A PRAYER FOR OLD AGE

GOD guard me from those thoughts men think
In the mind alone;
He that sings a lasting song
Thinks in a marrow-bone;

From all that makes a wise old man
That can be praised of all;
O what am I that I should not seem
For the song’s sake a fool?

I pray-for word is out
And prayer comes round again-
That I may seem, though I die old,
A foolish, passionate man.

(1935) 

ವೃದ್ಧಾಪ್ಯಕ್ಕೊಂದು ಪ್ರಾರ್ಥನೆ

ಜನರು ಬರಿ ಮಿದುಳಲ್ಲಿ ಬಗೆವ ವಿಚಾರಗಳಿಂದ
ನನ್ನ ಕಾಪಾಡು ದೇವ;
ಚಿರ ಬಾಳುವಂಥ ಹಾಡ ಹಾಡುವವ
ಮೂಳೆ ತಿರುಳಲ್ಲಿ ಬಗೆವ.

‘ಇವನೊಬ್ಬ ಸುಜ್ಞಾನಿ ವೃದ್ಧ’ ಎಂದೆಲ್ಲ ಜನ
ಪೊಗಳುವಂಥ ಎಲ್ಲದರಿಂದ ಪೊರೆ ದೇವರೆ;
ಅದೆಂಥವನು ನಾನು, ಹಾಡಿಗೋಸ್ಕರವಾಗಿ
ಫೂಲಾಗಲಾರದವನೆ?

ಪ್ರಾರ್ಥಿಸುವೆ: (ಈಚಿಗೀ ಶಬ್ದ
ತಿರುಗಿ ಚಾಲ್ತಿಗಿ ಬಂದಿದೆಯಾಗಿ)
ಮುದಿಯಾಗಿ ಸತ್ತರೂ ಕಡೆವರೆಗು ಕಾಣಲಿ ನಾನು
ಅನುರಕ್ತ ಮೂರ್ಖನಾಗಿ.