ಒಂದು ನೂರು ವರ್ಷವೂ ದಾಟಿದ ವೃದ್ಧ ಸಂನ್ಯಾಸಿ. ರಾಜ ನರನಾರಾಯಣನ ಆಸ್ಥಾನಕ್ಕೆ ಬಂದರು.

ಸಂನ್ಯಾಸಿಯ ಶಿಷ್ಯರಿಗೂ, ಆಸ್ಥಾನದಲ್ಲಿ ಹಲವರಿಗೂ ನಡಕ. “ರಾಜ ಈ ವೃದ್ಧರನ್ನು ಏನು  ಮಾಡಿ ಬಿಡುವನೋ!” ಎಂದು ಆತಂಕ. ಸಂನ್ಯಾಸಿಯ ಶತ್ರುಗಳೀಗೆ ಸಂತೋಷ. ನಿರೀಕ್ಷಣೆ: “ರಾಜ ಸಂನ್ಯಾಸಿಯನುನ ಸುಮ್ಮನೆ ಬಿಡುವುದಿಲ್ಲ. ಏನು ಮಾಡುತ್ತಾನೋ ನೋಡಬೇಕು” ಎಂದು ಅವರು ಕುತೂಹಲ.

ಸಂನ್ಯಾಸಿ ಜನರನ್ನು ತಪ್ಪು ದಾರಿಗೆಳೆಯುತ್ತಿದ್ದಾನೆ, ಧರ್ಮವನ್ನು ತಪ್ಪಾಗಿ ಹೇಳಿಕೊಡುತ್ತಿದ್ದಾನೆ. ರಾಜನ ವಿರುದ್ಧ ಎತ್ತಿ ಕಟ್ಟುತ್ತಿದ್ದಾನೆ ಎಂದೆಲ್ಲಾ ಸಂನ್ಯಾಸಿಗಳ ಶತ್ರುಗಳು ರಾಜನಿಗೆ ಹೇಳಿದ್ದರು. ಅದನ್ನು ನಂಬಿದ ರಾಜ “ಆ ಧರ್ಮಲಂಡನನ್ನು ಕೊಂದು ಅವನ ಚರ್ಮ ಸುಲಿಯುತ್ತೇನೆ. ಮೂಳೆಗಳನ್ನೆಲ್ಲ ಹೊರಕ್ಕೆ ಕಿತ್ತು ಹಾಕುತ್ತೇನೆ. ಅವನ ಚರ್ಮದಿಂದ ಮದ್ದಳೆ ಮಾಡು   ಮೂಳೆಗಳಿಂದ ಭಾರಿಸುತ್ತೇನೆ” ಎಂದು ಅಬ್ಬರಿಸಿದ.

ನರನಾರಾಯಣನ ತಮ್ಮ ಚಿಲಾರಾಯ ಆ ಸಂನ್ಯಾಸಿಗಳ ಭಕ್ತ. ತನ್ನ ಗುರುಗಳಿಗೆ ಪ್ರಾಣಾಪಾಯ  ಮಾಡುವುದಿಲ್ಲ ಎಂದು ಭರವಸೆಯನ್ನು ಅಣ್ಣನಿಂದ   ಪಡೆದು ಸಂನ್ಯಾಸಿಯಗಳನ್ನು ಆಸ್ಥಾನಕ್ಕೆ ಕಳೂಹಿಸಿದ್ದ.

ಪ್ರಾಣಾಪಾಯವಿಲ್ಲ, ಆದರೆ ಇನ್ನೇನು ಮಾಡುವನೋ!

ಶಂಕರದೇವರು ಬಂದರು.

ಗುರುಗಳೇ , ನನ್ನ ತಪ್ಪನ್ನು ಕ್ಷಮಿಸಿ

ಸಂನ್ಯಾಸಿಗಳ ಭವ್ಯ ಶರೀರ, ತೇಜಃಪೂರ್ಣ ಮುಖ, ಆತ್ಮವಿಶ್ವಾಸದ ನಡಿಗೆ ಇವುಗಳನ್ನು ನೋಡಿದ ಮಾತ್ರಕ್ಕೆ ಅರಸನ ಮನಸ್ಸಿನಲ್ಲಿದ್ದ ಕೆಟ್ಟ ವಿಚಾರಗಳೆಲ್ಲ ಮಾಯವಾದವು. ಗುರುಗಳನ್ನು ಆದರ ಪೂರ್ವಕವಾಗಿ ಸ್ವಾಗತ್ತಿಸಿದನು. ಅವರು ಉಪದೇಶಿಸುತ್ತಿದ್ದ ಧರ್ಮದ ಮುಖ್ಯಾಂಶಗಳನ್ನು ತಿಳಿದುಕೊಂಡು ಭಕ್ತನಾಗಿಬಿಟ್ಟನು. “ಗುರುಗಳೇ, ನನ್ನಿಂದಾದ ತಪ್ಪು ಮನ್ನಿಸಿರಿ: ನನ್ನನ್ನು ಕ್ಷಮಿಸಿ ಅನುಗ್ರಹಿಸಬೇಕು. ಯಾವುದೇ ಇಚ್ಛೆಯಿದ್ದರೂ ತಿಳಿಸಿರಿ. ಅದನ್ನು ಪೂರೈಸಲು ಸದಾ ಸಿದ್ಧನಾಗಿದ್ದೇನೆ” ಎಂದು ಬೇಡಿಕೊಂಡರು.

“ತಮ್ಮಾ, ನೀನು ತಪ್ಪು ಮಾಡಿಲ್ಲ: ನಿನ್ನ ಮನಸ್ಸನ್ನು ಕೆಡಿಸಿದವರು ಯಾರೆಂದು ಬಲ್ಲೆ. ಅವರ ಬಗ್ಗೆಯೂ ನನಗೆ ಸಿಟ್ಟಿಲ್ಲ. ಆದರೆ ಅವರಿಗೆ ನನ್ನ ಪಂಥದ ಶ್ರೇಷ್ಠತೆಯನ್ನು ಮನಗಾಣಿಸಿಕೊಡಬೇಕೆಂಬುದು ನನ್ನ ಇಚ್ಛೆ. ಅವರೊಡನೆ ಚರ್ಚೆಗೆ ಅವಕಾಶ ಮಾಡಿಕೊಡು.”

ಅಂದಿನಿಂದ ಅರಸನ ಆಸ್ಥಾನದಲ್ಲಿ ಪ್ರತಿನಿತ್ಯ ಮುಂಜಾನೆ ಪಂಡಿತರೊಡನೆ ಸಂನ್ಯಾಸಿಗಳ ವಾದ ವಿವಾದ ನಡೆಯಿತು. ಪಂಡಿತರೆಲ್ಲ ಸೋತರು.

ಆ ಸಂನ್ಯಾಸಿಗಳು ಶಂಕರದೇವರು,. ಈ ಘಃಟನೆ ನಡೆದದ್ದು ಸುಮಾರು ನಾಲ್ಕು ನೂರು ವರ್ಷಗಳ ಹಿಂದೆ.

ಶಂಕರನ ಅನುಗ್ರಹ :

ಶಂಕರದೇವ ಜನ್ಮ ತಾಳಿದ್ದು ೧೩೭೧ನೇ ಶಕ (ಇಸವಿ ೧೪೪೯) ಆಶ್ವೀಜ ಶುದ್ಧ (ವಿಜಯ) ದಶಮಿಯ ದಿನ. ತಂದೆ ಅಲಿಪುಖರಿಯ ಕುಸುಮವರ. ಆ ಕಾಲದ ಜಮೀನುದಾರರಾದ “ಭೂಯಾನ”ರಿಗೆ ಈತ ಒಡೆಯ: ಶಿರೋಮಣಿ ಭೂಯಾನ. ತಾಯಿ ಸತ್ಯಸಂದಾದೇವಿ. ಮದುವೆಯಾಗಿ ಅನೇಕ ವರ್ಷಗಳು ಕಳೆದಿದ್ದರೂ ಸತ್ಯಸಂಧಾಳಿಗೆ ಮಕ್ಕಳಾಗಿರಲಿಲ್ಲ. ಸತ್ಯ ಸಂಧಾಳು ಸಂತತಿಗಾಗಿ ಈಶ್ವರನ ಪೂಜೆ ಕೈಗೊಂಡಳೂ.  ಕೆಲವು ಕಾಲದ ನಂತರ ಅವಳು ಗರ್ಭ ಧರಿಸಿದಳು. ಶಂಕರನ ಅನುಗ್ರಹದಿಂದ ಹುಟ್ಟಿದರಿಂದ ಶಿಶುವಿಗೆ “ಶಂಕರ” ಎಂದು  ಹೆಸರಿಟ್ಟರು.

ಉಡಾಳ ಹುಡುಗ :

ಬಾಲ್ಯದಲ್ಲಿಯೇ ಶಂಕರನು ಅನಾಥನಾಗಬೇಕಾಯಿತು. ಮಗ ಹುಟ್ಟಿದ ಮೂರನೆಯ ದಿನವೇ ತಾಯಿ ಸ್ವರ್ಗ ಸೇರಿದಳು. ಶಂಕರನು ಚಿಕ್ಕವನಾಗಿದ್ದಾಗಲೇ ತಂದೆ ತೀರಿಕೊಂಡರು. ಹೀಗಾಗಿ ಶಂಕರನನ್ನು ಸಾಕುವ ಹೊಣೆ ಅಜ್ಜಿ ಖೇರಸುತಿಯ ಪಾಲಿಗೆ ಬಂತು.

ಅನಾಥ ಶಂಕರನುಅಜ್ಜಿಯ  ಮುದ್ದಿನ ಮೊಮ್ಮಗನಾಗಿ ಬೆಳೇದನು. ಅತಿ ಮುದ್ದಿನ ಪರಿಣಾಮವಾಗಿ ಉಡಾಳನೂ ಆದು. ಶಾಲೆಗೆ ಹೋಗುವ ವಯಸ್ಸಾದರೂ. ಶಾಲೆಗೆ ಹೋಗದೆ ಆಟ-ಪಾಟಗಳಲ್ಲಿ ದಿನಗಳೆಯತೊಡಗಿದನು. ಅದರಿಂದ ಶರೀರ ದಷ್ಟಪುಷ್ಟವಾಯಿತು.  ಜನ್ಮತಃ ಸುಂದರನಾದ ಶಂಕರನು ಬಲಶಾಲಿಯಾದ ಶರೀರದಿಂದ ಸಂಗಡಿಗರ ನಡುವೆ ಎದ್ದು ಕಾಣತೊಡಗಿದನು. ಅಡವಿಗೆ ಹೋಗಿ ಪಶು ಪಕ್ಷಿಗಳು ಭೇಟಿ ಮಾಡುವುದು, ಸುರಿಯುತಿರುವ ಮಳೆಯಲ್ಲಿ ಬ್ರಹ್ಮಪುತ್ರಾ ನದಿಯ ಒಂದು ದಂಡೆಯಿಂದ ಇನ್ನೊಂದು ದಂಡೆಗ ಈಜಿ ಬರುವುದು,  ನದಿಯಲ್ಲಿರುವ ಆಮೆ, ನೀರಹಂದಿ ಮುಂತಾದವುಗಳನ್ನು ಹಿಡಿಯುವುದು, ಮೇಯಲು ದನಗಳನ್ನು ಅಟ್ಟಿಕೊಂಡು ಹೋಗುವುದು- ಇವೇ ಅವನ ಆಟಗಳಾಗಿದ್ದವು.

ಮನೆಯಲ್ಲಿ ಅಜ್ಜಿಗೆ ಚಿಂತೆ. ಹನ್ನೆರಡು ವರುಷದವನಾದರೂ ಶಂಕರನಿಗೆ ತನ್ನ ಹೊಣೆಗಾರಿಕೆಯೇನು ಎಂಬುವುದರ ಪರಿವೆಯೇ ಇಲ್ಲವಲ್ಲ. ಈತನು ಬೆಳೆದು ದೊಡ್ಡವನಾಗಿ ಶಿರೊಮಣಿ ಭೂಯಾನನೆಂದು ಅಧಿಕಾರ ನಡೆಸಬೇಕು. ಇತರೆ ಭೂಯಾನರಿಗೆ ಸರಿಯಾದ ದಾರಿ ತೋರಿಸಬೇಕು. ಅದಕ್ಕಾಗಿ ಯೋಗ್ಯ ಶಿಕ್ಷಣ ಪಡೆಯಬೇಡವೇ?

ಮಗು, ವಿಚಾರ ಮಾಡು-“

ಒಂದು ದಿನ ಶಂಕರನು ಊಟಕ್ಕೆ ಕುಳಿತಾಗ ಅಜ್ಜಿ ಪ್ರೀತಿಯಿಂದ ಹೇಳತೊಡಗಿದಳು:- “ಇದೇ ರೀತಿ  ಆಟವಾಡುತ್ತಿದ್ದರೆ ದೊಡ್ಡವನಾದ ಮೇಲೆ ಏನು ಮಾಡುವಿ? ನಿನ್ನ ಎಂದೆ ಎಷ್ಟು ಬುದ್ಧಿವಂತರಾಗಿದ್ದರು! ನಿನ್ನ ಅಜ್ಜನವರಂತೂ ವಿಧ್ವಾಂಸರೇ ಆಗಿದ್ದರು. ಅದೇ ರೀತಿ ನಿನ್ನ ಮುತ್ತಜ್ಜನವರು. ಇವರೆಲ್ಲ ಶಿರೋಮಣಿ ಭೂಯಾನರೆಂದು ಉತ್ತಮ ರೀತಿಯ ರಾಜ್ಯವಾಳಿ ಜನರಿಗೆ ಸುಖ ನೀಡಿದರು. ಒಳ್ಳೆಯ ಹೆಸರು ಪಡೆದರು. ನೀನಾದರೂ ಉಡಾಳ ಹುಡುಗರ ಸಹವಾಸದಲ್ಲಿ ಆಟವಾಡುತ್ತ ದಿನಗಳೆಯುತ್ತಿರುವಿ.  ಈಗ ನೀನು ಸಣ್ಣವನಲ್ಲ. ನಿನಗೆ ಹನ್ನೆರಡು ವರ್ಷ ಪ್ರಾಯ. ನಿನ್ನ ತಂದೆ ಬದುಕಿದ್ದರೆ ನಿನ್ನನ್ನು ಎಂದೋ  ಶಾಲೆಗೆ ಕಳೂಹಿಸುತ್ತಿದ್ದರು. ಶಾಲೆಗೆ ಹೋಗೆಂದು ನಾನು ಎಷ್ಟು ಹೇಳೀದರೂ ನೀನು ನನ್ನ ಮಾತು ಕೇಳುವುದಿಲ್ಲ. ಹೀಗೆಯೇ ಆಟವಾಡುತ್ತ ದಡ್ಡನಾಗಿದ್ದು” ಹುಲಿಯ ಹೊಟ್ಟೆಯಲ್ಲಿ ನರಿ ಹುಟ್ಟಿದಂತಾಯಿತು” ಎಂದು ಜನರಿಂದ ಅಣಕಿಸಿಕೊಳ್ಳುತ್ತೀಯಾ? ನೀನೀಗ ಚಿಕ್ಕವನಲ್ಲ.ವಿಚಾರ ಮಾಡು, ಕಲಿತು ದೊಡ್ಡವನಾಗಿ ದೊರೆಯಾಗಿ ಬಾಳೂ. ಮನೆತನಕ್ಕೆ ಒಳ್ಳೆಯ ಹೆಸರು ತಾ”.

ಅಜ್ಜಿಯ  ಮಾತು ಮೊಮ್ಮಗನ ಮನಸ್ಸಿಗೆ ನಾಟಿತು.  ಶಾಲೆಗೆ ಹೋಗುವ ನಿಶ್ಚಯ ಮಾಡಿದ.

ಅಂದಿನ ಅಸ್ಸಾಂ :

ಅಂದಿನ ಅಸ್ಸಾಂ ಪ್ರದೇಶದಲ್ಲಿ ರಾಜಕೀಯ ಪರಿಸ್ಥಿತಿಯಲ್ಲಿ ಶಂಕರನು ಯೋಗ್ಯ ಶಿಕ್ಷಣ ಪಡೆದು ದಕ್ಷ ಆಡಳೀತಗಾರನಾಗುವುದು ಅತ್ಯವಶ್ಯಕವಾಗಿತ್ತು.  ಅಸ್ಸಾಂ ಪ್ರಾಂತದ ಮಧ್ಯಭಾಗದಲ್ಲಿ ಪೂರ್ವ- ಪಶ್ಚಿಮವಾಗಿ ಬ್ರಹ್ಮಪುತ್ರ ನದಿ ಹರಿಯುತ್ತದೆ.  ಅಂದು ಆ ಪ್ರಾಂತವು ಅನೇಕ ರಾಜ್ಯಗಳಲ್ಲಿ ಒಡೆದು ಹೋಳಾಗಿತ್ತು. ಸುತಿಯಾ ಮತ್ತು ಕಚಾರಿ ರಾಜ್ಯಗಳ ನಡುವೆ ಬ್ರಹ್ಮಪುತ್ರ ನದಿಯ ಎರಡು ದಂಡೆಗಳ ಮೇಲೆ ಚಿಕ್ಕ ಜಮೀನುದಾರರ ಪುಟ್ಟ ರಾಜ್ಯಗಳಿದ್ದವು.  ಈಜಮೀನುದಾರರಿಗೆ “ಭೂಯಾನ” ಎಂದುಹೆಸರು. ಇವರ ಪ್ರಮುಖನು “ಶಿರೊಮಣಿ ಭೂಯಾನ”.

ಕಲಿತು ದೊಡ್ಡವನಾಗಿ ದೊರೆಯಾಗಿ ಬಾಳು. ಮನೆತನಕ್ಕೆ ಒಳ್ಳೆಯ ಹೆಸರು ತಾ.

ಈ ಅರಸರಲ್ಲಿ ಯಾವಾಗಲೂ ಪರಸ್ಪರರ ರಾಜ್ಯ ನುಂಗಬೇಕೆಂದು ಹೊಂಚು  ನಡೆದಿತ್ತು. ಅದರಲ್ಲೂ ಭೂಯಾನರ ಪುಟ್ಟ ರಾಜ್ಯಗಳನ್ನುನುಂಗಲು ಸುತ್ತಲಿನ ಅರಸರು ಸದಾ ಸಿದ್ಧರು. ಹೀಗಾಗಿ ಶಂಕರನು ಸಮರ್ಥ ಭೂಯಾನನಾಗದಿದ್ದರೆ ಅವನ ಸ್ಥಾನ-ಮಾನಗಳಿಗೆ ಗಂಡಾಂತರ ಕಾದಿದೆ.

ಒಳ್ಳೆಯ  ವಿದ್ಯಾರ್ಥಿ :

ಶಂಕರನ ಶಾಲೆಗೆ ಹೋಗುವ ನಿಶ್ಚಯದಿಂದ ಅಜ್ಜಿಗೆ ಪರಮಾನಂದವಾಯಿತು. ಶುಭ ಮುಹೂರ್ತ ನೋಡಿ ಅವಳು ಹಳ್ಳಿಯಲ್ಲಿದ್ದ ಮಹೇಂದ್ರ ಕುಂದಲಿಯವರ ಶಾಲೆಗೆ ಶಂಕರನನ್ನು ಸೇರಿಸಿದಳು. ಪ್ರಾರಂಭದಲ್ಲಿ ಶಂಕರನಿಗೆ ವಿದ್ಯಾಭ್ಯಾಸ ರುಚಿಸಲಿಲ್ಲ.  ಪಾಠದ ಸಮಯದಲ್ಲಿಯೂ ಆಟಕ್ಕೆ ಓಡಿ ಹೋಗುತ್ತಿದ್ದರು. ಆದರೆ ದಿನ ಹೋದಂತೆ ಅವನಿಗೆ ಓದಿನಲ್ಲಿ ಆಸಕ್ತಿ ಹುಟ್ಟಿತ್ತು.  ಸಂಸ್ಕೃತ ಭಾಷೆಯನ್ನು ಚೆನ್ನಾಗಿ ಕಲಿತು ಪ್ರಾಚೀನ ಸಾಹಿತ್ಯದ ಅಭ್ಯಾಸದಲ್ಲಿ ಸ್ವಲ್ಪ ಕಾಲ ಕಾಲದಲ್ಲೆ ಶಂಕರ ಶ್ರೀ ವಿಷ್ಣುವನ್ನು ವರ್ಣೀಸುವ ಒಂದು ಪದ್ಯವನ್ನು ರಚಿಸಿದ ಎಂದು ಹೇಳುತ್ತಾರೆ.  ಪದ್ಯ ಉಳಿದು ಬಂದಿದೆ. ಮೊದಲನೆಯ ಎರಡು ಪಂಕ್ತಿಗಳು ಇವು:

ಕರತಳ ಕಮಲ ಕಮಲದಳ ಯನ
ಭವದಹ ದಹನ ಗಹನವನ ಶಯನ.

ಶಂಕರದೇವ :

ಶಾಲೆಯ ವಿದ್ಯಾರ್ಥಿಯಾಗಿದ್ದಾಗಲೇ ಶಂಕರನು “ಶಂಕರದೇವ” ಆದದ್ದು.  ಇದನ್ನು ಕುರಿತು ಒಂದು ಸ್ವಾರಸ್ಯವಾದ ಕಥೆ ಉಂಟು.

ಮಹೇಂದ್ರ ಕಂದಲಿಯವರು ಒಂದು ಮಧ್ಯಾಹ್ನ ಶಾಲೆಗೆ ಬಂದಾಗ ಒಂದು ಅಪೂರ್ವ ನೋಟವನ್ನು ಕಂಡನು.

ಶಾಲೆಯ ಅಂಗಳದಲ್ಲಿ ೧೪-೧೫ ವರ್ಷದ ಬಾಲಕನೊಬ್ಬ ಸುಡುಬಿಸಲಿನಲ್ಲಿ ಮಲಗಿದ್ದಾನೆ. ಅವನು ಮೋರೆಯನ್ನು ಬಿಸಿಲಿನೀಂದ ಕಾಪಾಡಲು ಒಂದು ಸರ್ಪವು ಹೆಡೆ ತೆರೆದು ನಿಂತಿದೆ.

ಈ ನೋಟ ಕಂಡ ಶಿಕ್ಷಕರು ಬಾಲಕನನ್ನು ಗುರುತಿಸಲು ಸಮೀಪಕ್ಕೆ ಹೋದರು. ಅಲ್ಲಿ ಮಲಗಿದ ಬಾಲಕ ಶಂಕರ!

ಈ ಘಟನೆಯಿಂದ ಶಂಕರನಲ್ಲಿ ದಿವ್ಯ ಶಕ್ತಿ ಅಡಿಗಿದೆಯೆಂದು ಊಹಿಸಿದ ಶಿಕ್ಷಕರು ಇತರ ವಿದ್ಯಾರ್ಥಿಗಳಿಗೆ ಅಪ್ಪಣೆ ಮಾಡಿದರು. “ಇಂದಿಹಿಂದ ಶಂಕರನನ್ನು “ಶಂಕರದೇವ” ಎಂದು ಕರೆಯಬೇಕು.

ಶಂಕರ ಗುರುವಿನ ಅಪ್ಪಣೆಯಂತೆ “ಶಂಕರದೇವ”ನಾದನು. ಅವನಲ್ಲಿ ಅಡಗಿದ್ದ ಕವಿಪ್ರತಿಭೆಯೂ ಬೆಳಕಿಗೆ ಬಂತು. ಸತ್ಯಹರಿಶ್ಚಂದ್ರ ಜೀವನವನ್ನು ಬಣ್ಣಿಸುವ “ಹರಿಶ್ಚಂದ್ರ ಉಪಖ್ಯಾನ” ಎಂಬ ಕಾವ್ಯವನ್ನು ಅವನು ರಚಿಸಿದನು. ಹಿಂದೂ ತತ್ವಜ್ಞಾನದ ಆಳವಾದ ಅಭ್ಯಾಸ ಮಾಡಿದನು.  ಯೋಗಾಭ್ಯಾಸದಲ್ಲಿ ಅಭಿರುಚಿ ಹುಟ್ಟಿ ಯೋಗ್ ಸಾಧನೆಯಲ್ಲಿ ತೊಡಗಿದನು. ಇದರಿಂದ ಬುದ್ಧಿ ಬಲದ ಸಂಗಡ ದೇಹಬಲವೂ ಬೆಳೆಯಿತು.  ಸಾಮಾನ್ಯವಾಗಿ ೧೨ ವರ್ಷಗಳಿಗಿಂತ ಹೆಚ್ಚುಕಾಲ ಬೇಕಾಗುವ  ವಿದ್ಯೆಯನ್ನು ಶಂಕರದೆವನು ಹತ್ತೇ ವರ್ಷಗಳಲ್ಲಿ ಕಲಿತ.

ಮೂಢನಂಬಿಕೆಗಳಿಂದ ಪಾರು ಮಾಡಬೇಕು :

ವಿಧ್ಯಾಭ್ಯಾಸ ಮುಗಿಸಿ ಶಿರೋಮಣಿ ಭೂಯಾನನಾದನು.  ತನ್ನ ಶಕ್ತಿ- ಬುದ್ಧಿ- ವಿದ್ಯೆ- ಯೋಗ್ಯತೆಗಳ ಮೂಲಕ ಶಂಕರ ದೇವನು ಭೂ ಯಾನರನ್ನೆಲ್ಲ ಸಂಘಟಿಸಿ ಅವರ ಪುಟ್ಟ ರಾಜ್ಯಗಳನ್ನು ಬಲಪಡಿಸಬಹುದೆಂದು ಅವನ ಬಳಗದವರೆಲ್ಲ ನಿರೀಕ್ಷಿಸಿದ್ದರು. ಆದರೆ ಶಂಕರದೇವನಿಗೆ ಶಿರೊಮಣಿ ಭೂಯಾನನಾಗಿಯೇ ಬದುಕುವ ಇಚ್ಚೇಯಿರಲಿಲ್ಲ. ಆಗಿನ ಕಾಲದಲ್ಲಿ ಪ್ರಚಲಿತವಿದ್ದ ಮೂಢ-ನಂಬಿಕೆಗಳೂ, ಮಂತ್ರ ಮಾಟಗಳೂ, ಸಾಮಾಜಿಕ ಅಸಮಾನತೆ, ಜಾತಿ-ಜಾತಿಗಳಲ್ಲಿಯ ಒಳ ಜಗಳಗಳು ಮುಂತಾದವುಗಳಿಂದ ಸಮಾಜವನ್ನು ಮೇಲೆತ್ತಿ ಎಲ್ಲ ಜನರ ಸುಖ-ಶಾಂತಿಯ ಮಾರ್ಗ ಹುಡುಕುವುದರಲ್ಲಿ ಮಗ್ನವಾಗಿತ್ತು.

ಅಂದಿನ ಅಸ್ಸಾಂನ ಜನರಿಗೆ ಪ್ರಾಣಿಬಲಿ, ಮಂತ್ರ-ಮಾಟ ಮುಂತಾದ ಮೂಢನಂಬಿಕೆಗಳಲ್ಲಿ ವಿಶ್ವಾಸವಿತ್ತು. ಎಲ್ಲೆಡೆ ಜನರು ದೇವತೆಗಳಿಗೆ ಪ್ರಾಣಿಬಲಿಯಷ್ಟೇ ಅಲ್ಲ ನರಬಲಿಯನ್ನೂ ಕೊಡುತ್ತಿದ್ದರು. ಇಂತಹ ಕ್ರೂರ ಹಿಂಸೆಯಿಂದ ಕೂಡಿದ ಯಜ್ಞಗಳನ್ನು ಪಂಡಿತರೆಂದೂ ಕರೆಯಿಸಿ ಕೊಳ್ಳುವವರೂ ಬೆಂಬಲಿಸಿ ತಮ್ಮ ಹೊಟ್ಟೆ ತುಂಬಿಸಿಕೊಳ್ಳುತ್ತಿದ್ದರು.

ಈ ಕ್ರೂರ ಮೂಢನಂಬಿಕೆಗಳ ಸಂಗಡ ಜನರಲ್ಲಿ ಮೇಲು-ಕೀಳು ಭಾವನೆಯೂ ಮನೆ ಮಾಡಿತ್ತು. ಸಮಾಜದ ಅನೇಕ ಪಂಗಡದವರನ್ನು “ಆಸ್ಪ್ರಶ್ಯ”ರೆಂದು ಕರೆದು ದೂರವಿಟ್ಟಿದ್ದರು. ಈ ಜನರು ಕಾಡುಗಳಲ್ಲಿಯೇ ವಾಸ ಮಾಡಬೇಕಾಗಿತ್ತು.  ಹಸಿಮಾಂಸವೇ  ಇವರ ಆಹಾರ.   ಊರಲ್ಲಿ ಬಂದರೆ ಇವರಿಗೆ ನೀರು ಸಹ ಸಿಗುತ್ತಿದ್ದಿಲ್ಲ. ಪಶುಗಳಿಗಿಂತ ಕೀಳಾಗಿ ಇವರನ್ನು ನೋಡಲಾಗುತ್ತಿತ್ತು. ಅದೇ ಧರ್ಮವೆಂದು ಜನರು ನಂಬುತ್ತಿದ್ದರು.

ಆದರೆ ಇದೆಲ್ಲ ನಿಜವಾದ ಧರ್ಮವಲ್ಲವೆಂದೂ ದೇವರ ಮಕ್ಕಳಾದ ಮನುಷ್ಯರೆಲ್ಲ ಸರಿಸಮಾನರೆಂದು ಶಂಕರದೇವನು ಶಾಸ್ತ್ರಗಳ ಅಭ್ಯಾಸದಿಂದ ಕಂಡುಕೊಂಡಿದ್ದನು. ಆದುರಿಂದ ಈ ಭಯಾನಕ ವಿಷಬಲೆಯಿಂದ ಜನರನ್ನು ಪಾರು ಮಾಡಿ ಎಲ್ಲರಿಗೂ ಸರಿಯಾದ ಧರ್ಮದ ಮಾರ್ಗ ತೋರಿಸಲು ಅವನು ನಿಶ್ಚಯಿಸಿದನು. ಈ ಕಾರ್ಯಕ್ಕಾಗಿಯೇ ಸಂಪೂರ್ಣ ಜೀವನ ಮೀಸಲಾಗಿಡುವ ಸಂಕಲ್ಪವನ್ನು ಅವನು ಮಾಡಿದನು.

ಸಂಸಾರ ಬಂಧನ :

ಹೀಗೆ ಶಂಕರದೇವನ ಮನಸ್ಸಿನಲ್ಲಿ ವಿಚಾರಮಂಥನ ನಡೆದಿದ್ದಾಗ ಅವನ ಬಳಗದವರು ಅವನನ್ನು ಮದುವೆಯಾಗಲೂ ಒತ್ತಾಯ ಮಾಡತೊಡಗಿದರು . ಒತ್ತಾಯ ಮಿತಿ  ಮೀರಿ ಹೆಚ್ಚಾದಾಗ ಅವನು ಸೂರ್ಯವತಿಯೆಂಬ ಸುಂದರ ಕನ್ಯೆಯನ್ನು ಮದುವೆಯಾದನು.

ಆದರೆ ಶಂಕರದೇವನು ಸಂಸಾರದಲ್ಲಿ ಮುಳುಗಿರುವುದು ದೈವೇಚ್ಛೆಯಾಗಿರಲಿಲ್ಲ. ಸೂರ್ಯವತಿಯ ಹೆಣ್ಣೂ ಶಿಶುವಿಗೆ ಜನ್ಮ ನೀಡಿ ಸ್ವರ್ಗ ಸೇರಿದಳೂ. ಶಂಕರದೇವನಲ್ಲಿ ಮೊದಲೇ ಮೂಡಿಬಂದ ವೈರಾಗ್ಯ ಭಾವನೆ ಹೆಂಡತಿಯ ಮರಣದಿಂದ ಮೊಳಕೆಯೊಡೆಯಿತು. ಸಂಸಾರ ಬಿಟ್ಟು ಸಂನ್ಯಾಸಿಯಾಗಿ ತೀರ್ಥಯಾತ್ರೇ ಮಾಡಬೇಕೆಂಬ ಇಚ್ಛೆ ಅವನಲ್ಲಿ ಪ್ರಬಲವಾಯಿತು. ಆದರೆ ಮಗಳ ಯೋಗಕ್ಷೇಮವನ್ನೂ ನೋಡಬೇಕಲ್ಲವೇ?

ಮಗಳೀಗೆ ಮನು ಮತ್ತು ಹರಿಪ್ರೀಯ ಎಂದು ಹೆಸರಿಟ್ಟರು. ಅವಳು ಆರು ವರ್ಷದವಳಾದಾಗ ಆಗಿನ ಪದ್ಧತಿಯಂತೆ ಹರಿಯೆಂಬ ಕಿಶೋರನಿಗೆ ಅವಳನ್ನು ಮದುವೆ ಮಾಡಿಕೊಟ್ಟನು. ೧೪೮೧ರಲ್ಲಿ ತೀರ್ಥಯಾತ್ರೆಗೆ ಹೊರಟನು.

ಭಾರತ ದರ್ಶನ:

ಶಂಕರದೇವನ ಸಂಗಡ ಹದಿನೇಳು ಮಂದಿ ಇತರರು ತೀರ್ಥಯಾತ್ರೆಗೆ ಹೊರಟರು. ಈ ಪ್ರವಾಸ ೧೨ ವರ್ಷ ನಡೆಯಿತು. ಉತ್ತರ ಭಾರತದ ಎಲ್ಲ ಪ್ರಮುಖ ಕ್ಷೇತ್ರಗಳೀಗೆ ಶಂಕರದೇವನು ಭೇಟಿಯಿತ್ತನು. ಅಲ್ಲಲ್ಲಿ ಪಂಡಿತರೊಡನೆ ನಿಜವಾದ ಧರ್ಮದ ಬಗ್ಗೆ ಚರ್ಚೆ ಮಾಡಿದರು.  ವಿಶೇಷವಾಗಿ ವೈಷ್ಣವ ಭಕ್ತರ ಭಕ್ತಿ ಮಾರ್ಗ ಅವನ ಮನಸ್ಸಿನ ಮೇಲೆ ಆಳವಾದ ಪರಿಣಾಮ ಮಾಡಿತು. ಭಾಗವತ ಪುರಾಣದಲ್ಲಿ ಬಣ್ಣಿಸಿದ ಶ್ರೀಕೃಷ್ಣನ ಜೀವನವನ್ನು ಅವನು ಬಹಳ ಮೆಚ್ಚಿಕೊಂಡನು. ಶ್ರೀ ಕೃಷ್ಣನದೇ ಅವನ ಆರಾಧ್ಯ ದೇವತೆಯಾದನು.

ಹನ್ನೆರಡು ವರ್ಷಗಳಲ್ಲಿ ಸುದೀರ್ಘ ತೀರ್ಥಯಾತ್ರೆಯ ನಂತರ ಊರಿಗೆ ಮರಳಿದ ಶಂಕರದೇವನು ಜನರಿಗೆ ಕೃಷ್ಣಭಕ್ತಿಯ ಮಾರ್ಗ ತೋರಿಸುವ ಸಂಕಲ್ಪ ಮಾಡಿದನು. ಆದರೆ ಅಜ್ಜಿಯ ಅ‌ಗ್ರಹಕ್ಕೆ ಬಲಯಾಗಿ ಕಾಲಿಂದಿಯೆಂಬವಳನ್ನು ಮದುವೆಯಾಗಬೇಕಾಯಿತು (೧೪೯೭ನೇ ಇಸವಿ). ಶಂಕರದೇವನೇ ಶಿರೋಮಣಿ ಭೂಯಾನನಾಗಬೇಕೆಂದು ಇತರೆ ಭೂ ಯಾನರೂ ಒತ್ತಾಯ ಮಾಡಿದನು. ಅದರಂತೆಯೇ ಕೆಲವು ಕಾಲ ಆ ಕೆಲಸ ನಿರ್ವಹಿಸಿದನು. ತನ್ನ ವಾಸ ಸ್ಥಳವನ್ನು ಅಲಿಪುಖರಿಯಂದ ಬರೋದೋವಾಕ್ಕೆ ಬದಲಿಸಿದನು. ಆದರೆ ತನ್ನ ಸಂಕಲ್ಪವನ್ನು ಮಾತ್ರ ಮರೆಯಲಿಲ್ಲ. ಬರದೋವಾದಲ್ಲಿ ಒಂದು ಆಶ್ರಮವನ್ನು ಕಟ್ಟಿಸಿ ಭಕ್ತಿಮಾರ್ಗದ ಪ್ರಚಾರ ಆರಂಭಿಸಿದನು.

ಸತ್ರದ ಮಹತ್ವ :

ಆ ಆಶ್ರಮಕ್ಕೆ “ಸತ್ರ” ಎಂದು ಹೆಸರು. ಇದು ಅಸ್ಸಾಂನ ಜನಜೀವನದಲ್ಲಿ ಧಾರ್ಮಿಕ ಹಾಗೂ ಸಾಮಾಜಿಕ ಪರಿವರ್ತನೆಯನ್ನು ತಂದಿತು. ಸತ್ರದಲ್ಲಿ ಸಮಾಜದ ಎಲ್ಲ ಜನರಿಗೂ ಪ್ರವೇಶವಿತ್ತು. ಅಲ್ಲಿ ನಿಜವಾದ ಧರ್ಮದ ಬಗ್ಗೆ ಉಪನ್ಯಾಸ, ಪ್ರಶ್ನೋತ್ತರ , ಚರ್ಚೆ ನಡೆಯುತ್ತಿತ್ತು.  ಸಮಾಜದಲ್ಲಿ ಕಂಡುಬರುವ ಲೋಪ-ದೋಷಗಳ ವಿಚಾರವೂ ಆಗುತ್ತಿತ್ತು. ಸತ್ರದಲ್ಲಿ ಪ್ರಮುಖ ಭಾಗವೆಂದರೆ, “ನಾಮಘರ್” ಇದು ಭಜನಾಮಂದಿರ. ಇಲ್ಲಿ ಎಲ್ಲರೂ ಸಮಾನರಾಗಿ ಕುಳಿತು ದೇವರ ಭಜನೆ ಮಾಡುತ್ತಿದ್ದರು.  ಇಲ್ಲಿ ಯಾವುದೇ ವಿಧದ ಮೇಲುಕೀಳು ಭೇಧಭಾವವಿರಲಿಲ್ಲ.  ಅಸ್ಪ್ರಶ್ಯರೆಂದು ದೂರವಿಟ್ಟವರಿಗೂ ಇಲ್ಲಿ ಪ್ರವೇಶ ವಿತ್ತು. ಭಕ್ತರಲ್ಲಿ ಯಾರು ಬೇಕಾದರೂ ತಿರ್ಥ ಪ್ರಸಾದಗಳನ್ನು ಕೊಡಬಹುದಾಗಿತ್ತು.  ಭಜನೆ ವ್ಯಾಖ್ಯಾನ ಇವನ್ನೂ ಭಕ್ತರಲ್ಲಿ ಯಾರಾದರೂ ಮಾಡಬಹುದಾಗಿ‌ತ್ತು. ಭಕ್ತರು ಶುಚಿಗೆ ಮಹತ್ವ ಕೊಡಬೇಕಾಗಿತ್ತು. ದೇಹ ಶುಚಿಯಾಗಿರಬೇಕು, ಮನಸ್ಸು ನಿರ್ಮಲವಾಗಿರಬೇಕು. ಮಧ್ಯಪಾನ, ಅಫೀಮು ಸೇವನೆ ಅಥವಾ ಅಫೀಮು ಬೆಳೆಯುವುದು ಇಂತಹವನ್ನೆಲ್ಲ ಬಿಡಬೇಕು ಎಂದು ಶಂಕರದೇವ ಒತ್ತಿ ಹೇಳುತಿದ್ದನು. ಹೀಗಾಗಿ ಸತ್ರವು ಧಾರ್ಮಿಕ- ಸಾಮಾಜಿಕ ಸುಧಾರಣೆಯ ಬೀಜ ಬಿತ್ತಿತ್ತು. ಅಂದು ಶಂಕರದೇವನು ಸ್ಥಾಪಿಸಿದ  ಒಂದು ಸತ್ರದಂತಹ ನೂರಾರು ಸತ್ರಗಳು ಇಂದು ಅಸ್ಸಾಂನಲ್ಲಿವೆ.

ಏಕಶರಣಧರ್ಮ“:

ಭಜನೆ ಅಥವಾ ನಾಮಸಂಕೀರ್ತನೆಗೆ ಶಂಕರದೇವನು ಹೆಚ್ಚಿನ ಮಹತ್ವ ಕೊಟ್ಟನು. ಅವನ ವಿಷ್ಣು ಪರಮಾತ್ಮನ ಪೂರ್ಣಾವತಾರವಾದ ಶ್ರೀ ಕೃಷ್ಣನನ್ನು ದಾಸ್ಯಭಾವದಿಂದ ಭಜಿಸಲು ಉಪದೇಶಿಸಿದನು. ಒಬ್ಬ ದೇವನನ್ನು ಭಜಿಸಲು ಅನು ಉಪದೇಶಿಸಿದ್ದರಿಂದ ಅವನ ಪಂಥಕ್ಕೆ “ಏಕಶರಣಧರ್ಮ” ಎಂದು ಹೆಸರು ಬಂತು. ಸತ್ರದೊಳಗಿನ ನಾಮಘರದಲ್ಲಿ ಶ್ರೀ ಕೃಷ್ಣನ  ಮೂರ್ತಿಯ ಪ್ರತಿಷ್ಠಾಪನೆ ಮಾತ್ರ ಇರಲಿಲ್ಲ. ಅಲ್ಲಿ ದೇವ ಪೀಠದಲ್ಲಿ ಭಾಗವತ ಗ್ರಂಥವನ್ನು ಶಂಕರದೇವನು ಇಟ್ಟನು.

ಶ್ರೀ ಕೃಷ್ಣನ ಚರಿತ್ರೆಯನ್ನು ಭಕ್ತಿ ಪುರಸ್ಸರ ಬಣ್ಣಿಸುವ ಭಾಗವತ ಗ್ರಂಥವು ಶಂಕರದೇವನ ಮನಸ್ಸನ್ನು ಮೊದಲೇ ಆಕರ್ಷಿಸಿತ್ತು. ಆ ಗ್ರಂಥದ ಬಗ್ಗೆ ಅವನ ಹೃದಯದಲ್ಲಿ ಪೂಜ್ಯ ಭಾವನೆ ಮನೆಮಾಡಿತ್ತು. ಅವನು ಸತ್ರವನ್ನು ಸ್ಥಾಪಿಸಿದ ಕೆಲವೇ ತಿಂಗಳಲ್ಲಿ ಜಗನ್ನಾಥಪುರಿಯಿಂದ ಜಗದೀಶಮಿಶ್ರನೆಂಬ ಪಂಡಿತನು ಬಂದು ಶಂಕರದೇವನಿಗೆ ಸಂಪೂರ್ಣ ಭಾಗವತದ ಒಂದು ಪ್ರತಿಯನ್ನು ಕಾಣಿಕೆಯಾಗಿ ನೀಡಿದನು.

ಗುರುಗಳೇ, ನನ್ನ ತಪ್ಪನ್ನು ಮನ್ನಿಸಿ

ಕನಸು :

ಜಗದೀಶಮಿಶ್ರರ ಆಗಮನವನ್ನು ಕುರಿತು ಭಕ್ತರು ಒಂದು ನಂಬಿಕೆಯನ್ನು ಇಟ್ಟುಕೊಂಡಿದ್ದಾರೆ.

ಭಾಗವತ ಪಾರಾಯಣ ಮತ್ತು ಅರ್ಥವಿವರಣೆಗಾಗಿ ಜಗದಿಶಮಿಶ್ರನ ಪ್ರಸಿದ್ಧನಾಗಿದ್ದನು. ಅವನು ಒಮ್ಮೆ ಭಾಗವತ ಪಾರಾಯಣಕ್ಕಾಗಿ ಪುರಿಗೆ ಬಂದಿದ್ದಾಗ ಒಂದು ದಿನ ಒಂದು ಕನಸು ಕಂಡನು. ಕನಸ್ಸಿನಲ್ಲಿ ಜಗನ್ನಾಥ ದೇವರೇ ಸ್ವತಃ ಕಾಣಿಸಿಕೊಂಡು ಅವನಿಗೆ ಅಪ್ಪಣೆ ಮಾಡಿದರು. ಅಸ್ಸಾಂನಲ್ಲಿ ಬರದೋವಾ ಎಂಬ ಸ್ಥಳವಿದೆ. ಅಲ್ಲಿ ಸಂಕರದೇವನೆಂಬ ನನ್ನ ಭಕ್ತನಿದ್ದಾನೆ.  ನನ್ನಲ್ಲರಿವು ಭಾಗವತದ ಪ್ರತಿಯನ್ನು ಅವನಿಗೆ ಒಯ್ದು ಒಪ್ಪಿಸು”. ಎಚ್ಚರವಾದ ಬಳಿಕ ಜಗದೀಶನು ಬರದೋವಾ ತನಕ ಬಂದು ಶಂಕರದೇವನಿಗೆ ಕನಸ್ಸಿನ ಸಂಗತಿಯನ್ನು ಹೇಳಿ ಭಾಗವತ ಗ್ರಂಥವನ್ನು ಒಪ್ಪಿಸಿದನು.

ಶಂಕರದೇವನಿಗೆ ಪರಮಾನಂದವಾಯಿತು. ಜಗದೀಶ ಮಿಶ್ರನನ್ನು ಅಲ್ಲಿಯೇ ಇರಲು ಭಿನ್ನವಿಸಿ ಒಂದು ವರ್ಷಕಾಲ ಭಾಗವತದ ಆಳವಾದ ಅಭ್ಯಾಸ ಮಾಡಿದನು. ಜಗದೀಶನ ಸಂಗಡ ಚರ್ಚೆ ಮಾಡಿ ತಿಳಿಯದ ವಿಷಯಗಳನ್ನು ಚೆನ್ನಾಗಿ ತಿಳೀದುಕೊಂಡನನು. ತಾನು ಬೋಧಿಸುವ ಏಕ ಸರಣ ಧರ್ಮವೇ ನಿಜವಾಧ ಮೋಕ್ಷ ಮಾರ್ಗವೆಂಬ ವಿಚಾರ ಅವನಲ್ಲಿ ದೃಢವಾಯಿತು. ಶ್ರೀಕೃಷ್ಣನ ಭಕ್ತಿಯನ್ನು ಸಾರಿ ಹೇಳುವ ಭಾಗವತಕ್ಕಿಂತ ಪವಿತ್ರ ವಸ್ತು ಬೇರೆಯಿಲ್ಲವೆಂದು ಶಂಕರದೇವನು ಮನಗಂಡನು. ಮತ್ತು ದೇವಪೀಠದಲ್ಲಿ ಭಾಗವತ ಗ್ರಂಥವನ್ನೇ ಇಡುವ ನಿರ್ಣಯ ಮಾಡಿದನು. ಇಂದು ಅಸ್ಸಾಂನಲ್ಲಿ ಕಂಡು ಬರುವ ಭಾಗವತಗ್ರಂಥ ಪೂಝೆಗೆ ಅದುವೇ ನಾಂದಿಯಾಯಿತು.

ಏಕಶರಣ ಧರ್ಮದ ಮುಖ್ಯಅಂಶಗಳು ನಾಲ್ಕು: ದೇವ-ಶ್ರೀಕೃಷ್ಣ ಪರಮಾತ್ಮನಲ್ಲಿ ಅನನ್ನಯ ಭಕ್ತಿ: ನಾಮ- ಶ್ರೀಕೃಷ್ಣನ ನಾಮಭಜನೆ: ಗುರು- ಇಂತಹ ಅನನ್ಯ ಭಕ್ತಿಯುಳ್ಳ ಗುರುವಿನ ಸ್ವೀಕಾರ: ಸತ್ಸಂಗ- ಶ್ರೀಕೃಷ್ಣನ ಭಕ್ತ ಸಹವಾಸ.

ಪ್ರತಿಭಾವಂತ ಸಾಹಿತಿ:
ಸತ್ರದಲ್ಲಿ ಭಜನೆಗಾಗಿ ಅಶಿಕ್ಷಿತ ಸಾಮಾನ್ಯ ಜನರೂ ಸೇರತೊಡಗಿದರು. ಆದರೆ ಅವರ ಭಾಷೆಯಲ್ಲಿ ಭಜನೆಗಳೀರಲಿಲ್ಲ. ಅದಕ್ಕಾಗಿ ಶಂಕರದೇವನು ಅಸ್ಸಾಮೀ ಭಾಷೆಯಲ್ಲಿ ಭಜನೆಗಳನ್ನು ರಚಿಸತೊಡಗಿದನು. ಭಜನೆಗಳನ್ನು ರಾಗಬದ್ಧವಾಗಿ ಹೇಳೀಕೊಡುವವರ  ತರಬೇತಿಯ ವ್ಯವಸ್ಥೆಯನ್ನೂ ಮಾಡಿದನು.  ಸಾಮಾನ್ಯರಿಗೆ ಹಿಂದೂ ಧರ್ಮದ ಸರಿಯಧ ಜ್ಞಾನವಾಗಲು ಪುರಾಣ ಪುಣ್ಯ ಕಥೆಗಳನ್ನು ಬಣ್ಣಿಸುವ ಕಾವ್ಯಗಳನ್ನು ಸುಲಭವಾದ ಭಾಷೆಯಲ್ಲಿ ರಚಿಸಿದನು. ಪವಿತ್ರ ಭಾಗವತವನ್ನು ಆಸ್ಸಾಮಿ ಭಾಷೆಗೆ ಭಾಷಾಂತರಿಸುವ ಕಾರ‍್ಯವನ್ನು ಕೈಗೊಂಡನು. ಈ ಭಾಷಾಂತರದ ಭಾಷೆ ಮತ್ತು ಶೈಲಿ ಅತ್ಯಂತ ಸುಲಭವಾಗಿದ್ದವು. ಮತ್ತು ಮೂಲಗ್ರಂಥದ ಅರ್ಥವು ಪರಿಪೂರ್ಣವಾಗಿ ತಿಳಿಯುತ್ತಿತ್ತು. ಹೀಗಾಗಿ ವಿಧ್ವಾಂಸರೂ ಜನ ಸಾಮಾನ್ಯರೂ ಈ ಭಾಷಾಂತರವನ್ನು ಮೆಚ್ಚಿ ಹೊಗಳತೊಡಗಿದರು.

ಕಾಶಿಯಲ್ಲಿ ನಡೆದ ಘಟನೆ :

ಕಂಠ ಭೂಷಣನೆಂಬ ಯುವಕನು ವಿದ್ಯಾಭ್ಯಾಸಕ್ಕಾಗಿ ಕಾಶಿಗೆ ಬಂದಿದ್ದನು ಬ್ರಹ್ಮಾನಂದರೆಂಬ ಸಂನ್ಯಾಸಿ ಅವನ ಗುರುಗಳೂ. ಒಮ್ಮೆ ಅವರು ಶಿಷ್ಯರಿಗೆ ಭಾಗವತದೊಳಗಿನ ಕೆಲವು ಶ್ಲೋಕಗಳ ಅರ್ಥ ವಿವರಿಸಲು ಹೇಳಿದರು. ಯಾವ ಶಿಷ್ಯನಿಗೂ ಬರಲಿಲ್ಲ. ಕಂಠಭೂಷಣನು ಮಾತ್ರ ಸುಲಭವಾಗಿ ವಿವರಿಸಿದನು. ಬ್ರಹ್ಮಾನಂದರು ಆಶ್ಚರ್ಯದಿಂದ ಕೇಳಿದಾಗ ಅವನು ಹೇಳಿದನು. “ಗುರುಗಳೇ , ನಮ್ಮಲ್ಲಿ ಶಂಕರದೇವರೆಂಬ ಮಹಾಪುರುಷರಿದ್ದಾರೆ.  ಅವರು ನಮ್ಮ ಆಸ್ಸಾಮೀ ಭಾಷೆಗೆ ಭಾಗವತವನ್ನು ಭಾಷಾಂತರಿಸಿದ್ದಾರೆ. ಹೀಗಾಗಿ ಭಾಗವತದ ಶ್ಲೋಕಗಳ ಅರ್ಥ ನಮ್ಮಲ್ಲಿ ಎಲ್ಲರಿಗೂ ತಿಳಿದಿದೆ: ” ಈ ರೀತಿ ಶಂಕರದೇವನ ಭಾಗವತ ಭಾಷಾಂತರದ ಕೀರ್ತಿ ಕಾಶಿಯ ಪಂಡಿತರವರೆಗೂ ಹಬ್ಬಿತು.

ಭಾಗವತ- ಭಾಷಾಂತರವಲ್ಲದೇ ಶಂಕರದೇವನು ಇನ್ನೂ ಅನೇಕ ಗ್ರಂಥಗಳನ್ನು ರಚಿಸಿದನು. ಇವು ಏಕಶರಣ ಧರ್ಮದ ಪ್ರಚಾರದ ಸಾಧನಗಳಾದವು. ಇವುಗಳಲ್ಲಿ ಅಜಾಮಿಲೋಪಾಖ್ಯಾನ, ಹರಮೋಹ, ಶಿಶುಲೀಲಾ, ರಾಸಕ್ರೀಡಾ, ಸ್ಯಮಂತಕ ಹರಣ, ಕಂಸವಧ, ಗೋಪಿ- ಉದ್ಬವ ಸಂವಾದ, ಲೀಲಾಮಾಲಾ, ವೈಕುಂಟ ಪ್ರಯಾಣ, ರುಕ್ಮೀಣಿ ಹರಣ, ಭಕ್ತಿ ರತ್ನಾಕರ- ಇವು ಅತ್ಯಂತ ಪ್ರಸಿದ್ಧವಾದುವು. ಕೇವಲ ಅಸ್ಸಾಮಿ ಭಾಷೆಯಲ್ಲಷ್ಟೇ ಅಲ್ಲ, ಭಾರತದ ಪೂರ್ವಭಾಗದ ಪ್ರಾಂತಗಳಲ್ಲಿ ಪ್ರಚಲಿತವಿದ್ದ ವ್ರಜಭಾಷೆ (ಈಗಿನ ಹಿಂದೀ ಭಾಷೆಯ ಹಳೆಯರೂಪ) ಯಲ್ಲಿಯೂ ಭಜನೆಗಳನ್ನು ರಚಿಸಿದನು. ಇವು “ಬರಗೀತ:” ಗಳೆಂದು ಇಂದಿಗೂ ಜನಪ್ರೀಯವಾಗಿವೆ. ಜನರ ಮನಸ್ಸಿನಲ್ಲಿ ಪುರಾಣ ಕಥೆಗಳನ್ನು ಪ್ರಭಾವಿಯಾಗಿ ಮೂಡಿಸಲು ಶಂಕರದೇವನು ನಾಟಕಗಳನ್ನು ಬರೆದು ಆಡಿಸತೊಡಗಿದನು. ಹೀಗೆ ಶಂಕರದೇವನು ಅಸ್ಸಾಮಿ ಸಾಹಿತ್ಯಕ್ಕೂ ವ್ರಜಭಾಷೆಯ ಸಾಹಿತ್ಯಕ್ಕೂ ಬಹುದೊಡ್ಡ ಕಾಣೀಕೆ ನೀಡಿರುವರು.

ಸುರಕ್ಷಿತ ಸ್ಥಳಕ್ಕೆ ಪ್ರಯಾಣ:

ಶಂಕರದೇವನು ಧರ್ಮ ಪ್ರಚಾರದಲ್ಲಿ ತೊಡಗಿದ್ದರಿಂದ ಸ್ವಾಭಾವಿಕವಾಗಿಯೇಅವನ ಗಮನ ಆಡಳಿತದ ಕಡೆ ಇರಲಿಲ್ಲ. ಇದರಿಂದ ಸಮೀಪದ ಪ್ರಬಲ ಕಚಾರಿ ಅರಸರು ಬ್ರಹ್ಮಪುತ್ರಾ ನದಿಯ ದಕ್ಷಿಣಕ್ಕಿದ್ದ ಎಲ್ಲ ಭೂಯಾನರ ರಾಜ್ಯಗಳನ್ನು ಆಕ್ರಮಿಸಿಕೊಂಡರು. ಶಂಕರದೇವನ ಉತ್ತರದಂಡೆಯ ಮೇಲಿರುವ ಭೂಯಾನರಲ್ಲಿ ಆಶ್ರಯಪಡಬೇಕಾಯಿತು. (೧೫೧೬-೧೭ನೇ ಇಸವಿ). ಅಲ್ಲಿಯೂ ಸುರಕ್ಷಿತತೆ ಇರಲಿಲ್ಲ.  ಪಶ್ಚಿಮದಲ್ಲಿ ಬಲಶಾಲಿಯಾದ ಕೋಚ ಅರಸ ವಿಶ್ವಸಿಂಹನು ಉತ್ತರದ ಭೂಯಾನರ ರಾಜ್ಯಗಳನ್ನು ನುಂಗಲು ಹೊಂಚುಹಾಕಿದ್ದನು. ಅದಕ್ಕಾಗಿ ಶಂಕರದೇವನು ಬ್ರಹ್ಮಪುತ್ರಾ ನದಿಯಲ್ಲಿದ್ದ ಮಾಜುಲಿ ದ್ವೀಪಕ್ಕೆ ಹೋಗಿ ಧುವಾಹಾಟ ಎಂಬಲ್ಲಿ ತನ್ನ ಸತ್ವವನ್ನು ಸ್ಥಾಪಿಸಿದನು.

ಪಟ್ಟ ಶಿಷ್ಯ ಪ್ರಾಪ್ತ:

ಧುವಾಹಾಟಿಯಲ್ಲಿದ್ದಾಗ ಶಂಕರದೇವನಿಗೆ ಮುಂದೆ ಅವನ ಪಟ್ಟ ಶಿಷ್ಯನಾದ ಮಾಧವದೇವನ ಭೇಟ್ಟಿಯಾಯಿತು. ಮಾಧವದೇವನು ಬ್ರಹ್ಮಪುತ್ರೆಯ ನಾರಾಯಣಪುರ ಎಂಬಲ್ಲಿ ವಾಸಿಸುತ್ತಿದ್ದನು. ಸಕಲ ಶಾಸ್ತ್ರಗಳನ್ನು ಕಲಿತ ವಿದ್ವಾಂಸ ಅವನು. ಶಾಕ್ತ ಪಂಥದ ದೊಡ್ಡ ಅಭಿಮಾನಿ,.

ಒಮ್ಮೆ ಅವನು ಕಾಯಿಲೆ ಬಿದ್ದಾಗ ಗುಣವಾದರೆ ದುರ್ಗಾದೇವಿಗೆ ಒಂದು ಆಡನ್ನು ಬಲಿಕೊಡುತ್ತೇನೆಂದು ಹರಕೆ ಹೊತ್ತನು. ಕಾಯಿಲೆ ಗುಣವಾಯಿತು. ಆದರೆ ಓಡಾಡುವ ಶಕ್ತಿ ಬಂದಿರಲಿಲ್ಲ. ಆಡನ್ನು ತರಲು ತನ್ನ ಭಾವ ರಾಮದಾಸನಿಗೆ ಹೇಳಿದನು. ರಾಮದಾಸ ಶಂಕರದೇವನ ಶಿಷ್ಯ: ಪ್ರಾಣಿ ಹಿಂಸೆ ಪಾಪಕರವೆಂದು ನಂಬಿದ್ದವ. ಆದರೆ ತನಗಿಂತ  ಬಹಳ ಹೆಚ್ಚು ಕಲಿತ ಮಾಧವದೇವನಿಗೆ ಅದನ್ನು ಹೇಳವು ಧೈರ್ಯವಿರಲಿಲ್ಲ. ಹೀಗಾಗಿ ತರುತ್ತೇನೆಂದು ದಿನಕಳೆಯತೊಡಗಿದ. ಇದರಿಂದಾಗಿ ಮಾಧವದೇವನಿಗೆ ಆಶ್ಚರ್ಯವಾಯಿತು. ಸಿಟ್ಟೂ ಬಂತು.

ಸಿಟ್ಟಿನಿಂದ ಮಾಧವದೇವನು ಒಂದು ದಿನ ಕೇಳಿದಃ “ಹೀಗೆಕೆ ಮಾಡುತ್ತೀ? ಆಡನ್ನು ಯಾಕೆ ತರಲೊಲ್ಲೆ? ದುರ್ಗೆಗೆ ಬಲಿ ಕೊಡದಿದ್ದರೆ ಆಕೆ ಸಿಟ್ಟಾಗುವುದಿಲ್ಲವೇ?”

ರಾಮದಾಸ ಶಂಕರದೇವನ ಉಪದೇಶದ ವಿಚಾರ ಹೇಳಿದ. ಮಾಧವದೇವನ ಸಿಟ್ಟು ಹೆಚ್ಚಾಯಿತು. ಧರ್ಮ ವಿರೋಧಿ ಪ್ರಚಾರ ಮಾಡುವ ಶಂಕರದೇವನ ಸಿಟ್ಟು ಹೆಚ್ಚಾಯಿತು. ಧರ್ಮ ವಿರೋಧಿ ಪ್ರಚಾರ ಮಾಡುವ ಶಂಕರದೇವನಿಗೆ ಚೆನ್ನಾಗಿ ಬುದ್ಧಿಕಲಿಸಬೇಕೆಂದು ಕೂಡಲೇ ಹೊರಟ.

ವಿದ್ವಾಂಸನೊಬ್ಬ ಚರ್ಚೆಗೆ ಬಂದಿದ್ದರಿಂದ ಶಂಕರದೇವನಿಗೆ ಸಂತೋಷವೇ ಆಯಿತು. ನಾಲ್ಕುವರೆ ತಾಸು ಚರ್ಚೆ ನಡೆಯಿತು.  ಕೊನೆಗೆ ಮಾಧವದೇವ ಸೋತು ಶಂಕರದೇವನ ಕಾಲಿಗೆ ನಮಸ್ಕರಿಸಿದ.

ಇದರಿಂದ ಮಾಧವದೇವನ ಜೀವನವೇ ಬದಲಾಯಿತು. ಅವನು ಸಂನ್ಯಾಸಿಯಾಗಿ ಗುರುವಿನ ಬಳಿಯೇ ಇರತೊಡಗಿದನು. ವಿಧ್ವಾಂಸನಾದ ಮಾಧವದೇವನ ಸಹಾಯದಿಂದ ಶಂಕರದೇವನ ಏಕಶರಣ ಧರ್ಮ ಪ್ರಚಾರ ಕಾರ್ಯ ಭರದಿಂದ ಸಾಗಿತು. ಮೇಲಾಗಿ ಮಾಧವದೇವನ ಸ್ವರ ಇಂಪಾಗಿತ್ತು. ಅದರಿಂದ ಭಜನೆಯ ಕಾರ್ಯಕ್ರಮಕ್ಕೆ ಕಳೆಯೆರತೊಡಗಿತು.

ದಯೆಯೇ ಧರ್ಮದ ಮೂಲ:

ಶಂಕರದೇವನ ಉಪದೇಶವನ್ನು ಮಾಧವನ ದೇವನು  ಪ್ರತ್ಯಕ್ಷ ಆಚರಿಸಿ ತೋರಿಸುತ್ತಿದ್ದನು. ಎಲ್ಲಾ ಪ್ರಾಣಿಗಳಿಗೆ ದಯೆ ತೋರಿಸಬೇಎಕಂಬುವುದು ಶಂಕರದೇವನ ಒಂದು ಉಪದೇಶ. ಒಮ್ಮೆ ಒಂದು ಮರದ ಕೆಳಗೆ ಒಬ್ಬ ಚಿಕ್ಕ ಬಾಲಕನು ಅಳುತ್ತಿದ್ದುದನ್ನು ಓರ್ವ ಶಿಷ್ಯನು ನೋಡಿದನು. ಕೇಳೀದಾಗ ಆ ಬಾಲಕ ಹೇಳಿದನು : “ಏನು ಹೇಳಿ ? ನನ್ನ ಒಡೆಯನು ನನಗೆ ಹೊಟ್ಟೆ ತುಂಬ ಊಟ  ಕೊಡುವುದಿಲ್ಲ. ಹಸಿವೆಯಿಂದ ಬಳಲಿ ನಾನು ಅಳುತ್ತಿದ್ದೇನೆ”.

ಶಿಷ್ಯನಿಂದ ಈ ವಿಷಯ ತಿಳೀದ ಶಂಕರದೇವನು ಮಾಧವದೇವನನ್ನು ಆಹುಡುಗನ ಒಡೆಯನ ಬಳೀ ಕಳಿಸಿದನು.

ಒಡೆಯ ಹೇಳಿದ. “ಈ ಹುಡುಗನ ತಂದೆ ನನ್ನ ಬಳಿ ಮುಂಗಡ ಹಣ ತೆಗೆದುಕೊಂಡು ಹೋಗಿ ಇವನನ್ನು ಕೆಲಸಕ್ಕೆ ನಿಲ್ಲಿಸಿದ್ದಾನೆ. ಈತ ಮಹಾ ಮೈಗಳ್ಳ. ಜನರಿಗೆ ನನ್ನ ವಿರುದ್ಧ ಚಾಡಿ ಹೇಳುವ ಕೆಲಸವನ್ನು ಮಾತ್ರ ಚೆನ್ನಾಗಿ ಮಾಡುತ್ತಾನೆ”.

ಆದರೆ ಹುಡುಗನನ್ನು ನೋಡಿದಾಗ ಅವನು ಸುಳ್ಳೂಗಾರನಲ್ಲವೆಂದು ಮಾಧವ ದೇವನಿಗೆ ತೋರಿತು. ಹುಡುಗನ ತಂದೆ ತೆಗೆದುಕೊಂಡ ಹಣವನ್ನು ಒಡೆಯನಿಗೆ ಪೂರ್ಣ ಸಲ್ಲಿಸಿ, ಹುಡುಗನನ್ನು ಬಿಡುಗಡೆ ಮಾಡಿದನು. ಹುಡುಗ ಶಂಕರದೇವನ ಬಳಿ ಬಂದು ಸೇವೆ ಮಾಡತೊಡಗಿದ. ಅಲ್ಲಿಯ ಪವಿತ್ರ ವಾತಾವರಣದಿಂದಲೂ ಹೊಟ್ಟೆ ತುಂಬಾ ಸಿಗುತ್ತಿದ್ದ ಆಹಾರದಿಂದಲೂ ಹುಡುಗನ ಮುಖ ಕಳೆಯಿಂದ ತುಂಬಿತು.  ಕೆಲವು ತಿಂಗಳುಗಳ ಬಳಿಕ ಅವನು ತನ್ನ ಮೊದಲಿನ ಒಡೆಯನನ್ನು ನೋಡಲು ಹೋದನು. ಅವನಲ್ಲಾದ ಬದಲಾವಣೆಯಿಂದ ಆಶ್ಚರ್ಯಚಕಿತನಾದ. ಒಡೆಯನು ಹುಡುಗನ ಸಂಗಡ ಬಂದು ಶಂಕರದೇವನ ಶಿಷ್ಯನಾದನು.

ತಾಳ್ಮೆ ಬಿಡಬೇಡ :

ಹೀಗೆ ಶಂಕರದೇವನ ಶಿಷ್ಯರ ಸಂಖ್ಯೆ ಬೆಳೆಯತೊಡಗಿತು. ಸಮಾಜದ ಬೇರೆ ಬೇರೆ ಪಂಗಡದವರೂ ಅವನ ಶಿಷ್ಯರಾಗತೊಡಗಿದರು. ಒಮ್ಮೆ ಪ್ರವಾಸದಲ್ಲಿದ್ದಾಗ ಒಬ್ಬ ಶಿಷ್ಯನಿಗೆ ಕಾಯಿಲೆಯಾಯಿತು.  ಆವನಿಗಾಗಿ ಗಂಜಿ ಬೇಯಿಸಲು ಒಳ್ಳೆಯ ಅಕ್ಕಿ ಬೇಕಾಗಿತ್ತು. ಇನ್ನೊಬ್ಬ ಶಿಷ್ಯ ಅದಕ್ಕಾಗಿ ಸಮೀಪದ ಮನೆಗೆ ಹೋಗಿ ಬೇಡಿದನು ಮನೆಯೊಡೆಯನು ಜಿಪುಣ: ಶಿಷ್ಯನನ್ನು  ಬಯ್ದು ಓಡಿಸಿದನು. ಶಂಕರದೇವನ ಅಪ್ಪಣೆಯಂತೆ ಶಿಷ್ಯನು ಪುನಃ ಬೇಡಲು ಬಂದು ಈ ಬಾರಿ ಆವನ ಮೇಲೆ ಬಿದಿರಿನ ತುಂಡನ್ನು ಆ ಗೃಹಸ್ಥನು ಒಡೆದನು. ಮೂರನೆಯ ಬಾರಿಯೂ ಶಂಕರದೇವನು ಕಳಿಸಿದನು. ಈ ಸಲ ಕೆಸರಿನ ಮುದ್ದೆ ದೊರೆಯಿತು. ನಾಲ್ಕನೆಯ ಬಾರಿ ಕಳಿಸಿದಾಗ ಸೆಗಣಿ ಮುದ್ದೆ ಸಿಕ್ಕಿತ್ತು. ಶಂಕರದೇವನು ಅವೆರಡನ್ನೂ ಬೆರಸಿ ನೆಲ ಸಾರಿಸಲು ಉಪಯೋಗಿಸಿ ಶಿಷ್ಯನಿಗೆ ಹೇಳಿದನು.

-ನೋಡಿದೆಯೇ, ನಮ್ಮ ನೆಲ್ಲ ಎಷ್ಟು ಸ್ವಚ್ಛವಾಯಿತು. ಕೆಡಕಿನಿಂದಲೂ ಒಳಿತಾಗುತ್ತದೆ. ತಾಳ್ಮೆ ಬಿಡಬೇಡ. “ತಾಳಿದವ ಬಾಳಿಯಾನು” ಎಂದು ಕೇಳೀಲ್ಲವೇ? ಇನ್ನೊಮ್ಮೆ ಅದೇ ಮನೆಗೆ ಹೋಗಿ ಅಕ್ಕಿ ಬೇಡಡು. ” ಈ ಬಾರಿ ಹೋದ ಶಿಷ್ಯನಿಗೆ ಸೋಜಿಗ ಕಾದಿತ್ತು. ಎಷ್ಟು ಬಾರಿ ಬಯ್ದು  ಓಡಿಸಿದರೂ ಪುನಃ ಪುನಃ ಬರುತ್ತಿದ್ದ ಶಿಷ್ಯನಿಗೆ ಆ ಗೃಹಸ್ಥ ಕೇಳೀದ :ಶಂಕರದೇವನ ವಿಷಯ ತಿಳಿದುಕೊಂಡ: ಚೀಲ ತುಂಬ ಅಕ್ಕಿ ತೆಗೆದುಕೊಂಡು ಬಂದು ಶಂಕರದೇವನ ಕಾಲಿಗೆ ಬಿದ್ದು, ಕ್ಷಮೆ ಬೇಡಿದ: ಶಿಷ್ಯನಾದ.

ಅಹಿಂಸೆಯೇ ಪರಮಧರ್ಮ :

ಯಾವುದೇ ಪ್ರಾಣಿಯನ್ನು ಯಾವುದೇ ಪ್ರಸಂಗದಲ್ಲಿ ಹಿಂಸಿಸಬಾರದೆಂದು ಶಂಕರದೇವನು ಉಪದೇಶಿಸುತ್ತಿದ್ದನು. ಅವನ ಶಿಷ್ಯರಿಗೆ ಮಾಂಸಾಹಾರ ವರ್ಜ್ಯವಾಗಿತ್ತು. ಒಮ್ಮೆ ಅವನು ಶಿಷ್ಯರೊಡನೆ ಒಂದು ಹಳ್ಳೀಯಲ್ಲಿದ್ದಾಗ ಒಬ್ಬ ಕಟುಕನು ಮಾಂಸದ ವ್ಯಾಪಾರಕ್ಕಾಗಿ ಅವರಿದ್ದಲ್ಲಿಗೆ ಬಂದನು. ಅವನನ್ನು ನೋಡಿದ ಶಿಷ್ಯರು ಬೆದರಿಸಿ ಓಡಿಸತೊಡಗಿದರು. “ಅಯ್ಯ, ನನ್ನನ್ನೇಕೆ ಓಡಿಸುತ್ತೀರಿ? ಮಾಂಸ ಮಾರದಿದ್ದರೆ ನನ್ನ ಹೆಂಡತಿ ಮಕ್ಕಳ ಹೊಟ್ಟೆ ತುಂಬುವುದು ಹೇಗೆ ಸಾಧ್ಯ? ಸ್ವಲ್ಪವಾಧರೂ ಮಾಂಸ ಕೊಳ್ಳಿರಿ. ನಿಮ್ಮ ಹೆಸರು ಹೇಳಿ ತುತ್ತು ಅನ್ನ ತಿನ್ನುತ್ತೇವೆ. ಇಲ್ಲವಾದರೆ ನಾವೆಲ್ಲ ಉಪವಾಸ ಸಾಯಬೇಕಾಗಿದೆ” ಎಂದು ಅವನುಜ ಅಂಗಲಾಚಿ ಬೇಡತೊಡಗಿದರು.

ತಮ್ಮಾ ಇತರರಿಗೆ ಸುಖ ಕೊಡುತ್ತ ಸುಖದಿಂದ ಬಾಳು

ಒಳಗಡೆಯಿಂದ ಇದೆಲ್ಲ ಕೇಳುತ್ತಿದ್ದ ಶಂಕರ ದೇವನು ಹೊರಗೆ ಬಂದು ಕಟುಕನನ್ನು ಸಮೀಪ ಕೂಡಿಸಿಕೊಂಡು ಪ್ರೀತಿಯಿಂದ ಹೇಳೀದನು: – “ತಮ್ಮಾ , ಪ್ರಾಣಿಗಳನ್ನು ಕೊಂದು ಜೀವಿಸುವುದು ಸರಿಯೇ? ಅವುಗಲೀಗೆ ನಮ್ಮಂತೆಯೇ ಜೀವವಿದೆಯಲ್ಲವೇ? ಅವುಗಳನ್ನು ಪ್ರೀತಿಸಬೇಕೇ ಹೊರತು ಕೊಲ್ಲಬಾರದು. ಬೇರೆ ಒಳ್ಳೆಯ ಉದ್ಯೋಗದಿಂದ ನಿನ್ನ ಹೆಂಡತಿ- ಮಕ್ಕಳನ್ನು ಸಾಕು. ಇಗೋ ಈ ಹಣ ತೆಗದುಕೋ. ಎತ್ತುಗಳನ್ನು ಕೊಂಡುಕೋ. ಬೇಸಾಯ ಮಾಡಿ ಬದುಕು. ಇತರರಿಗೆ ಸುಖ  ಕೊಡುತ್ತ ಸುಖದಿಂದ ಬಾಳು”.

ಕಟುಕನು ತನ್ನಲ್ಲಿದ್ದ ಮಾಂಸವನ್ನು ಚೆಲ್ಲಿ ಮನೆಗೆ ಹೋದ. ಬೇಸಾಯ ಮಾಡತೊಡಗಿದ. ಕಾಲಾಂತರದಲ್ಲಿ ಅವನೂ ಶಂಕರದೇವನ ಶಿಷ್ಯನಾದ.

ಜನಸೇವೆಯೇ ಜನಾರ್ಧನ ಸೇವೆ :

ತನ್ನಂತೆ ಇತರರೂ ಎಂದು ಮನದಟ್ಟು ಮಾಡಿಕೊಂಡು ಪ್ರಾಣಿಗಳ ದುಃಖ ದೂರಮಾಡಲು ಹೆಣಗಬೇಕೆಂದು ಶಂಕರದೇವನು ಯಾವಾಗಲೂ ಬೋಧಿಸುತ್ತಿದ್ದನು. ಒಮ್ಮೆ ಪ್ರಮುಖ ಶಿಷ್ಯರೊಬ್ಬರು ಭಜನೆಗೆ ಬಂದಿರಲಿಲ್ಲ. ಭಜನೆ ತಪ್ಪಿಸಬಾರದೆಂದು ನಿಯಮವಾಗಿಬಿಟ್ಟಿತ್ತು.  ವಿಚಾರಿಸಿದಾಗ ಅವರು ಕಾಯಿಲೆಯಿಂದ ಮಲಗಿದ್ದ ಗಳೆಯನ ಸೇವೆಯಲ್ಲಿ ತೊಡಗಿದ್ದಾರೆಂದು ತಿಳೀದುಬಂತು. “ದೇವರ ಭಜನೆ ಬಿಟ್ಟು ಮನುಷ್ಯನ ಸೇವೆಯೊಲ್ಲಿ ತೊಡಗುವುದೆ? ದೇವರು ದೊಡ್ಡವನೋ ಮನುಷ್ಯ ದೊಡ್ಡವನೋ? ಎಂದು ಅಲ್ಲಿ ನೆರೆದಿದ್ದ ಭಕ್ತರು ಮಾತನಾತೊಡಗಿದರು. ಆ ಮಾತು ನಿಲ್ಲಿಸಿ ಶಂಕರದೇವನು ಹೇಳೀದನು: “ಆ ಮಾತು ನಿಲ್ಲಿಸಿ ಶಂಕರದೇವನು ಹೇಳಿದನು : “ಆ ಶಿಷ್ಯನ ಕೆಲಸವೇ ಸರಿಯಾದುದು. ಎಲ್ಲರ ಹೃದಯದಲ್ಲಿ ವಿಷ್ಣುಪರಮಾತ್ಮ ನೆಲೆಸಿದ್ದಾನೆ. ಎಲ್ಲರ ಹೃದಯದಲ್ಲಿ ವಿಷ್ಣುಪರಮಾತ್ಮ ನೆಲೆಸಿದ್ದಾನೆ.  ಇದನ್ನು ಎಂದಿಗೂ ಮರೆಯಬೇಡಿರಿ. ಜನಸೇವೆಯಿಂದಲೇ ಪರಮಾತ್ಮನ ತೃಪ್ತಿಯಾಗುತ್ತದೆ”. ಆ ದಿನ ಶಿಷ್ಯರು ಹೊಸ ಪಾಠ ಕಲಿತರು. ಶಂಕರದೇವನು ಮುಂದೆ ಹೇಳಿದ: “ಎಲ್ಲದರಲ್ಲಿಯೂ ಪರಮಾತ್ಮನಿರುವುದರಿಂದ ಎಲ್ಲ ಜನರು ಸರಿ ಸಮಾನರು. ಮೇಲು-ಕೀಳು ಭಾವನೆಗೆ ಅವಕಾಶವಿಲ್ಲ. ಇವನು ಸ್ಪ್ರಶ್ಯ, ಅವನು ಅಸ್ಪ್ರಶ್ಯ ಎಂಬುವುದಂತೂ ಸತಾರಾಂ ತಪ್ಪು. ನಿಮ್ಮ ಮನಸ್ಸಿನಲ್ಲಿ ಇಂತಹ ಕೆಟ್ಟಡ ವಿಚಾರವಿದ್ದರೆ ಕೂಡಲೇ ಅದನನ್ನು ತೊಡೆದು ಹಾಕಿರಿ.”

ಸನಾತನಿಗಳ ವಿರೋಧ :

ಶಂಕರದೇವನ ಪ್ರಭಾವ ಬೆಳೆದಂತೆ ಸನಾತನಿಗಳು ಅವನ ವಿರೋಧ ಮಾಡತೊಸಗಿದರು.  ಅವನ ಭಕ್ತಿಮಾರ್ಗದ ಪ್ರಸಾರದಿಂದ ಪೂಜಾರಿಗಳ ಉತ್ಪನ್ನ ಕಡಿಮೆಯಾಗತೊಡಗಿತು.  ಮಂತ್ರಮಾಟ ಮಾಡುವವರ ಕಡೆ ಯಾರು ಹೊಗುತ್ತಿದ್ದಿಲ್ಲ. ತಮ್ಮ ಪ್ರಾಪ್ತಿ ಕಡಿಮೆಯಾಯಿತೆಂದು ಅವರೆಲ್ಲ ಹೊಟ್ಟೆ ಕಿಚ್ಚಿನಿಂದ ಉರಿಯತೊಡಗಿದರು.  ಶಂಕರದೇವನನ್ನೂ ಅವನ ಶಿಷ್ಯರನ್ನೂ ಓಡಿಸಲು ಪ್ರಯತ್ನಿಸಿದರು.  ಬಯ್ಯತೊಡಗಿದರು., ಕಲ್ಲು ಹೊಡೆಯತೊಡಗಿದರು, ಅಪ ಪ್ರಚಾರ ಮಾಡಿದರು. ಆದರೆ ಶಂಕರದೇವನು ತಾಳ್ಮೆಯಿಂದ ತನ್ನ ಪವಿತ್ರ ಕೆಲಸದಲ್ಲಿ ತೊಡಗಿದ್ದ.

ಶಂಕರದೇವನ ತಾಳ್ಮೆಯಿಂದ ವಿರೊಧಿಗಳ ಹೊಟ್ಟೆಯುರಿ ಹೆಚ್ಚಾಯಿತು. ಅವರೆಲ್ಲ ಒಂದಾಗಿ ಅಹೋಂರಾಜ ಸುಹುಮ್ಮಂಗನ ಬಳಿ ದೂರು ಕೊಟ್ಟರು.  ರಾಜನು ಶಂಕರದೇವನನ್ನು ಕರೆದು ವಿಚಾರಿಸಿದನು. ಏಕಶರಣ ಧರ್ಮದ ತತ್ವಗಳು ಜನರಿಗೆ ನಿಜವಾದ ಸುಖ ನೀಡುತ್ತವೆಯೆಂದು ರಾಜನಿಗೆ  ಮನವರಿಕೆಯಾಯಿತು. ಅವನು ಶಂಕರದೇವನನ್ನು ಗೌರವಿಸಿ ಕಳುಹಿಸಿದನು.

ನರನಾರಾಯಣನ ರಾಜ್ಯಕ್ಕೆ:

ಆದರೂ ಶಂಕರದೇವನು ಅಲ್ಲಿ ಬಹುಕಾಲ ವಾಸಿಸಲು ಸಾಧ್ಯವಾಗಲಿಲ್ಲ. ಒಮ್ಮೆ ರಾಜನು ಕಾಡಾನೆ ಹಿಡಿಯಲು ಖೆಡ್ಡಾ ಕಾರ್ಯಕ್ರಮ ಏರ್ಪಡಿಸಿದ್ದನು. ಅರಸನ ಅಪ್ಪಣೆಯಂತೆ ಧುವಾಹಾಟ, ನಾರಾಯಣಪುರ, ಮುಂತಾದ ಸ್ಥಳಗಳ ಭೂಯಾನರು ಖೆಡ್ಡಾದಲ್ಲಿ ಭಾಗವಹಿಸಿದದರು. ಆನೆಗಳನ್ನು ಹಿಡಿಯಲು ವಿಶಲವಾದ ಬಯಲಿನ ಸುತ್ತಲೂ ಪಂಜರ ನಿರ್ಮಿಸಲಾಯಿತು. “ಪಂಜರದ ಯಾವ ಬದಿಯಿಂದ ಆನೆಗಳೂ ಪಾರಾಗುವವೋ ಆ ಬದಿಯ ಕಾವಲುಗಾರರಿಗೆ ಗಲ್ಲಿನ ಶಿಕ್ಷೆ” ಎಂಬುವುದು ಆರಸನ ಕಟ್ಟಪ್ಪಣೆಯಾಗಿತ್ತು. ದುರ್ದೈವದಿಂದ ಮಾದವ ದೇವ ಮತ್ತು ಶಂಕರದೇವನ ಅಳಿಯ ಹರಿ ಕೂಡಿ ತಮ್ಮ ಜನರೊಡನೆ ಕಾಯುತಿದ್ದ ಮೂಲೆಯಿಂದ ಕಾಡಾನೆಗಳು ಪಾರಾಗಿ ಹೋದವು. ಇಬ್ಬರನ್ನು ಸೆರೆಹಿಡಿಯಲಾಯಿತು. ಮಾಧವ ದೇವನು ಸಂನ್ಯಾಸಿಯಾದುದರಿಂದ ಶಿಕ್ಷೆಯಿಂದ ಪಾರಾದನು. ಆದರೆ ಹರಿಯ ತಲೆ ಕಡಿಯಲಾಯಿತು.

ಇಂತಹ ಕ್ರೂರ ಅರಸನ ರಾಜ್ಯದಲ್ಲಿ ವಾಸಿಸುವುದು ಕ್ಷೇಮಕರವಲ್ಲವೆಂದು ಶಂಕದೇವನು ನಿರ್ಧರಿಸಿದನು. ಇದೇ ಸಮಯದಲ್ಲಿ (೧೫೩೪ನೇ ಇಡವಿ) ಕೊಚ ನರನಾರಾಯಣ ಎಂಬ ದೊರೆ ಪಟ್ಟವೇರಿದನು. ನರ ನಾರಾಯಣನೂ ಅವನ ತಮ್ಮ ಚಿಲಾರಾಯನೂ ಕಾಶಿಯಲ್ಲಿ ವಿದ್ಯಾಭ್ಯಾಸ ಮಾಡಿದ್ದರು. ಹೀಗಾಗಿ ಅವರಿಗೆ ವಿಧ್ವಾಂಸರ ಬಗೆಗೆ ಒಳ್ಳೆಯ ಅಭಿಮಾನವಿತ್ತು. ಇಂತಹವರ ರಾಜ್ಯದಲ್ಲಿ ಸುಖವಾಗಿರಬಹುದೆಂದು ಶಂಕರದೇವನು ಯೋಚಿಸಿದನು.  ಮತ್ತು ಬರಪೇಟಾದ ಸಮೀಪಪಟಬಾವಸಿ (ಈಗಿನ ಕಾಮರೂಪ ಜಿಲ್ಲೆಯಲ್ಲಿ) ಎಂಬಲ್ಲಿ ಸತ್ರ ಸ್ಥಾಪಿಸಿ ಇರತೊಡಗಿದನು. ಈಗ ಶಂಕರದೇವನ ವಯಸ್ಸು ಸುಮಾರು ೧೦೦ ವರ್ಷ.

ಪಾಟಬಾವಸಿಯಲ್ಲಿ ಶಂಕರದೇವನ ಜೀವನ ನೆಮ್ಮದಿಯಿಂದ ಸಾಗತೊಡಗಿತು. ಇಲ್ಲಿಯೇ ಅವನು ಜೀವನದ ಕೊನೆಗಾಲ ಕಳೆದನು.ಬಹುಪಾಲು ಸಾಹಿತ್ಯರಚನೆ ಇಲ್ಲಿಯೇಆಯಿತು. ರುಕ್ಮಿಣಿಹರಣ, ಪಾರಿಜಾತಹರಣ, ಕಾಲಿಯದಮನ, ಕೇಲಿಗೋಪಾಲ, ಮುಂತಾದ ನಾಟಕಗಳನ್ನೂ ಭಾಗವತದಲ್ಲಿಯ ಕಥೆಗಳನ್ನು ಬಣ್ಣಿಸುವ ಕಾವ್ಯಗಳನ್ನೂ ಕೀರ್ತನಾ ಘೊಷಾ ಮತ್ತು ಭಕ್ತಿ ರತ್ನಾಕರ ಮುಂತಾದ ಗ್ರಂಥಗಳನ್ನು ರಚಿಸಿದನು.

ನೂರೊಂದು ವರ್ಷದ ಶಂಕರದೇವನು ಎರಡನೆಯ ಬಾರಿ ತೀರ್ಥಯಾತ್ರೆಗೆ ಹೊರಟನು. ಈ ಸಲ ಅವನ ಸಂಗಡ ೧೨೦ ಮಂದಿ ಶಿಷ್ಯರಿದ್ದರು. ಅವರು ಗಯಾ, ಕಾಶಿ, ಜಗನ್ನಾಥಪುರಿ ಮುಂತಾದ ಪುಣ್ಯ ಕ್ಷೇತ್ರಗಳಿಗೆ ಭೇಟಿಯಿಟ್ಟರು.  ಈ ತೀರ್ಥಯಾತ್ರೆಯ ಸಮಯದಲ್ಲಿ ಶಂಕರದೇವನಿಗೆ ಸಂತ ಕಬೀರನ ದರ್ಶನ ಪಡೆಯುವ ಇಚ್ಛೆಯಿತ್ತು. ಅದಕ್ಕಾಗಿ ಗಯೆಯಿಂದ ಪುರಿಗೆ ಹೋಗುವ ದಾರಿಯಲ್ಲಿ ಅವನು ಕಬೀರನ ಊರಿಗೆ ಹೋದನು. ಆದರೆ ಆಗ ಕಬೀರನು ಸ್ವರ್ಗ ಸೇರಿ ಬಹುಕಾಲವಾಗಿತ್ತು. ಹೀಗಾಗಿ ಕಬೀರನ ಮೊಮ್ಮಗಳನ್ನು ಕಂಡು ಸಮಾಧಾನ ಪಡಬೇಕಾಯಿತು.

ಅರಸನ ಪ್ರತಿಜ್ಞೆ ಶರಣಾಗತಿ :

ತೀರ್ಥಯಾತ್ರೆಯಿಂದ ಮರಳಿದ ಶಂಕರದೇವನು ಹೆಚ್ಚಿನ ಉತ್ಸಾಹದಿಂದ ಧರ್ಮಪ್ರಚಾರ ಮಾಡತೊಡಗಿದನು.ಅವನ ಶಿಷ್ಯರು ಬೇರೆ ಬೇರೆ ಸ್ಥಳಗಳಿಗೆ ಹೋಗಿ ಪ್ರಚಾರ ಆರಂಭಿಸಿದರು.  ಅವನ ಏಕಶರಣಧರ್ಮ ವೇಗದಿಂದ ಹಬ್ಬತೊಡಗಿತು.  ಇದರಿಂದ ವಿರೋಧಿಗಳ ವಿರೋಧ ಮತ್ತೊಮ್ಮೆ ತಲೆಯೆತ್ತಿತ್ತು.  ಅವನು ನರನಾರಾಯಣ ರಾಜನಿಗೆ ಅಲ್ಲ-ಸಲ್ಲದ ಕಟ್ಟು ಕಥೆಗಳನ್ನು ಹೇಳಿದನು. ಈ ಚಾಂಡಿ ಮಾತುಗಳಿಗೆ ಅರಸನು ಬಲಿ ಬಿದ್ದನು. “ಆ ಧರ್ಮಲಂಡ ಶಂಕರನನ್ನು ಕೊಂದು ಅವನ ಚರ್ಮ ಸುಲಿಯುವೆನು. ಮೂಳೆಗಳನ್ನು ಹೊರತೆಗೆಯುವನು. ಆ ಚರ್ಮದಿಂದ ಮದ್ದಳೆ ಮಾಡಿ ಮೂಳೆಗಳಿಂದ ಅದನ್ನು ಬಾರಿಸುವೆನು” ಎಂದು ಅರಸನ ಪ್ರತಿಜ್ಞೆ ಮಾಡಿ ಶಂಕರದೇವನನ್ನು ಸೆರೆಹಿಡಿದು ತರಲು ಸೈನಿಕರನ್ನು ಕಳಿಸಿದನು. ವಿರೋಧಿಗಳು ತಾವು ಗೆದ್ದೆವೆಂದು ಆನಂದಪಟ್ಟರು.

ಅರಸನ ಪ್ರತಿಜ್ಞೆಯ ಸುದ್ಧಿ ಶಂಕರದೇವನಿಗೆ ತಿಳಿಯಿತು. ಸೈನಿಕರು ಪಾಟಬಾವಸಿ ತಲುಪುವ ಮೊದಲೇ ಅವನು ಗುಪ್ತಸ್ಥಳಕ್ಕೆ ಪಾರಾದನು. ಆದರೆ ಅವನ ಶಿಷ್ಯರಾದ ಭವಾನಂದ ಮತ್ತು ಗೋಕುಲಚಂದಾರು ಸೆರೆಸಿಕ್ಕರು. ಶಂಕರದೇವನ ವಾಸ್ಥಳವನ್ನು ತಿಳಿಯಲು ಮತ್ತು ಅವನು ಜನರನ್ನು ಅಡ್ಡದಾರಿಗೆ ಒಯ್ಯುತ್ತಿದ್ದನೆಂದು ಹೇಳಿಸಲು ಅರಸನು ಅವರಿಗೆ ಚಿತ್ರಹಿಂಸೆ ಕೊಟ್ಟನು. ಆದರೆ ಅವರು ಅರಸನ ಇಚ್ಛೆ ಪೂರೈಸಲಿಲ್ಲ. ಆಗ ಅವನು ಇಬ್ಬರನ್ನೂ ಭೂತಾನದ ವ್ಯಾಪಾರಿಗಳಿಗೆ ಮಾರಿಬಿಟ್ಟರು. ಇವರ ಸೌಜನ್ಯ, ಸಾತ್ವಿಕ ತೇಜಸ್ಸು, ಧಾರ್ಮಿಕ ನಡತೆ ಮೊದಲಾದವುಗಳಿಂದ ಪ್ರಭಾವಿತರಾದ ವ್ಯಾಪಾರಿಗಳು ಇಬ್ಬರನ್ನೂ ಬಿಡುಗಡೆ ಮಾಡಿದರು.

ಇಷ್ಟಾದರೂ ನರನಾರಾಯಣನಿಗೆ ಸಮಾಧನವಾಗಲಿಲ್ಲ. ಶಂಕರದೇವನನ್ನು ಹೇಗಾದರೂ ಮಾಡಿ ಸೆರೆಹಿಡಿಯಬೇಕೆಂದು ಹೊಂಚು ಹಾಕತೊಡಗಿದನು. ಚಿಲಾರಾಯನಿಗೆ ಅಣ್ಣನ ಕುತಂತ್ರ ತಿಳಿಯಿತು. ಕೂಡಲೇ ಅವನು ಶಂಕರದೇವನನ್ನು ರಾಜಧನಿಯ ಸಮೀಪವೇ ಇದ್ದ ತನ್ನ ವಾಸ ಸ್ಥಳವಾದ ಫುಲಬಾರಿಗೆ ಕರೆದೊಯ್ದಯ ರಕ್ಷಿಸತೊಡಗಿದನು. ಶಂಕರದೇವನನ್ನು ತನ್ನ ಆಸ್ಥಾನಕ್ಕೆ ಹೇಗಾದರೂ ಬರಮಾಡಿಕೊಂಡು ಅವನ ವಿಚಾರಣೆಯನ್ನು ಮಾಡಬೇಕೆಂದು ನರನಾರಾಯಣನು ನಿಶ್ಚಯಿಸಿದನು. ಮತ್ತು ಶಂಕರದೇವನನ್ನು ಕಳಿಸಿಕೊಡಲು ತಮ್ಮನಿಗೆ ಆಜ್ಞಾಪಿಸಿದನು. ಗುರುಗಳ ಪ್ರಾಣಕ್ಕೆ ಯಾಔ ವಿಧದ ಅಪಾಯವೂ ಆಗಲಿಕ್ಕಿಲ್ಲವೆಂದು ಅಣ್ಣನಿಂದ ಆಶ್ವಾಸನೆ ಪಡೆದು ಚಿಲಾರಾಯನು ಗುರುಗಳನ್ನು ಕಳಿಸಿಕೊಟ್ಟನು.

ಆಗಲೇ ಈ ಪುಸ್ತಕದ ಪ್ರಾರಂಭದಲ್ಲಿ ವರ್ಣಿಸಿದ ಭೇಟಿ  ನಡೆದದ್ದು. ನರನಾರಾಯಣ ಶಂಕರದೇವನ ಹಿರಿಮೆಯನ್ನು ತಿಳಿದುಕೊಂಡು ತಲೆಬಾಗಿದ.

ನರನಾರಾಯಣನಿಗೆ ತಾನೂ ಶಂಕರದೇವನ ಶಿಷ್ಯನಾಗಬೇಕೆಂದು ಅನಿಸಿತು. ಆದರೆ ಅವನಲ್ಲಿ ಆ ಯೋಗ್ಯತೆ ಕಾಣದ ಶಂಕರದೇವನು ಶಿಷ್ಯತ್ವ ಅನುಗ್ರಹಿಸಲಿಲ್ಲ.

ಕೊನೆಗಾಲ :

ಈಗ ಶಂಕರದೇವನ ಕೊನೆಗಾಲ ಸಮೀಪಿಸಿತ್ತು. ಅಸ್ಸಾಂನ ಬೇರೆ ಬೇರೆ ಭಾಗಗಳಲ್ಲಿ ಸತ್ರಗಳು ಸ್ಥಾಪನೆಯಾಗಿ ಭಕ್ತಿಮಾರ್ಗದ ಪ್ರಚಾರ ಮಾಡುತ್ತಿದ್ದವು. ಚಿಲಾರಾಯನಂತೂ ಒಂದು ದಿನವೂ ಗುರುಗಳ ಸಹವಾಸ ಬಿಡದಷ್ಟು ನಿಷ್ಠಾವಂತನಾದ. ಫಲಬಾರಿಯ ಸಮೀಪವ ಭೆಲ್ಲಾ ಎಂಬಲ್ಲಿ ಗುರುಗಳಿಗಾಗಿ ಸತ್ರ ಕಟ್ಟಿಸಿದ.  ಚಿಲಾರಾಯನ ಅಗ್ರಹದ ಮೇರೆಗೆ ಶಂಕರದೇವನು ವೃಂದಾವನೀಯಾ ಕಾಪೋಡ (ವೃಂದಾವನೀ ವಸ್ತ್ರ) ನಿರ್ಮಿಸಿದ.  ಇದು ಶ್ರೀ ಕೃಷ್ಣನ ಬಾಲಲೀಲೆಗಳನ್ನು ಚಿತ್ರಿಸಿದ ೬೦ ಗಜ ಉದ್ಧದ ಬಟ್ಟೆ. ಇಂದಿಗೂ ಇದು ಆ ಪಂಥದ ಅನುಯಾಯಿಗಳಿಗೆ ಪವಿತ್ರವಾದ ವಸ್ತು.

ಏಕಶರಣಧರ್ಮವು ತನ್ನ ನಂತರ ಸಮರ್ಥವಾಗಿ ಮುಂದುವರೆಯಬೇಕೆಂದು ಶಂಕರದೇವನು ಮಾಧವದೇವನನ್ನು ತನ್ನ ಉತ್ತರಾಧಿಕಾರಿಯನ್ನಾಗಿ ನಿಯಮಿಸಿದನು. ಆ ಧರ್ಮ ವೇಗದಿಂದ ಹಬ್ಬತೊಡಗಿತು.

೧೪೯೦ನೇ ಶಕ (ಇಸವಿ ೧೫೬೯) ದ ಭಾದ್ರಪದ ಮಾಸದ ಒಂದು ಗುರುವಾರದ ಶುಭ ದಿನದಲ್ಲಿ ಮಹಾಪುರುಷ ಶಂಕರದೇವನ ಆತ್ಮ ವೈಕುಂಠಕ್ಕೆ ತೆರಳೀತು. ಆಗ ಶಂಕರದೇವನಿಗೆ ೧೨೦ ವರ್ಷ ವಯಸ್ಸು.

ಮಹಾಪುರುಷ ಶಂಕರದೇವನಿಗೆ ಇಡಿಯ ಅಸ್ಸಾಂ ಪ್ರಾಂತ ಭಕ್ತಿಯಿಂದ ನಮಿಸುತ್ತ ಬಂದಿದೆ.  ಆ ಪ್ರಾಂತಕ್ಕೆ ಹೋದರೆ ನಿಮಗೆ ಇಂದಿಗೂ ಈ ಭಜನೆ ಕೇಳಿಬರುತ್ತದೆ.

ಜಯ ಗುರು ಶಂಕರ ಸರ್ವಗುಣಾಕರ
ಯಾಕೇರಿ ನಾಹಿಕೇ ಉಪಾಮ |
ತೋಹಾರಿ ಚರಣಕು ರೇಣು ಶತಕೋಟಿ
ಬಾರೇಕ ಕರೋಹೋ ಪ್ರಣಾಮ ||

(ಗುರುಶಂಕರನಿಗೆ ಜಯವಾಗಲಿ; ಅವನು ಸಕಲ ಸದ್ಗುಗಳ ಸಮುದ್ರ. ಅವನ ಸಮಾನರು ಯಾರೂ ಇಲ್ಲ. ಅವನ ಚರಣ ದೂಳಿಗೆ ನಾವು ನೂರು ಕೋಟಿ ಬಾರಿ ನಮಿಸೋಣ)