ನು ನಾಡತಳವರರೆಂದೂ ಕೋಲಕಾರರೆಂದೂ ಕರೆಯುತ್ತಿದ್ದರು. ತಿರುಪತಿ ಪಗೋಡದ ಪವಿತ್ರ ಪ್ರಕಾರಗಳು, ಅಪ್ರತಿಮ ರರೂ, ಅಸಹಾಯ ಶೂರರೂ ಆಗಿದ್ದ ಈ ತಳವಾರರ (ನಾಯಕರ) ಹೊಣೆಯಲ್ಲಿದ್ದವು ಎಂಬ ಅಂಶವನ್ನು ಚರಿತ್ರೆಯ ಪುಟಗಳಿಂದ ಅರಿಯಬಹುದಾಗಿದೆ. ಈ ಕಾವಲುಗಾರರ ಸೇವಾನಿಷ್ಠೆಯು ಅಸದೃಶವಾಗಿದ್ದಿತು. ಇವರು ಆಪಗೋಡದ ಪಾರಂಪರ‍್ಯಾಧಿಕಾರದ ಕಾವಲುಗಾರರಾಗಿದ್ದರು. ಇವರ ರಕ್ಷಣೆ ನಿಷ್ಠೆಯ ಫಲವಾಗಿ ಮಹಮ್ಮದೀಯರರಾಗಲೀ, ಕ್ರೈಸ್ತರಾಗಲೀ ತಿರುಪತಿಯ ಗರ್ಭಗುಡಿಯನ್ನು ಅಶುದ್ಧ ಗೊಳಿಸಲು ಅವಶ್ಯಕವಾಗಿದ್ದಿತು. ಈ ನಾಯಕರು ತಮ್ಮ ಯೋಗಕ್ಷೇಮವನ್ನು ನೋಡಿ ಕೊಂಡು ಪ್ರಜೆಗಳನ್ನು ಬಾಹ್ಯಾಪಾಯದಿಂದಲೂ ಬೇರೆಯವರ ಆಕ್ರಮಣದಿಂದಲೂ ರಕ್ಷಿಸುತ್ತಿದ್ದರೂ ಸುಮಾರು ೧೫-೧೬ನೇ ಶತಮಾನಗಳಲ್ಲಿ ನಾನಾ ನಾಯಕರುಗಳಿಗೆ ವಿಜಯನಗರದ ಅರಸರು ಚಿಕ್ಕಪುಟ್ಟ ನಾಡುಗಳನ್ನಿತ್ತು ಪೋಗದಿ ಸಲ್ಲಿಸಬೇಕೆಂದು ಅವಶ್ಯ ಬಿದ್ದಾಗ ಸೇನಾ ಸಹಾಯ ನೀಡಬೇಕೆಂದು ಆದೇಶವಿತ್ತೂ ಪಾಳೇಗಾರರನ್ನಾಗಿ ನೇಮಕ ಮಾಡಿದ್ದರು. ಇವರ ಆಡಳಿತ ವೈಖರಿಯನ್ನು ನಾಡರಕ್ಷಣೆಯಲ್ಲಿ ಇವರು ತೋರಿಸುತ್ತಿದ್ದ ಸಾಹಸವನ್ನು ಪ್ರಜೆಗಳ ಮೇಲೆ ಅವರಿಗಿದ್ದ ವಾತ್ಸಲ್ಯವನ್ನು ಕಂಡು ಮೆಚ್ಚಿಕೊಂಡಿದ್ದರು.

ಶ್ರೀರಾಮನ ಭಕ್ತರಾಗಿ ರಾಮನಾಮವನ್ನು ಕೊಂಡಾಡುತ್ತಾ ವಾಲ್ಮೀಕಿ ಶಾಂತಿ ಸಂದೇಶ ವನ್ನು ಸಾರುತ್ತಿದ್ದ ಶಾಂತಿ ಪಡೆಯ ಅನ್ವಯಾಂತರಿಗಳೇ ಈಗಿನ ಸಂಚಲು ನಾಯಕರು ಅಥವಾ ಕೊಂಡ ರಾಜಲು ಅಥವಾ ರಾಮೋಶಿಗಳು, ಈಗಿನ ಅಡವಿ ಕಾಡುಗಳಲ್ಲಿ ಕಂಡು ಬರುವ ಬಿಲ್ಲರು ಅದೇ ವೃತ್ತಿಯಲ್ಲಿಯೇ ನಡೆದು ಬಂದ ಮೂಲ ಬೇಡವಂಶೀಯರು.

ಹಿಮಾಲಯದ ತಪ್ಪಲಲ್ಲಿರುವ ಶಬರ, ಕಿರಾತ, ಓಡ್ರ ಮುಂತಾದ ರಾಜ್ಯಗಳಲ್ಲಿ, ಹಿಂದೆ ಸೇರ್ಪಾ, ನಾಗ ಬಿಲ್ಲರೆಂಬ ಕಾಡು ಬೇಡ ನಿವಾಸಿಗಳು ರಾಜ್ಯವಾಳುತ್ತಿದ್ದರು. ಈಗ ಅವರ ಅನುಯಾಯಿಗಳೇ ಗುಡ್ಡಗಾಡಿನಲ್ಲಿ ವಾಸಿಸುತ್ತಿರುವರು, ಭಾರತದ ಬಹುಭಾಗದಲ್ಲಿ ವಾಲ್ಮೀಕಿ ನಾಯಕ ಜನಾಂಗವು ಆಯಾ ಪ್ರದೇಶಕ್ಕೆ ತಕ್ಕಂತೆ ನಡೆನುಡಿಗಳನ್ನು ಸಾಧಿಸಿಕೊಂಡು ಹೋಗಿರುವುದರಿಂದ ಭಿನ್ನ ಭಿನ್ನ ಜನಾಂಗವಾಗಿ ಕಾಣಲ್ಪಡುವರು.

ಕಿರಾತನರು ನೇಪಾಳ ದೇಶದ ಮೇಲೆ ದಾಳಿ ಮಾಡಿ ಅದನ್ನು ವಶಪಡಿಸಿಕೊಂಡು ತಮ್ಮ ಪ್ರಭುತ್ವ ಸ್ಥಾಪಿಸಿದ್ದರು. ನೇಪಾಳದ ಮೂಲ ಜನಾಂಗಗಳಲ್ಲಿ ಈ ಕಿರಾತನರು (ಬೇಡರು) ಮುಖ್ಯರಾಗಿದ್ದಾರೆ. ಹೀಗೆ ಒಂದೇ ಅರ್ಥ ಬರುವ ಒಂದೇ ಧರ್ಮದ ಎಲ್ಲರೂ ಸೇರಿದ ಈ ಜನಾಂಗದಲ್ಲಿ ಮುಖ್ಯವಾಗಿ ಊರುನಾಯಕರು, ಮ್ಯಾಸನಾಯಕರು, ಮಾರಮ್ಮ ನಾಯಕರು, ಮುತ್ಯಾಲ ನಾಯಕರು, ಹಾಲು ಬೇಡರು, ಮೊಂಡ ಬೇಡರು, ಸಂಚಲರು, ಬಿಲ್ಲರು, ರಾಜಪರಿವಾರದವರು, ಕೊಂಡರಾಜಲು ಎಂದು ನಾನಾ ಪಂಗಡಗಳಿದ್ದು ಇವರೆಲ್ಲರೂ ಒಂದೇ ಮೂಲ ಬುಡಕಟ್ಟಿಗೆ ಸೇರಿದವರಾಗಿದ್ದು ತಮ್ಮ ವಂಶದ ಹಿರಿಯರಾದ ವಾಲ್ಮೀಕಿ, ಕನ್ನಯ್ಯ, ಇವರುಗಳ ಮೂಲವನ್ನೇ ಹೇಳುತ್ತಾರೆ.

ಕಾರಣಾಂತರದಿಂದ ಕಾಡಿನಲ್ಲಿ ಸೇರಿಕೊಂಡು ಅಲೆಮಾರಿಗಳಂತಿದ್ದ ಈ ಜನ ಕೆಲವರು ಊರು ರಾಜ್ಯಗಳನ್ನು ಕಟ್ಟಿ ಆಳುತ್ತಿದ್ದರೆ, ಅವರಿಗೆ ಸಹಕಾರಿಗಳಾಗಿ ದೇವತಾ ಪೂಜೆ ಮಾಡಿಕೊಂಡು ದೇವರ ನೈವೇದ್ಯಕ್ಕೆ ಮೊಸರು ಹಾಲು ತರುವ ಉದ್ದಿಶ್ಯ ಬೇರೆ ಹಟ್ಟಿಗಳನ್ನು ಕಟ್ಟಿಕೊಂಡು ಅಡವಿ ಕಾಡುಗಳಲ್ಲಿ ಗೋವು ಮತ್ತು ಆಡುಗಳ ಸಂಪತ್ತನ್ನು ಹೆಚ್ಚಿಸಿಕೊಂಡು ಗೋಪಾಲರಾಗಿ ಯಾದವರೆನಿಸಿಕೊಂಡು, ಮೀಸಲು ನಾಯಕರೆಂತಲೂ ಕ್ರಮೇಣ ಶಬ್ದ ರೂಪಾಂತರದಿಂದ ಮ್ಯಾಸನಾಯಕರೆಂತಲೂ ಕರೆಯಿಸಿಕೊಂಡಿದ್ದಾರೆ.

ಈ ಪಂಗಡದವರು ವೀರಯೋಧರೆನಿಸಿ ಅಲ್ಲಲ್ಲೆ ರಾಜ್ಯಗಳನ್ನು ಕಟ್ಟಿ ಸಂಸ್ಥಾನಿಕರಾಗಿ ಆಳಿರುತ್ತಾರೆ. ತಮ್ಮ ಜನಾಂಗದವರೇ ಆದ ನಾಯಕ ಪ್ರಭುಗಳ ಪಡೆಯಲ್ಲಿ ನೆಚ್ಚಿನ ಯೋಧರಾಗಿಯೂ, ಭಂಟರಾಗಿಯೂ, ರಾಜಪರಿವಾರದವರಾಗಿಯೂ, ತಳವಾರರಾಗಿಯೂ  ಇರುತ್ತಿದ್ದರು. ಆಡಳಿತ ಸೂತ್ರದಲ್ಲಿ ತಮ್ಮ ನಾಯಕನಿಗೆ ಸಹಕಾರಿಗಳಾಗಿ ಶತೃದಾಳಿಯಿಂದ ನಾಡನ್ನು ರಕ್ಷಿಸಲು ಗಡಿ ಪ್ರದೇಶಗಳಲ್ಲಿ ವಾಸಮಾಡಿಕೊಂಡಿದ್ದು ಪ್ರಭುತ್ವದವರಿಗೆ ಕಾಲಕಾಲಕ್ಕೆ ಶತೃಗಳ ಚಲನವಲನದ ಬಗ್ಗೆ ಸುಳಿವು ಕೊಡುತ್ತಾ ಗೂಢಾಚಾರರಾಗಿ ಕೆಲಸ ಮಾಡುತ್ತಿದ್ದ ಇವರುಗಳು ಒಂದು ಗಡಿಯಿಂದ ಮತ್ತೊಂದು ಗಡಿಗೆ ಆಗಿಂದಾಗ್ಗೆ ತಮ್ಮ ವಸತಿಗಳನ್ನು ಬದಲಾಯಿಸಬೇಕಾದ ಪ್ರಮೇಯವಿದ್ದುದರಿಂದ ಹಂಗಾಮಿ ವಸತಿಗಳಾಗಿ ಗುಡಿಸಲುಗಳನ್ನು ಕಟ್ಟಿಕೊಂಡು ವಾಸಿಸುತ್ತಿದ್ದರಾದ ಕಾರಣ ಇವರುಗಳನ್ನು “ಗುಡ್ಲು ನಾಯಕ” ರೆಂತಲೂ ಕರೆದರು.

ದೇಶ ಮಧ್ಯದಲ್ಲಿ ಸಂಚರಿಸುತ್ತಾ ವೇಷಭೂಷಣಗಳಿಂದ ತಲೆಮರೆಸಿಕೊಂಡ ತಮ್ಮ ನಾಯಕನ ವಿರುದ್ಧ ಬಂಡೇಳುವ ಸಂದರ್ಭವನ್ನು ಶತೃರಾಜರಿಗೆ ಸುಳಿವುಕೊಟ್ಟ ರಾಜದ್ರೋಹ ವಾಗುತ್ತಿದ್ದ ಸಂದರ್ಭಗಳನ್ನು, ಇಂತಹ ತುರ್ತುಪರಿಸ್ಥಿತಿಯಲ್ಲಿ ಶತೃಗಳ ಚಲನವಲನಗಳನ್ನು ಅರಿಯಲಿಕ್ಕೂ ಯುದ್ಧ ವೇಳೆಯಲ್ಲಿ ನಾಯಕನಿಗೆ ಅನುಕೂಲವಾಗುವಂತಹ ಪರಿಸ್ಥಿತಿಯ ಸುದ್ದಿಗಳನ್ನು ಕಾಲಕಾಲಕ್ಕೆ ಮುಟ್ಟಿಸುವ ಕೆಲಸದಲ್ಲಿ ನಿರತರಾಗಿ ವತ್ತಡೇ ಮಾರಮ್ಮನವ ರಾಗಿಯೂ, ಮುತ್ಯಾಲಮ್ಮನವರಾಗಿಯೂ, ಮೊಂಡರಾಗಿಯೂ, ವೇಷಾಂತರಗಳಿಂದ ಅಲೆಮಾರಿಗಳಂತೆ ಸಂಚರಿಸುತ್ತಾ ಸಂದರ್ಭೋಚಿತ ಶತೃಪಾಳೆಯಗಳನ್ನು ಹೊಕ್ಕು ವಿಷಯ ಸಂಗ್ರಹಣೆ ಮಾಡುತ್ತಿದ್ದ ಗೂಢಚಾರ ವರ್ಗದವರು ಮೇಲ್ಕಂಡ ಹೆಸರುಗಳಿಂದ ಕರೆಯ ಲ್ಪಟ್ಟರು, ನಾಯಕರ ಪ್ರಭುತ್ವ ಬಿಟ್ಟುಹೋದ ಮೇಲೆ ಅದೇ ಅಭ್ಯಾಸಕ್ಕೆ ಅಂಟಿಕೊಂಡು ಈಗಂತು ಅಲೆಮಾರಿ ಜನಾಂಗದವರಾಗಿ ಉಳಿದಿರುತ್ತಾರೆ. ಹೀಗೆ ನಾಯಕ ಜನಾಂಗವು ಉಜ್ವಲ ಪರಂಪರೆಯನ್ನು ತನ್ನ ಒಡಲಲ್ಲಿ ತುಂಬಿಕೊಂಡಿದ್ದು ಇದರ ಅರಿವು ಇಂದಿನ ಯುವ ಪೀಳಿಗೆಗೆ ಬಾರದೇ ಇರುವುದರಿಂದಲೂ, ಕರ್ನಾಟಕದ ನಾಯಕ ಜನಾಂಗಕ್ಕೆ  ಇಲ್ಲಿಯವರೆಗೂ ಒಬ್ಬ ಧೀಮಂತ ನಾಯಕನ ನಾಯಕತ್ವ ದೊರೆಯದೇ ಇರುವುದರಿಂದಲೂ ಸುಮಾರು ೬೦ ಲಕ್ಷದಷ್ಟು ನಾಯಕ ಜನಾಂಗವು ರಾಜ್ಯದಲ್ಲಿ ಇದ್ದಾಗ್ಯೂ, ಅಸಂಘಟಿತರಾಗಿ ತಮ್ಮ ಪ್ರಬಲ ಶಕ್ತಿಯನ್ನು ತೋರಿಸುವಲ್ಲಿ ವಿಫಲರಾಗಿದ್ದಾರೆ. ರಾಜಕೀಯ ರಂಗದಲ್ಲಿ, ಶೈಕ್ಷಣಿಕ ರಂಗದಲ್ಲಿ ಈ ಜನಾಂಗಕ್ಕೆ ಸಲ್ಲಬೇಕಾದ ಸ್ಥಾನಮಾನಗಳು ದೊರೆತಿಲ್ಲದಿರುವುದು ಮತ್ತು ಈ ಜನಾಂಗದಲ್ಲಿ ಸಂಘಟನೆಯ ಕೊರತೆ ಇರುವುದರಿಂದ ರಚನಾತ್ಮಕ ಕಾರ್ಯಗಳನ್ನು ಹಮ್ಮಿಕೊಳ್ಳದೆ ವಿಫಲರಾಗುತ್ತಾ, ಬೇರೊಬ್ಬರ ನೆರಳಲ್ಲಿ ಬಾಳುವಂತಹ ಪರಿಸ್ಥಿತಿ ಏರ್ಪಾಟಾ ಗಿರುವುದು ಶೋಚನೀಯವಾಗಿದೆ.

ಇಂಥಹ ಸಂದರ್ಭದಲ್ಲಿ ಎಚ್ಚೆತ್ತ ನಾಯಕ ಜನಾಂಗವು ಶ್ರೀ ವಾಲ್ಮೀಕಿ ಗುರುಪೀಠ ಸ್ಥಾಪನೆಯ ಕಾರ್ಯ ಹಮ್ಮಿಕೊಂಡಿದ್ದು, ಈ ಗುರುಪೀಠದ ಗುರುಗಳ ಮಾರ್ಗದರ್ಶನದಲ್ಲಿ, ಜನಾಂಗವು ಏಳ್ಗೆ ಸಾಧಿಸುತ್ತಾ ಮುನ್ನಡೆದರೆ ನಾಯಕ ಜನಾಂಗದ ಉಜ್ವಲ ಪರಂಪರೆಯನ್ನು ಮತ್ತೊಮ್ಮೆ ಕಾಣುವಂತಹ ಸುದೈವ ಮುಂದಿನ ದಿನಗಳಲ್ಲಿ ನಿರೀಕ್ಷಿಸುವಂತಾಗಬಹುದೆಂದು ಆಶಿಸಬಹುದಾಗಿದೆ.

ಗ್ರಂಥಋಣ

೧. ಡಾ. ಎಂ.ವಿ. ಕೃಷ್ಣರಾವ್ ಮತ್ತು ಎಂ. ಕೇಶವಭಟ್ಟ, ಕರ್ನಾಟಕ ಇತಿಹಾಸ ದರ್ಶನ.

೨. ರಾಷ್ಟ್ರಕವಿ ಕುವೆಂಪು, ಜನಪ್ರಿಯ ವಾಲ್ಮೀಕಿ ರಾಮಾಯಣ.

೩. ಪಿ.ಬಿ. ದೇಸಾಯಿ, ಮದಗಜಮಲ್ಲ.

೪. ಹೆಚ್.ವಿ. ರನಾಯಕ, ಕ್ಷಾತ್ರಾಂಶ ಪ್ರಭೋದ ಮತ್ತು ರಾಷ್ಟ್ರಸೇವೆಯಲ್ಲಿ ನಾಯಕ ಜನಾಂಗ.

ಕೃಪೆ : ವಾಲ್ಮೀಕಿ ಕಿರಣ

* * *