ಅದಾವ ತಹತಹದ ಓ ಏಕವೇ, ನಾನಿದೀನಿ
ಕೇಳದೇ ನಿನಗೆ
ತೀಟೆ ತೆವಲುಗಳ ನರಜೀವದಿಂದಲೇ ಉಮ್ಮಳಿಸಿ ಎದ್ದ
ನನ್ನದೂ ಒಂದು ಮೊರೆ?

ಅದರ ಧಾವಂತಕ್ಕೆ ಹೊಮ್ಮಿದ ಧವಳ ರೆಕ್ಕೆಪುಕ್ಕಗಳೇ
ನಿನ್ನ ಮುಖದ ಸುತ್ತ ಸತತ ಸುತ್ತುತ್ತಿವೆ.
ಕಾಣಲಾರೆಯ ಮೌನತೊಟ್ಟ ನನ್ನ ಆತ್ಮ
ಏಕಾಕಿ ನಿನ್ನಿದುರು ಕಾಣುವಂತೆ ನಿಂತಿರುವುದನ್ನು?
ಫಲ ಮಾಗುವಂತೆಯೇ ಮರದಲ್ಲಿ, ಕಾಣಲಾರೆಯ,
ನಿನ್ನ ಕಾಣ್ಕೆಯಲ್ಲಿ ನನ್ನ ಪ್ರಾರ್ಥನೆ ಮಾಗುವುದನ್ನು?

ಕನಸಿಗನಾದರೆ ನೀನು, ನಾನೇ ನಿನ್ನ ಕನಸು
ಎಚ್ಚರಾದೆಯೊ? ನಾನೇ ನಿನ್ನ ಇಂಗಿತ
ಉಜ್ವಲ ಶೋಭೆಯಲ್ಲಿ ದೃಢವಾಗಿ
ಕಾಲವೆಂಬ ದೂರದ ವಿಲಕ್ಷಣ ಪೇಟೆಯಲ್ಲಿ
ಅಪಾರ ಮೌನದ ನಕ್ಷತ್ರವಾಗುವೆ ನಾನು

(ದೈವಕ್ಕೆ ಮನುಷ್ಯಮಾತ್ರ ಹಂಬಲಿಸುವುದಲ್ಲ ದೈವವೂ ಜೀವಜಾಲದ ವೈಭವಕ್ಕೆ ಹಾತೊರೆಯುತ್ತದೆ ಎಂಬುದು ಕವಿಯ ಉದ್ದೇಶವಿರಬಹುದೆಂದು ಊಹಿಸಿ ಮಾಡಿದ, (ಇಂಗ್ಲಿಷಿನಲ್ಲಿ I am, 0 Anxious One. Don’t you hear my voice) (Berlin Schmargendorf, September 24, 1899 ಎಂದು ಶುರುವಾಗುವ ಸಾಲಿನ ಪದ್ಯದ) ಅನುವಾದ ಇದು. ಮಿಚೆಲ್‌ ಮಾಡಿದ ಮೊದಲ ಸಾಲಿನ ಅನುವಾದ ಇಂಗ್ಲಿಷಿನಲ್ಲಿ ವಿಲಕ್ಷಣವಾಗಿದೆ. ಸಾಲಿನಲ್ಲಿರುವ ಕ್ಯಾಪಿಟಲ್‌ ಅಕ್ಷರಗಳನ್ನು ಗಮನಿಸಿ: `I am, O Anxious One. Don’t you hear my voice `One ಎಂದರೆ ಮಿಚೆಲ್‌ಗೆ ಇಂಗ್ಲಿಷಿನಲ್ಲಿ ಹೇಳಲಾರದ ನಮ್ಮ ಏಕ(‘ಏಕಂ ಸತ್‌’ನ ಏಕ) ಇರಬಹುದು. ಏಕಜೀವಜಾಲದ ಅನೇಕಕ್ಕಾಗಿ ತಹತಹಿಸುತ್ತ ಇರಬಹುದು. ರಿಲ್ಕೆಯೇ ಈ ದೇವರ ಕಲ್ಪನೆ ಬಗ್ಗೆ ಬರೆದ ಮಾತುಗಳು ಇಲ್ಲಿವೆ: ಈ ಪದ್ಯವೂ From the Book of Hours ನಿಂದ ಆರಿಸಿದ್ದು.

FROM THE BOOK OF HOURS (1905)

I began with Things, which were the true confidants of my lonely childhood, and it was already a great achievement that, without any outside help,  I managed to get as far as animals. But then Russia opened itself to me and granted me the brotherliness and the darkness of God, in whom alone there is community. That was what I named him then, the God who had broken in upon me, and for a long time I lived in the antechamber of his name, on my knees. Now, you would hardly ever hear me name him; there is an indescribable discretion between us, and where nearness and penetration once were, new distances stretch forth, as in the atom, which the new science conceives of a a universe in miniature. The comprehensible slips away, is transformed; instead of possession one learns relationship [sfatt des Besitzes lernt man den Bezug], and there arises a namelessness that must begin once more in our relations with God if we are to be complete and without evasion. The experience of feeling him recedes behind an infinite delight in everything that can be felt; all attributes are taken away from God, who is no longer sayable, and fall back into creation, into love and death. It is perhaps only this that again and again took place in certain passages in the Book of Hours, this ascent of God out of the breathing heart-so that the sky was covered with him-, and his falling to earth as rain. But saying ever that is already too much.

(To Ilse Jahr, February 22, 5923)

[I find you, Lord, in all Things and in all] (Berlin-Schmargendorf, September 24, 1899)

ಇದೇ ಸಂಕಲನದ ಮೇಲಿನ ಪದ್ಯವನ್ನು ‘ಈ ನಿಮ್ಮ ವಿನಯ’ ಎಂಬ ರಿಲ್ಕನದಾಗಿಯೂ ನನ್ನದಾಗಿಯೂ ಕಾಣುವ ಪದ್ಯವಾಗಿ ಮಾಡಿಕೊಂಡಿದ್ದೇನೆ