ಜ್ಞಶಂ.ಬಾ.ಜೋಶಿಯವರು ೧೮೯೬ ರಲ್ಲಿ ಬೆಳಗಾವಿ ಜಿಲ್ಲೆಯ ಗುಲ್ಯ ಹೊಸೂರು ಎಂಬಲ್ಲಿ ಜನಿಸಿದರು. ಪೂರ್ಣ ಹೆಸರು ಶಂಕರ ಬಾಳೆ ದೀಕ್ಷಿತ ಜೋಶಿ. ಸಂಶೋಧನೆಯನ್ನು ಜೀವನದ ಉಸಿರನ್ನಾಗಿಯೂ, ಸತ್ಯದ ಆರಾಧನೆಯನ್ನಾಗಿಯೂ, ನಡೆಸುತ್ತಾ ಬಂದಿರುವ ಸತ್ಯಾನ್ವೇಷಕರು. ಅರವಿಂದರ ತತ್ವಜ್ಞಾನದಿಂದ ಪ್ರಭಾವಿತರಾದ ಶಂ.ಬಾ ಅವರು ಅರವಿಂದರ ಜೀವನವನ್ನು ಕುರಿತು ಮೊದಲು ಗ್ರಂಥ ರಚನೆ ಮಾಡಿದರು. ‘ಕನ್ನಡದ ನೆಲೆ, ಯಲ್ಲಿ ಕನ್ನಡಿಗರ ಮೂಲಿಗರು ಯಾರು ಕಂನುಡಿಯ ಉಗಮ ಬೆಳವಣಿಗೆ ಸಾರಕುರಿತು ಬರೆದರು.

ಕನ್ನಡ ನಾಡು ನುಡಿಯನ್ನು ಕುರಿತಾದ ವಿಷಯಕ್ಕೆ ವೇದೋಪನಿಷತ್ತು, ಪುರಾಣ ಸ್ಮೃತಿಗಳಿಂದ ಆಯ್ದು, ಜೋಡಿಸಿ, ಸ್ಥಳವ್ಯಾಸಂಗ, ಭೂಗರ್ಭಶಾಸ್ತ್ರಜ್ಞರ ಹೇಳಿಕೆ ಮುಂತಾದವುಗಳನ್ನು ಸೇರಿಸಿಕೊಂಡು, ಕರ್ನಾಟಕ ಸಂಸ್ಕೃತಿಯ ಪೂರ್ವಪೀಠಿಕೆಯನ್ನುಬರೆದರು. ಕಂನುಡಿಯಹುಟ್ಟು,೧೯೩೭ ಶಾಸ್ತ್ರೀಯ ವ್ಯಾಕರಣ ಹಿನ್ನೆಲೆಯಲ್ಲಿ ಭಾಷೆಯ ಬಗೆಗೆ, ಆಸಕ್ತಪೂರ್ಣವಾದ ಕಾಳಜಿಯನ್ನುಂಟುಮಾಡಿದೆ. ಭಾಷಾವಿಷಯಕ ಜ್ಞಾನ ಶಂ.ಬಾ. ಅವರಿಗೆ ಎಷ್ಟಿತ್ತು ಎಂಬುದನ್ನು ಇವು ತಿಳಿಸುತ್ತವೆ. ಭಾಷೆ ಸಂಸ್ಕೃತಿ, ಧರ್ಮ, ತತ್ವಜ್ಞಾನಗಳ ಬಗೆಗೆ ಮೌಲಿಕವಾದ ಅಧ್ಯಯನ ಮಾಡಿದ್ದುದರಿಂದ ‘ಹಾಲುಮತದರ್ಶನದಲ್ಲಿ ಶೈವ ಮತ್ತು ವೈಷ್ಣವ ಸಮಸ್ಯೆಗಳ ಮೂಲ ಬೇರನ್ನು ಕುರಿತು ವ್ಯಾಪಕವಾಗಿ ಚರ್ಚಿಸಿದರು. ‘ಋಗ್ವೇದ ಸಾರ, ನಾಗಪ್ರತಿಮಾ ವಿಚಾರ, ಪ್ರವಾಹ ಪತಿತರ ಕರ್ಮ ಹಿಂದೂಎಂಬ ಧರ್ಮ, ಮಾನವ ಧರ್ಮದ ಆಕೃತಿ, ಬುಧನ ಜಾತಕ, ಇವು ಶಂ.ಬಾ. ಅವರ ವಿಚಾರ ಸಂಶೋಧನೆಗಳಿಗೆ ಹೆಗ್ಗಂಬಗಳಾಗಿವೆ. ಋಗ್ವೇದಸಾರ, ನಾಗಪ್ರತಿಮಾವಿಚಾರ ಸಹಸ್ರ ಪುಟಗಳಿಗೂ ಮೀರಿರುವ ಬೃಹತ್ ಗ್ರಂಥ. ಮಹಾಭಾರತದಲ್ಲಿ ಆದಂತೆ ಋಗ್ವೇದದಲ್ಲೂ ಒಂದು ಅವಸ್ಥೆಯಲ್ಲಿ ಸಂಪೂರ್ಣ ಮೌಲ್ಯ ಪಲ್ಲಟವಾಯಿತೆಂದೂ ಅದರ ಮೂಲದ ಆಶಾವಾದ, ಪ್ರಕಾಶ ಸಂಪ್ರದಾಯದ ಸುತ್ತಲೂ ಜೀವನ ಹೇಯ ಸನ್ಯಾಸ ಮಾರ್ಗದ ಪದರುಗಳು ಕೂಡಿದವೆಂದೂ, ಭಾರತೀಯ ಸಂಸ್ಕೃತಿಗೆ ಮುಕ್ತಿಯಿಲ್ಲವೆಂದೂ ಈ ಗ್ರಂಥದಲ್ಲಿ ವಿವರಿಸಿದ್ದಾರೆ. ಜಾತವೇದಾಗ್ನಿಯನ್ನು ನಾಚಿಕೇತಾಗ್ನಿಯು ನುಂಗಿ ನೊಣೆಯುವುದರ ಕಥೆಯ ಹಿನ್ನೆಲೆಯಲ್ಲಿ ಅಡಗಿರುವ ಸ್ವಾರಸ್ಯವನ್ನು ತಮ್ಮ ನಾಗಪ್ರತಿಮಾ ವಿಚಾರ, ಪುಸ್ತಕದಲ್ಲಿ ವಿವರಿಸಿದರು.

ಶಂ.ಬಾ.ಅವರು ಮೂಲತಃ ವಿಚಾರವಾದಿಗಳು. ವಿಚಾರವೇ ಜೀವನದ ಬೆಳಕು ಎಂಬ ಪ್ರಜ್ಞೆಯನ್ನು ಹೊತ್ತುಕೊಂಡುಹೊರಟವರು ವಿ.ಸೀ ಅವರ ಅಪಾರವಾದ ಬುದ್ದಿಮತ್ತೆಯಿಂದ ತಮ್ಮ ಅಧ್ಯಯನವನ್ನು ಸ್ಪಷ್ಟವಾಗಿಸಿಕೊಂಡು ದೀಮಂತ ಸಂಶೋಧಕ, ಎಂದು ಶಂ.ಬಾ ರವರನ್ನು ಹೊಗಳಿದ್ದಾರೆ. ಶಿವರಾಮಕಾರಂತರು ನಾಡುನುಡಿಗಳ ಬಗೆಗೆ ಪ್ರಾಜ್ವಲ ಮನಸಿನಿಂದ ಜನಹಿತಕ್ಕಾಗಿ ತಮ್ಮ ಜೀವನವನ್ನೇ ಮುಡಿಪಿಟ್ಟ ಸತ್ಯಾನ್ವೇಷಕ. ಎಂದು ಹೇಳಿದ್ದಾರೆ. ಇವರ ಕರ್ನಾಟಕ ಸಂಸ್ಕೃತಿಯ ಪೂರ್ವ ಪೀಟಿಕೆ, ಗ್ರಂಥಕ್ಕೆ ೧೯೭೧ ರಲ್ಲಿ ಕೇಂದ್ರ ಸಾಹಿತ್ಯ ಅಕಾಡಮಿ ಬಹುಮಾನ ದೊರೆತಿದೆ. ೧೯೭೩ ರಲ್ಲಿ ಮೈಸೂರು ವಿಶ್ವವಿದ್ಯಾನಿಲಯ ಗೌರವ ಡಿ.ಲಿಟ್ ಪದವಿ ನೀಡಿದೆ.