What Then?

HIS chosen comrades thought at school
He must grow a famous man;
He thought the same and lived by rule,
All his twenties crammed with toil;
‘What then?’ sang Plato’s ghost. ‘What then?’

Everything he wrote was read,
After certain years he won
Sufficient money for his need,
Friends that have been friends indeed;
‘What then?’ sang Plato’s ghost. ‘What then?’

All his happier dreams came true-
A small old house, wife, daughter, son,
Grounds where plum and cabbage grew,
poets and Wits about him drew;
‘What then.?’ Sang Plato’s ghost. ‘What then?’

‘The work is done,’ grown old he thought,
‘According to my boyish plan;
Let the fools rage, I swerved in naught,
Something to perfection brought’;
But louder Sang that ghost, ‘What then?’

(1939) 

ಮತ್ತೀನ್ನೇನು

ಸ್ಕೂಲಲ್ಲಿ ಇವನ ಖಾಸಾ ದೋಸ್ತರಿಗೆ ಗೊತ್ತಿತ್ತು:
ಇವನು ಖ್ಯಾತನಾಗಿಯೇ ತೀರುವ;
ಇವನೂ ಹಾಗೇ ತಿಳಿದ; ರೂಲು ತಪ್ಪದೆ ನಡೆದ;
ತನ್ನ ಎಳೆಹರೆಯವೆಲ್ಲ ತುರುಕುತ್ತ ಹೆಣಗಿದ:
‘ಮತ್ತೀನ್ನೇನು?’ ಪ್ಲೇಟೋ ಭೂತ ಹಾಡಿತು, ‘ಮತ್ತೀನ್ನೇನು?’

ಅವನು ಬರೆದದ್ದೆಲ್ಲವೂ ಓದಿಸಿಕೊಂಡಿತು.
ಕಾಲಾನುಕ್ರಮೇಣ ಸಾಕಷ್ಟು ಹಣವಾಗಿ
ಅವನ ಅಗತ್ಯಗಳ ಪೂರೈಕೆಯಾಯಿತು.
ಗೆಳೆಯರಾದರು, ಆಗ ಬೇಕಾದಂಥ ಗೆಳೆಯರು.

‘ಮತ್ತೀನ್ನೇನು?’ ಪ್ಲೇಟೋ ಭೂತ ಹಾಡಿತು, ‘ಮತ್ತೀನ್ನೇನು?’

ಅವನ ಅತಿಶಯದ ಸೌಖ್ಯದ ಕನಸುಗಳೆಲ್ಲ ನನಸಾದವು-
ಒಂದು ಪುಟ್ಟ ಪೂರ್ವಕಾಲದ ಮನೆ, ಹೆಂಡತಿ, ಮಗಳು, ಮಗ,
ಕೋಸು ಪ್ಲಮ್ಮುಗಳನ್ನು ಬೆಳೆಯುವಷ್ಟು ತೋಟ;
ಸುತ್ತಮುತ್ತ ಕವಿಗಳು, ಜಾಣರು.
‘ಮತ್ತೀನ್ನೇನು?’ ಪ್ಲೇಟೋ ಭೂತ ಹಾಡಿತು, ‘ಮತ್ತೀನ್ನೇನು?’
‘ಕೆಲಸ ಮುಗಿದಿದೆ’ ವಯೋವೃದ್ಧನಾದ ಮೇಲೆ ಅಂದುಕೊಂಡ,
‘ಬಾಲ್ಯದ ಯೋಜನೆಗಳೆಷ್ಟೋ ಫಲಿಸಿವೆ,ಲ
ಮೂರ್ಖರು ರೋಷಪಡಲಿ, ನಾನಂತು ಗುರಿಗೆಡಲಿಲ್ಲ
ಅಷ್ಟಿಷ್ಟು ಪರಿಪೂರ್ಣಗೊಳಿಸಿದೆ.’
ಇನ್ನಷ್ಟು ಜೋರಲ್ಲಿ ಆ ಭೂತ ಹಾಡಿತು, ‘ಮತ್ತೀನ್ನೇನು?’