O DO NOT LOVE TOO LONG

SWEETHEART, do not love too long:
I loved long and long,
And grew to be out of fashion
Like an old song.

All through the years of our youth
Neither could have known
Their own thought from the other’s.
We were so much at one.

But O, in a minute she changed –
O don not love too long,
Or your will grow out of fashion
Like an old song.

(1905) 

ಬಹುಕಾಲಪ್ರೀತಿಸಬೇಡ

ಮುದ್ದೇ, ಬಹುಕಾಲ ಪ್ರೇಮಿಸುತ್ತಲೇ ಇರಬೇಡ
ನಾನೂ ಪ್ರೀತಿಸಿದ್ದೆ ಬಹು ಬಹುಕಾಲ,
ಹೊರಟು ಹೋದೆ ಹಾಗಾಗಿ ನಾನು ಫ್ಯಾಶನ್ನಿಂದಲೆ
ಹಳೆಯ ಹಾಡಿನಂತೆ.

ನಮ್ಮ ಯೌವನದ ಅಷ್ಟೂ ವರ್ಷಗಳು            ೫
ಅರಿಯದಾಯ್ತು ಉಭಯ;
ಇದು ನನ್ನ ಯೋಚನೆಯೊ, ಅಥವಾ ಅವಳದೊ?
ಅಷ್ಟು ನಮ್ಮ ಅನ್ಯ ಓ ನ್ಯ.

ಆದರೆ ಓ ಅವಳು ಒಂದು ಕ್ಷಣದಲ್ಲೆ ಬದಲಾದಳು,
ಪ್ರೇಮಿಸದಿರು ಬಹುಕಾಲ;
ಹೋದೀಯೆ ನೀನು ಸಹ ಫ್ಯಾಶನ್ನಿಂದಲೆ        ೧೦
ಹಳೆಯ ಹಾಡಿನಂತೆ.