ಒಬ್ಬಾನೊಬ್ಬ
ಊಟದ ನಡುವೆ ಎದ್ದ
ಹೊರಬಂದ, ಹಿಂದೆ ನೋಡದೆ ನಡೆದ,
ನಡದೆ ನಡದ ಹುಡುಕುತ್ತ ಪೂರ್ವಾಭಿಮುಖನಾಗಿ
ತನ್ನ ದೈವದ ಗುಡಿಯ

ಅವನ ಮಕ್ಕಳು ಇದು ಅಪ್ಪನ ಕೊನೆಯೆಂಬಂತೆ ಪ್ರಾರ್ಥಿಸಿದರು.

ಇನ್ನೊಬ್ಬ
ಅವನ ಪಾತ್ರೆ ಪಗಡ ಸವುಟು ಲೋಟ ಗಾಜು
ಇವುಗಳ ನಡುವೆ ಎಷ್ಟು ಗೃಹಸ್ಥನಾಗಿಬಿಟ್ಟನೆಂದರೆ
ಅವನ ಮಕ್ಕಳು ದೂರ ದೂರ ಹುಡುಕುತ್ತ ಹೋಗಿಬಿಟ್ಟರು
ಅಪ್ಪ ಮರೆತುಬಿಟ್ಟ ಅದೇ ಗುಡಿಯ.

೨೦೦೯