ಹೊರಗಿನ ಮೂರ್ತ ವಸ್ತು
ಒಳಗಿನ ಅಮೂರ್ತ ಸ್ಪಂದನ
ಇವು
ಅದ್ವೈತಗೊಳ್ಳಲು
ಮತ್ತು / ಅಥವಾ
ಕಾವ್ಯದ ವಿಭಾವ ತನ್ನಷ್ಟಕ್ಕೆ ತನ್ನಲ್ಲೇ ಬೆಳಗುತ್ತಲೇ ಇದ್ದು
ತಾನಲ್ಲದ ಇನ್ನೊಂದನ್ನು ಧ್ವನಿಸುವ ವಿಸ್ಮಯವನ್ನು
ಜೀವನದುದ್ದಕ್ಕೂ ಹುಡುಕಿದ ರಿಲ್ಕೆಯನ್ನು ಅರಿಯಲೆಂದು
ನಾರಾಯಣ ಗುರು, ಗಾಂಧೀಜಿ, ಪರಮಹಂಸ, ಚಾಂಡಾಲ / ಶಿವ
ಇವು
ನನ್ನ ಮುನ್ನುಡಿಯಾಗುವ
ದೃಷ್ಟಾಂತ ಕಥನಗಳು