EASTER, 1916

I HAVE met them at close of day
Coming with vivid faces
From counter or desk among grey
Eighteenth-century houses.
I have passed with a nod of the head
Or polite meaningless words,
Or have lingered awhile and said
Polite meaningless words,
And thought before I had done
Of a mocking tale or a gibe
To please a companion
Around the fire at the club,
Being certain that they and I
But  lived where motley is worn:
All changed, changed utterly:
A terrible beauty is born.
That woman’s days were spent
In ignorant good-will,
Her nights in argument
Until her voice grew shrill.
What voice more sweet than hers
When, young and beautiful,
She rode to harriers?
This man had kept a school

And rode our winged horse;
This other his helper and friend
Was coming into his force;
He might have won fame in the end,
So sensitive his nature seemed,
So daring and sweet his thought.
This other man I had dreamed
A drunken, vainglorious lout.
He had done most bitter wrong
To some who are near my heart,
Yet I number him in the song;
He, too, has resigned his part
In the casual comedy;
He, too, has been changed in his turn,
Transformed utterly:
A terrible beauty is born.

Hearts with one purpose alone
Through summer and winter seem
Enchanted to a stone
To trouble the living stream.
The horse that comes from the road.
The rider, the birds that range
From cloud to tumbling cloud,
Minute by minute they change;
A shadow of cloud on the stream
Changes minute by minute;

A horse-hoof slides on the brim,
And a horse plashes within it;
The long-legged moor-hens dive,
And hens to moor-cocks call;
Minute by minute they live:
The stone’s in the midst of all.

Too long a sacrifice
Can make a stone of the heart.
O when may it suffice?
That is Heaven’s part, our part
To murmur name upon name,
As a mother names her child
When sleep at last has come
On limbs that had run wild.
What is it but nightfall?
No, no, not night but death;
Was it needless death after all?
For England may keep faith
For all that is done and said.
We know their dream; enough
To know they dreamed and are dead;
And what if excess of love
Bewildered them till they died?
I write it out in a verse-
MacDonagh and MacBride
And Connolly and Pears

Now and in time to be.
Wherever green is worn.
Are changed, changed utterly”
A terrible beauty is born.

(Sept 25, 1916)

ಈಸ್ಟರ್೧೯೧೬

ಸಂಜೆ ಅವರ ಕಂಡದ್ದಿದೆ:
ಬ್ಯಾಂಕಿಂದಲೊ, ಶಾಪಿಂದಲೊ
೧೮ನೇ ಶತಮಾನದ
ಬೂದು ಬಣ್ಣದ ಮನೆಗಳಿಂದ
ಕೆಲಸ ಮಲುಗಿಸಿ ಬರುವವರ           ೫
ಸ್ಫುಟ ಮುಖದವರ.
ಅವರು ದಾಟಿ ನಡೆಯುವಾಗ, ಬರಿ
ತಲೆಯಾಡಿಸಿ ನುಡಿದದ್ದು:
ಅರ್ಥಹೀನ ಕುಶಲಮಾತು.
ಕೂಂಚ ನಿಂತು ನುಡಿದದ್ದೂ:
ಅರ್ಥಹೀನ ಕುಶಲಮಾತು.
ಕ್ಲಬ್ಬಿನ ಅಗ್ಗಿಷ್ಟಿಕೆ ಎದುರು
ಜೊತೆಗಾರನೆ ಖುಷಿಯಾಗುವ         ೧೦
ಲೇವಡಿಯೋ, ಚುಟಕವೋ
ಇಷ್ಟರಲ್ಲೆ ರಮಿಸುತ್ತಿದ್ದ
ನಾ ತಿಳಿದಿದ್ದೆ: ಇದು ನಿಶ್ಚಯ
ನನ್ನಂತೇ ಅವರು ಕೂಡ
ಕೋಡಂಗಿಯ ನಾಡವರು.
ಈಗೆಲ್ಲವು ಬದಲಾಗಿದೆ, ಪೂರಾಪೂರಾ ಬದಲಾಗಿದೆ
ರುದ್ರ ಚೆಲುವು ಹುಟ್ಟಿದೆ.    ೨೦

ಆ ಹೆಣ್ಣಿನ ಹಗಲುಗಳೊ
ಸೌಜನ್ಯದ ಭ್ರಮೆಗಳು.
ಇನ್ನವಳ ರಾತ್ರೆಗಳೊ, ವಾದದಲ್ಲಿ
ಧ್ವನಿ ಕೀರಲು ತಿರುಗುವನಕ
ಕಳೆದವು. ಯಾವ ಧ್ವನಿಯಿತ್ತು ಹೇಳು ೨೫
ಇವಳದಕ್ಕಿಂತ ಮೃದು
ಯವ್ವನದಲ್ಲಿ?
ಈ ಮನುಷ್ಯ ಸ್ಕೂಲಿಟ್ಟವ.ನಮ್ಮಂತೇ,
ರೆಕ್ಕೆ ಕುದುರೆ ಏರಿದ್ದವ.
ಇನ್ನಿವನು ಅವಗೆ ಬೇಕಾದವ. ಜೊತೆಯವ
ಎಂಥ ಆಸೆ ಮೊಳೆಯಿಸಿದ್ದ
ಅಷ್ಟು ಸೂಕ್ಷ್ಮ ಅವನ ಗುಣ,
ಅಷ್ಟು ದಿಟ್ಟ, ಅಷ್ಟು ಮಧುರ ಅವನ ಭಾವ.
ಆ ಇನ್ನೊಬ್ಬನು-ನಾ ಎಣಿಸಿದ್ದೆ-
ಬರಿ ಕೊಬ್ಬಿದ ಕುಡುಕ ಲಫಂಗ
ನನ್ನ ಹೃದಯಕ್ಕೆ ಹತ್ತಿರದವರಿಗೆ
ಪರಮ ಪೀಡೆಯಾದವ.
ಅದರೇನು, ಈ ಹಾಡಿನಲ್ಲಿ ಅವನು ಕೂಡ ಗಣ್ಯನು.
ಈ ಲಘು ಕಾಮಿಡಿಯಲ್ಲಿ
ತನ್ನ ಪಾತ್ರ ಕಳಚಿದ. ಬಂದದ್ದೇ ಅವನ ಸರದಿ
ಪರಿವರ್ತಿತನಾದ.
ಪೂರಾ ಪೂರಾ ಬದಲಾಗಿದೆ:
ರುದ್ರ ಚೆಲುವು ಹುಟ್ಟಿದೆ.
ಏಕೋದ್ದೇಶಕೆ ಬದ್ಧ ಹೃದಯಗಳು
ಬೇಸಗೆಯಿಡಿ, ಚಳಿಗಾಲವಿಡೀ
ಮಂತ್ರ ಮುಗ್ಧ ಶಿಲೆಯಾಗುವುವು.
ಹರಿಯುವ ತೊರೆಯನು ಕಾಡುವುವು.
ರಸ್ತೆಯಿಂದ ಬಂದಿರುವೀ ಕುದುರೆ,
ಅದರ ಸವಾರ, ಮೇಘ ಮೇಘಕ್ಕೂ
ಹಾಯುವ ಹಕ್ಕಿ,

ಘಳಿಗೆ ಘಳಿಗೆ ಬದಲಾಗುವುವು;
ತೊರೆಯ ಮೇಲೆ ಬಿದ್ದೀ ಮೋಡದ ನೆರಳು
ಘಳಿಗೆ ಘಳಿಗೆ ಬದಲಾಗುವುದು;
ಅಂಚಲಿ ಈ ಕುದುರೆ ಗೊರಸು ಜಾರಿತು,
ಅಲ್ಲ ಆ ಕುದುರೆ ಬಿದ್ದಾಡುವುದು;
ಉದ್ದ ಕಾಲಿನ ಬಕ, ಇಕೊ, ಧುಮುಕಿದೆ,
ಕಾಡುಹುಂಜ ಕೋಳಿಯ ಕರೆದಿದೆ;
ಘಳಿಗೆ ಘಳಿಗೆ ಅವು ಬದುಕುವುವು!
ಇದ್ದೇ ಬಿಡುವುದು ಮಧ್ಯೆ ಶಿಲೆ.

ಹೃದಯ ಸಹ ಕಲ್ಲಾಗಬಹುದು
ಅತಿ ದೀರ್ಘ ತ್ಯಾಗದಿಂದ.
ಓ ಎಂದದು ತೀರೀತು ದೇವರೆ;
ನಿನಗದು ಸೇರಿದ್ದು; ನಮ್ಮ ಪಾಲಿಗಿದು!
ಹೆಸರು ಹೆಸರೆತ್ತಿ ಮರ್ಮರಿಸುವುದು.
ತಾಯಿ ಕರೆಯುವಂತೆ ಮಗುವಿನ ಹೆಸರ
ಓಡಿಯಾಡಿ ಬತ್ತಿದ ಕಾಲಿಗೆ
ಕೊನೆಗೂ ನಿದ್ದೆ ಹತ್ತಿ….
ಏನಿದು ಬರಿ ರಾತ್ರೆಯಲ್ಲವೆ?
ಅಲ್ಲ ಅಲ್ಲ, ಇದು ರಾತ್ರೆಯಲ್ಲ-ಸಾವು;
ಕೊಟ್ಟ ವಚನ ಪಾಲಿಸಬಹುದಾದರೆ ಆಂಗ್ಲರು
ಇದು ವ್ಯರ್ಥ ವ್ಯರ್ಥ ಸಾವೆ?
ನಮಗವರ ಕನಸು ಗೊತ್ತು; ಸಾಕಷ್ಟೇ
ಅವರು ಕನಸಿದರು, ಸತ್ತರು
ಎಂಬ ತಿಳಿವು;
ಅತಿ ಪ್ರೀತಿಯಿಂದವರು ಭ್ರಮಿಸುತ್ತಲೆ ಸತ್ತಿದ್ದರೆ?
ನಾನು ಈ ಪದ್ಯದಲ್ಲಿ ಬರೆದಿಡುವೆನು:

ಮ್ಯಾಕ್‌ಡೊನಾಗನೂ ಮ್ಯಾಕ್‌ಬ್ರೈಡನೂ
ಕಾನೊಲಿಯೂ ಪರ್ಸನೂ
ಈಗಲೂ ಮುಂದೆಂದೂ
ಎಲ್ಲೆಲ್ಲಿ ಹಸಿರುಟ್ಟಿರುವುದೊ
ಬದಲಾಗಿದ್ದಾರೆ. ಪೂರಾ ಬದಲಾಗಿದ್ದಾರೆ
ರುದ್ರ ಚೆಲುವು ಹುಟ್ಟಿದೆ.