ಎಲ್ಲ ಕೇಂದ್ರಗಳ ಕೇಂದ್ರವೆ, ಎಲ್ಲ ತಿರುಳಿನ ತಿರುಳೆ
ತನ್ನ ಕವಚದಲ್ಲೆ ಪೂರ್ಣ ಸ್ವಾದಗೊಂಡ ಬಾದಾಮಿಯೇ
ಈ ಇಡೀ ವಿಶ್ವ, ಅನಂತ ಅವಕಾಶಗಳಲ್ಲಿ ಹುಟ್ಟಿ ಸಾಯುತ್ತಿರುವ ತಾರೆಗಳು
ಎಲ್ಲವುಗಳಾಚೆ ನಿನ್ನ ಈ ರಕ್ತ ಮಾಂಸದ ಕಾಯ, ತನ್ನಲ್ಲೆ ಮಾಗಿದ ಹಣ್ಣು

ಏನು  ಅಂಟದು ನಿನಗೆ, ನಿನ್ನ ಕೋಶವೇ ಅನಂತ ಆಕಾಶ
ಪ್ರಾಣರಸ ಚಿಮ್ಮುವುದು ಅಲ್ಲಿ
ನಿನ್ನ ಅಪಾರ ಶಾಂತಿಯ
ಸ್ವಯಂ ಪ್ರತಿಭೆಯ ಕಾಂತಿಯಲ್ಲಿ.

ಅಹೋರಾತ್ರಿ ಕೋಟಿ ಕೋಟಿ ನಕ್ಷತ್ರಗಳು ಗಿರುಕಿ ಹೊಡೆಯುತ್ತ
ಸುತ್ತುತ್ತವೆ
ನಿನ್ನ ಶಿರಸ್ಸಿನ ಮೇಲೆ
ಅಸಂಖ್ಯ ಜ್ವಾಲೆಗಳ ಆರತಿಯಂತೆ

ಇವು ಆರಿದ ಮೇಲೂ ನೀನು ಆಗುತ್ತಲೇ ಇರುವಿ
ನಿನ್ನಲ್ಲೆ ಮುದ್ದಾಮಾಗಿ
ತಥಾಗತ

 

A Note by Rilike

Soon after supper I retire and in my little house by 8.30 at the latest. Then I have in front of me the vast blossming starry night, and below, in front of the windows, the gravel walk goes up a little hill on which in fanatic taciturnity a statue of the Buddha rests, distributing, with silent discretion, the unutterble self-consciousness of his gesture beneath all the skies of the day and night. “He is the center of the world” I said to Rodin

(To Clara Rikle, September 20, 1905)

೨೦೦೯