ಸಂಶೋಧಕ ಸಹಾಯಕ
ಕನ್ನಡ ವಿಶ್ವವಿದ್ಯಾಲಯ, ಹಂಪಿ.

ವಿಜಾಪುರ ಜಿಲ್ಲೆಯ ಮುದ್ದೇಬಿಹಾಳ ತಾಲ್ಲೂಕಿನ ಗುಂಡರನಾಳ ಗ್ರಾಮದ ಶಂಕರಗೌಡ ಮಲಕಪ್ಪ ಗೌಡ ಬಿರಾದಾರ (ಗುಂಬಿ ಶ್ಯಾಮ) ಬಡ ಕುಟುಂಬದಲ್ಲಿ ಜನಿಸಿದವರು. ನಿರೀಕ್ಷರಿ ವಕ್ಕಲು ಮನೆತನ ಶಿಕ್ಷಣದಲ್ಲಿ ಮುಂದುವರೆದ ಪ್ರಥಮರು.

ಕರ್ನಾಟಕ ವಿಶ್ವವಿದ್ಯಾಲಯ ಧಾರವಾಡದಲ್ಲಿ ಸ್ನಾತಕೋತ್ತರ ಪದವಿಯನ್ನು ೧೯೭೪ ರಲ್ಲಿ ಪಡೆದರು. ಗುಲಬರ್ಗಾ ವಿಶ್ವವಿದ್ಯಾಲಯದ ಕನ್ನಡ ವಿಭಾಗದಲ್ಲಿ ಸಹಾಯಕ ಸಂಶೋಧಕರಾಗಿ ಗುಲಬರ್ಗಾದ ಎಂ.ಎಸ್.ಐ. ಮತ್ತು ವಿ.ಜಿ. ವುಮೆನ್ಸ್ ಕಾಲೇಜಿನಲ್ಲಿ ಉಪನ್ಯಾಸಕರಾಗಿ ಸೇವೆ ಸಲ್ಲಿಸಿರುತ್ತಾರೆ.

೧೯೮೦ ರಿಂದ ಅಕ್ಕಲಕೋಟದ ಶ್ರೀ ಸಿ.ಬಿ. ಕೇಡಗಿ ಮಹಾವಿದ್ಯಾಲಯದಲ್ಲಿ ಉಪನ್ಯಾಸಕರಾಗಿ ಸೇವೆ ಸಲ್ಲಿಸಿ ಈಗ ನಿವೃತ್ತಿ ಹೊಂದಿದ್ದಾರೆ. ಸಾಹಿತ್ಯಾಸಕ್ತಿಯುಳ್ಳ ಇವರು ಕಾವ್ಯ, ನಾಟಕ, ಸಂಶೋಧನೆ, ವೈಚಾರಿಕ, ಜನಪದ ಮತ್ತು ವಚನ ಸಾಹಿತ್ಯವನ್ನು ಕುರಿತು ೧೫ ಕ್ಕೂ ಮಿಕ್ಕ ಗ್ರಂಥಗಳನ್ನು ಪ್ರಕಟಿಸಿದ್ದಾರೆ. ಕರ್ನಾಟಕದ ಹೆಸರಾಂತ, ಮಾಸಿಕ, ದ್ವಿಮಾಸಿಕ, ತ್ರೈಮಾಸಿಕ ದಿನಪತ್ರಿಕೆಗಳಲ್ಲಿ ಶ್ರೇಷ್ಠ ಸಾಹಿತಿಗಳ ಮತ್ತು ಮಠಾಧೀಶರ ಸನ್ಮಾನಿತ ಗ್ರಂಥಗಳಲ್ಲಿ, ಸ್ಮರಣಿಕೆಗಳಲ್ಲಿ ಇವರ ಲೇಖನಗಳು ಅಗ್ರಸ್ಥಾನದಲ್ಲಿದೆ.

ಇವರಿಗೆ ಬೆಳ್ಳಿ ಹಬ್ಬದ ಸಂದರ್ಭದಲ್ಲಿ ಸನ್ಮಾನಿಸಲಾಗುವುದು.