POLITICS

‘In out time the destiny of man presents
its meaning in political terms.’
-Thomas Mann

HOW can I, that girl standing there,
My attention fix
On Roman or on Russian
Or on Spanish politics?
Yet here’s a travelled man that knows
What he talks about,
And there’s a politician
That has read and thought,
And maybe what they say is true
Of war and war’s alarms,
But O that I were young again
And held her in my arms!

(1939) 

ರಾಜಕೀಯ

ನಮ್ಮ ಕಾಲದಲ್ಲಿ ಮಾನವನ ಅದೃಷ್ಟ ತನ್ನ
ಅರ್ಥವನ್ನು ರಾಜಕೀಯವಾಗಿ ವ್ಯಕ್ತ ಪಡಿಸುತ್ತದೆ.’
ಥಾಮಸ್‌ ಮನ್‌

ಅಲ್ಲಿ ನಿಂತಿರುವ ಹುಡುಗಿಯಲ್ಲಿ ನೆಟ್ಟ ಕಣ್ಣ
ನಾನೆಂತು ಕೀಳಲಯ್ಯ?
ರೋಮಿನದೊ, ರಷ್ಯದ್ದೊ, ಸ್ಪೇನಿನದೊ-ನಿಜ
ಬಹುಮುಖ್ಯ ರಾಜಕೀಯ.

ಆದರಿವನು ಬಹೂದಕ
ತಾನಾಡುವುದ ತಿಳಿದವನು.
ಅವನಂತೂ ಮುತ್ಸದ್ದಿಯೆ
ಘನವಿಚಾರದ ಪಂಡಿತನು.

ಯುದ್ಧದ ಭೀಕರ ಬೆದರಿಕೆ ಕುರಿತು
ಅವರೆಂಬುದು ನಿಜವಿರಬಹುದು;
ಆದರೆ ಓಹ್‌, ನಾನು ಮರಳಿ ಯುವಕನಾಗುವೆನೆ,
ಅವಳನು ತೋಳಲಿ ತಬ್ಬುವೆನೆ!