ಎಷ್ಟೇ
ಪ್ರಣಯದ ಉಬ್ಬು ತಗ್ಗು ಕೊರಕಲಿನ ನಕಾಶೆಯ ಅರಿವಿದ್ದೂ,,
ಚರ್ಚಿನಂಗಳದಲ್ಲಿ ಮಣ್ಣಾದವರ ಮಾಸಿದ ಹೆಸರು ಸೂಚಿಸುವ
ವ್ಯಾಕುಲದಲ್ಲೂ,
ಬಿಕೋ ಎನ್ನುವ ಪಾತಾಳದಲ್ಲಿ
ಹೇಳಹೆಸರಿಲ್ಲದಂತೆ
ಕಳೆದೇ ಹೋಗುವ ವ್ಯಸನಿಗಳ ವೈಫಲ್ಯದ ದಿಗಿಲು ಗೊತ್ತಿದ್ದ ಊ,
ಮತ್ತೆ ಮತ್ತೆ ಕೈ ಕೈ ಹಿಡಿದು ನಡೆದಿದ್ದೇವೆ
ಪುರಾತನ ಮರಗಳಕೆಳಗೆ

ಮತ್ತೆ ಮತ್ತೆ ಮಲಗಿದ್ದೇವೆ
ಚೆಲ್ಲಿದ ಹೂವುಗಳ ಮೇಲೆ ಅನುರಕ್ತಿಯಲ್ಲಿ
ಮುಖಾಮುಖಿ
ಆಕಾಶಕ್ಕೆ

೨೦೦೯