SAILING TO BYZANTIUM

I

THAT is no country for old men. The young
In one another’s arms, birds in the trees
-Those dying generations- at their song.
The salmon-falls, the mackerel-crowded seas,
Fish, flesh, or fowl, commend all summer long
Whatever is begotten, born, and dies.
Caught in that sensual music all neglect
Monuments of unageing intellect.

II

An aged man is but a paltry thing.
A tattered coat upon a stick,  unless
Soul clap its hands and sing, and louder sing
For every tatter in its mortal dress ,
Nor is there singing school but studying
Monuments of its own magnificence;
And therefore I have sailed the seas and come
To the holy city of Byzantium.

III

O sages standing in God’s holy fire
As in the gold mosaic of a wall,
Come from the holy fire, perne in a gyre,
And be the singing-masters of my soul.

Consume my heart away; sick with desire
And fastened to a dying animal
It knows not what it is; and gather me
Into the artifice of eternity.

IV

Once out Of nature I shall never take
My bodily form from any natural thing,
But such form as Grecian goldsmiths make
Of hammered gold and gold enamelling
To keep a drowsy Emperor awake;
Or set upon a golden bough to sing
To lords and ladies of Byzantium
Of what is past, or passing, or to come.

(1926)

ಬೈಜಾಂಟಿಯಂಗೆ ಯಾನ

ಅದು ಮುದುಕರಿಗೆ ತಕ್ಕ ನಾಡಲ್ಲ. ತೋಳ ಸೆರೆಯಲ್ಲಿ
ಯುವಜನರು, ಮರಮರದಲ್ಲು ಹಕ್ಕಿಗಳು
-ಎಲ್ಲ ಸಾವಕೊಂಬ ಸಂತಾನಗಳೆ-ತಂತಮ್ಮ ಹಾಡುಗಳಲ್ಲಿ
ಸಾಲ್ಮನ್‌ ಪಾತಗಳು, ಮ್ಯಕರೆಲ್‌ ಗಿಜಿಗುಟ್ಟುವ ಸಮುದ್ರಗಳು
ಭೂ, ಜಲ, ಆಕಾಶ ಜಂತುಗಳು ಇಡೀ ಗ್ರೀಷ್ಮ ಸ್ತುತಿಸುವುದು ಮುದದಲ್ಲಿ
ಪಡುವುದನ್ನು, ಹುಟ್ಟುವುದನ್ನು, ಸಾಯುವುದನ್ನು,
ಕರಣಗಳ ಗಾಯನದಲ್ಲಿ ಸಿಕ್ಕಿಬಿದ್ದ ಇವು ಉಪೇಕ್ಷಿಸುತ್ತವೆ
ಮುಪ್ಪಿರದ, ಜ್ಞಾನ ಸಂಜತ ಚಿರಸ್ಮಾರಕಗಳನ್ನು.

ಮುದಿಯಾದವನು ಯಾವ ಕಃಪದಾರ್ಥ?
ಕಾಷ್ಠಕ್ಕೆ ಜೋತ, ಹರಿದ ಕೋಟಿನ ಬೆದರು ಬೊಂಬೆ.
ಅನ್ಯಥಾ ದಿಕ್ಕಿಲ್ಲ-ಈ ಮರ್ತ್ಯ ದಿರುಸಿನ ಜರ್ಜರಿತ ಸುಕ್ಕು ಸುಕ್ಕಿಗೂ
ಚಪ್ಪಾಳೆಯಿಕ್ಕಿ ಆತ್ಮ ಏರುಏರುತ್ತ ಹಾಡದ ಹೊರತು
ತಾರಕದಲ್ಲಿ. ಹಾಡು ಕಲಿಸುವ ಶಾಲೆ ಸಹ ಇಲ್ಲಿಲ್ಲ:
ತಮ್ಮ ವೈಭವದ ಸ್ವಾಧ್ಯಾಯ ನಿರತ ಸ್ಮಾರಕ-ಇವು,
ಎಂದೇ ನಾ ಬಂದೆ-ಇಕೊ, ಸಮುದ್ರಗಳ ದಾಟಿ
ಇಲ್ಲಿಗೆ. ಬೈಜಾಂಟಿಯಮ್ಮಿನ ಪವಿತ್ರ ಪಟ್ಟಣಕ್ಕೆ.

ದೇವರ ಅಗ್ನಿಯಲ್ಲಿ ನಿಂತಿರುವ ಓ ಋಷಿಗಳೇ
ಬಂಗಾರದ ಶಬಳ ಭಿತ್ತಿ ಚಿತ್ರದಲ್ಲಿರುವವರಂತೆ-
ಪವಿತ್ರಾಗ್ನಿಯಿಂದ ಹೊರಬನ್ನಿ. ಸುತ್ತುತ್ತ ಭ್ರಮಕದಲ್ಲಿ
ನನ್ನ ಆತ್ಮದ ಗಾಯನದ ಗುರುಗಳಾಗಿ.
ನನ್ನ ಹೃದಯ ಹೀರಿಬಿಡಿ; ಮೋಹ ಪೀಡಿತವಾಗಿ, ರೋಸಿ,
ಸಾಯುವ ಪಶುವಿಗಂಟಿ ತನ್ನ ನಿಜವೇನು ತಿಳಿಯದದು.
ಮತ್ತು ಆಯಿರಿ ನನ್ನ ಶಾಶ್ವತದ ಕುಶಲ ಶಿಲ್ಪದಲಿ.

ಪ್ರಕೃತಿಯಿಂದ ಒಮ್ಮೆ ಪಾರಾದವನೆ, ಒಲ್ಲೆ, ಮುಂದೆಂದೂ
ನಿಸರ್ಗದತ್ತ ತನುರೂಪ; ಬದಲಾಗಿ
ಗ್ರೀಸಿನ ವಿಶ್ವಕರ್ಮಿಗಳು ಸೃಷ್ಟಿಸುವ
ಬಡಿದ ಹೊನ್ನಿನ ಮತ್ತು ಹೊನ್ನಲೇಪದ ರೂಪ
ಎಚ್ಚರಿಡಲೆಂದು ಕುಗುರುವ ಸಮ್ರಾಟನನ್ನು;
ಅಥವಾ ಹಾಡಲೆಂದು ಕೂತು ಸ್ವರ್ಣಶಾಖೆಯ ಮೇಲೆ
ಬೈಜಾಂಟಿಯಮ್ಮಿನ ಒಡೆಯ ಒಡತಿಯರಿಗೆ:
ಹಿಂದನ್ನು, ಇಂದನ್ನಲು, ಅಥವಾ ಮುಂದಿನದನ್ನು.